Tag: ಭೋವಿ ನಿಗಮ

  • ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಹೈಕೋರ್ಟ್‌ಗೆ 2,300 ಪುಟಗಳ ಅಂತಿಮ ವರದಿ ಸಲ್ಲಿಕೆ

    ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಹೈಕೋರ್ಟ್‌ಗೆ 2,300 ಪುಟಗಳ ಅಂತಿಮ ವರದಿ ಸಲ್ಲಿಕೆ

    ಬೆಂಗಳೂರು: ಭೋವಿ ನಿಗಮದಲ್ಲಿ (Bhovi Corporation) ನಡೆದ ಅಕ್ರಮದ ತನಿಖೆ ಎದುರಿಸಿದ್ದ ವಕೀಲೆ ಹಾಗೂ ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 90 ದಿನಗಳ ಕಾಲ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (SIT) 2,300 ಪುಟಗಳ ಅಂತಿಮ ವರದಿಯನ್ನು ಹೈಕೋರ್ಟ್‌ಗೆ (Highcourt) ಸಲ್ಲಿಸಿದೆ.

    ಕೋರ್ಟ್‌ಗೆ ಸಲ್ಲಿಸಿದ ಅಂತಿಮ ವರದಿಯಲ್ಲಿ ಮೃತ ಜೀವಾ (Lawyer Jeeva) ಡೆತ್ ನೋಟ್‌ನಲ್ಲಿದ್ದ ಬಹುತೇಕ ಆರೋಪಗಳು ಸಾಬೀತಾಗಿದೆ. ಅಲ್ಲದೇ ಡಿವೈಎಸ್‌ಪಿ ಕನಕಲಕ್ಷ್ಮಿ ಅವರು ಕಿರುಕುಳ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಇದೆಲ್ಲರ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯ ವರದಿಗಳು, ಮರಣೋತ್ತರ ಪರೀಕ್ಷಾ ವರದಿ, ಡೆತ್‌ನೋಟ್‌ ಫಾರೆನ್ಸಿಕ್ ರಿಪೋರ್ಟ್‌ಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಮೂವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ತಂಡವನ್ನ ರಚಿಸಲಾಗಿತ್ತು. ಇದರಲ್ಲಿ ಸಿಸಿಬಿ ಡಿಸಿಪಿ ಹಕಾಯ್ ಅಕ್ಷಯ್ ಮಚೀಂದ್ರ, ಎಸ್ಪಿ ನಿಶಾ ಜೇಮ್ಸ್, ಸಿಬಿಐ ಎಸ್ಪಿ ವಿನಾಯಕ್ ವರ್ಮ ಅವರನ್ನೊಳಗೊಂಡ ಎಸ್‌ಐಟಿ ತಂಡ 90 ದಿನಗಳ ಕಾಲ ಸುದೀರ್ಘ ತನಿಖೆ ನಡೆಸಿತ್ತು. ಸದ್ಯ ತನಿಖೆ ಪೂರ್ಣಗೊಳಿಸಿರುವ ತಂಡ ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದೆ.

    ಏನಿದು ಪ್ರಕರಣ?
    ಭೋವಿ ನಿಗಮ ಅಕ್ರಮ ಸಂಬಂಧ ಜೀವಾರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಕಿರುಕುಳದ ಆರೋಪ ಮಾಡಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್‌ಪ್ರೆಸಸ್‌ಗೆ 7.16 ಕೋಟಿ ರೂ., ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ಮಾಜಿ ಎಂಡಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಕೊಡದೇ ತಮ್ಮನ್ನ ವಿಚಾರಣೆಗೆ ಕರೆದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಜೀವಾ ಆರೋಪಿಸಿ ಬನಶಂಕರಿಯಲ್ಲಿರುವ ತಮ್ಮ ಮನೆಯಲ್ಲಿ ಜೀವಾ ಆತ್ಮಹತ್ಯೆಗೆ ಶರಣಾಗಿದ್ದರು.

    ಸಿಐಡಿ ಅಧಿಕಾರಿಗಳ ವಿರುದ್ಧ ಪ್ರಕರಣ:
    ಜೀವಾ ಅವರ ಕಿರಿಯ ಸಹೋದರಿ ಸಂಗೀತಾ ಅವರು ನೀಡಿದ ದೂರಿನಲ್ಲಿ ವಿಚಾರಣೆ ನೆಪದಲ್ಲಿ ಸಿಐಡಿ ಅಧಿಕಾರಿಗಳು ತನ್ನ ಅಕ್ಕ ಜೀವಾಗೆ ಅವಮಾನ ಮಾಡಿದ್ದಾರೆ. ಅಂತೆಯೇ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನಮೇರೆಗೆ ಬನಶಂಕರಿ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.

    ಅಲ್ಲದೇ ಜೀವಾ ಆತ್ಮಹತ್ಯೆಗೂ ಮುನ್ನ ಮಹಿಳಾ ಉದ್ಯಮಿ ಜೀವಾ 13 ಪುಟಗಳ ಮರಣಪತ್ರ ಬರೆದಿದ್ದರು. ಅದರಲ್ಲಿ ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆ ವಿಚಾರ ಪ್ರಸ್ತಾಪಿಸಿದ್ದರು. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಎಂದು ಉಲ್ಲೇಖಿಸಿದ್ದರು. ಅಂತೆಯೆ ನನಗೆ ಅವಿವಾಹಿತ ತಂಗಿ ಇರುವುದರಿಂದ ನನ್ನ ಆತ್ಮಹತ್ಯೆ ಸುದ್ದಿಗೆ ಹೆಚ್ಚು ಪ್ರಚಾರ ನೀಡದಂತೆಯೂ ಜೀವಾ ಮರಣಪತ್ರದಲ್ಲಿ ಮನವಿ ಮಾಡಿದ್ದರು ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿತ್ತು.

  • ಭೋವಿ ನಿಗಮದಲ್ಲಿ 97 ಕೋಟಿ ರೂ. ಅಕ್ರಮ – ಇ.ಡಿಯಿಂದ ಅಧಿಕೃತ ಮಾಹಿತಿ

    ಭೋವಿ ನಿಗಮದಲ್ಲಿ 97 ಕೋಟಿ ರೂ. ಅಕ್ರಮ – ಇ.ಡಿಯಿಂದ ಅಧಿಕೃತ ಮಾಹಿತಿ

    ಬೆಂಗಳೂರು: ಭೋವಿ ನಿಗಮದ (Karnataka Bhovi Development Corporation) ಮೇಲೆ ಇಡಿ ದಾಳಿ ಪ್ರಕರಣ ಸಂಬಂಧ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 97 ಕೋಟಿ ರೂ. ಹಣ ದುರುಪಯೋಗವಾಗಿರುವುದಾಗಿ ಜಾರಿ ನಿರ್ದೇಶನಾಲಯ (ED) ಅಧಿಕೃತ ಮಾಹಿತಿ ನೀಡಿದೆ.

    ಭೋವಿ ಸಮುದಾಯದ ಏಜೆಂಟರ ಮೂಲಕ ನಕಲಿ ಫಲಾನುಭವಿಗಳ ಬ್ಯಾಂಕ್ ಖಾತೆ ಬಳಸಿಕೊಂಡು ಹಣ ವರ್ಗಾವಣೆ ಮಾಡಲಾಗಿದೆ. ಕೆಬಿಡಿಸಿಯಿಂದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ದಾಳಿ ವೇಳೆ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ಮಾಜಿ ಎಂಡಿ ನಾಗರಾಜಪ್ಪನನ್ನು ವಶಕ್ಕೆ ಪಡೆಯಾಲಾಗಿದ್ದು, ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ನಕಲಿ ಖಾತೆಗಳನ್ನು ಬಳಸಿಕೊಂಡು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಅತ್ಯಾಚಾರ

    ಸದ್ಯ ನಾಗರಾಜಪ್ಪನನ್ನು ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಇ.ಡಿ ಹೆಚ್ಚಿನ ತನಿಖೆಗಾಗಿ ನಾಗರಾಜಪ್ಪನನ್ನು 14 ದಿನ ವಶಕ್ಕೆ ಪಡೆದಿದೆ. ಇಡಿ ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ ಎಂದು ಇ.ಡಿ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: UGCET ಪ್ರವೇಶ ಪತ್ರ ಬಿಡುಗಡೆ – ಮೊದಲ ಬಾರಿಗೆ ಕ್ಯೂಆರ್ ಕೋಡ್ ಮಾದರಿ OMR Sheet

  • ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಡಿವೈಎಸ್ಪಿ ಕನಕಲಕ್ಷ್ಮೀ ಬಂಧನ

    ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಡಿವೈಎಸ್ಪಿ ಕನಕಲಕ್ಷ್ಮೀ ಬಂಧನ

    ಬೆಂಗಳೂರು: ಭೋವಿ ನಿಗಮದಲ್ಲಿ (Bhovi Corporation) ನಡೆದ ಅಕ್ರಮ ತನಿಖೆ ಎದುರಿಸಿದ್ದ ವಕೀಲೆ ಹಾಗೂ ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀಯನ್ನು (DYSP Kanakalakshmi) ಎಸ್‌ಐಟಿ (SIT) ಅಧಿಕಾರಿಗಳು ಬಂಧಿಸಿದ್ದಾರೆ.

    ವಕೀಲೆ ಜೀವಾ, ನನ್ನ ಆತ್ಮಹತ್ಯೆಗೆ ಡಿವೈಎಸ್ಪಿ ಕನಕಲಕ್ಷ್ಮೀ ಕಾರಣ ಎಂದು 13 ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಕನಕಲಕ್ಷ್ಮೀ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾಗ ಬಂಧಿಸಲಾಗಿದೆ. ಈ ಹಿಂದೆ ಎರಡು ಬಾರಿ ಕನಕಲಕ್ಷ್ಮೀ ಅವರ ಹೇಳಿಕೆಯನ್ನು ಎಸ್‌ಐಟಿ ದಾಖಲು ಮಾಡಿತ್ತು. ಇಂದು ಬೆಳಗ್ಗೆ ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ SCSP, TSP ಹಣ ಗ್ಯಾರೆಂಟಿಗೆ ಬಳಕೆ – ಕೋಲಾರ ಬಿಜೆಪಿ ಮುಖಂಡರಿಂದ ಖಂಡನೆ

    ಏನಿದು ಪ್ರಕರಣ?
    ಭೋವಿ ನಿಗಮ ಅಕ್ರಮ ಸಂಬಂಧ ಜೀವಾರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಕಿರುಕುಳದ ಆರೋಪ ಮಾಡಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್‌ಪ್ರೆಸಸ್‌ಗೆ 7.16 ಕೋಟಿ ರೂ., ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ಮಾಜಿ ಎಂಡಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿತ್ತು. ಇದನ್ನೂ ಓದಿ: ರಾಯಚೂರು| ಎರಡು ಬೈಕ್‌ಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಐವರು ದುರ್ಮರಣ

    ಸಿಐಡಿ ಅಧಿಕಾರಿಗಳ ವಿರುದ್ಧ ಪ್ರಕರಣ:
    ಜೀವಾ ಅವರ ಕಿರಿಯ ಸಹೋದರಿ ಸಂಗೀತಾ ಅವರು ನೀಡಿದ ದೂರಿನಲ್ಲಿ ವಿಚಾರಣೆ ನೆಪದಲ್ಲಿ ಸಿಐಡಿ ಅಧಿಕಾರಿಗಳು ತನ್ನ ಅಕ್ಕ ಜೀವಾಗೆ ಅವಮಾನ ಮಾಡಿದ್ದಾರೆ. ಅಂತೆಯೇ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನಮೇರೆಗೆ ಬನಶಂಕರಿ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದನ್ನೂ ಓದಿ: ಮಸೀದಿ, ಚರ್ಚ್‌ನಿಂದ ಸರ್ಕಾರಕ್ಕೆ 5 ರೂಪಾಯಿ ತೆರಿಗೆ ಬರ್ತಿದೆಯಾ: ಪ್ರತಾಪ್ ಸಿಂಹ ಪ್ರಶ್ನೆ

    ಆತ್ಮಹತ್ಯೆಗೂ ಮುನ್ನ ಮಹಿಳಾ ಉದ್ಯಮಿ ಜೀವಾ 13 ಪುಟಗಳ ಮರಣಪತ್ರ ಬರೆದಿದ್ದಾರೆ. ಅದರಲ್ಲಿ ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆ ವಿಚಾರ ಪ್ರಸ್ತಾಪಿಸಿದ್ದಾರೆ. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೆ ನನಗೆ ಅವಿವಾಹಿತ ತಂಗಿ ಇರುವುದರಿಂದ ನನ್ನ ಆತ್ಮಹತ್ಯೆ ಸುದ್ದಿಗೆ ಹೆಚ್ಚು ಪ್ರಚಾರ ನೀಡದಂತೆಯೂ ಜೀವಾ ಮರಣಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿತ್ತು. ಇದನ್ನೂ ಓದಿ: ಹೆಚ್‌ಡಿಕೆಗೆ ಅನಾರೋಗ್ಯ – 3 ದಿನಗಳಿಂದ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ

  • ಭೋವಿ ನಿಗಮದಿಂದ 34 ಕೋಟಿ ಹಣ ಅಕ್ರಮ ವರ್ಗಾವಣೆ – ಯಾರ‍್ಯಾರಿಗೆ ಎಷ್ಟು ಹಣ?

    ಭೋವಿ ನಿಗಮದಿಂದ 34 ಕೋಟಿ ಹಣ ಅಕ್ರಮ ವರ್ಗಾವಣೆ – ಯಾರ‍್ಯಾರಿಗೆ ಎಷ್ಟು ಹಣ?

    – ಅಕ್ರಮ ಹಣ ವರ್ಗಾವಣೆಯಲ್ಲಿ ಉದ್ಯಮಿ ಜೀವಾ ಪಾತ್ರ ಇತ್ತಾ?

    ಬೆಂಗಳೂರು: ಭೋವಿ ನಿಗಮದಲ್ಲಿ (Bhovi Corporation Scam) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. 34 ಕೋಟಿ ಹಣ ಅಕ್ರಮವಾಗಿ ವರ್ಗಾವಣೆ ಆಗಿದ್ದು, ಇದರಲ್ಲಿ ಉದ್ಯಮಿ ಜೀವಾ ಅವರ ಪಾತ್ರ ಇತ್ತ ಎಂಬ ಅನುಮಾನ ಮೂಡಿದೆ.

    ಅಕ್ರಮವಾಗಿ ಹಣ ವರ್ಗಾವಣೆಯಲ್ಲಿ ಜೀವಾ ಅವರ ಪಾತ್ರ ಇತ್ತ ಎಂಬ ಅನುಮಾನ ಇದ್ದು, ಇದರ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಜೀವಾ ಅವರ ಅನ್ನಿಕಾ ಎಂಟರ್ ಪ್ರೈಸಸ್‌ಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ. ಇದನ್ನೂ ಓದಿ: ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ

    ಅನ್ನಿಕಾ ಎಂಟರ್ ಪ್ರೈಸಸ್‌ಗೆ 7.16 ಕೋಟಿ ರೂ., ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ಗೆ ಒಟ್ಟು 10.9 ಕೋಟಿ ರೂ. ವರ್ಗವಾಗಿದೆ. ಇನ್ನುಳಿದ ಮೂರು ಕಂಪನಿಗಳಲ್ಲಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪರವರ ಆಪ್ತರ ಪಾಲುದಾರಿಕೆ ಇದೆ.

    ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕಿ ಲೀಲಾವತಿ ಅವರ ಸೋದರಿ ಮಂಗಳ ರಾಮು ಅವರಿಗೆ ಹಂತ ಹಂತವಾಗಿ ಕಳ್ಳ ಹಾದಿಯಲ್ಲಿ 1.48 ಕೋಟಿ ರೂ. ಹಣ ವರ್ಗವಾಗಿದೆ. ಇಷ್ಟೆಲ್ಲಾ ಹಣ ವರ್ಗಾವಣೆ ಆಗಿರೋದು ಬಯಲಾಗಿದೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ ಅಕ್ರಮ ಪ್ರಕರಣ – ತನಿಖೆ ಎದುರಿಸಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ

  • ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ

    ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ

    ಬೆಂಗಳೂರು: ಭೋವಿ ನಿಗಮದ ಹಗರಣದ (Bhovi Development Corporation Case) ತನಿಖೆ ಎದುರಿಸಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಆಯುಕ್ತರು ಸಿಸಿಬಿಗೆ (CCB) ವರ್ಗಾವಣೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳೆ ಜೀವಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ ಎಂದು ಅವರು ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿತ್ತು. ಸಿಐಡಿ ತನಿಖಾಧಿಕಾರಿ ಕನಕಲಕ್ಷ್ಮಿ ವಿರುದ್ಧ ಮೃತಳ ಸಹೋದರಿ ಸಹ ಗಂಭೀರ ಆರೋಪ ಮಾಡಿದ್ದರು.

    ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ (Banashankari Police Station) ಪ್ರಕರಣ ದಾಖಲಾಗಿತ್ತು. ಎಫ್‌ಐಆರ್‌ ದಾಖಲಿಸಿಕೊಂಡಿದದ್ದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಸಿಸಿಬಿಯ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. ಈ ಹಿನ್ನೆಲೆ ಭಾನುವಾರವೇ (ನ.24) ಎಂದು ಪೊಲೀಸರು ಪ್ರಾಥಮಿಕ ತನಿಖೆಯ ದಾಖಲೆಯನ್ನ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ ಅಕ್ರಮ ಪ್ರಕರಣ – ತನಿಖೆ ಎದುರಿಸಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ

    ಸಿಐಡಿ ವಿಚಾರಣೆ ಎದುರಿಸಿದ್ದ ಜೀವಾ:
    ಭೋವಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಭೋವಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಜೀವಾ ಅವರ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ. ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ಜೀವಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಜೀವಾ ಅವರು ಗುರುವಾರ (ನ.21) ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿ ಮನೆಗೆ ವಾಪಸ್ ಆಗಿದ್ದರು ಎಂದು ತಿಳಿದುಬಂದಿದೆ.

    ಮೃತ ಜೀವಾ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವುಡ್ ಮೆಟೀರಿಯಲ್ಸ್ ತಯಾರಿಕಾ ಕಂಪನಿ ಹೊಂದಿದ್ದರು. ಭೋವಿ ಅಭಿವೃದ್ಧಿ ನಿಗಮಕ್ಕೆ ಈ ವುಡ್ ಮೆಟೀರಿಯಲ್ಸ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗಾಗಿ ಅವರ ಖಾತೆಗೆ ಭೋವಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು ಎಂದು ಸಹ ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಂಡಮಾನ್‌ | ಬೋಟ್‌ನಲ್ಲಿ ಸಾಗಿಸ್ತಿದ್ದ 5 ಟನ್‌ ಮಾದಕ ವಸ್ತು ವಶಪಡಿಸಿಕೊಂಡ ಕೋಸ್ಟ್ ಗಾರ್ಡ್‌

    ಸಿಐಡಿ ಅಧಿಕಾರಿಗಳ ವಿರುದ್ಧ ಪ್ರಕರಣ:
    ಜೀವಾ ಅವರ ಕಿರಿಯ ಸಹೋದರಿ ಸಂಗೀತಾ ಅವರು ನೀಡಿದ ದೂರಿನಲ್ಲಿ ವಿಚಾರಣೆ ನೆಪದಲ್ಲಿ ಸಿಐಡಿ ಅಧಿಕಾರಿಗಳು ಅಕ್ಕ ಜೀವಾಗೆ ಅವಮಾನ ಮಾಡಿದ್ದಾರೆ. ಅಂತೆಯೇ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನಮೇರೆಗೆ ಬನಶಂಕರಿ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.

    11 ಪುಟಗಳ ಡೆತ್ ನೋಟ್?:
    ಆತ್ಮಹತ್ಯೆಗೂ ಮುನ್ನ ಮಹಿಳಾ ಉದ್ಯಮಿ ಜೀವಾ 11 ಪುಟಗಳ ಮರಣಪತ್ರ ಬರೆದಿದ್ದಾರೆ. ಅದರಲ್ಲಿ ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆ ವಿಚಾರ ಪ್ರಸ್ತಾಪಿಸಿದ್ದಾರೆ. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂತೆಯೆ ನನಗೆ ಅವಿವಾಹಿತ ತಂಗಿ ಇರುವುದರಿಂದ ನನ್ನ ಆತ್ಮಹತ್ಯೆ ಸುದ್ದಿಗೆ ಹೆಚ್ಚು ಪ್ರಚಾರ ನೀಡದಂತೆಯೂ ಜೀವಾ ಮರಣಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

  • ಭೋವಿ ನಿಗಮದಲ್ಲಿ ಅಕ್ರಮ ಪ್ರಕರಣ – ತನಿಖೆ ಎದುರಿಸಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ

    ಭೋವಿ ನಿಗಮದಲ್ಲಿ ಅಕ್ರಮ ಪ್ರಕರಣ – ತನಿಖೆ ಎದುರಿಸಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ

    ಬೆಂಗಳೂರು: ಭೋವಿ ನಿಗಮದ (Bhovi Development Corporation) ಅಕ್ರಮ ಕೇಸ್ ನಲ್ಲಿ ತನಿಖೆ ಎದುರಿಸಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪದ್ಮನಾಭ ನಗರದಲ್ಲಿ ನಡೆದಿದೆ.

    32 ವರ್ಷದ ಜೀವಾ ಫ್ಯಾನಿಗೆ ನೇಣು ಬಿಗಿದುಕೊಂಡು ಪದ್ಮನಾಭ ನಗರದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇದನ್ನೂ ಓದಿ: ಅಡಿಕೆ ಮರದಲ್ಲಿ ಸಿಲುಕಿದೆ ಪೊಲೀಸರಿಂದ ಸಿಡಿದ ಗುಂಡು – ನಕ್ಸಲ್ ವಿರುದ್ಧ ಎಎನ್‌ಎಫ್ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

    ಜೀವಾ, ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಕಳೆದ 3 ತಿಂಗಳ ಹಿಂದೆ ಒಮ್ಮೆ ವಿಚಾರಣೆ ಎದುರಿಸಿದ್ದರು. ಅಕ್ರಮದ ತನಿಖೆ ಮಾಡುತ್ತಿರುವ ಅಧಿಕಾರಿಗಳು ಜೀವಾಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದರು. ಅಲ್ಲದೇ ಕಳೆದ ನಾಲ್ಕು ದಿನಗಳಿಂದ ಸತತವಾಗಿ ವಿಚಾರಣೆಗೆ ಹಾಜರಾಗಿದ್ದರು.

    ಗುರುವಾರ (ನ.21) ವಿಚಾರಣೆ ಎದುರಿಸಿ ಬಂದ ನಂತರ, ಪ್ರಕರಣದ ತನಿಖಾಧಿಕಾರಿಗಳು ವಿಚಾರಣೆ ವೇಳೆ ನನಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ 11 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳಿ, ಇಲ್ಲವೇ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವೆ – ರಾಹುಲ್, ಖರ್ಗೆಗೆ ವಿನೋದ್ ತಾವ್ಡೆ ನೋಟಿಸ್

    11 ಪುಟಗಳ ಡೆತ್ ನೋಟ್‌ನಲ್ಲಿ ಅಕ್ರಮದ ತನಿಖೆ ನಡೆಸುತ್ತಿರೋ ತನಿಖಾಧಿಕಾರಿ ಡಿವೈಎಸ್‌ಪಿ ಹೆಸರು ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ – ರಾತ್ರೋರಾತ್ರಿ ತಲೆ ಎತ್ತಿದೆ ಅಜಿತ್ ಪವಾರ್ ಪೋಸ್ಟರ್

  • ಭೋವಿ ನಿಗಮದಲ್ಲಿ ಅಕ್ರಮ – ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ದಾಳಿ

    ಭೋವಿ ನಿಗಮದಲ್ಲಿ ಅಕ್ರಮ – ಬಿಜೆಪಿ ಎಂಎಲ್‌ಸಿ ಸುನೀಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ದಾಳಿ

    – ನಿಗಮದಲ್ಲಿ ಅಕ್ರಮ ನಡೆದಿದೆ ಎಂದು ದೂರು ಕೊಟ್ಟಿದ್ದೇ ನಾನು
    – ತನಿಖೆ ಆಗ್ರಹಿಸಿದವರ ಮೇಲೆಯೇ ದಾಳಿ ನಡೆದಿದೆ: ವಲ್ಯಾಪುರೆ ಕಿಡಿ

    ಕಲಬುರಗಿ: ವಿಧಾನ ಪರಿಷತ್‌ (Vidhan Parishad) ಬಿಜೆಪಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ (Sunil Vallyapure) ಮನೆ ಮೇಲೆ ಸಿಐಡಿ (CID) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

    2022ರಲ್ಲಿ ಸುನೀಲ್ ವಲ್ಯಾಪುರೆ ಪುತ್ರ ವಿನಯ್ ವಲ್ಯಾಪುರೆಯಿಂದ ಭೋವಿ ನಿಗಮದಲ್ಲಿ ಅಕ್ರಮದ (Bhovi Development Corporation) ಕುರಿತು ದೂರು ದಾಖಲಾಗಿತ್ತು. ಒಟ್ಟು ನಿಗಮದ 12 ಕೋಟಿ ರೂ. ಹಣ ದುರ್ಬಳಕೆ ಆರೋಪದ ಮಾತು ಕೇಳಿ ಬಂದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದ ಸಿಐಡಿ, ನಗರದ ಸಂತೋಷ್ ಕಾಲೊನಿಯಲ್ಲಿನ ಮನೆ ಮೇಲೆ ಸಿಐಡಿ ಡಿಎಸ್‌ಪಿ ಅಸ್ಲಂ ಬಾಷಾ ಹಾಗೂ 4 ಜನ ಸಿಬ್ಬಂದಿ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.

    2022 ರಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿತ್ತು. ನಿಗಮದ ನಾನಾ ಯೋಜನೆಗಳಿಗೆ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ ಹಣವನ್ನು ವಿನಯ್ ವಲ್ಯಾಪುರೆ ತಮ್ಮ ಓಡೆತನದ ಸೋಮನಾಥೇಶ್ವರ ಎಂಟರ್ಪ್ರೈಸಸ್ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ದೂರು ದಾಖಲಾಗಿತ್ತು.

    6 ಗಂಟೆ ಶೋಧ
    ಸಿಐಡಿ ಡಿಎಸ್‌ಪಿ ಹಾಗೂ ನಾಲ್ವರು ಸಿಬ್ಬಂದಿ ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ಶೋಧ ನಡೆಸಿದ್ದಾರೆ. ಈ ವೇಳೆ ಮನೆಯ ಇಂಚಿಂಚು ಜಾಲಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ದಾಖಲೆಗಳು ಹಾಗೂ ಮನೆಯಲ್ಲಿ ಕಂಪ್ಯೂಟರ್ ಸೇರಿ ಡಿಜಿಟಲ್ ದಾಖಲೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕೆಲವು ದಾಖಲೆ ಕೊಂಡೊಯ್ದಿದ್ದಾರೆ ಎಂಬ ಮಾಹಿತಿ ಇದೆ.

    ತನಿಖೆಗೆ ಎಲ್ಲ ರೀತಿಯ ಸಹಕಾರ: ವಲ್ಲಾಪುರೆ
    ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಹಿಂದೆ ನಮ್ಮ ಸರ್ಕಾರಕ್ಕೆ ನಾನೇ ಮನವಿ ಮಾಡಿದ್ದೆ. ಇದೀಗ ತನಿಖೆ ಮಾಡುವ ಎಂದವರ ಮೇಲೆ ತನಿಖೆ ನಡೆಸುತ್ತಿದ್ದಾರೆ ಎಂದು ಸುನೀಲ್ ವಲ್ಲಾಪುರೆ ಹೇಳಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ  1 ಕೆಜಿ ಚಿನ್ನ ಕದ್ದು ತೀರ್ಥಹಳ್ಳಿಯಲ್ಲಿ ಹೂತಿಟ್ಟಿದ್ದ ಖತರ್ನಾಕ್ ಕಳ್ಳ!

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮಾಡಿ ಎಂದವರ ಮನೆಗೆ ಸರ್ಚ್ ವಾರಂಟ್ ಪಡೆದು ಬಂದಿದ್ದಾರೆ. ಪರಿಸ್ಥಿತಿ ಎಲ್ಲಿಗೆ ಬಂದಿದೆ ನೋಡಿ? ಈಗಾಗಲೇ ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ನಮ್ಮ ಕುಟುಂಬದ ಯಾರೂ ಭೋಮಿ ನಿಗಮದ ಅಕ್ರಮದಲ್ಲಿ ಭಾಗಿಯಾಗಿಲ್ಲ. ಸಿಐಡಿಯಲ್ಲಿದ್ದ ಪ್ರಕರಣವನ್ನ ಎಸ್‌ಐಟಿಗೆ ವರ್ಗಾವಣೆ ಆಗಿದೆ. ಈ ಕುರಿತು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.