Tag: ಭೋಲಾ ಶಂಕರ್‌

  • ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

    ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

    ಮೆಗಾ ಸ್ಟಾರ್ ಚಿರಂಜೀವಿ (Megastar Chiranjeevi) ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ(Knee Surgery) ಒಳಗಾಗಿದ್ದಾರೆ. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿದೆ. ಒಂದು ವಾರಗಳ ಕಾಲ ಅವರು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಹೈದರಾಬಾದ್‌ಗೆ(Hydrabad) ಚಿರಂಜೀವಿ ವಾಪಸ್ ಬರಲಿದ್ದಾರೆ ಎಂದು ಸುದ್ದಿ ಆಗಿದೆ.

    ನಟ ಚಿರಂಜೀವಿ ಅವರಿಗೆ ಆಗಾಗ ಮೊಣಕಾಲು ನೋವು ಕಾಣಿಸಿಕೊಳ್ಳುತ್ತಿತ್ತು. ಆ ಕಾರಣದಿಂದ ಅವರು ಪರೀಕ್ಷೆ ಮಾಡಿಸಿದ್ದರು. ನೋವು ನಿವಾರಣೆಗಾಗಿ ಅವರು ಮೊಣಕಾಲಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೊಣಕಾಲು ಚಿಪ್ಪಿನಲ್ಲಿ ಇರುವ ಸೋಂಕನ್ನು ನಿವಾರಿಸುವ ಸಲುವಾಗಿ ಈ ಸರ್ಜರಿ ಮಾಡಲಾಗುತ್ತದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಇದನ್ನೂ ಓದಿ:ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

    ಆಗಸ್ಟ್ 11ರಂದು ಚಿರಂಜೀವಿ ನಟನೆಯ ‘ಭೋಲಾ ಶಂಕರ್’ (Bhola Shankar) ಸಿನಿಮಾ ರಿಲೀಸ್ ಆಗಿತ್ತು. ಚಿತ್ರಮಂದಿರದಲ್ಲಿ ಈ ಚಿತ್ರ ಮಕಾಡೆ ಮಲಗಿತ್ತು. ಸ್ಟಾರ್ ಕಲಾವಿದರ ದಂಡೇ ಸಿನಿಮಾದಲ್ಲಿ ಇದ್ರು ಸಿನಿಮಾ ಗೆಲ್ಲೋದ್ರಲ್ಲಿ ಎಡವಿತ್ತು. ಅದರ ಜೊತೆಗೆ ಕೆಲವು ಗಾಸಿಪ್ ಕೂಡ ಹಬ್ಬಿತ್ತು. ನಟನ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಕುರಿತಂತೆ ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ಚಿರಂಜೀವಿ ಆರೋಗ್ಯದ ಬಗ್ಗೆ ಗಾಸಿಪ್‌ಗಳು ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಈಗ ಅವರು ದೆಹಲಿಯಲ್ಲಿ ಆಪರೇಷನ್ ಮಾಡಿಸಿಕೊಂಡಿರುವುದು ಖಚಿತವಾಗಿದೆ. ಸರ್ಜರಿಯ ಬಳಿಕ ನಟ ವಿಶ್ರಾಂತಿ ಪಡೆಯುತ್ತಿದ್ದಾರೆ.

    ‘ಭೋಲಾ ಶಂಕರ್'(Bhola Shankar)  ಸಿನಿಮಾ ಜೈಲರ್ (Jailer) ಸಿನಿಮಾ ಮುಂದೆ ಮಕಾಡೆ ಮಲಗಿದೆ. ಹೀಗಿದ್ರೂ ಚಿತ್ರತಂಡ ಹುಮ್ಮಸ್ಸು ಕಮ್ಮಿಯಾಗಿಲ್ಲ. ಭೋಲಾ ಶಂಕರ್ ಸಿನಿಮಾ ಹಿಂದಿ ವರ್ಷನ್‌ನಲ್ಲಿ ರಿಲೀಸ್ ಮಾಡಲು ತಯಾರಿ ನಡೆಯುತ್ತಿದೆ. ಚಿತ್ರದ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮನ್ನಾ ಕೈ ಹಿಡಿಯಲಿಲ್ಲ ‘ಭೋಲಾ ಶಂಕರ್’

    ತಮನ್ನಾ ಕೈ ಹಿಡಿಯಲಿಲ್ಲ ‘ಭೋಲಾ ಶಂಕರ್’

    ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸಿದ್ದರು. ನಿನ್ನೆಯಷ್ಟೇ ಈ ಸಿನಿಮಾ ರಿಲೀಸ್ ಆಗಿದ್ದು ಅಂದುಕೊಂಡಷ್ಟು ಚಿತ್ರವನ್ನು ಜನರು ಸ್ವೀಕರಿಸಿಲ್ಲ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಮಕಾಡೆ ಮಲಗಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಬೇಸರತಂದಿದೆ.

    ತಮನ್ನಾ ನಟನೆಯ ಎರಡು ಸಿನಿಮಾಗಳು ಈ ವಾರ ಬಿಡುಗಡೆ ಆಗಿದ್ದವು. ಭೋಲಾ ಶಂಕರ್ ಸಿನಿಮಾದಲ್ಲಿ ತಮನ್ನಾ ಪಾತ್ರ ಮಾಡಿದ್ದರೆ, ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಕೂಡ ಹಿಟ್ ಆಗಿತ್ತು. ಈಗ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಭೋಲಾ ಶಂಕರ್ ತಮನ್ನಾನ್ನ ಕೈ ಹಿಡಿಯದಿದ್ದರೂ, ಜೈಲರ್ ಖುಷಿ ತಂದಿದೆ.

    ಸದ್ಯ ತಮನ್ನಾ ಭಾಟಿಯಾ (Tamannaah Bhatia) ಅವರಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಾಲಿವುಡ್- ಟಾಲಿವುಡ್ ಎರಡು ಕಡೆ ಮಿಲ್ಕಿ ಬ್ಯೂಟಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ‘ಭೋಲಾ ಶಂಕರ್’ (Bhola Shankar) ಸಿನಿಮಾದಲ್ಲಿ ಮೆಗಾಸ್ಟಾರ್ ನಾಯಕಿಯಾಗಿರುವ ತಮನ್ನಾ ಅವರು ಈಗ ಸಹನಟ ಚಿರಂಜೀವಿ ಬಗ್ಗೆ ಸೀಕ್ರೆಟ್ ಒಂದನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಟಿ ಮೆಗಾಸ್ಟಾರ್ ಅವರನ್ನು ಹಾಡಿ ಹೊಗಳಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಭೋಲಾ ಶಂಕರ್ ಸಿನಿಮಾ ಆಗಸ್ಟ್ 11ಕ್ಕೆ ತೆರೆ ಕಂಡಿದೆ. ಮೆಗಾಸ್ಟಾರ್ ತಂಗಿಯಾಗಿ ಮಹಾನಟಿ ಕೀರ್ತಿ ಸುರೇಶ್, ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಫಸ್ಟ್ ಲುಕ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ. ಮೆಗಾಸ್ಟಾರ್ ಭರ್ಜರಿ ಆ್ಯಕ್ಷನ್ ನೋಡೋದ್ದಕ್ಕೆ ಫ್ಯಾನ್ಸ್ ಕಾದಿದ್ದರು. ಆದರೆ, ಅಂದುಕೊಂಡಷ್ಟು ಸಿನಿಮಾ ಮೋಡಿ ಮಾಡುತ್ತಿಲ್ಲ.

    ಈ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ತಮನ್ನಾ (Tamannah) ಅವರು ಚಿರಂಜೀವಿ ಬಗ್ಗೆ ಮಾತನಾಡಿದ್ದರು. ಸೆಟ್‌ನಲ್ಲಿ ನಡೆದ ಘಟನೆಯೊಂದನ್ನ ಅವರು ಶೇರ್ ಮಾಡಿದ್ದರು. ಚಿರಂಜೀವಿ ಅವರು ಶ್ರಮಜೀವಿ. ಯಾಕೆಂದರೆ ನಾವು ಹಾಡೊಂದರ ಚಿತ್ರೀಕರಣ ಮಾಡುವಾಗ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಹೀಗಿದ್ದರೂ ಸಹ ನೋವಿನ ನಡುವೆಯೇ ಶೂಟಿಂಗ್ ಮುಂದುವರೆಸಿದರು. ಸಿನಿಮಾ ಶೂಟಿಂಗ್ ಮುಂದುವರೆಯಲು ಏನು ಮಾಡಬೇಕೋ ಅದನ್ನು ಚಿರು ಅವರು ಮಾಡಿದರು ಎಂದಿದ್ದರು.

    ‘ಜೈಲರ್ʼ (Jailer) ಸಿನಿಮಾ ಕೂಡ ಇದೇ ಆಗಸ್ಟ್ 10ಕ್ಕೆ ತೆರೆ ಕಂಡಿದೆ. ತಲೈವಾ- ಶಿವಣ್ಣ ಕಾಂಬೋ ಸಿನಿಮಾದಲ್ಲಿ ತಮನ್ನಾ ಸೊಂಟ ಬಳುಕಿಸಿರುವ ಕಾವಾಲಾ ಸಾಂಗ್ ಸೂಪರ್ ಹಿಟ್ ಆಗಿತ್ತು. ರಜನಿಕಾಂತ್ (Rajanikanth) ಜೊತೆ ಮಿಲ್ಕಿ ಬ್ಯೂಟಿ ಹೆಜ್ಜೆ ಹಾಕಿದ್ದಾರೆ. ಒಂದು ದಿನದ ಅಂತರದಲ್ಲಿ ಜೈಲರ್ ಮತ್ತು ಭೋಲಾ ಶಂಕರ್ ತೆರೆಕಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್ 6ಕ್ಕೆ ಭೋಲಾ ಶಂಕರ್ ಮೆಗಾ ಇವೆಂಟ್ : ಮೆಗಾಸ್ಟಾರ್ ಅಭಿಮಾನಿಗಳಿಗೆ ಹಬ್ಬ

    ಆಗಸ್ಟ್ 6ಕ್ಕೆ ಭೋಲಾ ಶಂಕರ್ ಮೆಗಾ ಇವೆಂಟ್ : ಮೆಗಾಸ್ಟಾರ್ ಅಭಿಮಾನಿಗಳಿಗೆ ಹಬ್ಬ

    ಟಾಲಿವುಡ್ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಭೋಲಾ ಶಂಕರ್ (Bhola Shankar) ಸಿನಿಮಾದ ಮೆಗಾ ಪ್ರಿ ರಿಲೀಸ್ ಇವೆಂಟ್ ಆಗಸ್ಟ್ 6 ರಂದು ನಡೆಯಲಿದೆ. ಮೆಗಾ ಇವೆಂಟ್ ಆಗಿ ಹೈದರಾಬಾದ್ (Hyderabad) ನ ಶಿಲ್ಪಕಲಾ ವೇದಿಕೆ ರೆಡಿಯಾಗುತ್ತಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಲಿದ್ದಾರೆ.

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಸುದ್ದಿಯಾಗುತ್ತಲೇ ಇದೆ. ಸಿನಿಮಾದ ಟ್ರೈಲರ್ ಹೈಪ್ ಕ್ರಿಯೆಟ್ ಮಾಡ್ತಿದ್ರೆ, ಮತ್ತೊಂದು ಕಡೆ ಚಿರಂಜೀವಿ ಅವರ ಸಂಭಾವನೆ ವಿಚಾರ ನೆಟ್ಟಿರ ಚರ್ಚೆಗೆ ಗ್ರಾಸವಾಗಿದೆ. ಭೋಲಾ ಶಂಕರ್ ಮೆಗಾಸ್ಟಾರ್ ಸಂಭಾವನೆ ಪಡೆದಿರೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಾ.

    ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ತಂಗಿ ಪಾತ್ರದಲ್ಲಿ ಕೀರ್ತಿ ಸುರೇಶ್ (Keerthi Suresh) ಜೀವತುಂಬಿದ್ದಾರೆ. ಸದ್ಯ ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ್ಯಕ್ಷನ್, ಎಮೋಷನ್, ಕಾಮಿಡಿ ದೃಶ್ಯಗಳನ್ನು ಎಡಿಟ್ ಮಾಡಿ ಟ್ರೇಲರ್‌ನಲ್ಲಿ ಹಾಕಲಾಗಿದೆ. ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿದ್ದಾರೆ. ಅವರು ಹೇಳುವ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಚಿರಂಜೀವಿ ಅವರ ಮಾಸ್ ಡೈಲಾಗ್ ಡೆಲಿವರಿ ಟ್ರೈಲರ್‌ನ ವಿಶೇಷ ಆಕರ್ಷಣೆಯಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.

    ನನ್ನ ಹಿಂದೆ ಮಾಫಿಯಾ ಇದೆ ಎಂದು ರವಿಶಂಕರ್ ಹೇಳುತ್ತಾರೆ. ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ ಎಂದು ರವಿಶಂಕರ್‌ಗೆ ತಿರುಗೇಟು ನೀಡುವ ಚಿರು ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ & ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.

     

    ದುಬಾರಿ ನಟ ಮೆಗಾಸ್ಟಾರ್ ಅವರು ‘ಭೋಲಾ ಶಂಕರ್’ (Bhola Shankar) ಸಿನಿಮಾಗಾಗಿ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೇ ನಟಿಸಿದ್ದಾರಂತೆ. ಈ ಸುದ್ದಿ ಗಾಸಿಪ್ ಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಆದರೆ ಒಂದು ರೂಪಾಯಿ ಪಡೆಯದೇ ಚಿರಂಜೀವಿ ನಟಿಸಿರೋದು ಮೂಲಗಳ ಪ್ರಕಾರ ನಿಜ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿರಂಜೀವಿಯನ್ನು ಹಾಡಿ ಹೊಗಳಿದ ‘ಕಾವಾಲಾ’ ಬ್ಯೂಟಿ ತಮನ್ನಾ

    ಚಿರಂಜೀವಿಯನ್ನು ಹಾಡಿ ಹೊಗಳಿದ ‘ಕಾವಾಲಾ’ ಬ್ಯೂಟಿ ತಮನ್ನಾ

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರಿಗೆ ಈಗ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಾಲಿವುಡ್- ಟಾಲಿವುಡ್ ಎರಡು ಕಡೆ ಮಿಲ್ಕಿ ಬ್ಯೂಟಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ‘ಭೋಲಾ ಶಂಕರ್’ (Bhola Shankar) ಸಿನಿಮಾದಲ್ಲಿ ಮೆಗಾಸ್ಟಾರ್ ನಾಯಕಿಯಾಗಿರುವ ತಮನ್ನಾ ಅವರು ಈಗ ಸಹನಟ ಚಿರಂಜೀವಿ ಬಗ್ಗೆ ಸೀಕ್ರೆಟ್ ಒಂದನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಟಿ ಮೆಗಾಸ್ಟಾರ್ ಅವರನ್ನು ಹಾಡಿ ಹೊಗಳಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಭೋಲಾ ಶಂಕರ್ ಸಿನಿಮಾ ಆಗಸ್ಟ್ 11ಕ್ಕೆ ತೆರೆ ಕಾಣುತ್ತಿದೆ. ಮೆಗಾಸ್ಟಾರ್ ತಂಗಿಯಾಗಿ ಮಹಾನಟಿ ಕೀರ್ತಿ ಸುರೇಶ್, ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಫಸ್ಟ್ ಲುಕ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ. ಮೆಗಾಸ್ಟಾರ್ ಭರ್ಜರಿ ಆ್ಯಕ್ಷನ್ ನೋಡೋದ್ದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:18 ವರ್ಷಗಳ ದಾಂಪತ್ಯಕ್ಕೆ ನಟ ಫರ್ದೀನ್ ಖಾನ್ ವಿದಾಯ?

    ಈ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ತಮನ್ನಾ (Tamannah) ಅವರು ಚಿರಂಜೀವಿ ಬಗ್ಗೆ ಮಾತನಾಡಿದ್ದಾರೆ. ಸೆಟ್‌ನಲ್ಲಿ ನಡೆದ ಘಟನೆಯೊಂದನ್ನ ಅವರು ಶೇರ್ ಮಾಡಿದ್ದಾರೆ. ಚಿರಂಜೀವಿ ಅವರು ಶ್ರಮಜೀವಿ. ಯಾಕೆಂದರೆ ನಾವು ಹಾಡೊಂದರ ಚಿತ್ರೀಕರಣ ಮಾಡುವಾಗ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಹೀಗಿದ್ದರೂ ಸಹ ನೋವಿನ ನಡುವೆಯೇ ಶೂಟಿಂಗ್ ಮುಂದುವರೆಸಿದರು. ಸಿನಿಮಾ ಶೂಟಿಂಗ್ ಮುಂದುವರೆಯಲು ಏನು ಮಾಡಬೇಕೋ ಅದನ್ನು ಚಿರು ಅವರು ಮಾಡಿದರು.

    ಈಗ ತಾನೇ ಹೆಜ್ಜೆಯಿಟ್ಟವರಂತೆ ಮೆಗಾ ಸ್ಟಾರ್ ಸದಾ ಉತ್ಸಾಹ, ಬದ್ಧತೆಯನ್ನು ಹೊಂದಿರುತ್ತಾರೆ. ಅವರ ಪಯಣವನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ನಟನನ್ನು ತಮನ್ನಾ ಹೊಗಳಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ನಂತರ ಚಿರಂಜೀವಿ ಜೊತೆ ತಮನ್ನಾಗೆ ಇದು ಎರಡನೇ ಸಿನಿಮಾವಾಗಿದೆ.

    ‘ಜೈಲರ್ʼ (Jailer) ಸಿನಿಮಾ ಕೂಡ ಇದೇ ಆಗಸ್ಟ್ 10ಕ್ಕೆ ತೆರೆಗೆ ಬರಲಿದೆ. ತಲೈವಾ- ಶಿವಣ್ಣ ಕಾಂಬೋ ಸಿನಿಮಾದಲ್ಲಿ ತಮನ್ನಾ ಸೊಂಟ ಬಳುಕಿಸಿರುವ ಕಾವಾಲಾ ಸಾಂಗ್ ಸೂಪರ್ ಹಿಟ್ ಆಗಿದೆ. ರಜನಿಕಾಂತ್ (Rajanikanth) ಜೊತೆ ಮಿಲ್ಕಿ ಬ್ಯೂಟಿ ಹೆಜ್ಜೆ ಹಾಕಿದ್ದಾರೆ. ಒಂದು ದಿನದ ಅಂತರದಲ್ಲಿ ಜೈಲರ್ ಮತ್ತು ಭೋಲಾ ಶಂಕರ್ ತೆರೆಕಾಣುತ್ತಿದೆ. ಯಾವ ಸಿನಿಮಾಗೆ ಪ್ರೇಕ್ಷಕರ ಬೆಂಬಲವಿರಲಿದೆ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಭೋಲಾ ಶಂಕರ್’ ಸಿನಿಮಾಗಾಗಿ ಮೆಗಾಸ್ಟಾರ್ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಪಡ್ತೀರಿ

    ‘ಭೋಲಾ ಶಂಕರ್’ ಸಿನಿಮಾಗಾಗಿ ಮೆಗಾಸ್ಟಾರ್ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಪಡ್ತೀರಿ

    ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಭೋಲಾ ಶಂಕರ್ (Bhola Shankar) ಸಿನಿಮಾದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಸಿನಿಮಾದ ಟ್ರೈಲರ್ ಹೈಪ್ ಕ್ರಿಯೆಟ್ ಮಾಡ್ತಿದ್ರೆ, ಮತ್ತೊಂದು ಕಡೆ ಅವರ ಸಂಭಾವನೆ ವಿಚಾರ ನೆಟ್ಟಿರ ಚರ್ಚೆಗೆ ಗ್ರಾಸವಾಗಿದೆ. ಭೋಲಾ ಶಂಕರ್ ಮೆಗಾಸ್ಟಾರ್ ಸಂಭಾವನೆ ಪಡೆದಿರೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಾ.

    ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ತಂಗಿ ಪಾತ್ರದಲ್ಲಿ ಕೀರ್ತಿ ಸುರೇಶ್ (Keerthi Suresh) ಜೀವತುಂಬಿದ್ದಾರೆ. ಸದ್ಯ ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ್ಯಕ್ಷನ್, ಎಮೋಷನ್, ಕಾಮಿಡಿ ದೃಶ್ಯಗಳನ್ನು ಎಡಿಟ್ ಮಾಡಿ ಟ್ರೇಲರ್‌ನಲ್ಲಿ ಹಾಕಲಾಗಿದೆ. ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿದ್ದಾರೆ. ಅವರು ಹೇಳುವ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಚಿರಂಜೀವಿ ಅವರ ಮಾಸ್ ಡೈಲಾಗ್ ಡೆಲಿವರಿ ಟ್ರೈಲರ್‌ನ ವಿಶೇಷ ಆಕರ್ಷಣೆಯಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಇದನ್ನೂ ಓದಿ:ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್- ನೆಟ್ಟಿಗರಿಂದ ಛೀಮಾರಿ

    ನನ್ನ ಹಿಂದೆ ಮಾಫಿಯಾ ಇದೆ ಎಂದು ರವಿಶಂಕರ್ ಹೇಳುತ್ತಾರೆ. ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ ಎಂದು ರವಿಶಂಕರ್‌ಗೆ ತಿರುಗೇಟು ನೀಡುವ ಚಿರು ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ & ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಗಮನ ಸೆಳೆಯುತ್ತಿರೋ ಭೋಲಾ ಶಂಕರ್ ಇದೇ ಆಗಸ್ಟ್ 11ಕ್ಕೆ ತೆರೆಗೆ ಬರಲಿದೆ.

    ದುಬಾರಿ ನಟ ಮೆಗಾಸ್ಟಾರ್ ಅವರು ‘ಭೋಲಾ ಶಂಕರ್’ (Bhola Shankar) ಸಿನಿಮಾಗಾಗಿ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೇ ನಟಿಸಿದ್ದಾರಂತೆ. ಈ ಸುದ್ದಿ ಗಾಸಿಪ್ ಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಆದರೆ ಒಂದು ರೂಪಾಯಿ ಪಡೆಯದೇ ಚಿರಂಜೀವಿ ನಟಿಸಿರೋದು ಮೂಲಗಳ ಪ್ರಕಾರ ನಿಜ ಎಂದು ಹೇಳಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

    ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

    ಹುಭಾಷಾ ನಟಿ ಶ್ರೀಯಾ ಶರಣ್‌ಗೆ (Shriya Saran) ಇದೀಗ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆಯ ‘ಕಬ್ಜ’ (Kabzaa) ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿ ನಟಿಸಿದ ಮೇಲೆ ಶ್ರೀಯಾ ಬಂಪರ್ ಆಫರ್‌ವೊಂದು ಸಿಕ್ಕಿದೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಅದಕ್ಕೆ ದುಬಾರಿ ಸಂಭಾವನೆ ಕೂಡ ಶ್ರೀಯಾ ಡಿಮ್ಯಾಂಡ್ ಮಾಡಿದ್ದಾರೆ.

    ಮದುವೆಯಾಗಿ ಮುದ್ದಾದ ಮಗಳಿದ್ರು ಕೂಡ ಶ್ರೀಯಾ ಶರಣ್ ಅವರು ತನ್ನ ಬ್ಯೂಟಿ ಮತ್ತು ಫಿಟ್‌ನೆಸ್‌ ಕಡೆ ತುಸು ಜಾಸ್ತಿ ಗಮನ ಕೊಡುತ್ತಾರೆ. ಸಂತೂರ್ ಮಮ್ಮಿ ಹಾಗೇ ಮಿಂಚೋ ಶ್ರೀಯಾ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ.

    ‘ಆರ್‌ಆರ್‌ಆರ್’, ‘ಕಬ್ಜ’ ಸಿನಿಮಾಗಳು ಭರ್ಜರಿ ಹಿಟ್ ಆದಮೇಲೆ ಕೇಳಬೇಕಾ? ತಮ್ಮ ಸಂಭಾವನೆ ಕೂಡ ಏರಿಸಿಕೊಂಡಿದ್ದಾರೆ. ಈ ನಡುವೆ ಮೆಗಾ ಸ್ಟಾರ್ ಚಿರಂಜೀವಿ(Mega Star Chiranjeevi) ನಟನೆ ‘ಭೋಲಾ ಶಂಕರ್’ (Bola Shankar) ಚಿತ್ರದಲ್ಲಿ ಸೊಂಟ ಬಳುಕಿಸಲು ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಕಬ್ಜ ನಟಿ 1 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಚಿತ್ರತಂಡದ ಕಡೆಯಿಂದ ಈ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ.‌ ಇದನ್ನೂ ಓದಿ:ಮದುವೆಯಾಗದೇ ಮಗು ವಿಚಾರ : ನಟಿ ಇಲಿಯಾನ ಡಿ ಕ್ರೂಸ್ ಗೆ ಸಂಕಷ್ಟ

    ಕತ್ರಿನಾ, ಕರೀನಾ, ಸಮಂತಾ (Samantha) ಇವರೆಲ್ಲರೂ ಸ್ಟಾರ್ ನಟಿಯಾಗಿದ್ರು ಕೂಡ. ಐಟಂ ಹಾಡಿಗೆ ಹೆಜ್ಜೆ ಹಾಕಿ, ಗೆದ್ದವರು. ಹಾಗಾಗಿ ಶ್ರೀಯಾ ಶರಣ್ ಕೂಡ ಇದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ವಿಭಿನ್ನ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದ್ದಾರೆ.