Tag: `ಭೈರಾಗಿ’

  • ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ವರ್ಷದಲ್ಲಿ ಅತೀ ಹೆಚ್ಚು ಸಿನಿಮಾಗಳು ರಿಲೀಸ್ ಆದ ನಟನಾಗಿ ಧನಂಜಯ್ ಹೊರ ಹೊಮ್ಮಿದ್ದಾರೆ. ಈವರೆಗೂ ಸಿಕ್ಕ ಮಾಹಿತಿಯಂತೆ ಧನಂಜಯ್ ಅವರ ಸಿನಿಮಾಗಳು ಅಂದಾಜು ಎರಡು ತಿಂಗಳಿಗೆ ಒಂದರಂತೆ ರಿಲೀಸ್ ಆಗಲಿವೆ. ಈಗಾಗಲೇ ವರ್ಷದ ಫಸ್ಟ್ ಆಫ್ ಮುಗಿದಿದ್ದು, ಸೆಕೆಂಡ್ ಆಫ್ ನಲ್ಲಿ ಧನಂಜಯ್ ನಟನೆಯ ಸಾಲು ಸಾಲು ಚಿತ್ರಗಳು ತೆರೆ ಕಾಣುತ್ತಿವೆ. ಹೀಗಾಗಿ ಈ ವರ್ಷದಲ್ಲಿ ಅತೀ ಹೆಚ್ಚು ಇವರ ನಟನೆಯ ಚಿತ್ರಗಳೇ ಬಿಡುಗಡೆ ಆಗುತ್ತಿರುವುದು ವಿಶೇಷ.

    ನಿನ್ನೆಯಷ್ಟೇ ಧನಂಜಯ್ ನಟನೆಯ ಹೊಸ ಸಿನಿಮಾದ ರಿಲೀಸ್ ದಿನಾಂಕ ಘೋಷಣೆಯಾಗಿದೆ. ಅವರೇ ನಿರ್ಮಾಣ ಮಾಡಿ, ನಟಿಸಿರುವ ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21 ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಧನಂಜಯ್, ಬೆಂಗಳೂರಿನ ಭೂಗತ ದೊರೆ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ರವಿಚಂದ್ರನ್, ವಸಿಷ್ಠ ಸಿಂಹ, ಶ್ರುತಿ ಹರಿಹರನ್ ಸೇರಿದಂತೆ ಹೆಸರಾಂತ ತಾರಾ ಬಳಗವೇ ಈ ಸಿನಿಮಾದಲ್ಲಿದೆ. ಇದನ್ನೂ ಓದಿ: ಹಿಂದಿ ವೆಬ್ ಸಿರೀಸ್‌ನಲ್ಲಿ `ರಂಗಿತರಂಗ’ ನಟಿ ರಾಧಿಕಾ ನಾರಾಯಣ್

    ಮುಂದಿನ ದಿನಗಳಲ್ಲಿ ಡಾಲಿ ಸಿನಿಮಾ ಫೆಸ್ಟಿವೆಲ್ ಶುರುವಾಗಲಿದೆ. ಜುಲೈನಲ್ಲಿ ಶಿವರಾ‍ಜ್ ಕುಮಾರ್ ಜೊತೆಗಿನ ಭೈರಾಗಿ ಚಿತ್ರ ರಿಲೀಸ್ ಆದರೆ, ಆಗಸ್ಟ್ ನಲ್ಲಿ ಮನ್ಸೂನ್ ರಾಗ, ಸೆಪ್ಟಂಬರ್ ನಲ್ಲಿ ಒನ್ಸ್ಪಾನ್ ಟೈಮ್ ಇನ್ ಜಮಾಲಿಗುಡ್ಡ, ಅಕ್ಟೋಬರ್ ನಲ್ಲಿ ಹೆಡ್ ಬುಷ್, ನವೆಂಬರ್ ನಲ್ಲಿ ಹೊಯ್ಸಳ, ಅಲ್ಲದೇ ಈ ನಡುವೆ ಯಾವ ತಿಂಗಳಲ್ಲಾದರೂ, ಜಗ್ಗೇಶ್ ಜೊತೆಗಿನ ತೋತಾಪುರಿ ಸಿನಿಮಾ ಕೂಡ ರಿಲೀಸ್ ಆಗಬಹುದು. ಹಾಗಾಗಿ ತಿಂಗಳಿಗೊಂದು ಡಾಲಿ ಸಿನಿಮಾ ವೀಕ್ಷಿಸಬಹುದಾಗಿದೆ.

    ಇವುಗಳಲ್ಲದೇ ಇನ್ನೂ ಹಲವಾರು ಚಿತ್ರಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ತಮಿಳು ಪುಷ್ಪಾ 2 ದಲ್ಲೂ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಅಲ್ಲಿಗೆ ಡಾಲಿ ವರ್ಷಪೂರ್ತಿ  ಬ್ಯುಸಿಯಾಗಿದ್ದಾರೆ. ಜೊತೆಗೆ ಡಾ.ರಾಜ್ ಕ್ರಿಕೆಟ್ ಪಂದ್ಯಗಳಲ್ಲೂ ಅವರು ಭಾಗಿಯಾಗಿದ್ದಾರೆ.

  • `ಭೈರಾಗಿ’ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿದ ನಟ ಶಿವರಾಜ್‌ಕುಮಾರ್

    `ಭೈರಾಗಿ’ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿದ ನಟ ಶಿವರಾಜ್‌ಕುಮಾರ್

    ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ಗೂ ಮುಂಚೆನೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ `ಭೈರಾಗಿ’ ಸಿನಿಮಾ. ಇದೀಗ `ಭೈರಾಗಿ’ ಚಿತ್ರದ ಶಿವರಾಜ್‌ಕುಮಾರ್ ಪಾತ್ರದ ಡಬ್ಬಿಂಗ್ ಕಂಪ್ಲಿಟ್ ಆಗಿದೆ.

    ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಭೈರಾಗಿ’ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನಿಂದ ಧೂಳೆಬ್ಬಿಸಿದೆ. ಸದ್ಯ ಸೆಂಚುರಿ ಸ್ಟಾರ್ ಶಿವಣ್ಣ `ಭೈರಾಗಿ’ ಚಿತ್ರದಲ್ಲಿನ ತಮ್ಮ ಪಾತ್ರದ ಡಬ್ಬಿಂಗ್ ಪೋರ್ಷನ್ ಮುಗಿಸಿ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ:ಭಾರೀ ಮೊತ್ತಕ್ಕೆ ಸೇಲ್ ಆಯ್ತು ನೀನಾಸಂ ಸತೀಶ್ ನಟನೆಯ ‘ಪೆಟ್ರೊಮ್ಯಾಕ್ಸ್’

    `ಭೈರಾಗಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ಗೆ ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಯಶ ಶಿವಕುಮಾರ್, ಶಶಿಕುಮಾರ್ ಸಾಥ್ ನೀಡಿದ್ದಾರೆ. ಈಗಾಗಲೇ `ಭೈರಾರಿ’ ಚಿತ್ರೀಕರಣ ಕಂಪ್ಲಿಟ್ ಆಗಿದ್ದು, ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಟೀಸರ್‌ನಿಂದ ಗಮನ ಸೆಳೆದಿರೋ ಶಿವಣ್ಣ ನಟನೆಯ ಭೈರಾಗಿ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ.