Tag: ಭೈರವ ಗೀತ

  • ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ ಭೈರವ ಡಾಲಿ!

    ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ ಭೈರವ ಡಾಲಿ!

    ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ವಿಜೃಂಭಿಸಿದ್ದರಲ್ಲಾ ಧನಂಜಯ್? ಅದಾಗಿ ವಾರದೊಪ್ಪತ್ತಿನಲ್ಲಿಯೇ ರಾಮ್ ಗೋಪಾಲ್ ವರ್ಮಾ ಅವರನ್ನು ಹೈಜಾಕ್ ಮಾಡಿದ್ದರು. ತಾವು ನಿರ್ಮಾಣ ಮಾಡಲಿರೋ ಚಿತ್ರಕ್ಕೆ ಏಕಾಏಕಿ ಧನಂಜಯ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಚಿತ್ರೀಕರಣಕ್ಕೂ ಚಾಲನೆ ನೀಡಿ ಬಿಟ್ಟಿದ್ದರು. ಹಾಗೆ ಒಂದೇ ಉಸಿರಿಗೆ ತಯಾರಾಗಿ ನಿಂತಿರೋ ಚಿತ್ರ ಭೈರವ ಗೀತಾ!

    ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿ, ದಕ್ಷಿಣ ಭಾರತೀಯ ಚಿತ್ರರಂಗದ ಗಮನ ಸೆಳೆದುಕೊಂಡಿರೋ ಈ ಚಿತ್ರ ಇದೇ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ!

    ರಾಮ್ ಗೋಪಾಲ್ ವರ್ಮಾ ಯಾವುದನ್ನೂ, ಯಾರನ್ನೂ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಅವರು ಎಂತೆಂಥಾ ನಿರ್ದೇಶಕರನ್ನು, ನಟ ನಟಿಯರನ್ನೇ ಗೇಲಿ ಮಾಡಿ ನಕ್ಕು ವಿವಾದಕ್ಕೀಡಾದ ಅದೆಷ್ಟೋ ಉದಾಹರಣೆಗಳಿದ್ದಾವೆ. ಅಂಥಾದ್ದರಲ್ಲಿ ಟಗರು ಚಿತ್ರದಲ್ಲಿನ ಡಾಲಿ ಪಾತ್ರವನ್ನು ಅವರು ಒಪ್ಪಿಕೊಂಡಿದ್ದೇ ದೊಡ್ಡ ವಿಚಾರ.

    ಹಾಗೆ ಡಾಲಿಯನ್ನು ಮೆಚ್ಚಿ ಕೊಂಡಾಡಿದ ವರ್ಮಾ ಭೈರವ ಗೀತಾ ಚಿತ್ರದ ರಗಡ್ ಪ್ರೇಮ್ ಕಹಾನಿಯ ಪಾತ್ರವಾಗಿಸಿದ್ದಾರೆ. ಉಳ್ಳವರ ವಿರುದ್ಧ ಪ್ರೀತಿಯನ್ನಷ್ಟೇ ಬೆನ್ನಿಗಿಟ್ಟುಕೊಂಡು ತಿರುಗಿ ಬೀಳೋ ಪ್ರೇಮಿಯ ಕಥೆಯಾಧಾರಿತವಾದ ಈ ಚಿತ್ರದಲ್ಲಿ ಭರಪೂರ ರೊಮ್ಯಾನ್ಸೂ ಇದೆ ಎಂಬುದು ಪೋಸ್ಟರುಗಳ ಮೂಲಕವೇ ಸಾಬೀತಾಗಿದೆ. ಈ ಮೂಲಕವೇ ಭೈರವ ಗೀತಾ ಬಗ್ಗೆ ಎಲ್ಲೆಡೆ ಕುತೂಹಲ ನಿಗಿನಿಗಿಸೋ ಕೆಂಡದಂತಾಗಿದೆ. ಅಸಲಿಗೆ ಭೈರವನ ಖದರ್ ಎಂಥಾದ್ದೆಂಬುದು ಈ ವಾರ ಜಾಹೀರಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭೈರವ ಡಾಲಿಗೆ ಹೊಂಬಾಳೆ ಆಸರೆ!

    ಭೈರವ ಡಾಲಿಗೆ ಹೊಂಬಾಳೆ ಆಸರೆ!

    ಬೆಂಗಳೂರು: ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ವಿಜೃಂಭಿಸಿದ್ದ ಧನಂಜಯ್ ಅಭಿನಯದ ಚಿತ್ರ ಭೈರವ ಗೀತ. ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡಿರೋ ಈ ಚಿತ್ರ ಈಗಾಗಲೇ ಚಿತ್ರ ವಿಚಿತ್ರ ಫೋಟೋಗಳೂ ಸೇರಿದಂತೆ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಈ ಚಿತ್ರದ ಬಿಡುಗಡೆಯ ಹಾದಿಯೂ ಇದೀಗ ಸಲೀಸಾಗಿದೆ!

    ಭೈರವ ಗೀತ ಚಿತ್ರವನ್ನು ಹೊಂಬಾಳೆ ಸಂಸ್ಥೆಯ ಮೂಲಕ ವಿಶಾಲ ಕರ್ನಾಟಕಕ್ಕೆ ಡಿಸ್ಟ್ರಿಬ್ಯೂಟ್ ಮಾಡಲು ಕಾರ್ತಿಕ್ ಗೌಡ ಮುಂದಾಗಿದ್ದಾರೆ. ಈ ಮೂಲಕ ಈ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಖುದ್ದು ಕಾರ್ತಿಕ್ ಗೌಡ ಅವರೇ ಟ್ವಿಟ್ಟರ್ ಮೂಲಕ ಈ ವಿಚಾರವನ್ನು ಜಾಹೀರು ಮಾಡಿದ್ದಾರೆ.

    ಟಗರು ಚಿತ್ರದ ಭಾರೀ ಯಶಸ್ಸು ಮತ್ತು ಡಾಲಿ ಚಿತ್ರಕ್ಕೆ ಸಿಕ್ಕಿದ್ದ ಭಾರೀ ಜನಪ್ರಿಯತೆಯ ಒಡ್ಡೋಲಗದಲ್ಲಿಯೇ ಭೈರವ ಗೀತ ಚಿತ್ರ ನಿರ್ಮಾಣಗೊಂಡಿದೆ. ಟಗರು ನಂತರ ಧನಂಜಯ್ ನಟಿಸಿರೋ ಮೊದಲ ಚಿತ್ರವೂ ಇದೇ. ರಾಮ್‍ಗೋಪಾಲ್ ವರ್ಮಾ ನಿರ್ಮಾಣ ಮಾಡಿರೋ ಈ ಚಿತ್ರದ ಬಗ್ಗೆ ಡಾಲಿ ಅಭಿಮಾನಿಗಳೆಲ್ಲ ಕಾತರರಾಗಿದ್ದಾರೆ.

  • ಭೈರವ ಡಾಲಿಗೆ ಸಿಕ್ಕಳು ಗೆಳತಿ ಗೀತಾ!

    ಭೈರವ ಡಾಲಿಗೆ ಸಿಕ್ಕಳು ಗೆಳತಿ ಗೀತಾ!

    – ಧನಂಜಯ್ ತೆಲುಗು ಚಿತ್ರದ ನಾಯಕಿ ಇರಾ

    ಬೆಂಗಳೂರು: ಈಗ ಟಗರು ಡಾಲಿಯ ಅಬ್ಬರ ತೆಲುಗಿನಲ್ಲಿಯೂ ಶುರುವಾಗಿದೆ. ಸೂರಿ ನಿರ್ದೇಶನದ ಟಗರು ಚಿತ್ರದ ಡಾಲಿ ಪಾತ್ರದ ಪ್ರಭಾವದಿಂದಲೇ ಧನಂಜಯ್‍ಗೆ ತೆಲುಗಿನ `ಭೈರವ ಗೀತ’ ಚಿತ್ರದಲ್ಲಿ ನಾಯಕನಾಗಿ ನಟಿಸೋ ಅವಕಾಶ ಒದಗಿ ಬಂದಿದೆ. ಮೊನ್ನೆಯಷ್ಟೇ ಚಿತ್ರೀಕರಣ ಶುರುವಿಟ್ಟುಕೊಂಡಿರೋ ಈ ಚಿತ್ರಕ್ಕೆ ತೆಲುಗು ನಟಿ ಇರಾ ನಾಯಕಿಯಾಗಿ ಆಗಮಿಸಿದ್ದಾಳೆ!

    ಭೈರವನಿಗೆ ಗೀತಾ ಆಗಿ ಜೊತೆಯಾಗಲಿರೋ ಇರಾ, ರಾಮ್ ಗೋಪಾಲ್ ವರ್ಮಾ ಪರಿಚಯಿಸಿದ್ದ ಪ್ರತಿಭೆ. ಆರ್‍ಜಿವಿ ಪ್ರೊಡಕ್ಷನ್ ಚಿತ್ರದ ಮೂಲಕವೇ ನಟಿಯಾಗಿದ್ದ ಇರಾಳನ್ನು ವರ್ಮಾ ಸ್ವತಃ ಈ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ವರ್ಮಾ ಮತ್ತು ಭಾಸ್ಕರ್ ಸೇರಿಕೊಂಡು ನಿರ್ಮಾಣ ಮಾಡುತ್ತಿರೋ ಈ ಚಿತ್ರವನ್ನು ಅವರ ಶಿಷ್ಯ ಸಿದ್ಧಾರ್ಥ ನಿರ್ದೇಶನ ಮಾಡುತ್ತಿದ್ದಾರೆ.

    ಆರ್‍ಜಿವಿ ಈ ಹಿಂದೆ ಬೆಂಗಳೂರಿನ ಒರಾಯನ್ ಮಾಲಿಗೆ ಆಗಮಿಸಿ ಟಗರು ಚಿತ್ರ ನೋಡಿದ್ದರು. ಅದರಲ್ಲಿನ ಡಾಲಿ ಪಾತ್ರವನ್ನು ಮತ್ತು ಅದರೆಲ್ಲಿ ನಟಿಸಿದ್ದ ಧನಂಜಯ್‍ನನ್ನು ಮೆಚ್ಚಿಕೊಂಡಿದ್ದ ಆರ್‍ಜಿವಿ ಆ ಕ್ಷಣವೇ ಭೈರವ ಗೀತಾ ಚಿತ್ರಕ್ಕೆ ಮುಹೂರ್ತವಿಟ್ಟಿದ್ದರು. ಈ ಒಂದು ಪಾತ್ರದ ಮೂಲಕವೇ ಧನಂಜಯ್ ನಟನಾ ಚಾತುರ್ಯವನ್ನು ಗಮನಿಸಿರುವ ವರ್ಮಾ ಅದಕ್ಕೆ ತಕ್ಕುದಾದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

    ಈಗಾಗಲೇ ಭೈರವ ಗೀತ ಚಿತ್ರದ ಚಿತ್ರೀಕರಣ ಶುರುವಾಗಿದೆ. ಹೈದ್ರಾಬಾದಿನ ಹಳ್ಳಿಯೊಂದರಲ್ಲಿ ಚಿತ್ರ ತಂಡ ಬೀಡು ಬಿಟ್ಟು ಧನಂಜಯ್ ಭಾಗದ ಚಿತ್ರೀಕರಣವನ್ನು ನಡೆಸುತ್ತಿದೆ. ಧನಂಜಯ್ ಲುಂಗಿ ಬನಿಯನ್ನಿನ ರಗಡ್ ಲುಕ್ಕಿನಲ್ಲಿ ಮಿಂಚುತ್ತಿದ್ದಾರೆ. ಇದು ತೆಲುಗಿನಲ್ಲಿ ಧನಂಜಯ್ ಪಾಲಿಗೆ ಮೊದಲ ಚಿತ್ರ. ಈ ಚಿತ್ರದ ಮೊದಲ ದಿನದ ಚಿತ್ರೀಕರಣ ಮೊದಲ ದಿನ ಶಾಲೆಗೆ ಹೋದಂತೆಯೇ ಇತ್ತು ಅಂದಿರುವ ಧನಂಜಯ್ ಈ ಚಿತ್ರದ ಮೂಲಕ ತೆಲುಗಿನಲ್ಲಿಯೂ ನೆಲೆ ಕಂಡುಕೊಳ್ಳುವ ಲಕ್ಷಣಗಳಿದ್ದಾವೆ!