Tag: ಭೇಟಿ

  • ಕರುಣಾನಿಧಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ

    ಕರುಣಾನಿಧಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ

    ಚೆನ್ನೈ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ತಮಿಳುನಾಡಿನ ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಇಂದು ಚೆನ್ನೈನ ಕಾವೇರಿ ಆಸ್ಪತ್ರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ತಮಿಳುನಾಡಿನ ಕಾಂಗ್ರೆಸ್ ಅಧ್ಯಕ್ಷ ಎಸ್. ತಿರುನವುಕರಸರ್ ರೊಂದಿಗೆ ಸಂಜೆ 4.15 ಭೇಟಿ ನೀಡಿದ್ದಾರೆ. ಈ ವೇಳೆ ಕರುಣಾನಿಧಿಯವರ ಆರೋಗ್ಯದ ಕುರಿತು ಪುತ್ರ ಸ್ಟಾಲಿನ್ ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

    ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕರುಣಾನಿಧಿಯವರ ವಿಚಾರದಲ್ಲಿ ಸಿಎಂ ಪಳನಿಸ್ವಾಮಿಯವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಕರುಣಾನಿಧಿಯವರು ತಮಿಳುನಾಡಿನ ಅತ್ಯಂತ ಕಠಿಣ ವ್ಯಕ್ತಿಯಾಗಿದ್ದು, ಆದಷ್ಟು ಬೇಗ ಅವರು ಗುಣವಾಗಲಿದ್ದಾರೆ ಎಂದರು.

    ಕರುಣಾನಿಧಿಯವರ ಅವರ ಆರೋಗ್ಯ ಸ್ಥಿರವಾಗಿದ್ದು. ಕರುಣಾನಿಧಿ ಅವರೊಂದಿಗೆ ನಾವು ಸುದೀರ್ಘ ಸಂಬಂಧವನ್ನು ಹೊಂದಿದ್ದೇವೆ. ಸೋನಿಯಾ ಜೀಯವರು ಸಹ ಕರುಣಾನಿಧಿಯವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದರು.

    94 ವರ್ಷದ ಕರುಣಾನಿಧಿಯವರು ಮೂತ್ರನಾಳದ ಸೋಂಕು, ಜ್ವರ ಹಾಗೂ ವಯೋಸಹಜ ತೊಂದರೆಯಿಂದ ಬಳಲುತ್ತಿದ್ದ ಪರಿಣಾಮ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ಶುಕ್ರವಾರ ದಾಖಲಿಸಲಾಗಿದೆ.

  • ಹುಬ್ಬಳ್ಳಿ ಶನಿದೇವಾಲಯಕ್ಕೆ ಪ್ರಧಾನಿ ಮೋದಿ ಸಹೋದರ ಭೇಟಿ

    ಹುಬ್ಬಳ್ಳಿ ಶನಿದೇವಾಲಯಕ್ಕೆ ಪ್ರಧಾನಿ ಮೋದಿ ಸಹೋದರ ಭೇಟಿ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಪ್ರಮೋದ್ ಮೋದಿ ಅವರು ವಾಣಿಜ್ಯ ನಗರಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ನಗರದ ಶನಿ ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆದಿದ್ದಾರೆ.

    ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪ್ರಮೋದ್ ಮೋದಿ, ಕರ್ನಾಟಕದ ಜನರು ಗುಜರಾತ್ ಜನರಿಗಿಂತ ಹೆಚ್ಚು ಪ್ರೀತಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಇಲ್ಲಿ ಆಗಮಿಸಿದ್ದೇನೆ. ಇಲ್ಲಿನ ಜನರ ಆತ್ಮೀಯತೆ ಅದ್ಭುತ. ಈ ಹಿಂದೆ ಚುನಾವಣೆಯಲ್ಲೂ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತ ನೀಡಿದ್ದಾರೆ. ಇಲ್ಲಿಗೆ ಭೇಟಿ ನೀಡಿಲು ಬಹಳ ಸಂತಸವಾಗುತ್ತದೆ ಎಂದರು.

    ಇದೇ ವೇಳೆ ಚಂದ್ರಗ್ರಹಣ ದಿನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೂ ನನಗೂ ಸಂಬಂಧವಿಲ್ಲ. ಹುಬ್ಬಳ್ಳಿಗೆ ಭೇಟಿ ನೀಡಿದ್ದ ಕಾರಣ ದೇವಾಲಯಕ್ಕೂ ಭೇಟಿ ನೀಡಿದ್ದೇನೆ ಎಂದರು.

    ಧಾರವಾಡದ ಗಾಣಿಗಾರ ಸಮಾವೇಶದಲ್ಲಿ ಭಾಗಿಯಾಗಲು ಪ್ರಮೋದ್ ಮೋದಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಶನಿದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಪ್ರಮೋದ್ ಅವರಿಗೆ ಸನ್ಮಾನ ಮಾಡಿ ಸ್ವಾಗತಿಸಿದರು. ಸನ್ಮಾನ ಸ್ವೀಕರಿಸಿ ಅಲ್ಲಿಂದ ಧಾರವಾಡಕ್ಕೆ ತೆರಳಿದರು.

    ಗ್ರಹಣದ ಸಂಬಂಧ ದೇವಾಲಯಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. ತಮ್ಮ ವಿಶೇಷ ಆಹ್ವಾನದ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿದ್ದರು ಅಷ್ಟೇ. ಭೇಟಿ ವೇಳೆ ದೇವಾಲಯದ ವಿಶೇಷತೆಗಳ ಕುರಿತು ಮಾಹಿತಿ ಕೇಳಿ ಪಡೆದರು ಅಂತ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಲತಾ ಮಂಗೇಶ್ಕರ್ ಭೇಟಿ!

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಲತಾ ಮಂಗೇಶ್ಕರ್ ಭೇಟಿ!

    ಮುಂಬೈ: ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಂಗೀತ ಲೋಕದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ.

    ಅಮಿತ್ ಶಾ ಪಕ್ಷದ ಸಭೆ ಉದ್ದೇಶಿಸಿ ಮುಂಬೈಗೆ ಒಂದು ದಿನ ಭೇಟಿ ನೀಡಿದ್ದರು. ಈ ವೇಳೆ ಭಾನುವಾರ ಸಂಜೆ ಮಂಗೇಶ್ಕರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಅಮಿತ್ ಶಾ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಬೆಂಬಲ ನೀಡುವಂತೆ ಮಂಗೇಶ್ಕರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಅಮಿತ್ ಶಾ ಜೊತೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯ ಬಿಜೆಪಿ ಮುಖ್ಯಸ್ಥ ರಾಸ್ಸಾಬೆಬ್ ಡಾನ್ವೆ ಮತ್ತು ಮುಂಬೈನ ಯುನಿಟ್ ಪಕ್ಷದ ಅಧ್ಯಕ್ಷ ಆಶಿಶ್ ಶೆಲರ್ ಅವರು ಇದ್ದರು.

    ಜೂನ್ 6 ರಂದು, ಮಂಗೇಶ್ಕರ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. `ಶಾ ಅವರು ಭೇಟಿ ಕುರಿತು ನನ್ನ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. ಆದ್ರೆ ಆರೋಗ್ಯದ ಸಮಸ್ಯೆಯಿಂದ ಭೇಟಿಯಾಗಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಜೊತೆಗೆ ಮತ್ತೆ ಮುಂಬೈಗೆ ಬಂದಾಗ ತನ್ನನ್ನು ಭೇಟಿ ಮಾಡುವಂತೆ ಮನವಿ’ ಕೂಡ ಮಾಡಿದ್ದರು.

    ಭಾನುವಾರ ನಡೆದ ಸಭೆಯಲ್ಲಿ, ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಪುಸ್ತಕವೊಂದನ್ನು ಶಾ ಅವರು ಮಂಡಿಸಿದ್ದಾರೆ.

    ಜೂನ್ 6 ರಂದು ನಟಿ ಮಾಧುರಿ ದೀಕ್ಷಿತ್ ಮತ್ತು ಕೈಗಾರಿಕೋದ್ಯಮಿ ರತನ್ ಟಾಟಾ ಅವರನ್ನು ಭೇಟಿ ಮಾಡಿದ್ದು, ಅವರಲ್ಲಿಯೂ ಕೂಡ “ಸಂಪರ್ಕ್ ಫಾರ್ ಸಮರ್ಥನ್” ಅಭಿಯಾನಕ್ಕೆ ಭಾಗಿಯಾಗುವಂತೆ ಕರೆ ನೀಡಿದ್ದರು. ಬಳಿಕ ಅದೇ ದಿನ ಮಂಗೇಶ್ಕರ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ ಮಂಗೇಶ್ಕರ್ ಅವರಿಗೆ ಫುಡ್ ಪಾಯಿಷನ್ ಆಗಿದ್ದು, ಆರೋಗ್ಯ ಸಮಸ್ಯೆಯಾಗಿತ್ತು. ಆದ್ದರಿಂದ ಅಂದಿನ ಭೇಟಿಯನ್ನು ಅಮಿತ್ ಶಾ ಅವರು ಕ್ಯಾನ್ಸಲ್ ಮಾಡಿದ್ದರು.

  • ಶಿರೂರು ಶ್ರೀಗಳ ಜೊತೆ ಆತ್ಮೀಯ ಸಂಪರ್ಕವಿತ್ತು- ಯು.ಟಿ.ಖಾದರ್

    ಶಿರೂರು ಶ್ರೀಗಳ ಜೊತೆ ಆತ್ಮೀಯ ಸಂಪರ್ಕವಿತ್ತು- ಯು.ಟಿ.ಖಾದರ್

    ಉಡುಪಿ: ಶಿರೂರು ಶ್ರೀಗಳ ಜೊತೆ ನನಗೆ ಆತ್ಮೀಯ ಸಂಪರ್ಕವಿತ್ತು. ಗುರುವಾರ ಬೆಂಗಳೂರಲ್ಲಿ ಇದ್ದ ಕಾರಣ ಅಂತ್ಯಕ್ರಿಯೆಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಶ್ರೀಗಳ ಸಮಾಧಿಗೆ ತೆರಳಿ ಆರ್ಶೀವಾದ ಪಡೆದಿದ್ದೇನೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

    ಶ್ರೀಗಳ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಕುರಿತು ಯಾವುದೇ ವಿಚಾರಗಳು ನನ್ನ ಗಮನಕ್ಕೆ ಬಂದಿಲ್ಲ. ಇದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಈ ಹಿಂದೆ ಶ್ರೀಗಳನ್ನು ಭೇಟಿ ಮಾಡಿದ್ದೆ, ಅವರೊಂದಿಗೆ ಆತ್ಮೀಯತೆಯಿಂದ ಇದ್ದೇವು. ಹಾಗಾಗಿ ಆ ಆತ್ಮೀಯತೆಗಾಗಿ ಬಂದ್ದಿದ್ದೇನೆ ಹೊರತು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಬಂದಿಲ್ಲ ಎಂದರು.

    ಶ್ರೀಗಳ ಸಾವಿನ ಬಗ್ಗೆ ಕುರಿತು ತನಿಖೆ ನಡೆಸುವುದು ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಸಂಬಂಧಿಸಿದ್ದು, ನಾನು ಇದರಲ್ಲಿ ಭಾಗಿಯಾಗುವುದಿಲ್ಲ. ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ ಬೇರೆಯವರ ಬಗ್ಗೆ ಮಾತನಾಡುವುದಿಲ್ಲ ಎಂದರು.

    ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ಅಭಯ ಚಂದ್ರ ಜೈನ್ ಆಗಮಿಸಿ ಶ್ರೀಗಳ ಸಮಾಧಿಗೆ ನಮನ ಸಲ್ಲಿಸಿದರು.

  • ಶುದ್ಧ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರಿಂದ ರಾಜ್ಯ ಸಮೃದ್ಧಿಯಾಗಿದೆ-ಡಿಕೆಶಿ

    ಶುದ್ಧ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರಿಂದ ರಾಜ್ಯ ಸಮೃದ್ಧಿಯಾಗಿದೆ-ಡಿಕೆಶಿ

    ಮೈಸೂರು: ರಾಜ್ಯದ ಜ್ಯಾತ್ಯಾತೀತ ಸರ್ಕಾರವನ್ನು ರಚನೆ ಮಾಡಲು ಎರಡು ಪಕ್ಷಗಳು ಒಂದಾಗಿದ್ದು, ಉತ್ತಮ ಆಡಳಿತ ನೀಡಲು ಮುಂದಾಗಿದ್ದು, ಇದಕ್ಕೆ ವರುಣ ದೇವರು ಕರುಣೆ ತೋರಿದ್ದು ಉತ್ತಮ ಮಳೆಯಾಗಿ ರಾಜ್ಯ ಸಂವೃದ್ಧಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಚಾಮುಂಡಿ ದೇವಿಯ ದರ್ಶನದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಎರಡು ಜಲಾಶಯ ಭರ್ತಿಯಿಂದ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ತಮಿಳುನಾಡಿಗೆ ಈ ಬಾರಿ ನಾವು ನೀಡಬೇಕಿರುವ ನೀರಿನ ಪಾಲು ನೀಡಿದ್ದೇವೆ. ಜಲಾಶಯದಿಂದ ವಿದ್ಯುತ್ ಉತ್ಪಾದನೆಯೂ ಹೆಚ್ಚಿದೆ. ಪ್ರಕೃತಿ ಮನಸ್ಸು ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ. ನಾವು ಶುದ್ಧ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇವೆ. ಹೀಗಾಗಿ ರಾಜ್ಯ ಸಮೃದ್ಧಿಯಾಗಿದೆ ಎಂದರು.

    ಇದೇ ವೇಳೆ ಇಂದು ತಾವು ಎರಡನೇ ಬಾರಿಗೆ ಅಯ್ಯಪ್ಪ ಮಾಲೆ ಹಾಕುತ್ತಿರುವುದಾಗಿ ತಿಳಿಸಿದ ಸಚಿವರು, ಈ ಹಿಂದೆ ಮಾಲೆ ಹಾಕುವ ಹರಕೆ ಕಟ್ಟಿಕೊಂಡಿದ್ದೆ. ಅದರಂತೆ ಇವತ್ತು ಸಂಜೆ ಅಯ್ಯಪ್ಪ ಮಾಲೆ ಹಾಕುತ್ತೇನೆ ಎಂದರು.

    ಸಿಎಂ ಎಚ್‍ಡಿ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿಂದತೆ ಸಚಿವರಾದ ಸಾರಾ ಮಹೇಶ್, ಜಿಡಿ ದೇವೇಗೌಡ ಅವರು ಸಾಥ್ ನೀಡಿದ್ದರು. ಚಾಮುಂಡೇಶ್ವರಿಯ ದರ್ಶನದ ಬಳಿಕ ಕಬಿನಿ ಜಲಾಶಯ ಭರ್ತಿಯಾಗಿರುವ ಕಾರಣ ಬಾಗಿನ ಆರ್ಪಿಸಲು ತೆರಳಿದರು.

  • ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ಮೈಸೂರು: ರಾಜ್ಯ ಹಲವು ಡ್ಯಾಂಗಳು ಭರ್ತಿಯಾಗಿ ನಾಡು ಸಮೃದ್ಧಿಯಾಗಿದ್ದು, ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಹೇಳಿದ್ದಾರೆ.

    ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಸಿಎಂ ಹೆಚ್‍ಡಿಕೆ, ರಾಜ್ಯದ ಹಲವು ಜಲಾಶಯಗಳು ಭರ್ತಿಯಿಂದ ನಾಡು ಸಮೃದ್ಧಿಯಾಗಿದೆ. ಈ ಬಾರಿ ಉತ್ತಮ ಮಳೆ ಬಿದ್ದಿರುವುದರಿಂದ ವಿದ್ಯುತ್ ಸಮಸ್ಯೆಯೂ ನಿವಾರಣೆ ಆಗಿದೆ. 12 ವರ್ಷಗಳ ನಂತರ ಕೆಲ ಜಲಾಶಯಗಳಿಗೆ ನಾನೇ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆಲ್ಲ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಕಾರಣವಾಗಿದ್ದು, ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡುತ್ತೇವೆ. ನಾವು ಮಾಡುವ ದಸರಾ ಆಚರಣೆ ರಾಜ್ಯಕ್ಕೆ ಮಾದರಿಯಾಗುತ್ತದೆ. ಈ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಸಭೆ ಕರೆದು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.

    ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡೇಶ್ವರಿ ಪೂಜೆ ಸಲ್ಲಿಸಿದ ಸಿಎಂ ರಾಜ್ಯದ ಅಭಿವೃದ್ಧಿಗೆ ಹಾಗೂ ರೈತರ ನೆಮ್ಮದಿಯ ಜೀವನಕ್ಕೆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ಇಂದು ನನ್ನ ಜೊತೆ ಹಲವು ಸಚಿವರು ಜೊತೆಗಿದ್ದು ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುವ ಶುಭಕಾರ್ಯವನ್ನು ಇಟ್ಟುಕೊಂಡಿದ್ದೇವೆ. ಈ ಎಲ್ಲ ಕಾರಣದಿಂದ ಆಷಾಢ ಶುಕ್ರವಾರದಂದು ಪೂಜೆಗೆ ಬಂದಿದ್ದೇವೆ ಎಂದು ಹೇಳಿದರು.

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಹೆಚ್‍ಡಿಕೆ ಹೇಳಿಕೆ ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ಧಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.

  • ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡುತ್ತಾನೆ: ಸಿಎಂ ಎಚ್‍ಡಿಕೆ

    ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡುತ್ತಾನೆ: ಸಿಎಂ ಎಚ್‍ಡಿಕೆ

    ಮಡಿಕೇರಿ: ತಲಕಾವೇರಿಗೆ ಬಂದು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಬಿಂಬಿಸಲಾಗುತ್ತಿದೆ. ಆದರೆ ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡುತ್ತಾನೆ ಎಂದು ಸಿಎಂ ಕುಮಾರಸ್ವಾಮಿ ತಲಕಾವೇರಿಯ ಭೇಟಿ ವೇಳೆ ಹೇಳಿದ್ದಾರೆ.

    ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ, ನಾನು ಮೊದಲಿನಿಂದಲೂ ಯಾವುದೇ ಮೂಢನಂಬಿಕೆ ಆಚರಿಸಿಕೊಂಡು ಬಂದಿಲ್ಲ. ದೇವರ ಅನುಗ್ರಹದಲ್ಲಿರಬೇಕು. ಮೂಢ ನಂಬಿಕೆಗಳು ನಾವು ಕ್ರಿಯೇಟ್ ಮಾಡಿಕೊಂಡಿರುವುದು. ಒಂದು ವಿಶ್ವಾಸ ಅಷ್ಟೇ. ಆದರೆ ನಾನು ನಾಡಿನ ಜನತೆಗೆ ಸುಭೀಕ್ಷೆ ನೀಡುವಂತೆ ಪ್ರಾರ್ಥಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

    19 ವರ್ಷಗಳ ಬಳಿಕ ನಾನು ತಲಕಾವೇರಿಗೆ ಭೇಟಿ ನೀಡಿದ್ದೇನೆ. ಆದರೆ ಈ ಹಿಂದೆ ಜೆಎಚ್ ಪಟೇಲರು ತಲಕಾವೇರಿಗೆ ಆಗಮಿಸಿದ ಕಾರಣ ಸಿಎಂ ಪದವಿ ಕಳೆದುಕೊಂಡಿದ್ದಾರೆ ಎಂದು ಬಿಂಬಿಸಲಾಗಿದೆ. ಅದೇನೋ ಒಂದು ಕಾಕತಾಳೀಯ ಇರುತ್ತೆ, ಅದನ್ನೇ ಎಲ್ಲರಿಗೂ ಅನ್ವಯಿಸುತ್ತದೆ ಎಂಬ ಭಾವನೆ ಸರಿಯಲ್ಲ. ನನ್ನಲ್ಲಿ ಅಂತಹ ಯಾವುದೇ ಭಾವನೆ ಇಲ್ಲ. ಬಹುಮುಖ್ಯವಾಗಿ ತಲಕಾವೇರಿ ತಾಯಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಸಮಸ್ಯೆಗೆ ಪರಿಹಾರ ನೀಡಿದ್ದಾಳೆ. ನ್ಯಾಯಾಲಯದ ತೀರ್ಪಿಗಿಂತ ಕಾವೇರಿ ತಾಯಿ ನೀಡುವ ತೀರ್ಪು ದೊಡ್ಡದು. ದೇವರು ನಾಡಿನ ಜನತೆಗೆ ಸಂಪೂರ್ಣ ಅನುಗ್ರಹ ಕೊಡಬೇಕು. ನಾವೆಲ್ಲ ಮಾನವರು ಭಯ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಬೇಕು. 4 ಜಲಾಶಯಗಳಿಗೂ ತೆರಳಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ನಾಡಿನ ರೈತರು ಸುಖ ಶಾಂತಿ ನೆಮ್ಮದಿಯಿಂದ ಬದುಕಬೇಕು. ರೈತರು, ಬೆಳೆಗಾರರು ನೆಮ್ಮದಿಯಿಂದ ಇರಲು ಪ್ರಕೃತಿ ಸಹಕಾರ ಮುಖ್ಯ. ಗುರುವಾರ ಹಾರಂಗಿಯಲ್ಲಿ ಬಾಗಿನ ಅರ್ಪಿಸಿದ್ದೇನೆ, ಇಂದು ಭಾಗಮಂಡಲ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ್ದೇನೆ. ಉತ್ತರ ಕರ್ನಾಟಕ ಭಾಗದ ಜಲಾಶಯಗಳು ಭರ್ತಿಯಾಗಿವೆ. ಆ ಭಾಗಕ್ಕೂ ಭೇಟಿ ನೀಡಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಶಿರೂರು ಶ್ರೀ ಗಳ ಆಕಾಲಿಕ ಸಾವಿನ ವಿಚಾರವಾಗಿ ತನಿಖೆ ನಡೆಯುತ್ತಿರುವುದರಿಂದ ಈಗ ಮಾತನಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

  • 10 ವರ್ಷದಿಂದ ಡಾ. ರಾಜ್ ಕುಮಾರ್ ಗಾಗಿ ಕಾದಿದ್ದ ಶಿಕ್ಷಕಿಯ ಆಸೆಯನ್ನು ನೆರವೇರಿಸಿದ್ರು ಪುನೀತ್!

    10 ವರ್ಷದಿಂದ ಡಾ. ರಾಜ್ ಕುಮಾರ್ ಗಾಗಿ ಕಾದಿದ್ದ ಶಿಕ್ಷಕಿಯ ಆಸೆಯನ್ನು ನೆರವೇರಿಸಿದ್ರು ಪುನೀತ್!

    ಹುಬ್ಬಳ್ಳಿ: ಕಳೆದ ಹತ್ತು ಹದಿನೈದು ವರ್ಷಗಳಿಂದ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರನ್ನು ನೋಡಲೇಬೇಕು ಎಂಬ ಆಸೆಯಿಂದ ಕಾಯುತ್ತಿದ್ದ ನಿವೃತ್ತ ಶಿಕ್ಷಕಿಯ ಆಸೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೊನೆಗೂ ಈಡೇರಿಸಿದ್ದಾರೆ.

    ಹುಬ್ಬಳ್ಳಿಯ ಗೋಕುಲ್ ರೋಡ್‍ನ ಅಕ್ಷಯ ಪಾರ್ಕ್ ನ ನಿವಾಸಿಯಾದ ಸುನಂದಾ ವೆರ್ಣೆಕರ್ ರಾಜ್ ಕುಮಾರ್ ಅವರ ಹುಚ್ಚು ಅಭಿಮಾನಿ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಕಳೆದ 6 ವರ್ಷಗಳ ಹಿಂದೆ ವೃತ್ತಿಯಿಂದ ನಿವೃತ್ತಿ ಹೊಂದಿದ ಇವರು ಜೀವನದಲ್ಲಿ ಒಮ್ಮೆಯಾದ್ರೂ ಡಾ. ರಾಜ್ ಕುಮಾರ್ ಅವರನ್ನು ನೋಡಲೇಬೇಕು ಎಂಬ ಮಹದಾಶೆಯನ್ನು ಹೊತ್ತು ಕಾಯುತ್ತಿದ್ದರು. ಆದರೆ ನಟಸಾರ್ವಭೌಮ ಅವರನ್ನು ನೋಡುವ ಭಾಗ್ಯ ಶಿಕ್ಷಕಿಗೆ ಸಿಗಲಿಲ್ಲ.

    ಆದ್ರೆ ಇದೀಗ ಶಿಕ್ಷಕಿಯ ಆಸೆಯನ್ನು ರಾಜ್ ಕುಮಾರ್ ಅವರ ಮಗ ಪುನೀತ್ ರಾಜ್ ಕುಮಾರ್ ಈಡೇರಿಸಿದ್ದಾರೆ. ಸುನಂದಾ ವೆರ್ಣೆಕರ್ ಅವರ ಮಗ ರಾಮ್, ತನ್ನ ತಾಯಿಗೆ ಪುನೀತ್ ರಾಜ್ ಕುಮಾರ್ ಅವರನ್ನು ಹೇಗಾದರೂ ಭೇಟಿ ಮಾಡಿಸಿ ತಾಯಿಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಕಳೆದ ಮೂರನಾಲ್ಕು ವರ್ಷಗಳಿಂದ ಪುನೀತ್ ಅವರ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದರು. ಕೊನೆಗೂ ಬಾಗಲಕೋಟೆ ಜಿಲ್ಲೆಯ ಮಹಕೂಟದಲ್ಲಿ ನಡೆಯುತ್ತಿರುವ ನಟಸಾರ್ವಭೌಮ ಚಿತ್ರಿಕರಣಕ್ಕೆ ಬಂದ ಸಂದರ್ಭದಲ್ಲಿ, ತನ್ನ ತಾಯಿಯನ್ನು ಭೇಟಿ ಮಾಡಿಸಿ ತನ್ನ ಅಮ್ಮನ ಆಸೆಯನ್ನು ನೆರವೇರಿಸಿದ್ದಾರೆ.

  • ದಾವಣಗೆರೆಯಲ್ಲಿರೋ ಅತೀ ದೊಡ್ಡ ಗ್ಲಾಸ್ ಹೌಸ್‍ಗೆ ಶಾಸಕ ಎಸ್.ಎ. ರವೀಂದ್ರನಾಥ್ ಭೇಟಿ

    ದಾವಣಗೆರೆಯಲ್ಲಿರೋ ಅತೀ ದೊಡ್ಡ ಗ್ಲಾಸ್ ಹೌಸ್‍ಗೆ ಶಾಸಕ ಎಸ್.ಎ. ರವೀಂದ್ರನಾಥ್ ಭೇಟಿ

    ದಾವಣಗೆರೆ: ಇಲ್ಲಿನ ಅತೀ ದೊಡ್ಡ ಗ್ಲಾಸ್ ಹೌಸ್ ಗೆ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಭೇಟಿ ನೀಡಿದ್ದು, ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.

    ನಗರದ ಕುಂದಾವಾಡ ಕೆರೆಯ ಪಕ್ಕದಲ್ಲಿರುವ ಗ್ಲಾಸ್ ಹೌಸನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಆದರೆ ಜನರಿಗೆ ಪ್ರವಾಸಿತಾಣವಾಗಿ ಅನುಕೂಲ ಮಾಡಿಕೊಟ್ಟಿರಲ್ಲಿಲ್ಲ. ಆದ್ದರಿಂದ ಆಗಸ್ಟ್ 15 ರ ಒಳಗೆ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಪ್ರವಾಸಕ್ಕೆ ಅನುವು ಮಾಡಿಕೊಡಲಾಗುವುದು.

    ಕೆಲ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಇದರ ಬಗ್ಗೆ ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದ್ದಾರೆ.

    ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದರು. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯು ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿದೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಿರ್ಮಾಣವಾಗಿರೋ ಈ ಗಾಜಿನ ಅರಮನೆ ಇಡೀ ದೇಶಕ್ಕೆ ದೊಡ್ಡದು ಮತ್ತು ವಿಶಿಷ್ಟ ಎನ್ನಬಹುದಾದ ಲಕ್ಷಣಗಳನ್ನು ಹೊಂದಿದೆ.

    ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂದುವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಅರಮನೆ ನಿರ್ಮಾಣವಾಗಿದೆ. ಗಾಜಿನ ಮನೆಗೆ 13.35 ರೂ. ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, 1.50 ಕೋಟಿ ರೂ. ವೆಚ್ಚದಲ್ಲಿ ಗ್ರಾನೈಟ್, 1.99 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್, 1.08 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕೆ ಮಾಹಿತಿ ಕೇಂದ್ರ, ರಸ್ತೆ ನಿರ್ಮಾಣ, ಸುತ್ತಮುತ್ತ ವಿದೇಶಿ ಗಿಡಗಳನ್ನ ಬೆಳೆಸುವ ಜೊತೆ ಸುಂದರವಾದ ಉದ್ಯಾನವನ ನಿರ್ಮಾಣದ ಗುರಿ ಹೊಂದಲಾಗಿತ್ತು.

  • ಬೆಳ್ಳಂಬೆಳಗ್ಗೆ ಬಸವರಾಜ್ ಹೊರಟ್ಟಿ ಮನೆಗೆ ಮಾಜಿ ಪ್ರಧಾನಿ ಎಚ್‍ಡಿಡಿ ಭೇಟಿ

    ಬೆಳ್ಳಂಬೆಳಗ್ಗೆ ಬಸವರಾಜ್ ಹೊರಟ್ಟಿ ಮನೆಗೆ ಮಾಜಿ ಪ್ರಧಾನಿ ಎಚ್‍ಡಿಡಿ ಭೇಟಿ

    ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಮನೆಗೆ ಭೇಟಿ ನೀಡಿದ್ದಾರೆ.

    ಬೆಳಗ್ಗೆ ಬೆಂಗಳೂರಿನಿಂದ ಪಕ್ಷದ ಕಾರ್ಯಕ್ರಮದ ನಿಮಿತ್ತ ಎಚ್.ಡಿ ದೇವೇಗೌಡರು ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಬಸವರಾಜ ಹೊರಟ್ಟಿ ಅವರ ಮನೆಯಲ್ಲಿ ಉಪಹಾರ ಸೇವನೆ ಮಾಡಿದ್ದಾರೆ. ಬಳಿಕ ಸ್ವಲ್ಪ ಹೊತ್ತು ಕುಳಿತು ಮಾತನಾಡಿದ್ದಾರೆ. ನಂತರ ದೇವೇಗೌಡರು ಬೆಳಗಾವಿಗೆ ಪ್ರಯಾಣ ಬೆಳಸಲಿದ್ದು, ದೇವೇಗೌಡರಿಗೆ ಮಾಜಿ ಶಾಸಕ ಕೋನರೆಡ್ಡಿ ಸಾಥ್ ನೀಡಿದ್ದಾರೆ.

    ಈ ವೇಳೆ ಮಾತನಾಡಿದ ಹೆಚ್.ಡಿ.ದೇವೇಗೌಡ, ಮುಂದೆ ಬರುವ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನ ಚುರುಕುಗೊಳಿಸಲು ಇಂದು ಹುಬ್ಬಳ್ಳಿಗೆ ಬಂದಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸರಿಯಾದ ಫಲಿತಾಂಶ ಬಂದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದರಿಂದ ಪಕ್ಷ ಸಂಘಟನೆ ಮಾಡಲು ಸಮಯ ಸಿಗುವುದಿಲ್ಲ. ಇದರಿಂದ ನಾನು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಎನ್‍ಡಿಎ ಹೊರತುಪಡಿಸಿ ಎಲ್ಲಾ ಮುಖಂಡರು ಬೆಂಗಳೂರಿನಲ್ಲಿ ಸೇರಿದ್ದೇವೆ. ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿಗೆ ಇದೆ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಇವೆ. ಲೋಕಸಭಾ ಚುನಾವಣೆ ಮುಂಚೆ ಕೆಲವು ಪಕ್ಷಗಳು ಹೊಂದಾಣಿಕೆ ಆಗಬಹುದು. ಚುನಾವಣಾ ನಂತರವೂ ಹೊಂದಾಣಿಕೆ ಆಗಬಹುದು. ಶಿವಸೇನೆಯ ಬಿಜೆಪಿ ಪಕ್ಷದ ಹೊಂದಾಣಿಕೆ ಮಾಡಿಕೊಳ್ಳುವುದು ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.