ಬೆಂಗಳೂರು: ತಾವು ಅದೆಷ್ಟೇ ಬ್ಯುಸಿಯಾಗಿದ್ದರೂ ಬೇರೆಯವರ ಕೆಲಸ ಕಾರ್ಯಗಳನ್ನು ಗಮನಿಸುತ್ತಾ ಮೆಚ್ಚಿಕೊಳ್ಳುವ, ಪ್ರೋತ್ಸಾಹಿಸುವ ಮನೋಭಾವ ಹೊಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೀಗ ಅವರು ಡಾಲಿ ಧನಂಜಯ್ ಅಭಿನಯದ ಭೈರವ ಗೀತಾ ಚಿತ್ರದ ಟ್ರೈಲರ್ ಬಿಡುಗಡೆಯಾದಾಕ್ಷಣವೇ ಅದನ್ನು ವೀಕ್ಷಿಸಿ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
@Dhananjayaka 👌👌👍👍https://t.co/wegL12OZgG
— Darshan Thoogudeepa (@dasadarshan) September 1, 2018
ರಾಮ್‍ಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರದ ಟ್ರೈಲರ್ ಬಿಡುಗಡೆಯಾದಾಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆ ಅಭಿಪ್ರಾಯಗಳು ಹರಿದಾಡಲಾರಂಭಿಸಿದ್ದವು. ತಕ್ಷಣವೇ ಇದನ್ನು ವೀಕ್ಷಿಸಿ ಮೆಚ್ಚಿಕೊಂಡಿರೋ ದರ್ಶನ್ ಅವರು ಭೈರವಗೀತಾ ಟ್ರೈಲರ್ ಸೂಪರ್ ಅಂತ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಡಾಲಿ ಧನಂಜಯ ಕೂಡಾ ಧನ್ಯವಾದ ಹೇಳಿದ್ದಾರೆ.
❤️❤️❤️❤️❤️ https://t.co/kdqCdgIH2T
— Dhananjaya (@Dhananjayaka) September 1, 2018
ಭೈರವ ಗೀತಾ ಟ್ರೈಲರ್ ಬಿಡುಗಡೆಯಾಗಿ ಗಂಟೆ ಕಳೆಯೋ ಮುನ್ನವೇ ವ್ಯಾಪಕ ವೀಕ್ಷಣೆ ಪಡೆದುಕೊಂಡು ಕಡಿಮೆ ಅವಧಿಯಲ್ಲಿ ಮೂರು ಲಕ್ಷ ಕ್ರಾಸ್ ಮಾಡಿದೆ. ಇದರಲ್ಲಿಯೂ ಧನಂಜಯ್ ಟಗರು ಚಿತ್ರದ ಡಾಲಿ ಪಾತ್ರದಂಥಾದ್ದೇ ಖದರ್ ಹೊಂದಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪ್ರೇಮಕಥೆ ಮತ್ತು ಗ್ಯಾಂಗುಗಳ ಬಡಿದಾಟದ ಸುತ್ತ ನಡೆಯೋ ಕಥೆಯ ಹೊಳಹು ಬಿಟ್ಟುಕೊಟ್ಟಿರೋ ಈ ಟ್ರೈಲರ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


