Tag: ಭೂ ವಿಜ್ಞಾನಿ

  • ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್

    ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್

    ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕನನ್ನು ಬಂಧಿಸಲಾಗಿದೆ.

    ಪ್ರತಿಮಾ ಮೇಲಿನ ಸೇಡಿನಿಂದ ಪ್ರಾಣ ತೆಗೆದು ಕಿರಣ್ ಎಸ್ಕೇಪ್ ಆಗಿ ಇವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

    4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಕಿರಣ್ ಕಳೆದ ತಿಂಗಳು ಹೊಸ ಸರ್ಕಾರಿ ಕಾರು ಅಪಘಾತ ಮಾಡಿದ್ದನು. ಅಪಘಾತದ ನಂತರ ಕಚೇರಿಯಲ್ಲೇ ಕಾರು ಬಿಟ್ಟು ತೆರಳಿದ್ದನು.

    ಕಿರಣ್ ನಡವಳಿಕೆಯಿಂದ ಕೋಪಗೊಂಡಿದ್ದ ಪ್ರತಿಮಾ, 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಈ ವೇಳೆ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದನು. ಆದರೆ ಪ್ರತಿಮಾ ಅವರು ಕಿರಣ್‍ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಪ್ರತಿಮಾ ಮೇಲೆ ದ್ವೇಷಕಾರಿದ್ದನು.

    ಕಿರಣ್‍ಗೆ ವಾರ್ನಿಂಗ್ ಕೊಟ್ಟಿದ್ದ ಪ್ರತಿಮಾ: ಪ್ರತಿಮಾ ರೇಡ್ ಹೋಗುವ ವಿಚಾರ ಲೀಕ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಈ ಕಾರಣಕ್ಕೆ ಪ್ರತಿಮಾ ವಾರ್ನ್ ಕೂಡ ಮಾಡಿದ್ದರು. ಈ ವೇಳೆ ಬೈದಾಗ ತಪ್ಪಾಗಿದೆ ಕೆಲಸದಿಂದ ತೆಗೆಯಬೇಡಿ ಎಂದು ಕೇಳಿಕೊಂಡಿದ್ದನು.

    ಕೊಲೆ ದಿನವೂ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದನು. ಆದರೆ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಶನಿವಾರ ಮನೆ ಬಳಿಯೇ ಕಾದು ಕುಳಿತು ಹೊಂಚು ಹಾಕಿ ಕೊಲೆ ಮಾಡಿ ಕಿರಣ್ ಎಸ್ಕೇಪ್ ಆಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಕಿಲ್ಲರ್ ಬೇಸಿಗೆಯಿಂದ ಸಾಂಕ್ರಾಮಿಕ ರೋಗದ ಭೀತಿ- ಭೂಗರ್ಭ ತಜ್ಞರಿಂದ ಎಚ್ಚರಿಕೆ

    ಕಿಲ್ಲರ್ ಬೇಸಿಗೆಯಿಂದ ಸಾಂಕ್ರಾಮಿಕ ರೋಗದ ಭೀತಿ- ಭೂಗರ್ಭ ತಜ್ಞರಿಂದ ಎಚ್ಚರಿಕೆ

    ಬೆಂಗಳೂರು: ಈ ಬಾರಿ ಕೂಲ್ ಕೂಲ್ ವೆದರ್ ಇದ್ದರೂ ಜನರ ಪ್ರಾಣ ಕೊಲ್ಲುವ ಬೇಸಿಗೆ ಇರಲಿದೆ ಎಂಬ ಮಾಹಿತಿಯೊಂದು ಭೂತಜ್ಞರಿಂದ ಬಂದಿದೆ. ಜ್ವಾಲಾಮುಖಿಯ ಜ್ವಾಲೆಗೆ ಬೆಂಗಳೂರು, ದೆಹಲಿ ಸೇರಿದಂತೆ ಭಾರತ ಬಿಸಿಲಿನಿಂದ ಸುಡಲಿದೆ. ದಿ ಮೋಸ್ಟ್ ಡೇಂಜರಸ್ ಬೇಸಿಗೆ ಈ ವರ್ಷ ಸಂಭವಿಸಲಿದೆಯಂತೆ.

    ಈ ಬಾರಿ ದೇಶದ ಮಹಾನಗರದಲ್ಲಿ ಕಿಲ್ಲರ್ ಬೇಸಿಗೆ ಭೀತಿ ಶುರುವಾಗಿದೆ. ಜ್ವಾಲಾಮುಖಿ ಕಪ್ಪು ಬೂದಿ ಮತ್ತು ಕಂಡರಿಯದ ರಣ ಭೀಕರ ಸಾಂಕ್ರಾಮಿಕ ಕಾಯಿಲೆಗೆ ಈ ಬಾರಿಯ ಬೇಸಿಗೆ ನಾಂದಿ ಹಾಡಲಿದೆ ಅನ್ನೋದು ಭೂಗರ್ಭ ತಜ್ಞರ ಎಚ್ಚರಿಕೆಯಾಗಿದೆ.

    ಜ್ವಾಲಮುಖಿರ ರೌದ್ರ ನರ್ತನ ಅದ್ಯಾವ ಪರಿ ಇದೆ ಅಂದ್ರೆ ಈ ಬಾರಿ ಫಿಲಿಫೈನ್‍ನಲ್ಲಿ ಸುಮಾರು 55 ಸಾವಿರ ಅಡಿ ಜ್ವಾಲಮುಖಿ ಭೂಮಿಯಡಿಯಿಂದ ಸ್ಫೋಟಗೊಂಡು ಚಿಮ್ಮಿದೆ. ಇದು ಅತಿ ಹೆಚ್ಚು ಎತ್ತರ ಚಿಮ್ಮಿದ ಜ್ವಾಲಮುಖಿಯಾಗಿದೆ. ಇದು ಕಪ್ಪು ಅನಿಲ ಅಂದ್ರೆ ವಿಷಾನಿಲವನ್ನು ಹೊರಹೊಮ್ಮಿಸಿದ್ದು ಇಡೀ ನೀಲಾಕಾಶವನ್ನು ಕಪ್ಪು ಕಪ್ಪಾಗಿ ಮಾಡಿಬಿಟ್ಟಿದೆಯಂತೆ. ಈ ಜ್ವಾಲಾಮುಖಿಯ ಸ್ಫೋಟ ವಿಷಾನಿಲದ ಎಫೆಕ್ಟ್ ಭಾರತಕ್ಕೂ ಕಾಡಲಿದ್ದು ಈ ಬಾರಿ ಬೇಸಿಗೆಗೆ ಸಾಂಕ್ರಾಮಿಕ ರೋಗದ ತಾಣವಾಗಲಿದೆ ಎನ್ನುವ ಎಚ್ಚರಿಕೆಯನ್ನು ಭೂ ಗರ್ಭ ತಜ್ಞ ಹೆಚ್.ಎಸ್ ಪ್ರಕಾಶ್ ಕೊಟ್ಟಿದ್ದಾರೆ.

    ವಿಚಿತ್ರ ಅಂದ್ರೆ ಈ ಬಾರಿ ಬೇಸಿಗೆಯಲ್ಲಿ ಉಷ್ಣಾಂಶ ಕಡಿಮೆಯಾಗಲಿದೆಯಂತೆ. ಆದರೆ ಚೀನಾದ ಕರೋನಾ ವೈರಸ್ ಮಾದರಿಯ ವೈರಸ್ ಈ ಜ್ವಾಲಮುಖಿಯ ಅನಿಲದಲ್ಲಿ ಉತ್ಪತ್ತಿಯಾಗಲಿದ್ದು ಭಾರತಕ್ಕೆ ಮಾರಕವಾಗಲಿದೆಯಂತೆ. ಈ ಜ್ವಾಲಾಮುಖಿಯ ಸ್ಫೋಟ ಬೇಸಿಗೆ ಮಾತ್ರವಲ್ಲ ಮುಂಗಾರಿನ ಮೇಲೆ ವೈರುದ್ಯ ಪರಿಣಾಮ ಬೀರಲಿದೆ. ಒಂದೋ ಈ ಬಾರಿಯೂ ರಾಜ್ಯದ ಕೆಲವಡೆ ಪ್ರವಾಹದ ಭೀತಿ ಇಲ್ಲದಿದ್ದರೆ, ಬರದ ಪರಿಸ್ಥಿತಿ ಉದ್ಭವವಾಗಲಿದೆ.

    ಒಟ್ಟಾರೆ ಈ ಜ್ವಾಲಮುಖಿ ವಾತಾವರಣವನ್ನು ಪ್ರಕೃತಿಯನ್ನು ಹದಗೆಡಿಸಲಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳುತ್ತಾರೆ. ಈ ಹಿಂದೆ ಕಾಲಾರ, ಪ್ಲೇಗ್‍ನಂತಹ ಮಾರಕ ರೋಗದ ಹಿಂದೆ ಇಂತಹ ದೊಡ್ಡ ದೊಡ್ಡ ಜ್ವಾಲಮುಖಿಗಳ ಸ್ಫೋಟ ಕಾರಣವಾಗಿತ್ತು. ಇದೀಗ ಮತ್ತೆ ಈ ಭೀತಿ ಅವರಿಸಿದೆ.

  • ಪಶ್ವಿಮಘಟ್ಟದಲ್ಲಿ ಭೂ ಸ್ತರಭಂಗ-ಭೂಕಂಪನದ ಬಗ್ಗೆ ಭೂ ವಿಜ್ಞಾನಿ ಎಚ್ಚರಿಕೆ

    ಪಶ್ವಿಮಘಟ್ಟದಲ್ಲಿ ಭೂ ಸ್ತರಭಂಗ-ಭೂಕಂಪನದ ಬಗ್ಗೆ ಭೂ ವಿಜ್ಞಾನಿ ಎಚ್ಚರಿಕೆ

    ಉಡುಪಿ: ಜಿಲ್ಲೆಯ ಬೈಂದೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಅನುಭವವಾದ ಭೂಕಂಪನ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಪಾಲದ ಭೂ ವಿಜ್ಞಾನಿ ಉದಯ ಶಂಕರ್ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಭೂಮಿ ಮೇಲೆ ಮನುಷ್ಯನ ದಾಳಿಯಿಂದಲೇ ಇಂತಹ ಘಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

    ಗಣಿಗಾರಿಕೆ, ಬುಲ್ಡೋಜರ್‍ಗಳ ಬಳಕೆ, ಕಾಡು ನಾಶದಂತಹ ವಿಪರೀತ ಆಟಾಟೋಪಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ನಾವು ಅಂದುಕೊಳ್ಳುವ ಹಾಗೆ ಪರಿಸ್ಥಿತಿ ಇರುವುದಿಲ್ಲ ಎಂದು ಭೂ ವಿಜ್ಞಾನಿ ಉದಯ ಶಂಕರ್ ಭಟ್ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲೆಯ ಗೋಳಿಬೇರು, ಕ್ಯಾರ್ತೂರು ಸಾರಂಗಿ, ಗಂಗನಾಡು, ಅತ್ಯಾಡಿಯಲ್ಲಿ ಭೂಕಂಪನದ ಮಾಹಿತಿ ಸಿಕ್ಕಿದೆ. ಪಶ್ಚಿಮ ಘಟ್ಟದಲ್ಲಿ ಆದ ಭೂ ಸ್ತರಭಂಗ(ಭೂ ಕುಸಿತ) ಇದಕ್ಕೆ ಕಾರಣ. ಪಶ್ಚಿಮ ಘಟ್ಟದ ಉದ್ದಕ್ಕೂ ಈ ಹಿಂದೆಯೇ ಸ್ತರಭಂಗವಾಗಿದೆ. ಈ ಜಾಗದಲ್ಲೇ ಮತ್ತೆ ಭೂಕುಸಿತ ಆಗಿರಬಹುದು. ಇದರಿಂದಾಗಿ ಭೂ ಕಂಪನದ ಅನುಭವ ಆಗುತ್ತದೆ. ಜೋರಾದ ಶಬ್ಧ ಕೇಳಿಬರುತ್ತದೆ ಎಂದು ಹೇಳಿದ್ದಾರೆ.

    ಭೂಕಂಪನ ಅನ್ನೋದು ಸ್ವಾಭಾವಿಕ ಪ್ರಕ್ರಿಯೆ. ಆ ಭಾಗದಲ್ಲಿ ಜೆಸಿಬಿ ಬಳಕೆ- ಕಲ್ಲುಕೋರೆಯ ಸ್ಫೋಟದಿಂದ ಸ್ತರಭಂಗ ಆಗಿರಬಹುದು. ಪಶ್ಚಿಮಘಟ್ಟದ ಸರಣಿಯಲ್ಲಿ ಈ ಹಿಂದೆಯೇ ಭೂಮಿ ಬಿರುಕು ಬಿಟ್ಟಿತ್ತು. ಸದ್ಯ ಆಗಿರೋದು ಭೂಮಿಯ ಸ್ಟ್ರೆಸ್ ರಿಲೀಸ್ ಪ್ರೊಸೀಜರ್ ಅಷ್ಟೆ. ಮನುಷ್ಯನ ಚಟುವಟಿಕೆಗಳು ಹಿಡಿತದಲ್ಲಿ ಇರಬೇಕು, ಭೂಮಿಯ ಮೇಲೆ ಅಟ್ಟಹಾಸ ಕಮ್ಮಿ ಮಾಡಿದರೆ ಇಂತಹ ಬೆಳವಣಿಗೆಯನ್ನು ತಡೆಗಟ್ಟಬಹುದು ಎಂದು ಉದಯ ಶಂಕರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv