Tag: ಭೈರತಿ ರಣಗಲ್

  • Bhairathi Ranagal: ಶಿವಣ್ಣ ನಟನೆಯ ‘ಭೈರತಿ ರಣಗಲ್’ ಚಿತ್ರದ ಪ್ಯಾನ್ ಇಂಡಿಯಾ ಪೋಸ್ಟರ್ ಔಟ್

    Bhairathi Ranagal: ಶಿವಣ್ಣ ನಟನೆಯ ‘ಭೈರತಿ ರಣಗಲ್’ ಚಿತ್ರದ ಪ್ಯಾನ್ ಇಂಡಿಯಾ ಪೋಸ್ಟರ್ ಔಟ್

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (ShivaRajkumar) ಅವರು ಹಿಟ್‌ ಮೇಲೆ ಹಿಟ್‌ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಸಾಲು ಸಾಲು ಚಿತ್ರಗಳ ಮೂಲಕ ಶಿವಣ್ಣ ಸುದ್ದಿಯಲ್ಲಿದ್ದಾರೆ. ‌ಸದ್ಯ ಭೈರತಿ ರಣಗಲ್ (Bhairathi Ranagal) ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರಲಿದೆ.

    2017ರಲ್ಲಿ ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ ಭೈರತಿ ರಣಗಲ್ ಪಾತ್ರ ಸೂರ್ ಹಿಟ್ ಆಗಿತ್ತು. ಆ ಸಿನಿಮಾಕ್ಕೆ ಗೆಲ್ಲುವ ಶಕ್ತಿ ತಂದುಕೊಟ್ಟಿದ್ದೇ ಶಿವಣ್ಣನ ಪಾತ್ರ. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ ಭೈರತಿ ರಣಗಲ್ ಅನ್ನು ಸಿನಿಮಾಕ್ಕೂ ಇಡಲಾಗಿದೆ. ಇದನ್ನೂ ಓದಿ: ತಮಿಳಿನ ಈ ಹೀರೋಗೆ 100 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡ್ತಾರೆ ಕಮಲ್ ಹಾಸನ್

     

    View this post on Instagram

     

    A post shared by DrShivaRajkumar (@nimmashivarajkumar)

    ಈ ಚಿತ್ರದ ಪೋಸ್ಟರ್ ಅನ್ನು ಭಾನುವಾರ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಕಾಸ್ಟ್ಯೂಮ್ ಆದ ಕಪ್ಪು ಶರ್ಟ್, ಪಂಚೆಯನ್ನು ತೊಟ್ಟು ಕಟ್ಟಿಗೆಯ ಕುರ್ಚಿಯ ಮೇಲೆ ಶಿವಣ್ಣ ಕೂತಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಪೋಸ್ಟರ್ ಹಂಚಿಕೊಂಡಿರುವ ಶಿವಣ್ಣ ‘ಭೈರತಿ ರಣಗಲ್’ ಯುಗ ಆರಂಭವಾಗಿದ್ದು ಹೇಗೆಂದು ನೋಡಲು ಸಿದ್ಧರಾಗಿ ಎಂದು ಬರೆದುಕೊಂಡಿದ್ದಾರೆ.

    ‘ಮಫ್ತಿ’ ಸಿನಿಮಾ ನಿರ್ದೇಶನ ಮಾಡಿದ್ದ ನರ್ತನ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಪೋಸ್ಟರ್ ಅನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮಫ್ತಿ ಸಿನಿಮಾ ಬಿಡುಗಡೆ ಆಗಿ ಹಿಟ್ ಆದಾಗಲೇ ನಿರ್ದೇಶಕ ನರ್ತನ್, ತಾವು ರಣಗಲ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಬೇರೆ ಸಿನಿಮಾಗಳಿಗಾಗಿ ಕತೆ ಹೆಣೆಯುವಲ್ಲಿ ಬ್ಯುಸಿಯಾದ ನರ್ತನ್ ಈಗ ಸಿನಿಮಾ ಘೋಷಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

    ಶಿವರಾಜ್ ಕುಮಾರ್ ಅವರ ಹೋಂ ಬ್ಯಾನರ್ ಗೀತಾ ಪಿಕ್ಚರ್ಸ್​ಗೆ ಇದು ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ ‘ವೇದ’ ಮೂಲಕ ಹಿಟ್ ನೀಡಿರುವ ನಿರ್ಮಾಪಕಿ ಗೀತಾ ಅವರು ಭೈರತಿ ರಣಗಲ್ ಸಿನಿಮಾಗೂ ಸಾಥ್ ನೀಡುತ್ತಿದ್ದಾರೆ. ಸದ್ಯದಲ್ಲಿಯೇ ಈ ಸಿನಿಮಾದ ಚಿತ್ರೀಕರಣ ಆರಂಭ ಮಾಡಲಿದ್ದಾರೆ.

  • ‘ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾ: ಮಾ.5ಕ್ಕೆ ಟೈಟಲ್ ಡಿಸೈನ್ ರಿಲೀಸ್

    ‘ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾ: ಮಾ.5ಕ್ಕೆ ಟೈಟಲ್ ಡಿಸೈನ್ ರಿಲೀಸ್

    ಫ್ತಿ (Mufti,) ಸಿನಿಮಾದ ನಂತರ ನಿರ್ದೇಶಕ ನರ್ತನ್ (Narthan) ಹಾಗೂ ನಟ ಶಿವರಾಜ್ ಕುಮಾರ್ (Shivraj Kumar) ಮತ್ತೆ ಒಂದಾಗಿದ್ದು, ಈ ಬಾರಿ ಜೋಡಿಯು ಪ್ಯಾನ್ ಇಂಡಿಯಾ (Pan India) ಸಿನಿಮಾವನ್ನು ಮಾಡಲಿದೆ. ‘ಭೈರತಿ ರಣಗಲ್’ (Bhairati Rangal) ಹೆಸರಿನಲ್ಲಿ ಈ ಸಿನಿಮಾ ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಸಿನಿಮಾದ ಟೈಟಲ್ ಡಿಸೈನ್ ಅನ್ನು ಮಾರ್ಚ್ 5ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

    ಗೀತಾ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದ್ದು,  ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ನರ್ತನ್ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಐದು ವರ್ಷಗಳ ನಂತರ ಮಫ್ತಿ ಸಿನಿಮಾದ ಭೈರತಿ ರಣಗಲ್ ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಸೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್.

    ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್

    ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್

    ಗೀತಾ ಪಿಕ್ಚರ್ಸ್ ತನ್ನ ಎರಡನೇ ಸಿನಿಮಾ ಘೋಷಣೆ ಮಾಡಿದ್ದು, ಶಿವರಾಜ್ ಕುಮಾರ್ (Shivraj Kumar) ಮತ್ತು ನಿರ್ದೇಶಕ ನರ್ತನ್ (Narthan) ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಐದು ವರ್ಷಗಳ ನಂತರ ಮಫ್ತಿ (Mufti) ಸಿನಿಮಾದ ಭೈರತಿ ರಣಗಲ್ (Bhairati Rangal) ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು.

    ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಶೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್.

    ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿರ್ದೇಶಕ ನರ್ತನ್ ಕೈ ಹಿಡಿದ ಶಿವರಾಜ್ ಕುಮಾರ್ : ಮತ್ತೆ ಬಂದ ಭೈರತಿ ರಣಗಲ್

    ನಿರ್ದೇಶಕ ನರ್ತನ್ ಕೈ ಹಿಡಿದ ಶಿವರಾಜ್ ಕುಮಾರ್ : ಮತ್ತೆ ಬಂದ ಭೈರತಿ ರಣಗಲ್

    ಫ್ತಿ (Mufti) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್ (Nartan), ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.

    ಯಶ್ ಗಾಗಿ ಸಿನಿಮಾ ಆಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ತೆಲುಗು ನಟ ರಾಮ್ ಚರಣ್ ಗಾಗಿ ಮತ್ತೊಂದು ಕಥೆಯನ್ನು ಸಿದ್ದಮಾಡಿಕೊಂಡರಂತೆ ನರ್ತನ್. ಆ ಕಥೆಯನ್ನು ರಾಮ್ ಚರಣ್ ವರೆಗೂ ಮುಟ್ಟಿಸಿದರು ಎನ್ನುವ ಸುದ್ದಿಯಿದೆ. ಅದು ನಿಜವೋ, ಬರೀ ಗಾಳಿ ಸುದ್ದಿಯೋ ಅವರೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ರಾಮ್ ಚರಣ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನಿಗೆ ಹೀಗಾದಾಗ ಹತಾಸೆ ಆಗುವುದು ನಿಜ. ಹಾಗಂತ ನರ್ತನ್ ನನ್ನು ಕೈ ಬಿಡಲಿಲ್ಲ ಶಿವರಾಜ್ ಕುಮಾರ್. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಶಿವರಾಜ್ ಕುಮಾರ್ (Shivraj Kumar) ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ (Bhairati Rangal) ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.

    ಶಿವರಾಜ್ ಕುಮಾರ್ ಮತ್ತು ನರ್ತನ್ ಕಾಂಬಿನೇಷನ್ ನಲ್ಲಿ ‘ಭೈರತಿ ರಣಗಲ್ ‘ ಸಿನಿಮಾ ಮೂಡಿ ಬರಲಿದ್ದು,  ಗೀತಾ ಶಿವರಾಜ್ ಕುಮಾರ್ ಈ ಸಿನಿಮಾದ ನಿರ್ಮಾಪಕರು. ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮೂಡಿ ಬರಲಿರುವ ಎರಡನೇ ಸಿನಿಮಾ ಇದಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವರಾಜ್‍ಕುಮಾರ್ 125ನೇ ಚಿತ್ರ ಯಾವುದು ಗೊತ್ತಾ?

    ಶಿವರಾಜ್‍ಕುಮಾರ್ 125ನೇ ಚಿತ್ರ ಯಾವುದು ಗೊತ್ತಾ?

    ವಯಸ್ಸಿನ ಹಂಗಿಲ್ಲದೇ ಈವತ್ತಿಗೂ ಯಂಗ್ ಆಂಡ್ ಎನರ್ಜಿಟಿಕ್ ಹೀರೋ ಆಗಿಯೇ ಚಾಲ್ತಿಯಲ್ಲಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಒಂದರ ಹಿಂದೊಂದರಂತೆ ಚಿತ್ರಗಳನ್ನು ಒಪ್ಪಿಕೊಂಡು ಎಲ್ಲವನ್ನೂ ವೇಗವಾಗಿ ಮುಗಿಸಿ ಕೊಡುವ ಶಿವಣ್ಣ ಯುವ ನಟರ ಪಾಲಿಗೂ ಅಚ್ಚರಿಯಾಗಿದ್ದಾರೆ. ತಮ್ಮ ಇದುವರೆಗಿನ ಸಿನಿಮಾ ಯಾನದಲ್ಲಿ ಥರ ಥರದ ಪಾತ್ರ ಮಾಡಿರೋ ಶಿವಣ್ಣ ಈಗ 125ನೇ ಚಿತ್ರದತ್ತ ಸಾಗಿ ಬಂದಿದ್ದಾರೆ. ಅವರ ನೂರಾ ಇಪ್ಪತೈದನೇ ಚಿತ್ರ ಯಾವುದೆಂಬುದೂ ಇದೀಗ ಜಾಹೀರಾಗಿದೆ!

    ಶಿವಣ್ಣ ಈ ಹಿಂದೆ ಶ್ರೀ ಮುರುಳಿ ಅವರ ಜೊತೆ ಮಫ್ತಿ ಚಿತ್ರದಲ್ಲಿ ನಟಿಸಿದ್ದರಲ್ಲಾ? ಅದರಲ್ಲಿ ಅವರು ನಿರ್ವಹಿಸಿದ್ದ ಭೈರತಿ ರಣಗಲ್ ಎಂಬ ಪಾತ್ರ ಪ್ರೇಕ್ಷಕರನ್ನು ಕಾಡಿತ್ತು. ಲುಂಗಿಯುಟ್ಟುಕೊಂಡು ಡಿಫರೆಂಟಾದ ಜನಪರ ಡಾನ್ ಆಗಿ ನಟಿಸಿದ್ದ ಶಿವಣ್ಣನ ಅಭಿನಯ ನಿಜಕ್ಕೂ ಮೋಡಿ ಮಾಡಿತ್ತು. ಆ ಹೊತ್ತಿನಲ್ಲಿಯೇ ಶಿವಣ್ಣ ಭೈರತಿ ರಣಗಲ್ ಎಂಬ ಟೈಟಲ್ಲಿನದ್ದೊಂದು ಚಿತ್ರ ಮಾಡುತ್ತಾರೆಂದೂ ಸುದ್ದಿಯಾಗಿತ್ತು. ಇದೀಗ ಭೈರತಿ ರಣಗಲ್ ಶಿವಣ್ಣನ 125ನೇ ಚಿತ್ರವಾಗಿ ನಿಗದಿಯಾಗಿದೆ!

    ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರನ್ನು ಇಂತಾದ್ದೊಂದು ಅಪರೂಪದ ಪಾತ್ರದಲ್ಲಿ ಮಿಂಚುವಂತೆ ಮಾಡಿದ್ದವರು ನಿರ್ದೇಶಕ ನರ್ತನ್. ಭೈರತಿ ರಣಗಲ್ ಚಿತ್ರವನ್ನೂ ಕೂಡಾ ಅವರೇ ನಿರ್ದೇಶನ ಮಾಡಲಿದ್ದಾರೆ. ಮಫ್ತಿಯನ್ನೇ ಮೀರಿಸುವಂಥಾ ಕಥೆಯೊಂದನ್ನು ಮಾಡಿಕೊಂಡಿರೋ ನರ್ತನ್ ಸ್ಕ್ರಿಪ್ಟ್ ಕೆಲಸವನ್ನೂ ಪೂರ್ತಿಗೊಳಿಸಿಕೊಂಡಿದ್ದಾರೆ. ಈ ಚಿತ್ರ ಶ್ರೀ ಮುತ್ತು ಸಿನಿ ಸರ್ವಿಸಸ್ ಲಾಂಛನದಡಿ ನಿರ್ಮಾಣಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv