Tag: ಭೋರೇಗೌಡ

  • ಮೀಟೂ ಆರೋಪ ಇದ್ರೆ ನೊಂದವರು ಹೇಳ್ತಾರೆ, ನಿಮಗ್ಯಾಕೆ ಉಸಾಬರಿ: ಕುಮಾರ್ ಬಂಗಾರಪ್ಪಗೆ ಭೋಜೇಗೌಡ ಪ್ರಶ್ನೆ

    ಮೀಟೂ ಆರೋಪ ಇದ್ರೆ ನೊಂದವರು ಹೇಳ್ತಾರೆ, ನಿಮಗ್ಯಾಕೆ ಉಸಾಬರಿ: ಕುಮಾರ್ ಬಂಗಾರಪ್ಪಗೆ ಭೋಜೇಗೌಡ ಪ್ರಶ್ನೆ

    ಉಡುಪಿ: ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದು, ನಾವು ಸಹ ಅವರ ಡಬ್ಬಲ್ ಸಣ್ಣತನವನ್ನು ತೋರಿಸಲಾ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

    ಸಿಎಂ ಕುಮಾರಸ್ವಾಮಿ ವಿರುದ್ಧ ಮೀಟೂ ಆರೋಪ ಮಾಡಿದ್ದರ ಕುರಿತು ಮಾತನಾಡಿದ ಅವರು, ಕುಮಾರ ಬಂಗಾರಪ್ಪ ಮುಖ್ಯಮಂತ್ರಿ ಎಚ್‍ಡಿಕೆ ಮೇಲೆ ಮೀಟೂ ಆರೋಪ ಮಾಡುವ ಮೂಲಕ ತಮ್ಮ ಸಣ್ಣತನವನ್ನು ತೋರಿಸಿದ್ದಾರೆ. ಅವರು ಜವಾಬ್ದಾರಿ ಇರುವ ಮನುಷ್ಯ. ಅಲ್ಲದೇ ಮಾಜಿ ಸಿಎಂ ಬಂಗಾರಪ್ಪನವರ ಮಗನಾಗಿ ಹೀಗೆ ಮಾತನಾಡಬಾರದು. ನಿಮ್ಮ ಸಣ್ಣತನವನ್ನು ತೋರಿಸಿದ ನಿಮಗೆ ನಾವು ನಿಮ್ಮ ಡಬ್ಬಲ್ ಸಣ್ಣತನವನ್ನು ತೋರಿಸಲಾ ಎಂದು ಬಹಿರಂಗವಾಗಿ ಸವಾಲು ಹಾಕಿದರು. ಇದನ್ನೂ ಓದಿ: ಈಗ ಸಿಎಂ ಎಚ್‍ಡಿಕೆ ವಿರುದ್ಧ #MeToo ಆರೋಪ!

    ಸಿಎಂ ಕುಮಾರಸ್ವಾಮಿ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಿದರೆ ಹುಷಾರ್, ನಾವೂ ಸಹ ನಿಮ್ಮ ವೈಯಕ್ತಿಕ ವಿಚಾರವನ್ನು ತೆಗೆಯಬೇಕಾಗುತ್ತದೆ. ಆದರೆ ನಾವು ನಿಮ್ಮಂತೆ ಕೀಳುಮಟ್ಟದ ರಾಜಕೀಯ ಮಾಡಲ್ಲ. ಒಂದು ವೇಳೆ ಆ ರೀತಿಯ ಮೀಟೂ ಆರೋಪ ಇದ್ದರೆ, ನೊಂದವರು ಬಂದು ಹೇಳಿಕೊಳ್ಳುತ್ತಾರೆ. ನಿಮಗ್ಯಾಕೆ ಈ ಉಸಾಬರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನ್ನ ಪರ್ಸನಲ್ ವಿಚಾರ ನಿಮಗ್ಯಾಕ್ರಿ – ಕುಮಾರ್ ಬಂಗಾರಪ್ಪ ಮೀಟೂ ಆರೋಪಕ್ಕೆ ಸಿಎಂ ಕಿಡಿ

    ನಿಮಗಿಂತ ಸಣ್ಣತನ ತೋರುವ ಶಕ್ತಿ ನನಗೂ ಇದೆ. ನಿಮ್ಮ ಬಳಿ ಆ ಬಗ್ಗೆ ದಾಖಲೆ ಇದ್ದರೆ, ಅದಕ್ಕೆ ನ್ಯಾಯಾಲಯ ಇದೆ. ವೈಯಕ್ತಿಕ ವಿಚಾರ ಚುನಾವಣೆಯಲ್ಲಿ ಬಳಸುವುದು ಅಕ್ಷಮ್ಯ ಅಪರಾಧ. ಈ ಮೊದಲು ಬಂಗಾರಪ್ಪನವರೂ ನಮ್ಮ ಪಕ್ಷದಲ್ಲಿಯೂ ಇದ್ದರು. ಅವರ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತನಾಡಿದರೇ? ಮಾಜಿ ಸಿಎಂ ಬಂಗಾರಪ್ಪನವರ ಬಗ್ಗೆ ಮಾತನಾಡುವ ಹಕ್ಕು ಕುಮಾರಸ್ವಾಮಿಗೆ ಇದೆ ಎಂದು ಕುಮಾರ್ ಬಂಗಾರಪ್ಪನವರಿಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv