Tag: ಭೋಜೇಗೌಡ

  • ರಾಷ್ಟ್ರಪತಿಗಳಿಗೆ  ಅಗೌರವ ತೋರುವುದು ಸಿಎಂಗೆ ಶೋಭೆ ತರಲ್ಲ:  ಭೋಜೇಗೌಡ

    ರಾಷ್ಟ್ರಪತಿಗಳಿಗೆ  ಅಗೌರವ ತೋರುವುದು ಸಿಎಂಗೆ ಶೋಭೆ ತರಲ್ಲ:  ಭೋಜೇಗೌಡ

    ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ (president) ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಎಂಎಲ್‌ಸಿ ಭೋಜೇಗೌಡ (BojeGowda) ಹೇಳಿದ್ದಾರೆ.

    ಚಿತ್ರದುರ್ಗದಲ್ಲಿ (Chitradurga) ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ರಾಷ್ಟ್ರಪತಿಗಳ ಕುರಿತು ಸಿದ್ದರಾಮಯ್ಯನವರು (Siddaramaiah) ಏಕವಚನದಲ್ಲಿ ಮಾತನಾಡಿದ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತಾಡುವುದು ಸರಿಯಲ್ಲ. ರಾಷ್ಟ್ರಪತಿ ಅವರು ದೇಶದ ಪ್ರಥಮ ಪ್ರಜೆ. ಮುಖ್ಯಮಂತ್ರಿಯಾಗಿ ಈ ರೀತಿ ಅಗೌರವ ತೋರುವುದು ಸರಿಯಲ್ಲ. ಅವರಿಗೆ ಇದು ಶೋಭೆ ತರುವುದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಕೊಡಬೇಕು ಎಂದು ತಿಳಿ ಹೇಳಿದ್ದಾರೆ. ಇದನ್ನೂ ಓದಿ: ಶೋಷಿತರ ಸಮಾವೇಶದಲ್ಲಿ ಕ್ಷಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ ನೆಲದ ಪಾಲು

    ಕೆರಗೋಡು ಹನುಮ ಧ್ವಜ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ರಾಮ ಮಂದಿರ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ. ವಿನಾಕಾರಣ ಬಿಜೆಪಿಯ ಮೇಲೆ ಆರೋಪ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಆತಂಕದಲ್ಲಿ ಜನರು

     ಸುಮಲತಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿ, ಸುಮಲತಾ ಬಿಜೆಪಿಗೆ ಸೇರಿದರೆ ಮಂಡ್ಯ ಕ್ಷೇತ್ರದ ಬಗ್ಗೆ ಪ್ರಶ್ನೆ ಬರಲ್ಲ. ಜೆಡಿಎಸ್ ಬಹುಶಃ ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೆ. ನಾನು ಪರಿಷತ್ ಚುನಾವಣೆಗೆ ಆಕಾಂಕ್ಷಿ ಆಗಿದ್ದು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ ಮಂಡ್ಯ ಲೋಕಸಭಾ ಮೈತ್ರಿ ವಿಚಾರದ ಬಗ್ಗೆ ಮಂಡ್ಯ ಲೋಕಸಭಾ ಸ್ಪರ್ಧೆ ಬಗ್ಗೆ ಇನ್ನು ಚರ್ಚೆ ಆಗಿದ್ದು, ಅಂತಿಮ ಆಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವ ನೃತ್ಯದಲ್ಲಿ ಕಮಲದ ಹೂವನ್ನು ಎದ್ದು ಕಾಣುವಂತೆ ತೋರಿಸಿದ್ದರು – ಶಿವಲಿಂಗೇಗೌಡ

  • ನಕ್ಸಲರಿಗಿಂತ ಸಿ.ಟಿ ರವಿಯೇ ಡೇಂಜರ್: ಎಸ್.ಎಲ್ ಭೋಜೇಗೌಡ

    ನಕ್ಸಲರಿಗಿಂತ ಸಿ.ಟಿ ರವಿಯೇ ಡೇಂಜರ್: ಎಸ್.ಎಲ್ ಭೋಜೇಗೌಡ

    ಚಿಕ್ಕಮಗಳೂರು: ನಕ್ಸಲರಿಗಿಂತ ಸಿ.ಟಿ ರವಿ (CT Ravi) ಯೇ ಡೇಂಜರ್ ಎಂದು ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಸಿ.ಟಿ ರವಿಯ ಅರ್ಬನ್ ನಕ್ಸಲ್ ಹೇಳಿಕೆಗೆ ಭೋಜೇಗೌಡ (Bhoje Gowda) ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನ ಬದಲಾವಣೆ, ರಾಷ್ಟ್ರಧ್ವಜ ಇಳಿಸಿ ಭಗವಧ್ವಜ, ಹಿಂದೂ ರಾಷ್ಟ್ರದ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳು. ಒಂದು ಜಾತಿ, ಒಂದು ಧರ್ಮ ಇಟ್ಟುಕೊಂಡು ದೇಶವನ್ನು ರಕ್ಷಣೆ ಮಾಡೋಕಾಗುತ್ತಾ?. ಸಿ.ಟಿ ರವಿ ನಾಲಿಗೆ ಹರಿಬಿಟ್ಟ ಪರಿಣಾಮ ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.

    ಚಿಕ್ಕಮಗಳೂರು ಕ್ಷೇತ್ರ (Chikkamagaluru Constituency) ಕ್ಕೆ ಮಾತ್ರ ಕಾಂಗ್ರೆಸ್ ಜೊತೆಗೆ ಹೊಂದಣಿಕೆ ಇತ್ತು. ನಾನು ಜೆಡಿಎಸ್ ಪಕ್ಷದಿಂದಲೇ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ನಾನು ಕಾಂಗ್ರೆಸ್ ಸೇರ್ಪಡೆ ಬರೀ ವದಂತಿ ಅಷ್ಟೇ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ

    ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು. ಪಠ್ಯಪುಸ್ತಕ ವಿಚಾರದಲ್ಲಿ ಎಂಎಲ್‍ಎಗಳಿಗೆ ಏನು ಕೆಲಸ..?. ಪಠ್ಯ ಪುಸ್ತಕಗಳನ್ನು ಯಾರು ತಯಾರು ಮಾಡುತ್ತಾರೆ, ಯಾರು ಪರಿಪಕ್ವವಾಗಿದ್ದಾರೆ ಅವರಿಗೆ ಬಿಟ್ಟ ವಿಚಾರ ಎಂದು ಭೋಜೇಗೌಡ ತಿಳಿಸಿದ್ದಾರೆ.

    ಸಿ.ಟಿ ರವಿ ಹೇಳಿದ್ದೇನು..?: ನಕ್ಸಲ್ ಚಟುವಟಿಕೆ ಒಡಿಶಾ ಕಡೆ ಸೀಮಿತ ಆಗಿತ್ತು. ಈಗ ಕರ್ನಾಟಕದಲ್ಲಿ ಶುರು ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ ಎಂದು  ಸಿಟಿ ರವಿ ಹೇಳಿಕೆ ನೀಡಿದ್ದರು.

  • ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

    ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

    – ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ

    ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಯವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ ನಡೆಸಲಾಯಿತು.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪರಮಾಪ್ತ ಭೋಜೇಗೌಡ, ಜೆಡಿಎಸ್ ಅಭ್ಯರ್ಥಿ ಇದ್ದರೂ ಸಿ.ಟಿ ರವಿ ವಿರುದ್ಧ ಭೋಜೇಗೌಡ (Bhoje Gowda) ಅಖಾಡಕ್ಕಿಳಿದಿದ್ದರು. ಈ ಮೂಲಕ ಸಿ.ಟಿ.ರವಿ ಸೋಲಿನ ಮಾಸ್ಟರ್ ಮೈಂಡ್ ಆಗಿದ್ದಾರೆ. ಹೀಗಾಗಿ ಜೆ.ಡಿ.ಎಸ್ ಕಾರ್ಯಕರ್ತರು ಭೋಜೇಗೌಡರಿಗೆ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ಸನ್ಮಾನ ಹಾಗೂ ಅಭಿಷೇಕ ಮಾಡಿದ್ದಾರೆ. ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದ ಭೋಜೇಗೌಡ, ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ಸಿನ ತಮ್ಮಯ್ಯ ಪರ ಮತಯಾಚಿಸಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜಯ – ಬಿಜೆಪಿಗೆ ಹೀನಾಯ ಸೋಲು

    ಬಳಿಕ ಸಿ.ಟಿ.ರವಿ ಬುದ್ಧಿವಂತರಿದ್ದಾರೆ ಎಂದು ಹಾಡಿ ಹೊಗಳಿದ ಭೋಜೇಗೌಡ, ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ಟೀಕೆಗಳು ತಪ್ಪಲ್ಲ, ಆದರೆ ಅದಕ್ಕೊಂದು ಇತಿಮಿತಿ ಇರುತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ. ಸಿ.ಟಿ ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕೆ ಮಾಡುವಾಗ ವ್ಯಕ್ತಿತ್ವ, ರಾಜಕೀಯ ಮುತ್ಸದ್ದಿತನವನ್ನ ಯೋಚನೆ ಮಾಡಬೇಕು ಎಂದರು.

    ಯಾರನ್ನೋ ಮೆಚ್ಚಿಸಲು, ಕ್ಷಣಿಕ ಸುಖಕ್ಕೆ, ಕಾರ್ಯಕರ್ತರ ಮೆಚ್ಚಿಸಲು ವೈಯಕ್ತಿಕ ಟೀಕೆ ಸರಿಯಲ್ಲ. ದೇವೇಗೌಡ (HD Devegowda) ರಿಗೆ ಸಾಬರಾಗಿ ಹುಟ್ಲಿ ಅನ್ನೋದು, ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಅನ್ನೋದು. ಸಿ.ಟಿ.ರವಿ ಯಾರನ್ನ ಬಿಟ್ಡಿದ್ದಾರೆ. ಯಾರನ್ನೂ ಬಿಟ್ಟಿಲ್ಲ. ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್ ನಲ್ಲಿ ಟೀಕೆ ಮಾಡಬೇಕು. ಕುಲದ ಕುತ್ತಿಗೆ ಉದ್ದ ಸರ್… ಅಷ್ಟು ಸುಲಭ ಇಲ್ಲ. ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್. ಕುಲದ ಬಗ್ಗೆ ಮಾತನಾಡುವಾಗ ಜನ ಆತನ ಹಮ್ಮಿನ ಬಗ್ಗೆ ಯೋಚಿಸ್ತಾರೆ ಎಂದು ಹೇಳಿದರು.

    ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ. ದುರಾಡಳಿತ, ದುರಾಂಕಾರ, ನಾಲಿಗೆ ಎಲ್ಲವೂ ಸೇರಿ ಕೂಡಿ ಸೋಲಿಸಿವೆ ಎಂದು ತಿಳಿಸಿದರು. ಇದನ್ನೂ ಓದಿ: ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

  • ಜೆಡಿಎಸ್ ಮುಖಂಡ ಭೋಜೆಗೌಡರಿಂದ ಕಾಂಗ್ರೆಸ್ ಪರ ಪ್ರಚಾರ – ವೀಡಿಯೋ ವೈರಲ್

    ಜೆಡಿಎಸ್ ಮುಖಂಡ ಭೋಜೆಗೌಡರಿಂದ ಕಾಂಗ್ರೆಸ್ ಪರ ಪ್ರಚಾರ – ವೀಡಿಯೋ ವೈರಲ್

    ಚಿಕ್ಕಮಗಳೂರು: ಜೆಡಿಎಸ್ (JDS) ಮುಖಂಡ ಭೋಜೆಗೌಡ (Bhojegowda) ಕಾಂಗ್ರೆಸ್ (Congress) ಪರ ಬಹಿರಂಗ ಪ್ರಚಾರದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಆಪ್ತರಾಗಿರುವ ಎಂಎಲ್‍ಸಿ ಭೋಜೇಗೌಡ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ದೇವರಕಟ್ಟೆಯ ಮುಂದೆ ಕುಳಿತು ಪ್ರಚಾರ ನಡೆಸಿದ್ದಾರೆ. ಈ ವೇಳೆ ಬಿಜೆಪಿ (BJP) ಶಾಸಕ ಸಿ.ಟಿ.ರವಿಯವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಬೇಕು. ಸಿದ್ದರಾಮಯ್ಯ ಹಾಗೂ ದೇವೇಗೌಡರಿಗೆ ಅವಮಾನ ಮಾಡಿದವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಿ ಎಂದು ಕ್ಷೇತ್ರದ ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ? 

    ಸಿ.ಟಿ ರವಿ, ಸಿದ್ದರಾಮಯ್ಯನವರನ್ನು (Siddaramaiah) ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟಿ ಎನ್ನುತ್ತಾರೆ. ಅಲ್ಲದೆ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಗ್ಗೆಯೂ ಮಾತನಾಡುತ್ತಾರೆ. ಅವರಿಗೆ ಮತದಾರರು ಪಾಠ ಕಲಿಸಬೇಕು. ನೀವು ಹಾಲುಮತದ ಕುಟುಂಬದಲ್ಲಿ ಹುಟ್ಟಿದ್ದರೆ, ಸಿದ್ದರಾಮಯ್ಯರಿಗೆ ಅವಮಾನ ಮಾಡಿದವರಿಗೆ ಬುದ್ಧಿ ಕಲಿಸಿ. ಇಲ್ಲದಿದ್ದರೆ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ ಎಂದರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಹಿಂದೆ ಸಹ ಭೋಜೇಗೌಡರು ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದ್ದ ವೀಡಿಯೋ ವೈರಲ್ ಆಗಿತ್ತು. ಇದರಿಂದ ಜೆಡಿಎಸ್‍ನಲ್ಲಿ ಗೊಂದಲ ಉಂಟಾಗಿತ್ತು. ಅಲ್ಲದೆ ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಅಸಮಧಾನ ಹೊರಹಾಕಿದ್ದರು. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

  • ಜೆಡಿಎಸ್‌ಗೆ ಶಾಕ್‌ – ʼಕೈʼ ಅಭ್ಯರ್ಥಿಗೆ ವೋಟ್‌ ಹಾಕಿ ಎಂದ MLC ಭೋಜೇಗೌಡ

    ಜೆಡಿಎಸ್‌ಗೆ ಶಾಕ್‌ – ʼಕೈʼ ಅಭ್ಯರ್ಥಿಗೆ ವೋಟ್‌ ಹಾಕಿ ಎಂದ MLC ಭೋಜೇಗೌಡ

    ಚಿಕ್ಕಮಗಳೂರು: ಜೆಡಿಎಸ್‍ಗೆ (JDS) ಬಿಟ್ಟು ಕಾಂಗ್ರೆಸ್‍ಗೆ (Congress) ಮತ ಹಾಕಿ ಎನ್ನುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ (SL Bhojegowda) ಶಾಕ್ ನೀಡಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಗೆಲುವಿಗೆ ಭರ್ಜರಿ ಸಿದ್ಧತೆ ನಡೆಸಿವೆ. ಆದರೆ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಸ್.ಎಲ್. ಭೋಜೇಗೌಡ ಅವರು ಜೆಡಿಎಸ್ ಕಾರ್ಯಕರ್ತರೊಂದಿಗೆ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದ್ದು, ಕಾಂಗ್ರೆಸ್‍ಗೆ ಮತ ಹಾಕಿ ಎನ್ನುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ.

    ವೈರಲ್ ವೀಡಿಯೋದಲ್ಲಿ ಏನಿದೆ?: ಭೋಜೇಗೌಡ ಕಾರ್ಯಕರ್ತರ ಜೊತೆ ಮಾತನಾಡಿರುವ ವೀಡಿಯೋ ಇದಾಗಿದೆ. ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯನ ಪರ ಬ್ಯಾಟಿಂಗ್ ಬೀಸಿದ ಅವರು, ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕರೆ ನೀಡಿದರು. ಈ ಬಾರಿ ನೀವೆಲ್ಲಾ ಸೇರಿ ಕಾಂಗ್ರೆಸ್‍ಗೆ ವೋಟ್ ಹಾಕಬೇಕು. ಇದು ಒಂದು ಬಾರಿ ಈ ರೀತಿ ಮಾಡಿ ಎಂದು ಹೇಳಿದ್ದಾರೆ. ನಾಗಪುರದಿಂದ ಯಾರೇ ಬಂದರೂ ಚುನಾವಣೆ ಮಾಡಲು ಆಗಲ್ಲ: ಬಿಜೆಪಿ ನಾಯಕರಿಗೆ ಶೆಟ್ಟರ್ ತಿರುಗೇಟು

    ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಕಣದಲ್ಲಿದ್ದರೂ ಕಾಂಗ್ರೆಸ್‍ಗೆ ಬೆಂಬಲ ನೀಡಿ ಎಂದು ಮಾತನಾಡಿರುವ ಭೋಜೇಗೌಡರ ಹೇಳಿಕೆಯೂ ಇದೀಗ ಚರ್ಚೆಗೆ ಗ್ರಾಸವಾಗುತ್ತಿದೆ. ಶಾಸಕ ಸಿ.ಟಿ. ರವಿಯನ್ನು (CT Ravi) ಸೋಲಿಸಲು ಕಾಂಗ್ರೆಸ್ – ಜೆಡಿಎಸ್ ಒಂದಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಸಲ ಕಪ್ ನಮ್ದೆ: ಶೆಟ್ಟರ್‌ಗೆ ಪ್ರಹ್ಲಾದ್ ಜೋಶಿ ಟಾಂಗ್

  • MLC ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ

    MLC ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ

    ಬೆಂಗಳೂರು: ವಿಧಾನಪರಿಷತ್ ಸದಸ್ಯರ ಕಾರಿನ ನಂಬರ್ ಪ್ಲೇಟ್ (Number Plate) ಬಳಸಿ ವಂಚಕರು ಕದ್ದ ಕಾರುಗಳನ್ನು ಮಾರಾಟ ಮಾಡಲು ಮಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಜೆಡಿಎಸ್ (JDS) ಎಂಎಲ್‍ಸಿ ಭೋಜೇಗೌಡರ (Bhoje Gowda) ಕಾರಿನ ನಂಬರನ್ನು ಬಳಸಿ ಕದ್ದ ಕಾರನ್ನು (Car) ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿ ನಡೆದಿದೆ. ಕಾರ್ ಶೋ ರೂಂವೊಂದರಲ್ಲಿ ಭೋಜೇಗೌಡರ ಇನೋವಾ ಕಾರಿನ ನಂಬರ್ ಹಾಕಿ ಮಾರಾಟಕ್ಕೆ ನಿಲ್ಲಿಸಲಾಗಿತ್ತು. ಈ ಕಾರಿನ ನಂಬರ್ ನೋಡಿದ ಭೋಜೆಗೌಡರ ಪಿಎ ಮಾದೇಶ್ ಒಮ್ಮೆಲೇ ಶಾಕ್ ಆಗಿದ್ದಾರೆ. ಇದರಿಂದ ಅನುಮಾನಗೊಂಡು ಶೋರೂಂನಲ್ಲಿ ಆ ಕಾರಿನ ಬಗ್ಗೆ ವಿಚಾರಿಸಿದ್ದಾರೆ.

    ಈ ವೇಳೆ ಶೋರೂಂನವರು ಕಾರನ್ನು ಮಾರಾಟಕ್ಕೆ ಇರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಮಾದೇಶ್ ಕೂಡಲೇ ಭೋಜೇಗೌಡರಿಗೆ ಕರೆ ಮಾಡಿ ಇನೋವಾ ಕಾರನ್ನು ಮಾರಾಟಕ್ಕೆ ಇಟ್ಟಿದ್ದೀರಾ ಎಂದು ವಿಚಾರಿಸಿದ್ದಾರೆ. ಈ ವೇಳೆ ಭೋಜೇಗೌಡರು ನನ್ನ ಇನೋವಾ ಕಾರು ಮನೆಯಲ್ಲೇ ಇದೆ. ಇದನ್ನು ಮಾರಾಟಕ್ಕೆ ಇಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಮೂವರು ಮೃತಪಟ್ಟರೂ ಅಧಿಕಾರಿಗಳು ಡೋಂಟ್ ಕೇರ್!

    ಇದಾದ ಬಳಿಕ ಕೂಡಲೇ ಮಾದೇಶ್ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕದ್ದ ಕಾರುಗಳಿಗೆ ನಂಬರ್ ಬದಲಾಯಿಸಿ, ಮಾರಾಟ ಮಾಡುತ್ತಿದ್ದುದ್ದು ಯಾಕೆ ಎನ್ನುವುದನ್ನು ಪತ್ತೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಓಟಿಪಿ ಬರದೇ ವೋಟಿಲ್ಲ- ಮೊಬೈಲ್ ಟವರ್‌ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ

  • ನಿಮಗೆ ಕನ್ನಡ ಬರಲ್ಲ, ಸುಮ್ಮನೆ ಕುಳಿತುಕೊಳ್ಳಿ ಸಚಿವ ಪ್ರಭು ಚೌಹಾಣ್‌ಗೆ ಭೋಜೇಗೌಡ ಲೇವಡಿ

    ನಿಮಗೆ ಕನ್ನಡ ಬರಲ್ಲ, ಸುಮ್ಮನೆ ಕುಳಿತುಕೊಳ್ಳಿ ಸಚಿವ ಪ್ರಭು ಚೌಹಾಣ್‌ಗೆ ಭೋಜೇಗೌಡ ಲೇವಡಿ

    ಬೆಂಗಳೂರು: ಸಚಿವರು ಉತ್ತರಕ್ಕಾಗಿ ಸಮಯ ಕೇಳಿದ್ದಕ್ಕೆ ಅವರ ವಿರುದ್ಧ ವಿಪಕ್ಷ ಸದಸ್ಯರು ಗಲಾಟೆ ಮಾಡಿದ ಪ್ರಕರಣ ವಿಧಾನ ಪರಿಷತ್‌ನಲ್ಲಿ (Vidhan Parishad) ನಡೆಯಿತು.

    ಬೆಳಗ್ಗೆ ಅಧಿವೇಶನ ಪ್ರಾರಂಭ ಆಗುತ್ತಲೇ, ಗೋವಾಕ್ಕೆ ಎಷ್ಟು ದನ, ಎಮ್ಮೆ ಮಾಂಸ ರಫ್ತಾಗುತ್ತೆ ಅಂತ ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ಪ್ರಶ್ನೆ ಕೇಳಿದರು. ಇದಕ್ಕೆ ಸಮಯ ಬೇಕು ಅಂತ ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಹೇಳಿದರು. ಸಚಿವರ ವರ್ತನೆಗೆ ವಿಪಕ್ಷ ಸದಸ್ಯರ ಕಿಡಿಕಾರಿದರು. ಸಚಿವರು ಹೀಗೆ ಅಂದ್ರೆ ಹೇಗೆ. ಮಾಂಸ ರಪ್ತು ಎಷ್ಟು ಆಗುತ್ತದೆ ಅಂತ ಹೇಳಿಲ್ಲ ಅಂದ್ರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡಿದ ಸಚಿವ ಪ್ರಭು ಚೌಹಾಣ್ (Prabhu Chauhan), ಎರಡು, ಮೂರು ಇಲಾಖೆಯಿಂದ ಮಾಹಿತಿ ತರಿಸಬೇಕು. ಹೀಗಾಗಿ ತಡ ಆಗಿದೆ. ಆದಷ್ಟು ಬೇಗ ಉತ್ತರ ಕೊಡಿಸುವುದಾಗಿ ತಿಳಿಸಿದರು. ಸಭಾಪತಿ ಹೊರಟ್ಟಿ ಮಾತನಾಡಿ, ಉತ್ತರ ಕೊಡೋಕೆ ಏನ್ ಸಮಸ್ಯೆ. ಅಧಿಕಾರಿಗಳು ಏನ್ ಮಾಡ್ತಾರೆ. ಅಧಿಕಾರಿಗಳ ಮೇಲೆ ನಿಮಗೆ ಹಿಡಿತ ಇಲ್ಲವಾ. ಅಧಿವೇಶನ ಎಷ್ಟು ದಿನ ನಡೆಯುತ್ತೆ. ಅಧಿವೇಶನ ಮುಗಿಯೋ ಒಳಗೆ ಉತ್ತರ ಕೊಡುವಂತೆ ಸಭಾಪತಿ ಸೂಚನೆ ನೀಡಿದರು.

    ಬಳಿಕ ಜೆಡಿಎಸ್ (JDS) ತಿಪ್ಪೇಸ್ವಾಮಿ ಪ್ರಶ್ನೆಗೂ ಸಚಿವರು ಸಮಯ ಕೇಳಿದರು. ಇದಕ್ಕೆ ಕಾಂಗ್ರೆಸ್ (Congress) -ಜೆಡಿಎಸ್ ಸದಸ್ಯರ ವಿರೋಧ ವ್ಯಕ್ತಪಡಿಸಿದರು. ಜೆಡಿಎಸ್ ಸದಸ್ಯ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿ, 10 ದಿನ ಮುಂಚೆ ಕೊಡ್ತೀವಿ. ಉತ್ತರ ಕೊಡೋಕೆ ಏನು? ಉತ್ತರ ಕೊಡುವ ಯೋಗ್ಯತೆ ಇಲ್ಲದೆ ಇದ್ದರೆ ಹೇಗೆ ಎಂದರು. ಭೋಜೇಗೌಡ ಮಾತಿಗೆ ಸಚಿವ ಪ್ರಭು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಇಲಾಖೆಯಿಂದ ಮಾಹಿತಿ ತರಬೇಕು. ನೀವು ಏನೇನೋ ಮಾತಾಡಬೇಡಿ ಎಂದು ಆಕ್ರೋಶ ಹೊರಹಾಕಿದರು.

    ಈ ವೇಳೆ ನಿಮಗೆ ಕನ್ನಡ ಸರಿಯಾಗಿ ಮಾತಾಡೋಕೆ ಬರೋದಿಲ್ಲ ಅಂತ ಪ್ರಭು ಚೌಹಾಣ್‌ಗೆ ಭೋಜೇಗೌಡ ಟೀಕೆ ಮಾಡಿದರು. ಭೋಜೇಗೌಡ ಮಾತಿಗೆ ಪ್ರಭು ಚೌಹಾಣ್‌ ಆಕ್ರೋಶ ವ್ಯಕ್ತಪಡಿಸಿದರು. ನನಗೆ ಎಲ್ಲ ಬರುತ್ತೆ. ಸುಮ್ಮನೆ ಕುಳಿಕೊಳ್ಳಿ ಎಂದು ಕಿಡಿಕಾರಿದರು. ಈ ವೇಳೆ ಆಕ್ರೋಶಗೊಂಡ ಸಚಿವರನ್ನು ಸಚೇತಕ ನಾರಾಯಣಸ್ವಾಮಿ, ಸಚಿವ ಸಿಸಿ ಪಾಟೀಲ್ ಸಮಾಧಾನ ಮಾಡಿದರು. ಇದನ್ನೂ ಓದಿ: ರಾಜ್ಯದ ಎಲ್ಲಾ ಗೊಲ್ಲರಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಮಾಡುತ್ತೇವೆ: ಆರ್ ಅಶೋಕ್

    ಬಳಿಕ ಸಚಿವ ಸೋಮಣ್ಣ ಮಾತನಾಡಿ, ಕಂದಾಯ ಇಲಾಖೆಗೆ ಕಳಿಸಿದ್ದಾರೆ. ಮುಂದಿನ ವಾರ ಉತ್ತರ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಸದಸ್ಯರು ಒಪ್ಪಿದರು. ಮಾತು ಮುಂದುವರಿಸಿದ ಸೋಮಣ್ಣ, ಭೋಜೇಗೌಡ ಉತ್ತಮ ಕುಟುಂಬದಿಂದ ಬಂದಿದ್ದಾರೆ. ಕನ್ನಡ ಬರುವುದಿಲ್ಲ ಅಂತ ಹೇಳೋದು ಸರಿಯಲ್ಲ. ಅವರ ಭಾಗದಲ್ಲಿ ಹಾಗೆ ಭಾಷೆ ಇದೆ. ಅದನ್ನು ಲೇವಡಿ ಮಾಡೋದು ಸರಿಯಿಲ್ಲ ಎಂದು ಭೋಜೇಗೌಡ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ- ಸುನಿಲ್‌ಗೆ ಮುತಾಲಿಕ್ ತಿರುಗೇಟು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

    ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

    ಮಡಿಕೇರಿ: ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದು ಪಠ್ಯದಲ್ಲಿ ಸೇರಿಸಿದವನೊಬ್ಬ ಮೂರ್ಖ ಹಾಗೂ ಅಯೋಗ್ಯ ಎಂದು ಎಂಎಲ್‍ಸಿ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

    ಕೊಡಗಿನ ಸೋಮವಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಸರ್ವ ಜನಾಂಗದ ಶಾಂತಿಯನ್ನು ಸಾರಿದವರು. ಅವರು ಈ ನಾಡಿನ ಆಸ್ತಿ ಆಗಿದ್ದಾರೆ. ಪಠ್ಯ ಪರಿಷ್ಕರಣೆ ಸಂದರ್ಭ ಅವರ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿ ಸಂಗ್ರಹಿಸಿ ಕೊಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

    ಪಠ್ಯ ಪರಿಷ್ಕರಣೆಗೂ ಮುನ್ನ ಸರ್ಕಾರಕ್ಕೆ ಅವನ ಹಿನ್ನೆಲೆ ಗೊತ್ತಿರಲಿಲ್ಲವೇ.? ಎಲ್ಲರೂ ಹೇಳಿದ ಮೇಲೆ ಪಠ್ಯಪುಸ್ತಕ ಸಮಿತಿ ವಿಸರ್ಜನೆ ಮಾಡಿದ ಸರ್ಕಾರಕ್ಕೆ ನಾಚಿಕೆ ಆಗಬೇಕು. ಆದರೆ ಇಷ್ಟೆಲ್ಲಾ ಅಯೋಗ್ಯ ಕೆಲಸ ಮಾಡಿದ್ದಾನೆಂದು ಹೇಳಿದ ಮೇಲೆ ಸಮಿತಿ ವಿಸರ್ಜನೆ ಮಾಡಿದ ನಿಮಗೆ ನಾಚಿಕೆ ಆಗಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಜೆಡಿಎಸ್‍ನಿಂದ ಶಾಸಕ ಗುಬ್ಬಿ ಶ್ರೀನಿವಾಸ್, ಶ್ರೀನಿವಾಸ್ ಗೌಡ ಉಚ್ಚಾಟನೆ

    ರೋಹಿತ್ ಚಕ್ರತಿರ್ಥನನ್ನು ಸಮಿತಿ ಸದಸ್ಯನನ್ನಾಗಿಯೂ ಮಾಡಬೇಕಾಗಿರಲಿಲ್ಲ. ಆದರೂ ಅಧ್ಯಕ್ಷನನ್ನಾಗಿ ಮಾಡಲಾಯಿತು. ಇಂತಹ ಅಯೋಗ್ಯನನ್ನು ಇಡೀ ಸಮಾಜದಿಂದ ದೂರ ಇಡಬೇಕು. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಲು ಯತ್ನಿಸಿದ ಅವನ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಎಂದು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶೀಘ್ರವೇ ಸಿಡಿಎಸ್‌ ನೇಮಕ: ರಾಜನಾಥ್‌ ಸಿಂಗ್‌ ಮಾಹಿತಿ

  • ಪರಿಷತ್‍ನಲ್ಲಿ ನಿದ್ರೆ ಮಾಡೋರಿಗೆ ಹಾಡು ಹೇಳಿ ಎಬ್ಬಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ

    ಪರಿಷತ್‍ನಲ್ಲಿ ನಿದ್ರೆ ಮಾಡೋರಿಗೆ ಹಾಡು ಹೇಳಿ ಎಬ್ಬಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ

    -ಪರಿಸರ ವಾದಿಗಳ ವಿರುದ್ಧ ಕಿಡಿ

    ಬೆಂಗಳೂರು: ವಿಧಾನಪರಿಷತ್‍ನಲ್ಲಿ ಚರ್ಚೆಯ ಸಂದರ್ಭದಲ್ಲಿ ನಿದ್ದೆ ಮಾಡುತ್ತಿದ್ದವರನ್ನು ನೋಡಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಭೋಜೇಗೌಡರು ಏರು ಕಂಠದಲ್ಲಿ ದಾಸರ ಪದ ಹಾಡುವ ಮೂಲಕ ನಿದ್ದೆಯಿಂದ ಎಬ್ಬಿಸುವ ಕೆಲಸ ಮಾಡಿದ್ದಾರೆ.

    ನಿಯಮ 330 ಅಡಿ ನಡೆಯುತ್ತಿದ್ದ ಚರ್ಚೆ ವೇಳೆ ಫಾರೂಕ್ ಅವರೊಂದಿಗೆ ಮಾತನಾಡುತ್ತಿದ್ದ ಭೋಜೇಗೌಡರು, ಇದ್ದಕ್ಕಿದ್ದಂತೆ ಗಾಯನ ಶುರುಮಾಡಿಕೊಂಡರು. ರಾಗವಾಗಿ ಹಾಡು ಶುರು ಮಾಡಿದ ಭೋಜೇಗೌಡರು ಏರು ಕಂಠದಲ್ಲಿ ದಾಸರ ಪದ ಹಾಡಿ, ಬಹಳ ಜನ ನಿದ್ದೆ ಮಾಡ್ತಿದ್ರು ಅದಕ್ಕೆ ಹಾಡಿದೆ ಎಂದು ಸಮಜಾಯಿಷಿ ನೀಡಿದರು. ಇದನ್ನೂ ಓದಿ: ವಿಮಾನದ ಟಿಕೆಟ್‍ಗಿಂತ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ: ರಮೇಶ್ ಕುಮಾರ್

    88 ಲಕ್ಷ ಜೀವರಾಶಿಗಳ ದಾಟಿ ಬಂದ ಈ ಶರೀರ, ತಾನಲ್ಲ ತನ್ನದಲ್ಲ ಎಂದು ದಾಸರ ಪದ ಭೋಜೇಗೌಡರು ಹಾಡುತ್ತಿದ್ದಂತೆ, ಬಿಜೆಪಿ ಸದಸ್ಯರಿಂದ ಒನ್ಸ್ ಮೋರ್ ಎಂಬ ಬೇಡಿಕೆ ಕೇಳಿಬಂತು. ಈ ವೇಳೆ ಮತ್ತೆ ರಾಗವಾಗಿ ಕೀರ್ತನೆ ಹಾಡಲು ಭೋಜೇಗೌಡರು ಆರಂಭಿಸಿದರು. ಈ ಸಂದರ್ಭ ಮತ್ತೆ ಶುರು ಮಾಡಬೇಡಿ ಎಂದು ಸಭಾಪತಿ ಹೊರಟ್ಟಿ ತಮಾಷೆ ಮಾಡಿದರು.

    ಮಂಗಳೂರು, ಕರಾವಳಿ, ಉಳ್ಳಾಲ ಸುರತ್ಕಲ್ ಭಾಗದಲ್ಲಿ ಅಸಮರ್ಪಕ ಒಳಚರಂಡಿಯಿಂದ ತೀವ್ರ ಸಮಸ್ಯೆ ಇದೆ ಎಂದು ತಮ್ಮ ಭಾಗದ ಸಮಸ್ಯೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು. ಇದಲ್ಲದೆ ಮಂಗಳೂರು, ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಕೈಗಾರಿಕಾ ಪ್ರದೇಶಗಳಿವೆ ಇದರಿಂದ ಪರಿಸರ ನಾಶವಾಗುತ್ತಿದೆ. ಈ ಬಗ್ಗೆ ಮಾತನಾಡದೆ ಸುಮ್ಮನಿರುವ ಇವರೆಲ್ಲ ಪರಿಸರ ವಾದಿಗಳಲ್ಲ, ಪರಿಸರ ವ್ಯಾಧಿಗಳು. ನನ್ನ ಬಗ್ಗೆ ಏನು ಬೇಕಾದ್ರೂ ಬರೀರಿ, ಪರಿಸರ ವ್ಯಾಧಿಗಳಿಂದಾಗಿಯೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಪರಿಸರ ವಾದಿಗಳ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

  • ಕಡೆಗಣಿಸಿ ಮಾಡುವ ಸಾಧನೆಯಾದರೂ ಏನು- ಭೋಜೇಗೌಡಗೆ ಅಂಗಾರ ಟಾಂಗ್

    ಕಡೆಗಣಿಸಿ ಮಾಡುವ ಸಾಧನೆಯಾದರೂ ಏನು- ಭೋಜೇಗೌಡಗೆ ಅಂಗಾರ ಟಾಂಗ್

    ಚಿಕ್ಕಮಗಳೂರು: ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಭೋಜೇಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

    ತಮ್ಮ ಮೇಲಿನ ಆರೋಪಕ್ಕೆ ತಾಲೂಕಿನ ಸಖರಾಯಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷದ, ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿಲ್ಲ. ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಯಾವುದೇ ಪ್ರತ್ಯೇಕ ಇಲಾಖೆಯವರನ್ನು ಕರೆದು ಸಭೆಯನ್ನೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಇತ್ತೀಚೆಗೆ ನ್ಯಾಷನಲ್ ಹೈವೇ, ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ಮಾಡಿದ್ದೇನೆ. ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿ ಸಭೆ ಮಾಡಿಲ್ಲ. ಈಗ ಕೋವಿಡ್ ಇರುವುದರಿಂದ ಪಂಚಾಯಿತಿಗೆ ಭೇಟಿ ಕೊಡುತ್ತಿದ್ದೇನೆ. ಯಾವ ಸಮಸ್ಯೆ ಇದೆ, ಯಾವ ರೀತಿ ಕೋವಿಡ್ ಎದುರಿಸುತ್ತಿದ್ದಾರೆ. ಏನಾದರೂ ಸಮಸ್ಯೆ ಇದೆಯಾ, ಪರಿಹಾರವೇನು ಎಂದು ಚರ್ಚಿಸುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಓಡಾಡಿ ಕೆಲಸ ಮಾಡುತ್ತಿದ್ದೇನೆ, ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಸಭಾ ಕಾರ್ಯಕ್ರಮ ನಡೆಸಿ, ಅವರನ್ನು ಕರೆಯದಿದ್ದರೆ ಅಥವಾ ಅಪಮಾನ ಮಾಡಿದ್ದರೆ ಆಗ ಮಾತನಾಡಬಹುದು. ಸಣ್ಣಪುಟ್ಟ ವಿಷಯಕ್ಕೆ ರಾಜಕೀಯ ಮಾಡಿದರೆ ಏನೂ ಹೇಳಲು ಆಗುವುದಿಲ್ಲ ಎಂದು ನಯವಾಗೇ ಉತ್ತರಿಸಿದ್ದಾರೆ. ಕ್ಷೇತ್ರದ ಜನ ಆರು ಬಾರಿ ಆಯ್ಕೆ ಮಾಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಯಾರನ್ನೂ ಕಡೆಗಣಿಸಿಲ್ಲ. ಕಡೆಗಣಿಸಿ ಸಾಧನೆ ಮಾಡುವುದಾದರೂ ಏನು? ನನ್ನ ಇಲಾಖೆ, ನನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಕೆಲಸ ಮಾಡಬೇಕಿದೆ. ಭೋಜೇಗೌಡರು ರಾಜಕೀಯದಲ್ಲಿ ನನಗಿಂತ ಹಿರಿಯರು, ಅನುಭವಿಗಳು ಕೂಡ. ಸ್ಥಾನದ ಮಹತ್ವವನ್ನು ತಿಳಿದು ಕೆಲಸ ಮಾಡಿದರೆ ಯಾವ ಸಮಸ್ಯೆ ಬರುವುದಿಲ್ಲ ಎಂದರು.