Tag: ಭೂಮಿ ಶೆಟ್ಟಿ

  • ಗ್ರ್ಯಾಂಡ್ ಫಿನಾಲೆಯಲ್ಲಿ ಭೂಮಿ ಔಟ್ – 1 ಲಕ್ಷ ಬಹುಮಾನ

    ಗ್ರ್ಯಾಂಡ್ ಫಿನಾಲೆಯಲ್ಲಿ ಭೂಮಿ ಔಟ್ – 1 ಲಕ್ಷ ಬಹುಮಾನ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಗ್ಯ್ರಾಂಡ್ ಫಿನಾಲೆಯಲ್ಲಿ ಮೊದಲನೆಯದಾಗಿ ಭೂಮಿ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ.

    ಶನಿವಾರ ಗ್ರ್ಯಾಂಡ್ ಫಿನಾಲೆಯಲ್ಲಿದ್ದ ಐವರಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಎಲಿಮಿನೇಟ್ ಆಗಿದ್ದಾರೆ. ಭೂಮಿ ಬಿಗ್‍ಬಾಸ್ ಮನೆಯಲ್ಲಿ ಕಿರಿಯ ಸದಸ್ಯರಾಗಿದ್ದರೂ ಒಳ್ಳೆಯ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಬಿಗ್‍ಬಾಸ್ ಯಾವುದೇ ಫಿಸಿಕಲ್ ಟಾಸ್ಕ್ ನೀಡಿದರೂ ಮನೆಯ ಗಂಡುಮಕ್ಕಳಿಗೂ ಕೂಡ ಕಾಂಪಿಟೇಶನ್ ಕೊಟ್ಟಿದ್ದರು.

    ಭೂಮಿ ಶೆಟ್ಟಿ ಕೊನೆಯ ಹಂತದವರೆಗೂ ಎಲ್ಲರ ಮನಗೆದ್ದು, ವೀಕ್ಷಕರಿಂದ ವೋಟ್ ಪಡೆದು ಫಿನಾಲೆ ತಲುಪಿದ್ದರು. ಗ್ಯ್ರಾಂಡ್ ಫಿನಾಲೆಯಲ್ಲಿ ಮೊದಲನೆಯದಾಗಿ ಎಲಿಮಿನೇಟ್ ಆಗಿದ್ದಾರೆ. ಭೂಮಿ ಶೆಟ್ಟಿ ಕೆಲವು ವಾರಗಳು ತುಂಬಾ ಸೈಲೆಂಟ್ ಆಗಿ ಇದ್ದರು. ಹೀಗಾಗಿ ಅವರು ಗೆಲ್ಲುವ ಅವಕಾಶ ಕಳೆದುಕೊಂಡರು ಎನ್ನಲಾಗಿದೆ.

    ಭೂಮಿ ಶೆಟ್ಟಿ ಎಲಿಮಿನೇಟ್ ಆಗಿ ಬಿಗ್‍ಬಾಸ್ ವೇದಿಕೆಯ ಮೇಲೆ ಬಂದು ಬಿಗ್‍ಬಾಸ್ ಮನೆಯಲ್ಲಿದ್ದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಭೂಮಿಗೆ ಅಯ್ಯಂಗಾರ್ ಪುಳಿಯೋಗರೆ ಮಾಲೀಕರು ಬಂದು ಒಂದು ಲಕ್ಷ ಬಹುಮಾನ ಕೊಟ್ಟಿದ್ದಾರೆ. ಇನ್ನೂ ವಾಸುಕಿ ವೈಭವ್, ಶೈನ್ ಶೆಟ್ಟಿ ಮತ್ತು ಕುರಿ ಪ್ರತಾಪ್ ಟಾಪ್ ಮೂರು ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಅವರ ಪೈಕಿ ಭಾನುವಾರದ ಫಿನಾಲೆ ಎಪಿಸೋಡ್‍ನ ಆರಂಭದಲ್ಲಿಯೇ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಆ ಇಬ್ಬರಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳು ಬಿಗ್‍ಬಾಸ್‍ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಭೂಮಿ ಶೆಟ್ಟಿಗಾಗಿ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಹುಡುಗಿಯರ ವೇಷ ಹಾಕಿಕೊಂಡು ಬಿಗ್‍ಮನೆಯಲ್ಲಿ ಓಡಾಡಿದ್ದಾರೆ.

    ಸ್ಪರ್ಧಿಗಳು ಈ ವಾರ ಮಾತ್ರ ಬಿಗ್‍ಬಾಸ್ ಮನೆಯಲ್ಲಿರುತ್ತಾರೆ. ಹೀಗಾಗಿ ಬಿಗ್ ಮನೆಯಲ್ಲಿ ನಿಮಗೆ ಈಡೇರಬೇಕಾದ ಯಾವುದಾದರೂ ಆಸೆ ಇದ್ದರೆ ತಿಳಿಸಿ ಎಂದು ಬಿಗ್‍ಬಾಸ್ ಹೇಳಿದ್ದರು. ಆಗ ಭೂಮಿ ಹುಡುಗರು ಹುಡುಗಿಯರ ರೀತಿ ಬಟ್ಟೆ ಧರಿಸಿಕೊಂಡು ಮನೆಯಲ್ಲಿ ಓಡಾಡಬೇಕು, ಹುಡುಗಿಯರು ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಓಡಾಡಬೇಕು ಎಂಬ ಆಸೆಯನ್ನು ಬಿಗ್‍ಬಾಸ್‍ಗೆ ತಿಳಿಸಿದ್ದರು.

    ಅದರಂತಯೇ ಬಿಗ್‍ಬಾಸ್ ಒಂದು ಗಂಟೆಯ ಕಾಲ ಪುರುಷರು ಮಹಿಳೆಯರ ರೀತಿ ಉಡುಪು ಧರಿಸಿಕೊಂಡು ಬಿಗ್‍ಬಾಸ್ ಮನೆಯಲ್ಲಿ ಓಡಾಡಬೇಕು ಎಂದು ತಿಳಿಸಿದ್ದರು. ಭೂಮಿಗಾಗಿ ಕುರಿ ಪ್ರತಾಪ್, ಶೈನ್ ಶೆಟ್ಟಿ ಮತ್ತು ವಾಸುಕಿ ಮೂವರು ಹುಡುಗಿಯ ರೀತಿ ಉಡುಪು ಧರಿಸಿಕೊಂಡು, ಧ್ವನಿ ಬದಲಾಯಿಸಿಕೊಂಡು ಮಾತನಾಡಿದ್ದಾರೆ. ಆಗ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು, ಮೀಸೆ ಬರೆದುಕೊಂಡು ಹುಡುಗಿಯರ ವೇಷದಲ್ಲಿದ್ದ ಮೂವರು ಹುಡುಗರನ್ನು ರೇಗಿಸುತ್ತಿದ್ದರು.

    ಸೋಫಾ ಮೇಲೆ ಕುಳಿತು ಮಾತನಾಡುತ್ತಿದ್ದಾಗ ವಾಸುಕಿ ಯಾರೋ ಒಬ್ಬರ ಚಟಕ್ಕೆ ನಾವು ಎಷ್ಟು ಜನ ಬಲಿಯಾಗಿದ್ದೀವಿ ನೋಡಿ ಎಂದು ಬೇಸರದಿಂದ ಹೇಳಿದ್ದಾರೆ. ಒಂದು ಗಂಟೆಯಾದ ತಕ್ಷಣ ಕುರಿ ಪ್ರತಾಪ್, ಶೈನ್, ವಾಸುಕಿ ಮೂವರು ಭೂಮಿಗೆ ತಮಾಷೆಯಿಂದ ಹೊಡೆದಿದ್ದಾರೆ. ಇದೊಂದು ಆಸೆನಾ, ನಮ್ಮ ಪರಿಸ್ಥಿತಿ ನೋಡು ಹೇಗಿದೆ, ನೀನು ಬೇಕಿದ್ದರೆ ಇಡೀ ದಿನ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು ಓಡಾಡಬೇಕಿತ್ತು ಎಂದು ಬೈದಿದ್ದಾರೆ.

  • ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ಸದಸ್ಯರು

    ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ಸದಸ್ಯರು

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ.

    ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ಎಲ್ಲರೂ ಮನೆಯೊಳಗೆ ಹೋಗಿ ಕುಳಿತುಕೊಂಡು ಕೆಲಕಾಲ ಮಾತನಾಡಿದ್ದಾರೆ.

    ರಘು ದೀಕ್ಷಿತ್ ಮನೆಯಿಂದ ಹೋದ ಬಳಿಕ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಅಡುಗೆ ಮನೆಯಲ್ಲಿದ್ದರು. ಭೂಮಿ ಸೋಫಾ ಮೇಲೆ ಮಲಗಿದ್ದು, ಶೈನ್ ಭೂಮಿ ಪಕ್ಕದಲ್ಲಿ ಕುಳಿತಿದ್ದರು. ಆಗ ಭೂಮಿ, ನನಗೆ ಒಂಥರಾ ಆಗುತ್ತಿದೆ, ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಾಮಿಟ್ ಬರೋತರ ಆಗುತ್ತಿದೆ ಎಂದು ಹೇಳಿದ್ದಾರೆ.

    ಆಗ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಅಯ್ಯೋ ಇನ್ನೂ ಮೂರು ದಿನ ಇರುವುದಕ್ಕೂ ಆಗುವುದಿಲ್ಲವೆನೋ ಎಂದು ರೇಗಿಸುತ್ತಾ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ತಂದು ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಶೈನ್ ತಮಾಷೆಗೆ ಆಕೆಯ ಸೂಟ್‍ಕೇಸ್, ಬಟ್ಟೆ ತಂದು ಕೊಟ್ಟಿದ್ದಾರೆ.

    ಜೋಪಾನವಾಗಿ ಹೋಗು, ಹೊರಗಡೆ ಸಿಗೋಣ. ತುಂಬಾ ಚೆನ್ನಾಗಿ ಆಟವಾಡಿದ್ದೀಯಾ, ವಾರ ವಾರ ದಪ್ಪ ಆಗಿದ್ದೀಯಾ, ನಿನಗೆ ಹೊರಗಡೆ ಉಜ್ವಲವಾದ ಭವಿಷ್ಯವಿದೆ. ಹೋಗುವಾಗ ಬಿಗ್‍ಬಾಸ್ ಆಸ್ಪತ್ರೆಗೆ ತೋರಿಸುತ್ತಾರೆ ಎಂದು ಶೈನ್ ರೇಗಿಸಿದ್ದಾರೆ. ಕೊನೆಗೆ ತಿಂಡಿ ಜಾಸ್ತಿ ತಿಂದಿದ್ದಕ್ಕೆ ಈ ರೀತಿ ಆಗಿದೆ ಎಂದು ಭೂಮಿ ಒಪ್ಪಿಕೊಂಡಿದ್ದಾರೆ. ನಂತರ ಭೂಮಿಯನ್ನು ಬಿಗ್‍ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.

  • ಶೈನ್, ಭೂಮಿ ಮಧ್ಯೆ ಜಗಳ- ಯಾರ ಜೊತೆನೂ ಕ್ಲೋಸ್ ಆಗ್ಬಾರ್ದು ಎಂದ ಶೈನ್

    ಶೈನ್, ಭೂಮಿ ಮಧ್ಯೆ ಜಗಳ- ಯಾರ ಜೊತೆನೂ ಕ್ಲೋಸ್ ಆಗ್ಬಾರ್ದು ಎಂದ ಶೈನ್

    ಬೆಂಗಳೂರು: ಬಿಗ್‍ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ.

    ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್‍ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್‍ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ.

    ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ ಪ್ರತಾಪ್ ಐವರು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಶೈನ್, ಸ್ನಾನ ಆದ ನಂತರ ಬಾತ್‍ರೂಮ್‍ನಿಂದ ಬಟ್ಟೆ ತೆಗೆದುಕೊಂಡು ಬರುವ ಅಭ್ಯಾಸವೇ ಇಲ್ಲವೇ ಎಂದು ಭೂಮಿಯನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಭೂಮಿ, ಯಾವತ್ತಾದ್ರೂ ಈ ರೀತಿ ಆಗಿದೆಯಾ. ಏನೋ ಗಡಿಬಿಡಿಯಲಿ ಮರೆತೆ. ಅದನ್ನ ಹೈ-ಲೈಟ್ ಮಾಡಬೇಡ ಎಂದು ಕೋಪದಿಂದ ಹೇಳಿದರು.

    ಆಗ ಗರಂ ಆದ ಶೈನ್, ಹೈ-ಲೈಟ್ ಮಾಡೋದಾ. ಇಲ್ಲಿವರೆಗೂ ನಾನು ಎಲ್ಲಿ ಹೇಳಿದ್ದೀನಿ. ನೀನು ಮತ್ತು ಕಿಶನ್ ಒಂದೇ ರೀತಿ ಹೇಳುತ್ತೀರಾ. ನಾನು ದೀಪಿಕಾಗೆ ನಿಮ್ಮ ಬಟ್ಟೆನಾ ಎಂದು ಕೇಳಿದ್ದೆ. ಅದಾನಂತರ ಈಗಲೇ ಮೊದಲ ಬಾರಿಗೆ ನಿನಗೆ ಹೇಳಿದ್ದು. ಇದರಲ್ಲಿ ಹೈ-ಲೈಟ್ ಮಾಡಿ ನನಗೆ ಏನು ಸಿಗಬೇಕಿಲ್ಲ ಎಂದು ರೇಗಾಡಿದರು. ಅದಕ್ಕೆ ಭೂಮಿಯೂ ಗರಂ ಆಗಿ, ನೀನು ಮೊದಲೂ ಹೇಳಿದ್ದೀಯಾ, ನಾನು ತಪ್ಪು ಮಾಡಿದ್ರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ನೀನು ನನಗೆ ಹೇಳಿದಿಯಾ. ಅದನ್ನು ಒಪ್ಪಿಕೋ ಎಂದಿದ್ದಾರೆ.

    ಆಗ ಶೈನ್ ಯಾವಾಗ ಹೇಳಿದ್ದೆ? ಯಾರಿಗೆ ಹೇಳಿದ್ದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ರೀತಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ಇಬ್ಬರೂ ಮಾತನಾಡದೇ ಸುಮ್ಮನಾಗಿದ್ದಾರೆ. ಇದರಿಂದ ಬೇಸರಗೊಂಡ ಶೈನ್ ಹೊರಗಡೆ ಕುಳಿತಿದ್ದರು. ಆಗ ದೀಪಿಕಾ ಬಂದು ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ.

    ನಾವು ಯಾರ ಜೊತೆನೂ ಕ್ಲೋಸ್ ಆಗಬಾರದು. ಅದರಿಂದ ಸಲುಗೆ ಬೆಳೆಯುತ್ತದೆ. ಆದರೆ ನಾನು ತಮಾಷೆಗೆ ಹೇಳಿದ್ದು, ಹೈ-ಲೈಟ್ ಮಾಡಬೇಡಿ ಎಂದಿದ್ದಕ್ಕೆ ಬೇಸರವಾಯಿತು. ಅವರ ಬಟ್ಟೆ ಅಲ್ಲಿದೆ ಎಂದು ಹೇಳಿದರೆ ನನಗೆ ಏನು ಸಿಗುತ್ತದೆ. ನಿಜಾ ಹೈ-ಲೈಟ್ ಮಾಡಬೇಡಿ ಎಂದಾಗ ತುಂಬಾ ಬೇಸರವಾಯಿತು. ಭೂಮಿ ಬಟ್ಟೆ ಅಲ್ಲಿದೆ-ಇಲ್ಲಿದೆ ಎಂದು ಹೇಳಿದರೆ ನನಗೆ ಏನಾಗುತ್ತೆ. ಭೂಮಿ ಆಗಿದ್ದಕ್ಕೆ ಹೇಳಿದ್ದು, ಬೇರೆ ಯಾರಾಗಿದ್ದರೂ ಹೇಳುತ್ತಿರಲಿಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ.

    ಕೊನೆಗೆ ದೀಪಿಕಾ ಇರುವುದು ಇನ್ನೂ ಮೂರು ದಿನ ಇಬ್ಬರೂ ಕೋಪ ಮಾಡಿಕೊಳ್ಳಬೇಡಿ ಎಂದು ಸಮಾಧಾನ ಮಾಡಿದ್ದಾರೆ.

  • ಇಲ್ಲಿಂದ ಹೋದ ನಾಲ್ಕೇ ದಿನಕ್ಕೆ ನನ್ನ ಮದ್ವೆ ಮಾಡ್ತಾರೆ: ಭೂಮಿ ಶೆಟ್ಟಿ

    ಇಲ್ಲಿಂದ ಹೋದ ನಾಲ್ಕೇ ದಿನಕ್ಕೆ ನನ್ನ ಮದ್ವೆ ಮಾಡ್ತಾರೆ: ಭೂಮಿ ಶೆಟ್ಟಿ

    ಬೆಂಗಳೂರು: ನೀವೆಲ್ಲ ಹೀಗೆ ಹೇಳ್ತಾ ಇದ್ದರೆ ಬಿಗ್‍ಬಾಸ್ ಮನೆಯಿಂದ ಹೊರ ಹೋದ ನಾಲ್ಕೇ ದಿನಕ್ಕೆ ನನ್ನ ಮದುವೆ ಮಾಡಿಸ್ತಾರೆ ಎಂದು ಭೂಮಿ ಶೆಟ್ಟಿ ಹೇಳಿಕೊಂಡಿದ್ದಾರೆ.

    ಬಿಗ್‍ಬಾಸ್ ಫಿನಾಲೆಗೆ ಮೂರು ದಿನಗಳು ಮಾತ್ರ ಉಳಿದಿದ್ದು, ಟಾಪ್ ಫೈವ್ ಸ್ಪರ್ಧಿಗಳಲ್ಲಿ ಭೂಮಿ ಶೆಟ್ಟಿ ಸಹ ಒಬ್ಬರು. ಕೊನೆಯ ವಾರ ಆಗಿದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳಿಗೆ ಹೆಚ್ಚು ಟಾಸ್ಕ್ ಗಳು ಸಿಗುತ್ತಿಲ್ಲ. ಬದಲಾಗಿ ಹಳೆಯ ಸ್ಪರ್ಧಿಗಳನ್ನು ಮನೆಗೆ ಕರೆ ತರುವ ಮೂಲಕ ಫೈನಿಲಿಸ್ಟ್ ಗಳಿಗೆ  ಸರ್ಪ್ರೈಸ್ ನೀಡಲಾಗುತ್ತಿದೆ. ಗೆಸ್ಟ್ ಬಂದು ಹೋದ ನಂತರ ಸ್ಪರ್ಧಿಗಳು ತಮ್ಮ ಹಳೆಯ ಮಾತುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.

    ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಅಡುಗೆ ಮಾಡುತ್ತಿರುವಾಗ ಯಾರು, ಯಾರಿಗೆ ಮತ್ತು ಯಾವಾಗ ಹೇಳಿದ್ರು ಅನ್ನೋ ಟಾಸ್ಕ್ ವಾಸುಕಿ ನೀಡಿದರು. ಈ ಟಾಸ್ಕ್ ನಲ್ಲಿ ಸ್ಪರ್ಧಿಗಳ ಹಳೇ ಹೇಳಿಕೆಗಳನ್ನು ಒಬ್ಬರು ಹೇಳೋದು. ಉಳಿದವರು ಯಾರು, ಯಾರಿಗೆ ಮತ್ತು ಯಾವಾಗ ಹೇಳಿದ್ರು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅಡುಗೆ ಮಾಡುತ್ತಿದ್ದ ಶೈನ್ ಶೆಟ್ಟಿ, ನಮ್ಮ ಮನೆಯಲ್ಲಿ ಯಾರನ್ನ ತೋರಿಸ್ತಾರೋ ಅವರನ್ನೇ ಮದ್ವೆ ಆಗೋದು ಎಂದರು. ಆಗ ಎಲ್ಲರೂ ಇದು ಭೂಮಿ ಹೇಳಿದ್ದು ಅಂತಾ ಉತ್ತರಿಸಿದರು. ಇತ್ತ ಕುರಿ ಪ್ರತಾಪ್, ನಾನ್ ಇಲ್ಲಿಂದ ಆಚೆ ಹೋದ್ಮೇಲೆ ಮದ್ವೆ ಆಗ್ತೀನಿ ಎಂದು ಹೇಳಿದ್ದು ಯಾರು ಅಂದ್ರು. ಮನೆಯ ಇತರ ಸದಸ್ಯರು ಭೂಮಿ ಹೆಸರನ್ನು ಹೇಳಿದರು.

    ನನಗೆ ಮದುವೆ ಮಾಡಿಕೊಳ್ಳಲು ಇಷ್ಟ. ಆದ್ರೆ ಮನೆಯಲ್ಲಿ ನಾನು ಮದುವೆ ಆಗ್ತೀನಿ ಹೇಗೆ ಹೇಳಲಿ ಎಂದು ಭೂಮಿ ಶೆಟ್ಟಿ ಶೈಲಿಯಲ್ಲಿ ಕುರಿ ಪ್ರತಾಪ್ ಹೇಳಿದರು. ಮಧ್ಯೆ ಪ್ರವೇಶಿಸಿದ ದೀಪಿಕಾ, ಅವರಿಗೆಲ್ಲ ಯಾಕೆ ಹೇಳಿದೆ. ನಮಗೆ ಹೇಳಿದ್ರೆ ನಾವ್ ಮದುವೆ ಮಾಡಿಸ್ತಾ ಇರಲಿಲ್ವಾ ಎಂದು ನಿಮ್ಮ ಪೋಷಕರು ಪ್ರಶ್ನಿಸುತ್ತಾರೆ ಅಂದರು. ಎಲ್ಲರ ಮಾತು ಕೇಳಿದ ಭೂಮಿ ಶೆಟ್ಟಿ, ನೀವೆಲ್ಲ ಹೀಗೆ ಹೇಳ್ತಾ ಇದ್ದರೆ, ಇಲ್ಲಿಂದ ಹೋದ ನಾಲ್ಕೇ ದಿನದಲ್ಲಿ ನನ್ನ ಮದುವೆ ಆಗುತ್ತೆ ಎಂದು ಎಲ್ಲರನ್ನು ಸುಮ್ಮನಾಗಿಸಿದರು.

  • ಇವರಿಬ್ಬರೂ ಗಂಡ-ಹೆಂಡ್ತಿ ಆಗ್ತಾರಾ: ಹರೀಶ್ ರಾಜ್

    ಇವರಿಬ್ಬರೂ ಗಂಡ-ಹೆಂಡ್ತಿ ಆಗ್ತಾರಾ: ಹರೀಶ್ ರಾಜ್

    ಬೆಂಗಳೂರು: ಶೈನ್ ಶೆಟ್ಟಿ ಮತ್ತು ಭೂಮಿ ಶೆಟ್ಟಿ ಜಗಳ ಮಾಡಿಕೊಂಡೆ ಗಂಡ-ಹೆಂಡತಿ ಆಗುತ್ತಾರಾ ಎಂಬ ಅನುಮಾನ ಇದೆ ಅಂತಾ ಹರೀಶ್ ರಾಜ್ ಹೇಳಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಕೆಲವು ವಾರಗಳಿಂದ ಶೈನ್ ಶೆಟ್ಟಿ ಮತ್ತು ಭೂಮಿ ಸದಾ ಒಟ್ಟಿಗೆ ಇರುತ್ತಾರೆ. ಆಗಾಗ ತಮಾಷೆ, ಜಗಳ ಮಾಡಿಕೊಂಡು ಮನೆಯಲ್ಲಿ ಲವಲವಿಕೆಯಿಂದ ಇದ್ದಾರೆ. ಅಲ್ಲದೇ ನಾವಿಬ್ಬರೂ ಗಂಡ-ಹೆಂಡತಿ ಎಂದು ತಮಾಷೆ ಮಾಡಿಕೊಂಡು ರೇಗಿಸುತ್ತಿದ್ದರು. ಈ ವಿಚಾರ ಮನೆಯ ಸದಸ್ಯರಿಗೂ ತಿಳಿದಿದೆ.

    ಬುಧವಾರ ಅಡುಗೆ ಮನೆಯಲ್ಲಿ ಶೈನ್, ಭೂಮಿ ಮತ್ತು ವಾಸುಕಿ ಮಾತನಾಡಿಕೊಂಡು ನಿಂತಿದ್ದರು. ಆಗ ಶೈನ್ ತಮಾಷೆಗೆ ಭೂಮಿ ತಲೆಯ ಮೇಲೆ ಹೊಡೆದು ಓಡಿ ಹೋಗಿದ್ದಾರೆ. ಆಗ ಭೂಮಿ, ಶೈನ್ ಶೆಟ್ಟಿಯನ್ನು ಓಡಿಸಿಕೊಂಡು ಹೋಗಿದ್ದರು. ಮತ್ತೆ ಬಿಗ್‍ಬಾಸ್ ನೀಡಿದ್ದ ಟಾಸ್ಕ್ ಮುಗಿಸಿ ದೀಪಿಕಾ, ಪ್ರಿಯಾಂಕಾ ಮತ್ತು ಭೂಮಿ ಅಡುಗೆ ಮನೆಯಲ್ಲಿ ಮಾತನಾಡುತ್ತಿದ್ದರು. ಇತ್ತ ವಾಸುಕಿ, ಹರೀಶ್ ರಾಜ್ ಮತ್ತು ಕುರಿ ಪ್ರತಾಪ್ ಸೋಫಾ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದರು.

    ಈ ವೇಳೆ ಶೈನ್ ಹಿಂದೆಯಿಂದ ಬಂದು ಭೂಮಿಯನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಭೂಮಿ ಮಿರರ್ ಇರುವುದು ಏನಿಕ್ಕೋ ಎಂದು ಬೈದಿದ್ದಾರೆ. ಇದರಿಂದ ಕೋಪಗೊಂಡ ಶೈನ್ ಮತ್ತೆ ಭೂಮಿ ತಲೆ ಮೇಲೆ ಹೊಡೆದು ಓಡಿ ಹೋಗಿದ್ದಾರೆ.

    ಆಗ ಮತ್ತೆ ಭೂಮಿ, ಶೈನ್ ಶೆಟ್ಟಿಯನ್ನು ಓಡಿಸಿಕೊಂಡು ಹೊಡೆಯಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರು ತಮಾಷೆಗೆ ಗುದ್ದಾಡಿಕೊಂಡಿದ್ದಾರೆ. ಇದನ್ನು ನೋಡಿದ ಹರೀಶ್ ರಾಜ್ ಅವರು, ಇದ್ಯಾಕೋ ಇವರು ಈ ರೀತಿ ಜಗಳ ಮಾಡಿಕೊಂಡೇ ಭೂಮಿ ಹೇಳುವ ರೀತಿ ಇವರಿಬ್ಬರೂ ಗಂಡ-ಹೆಂಡತಿ ಆಗುತ್ತಾರಾ ಎಂಬ ಡೌಟ್ ಇದೆ ಎಂದಿದ್ದಾರೆ. ಇದನ್ನು ಕೇಳಿಸಿಕೊಂಡು ಕುರಿ ಪ್ರತಾಪ್ ಮತ್ತು ವಾಸುಕಿ ನಕ್ಕಿದ್ದಾರೆ.

  • ನಾನು ಹಾಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿಯಲ್ಲ: ಶೈನ್ ಬೇಸರ

    ನಾನು ಹಾಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿಯಲ್ಲ: ಶೈನ್ ಬೇಸರ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಶುರುವಾದಾಗಿನಿಂದ ವಾಸುಕಿ ವೈಭವ್ ಮತ್ತು ಶೈನ್ ಶೆಟ್ಟಿ ಇಬ್ಬರು ಒಳ್ಳೆಯ ಗೆಳೆಯರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಶೈನ್, ನಾನು ಹಾಕ್ಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿ ಅಲ್ಲ ಎಂದು ವಾಸುಕಿಗೆ ಹೇಳಿದ್ದಾರೆ.

    ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಶೈನ್, ವಾಸುಕಿ ಮತ್ತು ಭೂಮಿ ಮಾತನಾಡುತ್ತಿದ್ದರು. ಆಗ ಶೈನ್, ಫೈನಲ್ ಹತ್ತಿರ ಬರುತ್ತಿದ್ದಂತೆ ನೀವು ಹಾಕೊಡುತ್ತಿದ್ದೀರಾ, ಬೇಕಿದ್ದರೆ ಭೂಮಿ ಹತ್ತಿರ ಕೇಳಿ ಎಂದು ವಾಸುಕಿ ನನಗೆ ಹೇಳಿದ್ದಾರೆ. ನಾನು ನಿಮ್ಮ ಮತ್ತು ಅವರ ಮಧ್ಯೆ ಹಾಕೊಡುತ್ತಿದ್ದೀನಾ ಎಂದು ಬೇಸರದಿಂದ ಭೂಮಿ ಹತ್ತಿರ ಕೇಳಿದ್ದಾರೆ.

    ಆಗ ಭೂಮಿ ಹಾಗೇನು ಇಲ್ಲಾ ಶೈನ್. ಹರೀಶ್ ಸರ್ ಭೂಮಿ ಯಾವಾಗಲೂ ವಾಸುಕಿ ಹಿಂದೆ ಹೋಗುತ್ತಾಳೆ. ವಾಸುಕಿಗೆ ಹಾರ್ಡ್ ಡಿಸ್ಕ್ ಆಗಿದ್ದಾಳೆ ಎಂದು ಹೇಳಿದ್ದರು. ಬಳಿಕ ಪ್ರಿಯಾಂಕಾ ಅಮ್ಮ ಬಂದು ಹೋದ ನಂತರ ನೀನು ಯಾರೇ ಬಂದು ಹೋದರೂ ಅವರಿಬ್ಬರು ಹೇಗೆ ಕೂತಿದ್ದಾರೆ ನೋಡಿ ಎಂದಿದ್ದೆ. ಮತ್ತೆ ನೀನು ಕ್ಯಾಪ್ಟನ್ ಆದಾಗ ಹಾರ್ಡ್ ಡಿಸ್ಕ್ ಹೋಗುತ್ತಿದ್ದಾಳೆ ಎಂದು ಹೇಳಿದ್ದೆ ಅದಕ್ಕೆ ಬೇಸರವಾಗಿದ್ದು ಎಂದು ಹೇಳಿದ್ದಾರೆ.

    ಅದಕ್ಕೆ ಶೈನ್, ನಾನು ತಮಾಷೆ ಮಾಡಿದ್ದು, ಮೆಮೊರಿ ಟಾಸ್ಕ್ ನಲ್ಲಿ ನೀನು ತುಂಬಾ ಚೆನ್ನಾಗಿ ಆಟವಾಡಿದ್ದೆ. ಜೊತೆಗೆ ವಾಸುಕಿ ಯಾವುದೇ ಹಾಡು ಹೇಳಿದರೂ ನೆನಪಿನಲ್ಲಿಟ್ಟುಕೊಳ್ಳುತ್ತೀಯಾ, ಹೀಗಾಗಿ ನಾನು ಭೂಮಿ ಹಾರ್ಡ್ ಡಿಸ್ಕ್ ರೀತಿ, ಎಲ್ಲವನ್ನು ನೆನಪಿಕೊಟ್ಟುಕೊಳ್ಳುತ್ತಾರೆ ಎಂದು ಹೇಳಿದ್ದು. ಅದನ್ನ ಹಾಕೊಡುವುದು ಎಂದು ಹೇಳುತ್ತಾರಾ ಎಂದು ಭೂಮಿಗೆ ಪ್ರಶ್ನೆ ಮಾಡಿದ್ದಾರೆ.

    ನಾನಲ್ಲ ವಾಸುಕಿ ಹೇಳಿದ್ದು ಎಂದು ಭೂಮಿ ಹೇಳಿದ್ದಾರೆ. ಅದಕ್ಕೆ ಶೈನ್, ಎಲ್ಲವನ್ನು ನೆನಪಿಟ್ಟುಕೊಳ್ಳುತ್ತೀಯಾ ಎಂಬರ್ಥದಲ್ಲಿ ನಾನು ಹಾರ್ಡ್ ಡಿಸ್ಕ್ ಅಂತ ಹೇಳಿದ್ದು, ಅದು ಬಿಟ್ಟರೆ ನಿನ್ನ ಮತ್ತು ವಾಸುಕಿ ಮಧ್ಯೆ ಹಾಕೊಡಬೇಕು ಎಂದು ಹೇಳಿಲ್ಲ. ನಿಜವಾಗಲೂ ವಾಸುಕಿ ಫೈನಲ್ ಹತ್ತಿರ ಬರುತ್ತಿರಬಹುದು ಆದರೆ  ನಾನು ಹಾಕ್ಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿ ಅಲ್ಲ ಎಂದು ಶೈನ್ ಬೇಸರದಿಂದ ಹೇಳಿದ್ದಾರೆ.

  • ಮಗಳಿಗೆ ವಾರ್ನ್ ಮಾಡಿ ಪ್ರತಾಪ್‍ಗೆ ಧನ್ಯವಾದ ತಿಳಿಸಿದ ಪ್ರಿಯಾಂಕಾ ತಾಯಿ

    ಮಗಳಿಗೆ ವಾರ್ನ್ ಮಾಡಿ ಪ್ರತಾಪ್‍ಗೆ ಧನ್ಯವಾದ ತಿಳಿಸಿದ ಪ್ರಿಯಾಂಕಾ ತಾಯಿ

    ಬೆಂಗಳೂರು: ಬಿಗ್ ಬಾಸ್ ಮನೆಗೆ ಪ್ರಿಯಾಂಕಾ ಅವರ ತಾಯಿ ಎಂಟ್ರಿ ಕೊಟ್ಟಿದ್ದು, ಈ ವೇಳೆ ತಮ್ಮ ಮಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕುರಿ ಪ್ರತಾಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ಮಂಗಳವಾರ ಮಧ್ಯರಾತ್ರಿ ಪ್ರಿಯಾಂಕಾ ಅವರ ತಾಯಿ ಸುಕನ್ಯ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಈ ವೇಳೆ ಪ್ರಿಯಾಂಕಾ ಜೊತೆ ಮಾತನಾಡಿದ ಅವರು ಮಗಳಿಗೆ ಭೂಮಿ ಜೊತೆ ಪದೇ ಪದೇ ಜಗಳ ಮಾಡ್ಕೋಬೇಡ ಎಂದು ಸಲಹೆ ನೀಡಿದರು. ಪ್ರಿಯಾಂಕಾ ಹಾಗೂ ಭೂಮಿ ಮೊದಲ ವಾರದಿಂದ ಆತ್ಮೀಯ ಸ್ನೇಹಿತರಾಗಿದ್ದು, ಬಳಿಕ ಇಬ್ಬರ ನಡುವೆ ಅಂತರ ಶುರುವಾಯಿತು. ಇದನ್ನು ಗಮನಿಸಿದ ಸುಕನ್ಯ ಅವರು ನನ್ನ ಮಗಳಿಗೆ ಜಗಳವಾಡಬೇಡ, ಕೋಪ ಕಂಟ್ರೋಲ್ ಮಾಡ್ಕೋ ಎಂದು ಹೇಳಿದ್ದಾರೆ.

    ಭೂಮಿ ಜೊತೆ ಮಾತನಾಡಿದ ಬಳಿಕ ಸುಕನ್ಯ ಅವರು ಕುರಿ ಪ್ರತಾಪ್ ಅವರನ್ನು ಹೊಗಳಿದ್ದಾರೆ. ಪ್ರಿಯಾಂಕಾ ಅವರ ತಂದೆ ನಿಧನರಾಗಿ ನಾಲ್ಕು ತಿಂಗಳಾಗಿದೆ. ಈ ಕಾರಣಕ್ಕಾಗಿ ಸುಕನ್ಯ ಅವರು ಪ್ರತಾಪ್ ಅವರ ಬಳಿ ಬಂದು ನಿಮ್ಮಿಂದ ನನ್ನ ಮಗಳು ತನ್ನ ತಂದೆಯನ್ನು ಕಳೆದುಕೊಂಡ ನೋವನ್ನು ಮರೆಯುತ್ತಿದ್ದಾಳೆ ಎಂದು ಅವರಿಗೆ ಧನ್ಯವಾದ ತಿಳಿಸಿದರು. ಸುಕನ್ಯ ಅವರ ಈ ನಡುವಳಿಕೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಡಬಲ್ ಎಲಿಮಿನೇಟ್ -ಗಳಗಳನೇ ಅತ್ತ ಪ್ರಿಯಾಂಕಾ, ಭೂಮಿ

    ಡಬಲ್ ಎಲಿಮಿನೇಟ್ -ಗಳಗಳನೇ ಅತ್ತ ಪ್ರಿಯಾಂಕಾ, ಭೂಮಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ 90 ದಿನಗಳನ್ನು ಮುಗಿಸಿದೆ. ಈ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವು ದಿನಗಳು ಇರುವಾಗಲೇ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಡಬಲ್ ಎಲಿಮಿನೇಟ್ ಆಗಿದ್ದಾರೆ.

    ಹೌದು.ಭಾನುವಾರ ನಟ ಸುದೀಪ್ ಅವರು ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಇಬ್ಬರನ್ನು ಎಲಿಮಿನೇಟ್ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹೀಗಾಗಿ ಈ ವಾರ ಎಲಿಮಿನೇಟ್ ಇರಲಿಲ್ಲ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿರಲಿಲ್ಲ. ಹೀಗಾಗಿ ಮನೆಯವರ ಮನಸ್ಥಿತಿ ತಿಳಿದುಕೊಳ್ಳಲು ನಾಮಿನೇಟ್ ಪ್ರಕ್ರಿಯೆ ಮಾಡಲಾಗಿತ್ತು.

    ಅದರ ಅನುಸಾರ ಪ್ರಿಯಾಂಕಾ, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಈ ನಾಲ್ವರಲ್ಲಿ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿಯನ್ನು ಸುದೀಪ್ ಎಲಿಮಿನೇಟ್ ಮಾಡಿದ್ದಾರೆ.

    ಇವರಲ್ಲಿ ದೀಪಿಕಾ ದಾಸ್ ಅವರನ್ನು ಸೇಫ್ ಎಂದು ಸುದೀಪ್ ಹೇಳಿದರು. ಉಳಿದ ಮೂವರಲ್ಲಿ ಇಂದು ಇಬ್ಬರು ಎಲಿಮಿನೇಟ್ ಆಗುತ್ತಾರೆ. ಭೂಮಿ ಶೆಟ್ಟಿ ಈ ವಾರ ಮೊದಲು ಎಲಿಮಿನೇಟ್ ಆಗುತ್ತಿರುವವರು ಎಂದು ಹೇಳಿದರು. ಇಂದು ಯಾರೇ ಎಲಿಮಿನೇಟ್ ಆದರೂ ವೇದಿಕೆಯ ಮೇಲೆ ಬರಲ್ಲ ಎಂದು ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಕಳೆದ ಭೂಮಿ ಶೆಟ್ಟಿಯ ಜರ್ನಿಯ ವಿಡಿಯೋವನ್ನು ಪ್ಲೇ ಮಾಡಿದರು.

    ವಿಡಿಯೋ ನೋಡಿದ ಭೂಮಿ, ಮನೆಯಿಂದ ಹೊರ ಹೋಗಲು ತುಂಬಾ ನೋವಾಗುತ್ತಿದೆ. ಬಿಗ್‍ಬಾಸ್ ವಾಯ್ಸ್, ಮನೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅದ್ಭುತವಾದ ಅನುಭವ, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ, ಒಳ್ಳೆಯ ಫ್ರೆಂಡ್ಸ್ ಸಿಕ್ಕಿದ್ದಾರೆ. ಖುಷಿಯಿಂದ ಹೋಗುತ್ತೇನೆ ಎಂದು ಗಳಗಳನೇ ಅತ್ತಿದ್ದಾರೆ.

    ಮನೆಯಿಂದ ಹೊರ ಹೋಗುತ್ತಿರುವ ಎರಡನೇ ಸ್ಪರ್ಧಿ ಪ್ರಿಯಾಂಕಾ ಎಂದು ಸುದೀಪ್ ಹೇಳಿದರು. ಬಳಿಕ ಪ್ರಿಯಾಂಕಾ ಅವರ ಬಿಗ್‍ಬಾಸ್ ಜರ್ನಿಯ ವಿಡಿಯೋ ಪ್ಲೇ ಮಾಡಿದರು.

    ವಿಡಿಯೋ ನೋಡಿ ಮಾತನಾಡಿದ ಪ್ರಿಯಾಂಕಾ, ನಿಮ್ಮ ಜೊತೆ ಮಾತನಾಡೋಕೆ ಆಗುತ್ತಿಲ್ಲ ಎಂದು ತುಂಬಾ ನೋವಾಗುತ್ತಿದೆ. ನಾನು ಅತ್ತಾಗ ಮನೆಯ ಎಲ್ಲರೂ ಸಮಾಧಾನ ಮಾಡಿದ್ದಾರೆ. ಹೀಗಾಗಿ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಮನೆಯವರ ಬಳಿ ಕ್ಷಮೆ ಕೇಳಿದರು. ನಂತರ ನನಗೆ ತಿಳಿದ ಹಾಗೆ ಆಟವಾಡಿದ್ದೇನೆ ತಪ್ಪಾಗಿದ್ದರೆ ಸಾರಿ ಸರ್ ಎಂದು ಸುದೀಪ್ ಬಳಿಯೂ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದಾರೆ.

    ಕೊನೆಯ ಕ್ಷಣದಲ್ಲಿ ಸುದೀಪ್ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ನೀವಿಬ್ಬರು ಮನೆಯಿಂದ ಹೊರಗೆ ಬರದೆ ಮನೆಯಲ್ಲಿಯೇ ಇರಿ. ಮುಂದಿನ ಶನಿವಾರ ಮತ್ತೆ ಸಿಗೋಣ ಎಂದು ಹೇಳಿ ಸುದೀಪ್ ಹೋಗಿದ್ದಾರೆ. ಇದನ್ನು ಕೇಳಿದ ತಕ್ಷಣ ಪ್ರಿಯಾಂಕಾ ಮತ್ತು ಭೂಮಿ ಒಂದು ಕ್ಷಣ ಅಚ್ಚರಿ ಪಟ್ಟಿದ್ದಾರೆ. ನಂತರ ಮನೆಯ ಎಲ್ಲಾ ಸ್ಪರ್ಧಿಗಳು ಅವರಿಬ್ಬರನ್ನು ಅಪ್ಪಿಕೊಂಡು ಸಂತಸಪಟ್ಟಿದ್ದಾರೆ.

  • ಅಯ್ಯೋ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ: ಭೂಮಿ ರಿಕ್ವೆಸ್ಟ್

    ಅಯ್ಯೋ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ: ಭೂಮಿ ರಿಕ್ವೆಸ್ಟ್

    ಖಾಸಗಿ ವಾಹಿನಿಯಲ್ಲಿ ನಡೆಯುವ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಭೂಮಿ ತಮ್ಮ ಸಹಸ್ಪರ್ಧಿ ಚೈತ್ರಾ ಕೋಟುರ್ ಗೆ ನಿಮ್ಮ ಕಾಲಿಗೆ ಬೀಳ್ತೀನಿ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಶುಕ್ರವಾರದ ಸಂಚಿಕೆಯಲ್ಲಿ ಭೂಮಿ ಮತ್ತು ವಾಸುಕಿ ವೈಭವ್ ಬೆಂಚ್ ಮೇಲೆ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ ಚೈತ್ರಾ ಕೋಟುರ್ ಸಹ ಅಲ್ಲಿದ್ದರು. ಭೂಮಿ ಮಾತನಾಡುವಾಗ ವಾಸುಕಿ ಆಮೇಲೆ ಹೇಳು. ಈಗ ಬೇಡ, ಚೈತ್ರಾ ಇಲ್ಲಿಯೇ ಇದ್ದಾರೆಂಬ ಸನ್ನೆ ಮಾಡಿದರು. ಆದ್ರೂ ಭೂಮಿ ಮಾತ್ರ ತಮ್ಮ ಮಾತು ಮುಂದುವರಿಸಿದ್ದರು. ಕೊನೆಗೆ ವಾಸುಕಿ ಈಗ ಬೇಡ ಆಮೇಲೆ ಹೇಳು ಎಂದು ಜೋರಾಗಿಯೇ ಹೇಳಿದರು.

    ಅಲ್ಲಿಯೇ ಇದ್ದ ಚೈತ್ರಾ, ಯಾಕೆ ನಾನಿದ್ದರೆ ನಿಮಗೆ ತೊಂದರೆನಾ ಎಂದು ಪ್ರಶ್ನೆ ಮಾಡಿದರು. ಭೂಮಿಯೇ ಹೇಳಲು ಸಿದ್ಧವಿರುವಾಗ ನೀವೇಕೆ ಬೇಡ ಎಂದು ಹೇಳ್ತಿರಿ. ಈ ರೀತಿ ಮಾತನಾಡೋದು ಸರಿ ಅಲ್ಲ. ಹೀಗೆ ಮಾತನಾಡಿದ್ರೆ ನನ್ನ ಸ್ಥಾನದಲ್ಲಿರುವ ಯಾರಿಗೆ ಆದ್ರೂ ಬೇಸರ ಆಗುತ್ತೆ ಎಂದು ಅಸಮಾಧಾನ ಹೊರಹಾಕಿದರು.

    ಮನೆಯ ಎಲ್ಲ ಕಡೆಯೂ ಕ್ಯಾಮೆರಾಗಳಿವೆ. ಇಡೀ ಕರ್ನಾಟಕವೇ ನಿಮ್ಮ ಮಾತನ್ನು ಕೇಳುತ್ತಿರುವಾಗ ನಾನನಿದ್ದರೇನು ನಿಮಗೆ ತೊಂದರೆನಾ? ಭೂಮಿಯೇ ಹೇಳಲು ಸಿದ್ಧವಾಗಿರುವಾಗ ನೀವು ಏಕೆ ಬೇಡ ಎಂದು ಹೇಳುತ್ತೀರಿ. ಭೂಮಿಗೆ ತನ್ನ ಮಾತು ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಈಗ ಬೇಡ ಎಂಬ ನಿಮ್ಮ ಮಾತು ನನಗೆ ನೋವು ತರಿಸಿತು ಎಂದು ಚೈತ್ರಾ ಬೇಸರ ವ್ಯಕ್ತಪಡಿಸಿದರು.

    ಮಾತಿಗೆ ಮಾತು ಕೊಡುವುದು ತುಂಬಾ ಸರಳ. ನಾನು ನಿಮ್ಮ ಮಾತುಗಳಿಗೆ ಇದೂವರೆಗೂ ಪ್ರತಿಕ್ರಿಯಿಸಿಲ್ಲ. ನಿಮ್ಮ ರೀತಿಯೇ ಸಾತ್ವಿಕವಾಗಿ ನಾನು ಮಾತನಾಡಿದ್ರೆ ನಿಮಗೆ ತಡೆದುಕೊಳ್ಳಲು ಆಗಲ್ಲ. ನಿಮ್ಮ ಮಾತುಗಳಿಗೆ ಟಾಂಗ್ ಕೊಡಲು ನನಗೆ ಇಷ್ಟವಿಲ್ಲ ಮತ್ತು ಭೂಮಿ ಹೇಳುವ ಮಾತು ಕೇಳಿಸಿಕೊಳ್ಳಲು ಮನಸ್ಸಿಲ್ಲ ಎಂದು ಚೈತ್ರಾಗೆ ವಾಸುಕಿ ವೈಭವ್ ಉತ್ತರ ನೀಡಿದರು.

    ಕೊನೆಗೆ ಚೈತ್ರಾ ಅಲ್ಲಿಂದ ಬಾತ್‍ರೂಮಿಗೆ ತೆರಳಿದರು. ಚೈತ್ರಾ ಅಲ್ಲಿಂದ ಹೋಗುತ್ತಿದ್ದಂತೆ ವಾಸುಕಿ, ನಿನಗೆ ನಾನು ಹೇಳಿದ್ದು ಕೇಳಿಸಲಿಲ್ವಾ? ಎಂದು ಭೂಮಿಗೆ ಕ್ಲಾಸ್ ತೆಗೆದುಕೊಂಡರು. ಇಷ್ಟರಲ್ಲಿಯೇ ಚೈತ್ರಾ ಮತ್ತೆ ಹೊರಗೆ ಬಂದರು. ನನಗೆ ಯಾರ ಭಯವೂ ಇಲ್ಲ ಎಂದು ವಾಸುಕಿ ಹೇಳುತ್ತಿದ್ದಾಗ ಇಬ್ಬರ ಮಧ್ಯೆ ಪ್ರವೇಶಿಸಿದ ಚೈತ್ರಾ ಮತ್ತೆ ಸ್ಪಷ್ಟನೆ ಕೊಡಲು ಮುಂದಾದರು. ಕೊನೆಗೆ ಭೂಮಿಯೇ, ಅಯ್ಯೋ ಚೈತ್ರಾ ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ ಎಂದು ಹೇಳಿ ಇಬ್ಬರ ಕೋಳಿ ಜಗಳಕ್ಕೆ ಅಂತ್ಯ ಹಾಡಿದರು.