Tag: ಭೂ ಕಂಪನ

  • ಬಾಗಲಕೋಟೆಯಲ್ಲಿ ಭೂ ಕಂಪನದ ಅನುಭವ – ಜನರಲ್ಲಿ ಆತಂಕ

    ಬಾಗಲಕೋಟೆಯಲ್ಲಿ ಭೂ ಕಂಪನದ ಅನುಭವ – ಜನರಲ್ಲಿ ಆತಂಕ

    ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಕೆಲ ಭಾಗಗಳಲ್ಲಿ ಶನಿವಾರ ತಡರಾತ್ರಿ 11.50ರ ಸುಮಾರಿಗೆ ಭೂ ಕಂಪನದ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.

    earth quack

    ಜಿಲ್ಲೆಯ ಜಮಖಂಡಿ, ಬಾಗಲಕೋಟೆ ವಿದ್ಯಾಗಿರಿಯ 22 ಕ್ರಾಸ್, ಬಾಗಲಕೋಟೆ ತಾಲೂಕಿನ ಶಾರದಾಳ, ಅಂಕಲಗಿ, ಹಿರೇ ಶೆಲ್ಲಿಕೇರಿ ಕ್ರಾಸ್ ನಲ್ಲಿ ಭೂ ಕಂಪನ ಅನುಭವವಾಗಿದೆ. ಭೂಮಿ ಕಂಪನದ ಅನುಭವ ಆಗುದ್ದಂತೆ ಶೆಲ್ಲಿಕೇರಿ ಕ್ರಾಸ್‍ನ ಕೆಲವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ದನದ ಕೊಟ್ಟಿಗೆಯಲ್ಲಿದ್ದ ದನಕರುಗಳು ಕೂಡ ಎದ್ದು ನಿಂತಿವೆ. ಇದನ್ನೂ ಓದಿ: ಕೋವಿಡ್‌ಗೂ ಮೊದಲು ಬಂದಿದ್ದ ನಿಫಾ ವೈರಸ್‌ಗೆ ಕೇರಳದಲ್ಲಿ 12ರ ಬಾಲಕ ಬಲಿ

    earth quack

    ಈ ಬಗ್ಗೆ ಶೆಲ್ಲಿಕೇರಿ ಕ್ರಾಸ್‍ನ ಬಾಗಲಕೋಟೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸಲೀಮ್ ಶೇಕ್, ರಾತ್ರಿ 11.43ರ ಸುಮಾರಿಗೆ ನಮಗೆ ಭೂ ಕಂಪನದ ಅನುಭವ ಆಗಿದೆ. 10-12 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ರೂಲರ್ ಸಂಚರಿಸುವ ವೇಳೆ ಬರುವ ಶಬ್ದದ ಹಾಗೇ ಶಬ್ದ ಕೇಳಿಸಿದೆ. ನಾವೆಲ್ಲ ಮನೆಯ ಸದಸ್ಯರು ಹೊರಗೆ ಬಂದು ನಿಂತಿದ್ದೇವು. ಮಕ್ಕಳು ಮನೆಮಂದಿ ಭಯಗೊಂಡಿದ್ದರು ಎಂದಿದ್ದಾರೆ. ಅಲ್ಲದೇ ಸಲೀಮ್ ಶೇಖ್ ಅವರ ಮನೆ ಗೋಡೆ ಮೇಲೆ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್

  • ಭಾರೀ ಶಬ್ದ, ಭೂ ಕಂಪನದ ಅನುಭವ- ಗ್ರಾಮಸ್ಥರಲ್ಲಿ ಆತಂಕ

    ಭಾರೀ ಶಬ್ದ, ಭೂ ಕಂಪನದ ಅನುಭವ- ಗ್ರಾಮಸ್ಥರಲ್ಲಿ ಆತಂಕ

    ವಿಜಯಪುರ: ಭಾರೀ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವ ವಿಜಯಪುರದಲ್ಲಿ ಆಗಿದೆ.

    ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದಲ್ಲಿ ಮೂರು ದಿನದಿಂದ ನಿತ್ಯ ರಾತ್ರಿ ಭಾರೀ ಸದ್ದು ಮತ್ತು ಭೂಮಿ ನಡುಗಿದ ಅನುಭವಾಗಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಭಾರೀ ಶಬ್ದದಿಂದ ಗ್ರಾಮಸ್ಥರು ಮೂರು ದಿನಗಳ ಕಾಲ ರಾತ್ರಿ ವೇಳೆ ನಿದ್ದೆ ಮಾಡದೆ ಭಯದ ವಾತಾವರಣದಲ್ಲಿ ಕಾಲ ಕಳೆದಿದ್ದಾರೆ. ಮೊದಲ ದಿನ ಗ್ರಾಮದ ಸುತ್ತಲಿನ ಜಲ್ಲಿ ಕಲ್ಲಿನ ಕಾರ್ಖಾನೆ ಶಬ್ದ ಇರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ ಈ ಕುರಿತು ಜಲ್ಲಿ ಕಲ್ಲಿನ ಕಾರ್ಖಾನೆಯ ಮಾಲೀಕರನ್ನು ವಿಚಾರಿಸಿದರೆ ನಾವು ಯಾವುದೇ ಬ್ಲಾಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ. ಭಾರೀ ಸದ್ದು ಹಾಗೂ ಕಂಪನದಿಂದ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಅಲ್ಲದೆ ಕೆಲ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

    ಇದು ಭೂಕಂಪನವೋ ಅಥವಾ ಜಲ್ಲಿ ಕಲ್ಲಿನ ಬ್ಲಾಸ್ಟ್ ಸದ್ದೋ ಎಂಬುದು ಗ್ರಾಮಸ್ಥರಿಗೆ ತಿಳಿಯುತ್ತಿಲ್ಲ. ಹೀಗಾಗಿ ಅನಾಹುತ ಆಗುವ ಮುನ್ನ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಕುರಿತು ತಿಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಚಿಕ್ಕಮಗ್ಳೂರಲ್ಲಿ ಮಧ್ಯರಾತ್ರಿ ಕಂಪಿಸಿದ ಭೂಮಿ- ಆತಂಕದಲ್ಲಿ ಗ್ರಾಮಸ್ಥರು

    ಚಿಕ್ಕಮಗ್ಳೂರಲ್ಲಿ ಮಧ್ಯರಾತ್ರಿ ಕಂಪಿಸಿದ ಭೂಮಿ- ಆತಂಕದಲ್ಲಿ ಗ್ರಾಮಸ್ಥರು

    ಚಿಕ್ಕಮಗಳೂರು: ಮಲೆನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಭೂಮಿಯೊಳಗಿಂದ ಬಂದ ಶಬ್ಧದೊಂದಿಗೆ ಭೂಮಿ ಕಂಪಿಸಿದೆ ಅಂತ ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ, ಅಬ್ಬಿಕಲ್ಲು ಗ್ರಾಮದ ನಿವಾಸಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಭಾರೀ ಶಬ್ಧದೊಂದಿಗೆ ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿದ್ದು, ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ. ನಾಲ್ಕು ತಿಂಗಳಿಂದ ಆಗಾಗ್ಗೆ ಇಲ್ಲಿ ಭೂಮಿ ಕಂಪಿಸುತ್ತಿದೆ. ಇಂದು ಕೊಗ್ರೆ ಗ್ರಾಮದಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪನದ ಅನುಭವವಾಗಿದೆ. ಮಧ್ಯ ರಾತ್ರಿ ಕೇಳಿ ಬಂದ ಭಾರೀ ಶಬ್ಧಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದನ್ನೂ ಓದಿ: ಸತತ ಮಳೆಯಿಂದ ಕಂಗೆಟ್ಟ ಮಲೆನಾಡಿನ ಜನತೆಗೆ ಭೂಕಂಪದ ಆತಂಕ!

    10 ದಿನದ ಹಿಂದೆಯೂ ದೊಡ್ಡ ಸದ್ದಿನೊಂದಿಗೆ ಭೂಮಿ ಕಂಪಿಸಿತ್ತು. ಭೂಕುಸಿತಕ್ಕೆ ನಾಲ್ಕಕ್ಕೂ ಅಧಿಕ ಮನೆಗಳು ಬಿರುಕು ಬಿಟ್ಟಿತ್ತು. ಹೀಗಾಗಿ ನಿರಂತರ ಭೂಕುಸಿತದಿಂದ ಮಲೆನಾಡಿಗರಲ್ಲಿ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರಿನ ಕೊಗ್ರೆ ಗ್ರಾಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv