Tag: ಭೂಮಿ ಶೆಟ್ಟಿ

  • ಮುತ್ತು ನೀಡ್ತಿದ್ದ ಕಿಶನ್‍ಗೆ ಸಿಕ್ತು ರೊಮ್ಯಾಂಟಿಕ್ ಕಿಸ್

    ಮುತ್ತು ನೀಡ್ತಿದ್ದ ಕಿಶನ್‍ಗೆ ಸಿಕ್ತು ರೊಮ್ಯಾಂಟಿಕ್ ಕಿಸ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರ ಸ್ಪರ್ಧಿ ಕಿಶನ್, ಕಿರುತೆರೆ ನಟಿ ಭೂಮಿ ಅವರಿಂದ ಮುತ್ತು ಪಡೆದು ಸ್ವಿಮ್ಮಿಂಗ್ ಪೂಲ್‍ಗೆ ಹಾರಿದ್ದಾರೆ.

    ಸ್ಪರ್ಧಿಗಳಾದ ಭೂಮಿ, ಕಿಶನ್, ಪ್ರಿಯಾಂಕಾ, ವಾಸುಕಿ ವೈಭವ್ ಹಾಗೂ ಕುರಿ ಪ್ರತಾಪ್ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ಮಳೆ ಬರುತ್ತಿದ್ದು, ಸ್ಪರ್ಧಿಗಳು ಈ ಬಗ್ಗೆ ಮಾತನಾಡುತ್ತಾರೆ. ಆಗ ಕಿಶನ್ ನನ್ನ ಸ್ವಿಮ್ಮಿಂಗ್ ಪೂಲ್ ಒದ್ದೆ ಆಗುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಪ್ರಿಯಾಂಕಾ ನೀನು ಈಗ ಸ್ವಿಮ್ಮಿಂಗ್ ಪೂಲ್‍ಗೆ ಹೋಗಿ ಹಾರಬೇಡ ಎಂದು ಹೇಳಿದ್ದಾರೆ. ಬಳಿಕ ಭೂಮಿ ಸ್ವಿಮ್ಮಿಂಗ್ ಪೂಲ್‍ಗೆ ಜಂಪ್ ಮಾಡು ಎಂದಿದ್ದಾರೆ.

    ಭೂಮಿ ಹಾಗೂ ಪ್ರಿಯಾಂಕಾ ಮಾತು ಕೇಳಿದ ಕಿಶನ್, ಯಾರಾದರೂ ಮುತ್ತು ಕೊಟ್ಟರೆ ನಾನು ಸ್ವಿಮ್ಮಿಂಗ್ ಪೂಲ್‍ಗೆ ಹಾರುತ್ತೇನೆ ಎಂದಿದ್ದಾರೆ. ಕಿಶನ್ ಈ ರೀತಿ ಹೇಳುತ್ತಿದ್ದಂತೆ ಅವರಿಗೆ ಮುತ್ತು ನೀಡುವಂತೆ ಪ್ರಿಯಾಂಕಾ, ಭೂಮಿಗೆ ಹೇಳುತ್ತಾರೆ. ಪ್ರಿಯಾಂಕಾ ಮಾತು ಕೇಳಿ ಭೂಮಿ, ಕಿಶನ್‍ನ ಎರಡು ಕೆನ್ನೆಗೆ ಮುತ್ತು ನೀಡಿದ್ದಾರೆ. ಮುತ್ತು ಪಡೆದ ತಕ್ಷಣ ಕಿಶನ್ ಮಳೆ ಬರುತ್ತಿದ್ದರೂ ಸಹ ಸ್ವಿಮ್ಮಿಂಗ್ ಪೂಲ್‍ಗೆ ಹಾರಿದ್ದಾರೆ. ಕಿಶನ್ ಈಜುಕೋಳದಲ್ಲಿ ಹಾರಿದ್ದನು ನೋಡಿ ಅಲ್ಲಿದ್ದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಭೂಮಿ, ಕಿಶನ್‍ಗೆ ಮುತ್ತು ನೀಡಿದ ಸಂಚಿಕೆ ವಾಹಿನಿಯಲ್ಲಿ ಪ್ರಸಾರವಾಗಿಲ್ಲ.

    ಈ ಹಿಂದೆ ಪ್ರಿಯಾಂಕಾ ಈ ಮನೆಯಲ್ಲಿ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೀರಿ ಅಲ್ವಾ. ಚಂದನಾ, ದೀಪಿಕಾ, ಭೂಮಿ, ಸುಜಾತ, ರಶ್ಮಿ, ಚೈತ್ರಾ ಕೊಟ್ಟೂರು ಮತ್ತು ಚೈತ್ರಾ ವಾಸುದೇವನ್ ಅವರಿಗೆ ಕೊಟ್ಟಿದ್ದೀರಾ ಎಂದು ಕಿಶನ್‍ಗೆ ಕೇಳಿದ್ದರು. ಅದಕ್ಕೆ ಕಿಶನ್ ಸುಜಾತಾ ಅವರಿಗೆ ಕೊಟ್ಟಿಲ್ಲ. ಆದರೆ ತುಂಬಾ ಕಷ್ಟವಾಗಿದ್ದು ದೀಪಿಕಾ, ಅವರಿಗೂ ಕೊಟ್ಟಿದ್ದೀನಿ ಎಂದಿದ್ದರು. ಈ ವೇಳೆ ರಾಜು ತಾಳಿಕೋಟೆ ಮತ್ತು ಭೂಮಿ ಮಧ್ಯೆ ಕಿಶನ್ ಕುಳಿತ್ತಿದ್ದರು. ಆಗ ರಾಜು ಅವರು ಕಿಶನ್‍ಗೆ ಮುತ್ತು ಕೊಟ್ಟು ಪಾಸ್ ಮಾಡು ಎಂದರು. ತಕ್ಷಣ ಕಿಶನ್ ಭೂಮಿ ಕೆನ್ನೆಗೆ ಎಲ್ಲರ ಮುಂದೆಯೇ ಕಿಸ್ ಮಾಡಿದ್ದಾರೆ. ಈ ಸಂಚಿಕೆ ಕೂಡ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ. ಅನ್‍ಸೀನ್‍ನಲ್ಲಿ ಈ ವಿಡಿಯೋ ಪ್ರಸಾರವಾಗಿತ್ತು.

  • ಕುಂದಾಪುರದ ಭೂಮಿಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ

    ಕುಂದಾಪುರದ ಭೂಮಿಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್-7’ ರ ಪ್ರತಿವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಉತ್ತಮವಾಗಿ ಆಟವಾಡುವ ಒಬ್ಬ ಸ್ಪರ್ಧಿಗೆ ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟುತ್ತಾರೆ. ಈ ವಾರ ಸುದೀಪ್ ಅವರು ಕುಂದಾಪುರದ ಭೂಮಿ ಶೆಟ್ಟಿಗೆ ತಮ್ಮ ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟಿದ್ದಾರೆ.

    ಎರಡನೇ ವಾರ ಬಿಗ್‍ಬಾಸ್ ಮನೆಯಲ್ಲಿ ಒಂದು ಸೇಬು ತಿಂದಿದ್ದರಿಂದ ಚೈತ್ರಾ, ಸುಜಾತ, ಚಂದನ್ ನಡುವೆ ಜೋರಾಗಿ ಗಲಾಟೆ ನಡೆದಿತ್ತು. ಆಗ ಮನೆಯವರೆಲ್ಲರೂ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದರು. ಆದರೆ ಮತ್ತೆ ಮತ್ತೆ ಮೂವರ ಮಧ್ಯೆ ವಾದ-ವಿವಾದ ನಡೆಯುತ್ತಿತ್ತು. ನಂತರ ಭೂಮಿ ಶೆಟ್ಟಿ ನಡೆದ ಜಗಳದಲ್ಲಿ ಚಂದನ್ ಆಚಾರ್ ಮಾಡಿದ ತಪ್ಪನ್ನು ಎತ್ತಿ ತೋರಿಸಿದ್ದರು.

    ಅಷ್ಟೇ ಅಲ್ಲದೇ ಬಿಗ್‍ಬಾಸ್ ನೀಡಿದ್ದ ‘ಸೇಬು ಬೇಕಾ ಸೇಬು’ ಟಾಸ್ಕ್ ಅನ್ನು ಕುಂದಾಪುರದ ಶೈಲಿಯಲ್ಲಿ ಆಪಲ್ ಮಾರಾಟ ಮಾಡಿ ಮನೆಗೆ ಅಧಿಕ ಪಾಯಿಂಟ್‍ಗಳನ್ನು ತಂದು ಕೊಟ್ಟಿದ್ದರು. ಹೀಗಾಗಿ ಸುದೀಪ್ ಅವರು ಭೂಮಿ ಶೆಟ್ಟಿಗೆ ಚೆನ್ನಾಗಿ ಈ ವಾರ ಆಟ ಆಡಿದ್ದೀರಿ ಎಂದು ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟಿದ್ದಾರೆ.