Tag: ಭೋಜನಪ್ರಿಯ

  • ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್‍ಗೆ ಹೋಗ್ತಿದ್ರು?

    ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್‍ಗೆ ಹೋಗ್ತಿದ್ರು?

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಭೋಜನ ಪ್ರಿಯರು. ಇವತ್ತು ಸಮಾಧಿ ಬಳಿ ಅಪ್ಪುಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ಎಡೆ ಇಡಲಿದ್ದಾರೆ. ಫೈವ್ ಸ್ಟಾರ್ ಹೊಟೇಲ್‍ನಿಂದ ಫುಟ್‍ಪಾತ್ ಹೊಟೇಲ್ ಖಾದ್ಯಗಳನ್ನೂ ಸವಿದಿರೋದಾಗಿ ಅಪ್ಪು ಬಹಳಷ್ಟು ಸಲ ಹೇಳಿಕೊಂಡಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ಚಿತ್ರೀಕರಣಕ್ಕೆ ಹೋದ ವೇಳೆ ಮರೆಯದೆ ಆಯಾ ಜಿಲ್ಲೆಯ ವಿಶಿಷ್ಟ ಆಹಾರಗಳ ಸವಿ ನೋಡಿದ್ದಾರೆ. ಅಪ್ಪುಗೆ ಪ್ರಿಯವಾದ ತಿಂಡಿ-ತಿನಿಸುಗಳ ವರದಿ ಇಲ್ಲಿದೆ.

    ಪುನೀತ್ ಅವರು ನಾನ್ ವೆಜ್ ಪ್ರಿಯ. ಅವರ ಸಹಾಯದಿಂದಲ್ಲೇ ಹೋಟೆಲ್ ಪ್ರಾರಂಭಿಸಿದ ಚಂದ್ರು ಅವರ ಕೈರುಚಿ ಎಂದರೆ ಅಪ್ಪುಗೆ ತುಂಬಾ ಇಷ್ಟ. ಇಷ್ಟ ಪಡುತ್ತಿದ್ದರು. ಅದರಲ್ಲಿಯೂ ಅಪ್ಪು ಚಂದ್ರು ಕೈರುಚಿಗೆ ಅಪ್ಪು ಎಷ್ಟು ಅಡಿಕ್ಟ್ ಆಗಿದ್ರು ಅಂದ್ರೆ ಜೇಮ್ಸ್ ಶೂಟಿಂಗ್ ನಲ್ಲಿ ಕಾಶ್ಮೀರದಲ್ಲಿದ್ದಾಗ, ಮಟನ್ ಸಾಂಬಾರ್ ರೆಸಿಪಿಯನ್ನು ಅಪ್ಪು ತರಿಸಿಕೊಂಡಿದ್ರು. ಬೆಂಗಳೂರಿನಲ್ಲಿದ್ದ ಚಂದ್ರು ಕೈಯಿಂದ ರೆಸಿಪಿ ಶೂಟ್ ಮಾಡಿಸಿಕೊಂಡು ತಾವೇ ಖುದ್ದಾಗಿ ಅಲ್ಲಿ ಟ್ರೈ ಮಾಡಿದ್ದರಂತೆ ಎಂದು ಚಂದ್ರು ನೆನಪಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ

    ಅಣ್ಣಾವ್ರುರ ಸೂಚನೆ!

    ಚಂದ್ರು ಅವರು ಡಾ.ರಾಜ್‍ಕುಮಾರ್ ಅವರಿಗೆ ಮೇಕಪ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ನಂತರ ಅವರ ಸೂಚನೆಯ ಮೇರೆಗೆ ಹೊಟೇಲ್ ಶುರು ಮಾಡಿದ್ದರು. ಅಣ್ಣಾವ್ರು ಚಂದ್ರು ಮನೆಗೆ ಊಟಕ್ಕೆ ಹೋಗಿದ್ದಾಗ ಅವರ ತಾಯಿಯ ಕೈರುಚಿ ಇಷ್ಟವಾಗಿ ಹೊಟೇಲ್ ಮಾಡುವಂತೆ ಸೂಚಿಸಿದ್ದರಂತೆ. ಅಲ್ಲಿಂದ ಚಂದ್ರು ಹೋಟೆಲ್ ಶುರುವಾಗಿದೆ ಎಂದು ಹೇಳಿದ್ದಾರೆ.

    ಅದು ಅಲ್ಲದೇ ಅಪ್ಪು ಹಳೇ ಹೋಟೆಲ್ ಜೊತೆಗೆ ಇನ್ನೊಂದು ಹೋಟೆಲ್ ಪ್ರಾರಂಭಿಸಿದ ಚಂದ್ರು, ಇತ್ತೀಚೆಗಷ್ಟೇ ಈ ಹೊಟೇಲ್ ಓಪನ್ ಆಗಿತ್ತು. ಈ ಭಾನುವಾರ ಬರುತ್ತೇನೆಂದು ಅಪ್ಪು ಹೇಳಿದ್ದರಂತೆ. ಆದರೆ ಅವರನ್ನು ಮಣ್ಣು ಮಾಡೋದಕ್ಕೆ ನಾವು ಹೋಗಬೇಕಾಯ್ತು ಎಂದು ಕಣ್ಣೀರುಡುತ್ತಿದ್ದಾರೆ.

    ಮಲ್ಲೇಶ್ವರನಲ್ಲಿರುವ ಶ್ರೀಸಾಯಿ ರಾಮ್ಸ್ ಚಾಟ್ಸ್ ಅಂಡ್ ಜ್ಯೂಸ್ ಸೆಂಟರ್‍ನ ಕಿಸ್ ಮಸಾಲ ಮತ್ತು ಆಲೂ ದಹಿ ಪೂರಿ, ಡಿಸ್ಕೋ ಚಾಟ್ಸ್ ಅಂದ್ರೆ ಅಪ್ಪುಗೆ ಅಚ್ಚುಮೆಚ್ಚು. ಇದು ಚಿಕ್ಕ ಚಾಟ್ ಸೆಂಟರ್ ಆದರೂ ಪವರ್ ಸ್ಟಾರ್ ಹಮ್ಮು-ಬಿಮ್ಮು ಇಲ್ಲದೇ ಸವಿತಿದ್ರು. ಅದನ್ನು ನೆನಪಿಸಿಕೊಂಡು ಚಾಟ್ಸ್ ಸೆಂಟರ್ ನ ಮಾಲಿಕರು ಭಾವುಕರಾಗಿ ಮಾತನಾಡಿದ್ದಾರೆ.

    ಪುನೀತ್ ಯಾವುದೇ ಊರಿಗೆ ಹೋಗಲಿ, ಆ ಊರಿನ ಫೇವರೇಟ್ ಹೋಟೆಲ್‍ನಲ್ಲಿ ಊಟ – ತಿಂಡಿ ಸವಿಯದೇ ಬರುತ್ತಿರಲ್ಲ. ಅದರಲ್ಲೂ ಮೈಸೂರಿಗೆ ಬಂದಾಗಲೆಲ್ಲ ಹನುಮಂತು ಪಲಾವ್, ಮೈಲಾರಿ ಹೋಟೆಲ್‍ಗೆ ಹೋಗಿ ಮಟನ್ ಪಲಾವ್, ದೋಸೆಯ ರುಚಿ ಸವಿಯದೇ ಹೋಗ್ತಿರಲಿಲ್ಲ. ಒಂದೇ ವೇಳೆ ಅಲ್ಲಿಗೆ ಹೋಗಲು ಆಗದಿದರೆ, ತಾವಿದ್ದ ಜಾಗಕ್ಕೆ ತರಿಸಿಕೊಂಡು ತಿನ್ನುತ್ತಿದ್ದರಂತೆ. ಇದನ್ನೂ ಓದಿ:  ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲಿನಲ್ಲಿ ಇರುವ ಜೈ ಭುವನೇಶ್ವರಿ ಹೊಟೇಲ್‍ನ ಮಾಂಸಾಹಾರ ಎಂದರೆ ಪುನೀತ್ ಅವರಿಗೆ ಅಚ್ಚುಮೆಚ್ಚು. ಕಾಲ್ ಸೂಪ್, ಬೋಟಿ ಗೊಜ್ಜು, ಮಟನ್ ಕುರ್ಮಾ, ಮುದ್ದೆ ಇಷ್ಟ. ಅಪ್ಪುಗೆ ತಂದೆ ರಾಜ್‍ಕುಮಾರ್ ಈ ಹೋಟೆಲ್‍ಅನ್ನು ಪರಿಚಯಿಸಿದ್ರಂತೆ. 1970ರಲ್ಲಿ ಆರಂಭವಾದ ಹೊಟೇಲ್‍ಗೆ ಅಪ್ಪು ಕುಟುಂಬ ಸಮೇತರಾಗಿ ಹಲವು ಬಾರಿ ಬಂದಿರೋದು ಉಂಟು ಎಂದು ಇಲ್ಲಿನ ಮಾಲೀಕರು ಹೇಳಿದ್ದಾರೆ.

    ಮಂಗಳೂರಿಗೆ ಅಪ್ಪು ಬಂದಾಗಲೆಲ್ಲಾ ಹಳ್ಳಿ ಮನೆ ರೊಟ್ಟೀಸ್‍ನಲ್ಲಿ ತಮಗಿಷ್ಟವಾದ ಊಟ ಮಾಡ್ತಿದ್ರು. ಆದ್ರೆ ಇನ್ಮುಂದೆ ಹಾಗೆಲ್ಲ ಆಗಲ್ಲ. ಅವರು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಅಪ್ಪು ಜೊತೆಗಿನ ಒಡನಾಟವನ್ನು ಹೋಟೆಲ್ ಮಾಲೀಕ ಕೃಪಾಲ್ ಅಮನ್ನಾ ಹಂಚಿಕೊಂಡಿದ್ದಾರೆ.