Tag: ಭೋಜನ

  • ಮಂಡ್ಯದಲ್ಲಿ ನುಡಿ ಜಾತ್ರೆ – ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

    ಮಂಡ್ಯದಲ್ಲಿ ನುಡಿ ಜಾತ್ರೆ – ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

    ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಗರಿ ಮಂಡ್ಯದಲ್ಲಿ (Mandya) ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ಶುಕ್ರವಾರ (ಡಿ.20) ಚಾಲನೆ ಸಿಗಲಿದೆ. ಈ ಹಿನ್ನೆಲೆ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನದ (Dinner) ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಉಪಾಹಾರ ಹಾಗೂ ಊಟ ನೀಡಲು 140 ಕೌಂಟರ್‌ಗಳನ್ನು ತೆರೆಯಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಒಂದೇ ಮೆನುವನ್ನು ಈಗಾಗಲೇ ಸಿದ್ಧ ಮಾಡಲಾಗಿದೆ. ನೂರಾರು ಬಾಣಸಿಗರು (Chefs) ಹಾಗೂ ಸಾವಿರಾರು ಸಹಾಯಕರಿಂದ ಖಾದ್ಯಗಳು ತಯಾರಿಯಾಗುತ್ತಿವೆ. ಇದನ್ನೂ ಓದಿ:  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ

    ಈಗಾಗಲೇ ಸಿಹಿ ತಿನಿಸು ತಯಾರಿಕೆ ಕಾರ್ಯ ಆರಂಭವಾಗಿದ್ದು ಹೋಳಿಗೆ, ಮೈಸೂರು ಪಾಕ್  (Mysuru Pak), ಬರ್ಫಿ, ಲಾಡುಗಳನ್ನು ಬಾಣಸಿಗರು ತಯಾರು ಮಾಡಿದ್ದಾರೆ. ಇದನ್ನೂ ಓದಿ: ಸಕ್ಕರೆನಾಡು ಮಂಡ್ಯ ಕೇಸರಿಮಯ – ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

    ಶುಕ್ರವಾರದಿಂದ ಮೆನು ಪ್ರಕಾರ ಊಟ ರೆಡಿಯಾಗಲಿದ್ದು, ಮಂಡ್ಯ ಶೈಲಿಯಲ್ಲಿ ಈ ಬಾರಿ ಊಟ ಇರಲಿದೆ. ಜೊತೆಗೆ ರಾಜ್ಯದ ಪ್ರಮುಖ ಊಟದ ಮೆನು ಸಹ ಇರಲಿದೆ. ಮೂರು ದಿನವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.

  • ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಭೂರಿ ಭೋಜನ, ಭರ್ಜರಿ ತಯಾರಿ

    ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಭೂರಿ ಭೋಜನ, ಭರ್ಜರಿ ತಯಾರಿ

    ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ (Rishabh Shetty) ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಕಾಂತಾರ (Kantara)ಗೆಲುವಿನ ನಂತರ ಅವರು ಅಭಿಮಾನಿಗಳಿಗೆ (Fans) ಸಿಕ್ಕಿಲ್ಲವಾದ್ದರಿಂದ ಇಂದು ಅಧಿಕೃತವಾಗಿ ಅವರೇ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಗ್ರೌಂಡ್ ನಲ್ಲಿ ಅವರು ಇಂದು ಮಧ್ಯಾಹ್ನದಿಂದ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.

    ಹುಟ್ಟು ಹಬ್ಬ ಮತ್ತು ಅಭಿಮಾನಿಗಳ ಭೇಟಿ ಒಟ್ಟಿಗೆ ಆಗುವುದರಿಂದ ಅಭಿಮಾನಿಗಳಿಗಾಗಿ ಭೂರಿ ಭೋಜನ ಸಿದ್ಧವಾಗುತ್ತಿದೆ. ಮಂಗಳೂರು ಮತ್ತು ಬೆಂಗಳೂರು ಶೈಲಿಯ ಊಟವನ್ನು ತಯಾರಿಸಲಾಗಿದ್ದು, ಇಡೀ ಹುಟ್ಟು ಹಬ್ಬದ ನೇತೃತ್ವವನ್ನು ರಿಷಬ್ ಗೆಳೆಯ, ನಟ ಪ್ರಮೋದ್ ಶೆಟ್ಟಿ ವಹಿಸಿಕೊಂಡಿದ್ದಾರೆ. ಈಗಾಗಲೇ ಹುಟ್ಟು ಹಬ್ಬಕ್ಕೆ ಸಂಪೂರ್ಣ ಸಿದ್ದತೆ ಕೂಡ ಮಾಡಲಾಗಿದೆ. ಇದನ್ನೂ ಓದಿ:ಫ್ಯಾನ್ಸ್ ಭೇಟಿಗಾಗಿ ಮಲೇಷ್ಯಾಗೆ ಹೊರಟು ನಿಂತ ರಾಕಿಭಾಯ್ ಯಶ್

    ಈ ಹಿಂದೆ ಯಶ್ ಕೂಡ ಇದೇ ಗ್ರೌಂಡಿನಲ್ಲೇ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದರು. ಬೃಹತ್ ಕಟೌಟ್ ಕೂಡ ಹಾಕಲಾಗಿತ್ತು. ಅದಕ್ಕಾಗಿ ಅಂದವಾದ ಕಾನ್ಸೆಪ್ಟ್ ಕೂಡ ರೆಡಿ ಮಾಡಿಕೊಂಡಿದ್ದರು. ಪೊಲೀಸರು ಅನುಮತಿ ನೀಡದ ಕಾರಣಕ್ಕಾಗಿ ಕಟೌಟ್ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದೀಗ ಅದೇ ಜಾಗದಲ್ಲೇ ರಿಷಬ್ ಕೂಡ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

    ಮಧ್ಯಾಹ್ನದಿಂದ ಶುರುವಾಗುವ ರಿಷಬ್ ಫ್ಯಾನ್ಸ್ ಭೇಟಿ, ಸಂಜೆವರೆಗೂ ಆಯೋಜನೆಗೊಂಡಿದೆ. ಅಭಿಮಾನಿಗಳು ತಂದ ಕೇಕ್ ಕತ್ತರಿಸಿ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಕೊನೆಗೆ ಭೋಜನ ಕೂಡ ಮಾಡಲಿದ್ದಾರಂತೆ ರಿಷಬ್. ಈಗಾಗಲೇ ನಂದಿ ಗ್ರೌಂಡ್ಸ್ ಗೆ ಅಭಿಮಾನಿಗಳು ಆಗಮಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್‌ಐ!

    NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್‌ಐ!

    ಒಡಿಶಾ: ಹೊಸ ವರ್ಷದ ಪಾರ್ಟಿಯನ್ನು ಅದ್ದೂರಿಯಾಗಿ ಮಾಡಬೇಕು. ಭರ್ಜರಿ ಬಾಡೂಟವನ್ನು ಮಾಡಬೇಕು ಎನ್ನುವ ಆಸೆಯಿಂದ ಪೊಲೀಸ್ ಅಧಿಕಾರಿಯೊಬ್ಬರು ಕುರಿ ಕದ್ದಿರುವ  ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

    ಸುಮನ್ ಮಲ್ಲಿಕ್, ಕುರಿ ಕದ್ದ ಸಬ್ ಇನ್ಸ್‌ಪೆಕ್ಟರ್. ಇವರು ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತನ್ನ ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷಕ್ಕೆ ಎರಡು ಮೇಕೆಗಳನ್ನು ಕದ್ದಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಕುರಿಯನ್ನು ಕದ್ದಿರುವ ವಿಚಾರ ಮೇಕೆಗಳ ಮಾಲೀಕರಿಗೆ ಗೊತ್ತಾಗಿದೆ. ಮೇಕೆಗಳನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಒಪ್ಪದ ಸುಮನ್ ಮಲಿಕ್ ಹೊಸ ವರ್ಷಕ್ಕೆ ಮೇಕೆಗಳನ್ನು ಕಡಿದು ಭಾರಿ ಭೋಜನ ತಯಾರಿಸಿ, ಸವಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಅಸಮಾಧಾನಗೊಂಡ ಗ್ರಾಮಸ್ಥರು ಸಿಂಧೇಕೆಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿಯು ಸುಮನ್ ಮಲ್ಲಿಕ್‍ನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ. ಸ್ನೇಹಿತರ ಜೊತೆಗೆ ಪಾರ್ಟಿ ಮಾಡಲು ಹೋಗಿ ಸಬ್ ಇನ್ಸ್‌ಪೆಕ್ಟರ್ ಫಜೀತಿಗೆ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

  • ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ!

    ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ!

    ಬೆಂಗಳೂರು: ಸಚಿವ ಡಿಕೆಶಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ಲ್ಲಿ ಮಂಗಳವಾರ ರಾತ್ರಿ ಜಲ ಸಂಪನ್ಮೂಲ ಸಚಿವ ಡಿಕೆ.ಶಿವಕುಮಾರ್ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ರು.

    ಈ ವೇಳೆ ಸುಧಾಕರ್ ಜೊತೆ ಬಂದ ಗೂಳಿಹಟ್ಟಿ ಶೇಖರ್ ಕೂಡ ಜೊತೆಗಿದ್ರು. ಇವರನ್ನ ನೋಡಿದ ಜೆಡಿಎಸ್, ಕಾಂಗ್ರೆಸ್ ಶಾಸಕರು ಬನ್ನಿ ಬನ್ನಿ ಊಟ ಮಾಡೋದಕ್ಕೆ ಯಾವ ಪಕ್ಷ ಆದರೇನು?. ಊಟ ಮಾಡಿ ಅಂತಾ ಹೇಳಿ ಗೂಳಿಹಟ್ಟಿಯನ್ನು ಪೇಚಿಗೆ ಸಿಲುಕಿಸಿದ್ರು. ನಂತರ ಊಟ ಮಾಡಿದ ಗೂಳಿಹಟ್ಟಿ ಸುಧಾಕರ್ ಅವರ ಕಾರಿನಲ್ಲೆ ವಾಪಾಸಾದ್ರು. ಇದನ್ನೂ ಓದಿ: ಮೊನ್ನೆ ಸಿದ್ದರಾಮಯ್ಯ, ಇಂದು ಡಿಕೆ ಶಿವಕುಮಾರ್ – ಎಂಎಲ್‍ಎ, ಎಂಎಲ್‍ಸಿಗಳಿಗೆ ಡಿನ್ನರ್ ಪಾರ್ಟಿ

    ಆದ್ರೆ ರಾಜಕೀಯ ವಲಯದಲ್ಲಿ ಇದು ಬೇರೆಯೇ ಚರ್ಚೆಗೆ ಗ್ರಾಸವಾಗಿದ್ದು, ಗೂಳಿಹಟ್ಟಿ ಕಾಂಗ್ರೆಸ್ ಸೇರ್ತಾರಾ ಅನ್ನೊ ಅನುಮಾನ ಸೃಷ್ಟಿಸಿದೆ. ಇನ್ನು, ಇದೇ ವೇಳೆ ಸಿಎಂ ಹೆಚ್‍ಡಿಕೆ ಹಾಗೂ ಡಿಕೆಶಿ ಮೂರು ತಾಸು ಮಾತುಕತೆ ನಡೆಸಿದ್ದಾರೆ.