Tag: ಭೇಟಿ

  • ವಿಜಯ್ ದೇವರಕೊಂಡ ಭೇಟಿ ಮಾಡಿದ ಪ್ರಶಾಂತ್ ನೀಲ್

    ವಿಜಯ್ ದೇವರಕೊಂಡ ಭೇಟಿ ಮಾಡಿದ ಪ್ರಶಾಂತ್ ನೀಲ್

    ತೆಲುಗು ಚಿತ್ರೋದ್ಯಮದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಅದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ದಿಢೀರ್ ಅಂತ ವಿಜಯ್ ದೇವರಕೊಂಡ (Vijay Devarakonda) ಅವರನ್ನು ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಭೇಟಿ  ಮಾಡಿದ್ದು, ವಿಜಯ್ ಅವರಿಗೆ ಏನಾದರೂ ಪ್ರಶಾಂತ್ ಸಿನಿಮಾ ಮಾಡಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

    ಅಂದುಕೊಂಡಂತೆ ಆಗಿದ್ದರೆ ಸಲಾರ್ 2 ಸಿನಿಮಾ ಶುರುವಾಗಬೇಕಿತ್ತು. ಇದಾದ ನಂತರ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಪ್ರಶಾಂತ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಇವೆರಡೂ ಸಿನಿಮಾ ಸದ್ಯಕ್ಕೆ ಸಾಧ್ಯವಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದರಿಂದ ವಿಜಯ್ ಭೇಟಿ ಕುತೂಹಲ ಮೂಡಿಸಿದೆ.

     

    ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾದಲ್ಲಿ ಹೊಸದೊಂದು ಪಾತ್ರವಿದ್ದ ಕಾರಣಕ್ಕೆ ವಿಜಯ್ ದೇವರಕೊಂಡ ಅವರನ್ನು ಪ್ರಶಾಂತ್ ಭೇಟಿಯಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾರೂ ಈ ಕುರಿತಂತೆ ಸ್ಪಷ್ಟನೆ ನೀಡಿಲ್ಲ.

  • ಸುದೀಪ್ ಜೊತೆ ಕಾಣಿಸಿಕೊಂಡ ನಿರ್ಮಾಪಕ ಸಂದೇಶ್

    ಸುದೀಪ್ ಜೊತೆ ಕಾಣಿಸಿಕೊಂಡ ನಿರ್ಮಾಪಕ ಸಂದೇಶ್

    ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ ನಿರ್ಮಾಪಕ ಎನ್.ಸಂದೇಶ್ (N. Sandesh). ಭೇಟಿಯ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿಗೆ ನಾನಾ ಅರ್ಥವನ್ನು ಕಲ್ಪಿಸಿಕೊಳ್ಳಲಾಗುತ್ತಿದೆ. ಸುದೀಪ್ ಅಭಿಮಾನಿಗಳಂತೂ ಹೊಸ ಸಿನಿಮಾದ ಯೋಚನೆ ಏನಾದರೂ ಇದೆಯಾ ಎಂದು ಕೇಳುತ್ತಿದ್ದಾರೆ.

    ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮಹಾಬಲಿಪುರಂನಲ್ಲಿ (Mahabalipuram) ನಡೆಯುತ್ತಿದೆ. ಸಿನಿಮಾದ ಪ್ರಮುಖ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿದ್ದು, ಈ ಸನ್ನಿವೇಶದ ಶೂಟಿಂಗ್ ನಲ್ಲಿ ಕಿಚ್ಚ ಭಾಗಿಯಾಗಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಇದಾದ ನಂತರ ಕಿಚ್ಚ ಯಾವ ಸಿನಿಮಾಗೆ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಹಾಗಾಗಿ ಸಂದೇಶ್ ಭೇಟಿ ಮಹತ್ವ ಪಡೆದುಕೊಂಡಿದೆ.

    ‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ತಮಿಳು ನಾಡಿನ (Tamil Nadu) ಮಹಾಬಲಿಪುರಂನಲ್ಲಿ ನಡೆಯುತ್ತಿದೆ. ಕಿಚ್ಚ ಸುದೀಪ್ ಸೇರಿದಂತೆ ಹಲವು ಕಲಾವಿದರು ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಮಾಹಿತಿಯನ್ನೂ ಸ್ವತಃ ಕಲಾವಿದರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    ಮೊನ್ನೆಯಷ್ಟೇ ಸುದೀಪ್ (Sudeep) ಮ್ಯಾಕ್ಸ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ನೀಡಿದ್ದರು. 15 ದಿನಗಳ ಕಾಲ ಶೂಟಿಂಗ್ ಮುಗಿಸಿದರೆ, ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗತ್ತೆ. ನಂತರ ಮೇ ತಿಂಗಳಿನಲ್ಲಿ ಚಿತ್ರ ರಿಲೀಸ್ (Release) ಆಗಬಹುದು ಅಂದಿದ್ದರು.

  • ಖ್ಯಾತ ನಟ ಅಜಿತ್ ಜೊತೆ ಕಾಣಿಸಿಕೊಂಡ ಸಾನ್ಯಾ ಅಯ್ಯರ್

    ಖ್ಯಾತ ನಟ ಅಜಿತ್ ಜೊತೆ ಕಾಣಿಸಿಕೊಂಡ ಸಾನ್ಯಾ ಅಯ್ಯರ್

    ಮಿಳಿನ ಹೆಸರಾಂತ ನಟ ಅಜಿತ್ (Ajith) ಜೊತೆ ಕಾಣಿಸಿಕೊಂಡಿದ್ದಾರೆ ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್. ಯಾವ ಉದ್ದೇಶಕ್ಕಾಗಿ ಅವರು ಅಜಿತ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ವಿಚಾರ ಬಹಿರಂಗ ಪಡಿಸದೇ ಇದ್ದರೂ, ಅಜಿತ್ ಅವರ ಸಿಂಪ್ಲಿಸಿಟಿಯನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ತಾಯಿ, ಅಜಿತ್ ಜೊತೆ ಫೋಟೋಗೆ ಸಾನ್ಯಾ ಪೋಸ್ ಕೊಟ್ಟಿದ್ದಾರೆ.

    ಸಾನ್ಯಾ  ಅಯ್ಯರ್ ತಮ್ಮ ಚೊಚ್ಚಲ ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಹಿಂದೆ ಪೋಸ್ಟ್ ಮಾಡಿದ್ದರು. ಇದೀಗ ಸಮ್ಮರ್ ಹಾಲಿಡೇ ಕಳೆಯಲ್ಲಿ ತಾಯಿ ಜೊತೆ ಕೂರ್ಗಿಗೆ ಹೋಗಿದ್ದಾರೆ. ಅಲ್ಲಿ ಫೋಟೋಗೆ ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ. ಬಹುಶಃ ಅಲ್ಲಿಯೇ ಅಜಿತ್ ಅವರು ಸಿಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

     

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದರು.

  • ಮೆಗಾಸ್ಟಾರ್ ಚಿರಂಜೀವಿ ಭೇಟಿ ಮಾಡಿದ ಕನ್ನಡ ನಟ  ಅನೀಶ್

    ಮೆಗಾಸ್ಟಾರ್ ಚಿರಂಜೀವಿ ಭೇಟಿ ಮಾಡಿದ ಕನ್ನಡ ನಟ ಅನೀಶ್

    ಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ನಟ, ನಿರ್ದೇಶಕ ಅನೀಶ್ (Anish Tejaswar) ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ‘ಆರಾಮ್ ಅರವಿಂದ್ ಸ್ವಾಮಿ’ಆಗಿ ತೆರೆ ಮೇಲೆ ನಯಾ ಅವತಾರದಲ್ಲಿ ಬರಲು ರೆಡಿಯಾಗಿರುವ ಅವರು,  ಧಿಡೀರನೇ ಟಾಲಿವುಡ್ ಮೆಗಾ ಸ್ಟಾರ್ ಚಿರಜೀವಿ (Megastar Chiranjeevi) ಜೊತೆ ಪ್ರತ್ಯಕ್ಷರಾಗಿದ್ದಾರೆ.

    ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ಭೇಟಿಯಾಗಿದ್ದಾರೆ (Meets), ಇಂದು ಚಿರು  ಹೈದ್ರಾಬಾದ್ ನಿವಾಸದಲ್ಲಿ ಭೇಟಿಯಾಗಿರುವ ಅವರು, ಮೆಗಾಸ್ಟಾರ್ ಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ ಸ್ವಾಮಿ ಚಿತ್ರದ ಕಂಟೆಂಟ್ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅನೀಶ್ ಚಿತ್ರಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ.

    ಅನೀಶ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದ  ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯ ಮ್ಯೂಸಿಕ್, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡಿಗೆ ಬೊಂಬಾಟ್ ಆಗಿ ಅನೀಶ್ ಕುಣಿದು ಕುಪ್ಪಳಿಸಿದ್ದರು. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ಮೂಡಿಬಂದಿದ್ದ ಟೈಟಲ್ ಟ್ರ್ಯಾಕ್ 1 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.

    ತನ್ನ ಪ್ರಮೋಷನ್ ಕಂಟೆಂಟ್ ನಿಂದಲೇ ಈಗಾಗಲೇ ಸದ್ದು ಮಾಡುತ್ತಿರುವ ’ಆರಾಮ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ’ಆರಾಮ ಅರವಿಂದ ಸ್ವಾಮಿ’ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾನೆ.

     

    ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ.

  • ಶಿವರಾಜ್ ಕುಮಾರ್ ಭೇಟಿಯಾದ ತೆಲುಗು ನಟ ನಾನಿ

    ಶಿವರಾಜ್ ಕುಮಾರ್ ಭೇಟಿಯಾದ ತೆಲುಗು ನಟ ನಾನಿ

    ಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ  (Bangalore)ಬಂದಿಳಿದಿರುವ ತೆಲುಗಿನ ಖ್ಯಾತ ನಟ ನಾನಿ, ಇಂದು ಬೆಳಗ್ಗೆ ಶಿವರಾಜ್ ಕುಮಾರ್ (Shivaraj Kumar)ಅವರನ್ನು ಭೇಟಿ ಮಾಡಿದ್ದಾರೆ. ಕೆಲ ಹೊತ್ತು ಶಿವಣ್ಣ ಜೊತೆ ಮಾತನಾಡಿದ ನಾನಿ, ತಮ್ಮ ಸಿನಿಮಾದ ಕುರಿತಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಸಿನಿಮಾಗೆ ಸಹಕರಿಸಲು ಕೇಳಿಕೊಂಡಿದ್ದಾರಂತೆ.

    ನಾನಿ ಮತ್ತು ಮೃಣಾಲ್ ಠಾಕೂರ್ ನಟನೆಯ ‘ಹಾಯ್ ನಾನ್ನ’ ಸಿನಿಮಾದ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಕೆಲದಿನಗಳ ಹಿಂದೆ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಅವರ ಖಾಸಗಿ ಫೋಟೋ ಬಳಸಿದ್ದಕ್ಕೆ ಅಭಿಮಾನಿಗಳು ಗರಂ ಆಗಿದ್ದರು. ಈ ವಿಚಾರವಾಗಿ ನಟ ನಾನಿ (Nani) ಪ್ರತಿಕ್ರಿಯಿಸಿ, ಫ್ಯಾನ್ಸ್‌ಗೆ ಕ್ಷಮೆ ಕೇಳಿದ್ದಾರೆ.

    ಆ ರೀತಿ ಆಗಿದ್ದು ದುರದೃಷ್ಟಕರ. ಏನಾಯಿತು ಎಂಬುದು ಗೊತ್ತಾಗುವುದರೊಳಗೆ ಫೋಟೋ ಕಣ್ಮರೆ ಆಯಿತು. ನಾವೆಲ್ಲರೂ ಆಪ್ತ ಸ್ನೇಹಿತರು. ಹೀಗೆಲ್ಲ ಆಗುವುದು ಸಹಜ ಎಂಬುದನ್ನು ರಶ್ಮಿಕಾ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಅರ್ಥ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಯಾರಿಗಾದರೂ ನಿಜವಾಗಿಯೂ ನೋವಾಗಿದ್ದರೆ ನಾನು ಮತ್ತು ನನ್ನ ತಂಡದವರು ಕ್ಷಮೆ ಕೇಳುತ್ತೇವೆ ಎಂದು ಸಂದರ್ಶನವೊಂದರಲ್ಲಿ ನಾನಿ ಹೇಳಿದ್ದಾರೆ.

    ಸಿನಿಮಾ ಇವೆಂಟ್‌ನ ಹಿಂದೆ ಸಾಕಷ್ಟು ಜನರು ಕೆಲಸ ಮಾಡುತ್ತಾರೆ. ಈ ರೀತಿ ಆಗಬಾರದಿತ್ತು. ಹೀಗೆ ಮಾಡಿದ್ದು ಯಾರು ಅಂತ ತಿಳಿಯಲು ಪ್ರಯತ್ನಿಸಿದೆವು. ಆದರೆ ಆ ಕೆಲಸ ಮಾಡಿದವರು ಈಗಾಗಲೇ ಭಯಬಿದ್ದಿದ್ದರು. ನಾವು ಸುಮ್ಮನಾದೆವು. ಇಬ್ಬರ ಫೋಟೋ ಹಾಕಿ ಸಾಹಸ ಮಾಡಲು ಇದು ಗಾಸಿಪ್ ವೆಬ್‌ಸೈಟ್ ಅಲ್ಲ ಎಂದಿದ್ದಾರೆ ನಾನಿ ಮಾತನಾಡಿದ್ದಾರೆ.

    ನಾನಿ (Nani) ಚಿತ್ರದ ಪ್ರಮೋಷನ್‌ಗಾಗಿ ಪ್ರಿ ರಿಲೀಸ್ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ- ವಿಜಯ್ ದೇವರಕೊಂಡ ಮಾಲ್ಡೀವ್ಸ್ ಫೋಟೋವನ್ನ ತಮ್ಮ ಚಿತ್ರ ಪ್ರಚಾರಕ್ಕೆ ಬಳಸಿಕೊಂಡಿದ್ದರು. ವಿಜಯ್-ರಶ್ಮಿಕಾ ಮಾಲ್ಡೀವ್ಸ್‌ಗೆ ಜೊತೆಯಾಗಿ ಹೋಗಿರಲಿಲ್ಲ, ಆದರೆ ಫೋಟೋವನ್ನು ಬೇರೇ ಬೇರೇ ಸಮಯದಲ್ಲಿ ಇಬ್ಬರೂ ಹಂಚಿಕೊಂಡಿದ್ದರು. ಆದರೆ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂದೇ ಅಭಿಮಾನಿಗಳು ಊಹಿಸಿದ್ದರು.

     

    ಈಗ ಅದೇ ಫೋಟೋವನ್ನು ಬಳಸಿಕೊಂಡು ನಾನಿ ಟೀಮ್ ಗಿಮಿಕ್ ಮಾಡಿತ್ತು. ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಇಬ್ಬರ ಫೋಟೋ ಅಕ್ಕ-ಪಕ್ಕ ಇಟ್ಟು ಬಿತ್ತರ ಮಾಡಲಾಗಿತ್ತು. ಸಿನಿಮಾಗಾಗಿ ಬೇರೇ ಅವರ ವೈಯಕ್ತಿಕ ವಿಚಾರವನ್ನ ಬಳಕೆ ಮಾಡೋದು ಅದೆಷ್ಟರ ಮಟ್ಟಿಗೆ ಸರಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದರು. ನಾನಿ ಟೀಮ್, ರಶ್ಮಿಕಾ ಮತ್ತು ವಿಜಯ್‌ಗೆ ಕ್ಷಮೆ ಕೇಳಲೇಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದರು. ಹಾಗಾಗಿ ಇದೀಗ ನಟ ನಾನಿ ಈ ಕುರಿತು ಕ್ಷಮೆ ಕೇಳಿದ್ದಾರೆ.

  • ಧೋನಿ ಭೇಟಿಯ ಹಿಂದೆ ರಾಮ್ ಚರಣ್ ಅಭಿಮಾನಿಗಳ ಲೆಕ್ಕಾಚಾರ

    ಧೋನಿ ಭೇಟಿಯ ಹಿಂದೆ ರಾಮ್ ಚರಣ್ ಅಭಿಮಾನಿಗಳ ಲೆಕ್ಕಾಚಾರ

    ಭಾರತೀಯ ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಮತ್ತು ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಿನ್ನೆಯಷ್ಟೇ ಭೇಟಿ  (Meet)ಮಾಡಿದ್ದಾರೆ. ಇಬ್ಬರು ದಿಗ್ಗಜರ ಈ ಭೇಟಿ ಸಾಕಷ್ಟು ಕುತೂಹಲ ಮತ್ತು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಧೋನಿ ಅವರು ನಿರ್ಮಾಪಕರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರಿಂದ ಭೇಟಿ ಮಹತ್ವ ಕೂಡ ಪಡೆದುಕೊಂಡಿದೆ.

    ಈಗಾಗಲೇ ಧೋನಿ ನಿರ್ಮಾಣ ಸಂಸ್ಥೆಯು ಒಂದು ಸಿನಿಮಾವನ್ನು ತಯಾರು ಮಾಡಿ, ಅದನ್ನು ಬಿಡುಗಡೆ ಕೂಡ ಮಾಡಿದೆ. ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹಾಗಾಗಿ ಹಲವಾರು ಸಿನಿಮಾಗಳನ್ನು ಮಾಡುವುದಾಗಿ ಧೋನಿ ಪತ್ನಿ ಸಾಕ್ಷಿ ಘೋಷಣೆ ಮಾಡಿದ್ದರು. ಈ ಬ್ಯಾನರ್ ನಲ್ಲೇ ಧೋನಿ ಕೂಡ ನಟಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತ ಪಡಿಸಿದ್ದರು. ಈ ನಡುವೆ ಧೋನಿ ಮತ್ತು ರಾಮ್ ಚರಣ್ ಭೇಟಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

    ಮೂಲಗಳ ಪ್ರಕಾರ ಧೋನಿ ನಿರ್ಮಾಣ ಸಂಸ್ಥೆಯಲ್ಲಿ ರಾಮ್ ಚರಣ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್‍ಗಾಗಿಯೇ ವಿಶೇಷ ಕಥೆಯೊಂದನ್ನು ನಿರ್ಮಾಣ ಸಂಸ್ಥೆ ಹುಡುಕಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಜೋಡಿ ಮುಂದೆ ಸಿನಿಮಾ ಮಾಡುವ ವಿಚಾರವನ್ನು ಫೋಟೋ ರಟ್ಟು ಮಾಡಿದೆ.

     

    ಧೋನಿಯನ್ನು ಭೇಟಿ ಮಾಡಿ ನಂತರ ಆ ಫೋಟೋಗಳನ್ನು ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಭೇಟಿಯ ವಿಚಾರವನ್ನು ಮಾತ್ರ ಅವರು ತಿಳಿಸಿಲ್ಲ. ಹಾಗಂತ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಈ ಭೇಟಿಯ ಗುಟ್ಟನ್ನು ಕೆದಕುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಧ್ರುವ ಸರ್ಜಾ

    ನಿಖಿಲ್ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಧ್ರುವ ಸರ್ಜಾ

    ಟ ನಿಖಿಲ್ ಕುಮಾರ್ (Nikhil Kumar) ಸದ್ಯ ಶೂಟಿಂಗ್ (Shooting) ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅತ್ತ ರಾಜಕೀಯ ವಿಚಾರದಲ್ಲಿ ಓಡಾಟ, ಗಣ್ಯರ ಭೇಟಿ, ದೆಹಲಿ ಪ್ರವಾಸ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಈಗಾಗಲೇ ಅನೌನ್ಸ್ ಮಾಡಿ ಶೂಟಿಂಗ್ ಶುರು ಮಾಡಿರೋ ಸಿನಿಮಾ ಕಂಪ್ಲೀಟ್ ಮಾಡಬೇಕಿದೆ. ನಿಖಿಲ್ ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿಕೊಡದೇ ಇದ್ದರೂ ಎಂಪಿ ಚುನಾವಣೆಗೆ ಬೇಕಿರೋ ಸದೃಢವಾದ ವೇದಿಕೆಯನ್ನ ಪಕ್ಷದ ಪರವಾಗಿ ತಾವೇ ಸಜ್ಜು ಮಾಡಬೇಕಿದೆ. ಹಾಗಾಗಿ ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಲ್ಲಿ ಅವರು ನಿರತರಾಗಿದ್ದಾರೆ.

    ಸದ್ಯ ಲೈಕಾ ಸಂಸ್ಥೆ ನಿರ್ಮಾಣದ, ಲಕ್ಷ್ಮಣ್ ನಿರ್ದೇಶನದ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದು ಚಿತ್ರದ ಸೆಕೆಂಡ್ ಶೆಡ್ಯೂಲ್ ಸ್ಟಾರ್ಟ್ ಆಗಿದೆ. ಐದು ತಿಂಗಳಲ್ಲಿ ಸಿನಿಮಾ ಕಂಪ್ಲೀಟ್ ಮಾಡಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಂಡಿರುವ ಟೀಂ  ಬಿರುಸಿನಲ್ಲಿ ಶೂಟಿಂಗ್ ಮಾಡುತ್ತಿದೆ. ಈ ನಡುವೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ನಟ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? ಕೊನೆಗೂ ಸಿಕ್ತು ಉತ್ತರ

    ನಿಖಿಲ್ ಹಾಗೂ ಧ್ರುವಾ ಸರ್ಜಾ (Dhruva Sarja) ಒಟ್ಟಿಗೆ ಕಾಣಿಸಿಕೊಂಡಿದ್ದು ತೀರ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ಇಬ್ಬರು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ನಿಖಿಲ್ ಅವರ ಹೊಸ ಸಿನಿಮಾ ಬಗ್ಗೆ ಹಾಗೂ ಧ್ರುವ ಅವರ ಮಾರ್ಟಿನ್ ಚಿತ್ರದ ಬಗ್ಗೆ  ಚರ್ಚಿಸಿದ್ದಾರೆ. ಇದಷ್ಟೇ ಅಲ್ಲದೇ ಇಬ್ಬರೂ ಒಂದಿಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡುತ್ತಾ ಕೆಲ ಸಮಯ ಕಳೆದಿದ್ದಾರೆ.

     

    ಅಪರೂಪಕ್ಕೆ ಸೆಟ್ ಗೆ ಬಂದ ಧ್ರುವ ಅವರನ್ನು ಕಂಡು ನಿಖಿಲ್ ಕೂಡ ಸರ್ಪ್ರೈಸ್ ಆಗಿದ್ದು ಅಪರೂಪದ ಗೆಳೆಯನನ್ನ ಪ್ರೀತಿಯಿಂದ ಬರಮಾಡಿಕೊಂಡು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಒಟ್ಟಾರೆ ಈ ಇಬ್ಬರು ಸ್ಟಾರ್ ನಟರ ಭೇಟಿ ಅಭಿಮಾನಿಗಳಿಗೆ ಖುಷಿ ಕೊಡುವುದರ ಜೊತೆಗೆ ಕುತೂಹಲವನ್ನೂ ಹುಟ್ಟುಹಾಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ

    ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾದ ಗೆಲುವಿನ ಬೆನ್ನಲ್ಲೇ ಮಲೇಷ್ಯಾದ (Malaysia) ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಅವರು ರಜನಿಯನ್ನು ಭೇಟಿ ಮಾಡಿದ್ದಾರೆ. ತಮ್ಮಿಬ್ಬರ ಭೇಟಿಯ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಭೇಟಿಯ ಕುರಿತು ಅಚ್ಚರಿಯ ಸಂಗತಿಗಳನ್ನು ಹೊರ ಹಾಕಿದ್ದಾರೆ.

    ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ರಜನಿಕಾಂತ್ ಉತ್ತರ ಪ್ರದೇಶದ ಪ್ರವಾಸ ಮಾಡಿದ್ದರು. ಹಿಮಾಲಯದ ಪ್ರವಾಸ ಮುಗಿದ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಜಾರ್ಖಂಡ್ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿದ್ದರು. ಇದೀಗ ಮಲೇಷ್ಯಾದ ಪ್ರಧಾನಿಯನ್ನೇ ತಲೈವ ಮುಖಾಮುಖಿಯಾಗಿದ್ದಾರೆ. ಹಾಗಾಗಿ ರಜನಿ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ.

    ರಜನಿಕಾಂತ್ ರಾಜಕಾರಣಕ್ಕೆ ಬರುವ ವಿಚಾರ ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದ ಈ ವಿಷಯ ಚಾಲ್ತಿಯಲ್ಲಿದೆ. ರಜನಿ ಕೂಡ ಹಲವಾರು ಬಾರಿ ರಾಜಕಾರಣಕ್ಕೆ ಬರುವ ಆಸೆಯನ್ನೂ ವ್ಯಕ್ತ ಪಡಿಸಿದ್ದಾರೆ. ಆದರೆ, ಇದೀಗ ಅವರಿಗೆ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಲಾಗುತ್ತಿದೆ. ಆದರೆ, ರಾಜ್ಯಪಾಲರ ಹುದ್ದೆಯು ಅವರನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್

    ರಜನಿಕಾಂತ್ ಅವರನ್ನು ರಾಜ್ಯಪಾಲರನ್ನು ಮಾಡುವ ಯೋಜನೆಯೊಂದು ಸಿದ್ಧವಾಗಿದ್ದು, ರಜನಿಕಾಂತ್ ಅದಕ್ಕಾಗಿ ಹಲವಾರು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹಾಗಾಗಿ ರಾಜಕಾರಣಿಗಳನ್ನು ರಜನಿ ಭೇಟಿ ಮಾಡುತ್ತಿದ್ದಾರೆ ಎನ್ನುವುದು ಕೆಲವರ ವಾದ. ಮಲೇಷ್ಯಾದಲ್ಲಿ ಸಾಕಷ್ಟು ಸಂಖ್ಯೆಯ ತಮಿಳರೂ ಇರುವುದರಿಂದ ಪ್ರಧಾನಿ ಭೇಟಿ ಮಹತ್ವ ಪಡೆದುಕೊಂಡಿದೆ.

     

    ಅಲ್ಲದೇ, ಮಲೇಷ್ಯಾದ ಪ್ರಧಾನಿ ಭೇಟಿಯ ಸಂಗತಿಗಳು ಮುಂದಿನ ಸಿನಿಮಾದಲ್ಲೂ ಇರಲಿವೆ ಎಂದು ಪ್ರಧಾನಿ ಆಡಿದ್ದಾರೆ ಎನ್ನಲಾದ ಮಾತುಗಳು ಕೂಡ ಮಹತ್ವ ಪಡೆದುಕೊಂಡಿವೆ. ಅವರ ಮಾತುಕತೆ ಯಾವುದು? ಏನೆಲ್ಲ ಮಾತನಾಡಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್-ಕುಮಾರ್ ವಿವಾದ: ರವಿಚಂದ್ರನ್ ಭೇಟಿ ಮಾಡಿದ ಕುಮಾರ್

    ಸುದೀಪ್-ಕುಮಾರ್ ವಿವಾದ: ರವಿಚಂದ್ರನ್ ಭೇಟಿ ಮಾಡಿದ ಕುಮಾರ್

    ಸುದೀಪ್ (Sudeep) ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ನಿರ್ಮಾಪಕರ ಸಂಘದ ಪದಾಧಿಕಾರಿಗಳು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದರು. ಇಂದು ಸ್ವತಃ ನಿರ್ಮಾಪಕ ಕುಮಾರ್ (N. Kumar) ಅವರೇ ರವಿಚಂದ್ರನ್ (Ravichandran) ಅವರನ್ನು ಭೇಟಿ ಮಾಡಿ, ಸುದೀಪ್ ಮತ್ತು ತಮ್ಮ ನಡುವಿನ ಸಂಗತಿಯನ್ನು ತಿಳಿಸಿದ್ದಾರೆ. ತಮಗೆ ನ್ಯಾಯ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಕುಮಾರ್ ಭೇಟಿಯ ನಂತರ ಮಾತನಾಡಿದ ರವಿಚಂದ್ರನ್, ‘ಕುಮಾರ್ ಎಲ್ಲವನ್ನೂ ಹೇಳಿದ್ದಾರೆ. ಪರಿಸ್ಥಿತಿ ತಣ್ಣಗಾಗಬೇಕು. ಸುದೀಪ್ ಹತ್ತಿರ ನಾನು ಮಾತಾಡ್ಬೇಕು. ಎರಡು ಕಥೆಗಳನ್ನ ಕೇಳ್ತೀನಿ. ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾಗಬೇಕು. 20 ವರ್ಷದ ಕಥೆಯಂತೆ ಕಾಣ್ತಿದೆ. ಸುದೀಪ್ ಆದಷ್ಟು ಬೇಗ ಸಿಕ್ತಾರೆ. ಈಗಾಗಲೇ ಇಬ್ಬರೂ ನೊಂದಿದ್ದಾರೆ. ಚಿತ್ರರಂಗದಲ್ಲಿ ನಾವು ಸರಿಯಾಗಬೇಕು. ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು. ಈ ಸಮಸ್ಯೆಯನ್ನು ಬಗೆಹರಿಸೋಕೆ ನಾನು ಟ್ರೈ ಮಾಡ್ತೀನಿ. ಪರಿಹಾರ ನಾನು ಹುಡುಕೋ ಪ್ರಯತ್ನ ಮಾಡ್ತೀನಿ. ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬಿಡಬೇಕು. ಎಲ್ಲರೂ ಚೆನ್ನಾಗಿರಬೇಕು ಅಂತ ನನ್ನಾಸೆ. ಸುದೀಪ್ ನನಗೆ ಮಾಣಿಕ್ಯ ಚಿತ್ರದಿಂದ ತುಂಬಾ ಕ್ಲೋಸ್ ಆದವರು. ಕುಮಾರ್ ಮುಂಚೆಯಿಂದ ಗೊತ್ತು. ದಾಖಲೆಗಳನ್ನ ನಾನು ಮೊದಲು ನೋಡ್ತೀನಿ. ಆಮೇಲೆ ಸುದೀಪ್ ಹತ್ರ ಮಾತಾಡ್ತೀನಿ’ ಎಂದಿದ್ದಾರೆ.

    ನಿರ್ಮಾಪಕ ಎನ್.ಕುಮಾರ್ ಮತ್ತು ಕಿಚ್ಚ ಸುದೀಪ್ ಆರೋಪಗಳ ವಿಚಾರದಲ್ಲಿ ಕೊನೆಗೂ ರವಿಚಂದ್ರನ್ ಎಂಟ್ರಿ ಪಡೆದಿದ್ದಾರೆ. ನಿನ್ನೆ ಮಧ್ಯಾಹ್ನ ಕೆಲ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಾಪಕ ಎನ್.ಕುಮಾರ್ ಹಾಗೂ ಸುದೀಪ್ ನಡುವಿನ ಮನಸ್ತಾಪ ಕುರಿತು ಚರ್ಚಿಸಿದ್ದಾರೆ. ಇದನ್ನೂ ಓದಿ:ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ನಿರ್ಮಾಪಕರ ಜೊತೆ ಮಾತನಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರವಿಚಂದ್ರನ್, ‘ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್ ಗೆ ನೋವಾಗಿರೋದು ನಿಜ. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್ ನಲ್ಲಿದ್ದೆ ಹಾಗಾಗಿ ಪಿಕ್ ಮಾಡೋಕೆ ಆಗ್ಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು.  ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದರು.

    ಮುಂದುವರೆದು ಮಾತನಾಡಿದ ರವಿಚಂದ್ರನ್, ‘ಸುದೀಪ್ ಹತ್ತಿರ  ಮಾತಾಡ್ಬೇಕಾ ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ ಏನು ಮಾಡೋಕೆ ಆಗಲ್ಲ. ನಾನು ಇಷ್ಟು ದಿನ ತಪ್ಪಿಸಿಕೊಂಡು ಓಡಾಡ್ತಿದ್ದೆ, ಈ ವಿಷಯ ಬಗ್ಗೆ ರಿಯ್ಯಾಕ್ಟ್ ಮಾಡೋದು ಬೇಡ ಅಂತ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಕುಮಾರ್ ಬರಲಿ. ಕೇಳು ಮಾತುಗಳು ಹರ್ಟ್ ಆಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಎದ್ದರೆ ಇದೆ ಶುರುವಾಗಿದೆ’ ಎಂದು ಬೇಸರ ಪಟ್ಟುಕೊಂಡರು.

     

    ದಾಖಲೆ ನಾಳೆ ಕೊಡ್ತೀನಿ ಅಂದ್ರೆ ಏನದು ಎಂದು ಕುಮಾರ್ ಗೆ ಪ್ರಶ್ನೆ ಮಾಡಿದ ರವಿಚಂದ್ರನ್, ದಾಖಲೆ ಮುಂದಿಟ್ಟು ಮಾತಾಡ್ಬೇಕು. ಮನಸ್ಥಿತಿ, ಪರಿಸ್ಥಿತಿ ಎರಡೂ ಬ್ಯಾಲೆನ್ಸ್ ಮಾಡಬೇಕು. ಫಸ್ಟ್ ಕೂಲ್ ಮಾಡೋಣ. ತೊಂದರೆ ಏನಂತ ಗೊತ್ತಿಲದೇ ಸಪೋರ್ಟ್ ಮಾಡೋಕೆ ಆಗಲ್ಲ. ನಾನು 30 ವರ್ಷಗಳ ಹಿಂದೆ ಒಂದು ಪುಸ್ತಕ ಮಾಡಿಕೊಟ್ಟಿದೆ, ಹೇಗೆ ಅಸೋಸಿಯೇಷನ್ ಮಾಡಬೇಕು ಅಂತ. ಯಾರು ಫಾಲೋ ಮಾಡಿಲ್ಲ ಈಗ ಅನುಭವಿಸುತ್ತಿದ್ದಾರೆ. ಕುಮಾರ್ ಹೇಳ್ತಾರೆ ನಾನು ಆರೋಪ ಮಾಡಿಲ್ಲ ಮನವಿ ಮಾಡ್ದೆ ಅಂತ. ಅದು ಸುದೀಪ್ ಗೆ ಬೇಜಾರ್ ಆಗಿದೆ. ಜೊತೆಗೆ ಕೂತು ಊಟ ಮಾಡಿದವರು ಈಗ ಬೆರಳು ತೋರಿಸಿ ಮಾತಾಡ್ತಿದ್ದಾರೆ ಅಂದರೆ ಹರ್ಟ್ ಆಗಲ್ವ..? ಎರಡು ಕಡೆ ಸಹನೆ ಮೀರಿದೆ. ಪ್ರತಿಭಟನೆ ಮಾಡ್ತಿರೋ ಕುಮಾರ್ ಗೆ ಬಿಡೋಕೆ ಹೇಳಿ. ಸುದೀಪ್ ನ ನಾನು ಕರಿಸೋದಿಲ್ಲ, ನಾನೇ ಹೋಗಿ ಮಾತಾಡ್ತೀನಿ. ಸುದೀಪ್ ಗೆ ಸರಿ ಅನ್ಸಿದ್ರೆ ಮಾತ್ರ ಹೋಗಿ ಮಾತಾಡ್ತೀನಿ. ಕುಮಾರ್ ದು ತಪ್ಪು ಅಂದ್ರೆ ಡೈರೆಕ್ಟ್ ಆಗಿ ಬೈತೀನಿ’ ಎನ್ನುವುದು ರವಿಚಂದ್ರನ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ಭೇಟಿ ನಂತರ ಪ್ರತಿಕ್ರಿಯೆ ನೀಡದೇ ಹೊರಟ ನಟ ಶಿವರಾಜ್ ಕುಮಾರ್

    ಸಿಎಂ ಭೇಟಿ ನಂತರ ಪ್ರತಿಕ್ರಿಯೆ ನೀಡದೇ ಹೊರಟ ನಟ ಶಿವರಾಜ್ ಕುಮಾರ್

    ತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರ ಜೊತೆ ಪದೇ ಪದೇ ಭೇಟಿ ಮಾಡುತ್ತಿದ್ದಾರೆ ನಟ ಶಿವರಾಜ್ ಕುಮಾರ್ (Shivraj Kumar). ಜೊತೆಗೆ ರಾಜಕೀಯ ಸಮಾರಂಭಗಳಲ್ಲೂ ಅವರು ಭಾಗಿಯಾಗುತ್ತಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಜೊತೆಗೆ ಶಿವರಾಜ್ ಕುಮಾರ್ ಪತ್ನಿ ಗೀತಾ (Geetha) ಕಾಂಗ್ರೆಸ್ ಪಕ್ಷಕ್ಕೂ ಸೇರ್ಪಡೆಯಾದರು.

    ಮಧು ಬಂಗಾರಪ್ಪ (Madhu Bangarappa), ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪರವಾಗಿ ಪ್ರಚಾರ ಮಾಡಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದ ಶಿವರಾಜ್ ಕುಮಾರ್ ಭೇಟಿಯಾಗಿ ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ಸ್ವತಃ ಶಿವಣ್ಣ ಮನೆಗೆ ಬಂದಿದ್ದರು. ಆನಂತರ ಸಂಬಂಧಿ ಮಧು ಬಂಗಾರಪ್ಪ ಮಂತ್ರಿಯಾದರು. ಮಧು ಮಂತ್ರಿಯಾಗಿದ್ದರ ಹಿಂದೆ ಶಿವರಾಜ್ ಕುಮಾರ್ ಪ್ರಭಾವವೂ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್‌ ಚಿತ್ರಗಳ ಫ್ಲಾಪ್‌ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್‌ ರಿಲೀಸ್

    ನಿರಂತರ ಚಿತ್ರೀಕರಣ ಮಧ್ಯೆಯೂ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ನಡೆದ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಶಿವಣ್ಣ ಪತ್ನಿ ಸಮೇತ ಹಾಜರಿದ್ದರು. ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸ್ವತಃ ಕಾರು ಡ್ರೈವ್ ಮಾಡಿಕೊಂಡು ಬಂದಿದ್ದರು ಶಿವರಾಜ್ ಕುಮಾರ್.

    ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಪತ್ನಿ ಗೀತಾ ಅವರ ಜತೆ ಬಂದು ಸಿಎಂ ಭೇಟಿ ‌ಮಾಡಿದ ನಟ ಶಿವರಾಜ್ ಕುಮಾರ್, ಕೆಲ ಹೊತ್ತು ಅವರೊಂದಿಗೆ ಮಾತನಾಡಿದ್ದಾರೆ. ಮಾತುಕತೆ ಬಳಿಕ ಹೊರ ಬಂದ ಅವರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪ್ರತಿಕ್ರಿಯೆ ಕೊಡದೇ ತೆರಳಿದರು. ಶಿವಣ್ಣ ದಂಪತಿ ಜೊತೆ ಸಚಿವ ಮಧು ಬಂಗಾರಪ್ಪ ಕೂಡ ಆಗಮಿಸಿದ್ದರು.