Tag: ಭೂಸ್ವಾಧೀನ

  • ರೈತರಿಗೆ ಪರಿಹಾರ ಹಣ ನೀಡದ ಸರ್ಕಾರ – ಬಾಗಲಕೋಟೆ ಜಿಲ್ಲಾಧಿಕಾರಿಗಳ ವಸ್ತುಗಳು ಜಪ್ತಿ

    ರೈತರಿಗೆ ಪರಿಹಾರ ಹಣ ನೀಡದ ಸರ್ಕಾರ – ಬಾಗಲಕೋಟೆ ಜಿಲ್ಲಾಧಿಕಾರಿಗಳ ವಸ್ತುಗಳು ಜಪ್ತಿ

    ಬಾಗಲಕೋಟೆ: ಭೂಸ್ವಾಧೀನ (Land Acquisition) ಮಾಡಿ ಪರಿಹಾರದ ಹಣವನ್ನು ನೀಡದ್ದಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿನ (Bagalkote DC Office) ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

    ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಯುನಿಟ್-3ರ ಅಭಿವೃದ್ಧಿ ಸಂಬಂಧ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.  ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲ್ಲ, ಎಸ್‌ಐಟಿ ತನಿಖೆಗೆ ಬಿಜೆಪಿ ಅಡ್ಡಿ ಏಕೆ: ಪರಮೇಶ್ವರ್

     

    ಜಮೀನು ವಶಪಡಿಸಿಕೊಂಡರೂ ರೈತರಿಗೆ ಪರಿಹಾರ ಹಣ ವಿತರಣೆಯಾಗಿರಲಿಲ್ಲ. ಹೀಗಾಗಿ 2ನೇ ಕಂತಿನ ಪರಿಹಾರಕ್ಕೆ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ (Court) ರೈತರು ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ಪರಿಹಾರ ಕೊಡಬೇಕು ಎಂದು ಆದೇಶಿಸಿತ್ತು.

    ಕೋರ್ಟ್‌ ಆದೇಶವಿದ್ದರೂ ಜಿಲ್ಲಾಡಳಿತ ಹಣವನ್ನು ನೀಡದ್ದಕ್ಕೆ ಇಂದು ಕಚೇರಿಯಲ್ಲಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು ಮೂರು ಪ್ರಕರಣಗಳ 1.80 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಬೇಕಿದೆ ಎಂದು ವಕೀಲರು ತಿಳಿಸಿದರು.

  • KIADB ಭೂಸ್ವಾಧೀನ ವಿರೋಧಿಸಿ ಧರಣಿ ವೇಳೆ ವಿಷ ಕುಡಿದ ರೈತ – ಆಸ್ಪತ್ರೆಗೆ ದಾಖಲು

    KIADB ಭೂಸ್ವಾಧೀನ ವಿರೋಧಿಸಿ ಧರಣಿ ವೇಳೆ ವಿಷ ಕುಡಿದ ರೈತ – ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1,777 ಎಕೆರೆ ಭೂಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದ್ದು, ಸರ್ಕಾರದ ಕ್ರಮ ಖಂಡಿಸಿ ಈ ಭಾಗದ ರೈತರು (Farmers) ತಮ್ಮ ಜಮೀನು ಕೊಡೋದಿಲ್ಲ ಅಂತ ನಿರಂತರ 4 ವರ್ಷಗಳಿದ ಅನಿರ್ಧಾಷ್ಟವಧಿ ಧರಣಿ ನಡೆಸುತ್ತಿದ್ದಾರೆ.

    ಇಂದು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ದೇವನಹಳ್ಳಿ ಶಾಸಕ ಕೆ.ಹೆಚ್ ಮುನಿಯಪ್ಪ (KH Muniyappa) ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನ ಮಾಡಿದ್ರು. ಅಂತೆಯೇ ಎರಡು ಬಸ್‌ಗಳ ಮೂಲಕ ಬೆಂಗಳೂರಿಗೆ ಹೊರಟಿದ್ದ ರೈತರ ಬಸ್‍ನ್ನ ಪೊಲೀಸರು ತಡೆಯೊಡ್ಡಿದ್ದರು. ಇದ್ರಿಂದ ರೈತರು ಹಾಗೂ ಪೊಲೀಸರು ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಇದಾದ ನಂತರ ಧರಣಿ ನಿರತ ರೈತರು ನಮಗೆ ಸಾಯೋದಕ್ಕಾದರೂ ಬಿಡಿ ಅಂತ ಊಟದಲ್ಲಿ ಕ್ರೀಮಿನಶಾಶಕ ಬೆರೆಸಲು ಮುಂದಾಗಿದ್ದು ಈ ವೇಳೆ ಕ್ರೀಮಿನಾಶಕ ಬಾಟಲಿಯನ್ನ ಪೊಲೀಸರು ಕಸಿದುಕೊಳ್ಳುವ ಪ್ರಯತ್ನ ಮಾಡಿ ತಳ್ಳಾಟ ನೂಕಾಟ ನಡೆದಿದೆ. ಇದನ್ನೂ ಓದಿ: ದಾವಣಗೆರೆ | ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ – 12 ಲಕ್ಷ ರೂ. ನಗದಲ್ಲಿ ಅಲಂಕಾರ

    ಈ ವೇಳೆ ರೈತ ವೆಂಕಟೇಶ್ ಎಂಬಾತ ಕ್ರೀಮಿನಾಶಕ ಸೇವಿಸಿ ಆಸ್ವಸ್ಥಗೊಂಡಿದ್ದು ಪೊಲೀಸರು ಅಸ್ವಸ್ಥ ರೈತನನ್ನ ದೇವನಹಳ್ಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಂತರ ಧರಣಿ ನಿರತ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಇದನ್ನೂ ಓದಿ: PWDಯಲ್ಲಿ ಸತೀಶ್ ಕುಟುಂಬಸ್ಥರ ದರ್ಬಾರ್‌, ನೀರಾವರಿಯಲ್ಲಿ ಬೋಸರಾಜು ಮಗ ಹಸ್ತಕ್ಷೇಪ – ಸಿಡಿದ ಗುತ್ತಿಗೆದಾರರ ಸಂಘ

  • ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು

    ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು

    ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಂಜನಾದ್ರಿ ಪರ್ವತದ ಅಭಿವೃದ್ಧಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಹಸಿರು ನಿಶಾನೆಯನ್ನು ತೋರಿಸಿದರು.

    ಶ್ರೀರಾಮಚಂದ್ರನ ಜನ್ಮಭೂಮಿಯಾಗಿರುವ ಅಯೋಧ್ಯೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಅಂಜನಾದ್ರಿ ಪರ್ವತದ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಒಟ್ಟು 120 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು.

    ಅನುದಾನ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಸಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿರಲಿಲ್ಲ. ಆದರೆ ಈ ಕುರಿತು ಖುದ್ದು ಬೊಮ್ಮಾಯಿ ಅವರೇ ಸಭೆಯನ್ನು ನಡೆಸಿ, ಅಭಿವೃದ್ಧಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈ ಹಿನ್ನೆಲೆ ಬೆಂಗಳೂರಿನಲ್ಲಿ ಸಿಎಂ ತಮ್ಮ ಕಚೇರಿಯಲ್ಲಿ ಜೂನ್ 25 ರಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು 

    ಸಭೆಯಲ್ಲಿ ಬೊಮ್ಮಾಯಿ ಅವರು ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ, ಸಿದ್ಧಪಡಿಸಿದ ನೀಲನಕ್ಷೆಯನ್ನು ಪರಿಶೀಲನೆ ಮಾಡಿದರು. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ 120 ಕೋಟಿ ರೂ. ಅನುದಾನ ನೀಡುವ ಜೊತೆಗೆ ಕೇಂದ್ರದ ಸ್ವದೇಶಿ ದರ್ಶನ ಯೋಜನೆ ಅಡಿಯಲ್ಲಿ 100 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಒಪ್ಪಿಗೆಯನ್ನು ನೀಡಿದ್ದಾರೆ.

    ಏನೇನು ಇರಲಿದೆ?
    ದೇಶ ಸೇರಿದಂತೆ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಸಂಬಂಧಪಟ್ಟ ಸಭೆಯಲ್ಲಿ 600 ಕೊಠಡಿಗಳ ಪ್ರವಾಸಿ ಮಂದಿರಕ್ಕೆ 10 ಎಕರೆ ಭೂಮಿ ಬಳಕೆ, 5 ಎಕರೆಯಲ್ಲಿ ಅಡುಗೆ ಕೋಣೆ ನಿರ್ಮಾಣ, 3 ಎಕರೆಯಲ್ಲಿ ಸಮುದಾಯ ಭವನ, 8 ಎಕರೆಯಲ್ಲಿ ಪಾರ್ಕಿಂಗ್ ಸ್ಥಳ, 4 ಎಕರೆ 16 ಗುಂಟೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, 2 ಎಕರೆಯಲ್ಲಿ ಪ್ರದರ್ಶನ ಪಥ, 1 ಎಕರೆಯಲ್ಲಿ ಸ್ನಾನಘಟ್ಟ ನಿರ್ಮಾಣ, 3 ಎಕರೆಯಲ್ಲಿ ರೋಪ ವೇ ಸೇರಿದಂತೆ ಕಚೇರಿ ಕೊಠಡಿ, ಪೊಲೀಸ್ ಹೊರಠಾಣೆ, ಆಡಿಯೋ ಸೌಂಡ್ ಶೋ, ರಾಮಾಯಣ ಕುರಿತ ಪೇಂಟಿಂಗ್, ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಜಾಗ ಸೇರಿದಂತೆ ಇತರ ಒಟ್ಟು 24 ಕಾಮಗಾರಿಗಳ ದಾಖಲೆಗಳನ್ನು ಬೊಮ್ಮಾಯಿ ಅವರು ಪರಿಶೀಲನೆ ನಡೆಸಿ, ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ.

    76 ಎಕರೆ ಭೂಸ್ವಾಧೀನಕ್ಕೆ ಒಪ್ಪಿಗೆ
    ದೇವಸ್ಥಾನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜಾಗದ ಅವಶ್ಯಕತೆ ಇದ್ದು, ಅದಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಬೊಮ್ಮಾಯಿ ಅವರು ಒಪ್ಪಿಗೆಯನ್ನು ನೀಡಿದ್ದಾರೆ. ಬೆಟ್ಟ ಸಮೀಪದ ಚಿಕ್ಕರಾಂಪೂರ, ಹನುಮನಹಳ್ಳಿ ಗ್ರಾಮ ಸಮೀಪದ 76 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ತಿಳಿಸಿದ್ದಾರೆ.

    ಮೊದಲ ಹಂತದಲ್ಲಿ 60 ಎಕರೆಯನ್ನು, ಎರಡನೇ ಹಂತದಲ್ಲಿ 16 ಎಕರೆಯನ್ನು ಸ್ವಾಧೀನ ಮಾಡಿಕೊಳ್ಳಲು ಸೂಚಿಸಲಾಗಿದೆ. ಭೂಮಿ ನೀಡಲು ರೈತರು ವಿರೋಧ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ.

    ಹೆಲಿಪ್ಯಾಡ್ ನಿರ್ಮಾಣದ ಚರ್ಚೆ
    ಅಯೋಧ್ಯೆಯಷ್ಟೇ ಪ್ರಾಮುಖ್ಯತೆ ಇರುವ ಅಂಜನಾದ್ರಿ ಪರ್ವತಕ್ಕೆ ದೇಶ ಸೇರಿದಂತೆ ವಿದೇಶಗಳಿಂದ ಗಣ್ಯ ವ್ಯಕ್ತಿಗಳು ಆಗಮಿಸುತ್ತಾರೆ. ಅವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಅಂಜನಾದ್ರಿ ಪರ್ವತದ ಸಮೀಪದಲ್ಲಿ ಅಥವಾ ಬೆಟ್ಟದ ಮೇಲುಗಡೆ ಹೆಲಿಪ್ಯಾಡ್ ನಿರ್ಮಾಣ ಮಾಡುವ ಕುರಿತು ಕೂಡ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿದರು. ಇದನ್ನೂ ಓದಿ: ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆ: ಅಚ್ಚರಿ ಹೇಳಿಕೆ ಕೊಟ್ಟ ಸವದಿ 

    ಬೆಟ್ಟದ ಮೇಲೆ ನಿರ್ಮಿಸಿದರೆ ಅದರಿಂದ ಎದುರಾಗುವ ಅನಾನುಕೂಲಗಳು ಹಾಗೂ ಅನುಕೂಲಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಅದೇ ರೀತಿಯಾಗಿ ವಾಹನಗಳ ಮೂಲಕ ಆಗಮಿಸುವ ಭಕ್ತರಿಗೆ ಅನುಕೂಲವಾಗಲು ಗಂಗಾವತಿಯಿಂದ ಹುಲಿಗಿ ಸಮೀಪದ ಹೆದ್ದಾರಿಯವರೆಗೆ ಒಟ್ಟು 35 ಕಿ.ಮೀ ರಸ್ತೆಯನ್ನು ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ, ರಸ್ತೆ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ.

    Live Tv

  • ದಾಖಲೆಗಳಿದ್ರೂ ಮನೆ ಕೆಡವಿ ದರ್ಪ ತೋರಿದ ಅಧಿಕಾರಿಗಳು

    ದಾಖಲೆಗಳಿದ್ರೂ ಮನೆ ಕೆಡವಿ ದರ್ಪ ತೋರಿದ ಅಧಿಕಾರಿಗಳು

    – ಭೂಸ್ವಾಧೀನದ ಹೆಸರಲ್ಲಿ ಬಡವರ ಮನೆ ನೆಲಸಮ

    ಮಂಡ್ಯ: ಕೂಲಿ-ನಾಲಿ ಮಾಡಿ, ಒಂದಷ್ಟು ಸಾಲ ಮಾಡಿ ಖರೀದಿಸಿದ ಜಾಗದಲ್ಲಿ ಗೂಡೋಂದನ್ನ ಕಟ್ಟಿಕೊಂಡಿದ್ದರು. ಆದರೆ ಅವರು ಕಟ್ಟಿದ ಜಾಗ ಸರ್ಕಾರದ್ದು ಎಂದು ಭೂ-ಸ್ವಾಧೀನದ ಹೆಸರಿನಲ್ಲಿ ಮನೆಗಳನ್ನು ಏಕಾಏಕಿ ನೆಲಸಮ ಮಾಡಲಾಗಿದೆ. ಅಧಿಕಾರಿಗಳ ದರ್ಪಕ್ಕೆ ಅಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು ಹಾಗೂ ರೈತರು ಬೀದಿಗೆ ಬಿದ್ದಿದ್ದಾರೆ.

    ಮಂಡ್ಯದ ಕೆಆರ್ ಪೇಟೆ ಪಟ್ಟಣದಲ್ಲಿ ಕೆಲ ವರ್ಷಗಳ ಹಿಂದೆ ಕೂಲಿ-ನಾಲಿ ಮಾಡಿದ ಹಣದಲ್ಲಿ ತಮ್ಮ ಕನಸಿನ ಮನೆ ನಿರ್ಮಿಸಿಕೊಳ್ಳಬೇಕು ಎಂದು ಪಟ್ಟಣದ ಜಯನಗರ ಬಡಾವಣೆಯಲ್ಲಿ ಖಾಲಿ ನಿವೇಶನಗಳನ್ನು ಖರೀದಿಸಿದ್ದರು. ಅಷ್ಟೇ ಅಲ್ಲದೆ ಅಲ್ಲೊಂದು ಪುಟ್ಟ ಮನೆಗಳನ್ನು ಸಹ ಕಟ್ಟಿಕೊಂಡಿದ್ರು. ಆದರೆ ಈಗ ಅಧಿಕಾರಿಗಳು ಏಕಾಏಕಿ ಧಾವಿಸಿ ನೀವು ಮನೆ ಕಟ್ಟಿರುವ ಜಾಗ ಸರ್ಕಾರದ್ದು ಎಂದು ಸುಮಾರು 6 ಮನೆಗಳನ್ನು ಡೆಮಾಲಿಷ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ 

    ಈ ಜಾಗವನ್ನು 1975ರಲ್ಲಿ ವೆಂಕಟೇಶ್ ಎಂಬವರು ಖರೀದಿ ಮಾಡಿದ್ದಾರೆ. ಇದಾದ ಬಳಿಕ ಹಲವಾರು ಜನರಿಗೆ ಜಾಗ ಮಾರಾಟ ಮಾಡಲಾಗಿದೆ. ಅದರಿಂದ 1995 ರಲ್ಲಿ ನಿವೇಶನವನ್ನು ತಾಲೂಕಿನ ಒಂದಷ್ಟು ರೈತರು ಹಾಗೂ ಕೂಲಿ ಕೆಲಸ ಮಾಡ್ತಿದ್ದವರು ಖರೀದಿಸಿದ್ದರು. ಇದಾದ ಬಳಿಕ ಸ್ವತಃ ಅಧಿಕಾರಿಗಳೇ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿ ಅನ್ಯಾಕ್ರಾಂತವನ್ನು ಕೂಡ ನೀಡಿದ್ದಾರೆ.

    ಹಲವು ವರ್ಷಗಳಿಂದ ಕಂದಾಯ ಕಟ್ಟುವುದರ ಜೊತೆಗೆ ಅಧಿಕಾರಿಗಳು ನಮೂನೆ 3 ಅನ್ನು ಕೂಡ ಕೊಟ್ಟಿದ್ದಾರೆ. ಹೀಗೆ ಎಲ್ಲ ದಾಖಲಾತಿಗಳು ಇದ್ರೂ ಕೂಡ ಅಧಿಕಾರಿಗಳು ಹೊಸ ನಕಾಶೆಯನ್ನ ಸಿದ್ಧಪಡಿಸಿಕೊಂಡು ಈ ಜಾಗ ಸರ್ಕಾರದ್ದು, ಇಲ್ಲಿ ಬಿಸಿಎಂ ಹಾಸ್ಟೆಲ್ ಕಟ್ಟುತ್ತೇವೆ ಎಂದು ಮನೆ ಕೆಡವಿದ್ದಾರೆ ಎಂದು ಮನೆ ಕಳೆದುಕೊಂಡವರು ಆರೋಪ ಮಾಡ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇಲಿಜ್ವರ – 39 ಪ್ರಕರಣಗಳು ಪತ್ತೆ

    ಅಧಿಕಾರಿಗಳು ಮಾತ್ರ ಈ ಜಾಗದಲ್ಲಿ ಹಿಂದೆ ಕಟ್ಟೆಯೊಂದಿತ್ತು. ಹಾಸ್ಟೆಲ್ ನಿರ್ಮಾಣಕ್ಕಾಗಿ ಅಲ್ಲಿನ ಮನೆ ತೆರವುಗೊಳಿಸಿದ್ದೇವೆ ಎನ್ನುತ್ತಿದ್ದಾರೆ. ಮನೆ ಕಳೆದುಕೊಂಡವರು ಎಲ್ಲ ದಾಖಲೆ ಇದ್ದರೂ ಏಕಾಏಕಿ ತೆರವು ಮಾಡಿದ್ರು ಅಂತಿದ್ದಾರೆ. ಅದೇನೆ ಆಗ್ಲಿ ಇಲ್ಲಿ ಯಾರು ಯಾರಿಗೆ ಮೋಸ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಸಾಲ ಸೋಲ ಮಾಡಿ ಕಟ್ಟಿದ್ದ ಮನೆ ಕಳೆದುಕೊಂಡು ಜನರಂತು ಬೀದಿಗೆ ಬಿದ್ದಿದ್ದು ದುರಂತ.

  • ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಇಟಾನಗರ: ಕೇಂದ್ರ ರಕ್ಷಣಾ ಸಚಿವಾಲಯದಿಂದ ಅರುಣಾಚಲಪ್ರದೇಶದ ಹಳ್ಳಿಯ ಜನರಿಗೆ ಕೊಟ್ಯಾಧಿಪತಿಯಾಗುವ ಭಾಗ್ಯ ಬಂದಿದೆ. ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯು ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರ ಹೊಮ್ಮಿದೆ.

    ಕೇಂದ್ರದ ರಕ್ಷಣಾ ಸಚಿವಾಲಯವು ಬೊಮ್ಜ ಹಳ್ಳಿಯಲ್ಲಿ 200.056 ಎಕರೆ ಭೂ ಸ್ವಾಧೀನ ಮಾಡಿರುವ ಕಾರಣ ಪರಿಹಾರ ಧನವಾಗಿ 40,80,38,400 ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಪರಿಹಾರ ಹಣವನ್ನು ಕೊಡಲಾಗಿದ್ದು, ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ.

    31 ಕುಟುಂಬಗಳಿರುವ ಹಳ್ಳಿಯಲ್ಲಿ, 29 ಕುಟುಂಬಗಳಿಗೆ ತಲಾ 1,09,03,813.37 ರೂ. ಗಳನ್ನು ಕೊಡಲಾಗಿದೆ. ಇದರಿಂದ ಬೊಮ್ಜ ಕೋಟ್ಯಾಧಿಪತಿಗಳ ಹಳ್ಳಿಯಾಗಿ ಬದಲಾಗಿದೆ. ತಾವಾಂಗ್ ಗ್ಯಾರಿಸನ್‍ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

    ಈ ಹಣವನ್ನು ಸೋಮವಾರ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯು ಭೂಸ್ವಾಧೀನ ಪರಿಹಾರವನ್ನು ಮತ್ತಷ್ಟು ನೀಡಲಿದೆ ಎಂದು ಹೇಳಿದರು.