Tag: ಭೂಮಿ ಶೆಟ್ಟಿ

  • ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prasanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ʻಜೈ ಹನುಮಾನ್ʼ (Jai Hanuman) ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್ಹೀರೋ ಯೂನಿವರ್ಸ್‌ನ 3ನೇ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ವರ್ಮಾ. ಇದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯನ್ನು ಹೊಂದಿರಲಿದೆ. ಈ ಚಿತ್ರಕ್ಕೆ ʻಮಹಾಕಾಳಿʼ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

    ಕುಂದಾಪುರದ ಬೆಡಗಿಗೆ ಭೂಮಿ ಶೆಟ್ಟಿ (Bhoomi Shetty) ಮಹಾಕಾಳಿ ಅವತಾರವೆತ್ತಿದ್ದಾರೆ. ಫಸ್ಟ್ ಲುಕ್‌ನಲ್ಲಿ ಭೂಮಿ ಶೆಟ್ಟಿ ಮುಖವನ್ನು ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಅಲಂಕಾರಗೊಳಿಸಲಾಗಿದೆ. ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟು ದೈವಿಕ ಅನುಭವ ನೀಡುವ ಗೆಟಪ್ ನಲ್ಲಿ ಭೂಮಿ ಕಾಣಿಸಿಕೊಂಡಿದ್ದಾರೆ.

    ಪ್ರಶಾಂತ್ ವರ್ಮಾ ತಮ್ಮದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿ ಮಹಾಕಾಳಿ ಚಿತ್ರ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು, ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ.

    ಹಾಗಾದರೆ ಮಹಾಕಾಳಿ ಸಿನಿಮಾದಲ್ಲಿ ಏನಿರಲಿದೆ? ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಮಹಾಕಾಳಿ ಸಿನಿಮಾವನ್ನು ಆರ್ಕೆಎಂಡಿ ಸ್ಟುಡಿಯೋಸ್ ಬ್ಯಾನರ್ ಅಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾವನ್ನು ಭಾರತೀಯ ಭಾಷೆ ಮಾತ್ರವಲ್ಲದೆ ಇತರ ವಿದೇಶಿ ಭಾಷೆಗಳಲ್ಲಿಯೂ ಚಿತ್ರ ಮೂಡಿ ಬರಲಿದೆ. ಹನುಮಾನ್ ಸಿನಿಮಾ ಜಪಾನ್ ಹಾಗೂ ಇತರ ಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡಿತ್ತು.

  • Kendada Seragu: ‘ಈ ಹುಡುಗಿ ಎಷ್ಟು ಚೆಂದ’ ಎಂದು ಹೆಜ್ಜೆ ಹಾಕಿದ ಹರೀಶ್ ಅರಸು-ಪೂರ್ಣಿಮಾ

    Kendada Seragu: ‘ಈ ಹುಡುಗಿ ಎಷ್ಟು ಚೆಂದ’ ಎಂದು ಹೆಜ್ಜೆ ಹಾಕಿದ ಹರೀಶ್ ಅರಸು-ಪೂರ್ಣಿಮಾ

    ಸ್ಯಾಂಡಲ್‌ವುಡ್ ಕನಸಿನ ರಾಣಿ ಮಾಲಾಶ್ರೀ (Malashree) ನಟನೆಯ ಕೆಂಡದ ಸೆರಗು (Kendada Seragu) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಮಸ್ತ್ ಆಗಿರುವ ಚೆಂದದ ಹುಡುಗಿ ಜೊತೆ ಯುವ ನಟ ಹರೀಶ್ ಅರಸು (Harish Arasu) ಹೆಜ್ಜೆ ಹಾಕಿದ್ದಾರೆ.

    ‘ಕೆಂಡದ ಸೆರಗು’ ಚಿತ್ರವನ್ನು ನಿರ್ದೇಶಿಸಿರುವ ರಾಕಿ ಸೋಮ್ಲಿ ‘ಈ ಹುಡುಗಿ ಎಷ್ಟು ಚೆಂದ’ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಕಂಠ ಕುಣಿಸಿದ್ದು, ವೀರೇಶ್ ಕಬ್ಲಿ ಟ್ಯೂನ್ ಹಾಕಿದ್ದಾರೆ. ಪಿಆರ್‌ಒ ಕಂ ಯುವ ನಟ ಹರೀಶ್ ಅರಸು ಹಾಗೂ ಪೂರ್ಣಿಮಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯಿತು ಭಟ್ಟರ ‘ಕರಟಕ ದಮನಕ’ ಸಿನಿಮಾ ಪೋಸ್ಟರ್

    ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ‘ಬಿಗ್‌ ಬಾಸ್‌’ ಖ್ಯಾತಿಯ ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

    ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎದೆ ಕಾಣುವಂತೆ ಬೋಲ್ಡ್ ಆಗಿ ಬಂದ ಭೂಮಿ ಶೆಟ್ಟಿಗೆ ನೆಟ್ಟಿಗರಿಂದ ಸಂಸ್ಕಾರದ ಪಾಠ

    ಎದೆ ಕಾಣುವಂತೆ ಬೋಲ್ಡ್ ಆಗಿ ಬಂದ ಭೂಮಿ ಶೆಟ್ಟಿಗೆ ನೆಟ್ಟಿಗರಿಂದ ಸಂಸ್ಕಾರದ ಪಾಠ

    ಕಿರುತೆರೆಯ ‘ಕಿನ್ನರಿ'(Kinnari)  ಭೂಮಿ ಶೆಟ್ಟಿ (Bhoomi Shetty) ಅವರು ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಭಾರೀ ಸದ್ದು ಮಾಡ್ತಿದ್ದಾರೆ. ಇಕ್ಕಟ್ ಸುಂದರಿಯ ಹಾಟ್ ಅವತಾರಕ್ಕೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎದೆ ಟ್ಯಾಟೂ ಕಾಣುವ ಹಾಗೇ ನಟಿ ಕಾಣಿಸಿಕೊಂಡಿದ್ದಾರೆ. ಭೂಮಿ ಶೆಟ್ಟಿಯನ್ನ ಸಖತ್ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ:ನಯನತಾರಾ ಪತಿಗೆ ‘ಹುಷಾರ್’ ಎಂದ ಶಾರುಖ್ ಖಾನ್

    ಕನ್ನಡದ ‘ಕಿನ್ನರಿ’ ಸೀರಿಯಲ್ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಭೂಮಿ ಶೆಟ್ಟಿ ಅವರು ಬಿಗ್ ಬಾಸ್ (Bigg Boss House) ಮನೆಗೆ ಕಾಲಿಟ್ಟರು. ಶೈನ್ ಶೆಟ್ಟಿ, ದೀಪಿಕಾ ದಾಸ್, ಚಂದನಾ ಅನಂತಕೃಷ್ಣ ಇದ್ದ ಸೀಸನ್‌ನಲ್ಲಿ ತಾವು ಒಬ್ಬ ಗಟ್ಟಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಈ ಕುಂದಾಪುರದ ಶೆಟ್ರ ಹುಡುಗಿಗೆ ಅಪಾರ ಅಭಿಮಾನಿಗಳ ಬಳಗವಿದೆ.

    ‘ಇಕ್ಕಟ್’ (Ikkat)ಎಂಬ ಸಿನಿಮಾದಲ್ಲಿ ಲಾಕ್‌ಡೌನ್ ಕುರಿತ ನೈಜ ಕಥೆಯಲ್ಲಿ ಭೂಮಿ ಶೆಟ್ಟಿ ಸದ್ದು ಮಾಡಿದ್ದರು. ಮೊದಲ ಸಿನಿಮಾದಲ್ಲೇ ತನ್ನ ಪ್ರತಿಭೆ ಎಂತಹದ್ದು ಎಂದು ನಟಿ ಸಾಬೀತುಪಡಿಸಿದ್ದರು. ಹೊಸ ಬಗೆಯ ಪಾತ್ರಗಳನ್ನ ನಟಿ ಎದುರು ನೋಡ್ತಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ಮಾಡ್ತಿದ್ದಾರೆ. ಜಿಮ್, ವರ್ಕೌಟ್ ಅಂತಾ ಭೂಮಿ ಬೆವರಿಳಿಸುತ್ತಿದ್ದಾರೆ.

    ಇತ್ತೀಚಿಗೆ ಭೂಮಿ ಶೆಟ್ಟಿ ಎದೆ ಕಾಣುವ ಹಾಗೇ ಬಟ್ಟೆ ಧರಿಸಿದ್ದರು. ನಟಿಯ ಹಾಟ್ ಲುಕ್ ನೋಡಿ ಸರಿಯಾಗಿ ಬಟ್ಟೆ ಹಾಕಮ್ಮ ಅಂತಾ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಫಿ ಬಣ್ಣದ ಟಾಪ್‌ಗೆ & ಸ್ಕರ್ಟ್ ಧರಿಸಿ ಬಂದ ಭೂಮಿ ಕಪ್ಪು ಬಣ್ಣ ಚಸ್ಮಾ ಧರಿಸಿದ್ದರು. ನಟಿಯ ಈ ಲುಕ್, ಪಡ್ಡೆಹುಡುಗರ ಕಣ್ಣು ಕುಕ್ಕುವಂತಿದೆ. ಹಾಗಾಗಿ ನಿಮಗೆ ಮಾನ ಮರ್ಯಾದೆ ಏನು ಇಲ್ವಾ? ಪಬ್ಲಿಕ್ ಪ್ಲೇಸ್‌ನಲ್ಲಿ ಹೀಗೆ ಬರೋದಾ ಅಂತಾ ನಟಿಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ನಟಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದನವನಕ್ಕೆ ಎಂಟ್ರಿ ಕೊಟ್ಟ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿ

    ಚಂದನವನಕ್ಕೆ ಎಂಟ್ರಿ ಕೊಟ್ಟ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿ

    ರಾಕಿ ಸೋಮ್ಲಿ (Rocky Somli) ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಿನಿಮಾ ‘ಕೆಂಡದ ಸೆರಗು’ (Kenda Seragu). ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರ ಕುಸ್ತಿ ಕುರಿತ ಸಿನಿಮಾ. ಭೂಮಿ ಶೆಟ್ಟಿ (Bhumi Shetty), ಮಾಲಾಶ್ರೀ (Malashree) ಮುಖ್ಯ ತಾರಾಬಳಗದ ಈ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಕೆಂಡದ ಸೆರಗು’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಿನಿ ಜಗತ್ತಿಗೆ ವರ್ಲ್ಡ್ ಚಾಂಪಿಯನ್ ಕುಸ್ತಿ ಪಟು ದಿ ಗ್ರೇಟ್ ಖಲಿ (Khali) ಎಂಟ್ರಿ ಕೊಟ್ಟಿದ್ದಾರೆ.

    ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಅವರೇ ಬರೆದ ಕಾದಂಬರಿ ‘ಕೆಂಡದ ಸೆರಗು’ ಆಧರಿಸಿದ ಸಿನಿಮಾ. ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಈ ಚಿತ್ರ ಕುಸ್ತಿ ಪಟು ಕಥೆ ಹೇಳಲಿದೆ. ಕಮರ್ಶಿಯಲ್ ಎಳೆಯಲ್ಲಿ ಸಿನಿಮಾವನ್ನು ತೆರೆ ಮೇಲೆ ತರಲಾಗುತ್ತಿದ್ದು, ಇದೀಗ  ನಿರ್ದೇಶಕ ರಾಕಿ ಸೋಮ್ಲಿ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿಯನ್ನು ಕರೆ ತರುವ ಮೂಲಕ ಕ್ಯೂರಿಯಾಸಿಟಿ ಮೂಡಿಸಿದ್ದಾರೆ. ಇದನ್ನೂ ಓದಿ:ಮದುವೆಯ ಬಳಿಕ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

    ನಿರ್ದೇಶಕ ರಾಕಿ ಸೋಮ್ಲಿ ದಿ ಗ್ರೇಟ್ ಖಲಿಯನ್ನು ಭೇಟಿ ಮಾಡಿ ಸಿನಿಮಾ ಕಥೆ ಹಾಗೂ ಅವರ ಪಾತ್ರದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಕೇಳಿ ಥ್ರಿಲ್ ಆಗಿರುವ ಖಲಿ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಖಲಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ರಾಕಿ ಸೋಮ್ಲಿ ಚಿತ್ರತಂಡಕ್ಕೆ ಖಲಿ ಎಂಟ್ರಿ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗೆ  ಎಂಟ್ರಿ ಕೊಡುತ್ತಿದ್ದಾರೆ ಖಲಿ. ಸದ್ಯದಲ್ಲೇ ಖಲಿ ಚಿತ್ರತಂಡ ಸೇರಿಕೊಳ್ಳಲಿದ್ದು, ಚಿತ್ರೀಕರಣ ಆರಂಭವಾಗಲಿದೆ.

    ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

  • ‘ಕೆಂಡದ ಸೆರಗು’ ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ : ಟೀಸರ್ ರಿಲೀಸ್

    ‘ಕೆಂಡದ ಸೆರಗು’ ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ : ಟೀಸರ್ ರಿಲೀಸ್

    ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯ ಹಾಗೂ ಕನಸಿನ ರಾಣಿ ಮಾಲಾಶ್ರೀ ನಟಿಸಿರುವ ‘ಕೆಂಡದ ಸೆರಗು’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಸಿನಿಮಾ. ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

    ನಟಿ ಮಾಲಾಶ್ರೀ ಮಾತನಾಡಿ ಒಂದೊಳ್ಳೆ ಸಬ್ಜೆಕ್ಟ್ ಚಿತ್ರದಲ್ಲಿದೆ. ಸಿನಿಮಾ ಕೆಲಸ ಆದ ಮೇಲೆ ಒಮ್ಮೆ ನನಗೆ ತೋರಿಸಿ ಎಂದು ಹೇಳಿದ್ದೆ ರಫ್ ಸ್ಕೆಚ್ ನೋಡಿದ್ದೀನಿ ತುಂಬಾ ಚೆನ್ನಾಗಿ ಬಂದಿದೆ ಸಿನಿಮಾ. ನಾನು ಪೋಲೀಸ್ ಪಾತ್ರ ತುಂಬಾ ಮಾಡಿದ್ದೀನಿ ಆದ್ರೆ ಇಲ್ಲಿವರೆಗೆ ಮಾಡಿರುವ ಪಾತ್ರಕ್ಕಿಂತ ಡಿಫ್ರೆಂಟ್ ಫೀಲ್ ಈ ಪಾತ್ರ ನೀಡಿದೆ. ಈ ಚಿತ್ರ ಕೇವಲ ಕುಸ್ತಿ ಬಗ್ಗೆ ಅಂತಲ್ಲ ಹೆಣ್ಣುಮಗಳೊಬ್ಬಳ ನೋವಿನ ಕಥೆ ಚಿತ್ರದಲ್ಲಿದೆ. ಒಂದೊಳ್ಳೆ ಮೆಸೇಜ್ ಚಿತ್ರದಲ್ಲಿದೆ. ಈ ಸಿನಿಮಾದ ಭಾಗವಾಗಿದ್ದಕ್ಕೆ ತುಂಬಾ ಖುಷಿ ಇದೆ. ನಾನೇ ಈ ಚಿತ್ರಕ್ಕೆ ಡಬ್ ಮಾಡುತ್ತಿದ್ದೇನೆ ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು. ಇದನ್ನೂ ಓದಿ: ಸಾನ್ಯ ಅಯ್ಯರ್‌ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್‌ ಆದ ನೆಟ್ಟಿಗರು

    ನಿರ್ದೇಶಕ ರಾಕಿ ಸೋಮ್ಲಿ ಮಾತನಾಡಿ ‘ಕೆಂಡದ ಸೆರಗು’ ನಾನೇ ಬರೆದ ಕಾದಂಬರಿ ಆಧಾರಿತ ಸಿನಿಮಾ. ನಿರ್ಮಾಪಕ ಕೊಟ್ರೇಶ್ ಹಾಗೂ ನಾನು ಇಬ್ಬರು ಸ್ನೇಹಿತರು. ಅವರಿಗೆ ನಾನು ಈ ಕಾದಂಬರಿ ಬಗ್ಗೆ ಹೇಳಿದಾಗ. ಸಿನಿಮಾ ಮಾಡೋಣ ಎಂದು ಹೇಳಿದ್ರು. ಭೂಮಿ ಶೆಟ್ಟಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಿನಿಮಾ ಮಾಡುವಾಗ ಮಾಲಾಶ್ರೀ ಮೇಡಂ ಕೈನಲ್ಲಿ ಒಂದು ಪಾತ್ರ ಮಾಡಿಸಬೇಕು ಎಂದು ಒಂದು ಆಲೋಚನೆ ಬಂತು. ಕಥೆ ಕೇಳಿದ ಮೇಲೆ ಒಪ್ಪಿಕೊಂಡ್ರು. ಸಿನಿಮಾ ಚಿತ್ರೀಕರಣದಲ್ಲೂ ಸಪೋರ್ಟ್ ಮಾಡಿದ್ರು. ಕಮರ್ಶಿಯಲ್ ಆಗಿ ಮೂಡಿ ಬಂದಿದೆ. ಕುಸ್ತಿಗೆ ಹೆಚ್ಚು ಫೋಕಸ್ ನೀಡಲಾಗಿದೆ. ಡಬ್ಬಿಂಗ್ ಕೆಲಸ ನಡೆಯುತ್ತಿದೆ ಚಿತ್ರದಲ್ಲಿ ಆರು ಹಾಡುಗಳಿವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಾಯಕಿ ಭೂಮಿ ಶೆಟ್ಟಿ ಮಾತನಾಡಿ ಮಹಿಳೆ ಎಲ್ಲಿ ಪ್ರಧಾನವಾಗಿರುತ್ತಾಳೆ ಆ ರೀತಿಯ ಪಾತ್ರ ಮಾಡಲು ನಾನು ಕಾತುರದಿಂದ ಕಾಯುತ್ತಿದ್ದೆ. ಅದೇ ಸಮಯದಲ್ಲಿ ಕೆಂಡದ ಸೆರಗು ಸಿನಿಮಾ ಸಿಕ್ತು. ಕಥೆ, ಅದರ ಸುತ್ತಮುತ್ತ ಇರುವ ಪಾತ್ರಗಳು, ಸಿನಿಮಾದಲ್ಲಿನ ಶೇಡ್ ಎಲ್ಲವನ್ನು ಕೇಳಿ ಇಷ್ಟವಾಯ್ತು. ಚಾಲೆಂಜಿಂಗ್ ಪಾತ್ರ ನಾನು ಮಾಡಲೇಬೇಕು ಎಂದು ಒಪ್ಪಿಕೊಂಡೆ. ಕುಸ್ತಿಗೆ ಹಂಡ್ರೆಡ್ ಪರ್ಸೆಂಟ್ ಗಿಂತ ಜಾಸ್ತಿ ಎಫರ್ಟ್ ಹಾಕಿದ್ದೇನೆ. ನನ್ನ ಪಾತ್ರಕ್ಕಿರುವ ಶೇಡ್ಸ್ ತುಂಬಾ ಚೆನ್ನಾಗಿದೆ. ಸಮಾಜದಲ್ಲಿ ವೇಶ್ಯೆ ಹಾಗೂ ಆಕೆಯ ಮಗಳನ್ನು ಬೇರೆಯದ್ದೇ ರೀತಿ ನೋಡುತ್ತಾರೆ ಆದ್ರೆ ಆಕೆಗೂ ಅವಕಾಶ ನೀಡಿದ್ರೆ ಏನ್ ಬೇಕಿದ್ರು ಸಾಧಿಸುತ್ತಾಳೆ ಎನ್ನುವ ಎಳೆ ಚಿತ್ರದ್ದು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಿರ್ಮಾಪಕ ಕೆ. ಕೊಟ್ರೇಶ್  ಗೌಡ ಮಾತನಾಡಿ ದಾವಣಗೆರೆಯಲ್ಲಿ ನನ್ನದೊಂದು ಬೀಡ ಅಂಗಡಿ ಇದೆ. ಸಿನಿಮಾ ಮಾಡಬೇಕು ಎಂದು ನಾನು ರಾಕಿ ಸೋಮ್ಲಿ ಮಾತನಾಡುತ್ತಿದ್ವಿ. ಪ್ರೊಡ್ಯೂಸರ್ ಗಾಗಿ ಒಂದು ವರ್ಷ ಹುಡುಕಾಟ ನಡೆಸಿದ್ವಿ ನಂತರ ನಂದೇ ಒಂದು ಸೈಟ್ ಇತ್ತು, ಬಂಗಾರ ಇತ್ತು ಅದನ್ನು ಮಾರಿ ಸಿನಿಮಾ ಮಾಡಿದ್ದೀನಿ. ರಾಕಿ ನನ್ನ ಸ್ನೇಹಿತ ಅತನಿಗೆ ಸಪೋರ್ಟ್ ಮಾಡಬೇಕು, ಜೊತೆಗೆ ಕೆಂಡದ ಸೆರಗು ಪುಸ್ತಕದಲ್ಲಿ ಕುಸ್ತಿ ಬಗ್ಗೆ ತುಂಬಾ ಡಿಟೈಲ್ ಆಗಿ ಬರೆದಿದ್ದಾರೆ. ಸಿನಿಮಾ ಮಾಡಿದ್ರೆ ಕ್ಲಿಕ್ ಆಗುತ್ತೆ ಎಂದು ಬಂಡವಾಳ ಹಾಕಿದ್ದೀನಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.  ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

    `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

    ಕಿನ್ನರಿ, (Kinnari) ಬಿಗ್ ಬಾಸ್ (Bigg Boss) ಮೂಲಕ ಗುರುತಿಸಿಕೊಂಡಿರುವ ಭೂಮಿ ಶೆಟ್ಟಿ (Bhoomi Shetty) ಸಿನಿಮಾಗಳಲ್ಲಿ ಮಿಂಚಲು ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಮ್ಮ ಫಿಟ್‌ನೆಸ್‌ಗಾಗಿ ನಟಿ ಭರ್ಜರಿ ವರ್ಕೌಟ್ ಮಾಡ್ತಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿದೆ.

     

    View this post on Instagram

     

    A post shared by ಭೂMee (@bhoomi_shettyofficial)

    ಕುಂದಾಪುರದ (Kundapura) ಚೆಲುವೆ ಭೂಮಿ ಶೆಟ್ಟಿ (Bhoomi Shetty) ದೊಡ್ಮನೆಯಲ್ಲಿ ಖಡಕ್ ಹುಡುಗಿಯಾಗಿ ಯಾವ ಹುಡುಗರಿಗೂ ಕಮ್ಮಿಯಿಲ್ಲದಂತೆ ಆಟ ಅಡಿದ್ದರು. ಈಗ ನಟಿ ಪೊಗರ್‌ದಸ್ತ್ ಆಗಿ ಬಾಡಿ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಭೂಮಿ ಅವರ ಫಿಟ್ನೆಸ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಭೂಮಿ ಅವರ ಖಡಕ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

     

    View this post on Instagram

     

    A post shared by ಭೂMee (@bhoomi_shettyofficial)

    ಇನ್ನೂ ಭೂಮಿ ಶೆಟ್ಟಿ `ಕೆಂಡದ ಸೆರಗು’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡ ರಿವೀಲ್ ಆಗಿದೆ. ನಟಿಯ ಲುಕ್ ನೋಡಿ, ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಚಿನ ಸುಳಿಯಲಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ

    ಸಂಚಿನ ಸುಳಿಯಲಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ

    ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪವನ್ ಕುಮಾರ್ ಜೊತೆಯಾಗಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ‘ಸಂಚಿನ ಸುಳಿಯಲಿ’ ಎಂದು ಹೆಸರಿಡಲಾಗಿದೆ. ಭಾನುವಾರದಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸ್ಟಾರ್ ನಿರ್ದೇಶಕ ನಂದಕಿಶೋರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಧರ್ಮಸ್ಥಳದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎನ್.ನಾಗೇಗೌಡ್ರು ಮತ್ತು ಮೈಸೂರಿನ ಫ್ಯಾಶನ್ ಡಿಸೈನರ್ ಹಂಸರವಿಶಂಕರ್ ಜಂಟಿಯಾಗಿ ಮಾನ್ಯ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಅನಿಲ್‌ ಮೂಡಲಗಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ’ಅಚಲ’ ’ಯಾರವಳು’ ಹಾಗೂ ಬಿಡುಗಡೆಯಾಗಬೇಕಾದ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿರುವ ಚನ್ನರಾಯಪಟ್ಟಣದ ಪ್ರಮೋದ್.ಎಸ್.ಆರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    2014ರಂದು ಮೈಸೂರಿನಲ್ಲಿ ನಡೆದ ಘಟನೆಯೊಂದು ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದರ ಏಳೆಯನ್ನು ತೆಗೆದುಕೊಂಡು ನಿರ್ದೇಶಕರು ಕಥೆಯನ್ನು ಏಣೆದಿದ್ದಾರೆ. ಶೀರ್ಷಿಕೆ ಹೇಳುವಂತೆ ಪ್ರೀತಿಯಲ್ಲಿ ಮುಳುಗಿದ ಕಾಲೇಜು ಹುಡುಗರ ತಂಡವೊಂದು ನಿರ್ಜನ ಪ್ರದೇಶಕ್ಕೆ ತೆರೆಳುತ್ತಾರೆ. ಅಲ್ಲಿಗೆ ಹೋದಾಗ ಸಂಚಿನ ಸುಳಿಯಲ್ಲಿ ಸಿಲುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹುಡುಗ ಹುಡುಗಿಯರ ಪರಿಸ್ಥಿತಿ ಏನಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾರಾ? ಅದನ್ನು ಭೇದಿಸುತ್ತಾರಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ’ಪುಟ್ಟಕ್ಕನ ಮಕ್ಕಳು’ ಧಾರವಾಹಿ ಖ್ಯಾತಿಯ ಪವನ್‌ಕುಮಾರ್ ನಾಯಕ. ’ಕಿನ್ನರಿ’ ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ನಾಯಕಿ. ಗೆಳಯನಾಗಿ ನವೀನ್, ಸ್ವಪ್ನಶೆಟ್ಟಿಗಾರ್ ಮತ್ತೋಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಶೋಭರಾಜ್, ಕಿಲ್ಲರ್‌ವೆಂಕಟೇಶ್ ಹಾಗೂ ಹೆಸರು ಮಾಡಿರುವ ಪೋಷಕ ಕಲಾವಿದರೊಂದಿಗೆ ಮಾತು ಕತೆ ನಡೆಯುತ್ತಿದೆ. ಖಚಿತವಾದ ನಂತರ ಮಾಹಿತಿ ನೀಡಲಾಗುವುದು. ಕಥೆಗ ಅನುಗುಣವಾಗಿ ಶೇಕಡ 90 ಚಿತ್ರೀಕರಣವನ್ನು ಕಾಡಿನ ಸ್ಥಳವಾದ ಉಡುಪಿ, ಉಳಿದುದನ್ನು ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ನಡೆಸಲಾಗುವುದು. ಮೂರು ಹಾಡುಗಳಿಗೆ ಕೆವೀನ್.ಎಂ ಸಂಗೀತ, ವಿನೋದ್.ಆರ್ ಛಾಯಾಗ್ರಹಣ ಚಿತ್ರಕ್ಕಿದೆ.  ಅಂದುಕೊಂಡಂತೆ ಆದರೆ ಸಿನಿಮಾವನ್ನು ಡಿಸೆಂಬರ್‌ದಲ್ಲಿ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.

    Live Tv

  • ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    – ಅಪ್ಪನ ಸ್ಥಾನ ತುಂಬಿದ್ರು ಅಂದ್ರು ಚಂದನಾ

    ಬೆಂಗಳೂರು: ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

    ರವಿ ಬೆಳಗೆರೆ ನಿಧನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿ ಸರ್ ನಮ್ಮಿಂದ ದೂರ ಹೋಗಿರಬಹುದು. ಆದರೆ ಪುಸ್ತಕಗಳಲ್ಲಿ ಹಾಗೂ ನಮ್ಮಲ್ಲಿ ಅವರು ಯಾವತ್ತೂ ಅಮರರಾಗಿರುತ್ತಾರೆ. ಅವರು ಜೊತೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರ ಅದು ಜೀವನಪರ್ಯಂತ ಅನುಭವವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ಒಂದು ಒಳ್ಳೆಯ ಮೆಮೊರಿ ಕೂಡ ಆಗಿದೆ. ಕೊನೆಗೆ ಉಳಿಯೋದು ಬರೀ ನೆನಪು ಮಾತ್ರ ಅಂತಾರಲ್ವ. ಅದು ಯಾವತ್ತಿಗೂ ನಿಜವಾದ ಮಾತು. ಬೇಜಾರಾಗುತ್ತದೆ, ಆದರೆ ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಚಂದನ ಅನಂತಕೃಷ್ಣ ಮಾತನಾಡಿ, ರವಿ ಸರ್ ನಿಧನದ ಬಗ್ಗೆ ಬೆಳಗ್ಗೆ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಮರೆಯಲಾದರಂತಹ ದಿನಗಳಾಗಿವೆ. ಅವರಿಂದ ತುಂಬಾ ಕಲಿತಿದ್ದೇವೆ. ಅಲ್ಲದೆ ಸ್ಫೂರ್ತಿ ಪಡೆದವು. ಆ ಒಂದು ವಾರ ಹೇಗೆ ಹೋಯಿತು ಅಂತಾನೇ ನಮಗೆ ಗೊತ್ತಾಗಿಲ್ಲ. ನಾವು ಅದೃಷ್ಟವಂತರು. ಅಲ್ಲಿ ಅವರು ನಮಗೆ ಅಪ್ಪನ ಸ್ಥಾನ ತುಂಬಿದ್ರು ಎಂದು ಭಾವುಕರಾದ್ರು.

    ಡಯಾಬಿಟಿಸ್ ಹಾಗೂ ಕಾಲುಗಳ ನೋವಿನಿಂದ ಬಳಲುತ್ತಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಈಗಾಗಲೇ ಅವರ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

  • ಡಿಗ್ರಿ ಇದ್ರೆ ಮಾತ್ರ ಜೀವನ ಅಲ್ಲ, ಬದುಕೋದನ್ನ ನಾವೇ ಕಲಿಯಬೇಕು!

    ಡಿಗ್ರಿ ಇದ್ರೆ ಮಾತ್ರ ಜೀವನ ಅಲ್ಲ, ಬದುಕೋದನ್ನ ನಾವೇ ಕಲಿಯಬೇಕು!

    ಕಿನ್ನರಿ ಧಾರಾವಾಹಿ ಹಾಗೂ ಬಿಗ್‍ಬಾಸ್ ಸೀಸನ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅವರ ಹೊಸ ಪ್ರಾಜೆಕ್ಟ್ ಹಾಗೂ ಬಿಗ್‍ಬಾಸ್ ನಂತರದ ಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

    • ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್?
    ನಾನು ಸೂಪರ್ ಆಗಿದ್ದೀನಿ. ಲೈಫ್ ಬೊಂಬಾಟ್ ಆಗಿದೆ. ಬಿಗ್‍ಬಾಸ್‍ನಿಂದ ಬಂದ ಮೇಲೆ ಒಂದಿಷ್ಟು ಹೊಸ ಹೊಸ ಅವಕಾಶಗಳು ಸಿಕ್ತಿವೆ. ಸದ್ಯಕ್ಕೆ ಕೊರೊನಾದಿಂದ ಪಾರಾದ್ರೆ ಸಾಕಾಗಿದೆ.

    • ಬಿಗ್‍ಬಾಸ್ ಮುಗಿದ ನಂತರ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ್ರಾ?
    ಅವಕಾಶಗಳು ಬರ್ತಾ ಇದೆ. ಒಂದಿಷ್ಟು ಶೋಗಳು ಬಂದಿವೆ ಫೈನಲ್ ಆದ ಬಳಿಕ ತಿಳಿಸುತ್ತೇನೆ. ಸದ್ಯಕ್ಕೆ ಧಾರಾವಾಹಿ ಬಿಟ್ಟು ಸಿನಿಮಾ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಅನ್‍ಲಾಕ್ ಮೂರನೇ ಹಂತದಲ್ಲಿ ಒಂದು ಸಿನಿಮಾ ಒಪ್ಪಿಕೊಂಡೆ. ಇಕ್ಕಟ್ ಎಂದು ಆ ಸಿನಿಮಾ ಹೆಸರು. ಕಾಮಿಡಿ ಥ್ರಿಲ್ಲರ್ ಇರೋ ಸಿನಿಮಾ. ಇದು ನನ್ನ ಮೊದಲ ಸಿನಿಮಾ. ಶೂಟಿಂಗ್ ಕಂಪ್ಲೀಟ್ ಆಗಿ ಡಬ್ಬಿಂಗ್ ಕೂಡ ಮುಗಿದಿದೆ. ನಾಗ್ ಭೂಷಣ್ ಸರ್ ಹಾಗೂ ನಾನು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ.

    • ಎಜುಕೇಷನ್ ಅರ್ಧಕ್ಕೆ ನಿಲ್ಲಿಸಿದ್ದೀರಾ ಪೂರ್ಣ ಮಾಡೋ ಯೋಚನೆ ಇದಿಯಾ?
    ನಾನು ಎಂಜಿನಿಯರಿಂಗ್ ಅರ್ಧಕ್ಕೆ ನಿಲ್ಲಿಸಿದೆ. ನಟನೆ ಮಾಡೋ ಆಸೆಯಿಂದ ಎಜುಕೇಶನ್‍ಗೆ ಫುಲ್ ಸ್ಟಾಪ್ ಇಟ್ಟೆ. ಅದನ್ನು ಪೂರ್ಣ ಮಾಡೋ ಬಗ್ಗೆ ಈಗ ಯೋಚನೆ ಇಲ್ಲ. ನನಗೆ ನಾನು ಎಲ್ಲಿ ಹೋದ್ರು ಸರ್ವೈವ್ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಇದೆ. ಡಿಗ್ರಿ ಇದ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಆಗುತ್ತೆ ಅನ್ನೋದು ನನ್ನ ಪ್ರಕಾರ ತಪ್ಪು. ಓದು ಜೀವನವನ್ನ ಹೇಳಿಕೊಡೋದಿಲ್ಲ. ಜೀವನಕ್ಕೆ ಏನ್ ಬೇಕು ಅದನ್ನ ನಾವು ಕಲಿತುಕೊಂಡಿರಬೇಕು, ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು. ಎಲ್ಲಿ ಹೋದ್ರು ಬದುಕಿ ಬರೋವಷ್ಟು ಧೈರ್ಯ, ಸಾಧಿಸಿ ಬರುವ ಛಲ ನನಗಿದೆ. ಹಾಗಂತ ಓದಬೇಡಿ ಅಂತ ನಾನು ಯಾರಿಗೂ ಹೇಳೋದಿಲ್ಲ. ನಮಗೆ ಏನ್ ಖುಷಿ ಕೊಡುತ್ತೆ ಅದನ್ನ ಮಾಡಬೇಕು ಅದು ನನ್ನ ಪಾಲಿಸಿ.

    • ನಿಮ್ಮ ಕನಸುಗಳೇನು. ಏನಾಗಬೇಕು ಅನ್ನೋದು ನಿಮ್ಮ ಆಸೆ?
    ನನಗೆ ಇಂತಹದ್ದೇ ಕನಸು ಅಂತ ಏನಿಲ್ಲ. ಜೀವನ ಹೇಗೆ ಬರುತ್ತೋ ಆ ರೀತಿ ಸ್ವೀಕರಿಸುತ್ತೇನೆ. ನನ್ನ ಮನಸ್ಸಿಗೆ ಸರಿ ಅನ್ಸಿದ್ದನ್ನ ನಾನು ಮಾಡುತ್ತೇನೆ. ಫೈನಲ್ ಆಗಿ ನಾನು ಮಾಡೋ ಕೆಲಸ ನನ್ನ ಮನಸ್ಸಿಗೆ ಖುಷಿ, ತೃಪ್ತಿ ನೀಡಬೇಕು ಅಷ್ಟೇ. ಇದನ್ನೇ ಮಾಡಬೇಕು, ನಾನು ಹೀಗೆ ಆಗಬೇಕು ಅನ್ನೋದು ಏನಿಲ್ಲ.

    • ನಿಮಗೆ ಬೈಕ್ ರೈಡಿಂಗ್ ಅಂದ್ರೆ ಬಹಳ ಇಷ್ಟ ಅಂತೆ ಹೌದಾ?
    ಹೌದು..ನನಗೆ ತುಂಬಾ ಇಷ್ಟ. ಬೈಕ್ ರೈಡ್ ಮಾಡಿಕೊಂಡು ಟ್ರಾವೆಲ್ ಮಾಡಬೇಕು ಅನ್ನೋ ಆಸೆ ಒಂದಿದೆ. ಇಷ್ಟು ವರ್ಷ ಶೂಟಿಂಗ್ ಶೂಟಿಂಗ್ ಅಂತ ಬ್ಯುಸಿ ಇದ್ದೆ. ಆದ್ರೀಗ ಅದೆಲ್ಲವನ್ನು ಒಂದೊಂದಾಗಿ ಈಡೇರಿಸಿಕೊಳ್ಳಬೇಕು. ಸದ್ಯದಲ್ಲೇ ಹೊಸ ಬೈಕ್ ತೆಗೆದುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಅದರಲ್ಲಿ ಎಲ್ಲ ಕಡೆ ಟ್ರಾವೆಲ್ ಮಾಡಬೇಕು ಅಂದ್ಕೊಡಿದ್ದೀನಿ.

    • ಬಿಗ್‍ಬಾಸ್ ಶೋ ಮಿಸ್ ಮಾಡಿಕೊಳ್ತೀರಾ?
    ಖಂಡಿತಾ, ಬಿಗ್‍ಬಾಸ್ ಶೋ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅದೊಂದು ನೆನಪುಗಳ ಹೂರಣ. ಅದನ್ನು ನಾನು ಯಾವಾಗಲೂ ಮರೆಯೋದಿಲ್ಲ. ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಅಲ್ಲಿ ಮಾಡಿದ ಟಾಸ್ಕ್‍ಗಳು, ತರ್ಲೆ, ತುಂಟಾಟಗಳನ್ನು ಈಗಲೂ ನೆನಪು ಮಾಡಿಕೊಂಡು ನಗುತ್ತೇನೆ. ಲಾಕ್‍ಡೌನ್ ಟೈಂನಲ್ಲಿ ಬಿಗ್‍ಬಾಸ್ ಶೋ ತುಂಬಾ ಮಿಸ್ ಮಾಡಿಕೊಂಡೆ. ಈ ಟೈಂನಲ್ಲಿ ಬಿಗ್‍ಬಾಸ್ ಇರಬಾರದಿತ್ತಾ ಎಂದು ತುಂಬಾ ಅಂದ್ಕೊಳ್ತಾ ಇದ್ದೆ.

    • ಬಿಗ್‍ಬಾಸ್ ಮುಗಿದ ಮೇಲೆ ಎಲ್ಲರೂ ಭೇಟಿಯಾಗಿದ್ರಾ?
    ಹೌದು, ಭೇಟಿಯಾಗ್ತಾನೆ ಇರ್ತೀವಿ. ಒಮ್ಮೊಮ್ಮೆ ಎಲ್ಲರೂ ಸಿಗಲು ಆಗೋದಿಲ್ಲ. ಆದ್ರೆ ಎಲ್ಲರೂ ಸಂಪರ್ಕದಲ್ಲಿದ್ದೇವೆ. ಭೇಟಿಯಾದಾಗ ಬಿಗ್‍ಬಾಸ್‍ನಲ್ಲಿ ಮಾಡಿದ ಟಾಸ್ಕ್, ತಮಾಷೆಗಳ ಬಗ್ಗೆ ಮಾತನಾಡುತ್ತೇವೆ. ಒಬ್ಬರನ್ನೊಬ್ಬರು ರೇಗಿಸಿಕೊಳ್ಳುತ್ತೇವೆ. ಇತ್ತೀಚೆಗಷ್ಟೇ ಶೈನ್ ಶೆಟ್ಟಿ ಗಲ್ಲಿ ಕಿಚನ್ ಓಪನ್ ಮಾಡುವಾಗ ಎಲ್ಲರೂ ಭೇಟಿಯಾಗಿದ್ವಿ.

    • ಕಿನ್ನರಿ ಧಾರಾವಾಹಿ ನಿಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಏನ್ ಹೇಳ್ತೀರಾ ಇದ್ರ ಬಗ್ಗೆ?
    ಸಿನಿಮಾ ಮತ್ತು ಸೀರಿಯಲ್ ಒಂದು ಬೇರೇಯದ್ದೇ ಪ್ರಪಂಚ ಆ ಪ್ರಪಂಚವನ್ನ ನನಗೆ ಕಿನ್ನರಿ ಪರಿಚಯಿಸಿತು. ಕಿನ್ನರಿ ಧಾರಾವಾಹಿ ಮಣಿ ಆಗಿ, ಬಿಗ್‍ಬಾಸ್ ಶೋ ಭೂಮಿ ಶೆಟ್ಟಿಯಾಗಿ ನನ್ನನ್ನು ಪರಿಚಯಿಸಿತು. ಹೊಸ ಪ್ರಪಂಚವನ್ನು ಕಿನ್ನರಿ ಧಾರಾವಾಹಿ ನನ್ನ ಮುಂದೆ ತೆರೆದಿಡ್ತು. ನನ್ನ ಪಾತ್ರದಿಂದ ಜನಪ್ರಿಯತೆಯೂ ಸಿಕ್ತು. ಬಿಗ್‍ಬಾಸ್ ಶೋಗೆ ಹೋಗಲು ಅವಕಾಶ ಕೂಡ ಮಾಡಿಕೊಡ್ತು. ಜನ ಎಲ್ಲೇ ಹೋದ್ರು ಕಿನ್ನರಿ ಮಣಿ ಅಂತಾನೇ ಗುರುತಿಸುತ್ತಾರೆ. ಈಗಲೂ ಅಷ್ಟೇ ಒಂದಿಷ್ಟು ಅವಕಾಶಗಳು ಸಿಗ್ತಿವೆ ಅಂದ್ರೆ ಅದು ಕಿನ್ನರಿ ಧಾರಾವಾಹಿಯಿಂದ ಸಿಕ್ಕ ಖ್ಯಾತಿಯಿಂದ. ಆ ಬಗ್ಗೆ ನನಗೆ ಹೆಮ್ಮೆ ಇದೆ.

    • ನೀವು ಗದ್ದೆ ನಾಟಿ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಮೊದಲಿನಿಂದಲೂ ಕೆಲಸ ಮಾಡಿ ಅಭ್ಯಾಸ ಇತ್ತಾ?
    ಹೌದು, ಆ ವಿಡಿಯೋ ತುಂಬಾ ವೈರಲ್ ಆಗಿತ್ತು. ಅನ್‍ಲಾಕ್ ಆದಾಗ ಊರಿಗೆ ಹೊಗಿದ್ದೆ. ಆ ಸಮಯದಲ್ಲಿ ಗದ್ದೆ ಕೆಲಸ ನಡೆಯುತ್ತಿತ್ತು ನಾನು ಗದ್ದೆಗಿಳಿದು ನಾಟಿ ಮಾಡಿದೆ. ಇದ್ರಿಂದ ನನ್ನ ಪೋಷಕರಿಗೂ ಸಹಾಯ ಆಯ್ತು. ನಮ್ಮನೆ ಕೆಲಸ ನಾವು ಮಾಡೋದ್ರಲ್ಲಿ ತಪ್ಪೇನಿದೆ ಅನ್ನೋದು ನನ್ನ ಭಾವನೆ. ಮೊದಲಿನಿಂದಲೂ ಮಾಡಿ ಅಭ್ಯಾಸ ಇರಲಿಲ್ಲ. ಆದ್ರೆ ಕೆಲಸದ ಬಗ್ಗೆ ಗೊತ್ತಿತ್ತು. ನಾನು ಹುಟ್ಟಿ ಬೆಳೆದಿದ್ದು ಅಲ್ಲೆ ಆದ್ದರಿಂದ ಗದ್ದೆ, ತೋಟಕ್ಕೆ ಓಡಾಡಿ ಚಿಕ್ಕಪುಟ್ಟ ಕೆಲಸ ಮಾಡಿ ಅಭ್ಯಾಸ ಇತ್ತು. ಕೃಷಿ ಕೆಲಸದಲ್ಲಿ ನಮ್ಮ ಜೀವನಕ್ಕೆ ಬೇಕಾದ ತುಂಬಾ ಪಾಠ ಕಲಿಯೋದಿದೆ. ನನಗೆ ಆ ಕೆಲಸ ತುಂಬಾ ಖುಷಿ ಕೊಡುತ್ತೆ.

    • ನಿಮ್ಮ ತಂದೆ ತಾಯಿ ನಿಮ್ಮ ಬೆಳವಣಿಗೆ ನೋಡಿ ಏನ್ ಹೇಳ್ತಾರೆ?
    ಮೊದಲು ನಾನು ನಟನೆಗೆ ಬರಬೇಕಂದಾಗ ಬೇಡ ಎಂದು ವಿರೋಧ ಮಾಡಿದ್ರು. ತಂದೆ-ತಾಯಿಯಾಗಿ ಅವರಿಗಿರುವ ಆತಂಕವನ್ನು ಹೊರಹಾಕಿದ್ರು. ಆದ್ರೆ ಅವರಿಗೆ ಗೊತ್ತಿತ್ತು ನಾನು ಸಾಧಿಸುತ್ತೇನೆ ಎಂದು. ಕಿನ್ನರಿಯಿಂದ ಸಿಕ್ಕ ಜನಪ್ರಿಯತೆಯಿಂದ ತುಂಬಾ ಖುಷಿ ಪಟ್ರು. ಬಿಗ್‍ಬಾಸ್‍ಗೆ ಅವಕಾಶ ಸಿಕ್ಕಾಗಲೂ ನನಗಿಂತ ಅವರೇ ತುಂಬಾ ಖುಷಿಪಟ್ಟಿದ್ರು. ನನ್ನ ಮೇಲೆ ಅವರಿಗೆ ಹೆಮ್ಮೆ ಇದೆ.

    • ಬಿಡುವಿನ ವೇಳೆಯಲ್ಲಿ ಏನ್ ಮಾಡ್ತೀರಾ?
    ಬಿಡುವು ಸಿಕ್ಕಾಗೆಲ್ಲ ನನ್ನ ಪ್ರೀತಿಯ ನಾಯಿಗಳಾದ ಹೀರೋ ಮತ್ತು ಕೂಪರ್ ಜೊತೆ ಕಾಲ ಕಳೆಯುತ್ತೇನೆ. ಪುಸ್ತಕ ಓದುತ್ತೀನಿ, ಈ ನಡುವೆ ಫಿಟ್ನೆಸ್ ಕಡೆ ಸ್ವಲ್ಪ ಗಮನ ಹರಿಸುತ್ತಿದ್ದೇನೆ.

    • ನಿಮ್ಮ ಫೇವರೇಟ್ ಫುಡ್ ಯಾವುದು, ಅಡುಗೆ ಮಾಡೋಕೆ ಬರುತ್ತಾ?
    ಫಿಶ್ ನನ್ನ ಆಲ್ ಟೈಂ ಫೇವರೇಟ್ ಫುಡ್. ಫಿಶ್ ರೆಸಿಪಿ ಮಾಡೋಕೆ ಬರುತ್ತೆ. ಅದನ್ನು ಬಿಟ್ರೆ ಬೇರೆ ಯಾವುದೇ ಅಡಿಗೆ ಮಾಡಲು ನನಗೆ ಬರೋದಿಲ್ಲ.

    • ಮತ್ತೆ ಭೂಮಿ ಶೆಟ್ಟಿಯನ್ನು ಧಾರಾವಾಹಿಗಳಲ್ಲಿ ಕಾಣಬಹುದಾ?
    ಸದ್ಯಕ್ಕೆ ಸಿನಿಮಾ ಕಡೆ ಗಮನ ಹರಿಸುತ್ತಿದ್ದೇನೆ. ಧಾರಾವಾಹಿಯಲ್ಲಿ ನಟಿಸೋ ಆಲೋಚನೆ ಸದ್ಯದ ಮಟ್ಟಿಗೆ ಇಲ್ಲ. ಸಿನಿಮಾ ಅವಕಾಶಗಳು ಬರ್ತಿವೇ ಆದ್ರೆ ನನಗೆ ಇಷ್ಟವಾಗೋ ಕಥೆ, ಪರ್ಫಾಮೆನ್ಸ್ ಇರುವಂತ ಪಾತ್ರಗಳಿಗಾಗಿ ನಾನು ಕಾಯುತ್ತಿದ್ದೇನೆ.

  • ಗೊಬ್ಬರ ಹೊತ್ತು ಬೆವರು ಸುರಿಸಿ ಗದ್ದೆಯಲ್ಲಿ ನಾಟಿ ಮಾಡಿದ ಭೂಮಿ ಶೆಟ್ಟಿ

    ಗೊಬ್ಬರ ಹೊತ್ತು ಬೆವರು ಸುರಿಸಿ ಗದ್ದೆಯಲ್ಲಿ ನಾಟಿ ಮಾಡಿದ ಭೂಮಿ ಶೆಟ್ಟಿ

    ಉಡುಪಿ: ಕೊರೊನಾ ಎಂಬ ಮಹಾಮಾರಿ ರಾಜ್ಯಕ್ಕೆ ಕಾಲಿಟ್ಟು ಲಾಕ್‍ಡೌನ್ ಘೋಷಣೆಯಾದ ಬಳಿಕ ಉದ್ಯೋಗಕ್ಕೆಂದು ಮನೆ ಬಿಟ್ಟು ಹೊರ ಹೋದವರು ತಮ್ಮ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ. ಅಲ್ಲದೇ ತಮ್ಮನ್ನು ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ನಟನೆ, ವಿದ್ಯಾಭ್ಯಾಸ ಎಂದು ಸಿಲಿಕಾನ್ ಸಿಟಿಗೆ ತೆರಳಿದ್ದ ಬಿಗ್‍ಬಾಸ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಕೂಡ ಇದೀಗ ಮನೆಗೆ ಬಂದಿದ್ದು, ಗದ್ದೆ ನಾಟಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಓದಿನ ಜೊತೆಗೆ ನಟನೆ ಮಾಡಿಕೊಂಡು ಭೂಮಿ ಶೆಟ್ಟಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊರೊನಾ ಲಾಕ್‍ಡೌನ್ ಆದ ಪರಿಣಾಮ ಕೆಲ ಕಾಲ ಬೆಂಗಳೂರಿನಲ್ಲೇ ಇದ್ದ ಅವರು, ನಂತರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯಲ್ಲಿರುವ ತಮ್ಮ ಮನೆಗೆ ಬಂದಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ರಾಜಕೀಯದಿಂದ ಗದ್ದೆ ಬೇಸಾಯಕ್ಕಿಳಿದ ಶಕುಂತಲಾ ಶೆಟ್ಟಿ

    ಹೀಗೆ ಮನೆಗೆ ಬಂದಿರುವ ಭೂಮಿ ಶೆಟ್ಟಿ, ಸುಮ್ನೆ ಮನೆಯಲ್ಲೇ ಕುಳಿತು ಯಾಕೆ ಕಾಲ ಕಳೆಯುವುದು ಎಂದು ತಿಳಿದು ಅವರು ಕೂಡ ತಮ್ಮನ್ನ ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತಾವು ಗೊಬ್ಬರ ಹೊರುವ ಹಾಗೂ ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಭೂಮಿ ಶೆಟ್ಟಿ, ಈ ಬಾರಿ ಬೇಸಾಯ ಬೇಡ ಎಂದು ಮನೆಯವರು ಹೇಳಿದ್ದರು. ನಾವೆಲ್ಲರೂ ಮನೆಯಲ್ಲಿಯೇ ಇದ್ದು, ಯಾಕೆ ವ್ಯವಸಾಯ ಮಾಡಬಾರದು ಎಂದು ಅಂದುಕೊಂಡು ನಾನು ಸಹಾಯ ಮಾಡುವುದಾಗಿ ತಿಳಿಸಿದೆ. ಹೀಗಾಗಿ ಈ ಬಾರಿ ಕೃಷಿ ಚಟುವಟಿಕೆಯಲ್ಲಿ ನಾನೂ ಭಾಗಿಯಾಗಿದ್ದು, ಈ ಕೆಲಸ ತುಂಬಾನೆ ಖುಷಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಮೈ-ಕೈ ಕೆಸರಿನ ಫೋಟೋದ ಬಳಿಕ ಟ್ರ್ಯಾಕ್ಟರ್ ಏರಿದ ಸಲ್ಲು ಭಾಯ್- ವಿಡಿಯೋ ವೈರಲ್

    ಭೂಮಿ ಬೆಳಗ್ಗಿನಿಂದ ಸಂಜೆಯವರೆಗೂ ಗೊಬ್ಬರ ಹೊತ್ತು ಗದ್ದೆಯಲ್ಲಿ ನಾಟಿ ಮಾಡಿದ್ದು, ಈ ಮೂಲಕ ತಾನೊಬ್ಬಳು ಅಪ್ಪಟ ಕೃಷಿಕಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.