Tag: ಭೇಟಿ

  • ಹೆಚ್‍ಡಿಕೆ ಬಿಎಸ್‍ವೈಯನ್ನ ಭೇಟಿಯಾದ್ರೆ ಏನು ತಪ್ಪು?- ಮಾಧುಸ್ವಾಮಿ

    ಹೆಚ್‍ಡಿಕೆ ಬಿಎಸ್‍ವೈಯನ್ನ ಭೇಟಿಯಾದ್ರೆ ಏನು ತಪ್ಪು?- ಮಾಧುಸ್ವಾಮಿ

    ಹಾಸನ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದರೆ ಏನು ತಪ್ಪು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರೂ ಲೀಡರ್ಸ್. ರಾಜ್ಯದ ಹಿತಾಸಕ್ತಿಗಾಗಿ ಭೇಟಿ ಮಾಡಿದರೆ ಬೇರೆ ತಿಳಿಯಬಾರದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

    ಹಾಸನ ಜಿಲ್ಲೆಯ ಹಳೇಬೀಡು ಕೆರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಿಎಂ ಮತ್ತು ಮಾಜಿ ಸಿಎಂ ಭೇಟಿ ವಿಷಯ ಕೇಳಿದ್ದಕ್ಕೆ ಕೈಮುಗಿದರು. ಬಳಿಕ ಮಾತನಾಡಿ ಶಿರಾ ಮತ್ತು ಆರ್.ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಮೀಲಾಗಿದ್ದರು ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ಉಪ ಚುನಾವಣೆಯಲ್ಲಿ ಯಾವುದೇ ಶಾಮೀಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರಲ್ಲದೇ ಇಬ್ಬರೂ ಚುನಾವಣೆ ಮಾಡಿದ್ದಾರೆ ಎಂದರು.

    ಶಾಸಕ ಮುನಿರತ್ನಗೆ ಸಚಿವ ಸ್ಥಾನ ನೀಡುವ ವಿಚಾರ ಸಂಬಂಧ, ಇದಕ್ಕೆ ಉತ್ತರ ನೀಡಲು ಯಡಿಯೂರಪ್ಪ ಒಬ್ಬರೇ ಸಮರ್ಥರು ನಾನೇನನ್ನೂ ಹೇಳೊಲ್ಲಾ ಎಂದು ಹೇಳಿದರು. ಸಚಿವ ಸಂಪುಟದಿಂದ ನಾಲ್ವರು ಸಚಿವರನ್ನು ಕೈಬಿಡುತ್ತಾರೆಂಬ ವಿಚಾರ ಇದುವರೆಗೂ ಸಿಎಂ ಯಾರ ಜತೆಯೂ ಚರ್ಚಿಸಿಲ್ಲ. ಮುನಿರತ್ನ ಅವರ ಚುನಾವಣೆಯಲ್ಲಿ ಮಂತ್ರಿ ಮಾಡುವುದಾಗಿ ಸಿಎಂ ಹೇಳಿದ್ದಾರೆ ಅದರ ಬಗ್ಗೆಯಷ್ಟೇ ನಾನು ಹೇಳಬಹುದು. ಆದರೆ ಬೇರೆ ವಿಷಯ ಇದುವರೆಗೂ ಮಾತನಾಡಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳದರು.

    ಇದೇ ವೇಳೆ ಸಾರ್ ಕೆಲಸ ತುಂಬಾ ನಿಧಾನವಾಗಿ ನಡೀತಿದೆ. ಇವತ್ತೆಲ್ಲೋ ಕೆಲಸ ಮಾಡಲು ಜನ ಕಳುಹಿಸಿದ್ದಾರೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ನಮಗೆ ಕೆರೆ ನೀರು ಉಳಿಸಿಕೊಳ್ಳಲು ಶಾಶ್ವತ ಪರಿಹಾರ ಒದಗಿಸಿ ಎಂದು ಮಾಧುಸ್ವಾಮಿ ಎದುರು ರೈತರು ಅಸಮಾಧಾನ ಹೊರಹಾಕಿದರು. ನಂತರದ ಮಾತನಾಡಿದ ಸಚಿವರು ಕೆರೆ ಏರಿ ಪರಿಶೀಲನೆಗೆ ಬಂದಿದ್ದೇನೆ. ತಂತ್ರಜ್ಞರ ಜೊತೆ ಮಾತುಕತೆ ನಡೆಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

  • 75 ವರ್ಷದ ಹಿರಿಯ ಅಭಿಮಾನಿಯನ್ನು ಭೇಟಿಯಾಗಿ ಭಾವುಕರಾದ ಅಪ್ಪು

    75 ವರ್ಷದ ಹಿರಿಯ ಅಭಿಮಾನಿಯನ್ನು ಭೇಟಿಯಾಗಿ ಭಾವುಕರಾದ ಅಪ್ಪು

    ಕಾರವಾರ: ರಾಮನಿಗಾಗಿ ಕಾದ ಶಬರಿಯಂತೆ 12 ವರ್ಷದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗಬೇಕು ಎಂದು ಕಾಯುತ್ತಿದ್ದ ವೃದ್ಧೆಯನ್ನು ಪವರ್ ಸ್ಟಾರ್ ಭೇಟಿ ಮಾಡಿದ್ದಾರೆ.

    ಜೋಯಿಡಾದ 75 ವರ್ಷದ ವೃದ್ಧೆ ಕರಿಯವ್ವ ಬಾಳೆಗೌಡ ನಾಯ್ಕ ಹಾಗೂ ಆಕೆಯ ಪತಿ ಬಾಳೆಗೌಡ ನಾಯ್ಕ ಕಟ್ಟಾ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳಾಗಿದ್ದಾರೆ. ಪತಿ ಬಾಳೆಗೌಡ ನಾಯ್ಕ ಗೋಕಾಕ್ ಚಳುವಳಿಯಲ್ಲಿ ರಾಜ್ ಕುಮಾರ್ ಅವರ ಜೊತೆಗೆ ಹೋರಾಟ ಮಾಡಿದ್ದರು. ಬಾಳೆಗೌಡರು ಮನೆಯಲ್ಲಿ ಕವಿರತ್ನ ಕಾಳಿದಾಸ ಸಿನಿಮಾ ನೋಡುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದರು.

    ಹೀಗಾಗಿ ಈ ವಿಷಯವನ್ನು ರಾಜ್ ಕುಟುಂಬದವರಿಗೆ ತಿಳಿಸಬೇಕು ತಮ್ಮ ಅಭಿಮಾನ ವ್ಯಕ್ತಪಡಿಸಬೇಕು ಎಂಬ ಹಂಬಲ ಕರಿಯವ್ವ ಅವರಿಗೆ ಇತ್ತು. ಆದರೆ ಆ ಕಾಲ ಕೂಡಿಬಂದಿರಲಿಲ್ಲ. 12 ವರ್ಷದ ನಂತರ ಇಂದು ಜೋಯಿಡಾದಲ್ಲಿ ಸಿನಿಮಾ ಶೂಟಿಂಗ್ ನಿಮಿತ್ತ ಆಗಮಿಸಿದ್ದ ಪುನೀತ್ ರಾಜ್‍ಕುಮಾರ್ ಅವರನ್ನು ನೋಡುವ ತವಕದಲ್ಲಿ ಕರಿಯವ್ವ ಶೂಟಿಂಗ್ ಸೆಟ್‍ಗೆ ಕೂಡ ಹೋಗಿದ್ದರು. ಆದರೆ ಪೊಲೀಸರು ಭೇಟಿಗೆ ಅವಕಾಶ ನೀಡರಲಿಲ್ಲ.

    ಇದರಿಂದ ಬೇಸತ್ತ ಕರಿಯವ್ವ ಪುನೀತ್ ಅವರನ್ನು ನೋಡಲು ಅವಕಾಶ ನೀಡದೇ ಇದ್ದರೆ, ನಾನು ಸಾಯುತ್ತೇನೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಈ ವಿಚಾರ ಪುನೀತ್ ರಾಜ್‍ಕುಮಾರ್ ಅವರ ಕಿವಿಗೆ ಬಿದ್ದಿದೆ. ಆಗ ತಕ್ಷಣ ಕರಿಯವ್ವ ಮತ್ತು ಅವರನ್ನು ಕುಟುಂಬವನ್ನು ಪುನೀತ್ ಅವರು ತಮ್ಮ ಬಳಿ ಕರೆಸಿಕೊಂಡು ಮಾತನಾಡಿದ್ದಾರೆ. ಜೊತೆಗೆ ಕರಿಯವ್ವ ಅವರ ಅಭಿಮಾನ ಕಂಡು ಭಾವುಕರಾಗಿದ್ದಾರೆ.

  • ಕೌರವನ ಜೊತೆ ಕಾಲ ಕಳೆದ ಡಿ ಬಾಸ್

    ಕೌರವನ ಜೊತೆ ಕಾಲ ಕಳೆದ ಡಿ ಬಾಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಕಾಲ ಕಳೆದಿದ್ದಾರೆ. ಸಚಿವರೊಂದಿಗೆ ಕಾಲ ಕಳೆದಿರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

    ಬಿ.ಸಿ.ಪಾಟೀಲ್ ಅವರ ಅಧೀಕೃತ ನಿವಾಸಕ್ಕೆ ಭೇಟಿ ನೀಡಿದ್ದ ಡಿ ಬಾಸ್ ಸ್ವಲ್ಪ ಹೊತ್ತು ಹರಟೆ ಹೊಡೆದು ಕಾಲ ಕಳೆದಿದ್ದಾರೆ. ಈ ವೇಳೆ ಬಿ.ಸಿ.ಪಾಟೀಲ್ ಮಾತ್ರವಲ್ಲದೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕಾಣಿಸಿಕೊಂಡಿದ್ದು, ಇಬ್ಬರು ಸಚಿವರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಯಜಮಾನನ ಈ ಭೇಟಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.

    ದರ್ಶನ್ ಇಬ್ಬರು ಸಚಿವರ ಭೇಟಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಆದರೆ ಭೇಟಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ರಾಜರಾಜೇಶ್ವರಿ ನಗರದ ಉಪ ಚುನಾವಣೆಯ ಪ್ರಚಾರದ ವೇಳೆ ದರ್ಶನ್ ಹಾಗೂ ಬಿ.ಸಿ.ಪಾಟೀಲ್ ಒಟ್ಟಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ್ದರು. ಇಬ್ಬರು ನಟರಾಗಿರುವುದರಿಂದ ಪ್ರಚಾರದ ವೇಳೆ ಸಹಜವಾಗಿಯೇ ಬೆರೆತಿದ್ದರು.

    ಈ ಹಿಂದೆ ಸಹ ದರ್ಶನ್ ಹಲವು ಬಾರಿ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದರು. ಆದರೆ ಆಗ ಹೆಚ್ಚು ಚರ್ಚೆಯಾಗಿರಲಿಲ್ಲ. ಇದೀಗ ಇಬ್ಬರು ಸಚಿವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

    ಇನ್ನೂ ಅಚ್ಚರಿ ಎಂದರೆ ಬಿ.ಸಿ.ಪಾಟೀಲ್ ಹಾಗೂ ದರ್ಶನ್ ಅವರಿಗೆ ದುರ್ಯೋಧನ ಪಾತ್ರ ಅಚ್ಚುಮೆಚ್ಚು. ಬಿ.ಸಿ.ಪಾಟೀಲ್ ಸಹ ನಾಟಕ ಹಾಗೂ ಸಿನಿಮಾಗಳಲ್ಲಿ ಧುರ್ಯೋಧನನ ಪಾತ್ರದಲ್ಲಿ ಘರ್ಜಿಸಿದ್ದಾರೆ. ಅದೇ ರೀತಿ ದರ್ಶನ್ ಸಹ ಕುರುಕ್ಷೇತ್ರ ಸಿನಿಮಾದಲ್ಲಿ ದುಯೋಧನನ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು. ಹೀಗೆ ಇಬ್ಬರ ನಟರ ಮಧ್ಯೆ ಪಾತ್ರಗಳ ಸಾಮ್ಯತೆ ಇದೆ. ಹೀಗಾಗಿ ಎಲ್ಲೆಯೇ ಭೇಟಿಯಾದರೂ, ಇಬ್ಬರೂ ತುಂಬಾ ಕ್ಲೋಸ್ ಆಗಿ ಬೆರೆಯುತ್ತಾರೆ.

  • ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಸಿಎಂ ಬಿಎಸ್‍ವೈಯನ್ನು ಭೇಟಿಯಾದ ಎಚ್‍ಡಿಕೆ

    ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಸಿಎಂ ಬಿಎಸ್‍ವೈಯನ್ನು ಭೇಟಿಯಾದ ಎಚ್‍ಡಿಕೆ

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿದ್ದಾರೆ.

    ಸಿಎಂ ಯಡಿಯೂರಪ್ಪ ಭೇಟಿಗೆ ಗೃಹ ಕಚೇರಿ ಕೃಷ್ಣಾಗೆ ಕುಮಾರಸ್ವಾಮಿ ಬಂದಿದ್ದರು. ಈ ಮೂಲಕ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಭೇಟಿ ಕುತೂಹಲ ಮೂಡಿಸಿದೆ. ಇದೇ ಮೊದಲ ಬಾರಿಗೆ ಸಿಎಂ ಭೇಟಿಗಾಗಿ ಹೆಚ್‍ಡಿಕೆ ಕೃಷ್ಣಾಗೆ ಬಂದಿರುವುದು. ಸಿಎಂ ಯಡಿಯೂರಪ್ಪ ಎಲ್ಲರನ್ನೂ ಹೊರಗೆ ಕಳುಹಿಸಿ ಸುಮಾರು 20 ರಿಂದ 25 ನಿಮಿಷಗಳ ಕಾಲ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ.

    ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ಕಳೆದ ಕೆಲವು ದಿನಗಳಿಂದ ಮಳೆಯಿಂದಾಗಿ ಹೆಚ್ಚು ಹಾನಿ ಉಂಟಾಗುತ್ತಿದೆ. ವಿಶೇಷವಾಗಿ ನಮ್ಮ ದಾಸರಹಳ್ಳಿ ಶಾಸಕ ಮಂಜುನಾಥ್ ಕ್ಷೇತ್ರದಲ್ಲಿ ಬಹಳ ಹಾನಿ ಆಗಿತ್ತು. ನಾನು ಸಿಎಂ ಆಗಿದ್ದಾಗ ಅನುದಾನ ಕೊಟ್ಟಿದ್ದೆ. ಅದು ಬಿಡುಗಡೆ ಆಗಿರಲಿಲ್ಲ. ಅದರ ಬಗ್ಗೆ ಮನವಿ ಮಾಡಲು ಬಂದಿದ್ದೆ ಎಂದು ತಿಳಿಸಿದರು.

    ಕಳೆದ ಕೆಲವು ದಿನಗಳಿಂದ ಡ್ರಗ್ಸ್ ಬಿಚಾರ ಕೂಡ ಹೆಚ್ಚು ಸದ್ದು ಮಾಡುತ್ತಿದೆ. ತನಿಖೆ ನಡೆಯುತ್ತಿದೆ ಅಂತ ಸಿಎಂ ಹೇಳಿದ್ದಾರೆ. ಬೇರೆ ಬೇರೆ ಕ್ಷೇತ್ರದವರು ಈ ಡ್ರಗ್ಸ್ ಜಾಲದಲ್ಲಿ ಇರಬಹುದು. ಯಾರೇ ಈ ಜಾಲದಲ್ಲಿ ಇದ್ದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

    ಯಾವುದೇ ಕಾರಣಕ್ಕೂ ತನಿಖೆ ಹಾದಿ ತಪ್ಪಬಾರದು. ಯಾರೇ ಇದ್ದರೂ ಕ್ರಮ ಕೈಗೊಳ್ಳಿ ಎಂದು ಸಿಎಂ ಯಡಿಯೂರಪ್ಪ ಅವರ ಬಳಿ ಹೆಚ್‍ಡಿಕೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

  • ಶಿವರಾಜ್‍ಕುಮಾರ್ ಮನೆಗೆ ಡಿಕೆಶಿ ದಿಢೀರ್ ಭೇಟಿ

    ಶಿವರಾಜ್‍ಕುಮಾರ್ ಮನೆಗೆ ಡಿಕೆಶಿ ದಿಢೀರ್ ಭೇಟಿ

    ಬೆಂಗಳೂರು: ನಟ ಶಿವರಾಜ್‍ಕುಮಾರ್ ಅವರ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿದ್ದಾರೆ.

    ಇಂದು ಮಾನ್ಯತಾ ಟೆಕ್‍ಪಾರ್ಕ್ ಬಳಿ ಇರುವ ಶಿವಣ್ಣನ ಮನೆ ಹತ್ತಿರದಲ್ಲಿ ಸ್ನೇಹಿತರ ಮಗಳ ಮದುವೆಗೆ ಹಾಜರಾಗಿದ್ದ ಡಿಕೆ ಶಿವಕುಮಾರ್, ನಂತರ ಅಲ್ಲೇ ಶಿವಣ್ಣ ಅವರ ಮನೆಗೂ ಹೋಗಿ ಮಾತನಾಡಿಕೊಂಡು ಬಂದಿದ್ದಾರೆ. ಡಿಕೆಶಿ ಶಿವಣ್ಣ ಅವರ ಮನೆಗೆ ಹೋಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಇಂದು ಮಾನ್ಯತಾ ಟೆಕ್‍ಪಾರ್ಕ್ ಬಳಿ ನಡೆದ ಸ್ನೇಹಿತರ ಮಗಳ ಮದುವೆಗೆ ಡಿಕೆಶಿ ಹೋಗಿದ್ದಾರೆ. ವಾಪಸ್ ಬರುವಾಗ ಮನೆಯ ಬಳಿ ಶಿವರಾಜ್‍ಕುಮಾರ್ ಅವರು ಕ್ರಿಕೆಟ್ ಆಡುತ್ತಿರುವುದನ್ನು ನೋಡಿ ಮಾತನಾಡಿಸಿದ್ದಾರೆ. ನಂತರ ಶಿವಣ್ಣನ ಮನೆಗೆ ಹೋಗಿ ಒಂದು ಘಂಟೆಗೂ ಹೆಚ್ಚು ಹೊತ್ತು ಶಿವಣ್ಣನ ಮನೆಯಲ್ಲಿ ಡಿಕೆಶಿ ಕಾಲ ಕಳೆದಿದ್ದಾರೆ. ಈ ವೇಳೆ ಮನೆಯಲ್ಲಿ ಶಿವಣ್ಣ ಮತ್ತು ಅವರ ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರು ಕೂಡ ಇದ್ದರು.

  • ಬೆಂಗಳೂರಿನ ದೇಗುಲದಲ್ಲಿ ಮೋದಿ ಪತ್ನಿ ಜಶೋದಾ ಬೆನ್

    ಬೆಂಗಳೂರಿನ ದೇಗುಲದಲ್ಲಿ ಮೋದಿ ಪತ್ನಿ ಜಶೋದಾ ಬೆನ್

    ಬೆಂಗಳೂರು: ಸದ್ಯ ಕರ್ನಾಟಕದ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರ ಪತ್ನಿ ಜಶೋದಾ ಬೆನ್ ಇಂದು ಬೆಂಗಳೂರಿನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಜಶೋದಾ ಬೆನ್ ಅವರು, ಇಂದು ಬೆಳಗ್ಗೆ ರಾಜನುಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ದೇವರ ದರ್ಶನ ಪಡೆದುಕೊಂಡರು.

    ಬುಧವಾರ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠಕ್ಕೆ ತೆರಳುತ್ತಿದ್ದ ಜಶೋದಾ ಬೆನ್ ಅವರು ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕೆಲಕಾಲ ವಿಶ್ರಾಂತಿ ಪಡೆದ್ದರು. ಜಶೋದಾ ಅವರು ನಿತ್ಯ ಬೆಳಿಗ್ಗೆ ಶಿವನ ದರ್ಶನ ಪಡೆಯದೇ ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಶಿವನ ದೇಗುಲ ಹುಡುಕಿಕೊಂಡು ಅವರು ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಬಂದಿದ್ದರು. ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸುಮಾರು 20 ನಿಮಿಷ ದೇಗುಲದಲ್ಲಿದ್ದರು.

    ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರ ಸೇವನೆಗೂ ಮುನ್ನ ಅಶ್ವತ್ಥಾ ವೃಕ್ಷಕ್ಕೆ ಪೂಜೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದರು. ಆದರೆ ಅಶ್ವಥ ಮರದ ಕಟ್ಟೆ ಸಿಗದೇ ಅತ್ತಿ ಮರ ಸುತ್ತಿ ಭಕ್ತಿ ಸಮರ್ಪಿಸಿದ ಬಳಿಕ ಆಹಾರ ಸೇವನೆ ಮಾಡಿದ್ದರು. ನಂತರ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ್ದ ಜಶೋದಾ ಬೆನ್, ಸಂಜೆ ಆರು ಗಂಟೆ ವೇಳೆಗೆ ಶೃಂಗೇರಿ ಶಾರದಾಂಬೆ ಸನ್ನಿದಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ತುಂಗಾ ನದಿ ಹಾಗೂ ಸುತ್ತಮುತ್ತಲಿನ ಪರಿಸರ ಕಂಡು ಪುಳಕಿತರಾಗಿದ್ದರು.

    ಬಳಿಕ ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಶಾರದಾಂಬೆ ಸನ್ನಿಧಿಯಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಎರಡು ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿಂದ ಶ್ರೀಮಠಕ್ಕೆ ತೆರಳಿದ ಜಶೋದಾ ಬೆನ್, ಶೃಂಗೇರಿ ಮಠದ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬೆಂಗಳೂರುಗೆ ವಾಪಸ್ ಆಗಿದ್ದರು.

  • ಬೀದರ್‌ಗೆ ಸಂಸದ ಓವೈಸಿ ಭೇಟಿ

    ಬೀದರ್‌ಗೆ ಸಂಸದ ಓವೈಸಿ ಭೇಟಿ

    ಬೀದರ್: ಹೈದರಾಬಾದ್‍ನ ಸಂಸದ ಮತ್ತು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಇಂದು ಬೀದರ್‌ಗೆ ಭೇಟಿ ನೀಡಿದ್ದಾರೆ.

    ಶಾಲೆಯೊಂದರಲ್ಲಿ ನಾಟಕವನ್ನು ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಬೀದರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈ ವಿಷಯ ತಿಳಿದ ಸಂಸದ ಅಸಾದುದ್ದಿನ್ ಓವೈಸಿ ಇಂದು ಬೀದರ್‍ಗೆ ಭೇಟಿ ನೀಡಿ, ಎಸ್‍ಪಿ ಟಿ ಶ್ರೀಧರ್‍ರನ್ನು ಭೇಟಿ ಮಾಡಿ ಪ್ರಕರಣ ಬಗ್ಗೆ ಮಾಹಿತಿ ಪಡೆದುಕೊಂಡರು.

    ಇದಾದ ಬಳಿಕ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಓವೈಸಿ ಪ್ರಕರಣದಲ್ಲಿ ಬಂಧನವಾಗಿರುವ ಇಬ್ಬರನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿದರು. ಭೇಟಿ ಬಳಿಕ ಟ್ವೀಟ್ ಮಾಡಿರುವ ಸಂಸದ ಓವೈಸಿ ದೇಶದ್ರೋಹ ಪ್ರಕರಣ ದಾಖಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ನಾನು ಬೀದರ್ ಎಸ್‍ಪಿ ಅವರನ್ನು ಭೇಟಿ ಮಾಡಿದೆ. ಶಾಲೆಯಲ್ಲಿ ನಾಟಕ ಮಾಡಿದಕ್ಕೆ ಬಂಧಿಸಿ, ದೇಶದ್ರೋಹದ ಆರೋಪ ಮಾಡಿರುವುದನ್ನು ನಾವು ಬಲವಾಗಿ ಆಕ್ಷೇಪಿಸಿದ್ದೇವೆ.

    ಈ ಪ್ರಕರಣ ತನಿಖೆಯಲ್ಲಿದೆ ಮತ್ತು ದೇಶದ್ರೋಹ ಎಂಬುದನ್ನು ತನಿಖೆ ನಂತರ ತೆಗೆದುಹಾಕಬಹುದು ಎಂದು ಎಸ್‍ಪಿ ಅವರು ಹೇಳಿದ್ದಾರೆ. ಆದರೆ ಈ ಮಹಿಳೆಯರು ಸ್ಥಳೀಯ ನಿವಾಸಿಗಳಾಗಿದ್ದರಿಂದ ಅವರನ್ನು ಬಂಧಿಸುವ ಮೊದಲು ಇದನ್ನು ಮಾಡಬೇಕು ಎಂಬುದು ನನ್ನ ವಾದ ಮತ್ತು ಶಾಲೆಯಲ್ಲಿ ನಾಟಕ ಮಾಡುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಏನಿದು ಪ್ರಕರಣ?
    ಜನವರಿ 23 ರಂದು ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುವ ಮೂಲಕ ಪ್ರಧಾನಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ದೇಶಾದ್ಯಂತ ಬಾರಿ ಸುದ್ದಿಯಾದ ಬಳಿಕ ಬಿಜೆಪಿಯ ಯುವ ಮೋರ್ಚಾ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ತನಿಖೆ ಮಾಡಿ ಸಂಸ್ಥೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ವಿದ್ಯಾರ್ಥಿಯ ತಾಯಿ ನಶೀಮಾ ಎಂಬವರನ್ನು ಪೊಲೀಸರು ಬಂಧಿಸಿದ್ದರು.

  • ವಿಕಲಚೇತನ ಅಭಿಮಾನಿಯನ್ನು ಭೇಟಿ ಮಾಡಿ ಕಿಚ್ಚ ಕಣ್ಣೀರು

    ವಿಕಲಚೇತನ ಅಭಿಮಾನಿಯನ್ನು ಭೇಟಿ ಮಾಡಿ ಕಿಚ್ಚ ಕಣ್ಣೀರು

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಕಲಚೇತನ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಆ ಮಗುವಿನ ಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ.

    ಮಂಗಳೂರಿನ ದೀಪಿಕಾ ಕೈಕಾಲು ಸ್ವಾಧೀನ ಕಳೆದುಕೊಂಡು, ಸರಿಯಾಗಿ ಮಾತನಾಡದ ಸ್ಥಿತಿಗೆ ತಲುಪಿದ್ದಾಳೆ. ಇಷ್ಟೆಲ್ಲಾ ನೋವಿನ ನಡುವೆ ನೆಚ್ಚಿನ ನಟ ಸುದೀಪ್ ಅವರನ್ನು ನೋಡಿ ಖುಷಿ ಪಟ್ಟಿದ್ದಾಳೆ. ಅಲ್ಲದೆ ಅಭಿನಯ ಚಕ್ರವರ್ತಿಯನ್ನು ದೀಪಿಕಾ ‘ಮಾವ’ ಎಂದು ತಿಳಿದುಕೊಂಡಿದ್ದಾಳೆ.

    ದೀಪಿಕಾ ಮೊದಲ ಬಾರಿಗೆ ಸುದೀಪ್ ಮಾವನನ್ನು ನೋಡಿದ ಸಂತಸದಲ್ಲಿ ಕನ್ನಡಕ ಕೊಟ್ಟು ಹಾಕಿಕೊಳ್ಳುವುದಕ್ಕೆ ಹೇಳಿದ್ದಾಳೆ. ಅಲ್ಲದೆ ‘ಮುಸ್ಸುಂಜೆ ಮಾತು’ ಚಿತ್ರದ `ಏನಾಗಲಿ ಮುಂದೆ ಸಾಗು ನೀ’ ಹಾಡನ್ನು ಹಾಡಿದ್ದಾಳೆ. ಪುಟ್ಟ ಕಂದ ಈ ಹಾಡು ಹಾಡುತ್ತಿದ್ದಂತೆ ಸುದೀಪ್ ಭಾವುಕರಾಗಿದ್ದಾರೆ.

    ದೀಪಿಕಾ ಸ್ಥಿತಿ ನೋಡಿ ಕಿಚ್ಚ ಮರುಗಿ ಕಂಗಾಲಾಗಿದ್ದಾರೆ. ಇಷ್ಟೇ ಅಲ್ಲದೆ ಮೂಲ್ಕಿಯಲ್ಲಿರುವ ದೀಪಿಕಾ ಮನೆಗೂ ಬರುವುದಾಗಿ ಸುದೀಪ್ ಭರವಸೆ ಕೊಟ್ಟಿದ್ದಾರೆ. ಹೀಗೆ ಸುದೀಪ್ ಕೆಲವೇ ನಿಮಿಷಗಳಲ್ಲಿ ಆ ಬಾಲಕಿಗೆ ಸಮಾಧಾನ ಮಾಡಿ ನಗಿಸಿ, ಧೈರ್ಯ ತುಂಬಿದ್ದಾರೆ. ಜೊತೆಗೆ ಸಹಾಯ ಮಾಡುವ ಮಾತು ಕೊಟ್ಟಿದ್ದಾರೆ.

    https://www.youtube.com/watch?v=HBNcdUCYzc4

  • ಕುತೂಹಲ ಮೂಡಿಸಿದ ಸಿಎಂ ಬಿಎಸ್‍ವೈ, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ

    ಕುತೂಹಲ ಮೂಡಿಸಿದ ಸಿಎಂ ಬಿಎಸ್‍ವೈ, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು 20 ನಿಮಿಷಕ್ಕೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಆದರೆ ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿ ತೆರಳಿದ್ದರು. ಆದರೆ ಆ ಬಳಿಕ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬಿಎಸ್‍ವೈ ಅವರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಮೇಶ್ ಆಯ್ತು, ಈಗ ಸತೀಶ್ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸೆಣಸು!

    https://www.instagram.com/p/B4zU3GDnalc/

    ಕ್ಷೇತ್ರದ ಅಭಿವೃದ್ಧಿ ಕಾರ್ಯದ ನಿಮಿತ್ತ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿದ್ದಾಗಿ ಇನ್‍ಸ್ಟಾ ಪೋಸ್ಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬರೆದುಕೊಂಡಿದ್ದಾರೆ. ಆದರೆ ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಪರೇಷನ್ ಕಮಲಕ್ಕೆ ಒಳಗಾಗಬಹುದು ಎಂಬ ಮಾತು ಕೇಳಿ ಬಂದಿತ್ತು. ಇಂದು ಅನರ್ಹ ಶಾಸಕರ ಪರ ಪ್ರಕರಣ ತೀರ್ಪು ಹೊರ ಬಿದ್ದ ಬೆನ್ನಲ್ಲೇ ಬಿಎಸ್‍ವೈ ನಿವಾಸಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಸದ್ಯ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಗೋಕಾಕ್ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್‍ನ್ನು ಆಶೋಕ್ ಪೂಜಾರಿ ಅವರಿಗೆ ಬೆಂಬಲ ನೀಡಿ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ತಪ್ಪಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಅವರು ಪಕ್ಷದ ನಾಯಕರೊಂದಿಗೆ ವೈಮನಸ್ಸು ಬೆಳಸಿಕೊಳ್ಳಲು ಲಕ್ಷ್ಮಿ ಹೆಬ್ಬಾಳ್ಕರ್ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರಿಗೆ ಸೆಡ್ಡು ಹೊಡೆಯಲು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಳಗಾವಿ ಬ್ರದರ್ಸ್‌ಗೆ ಮತ್ತೆ ಲಕ್ಷ್ಮಿ ಸವಾಲು?

  • ಕನ್ನಡಿಗ ದ್ರಾವಿಡ್‍ರನ್ನು ಭೇಟಿಯಾಗಲಿರುವ ಗಂಗೂಲಿ

    ಕನ್ನಡಿಗ ದ್ರಾವಿಡ್‍ರನ್ನು ಭೇಟಿಯಾಗಲಿರುವ ಗಂಗೂಲಿ

    ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಬಳಿಕ ಸೌರವ್ ಗಂಗೂಲಿ ಅವರು ಮೊದಲ ಬಾರಿಗೆ ಟೀಂ ಇಂಡಿಯಾ ಆಟಗಾರ, ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡುತ್ತಿದ್ದಾರೆ.

    ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಡೇ-ನೈಟ್ ಪಂದ್ಯಕ್ಕೆ ಗಂಗೂಲಿ ಒಪ್ಪಿಗೆ ಸೂಚಿಸಿದ್ದು, ಸದ್ಯ ಟೀಂ ಇಂಡಿಯಾ ತಂಡಕ್ಕೆ ಸಂಬಂಧಿಸಿದ ಮಾರ್ಗಸೂಚಿ (ರೋಡ್ ಮ್ಯಾಪ್) ರಚನೆ ಮಾಡಲು ಗಂಗೂಲಿ, ದ್ರಾವಿಡ್‍ರನ್ನು ಭೇಟಿ ಮಾಡುತ್ತಿದ್ದಾರೆ.

    ಬೆಂಗಳೂರಿನಲ್ಲಿ ಬುಧವಾರ ಮಾಜಿ ನಾಯಕರಿಬ್ಬರು ಭೇಟಿಯಾಗಲಿದ್ದು, ಟೀಂ ಇಂಡಿಯಾ ಕ್ರಿಕೆಟ್ ಪರ ಸುದೀರ್ಘ ಅನುಭವ ಹೊಂದಿರುವ ಸ್ನೇಹಿತರ ಭೇಟಿ ವಿಶೇಷವಾಗಿದೆ. ಟೀಂ ಇಂಡಿಯಾ ರೋಡ್ ಮ್ಯಾಪ್  ರಚಿಸಲು ಗಂಗೂಲಿ ಅವರು ದ್ರಾವಿಡ್‍ರಿಂದ ಕೆಲ ಪ್ರಮುಖ ಸಲಹೆಗಳನ್ನು ಪಡೆಯಲಿದ್ದಾರೆ. ಈಗಾಗಲೇ ದ್ರಾವಿಡ್ ಎನ್‍ಸಿಎ ಮಾರ್ಗಸೂಚಿಗಳನ್ನು ರಚಿಸಿದ್ದಾರೆ. ಇದೇ ವೇಳೆ ಎನ್‍ಸಿಎ ಮುಖ್ಯಸ್ಥರಾದ ಬಳಿಕ ಸಂಸ್ಥೆಯಲ್ಲಿ ಕಂಡ ಬಂದಿರುವ ಲೋಪಗಳು ಹಾಗೂ ಮುಂದಿನ ಹಾದಿಯ ಕುರಿತು ದ್ರಾವಿಡ್‍ರಿಂದ ಗಂಗೂಲಿ ಮಾಹಿತಿ ಪಡೆಯಲಿದ್ದಾರೆ. ಈ ಸಭೆಗೆ ಎನ್‍ಸಿಎ ಸಿಇಒ ಆಗಿರುವ ತುಫಾನ್ ಘೋಷ್ ಕೂಡ ಹಾಜರಾಗಲಿದ್ದಾರೆ.

    4 ವರ್ಷ ಟೀಂ ಇಂಡಿಯಾ-ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ದ್ರಾವಿಡ್, ಕಳೆದ ಜುಲೈನಲ್ಲಿ ಎನ್‍ಸಿಎ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಬಿಸಿಸಿಐ ಹೊಸದಾಗಿ ಸೃಷ್ಟಿ ಮಾಡಿದ್ದ ಮುಖ್ಯಸ್ಥರ ಪದವಿಗೆ ಹಲವರು ಪೈಪೋಟಿ ನಡೆಸಿದ್ದರು ಕೂಡ ಅಂತಿಮವಾಗಿ ದ್ರಾವಿಡ್ ನೇಮಕವಾಗಿದ್ದರು. ಯುವ ಆಟಗಾರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ದ್ರಾವಿಡ್ ಅವರೇ ಎನ್‍ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಹರು ಎಂದು ಬಿಸಿಸಿಐ ಈ ತೀರ್ಮಾನ ಕೈಗೊಂಡಿತ್ತು. ಅಂದಹಾಗೇ ಬಿಸಿಸಿಐನಲ್ಲಿ ಈ ಹಿಂದೆ ನಡೆದಿದ್ದ ಕೆಲ ತಾಂತ್ರಿಕ ಸಭೆಗಳಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ, ಕೋಚ್ ಆಗಿ ದ್ರಾವಿಡ್ ಒಟ್ಟಿಗೆ ಭಾಗಿಯಾಗಿದ್ದರು.