Tag: ಭೈರತಿ ಬಸವರಾಜ್

  • ‘ಕುರಿ ಕಾಯೋನು’ ಚಿತ್ರಕ್ಕೆ ಶಾಸಕ ಭೈರತಿ ಬಸವರಾಜ್ ಚಾಲನೆ

    ‘ಕುರಿ ಕಾಯೋನು’ ಚಿತ್ರಕ್ಕೆ ಶಾಸಕ ಭೈರತಿ ಬಸವರಾಜ್ ಚಾಲನೆ

    ಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಕಲಾವಿದ, ಸಹಾಯಕ ನಿರ್ದೇಶಕನಾಗಿ ತೊಡಗಿಕೊಂಡಿರುವ ಮಹೇಶ್(ಓಂ) ಈಗ ಸ್ವತಂತ್ರ ನಿರ್ದೇಶಕನಾಗುತ್ತಿದ್ದಾರೆ. ಜೊತೆಗೆ ಹೀರೋ ಕೂಡ  ಆಗುತ್ತಿದ್ದಾರೆ. ಅವರ ನಟನೆ ಹಾಗೂ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಅನಿವಾಸಿ ಕನ್ನಡಿಗರಾದ ರಾಜೇಶ್, ಪ್ರಿಯಾ (Priya) ಅವರು  ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಸಮಾರಂಭದಲ್ಲಿ  ಶಾಸಕ ಭೈರತಿ ಬಸವರಾಜ್ ಅವರು ‘ಕುರಿ ಕಾಯೋನು’ ಚಿತ್ರದ  ಟೈಟಲ್ ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ  ಚಾಲನೆ ನೀಡಿದರು. ಇದಕ್ಕೂ ಮೊದಲು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಎಂಟು ಜನ ಮುತ್ತೈದೆಯರಿಗೆ ಶಾಸಕರಿಂದ ಭಾಗಿನ ವಿತರಿಸಲಾಯಿತು. ನಂತರ ಮಾತನಾಡಿದ ಶಾಸಕರು, ಸ್ನೇಹಿತ ಮಹೇಶ್ (Mahesh) ಬಹಳ ವರ್ಷಗಳಿಂದ ಚಿತ್ರರಂಗದಲ್ಲಿದ್ದಾನೆ. ಈಗ ನಿರ್ದೇಶಕನಾಗಬೇಕೆಂದು ಹೊರಟಿದ್ದಾನೆ. ರಾಜ್ಯದ ಜನತೆ ಅವನಿಗೆ ಸಹಕಾರ ನೀಡಬೇಕು. ನನಗೆ ಆರೋಗ್ಯ ಸರಿ ಇಲ್ಲದಿದ್ರೂ ಈ ಯುವಕರಿಗೆ ಸ್ಪೂರ್ತಿ ನೀಡಲೆಂದು ಇಲ್ಲಿಗೆ ಬಂದಿದ್ದೇನೆ ಎಂದರು.

    ವಿದೇಶದಲ್ಲಿ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ನಿರ್ಮಾಪಕಿ, ಮಿಸಸ್ ಇಂಡಿಯಾ ಯೂನಿವರ್ಸ್ ವಿನ್ನರ್  ಆಗಿರುವ ಪ್ರಿಯಾ ರಾಜೇಶ್ ಮಾತನಾಡಿ ನಾವು  ಮಹೇಶ್ ರನ್ನು 29 ವರ್ಷಗಳಿಂದ ನೋಡುತ್ತಿದ್ದೇವೆ. ತುಂಬಾ ಸ್ಟ್ರಗಲ್ ಮಾಡಿದ್ದಾರೆ. ಶ್ರೀಕೃಷ್ಣ, ಏಸು ಇವರೆಲ್ಲ ಕುರಿಗಾಹಿಗಳೇ ಆಗಿದ್ದರು. ಅದೇ ಕುರಿ ಕಾಯೋನ ಚಿತ್ರವನ್ನು ಮಹೇಶ್ ಮಾಡುತ್ತಿದ್ದಾರೆ. ಅವರಿಗೆ ನನ್ನ ಹಾಗೂ ರಾಜೇಶ್ ಇಬ್ಬರದೂ ಪೂರ್ತಿ  ಸಪೋರ್ಟ್ ಅವರಿಗಿದೆ ಎಂದರು. ಕೋ-ಪ್ರೊಡ್ಯೂಸರ್ ದೀಪು ಮಾತನಾಡಿ ಇದು ಎರಡನೇ ಚಿತ್ರ. 4 ತಿಂಗಳ ಹಿಂದೆ ಮಹೇಶ್ ಈ ಸಬ್ಜೆಕ್ಟ್ ಹೇಳಿದ್ದರು. ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದ್ದಲ್ಲ. ಚಿತ್ರ ನೋಡೋವಾಗ ಅದು ಅರ್ಥವಾಗುತ್ತೆ ಎಂದರು.

    ‌ನಿರ್ದೇಶಕ, ನಾಯಕ ಮಹೇಶ್(ಓಂ) ಮಾತನಾಡುತ್ತ ಚಿಕ್ಕವನಿದ್ದಾಗ ಅಪ್ಪನ ಜೇಬಿನಿಂದ ಹಣ ಕದ್ದು ಸಿನಿಮಾ ನೋಡ್ತಿದ್ದೆ. ಓಂ ಸಿನಿಮಾದಿಂದ ಶಿವಣ್ಣ, ಸುದೀಪ್, ಪುನೀತ್, ವಿಜಯ್, ಇವರ ಜೊತೆಗೆಲ್ಲ ಕೆಲಸ ಮಾಡಿದ್ದೇನೆ.  ನಡುವೆ ಲೋನ್ ರಿಕವರಿ ಏಜೆಂಟಾಗಿಯೂ ಕೆಲಸ ಮಾಡಿದ್ದೇನೆ. ಮರಳು, ಜಲ್ಲಿ ಎತ್ತಿದ್ದೇನೆ. ಈಗ ಮೇಸ್ತ್ರಿ ಆಗಬೇಕೆಂದು ಹೊರಟಿದ್ದೇನೆ. ನಾನು ನಾಯಕನಾಗುತ್ತೇನೆ ಅಂದಾಗ ಕೆಲವರು ಹಾಸ್ಯ ಮಾಡಿದರು. ಸ್ನೇಹಿತರೆಲ್ಲ ನನಗೆ ಸಹಕಾರ ನೀಡಿದರು. ಈಗ ನಿಮ್ಮೆಲ್ಲರ ಆಶೀರ್ವಾದ ನಂಗೆ ಬೇಕಿದೆ. ‘ಕುರಿ ಕಾಯೋನು’ ಕಥೆಯ ಬಗ್ಗೆ ಹೇಳಬೇಕೆಂದರೆ,  ನಾಯಕ ಮುಗ್ಧ, ಆತನಿಗೆ ತನ್ನ ಕುರಿಗಳನ್ನು ಬಿಟ್ಟರೆ ಹೊರಗಿನ ಪ್ರಪಂಚವೇ ಗೊತ್ತಿರಲ್ಲ , ಕುರಿಯನ್ನು ಜೀವದಂತೆ ಪ್ರೀತಿಸುತ್ತಾನೆ. ಆ ಕುರಿಯನ್ನು ಯಾರೋ ಕೆಣಕಿದಾಗ ಆತ ಕೆರಳುತ್ತಾನೆ. ತನ್ನ ಕುರಿ ಕಳೆದುಹೋದಾಗ ವಿಚಲಿತನಾಗುತ್ತಾನೆ. ಗಣೇಶ ಹಬ್ಬಕ್ಕೆ ಮುಹೂರ್ತ ಮಾಡಿ, ಕೋಲಾರ, ಅಂತರಗಂಗೆ, ಮಲೆ ಮಾದೇಶ್ವರ ಬೆಟ್ಟ ಇತರೆಡೆ ಚಿತ್ರೀಕರಿಸುವ ಯೋಜನೆಯಿದೆ. ಚಿತ್ರದಲ್ಲಿ ಕೆ.ಆರ್.ಪುರ ಕ್ಷೇತ್ರದ ಸಾಕಷ್ಟು ಕಲಾವಿದರಿಗೆ ಅವಕಾಶ ನೀಡುತ್ತಿದ್ದೇವೆ. ಮುಖ್ಯವಾಗಿ ಚಿತ್ರದ ಕಥೆಗೆ ಟ್ವಿಸ್ಟ್  ನೀಡುವ ಸಿಎಂ ಪಾತ್ರವಿದ್ದು, ಅದನ್ನು ನಮ್ಮ ಶಾಸಕರಾದ ಭೈರತಿ ಬಸವರಾಜಣ್ಣ  ಅವರಿಂದಲೇ ಮಾಡಿಸುವ ಯೋಜನೆಯಿದೆ ಎಂದು ಹೇಳಿದರು. ನಿರ್ಮಾಪಕರಾದ ರಾಜೇಶ್, ಹಿರಿಯ ನಟ ಕೋಟೆ ಪ್ರಭಾಕರ್, ವೀಣಾ ಮಹೇಶ್ ಚಿತ್ರದ ಕುರಿತು ಮಾತನಾಡಿದರು. ಕುರಿ ಕಾಯೋನು ಚಿತ್ರದಲ್ಲಿ 4 ಹಾಡುಗಳಿದ್ದು ರಾಘವೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  • ಜೂನ್ ಅಂತ್ಯಕ್ಕೆ ರಾಜ್ಯದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಭೈರತಿ ಬಸವರಾಜ್

    ಜೂನ್ ಅಂತ್ಯಕ್ಕೆ ರಾಜ್ಯದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಭೈರತಿ ಬಸವರಾಜ್

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ (Smart City) ಯೋಜನೆ ಕಾಮಗಾರಿಗಳು ಜೂನ್ ಒಳಗೆ ಮುಕ್ತಾಯ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ (Byrati Basavaraj) ತಿಳಿಸಿದ್ದಾರೆ.

    ವಿಧಾನಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ಪ್ರಾರಂಭವಾಗಿ 7 ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಯೋಜನೆ ಯಾವಾಗ ಮುಗಿಯಲಿದೆ? ಯಾಕೆ ತಡವಾಯ್ತು ಎಂದು ಪ್ರಶ್ನೆ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಭೈರತಿ ಬಸವರಾಜ್, ರಾಜ್ಯದಲ್ಲಿ 7 ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಜೂನ್ 2023 ಒಳಗೆ ಎಲ್ಲಾ ಕಾಮಗಾರಿ ಮುಗಿಸಲು ಕೇಂದ್ರ ಸೂಚನೆ ನೀಡಿದೆ. ಅದರಂತೆ ಜೂನ್ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದರು. ಇದನ್ನೂ ಓದಿ: ಬಿಜೆಪಿಯದ್ದು ತ್ರಿಬಲ್ ಎಂಜಿನ್ ಸರ್ಕಾರ.. ಇವ್ರು ಕರ್ನಾಟಕ ಉಳಿಸ್ತಾರಾ: ಹೆಚ್‌ಡಿಕೆ ಪ್ರಶ್ನೆ

    ಒಟ್ಟು 651 ಕಾಮಗಾರಿ ನಡೆಯುತ್ತಿದೆ. ಈವರೆಗೆ 522 ಕಾಮಗಾರಿ ಪೂರ್ಣಗೊಂಡಿದೆ. 127 ಕಾಮಗಾರಿ ನಡೆಯುತ್ತಿದೆ. ಕರ್ನಾಟಕದಲ್ಲಿ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೇಶದಲ್ಲಿ 3 ಸ್ಥಾನದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಾವು ಇದ್ದೇವೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರ 3,400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 3,500 ಕೋಟಿ ರೂ. ಬಿಡುಗಡೆ ಮಾಡಿದೆ. ಜೂನ್ 2023ರ ಒಳಗೆ ಕಾಮಗಾರಿ ಮುಗಿಸುತ್ತೇವೆ. 2-3 ಕಾಮಗಾರಿಗಳಿಗೆ ಹೆಚ್ಚುವರಿ ಸಮಯ ಕೇಳಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆ ಕಾಮಗಾರಿಗಳನ್ನು 2024ಕ್ಕೆ ಮುಕ್ತಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: DCC Bankನಲ್ಲಿ ಅಕ್ರಮ ಮಾಡಿರುವವರ ಮೇಲೆ ಕ್ರಮ ಗ್ಯಾರಂಟಿ: ಎಸ್.ಟಿ ಸೋಮಶೇಖರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಕೆಶಿ- ಸಿದ್ದರಾಮಯ್ಯರನ್ನು ಜೋಡಿಸಲು ರಾಹುಲ್ ಗಾಂಧಿ ಬಂದಿದ್ದಾರೆ: ಭೈರತಿ ಬಸವರಾಜ್

    ಡಿಕೆಶಿ- ಸಿದ್ದರಾಮಯ್ಯರನ್ನು ಜೋಡಿಸಲು ರಾಹುಲ್ ಗಾಂಧಿ ಬಂದಿದ್ದಾರೆ: ಭೈರತಿ ಬಸವರಾಜ್

    ಗದಗ: ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಕಾರ್ಯಕ್ರಮಕ್ಕೆ ಬಂದಿಲ್ಲ ಬದಲಿಗೆ ಡಿಕೆಶಿ- ಸಿದ್ದರಾಮಯ್ಯರನ್ನ (Siddaramaiah) ಜೋಡಿಸಲು ಬಂದಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ (Byrathi Basavaraj) ವ್ಯಂಗ್ಯವಾಡಿದರು.

    ಓಬಿಸಿ ಸಮಾವೇಶ ಪೂರ್ವಭಾವಿ ಸಭೆಗೆ ಆಗಮಿಸಿದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಭಾರತ ಜೋಡಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಪ್ರಧಾನಿ ಮೋದಿ ಅವರು ವಿಶ್ವ ಮಟ್ಟದಲ್ಲಿ ಭಾರತ ಹೆಸರು ಮಾಡಿ ಜೋಡಿಸುತ್ತಿದ್ದಾರೆ ಎಂದ ಅವರು, ನಮ್ಮ ಪಕ್ಷದ ಮೇಲೆ 40% ಕಾಂಗ್ರೆಸ್ ಆರೋಪ ಸರಿಯಲ್ಲ. ರಾಹುಲ್ ಗಾಂಧಿ, ಅವರ ತಾಯಿ, ಸಹಚರರು ಬೇಲ್‌ನಲ್ಲಿದ್ದಾರೆ ನೆನಪಿರಲಿ ಎಂದು ಹೇಳಿದರು.

    ಈ ವೇಳೆ ರಾಜ್ಯ ಕಾಂಗ್ರೆಸ್ (Congress) ನಾಯಕರ ವಿರುದ್ಧ ಸಹ ಹರಿಹಾಯ್ದ ಅವರು, ನಿಮ್ಮ ಅಧಿಕಾರದಲ್ಲಿ ಏನು ಮಾಡಿದ್ದಿರಿ ತಿರುಗಿ ನೋಡಿ? ಶಿಕ್ಷಣ ಇಲಾಖೆ ಹಾಗೂ ಅರ್ಕಾವತಿ ಏನಾಗಿದೆ ಎಂದು ಪ್ರಶ್ನಿಸಿದರು. ಪೇಸಿಎಂ ಟೀ ಶರ್ಟ್ ಹಾಕಿದ ಕೂಡಲೇ ರಾಜ್ಯದ ಜನತೆ ಅವರ ಕಡೆ ಹೋಗುತ್ತಾರೆ ಎಂಬುದು ಭ್ರಮೆ ಎಂದು ಕಿಡಿಕಾರಿದರು.

    ಸಿಪಿ ಯೋಗೇಶ್ವರ್‌- ಹೆಚ್‌ಡಿಕೆ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿಯನ್ನು ಈ ವಿಚಾರವಾಗಿ ಖಂಡಿಸುತ್ತೇನೆ. ಮಾಜಿ ಸಿಎಂ ಆಗಿ, ಅಭಿವೃದ್ಧಿ ವಿಚಾರದಲ್ಲಿ ಹೀಗೆ ಮಾಡುವುದು ಸರಿಯಲ್ಲ. ಅಭಿವೃದ್ಧಿಯೇ ಬೇರೆ ರಾಜಕಾರಣವೇ ಬೇರೆ. ಬಿಜೆಪಿ ಯಾವಾಗಲೂ ಸಿಪಿವೈ ಹಿಂದಿದೆ. ಅವರನ್ನು ನಾವ್ಯಾರೂ ಬಿಟ್ಟುಕೊಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಿಎಫ್‌ಐ ಕಾರ್ಯಕರ್ತರಿಗೆ 3 ಹಂತದ ತರಬೇತಿ – ಹಿಂದೂ ಹೆಸರಿನಲ್ಲಿ ಹಾಲ್‌ ಖರೀದಿಸಿ, ದಾನ

    ಇನ್ನು ಆರ್‌ಎಸ್‌ಎಸ್ ಬ್ಯಾನ್ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ದೇಶಭಕ್ತಿ ಸಂಸ್ಥೆ. ದೇಶಭಕ್ತಿ ಸಂಸ್ಥೆ ಬ್ಯಾನ್ ಮಾಡುವಂತೆ ಹೇಳುವವರ ತಲೆ ಸರಿ ಇದೆಯಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಖಾದಿ ಎಂಪೋರಿಯಂನಲ್ಲಿ ಲೇಡಿಸ್ ಟಾಪ್ ಡ್ರೆಸ್ ಖರೀದಿಸಿದ ಸಿಎಂ

    ಪಿಎಫ್‌ಐ ದೇಶ ದ್ರೋಹ ಮಾಡುವ ಸಂಘಟನೆಯಾಗಿದೆ. ನಮ್ಮ ದೇಶದ ಅನ್ನ, ನೀರು, ಗಾಳಿ ಕುಡಿದು ದೇಶಕ್ಕೆ ಮಾರಕವಾಗುವುದು ಎಷ್ಟು ಸರಿ? ವೋಟ್ ಬ್ಯಾಂಕ್ ರಾಜಕಾರಣ ಬಿಡಿ, ದೇಶ ಉಳಿಸುವ ಕೆಲಸ ಮಾಡಿ ಎಂದ ಅವರು, ಭಾರತ್ ಜೋಡೋ ಕಾರ್ಯಕ್ರಮಕ್ಕೆ ಹಾಕಿದ ಬ್ಯಾನರ್, ಫ್ಲೆಕ್ಸ್‌ಗಳನ್ನು ನಮ್ಮವರು ಯಾರೂ ಹರಿದಿಲ್ಲ. ಕಾಂಗ್ರೆಸ್‌ನವರೇ ಹರಿದು, ಇಲ್ಲ ಸಲ್ಲದ ವಿವಾದ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸಚಿವ ಬೈರತಿ ಬಸವರಾಜ್‍ಗೆ ಪಿತೃವಿಯೋಗ

    ಸಚಿವ ಬೈರತಿ ಬಸವರಾಜ್‍ಗೆ ಪಿತೃವಿಯೋಗ

    ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ತಂದೆ ಭೈರತಿ ಅಂಜಿನಪ್ಪ ಅವರು ಇಂದು ನಿಧನರಾಗಿದ್ದಾರೆ.

    ಬೈರತಿ ಬಸವರಾಜ ಅವರ ತಂದೆ ಬೈರತಿ ಅಂಜಿನಪ್ಪ(85) ಅವರು ಕೃಷಿಕರಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಮೃತರಿಗೆ ಐವರು ಪುತ್ರರು ಮೂವರು ಪುತ್ರಿಯರಿದ್ದು, ಈ ಪೈಕಿ ಬೈರತಿ ಬಸವರಾಜ್ ಹಿರಿಯ ಮಗ. ಇದನ್ನೂ ಓದಿ: ಗಾಂಧೀಜಿ ಕಾಂಗ್ರೆಸ್ ಬೇರೆ, ಈಗಿನದು ಡುಪ್ಲಿಕೇಟ್ ಕಾಂಗ್ರೆಸ್: ಪ್ರಹ್ಲಾದ್‌ ಜೋಶಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಿಧನರಾದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ತಂದೆ ಬೈರತಿ ಅಂಜಿನಪ್ಪ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಬೈರತಿ ಬಸವರಾಜ್ ಅವರಿಗೆ ಮುಖ್ಯಮಂತ್ರಿಗಳು ಸಾಂತ್ವನ ಹೇಳಿದರು. ಇದನ್ನೂ ಓದಿ: ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ನೆಹರೂ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • RSS ಚಡ್ಡಿ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್ ಸರ್ವನಾಶ: ಭೈರತಿ ಬಸವರಾಜ್

    RSS ಚಡ್ಡಿ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್ ಸರ್ವನಾಶ: ಭೈರತಿ ಬಸವರಾಜ್

    ದಾವಣಗೆರೆ: ಕಾಂಗ್ರೆಸ್‍ನವರು ಚಡ್ಡಿಗಳನ್ನು ಇಡೀ ದೇಶದಿಂದಲೇ ಸುಟ್ಟು ಹಾಕಬೇಕು ಎಂದು ಹೇಳುತ್ತಿದ್ದಾರೆ. ಆರ್‌ಎಸ್‍ಎಸ್ ಚಡ್ಡಿ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್‍ನವರು ಸರ್ವನಾಶ ಆಗುತ್ತಾರೆ ಎಂದು ದಾವಣಗೆರೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

    ದಾವಣಗೆರೆಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‍ಎಸ್ ಚಡ್ಡಿ ಸುಟ್ಟರೇ ನಾವೇನು ಸುಮ್ಮನೇ ಇರಲ್ಲ. ದೇಶದಲ್ಲಿ ಈಗ ಕಾಂಗ್ರೆಸ್ ಯಾವ ಸ್ಥಿತಿ ಇದೆ. ಅದೇ ರೀತಿಯಾಗಿ ಇಡೀ ದೇಶದಿಂದಲೇ ಸರ್ವನಾಶ ಆಗುತ್ತದೆ. ಅಲ್ಲದೆ ಚಡ್ಡಿ ಅಭಿಯಾನದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಅವರಿಗೆ ಬುದ್ಧಿಯಿಲ್ಲ ಎಂದು ಟೀಕಿಸಿದರು.

    ಆರ್‌ಎಸ್‍ಎಸ್ ದೇಶ ಸೇವೆಗೆ ಹೆಸರಾದ ಸಂಸ್ಥೆ. ಇಂತಹ ಸಂಘಟನೆ ಬಗ್ಗೆ ಮಾತಾಡುವುದು ನೋಡಿದರೆ ಕಾಂಗ್ರೆಸ್ ನವರಿಗೆ ಬುದ್ಧಿ ಭ್ರಮಣೆಯಾಗಿದೆ. ಅಲ್ಲದೆ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು, ಈ ರೀತಿ ಹೇಳಿಕೆ ನೀಡುವುದು, ಅವರ ವ್ಯಕ್ತಿತ್ವ ಸರಿಯಾದಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ

    Congress

    ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರ ಬಗ್ಗೆ ಮಾತನಾಡಿದ ಅವರು, ಈಗಾಗಲೇ ರೋಹಿತ್ ಚಕ್ರತೀರ್ಥ ಅವರು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಕೆಲ ತಿದ್ದುಪಡಿ ಮಾಡಕೊಂಡು ಮಕ್ಕಳಿಗೆ ಪುಸ್ತಕ ನೀಡಲಾಗುತ್ತದೆ. ಆದರೆ ಇದೇ ಚಕ್ರತೀರ್ಥರನ್ನು ಪಿಯುಸಿ ಪಠ್ಯ ಪರಿಷ್ಕರಣೆ ಜವಾಬ್ದಾರಿ ನೀಡಿದ್ದು, ನನ್ನ ಗಮನಕ್ಕೆ ಬಂದಿಲ್ಲ ಎಂದರು. ಇದನ್ನೂ ಓದಿ: ನೆಚ್ಚಿನ ನಟ ಪವನ್ ಕಲ್ಯಾಣ್ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ!

  • ಮೇಕೆದಾಟು ಯೋಜನೆ ಸ್ಥಗಿತಗೊಂಡ್ರೆ ಕಾಂಗ್ರೆಸ್ ಪಕ್ಷದವರೇ ನೇರ ಹೊಣೆ: ಭೈರತಿ ಬಸವರಾಜ್

    ಮೇಕೆದಾಟು ಯೋಜನೆ ಸ್ಥಗಿತಗೊಂಡ್ರೆ ಕಾಂಗ್ರೆಸ್ ಪಕ್ಷದವರೇ ನೇರ ಹೊಣೆ: ಭೈರತಿ ಬಸವರಾಜ್

    ಬೆಂಗಳೂರು: ಮೇಕೆದಾಟು ಯೋಜನೆ ವಿವಾದವನ್ನು ಸೂಕ್ಷ್ಮವಾಗಿ ಬಗೆ ಹರಿಸಬೇಕಿದೆ. ದ್ವಂದ್ವ ನಿಲುವಿನ ಕಾಂಗ್ರೆಸ್ ಪಾದಯಾತ್ರೆ ಮಾಡಲು ಬೀದಿಗಿಳಿದಿರುವುದರಿಂದ ಇನ್ನಷ್ಟು ಕ್ಲಿಷ್ಟಕರವಾಗಲಿದೆ. ಮೇಕೆದಾಟು ಯೋಜನೆ ಸ್ಥಗಿತವಾದರೆ ಅದಕ್ಕೆ ನೇರ ಹೊಣೆ ಕಾಂಗ್ರೆಸ್ ಪಕ್ಷವೆಂದು ಸಚಿವ ಭೈರತಿ ಬಸವರಾಜ್ ನೇರ ಆರೋಪ ಮಾಡಿದರು.

    ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಗಂಭೀರವಾದ ವಿಷಯ. ಇದನ್ನು ಕಾನೂನಿನ ಮೂಲಕ ಗುಪ್ತವಾಗಿ ಪರಿಹರಿಸಬೇಕಿತ್ತು. ಆದರೆ ಇದೀಗ ರಾಜಕಾರಣಕ್ಕೋಸ್ಕರ ಇದನ್ನ ಜಟಿಲಗೊಳಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

    ಹಲವು ರೀತಿಯ ಕಾನೂನು ತೊಡಕುಗಳನ್ನ ನಿವಾರಿಸಬೇಕಿದೆ. ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಗುಪ್ತವಾಗಿ ಸಮಾಲೋಚನೆ ಮಾಡುವ ವಿಷಯವನ್ನ ಬೀದಿಗೆ ತಂದಿದ್ದಾರೆ. ಈ ಯೋಜನೆಗೆ ತೊಂದರೆಯಾದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಆಗಿರುತ್ತಾರೆ ಎಂದು ಹೇಳಿದರು.

    ಈ ಮೊದಲು ನೀರಾವರಿ ಸಚಿವರಾಗಿ ಮತ್ತು ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಎಲ್ಲ ಗೊತ್ತಿದ್ದರು ಈ ರೀತಿಯ ಕೆಲಸ ಮಾಡುವುದು ಸರಿಯಲ್ಲ. ಮೇಕೆದಾಟು ಯೋಜನೆಗೆ ತೊಂದರೆಯಾದರೆ ಕಾಂಗ್ರೆಸ್ ಹೊಣೆಯೆನ್ನುವ ಮೂಲಕ ಪುನರುಚ್ಚಿಸಿದರು.

    ಬೆಂಗಳೂರಿನ ಅಭಿವೃದ್ಧಿಗೆ ಹಿಂದೆಂದು ಯಾರು 6 ಸಾವಿರ ಕೋಟಿ ರೂ. ಕೊಟ್ಟಿರಲಿಲ್ಲ. ಸಿಎಂ ಬೊಮ್ಮಾಯಿ ನೀರುಗಾಲುವೆ ಸ್ಟಾಮ್ ವಾಟರ್ ಮೊಟರ್ಸ್‍ಗಳಿಗೆ ಕೊಟ್ಟಿದ್ದಾರೆ. ಈ ಮೂಲಕ ಬೆಂಗಳೂರು ಅಭಿವೃದ್ಧಿಯಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ

    ಈಗಾಗಲೇ ಪಾಸಿಟಿವ್ ಪ್ರಕರಣಗಳು 9 ಸಾವಿರ ದಾಟುತ್ತಿದೆ. ಇನ್ನೂ ಯಾವ ಪ್ರಮಾಣದಲ್ಲಿ ಏರಿಕೆ ಆಗುತ್ತದೆ ಗೊತ್ತಿಲ್ಲ. ಒಂದು ವೇಳೆ ಕೊರೊನಾ ಜಾಸ್ತಿ ಆದರೆ ಇವರೆ ಹೊಣೆ. ಇದರ ನಡುವೆಯೂ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಸಂಪೂರ್ಣ ರಾಜಕೀಯವಾಗಿದೆ. ಕೊರೊನಾ 3ನೇ ಅಲೆ ಸೋಂಕು ತೀವ್ರವಾಗಿ ಹರಡುತ್ತಿರುವ ವೇಳೆ ವಾರಾಂತ್ಯ ಕಫ್ರ್ಯೂ ಅವಧಿಯಲ್ಲೂ ಅವರು ನಿಯಮಾವಳಿ ಉಲ್ಲಂಘಿಸಿ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಜನತೆಯ ಆರೋಗ್ಯಕ್ಕಿಂತ ರಾಜಕಾರಣವೇ ಅವರಿಗೆ ಮುಖ್ಯವಾಗಿದೆ. ಇದೊಂದು ರಾಜಕೀಯ ಪ್ರಹಸನವಾಗಿದ್ದು, ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

  • ಜನ ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್

    ಜನ ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ 710 ಅಂಬುಲೆನ್ಸ್ ಇವೆ. ಇದರ ಜೊತೆ ಮತ್ತೆ 120 ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಆರೋಗ್ಯ ಸೇವೆಯಲ್ಲಿ ಇದೊಂದು ಮೈಲಿಗಲ್ಲು. ಈ ಸೇವೆಯನ್ನು ಮತ್ತಷ್ಟು ಸುಧಾರಣೆ ಮಾಡಲು ಸಿಎಂ ಮನಸ್ಸು ಮಾಡಿದ್ದಾರೆ ಅವರು ಜನ ಸಾಮಾನ್ಯರ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹಾಡಿ ಹೊಗಳಿದ್ದಾರೆ.

    ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 120 ನೂತನ 108 ಆರೋಗ್ಯ ಕವಚ ಅಂಬುಲೆನ್ಸ್ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ನೆರವೇರಿಸಿದರು. ಇದನ್ನೂ ಓದಿ: ಲಸಿಕಾಕರಣದಲ್ಲಿ ವಿದೇಶಗಳಿಂತ ಕರ್ನಾಟಕವೇ ಫಾಸ್ಟ್ ಅಂಡ್ ಬೆಸ್ಟ್

    ಬಳಿಕ ಮಾತನಾಡಿದ ಸುಧಾಕರ್, ರಾಜ್ಯಕ್ಕೆ ಹೊಸದಾಗಿ 120 ಅಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡ್ತಿದ್ದೇವೆ. ಈಗಾಗಲೇ 710 ಆಂಬ್ಯುಲೆನ್ಸ್ ಇವೆ. ಇದರ ಜೊತೆ ಮತ್ತೆ 120 ಹೊಸದಾಗಿ ಸೇರ್ಪಡೆ ಮಾಡಲಾಗಿದೆ. 120 ಅಂಬುಲೆನ್ಸ್ ಗಳು ಅಡ್ವಾನ್ಸ್ ಸಿಸ್ಟಮ್ ಇರೋ ಅಂಬುಲೆನ್ಸ್ ಗಳು. ಆರೋಗ್ಯ ಸೇವೆಯಲ್ಲಿ ಇದೊಂದು ಮೈಲಿಗಲ್ಲು. ಈ ಸೇವೆಯನ್ನು ಮತ್ತಷ್ಟು ಸುಧಾರಣೆ ಮಾಡಲು ಸಿಎಂ ಮನಸ್ಸು ಮಾಡಿದ್ದಾರೆ. ಹೊಸದಾಗಿ ಟೆಂಡರ್ ಚಾಲನೆ ಮಾಡಲಾಗಿದೆ. ಈ ಟೆಂಡರ್ ನಲ್ಲಿ ಆಸ್ಪತ್ರೆಗಳನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ಮುಖ್ಯ. ಅದರೊಂದಿಗೆ ಈ ಅಂಬುಲೆನ್ಸ್ ಸೇವೆ ಕೂಡ ಬಹಳ ಪ್ರಮುಖವಾದ ಭಾಗವಾಗಿದೆ. ಹಾಗಾಗಿ ನಾವು ರಾಜ್ಯದ ಜನರ ಸೇವೆಗಾಗಿ ಇದೀಗ ಮತ್ತೆ ಮುಂದಾಗಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಮುಂದಿನ ದಿನಗಳಲ್ಲಿ ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲು ಕಮಾಂಡ್ ಕೊಡುವ ಕೆಲಸ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗ 1 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಇದೆ. ಮುಂದೆ ಇದನ್ನು 40-50 ಸಾವಿರ ಜನರಿಗೆ ಒಂದು ಅಂಬುಲೆನ್ಸ್ ನೀಡುವ ಉದ್ದೇಶ ಇದೆ. ಮತ್ತೆ 410 ಅಂಬುಲೆನ್ಸ್ ಖರೀದಿ ಮಾಡುತ್ತೇವೆ. ಕೋವಿಡ್-19 ಲಸಿಕೆಯಲ್ಲೂ ನಾವು ಸಾಧನೆ ಮಾಡಿದ್ದೇವೆ. ಲಸಿಕೆ ನಿಡೋದ್ರಲ್ಲಿ ರಷ್ಯಾವನ್ನು ನಮ್ಮ ರಾಜ್ಯ ಮೀರಿಸಿದೆ. ನಿತ್ಯ 3.8 ಲಕ್ಷ ಲಸಿಕೆ ನೀಡುತ್ತಿದ್ದೇವೆ. ಶೀಘ್ರವೇ 5 ಕೋಟಿ ಲಸಿಕೆ ನಮ್ಮ ರಾಜ್ಯದಲ್ಲಿ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಲ್ಯಾಬ್ ಉಪಕರಣ ಖರೀದಿಯಲ್ಲಿ 34 ಕೋಟಿ ರೂ. ಕಿಕ್ ಬ್ಯಾಕ್- ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

    ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀರಾಮುಲು, ಮುನಿರತ್ನ, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ಬಿಎಸ್‍ವೈ ನಮ್ಮ ನಾಯಕರು ರಾಜ್ಯ ಪ್ರವಾಸ ಮಾಡೋದರಲ್ಲಿ ತಪ್ಪೇನಿದೆ: ಭೈರತಿ ಬಸವರಾಜ್

    ಬಿಎಸ್‍ವೈ ನಮ್ಮ ನಾಯಕರು ರಾಜ್ಯ ಪ್ರವಾಸ ಮಾಡೋದರಲ್ಲಿ ತಪ್ಪೇನಿದೆ: ಭೈರತಿ ಬಸವರಾಜ್

    ದಾವಣಗೆರೆ: ಬಿ.ಎಸ್ ಯಡಿಯೂರಪ್ಪನವರು ನಮ್ಮ ನಾಯಕರು ರಾಜ್ಯ ಪ್ರವಾಸ ಮಾಡೋದರಲ್ಲಿ ತಪ್ಪೇನಿದೆ, ಪಕ್ಷದ ಸಂಘಟನೆ ದೃಷ್ಟಿಯಿಂದ ಪ್ರವಾಸ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಪಕ್ಷ ಸಂಘಟನೆ ಮಾಡುತ್ತೇನೆ ಅಂದರೆ ಬೇಡ ಎಂದು ಹೇಳಲಾಗುತ್ತಾ, ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ಸಚಿವರು, ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತಾಡಿರುವುದರಲ್ಲಿ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದಿದ್ದಾರೆ.

    ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರು ನಮ್ಮ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ. ನಮ್ಮ ಗೃಹ ಸಚಿವ ಅರಗ ಜ್ಞಾನೇಂದ್ರರವರು ಅದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು ಸಹ ವಿಶೇಷ ಗಮನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!

    ಗೃಹಮಂತ್ರಿ ತಾಲಿಬಾನ್ ಪ್ರತೀಕ ಎಂಬ ಕಾಂಗ್ರೆಸ್ ಮುಖಂಡ ಉಗ್ರಪ್ಪನವರ ಹೇಳಿಕೆ ಕುರಿತಂತೆ, ಆ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಗೃಹ ಸಚಿವರಿಗೆ ಗೊತ್ತು ಎಂದು ಜಾರಿಕೊಂಡಿದ್ದಾರೆ. ಜೊತೆಗೆ ಎಸ್‍ಬಿಎಂ ಸಚಿವರಲ್ಲಿ ಯಾವುದೇ ಅಸಮಾಧಾನವಿಲ್ಲ, ಅವರ ಕಚೇರಿ ಉದ್ಘಾಟನೆಗೆ ಹೋಗಿದ್ದೆ. ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಬೇಸರವಿತ್ತು. ಇದೀಗ ಎಲ್ಲವು ಸರಿಯಾಗಿದೆ ಎಂದು ತಿಳಿಸಿದ್ದಾರೆ.

    ಸೆಪ್ಟೆಂಬರ್ 2ಕ್ಕೆ ದಾವಣಗೆರೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ನಿರ್ಮಾಣವಾದ ಪೊಲೀಸ್ ವಸತಿ ಶಾಲೆಯನ್ನು ಅಮಿತ್ ಶಾ ಉದ್ಘಾಟನೆ ಮಾಡಲಿದ್ದಾರೆ. ಇದಲ್ಲದೆ ಸೆಪ್ಟಂಬರ್ 24, 25 ಹಾಗೂ 26 ರಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕರಣಿ ಸಭೆ ನಡೆಯಲಿದ್ದು, ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಸವರಾಜ್ ಬೊಮ್ಮಾಯಿ, ಬಿಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು: ಈಶ್ವರ್ ಖಂಡ್ರೆ

  • ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರ ಟೇಕಾಫ್ ಆಗಿತ್ತಾ : ಭೈರತಿ ಬಸವರಾಜ್

    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರ ಟೇಕಾಫ್ ಆಗಿತ್ತಾ : ಭೈರತಿ ಬಸವರಾಜ್

    ದಾವಣಗೆರೆ: ಸರ್ಕಾರ ಟೇಕಾಫ್ ಆಗಿಲ್ಲ, ಜಾಸ್ತಿ ದಿನ ಉಳಿಯಲ್ಲ ಎಂಬ ಮಾಜಿ ಸಿಎಂಸಿದ್ದರಾಮಯ್ಯ ಹೇಳಿಕೆಗೆ ಇವರು ಸಿಎಂ ಆಗಿದ್ದಾಗ ಟೇಕಾಫ್ ಆಗಿದ್ರಾ, ಹಂಗೇ ಆಕಾಶದಲ್ಲಿ ಹಾರಿಕೊಂಡು ಹೋಗಿದ್ರಾ ಎಂದು ಭೈರತಿ ಬಸವರಾಜ್ ರವರು ಗರಂ ಆಗಿದ್ದಾರೆ.

    ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಎಂಟತ್ತು ದಿನ ಆಗಿಲ್ಲ. ನಾಲ್ಕು ಜಿಲ್ಲೆ ಪ್ರವಾಸ ಮಾಡಿ ಅಭಿವೃದ್ದಿ ಚಿಂತನೆ ಮಾಡುತ್ತಿದ್ದಾರೆ, ಬೆಂಗಳೂರು ನಗರ ಬಗ್ಗೆ ಮೀಟಿಂಗ್ ಮಾಡಿ ಆರು ಸಾವಿರ ಕೋಟಿ ಅನುದಾನ ಕೊಡುತ್ತೇವೆ ಅಂತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಶತ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಸತತ ಸಭೆ ನಡೆಸುತ್ತಿದ್ದಾರೆ. ಇದೆಲ್ಲ ಅಭಿವೃದ್ಧಿಯಲ್ವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಪ್ರಶ್ನಿಸಿದ್ದಾರೆ.

    ಒಂದು ಬಾರಿಯಾದರು ವಿಪಕ್ಷ ನಾಯಕ ಸಿದ್ದರಾಮಯ್ಯ ಗಡಿ ಜಿಲ್ಲೆಗಳಿಗೆ ಹೋಗದೆ ಎಲ್ಲೋ ಕೂತು, ಏನೋ ಒಂದು ಹೇಳೋದು ಬಿಡಲಿ. ಮಾಜಿ ಸಿಎಂ ವಸ್ತುಸ್ಥಿತಿ ಬಗ್ಗೆ ಸಲಹೆ ನೀಡಲಿ, ಅದನ್ನು ಬಿಟ್ಟು ಸರ್ಕಾರ ಉಳಿಯಲ್ಲ, ಟೇಕಾಫ್ ಆಗಿಲ್ಲ ಎನ್ನುವುದು ಸರಿಯಲ್ಲ. ಸರ್ಕಾರ ಬೀಳುತ್ತೆ ಅಂತ ಇವರೇನು ಭವಿಷ್ಯ ಹೇಳ್ತಾರೆ, ಕಾಂಗ್ರೆಸ್ ನಲ್ಲಿ ಎಲ್ಲರೂ ಕಿತ್ತಾಡುತ್ತಿದ್ದಾರೆ, ಮೊದಲು ಇವರ ಭವಿಷ್ಯ ಇವರು ನೋಡಿಕೊಳ್ಳಲಿ, ಸಿಎಂ ಆಗ್ತಾರಾ ಇಲ್ಲ ಅಂತ ಭವಿಷ್ಯ ಹೇಳಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಗುರುವಾರ ಕ್ಯಾಬಿನೆಟ್ ಮೀಟಿಂಗ್ ಇದ್ದು, ಅಲ್ಲಿ ಸಾಧಕ ಬಾಧಕ ಚರ್ಚೆ ಮಾಡುತ್ತೇವೆ. ಕೊನೆಯಲ್ಲಿ ಈ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ.  ಇದನ್ನೂ ಓದಿ:ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ,ಭವಿಷ್ಯ ಹೇಳಲು ಶುರು ಮಾಡಿದ್ದಾರೆ- ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ಕಿಡಿ

  • ಕಾಂಗ್ರೆಸ್‍ನಲ್ಲಿರುವ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳನ್ನು ಸೆಳೆಯುತ್ತೇವೆ: ಭೈರತಿ ಬಸವರಾಜ್

    ಕಾಂಗ್ರೆಸ್‍ನಲ್ಲಿರುವ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳನ್ನು ಸೆಳೆಯುತ್ತೇವೆ: ಭೈರತಿ ಬಸವರಾಜ್

    ದಾವಣಗೆರೆ: ನಾವು ಕಾಂಗ್ರೆಸ್ ನಲ್ಲಿರುವ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳನ್ನು ಸೆಳೆಯುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಯವರನ್ನು ಸೆಳೆಯಲು ಆಹ್ವಾನ ಮಾಡಿದ್ದ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯವರನ್ನು ಸೆಳೆಯಲು ಆಹ್ವಾನ ಮಾಡಿದ್ದು, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೇ ನಾವು ಕಾಂಗ್ರೆಸ್ಸಿಗರನ್ನು ಸೆಳೆಯುತ್ತೇವೆ. ಬಿಜೆಪಿಯಲ್ಲಿ ನಾವು 17 ಶಾಸಕರು ಸಂತೋಷದಿಂದ ನೆಮ್ಮದಿಯಾಗಿದ್ದೇವೆ ಎಂದು ಹೇಳುವ ಮೂಲಕವಾಗಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಜನ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡಿಕೊಳ್ಳದಿರುವುದು ಆತಂಕಕ್ಕೆ ಕಾರಣ: ಮೋದಿ

    ಕಮಲದ ಚಿಹ್ನೆಯಡಿ ಬಂದ ನಾವು ನೆಮ್ಮದಿಯಾಗಿ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ 17 ಬಾರಿ ಜಿಲ್ಲೆಗೆ ಬಂದಿದ್ದೇನೆ, ಮುಂದೆ 10 ದಿನಗಳಿಗೊಮ್ಮೆ ದಾವಣಗೆರೆ ಜಿಲ್ಲೆಗೆ ಬರುತ್ತೇನೆ. ನಗರ ಪ್ರದೇಶ ಬಿಟ್ಟು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಮೊಬೈಲ್‍ಗೆ ಗ್ರಾ.ಪಂ. ಸದಸ್ಯನಿಂದ ಅಶ್ಲೀಲ ಮೆಸೇಜ್

    ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡುತ್ತಿದ್ದು, ಒಂದು ವೇಳೆ ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲವೆಂದರೆ ಅಂತಹ ಕುಟುಂಬಗಳಿಗೆ ವೈಯಕ್ತಿಕವಾಗಿ ಪರಿಹಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.