Tag: ಭೇಟೆ

  • ಕಾಡು ಹಂದಿ ಅಂತ ತಿಳಿದು ಯುವಕನ ಮೇಲೆ ಫೈರಿಂಗ್

    ಕಾಡು ಹಂದಿ ಅಂತ ತಿಳಿದು ಯುವಕನ ಮೇಲೆ ಫೈರಿಂಗ್

    ಮಂಡ್ಯ: ಕಾಡು ಹಂದಿ ಎಂದು ತಿಳಿದು ಯುವಕನ ಮೇಲೆ ಗಂಡು ಹಾರಿಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರದಲ್ಲಿ ಹೊರವಲಯದಲ್ಲಿ ನಡೆದಿದೆ. ಮಾದೇಶ್ (25) ಗುಂಡೇಟಿನಿಂದ ಗಾಯಗೊಂಡಿರುವ ಯುವಕ.

    ಮೈಸೂರು ಜಿಲ್ಲೆಯ 6 ಮಂದಿ ಯುವಕರ ಹವ್ಯಾಸಿ ತಂಡವೊಂದು ಕಾಡುಹಂದಿ ಭೇಟೆಯಾಡಲು ಮೇಳಾಪುರ ಗ್ರಾಮದ ಹೊರವಲಯಕ್ಕೆ ಬಂದಿದ್ದು, ಕಾಡುಹಂದಿಗಾಗಿ ಮಾದೇಶ್ ಅವರ ಕಬ್ಬಿನ ಗದ್ದೆಯಲ್ಲಿ ಶೋಧ ನಡೆಸಿದ್ದಾರೆ. ಅದೇ ಕಬ್ಬಿನ ಗದ್ದೆಯ ಬದುವಿನಲ್ಲಿ ಮಾದೇಶ್ ಹುಲ್ಲು ಕುಯ್ಯುತ್ತಿದ್ದು, ಕಬ್ಬಿನ ಗರಿಗಳು ಅಲುಗಾಡಿವೆ. ಇದನ್ನು ಗಮನಿಸಿದ ಬೇಟೆಗಾರರ ಗುಂಪು, ಕಾಂಡುಹಂದಿ ಎಂದು ತಿಳಿದು ನಾಡ ಬಂದೂಕಿನಿಂದ ಮಾದೇಶ್ ಅವರ ಮೇಲೆ ಗುಂಡು ಹಾರಿಸಿದ್ದಾರೆ.  ಇದನ್ನೂ ಓದಿ: ನಿಂತ ಲಾರಿಗೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾವು

    ಗುಂಡೇಟಿಗೆ ಮಾದೇಶ್ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಗಾಯಾಳು ಮಾದೇಶ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಭೇಟೆಯಾಡಲು ಬಂದಿದ್ದ ಆರು ಮಂದಿ ಯುವಕರಲ್ಲಿ 3 ಜನರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ದೋಚಲು ಹಣವಿಲ್ಲದಾಗ ಹಲ್ಲೆಗೈದು ರೇಪ್ ಮಾಡಿದೆವು – ಸತ್ಯ ಬಿಚ್ಚಿಟ್ಟ 7ನೇ ಆರೋಪಿ