Tag: ಭೂಮಿ ವಿವಾದ

  • ಜಮೀನು ವಿವಾದ ಹಿನ್ನೆಲೆ 17 ವರ್ಷದ ಬಾಲಕನ ಶಿರಚ್ಛೇದನ – 6 ಮಂದಿಯ ವಿರುದ್ಧ ಎಫ್‌ಐಆರ್

    ಜಮೀನು ವಿವಾದ ಹಿನ್ನೆಲೆ 17 ವರ್ಷದ ಬಾಲಕನ ಶಿರಚ್ಛೇದನ – 6 ಮಂದಿಯ ವಿರುದ್ಧ ಎಫ್‌ಐಆರ್

    ಲಕ್ನೋ: ಹಳೆಯ ಭೂಮಿ ವಿವಾದದ ಹಿನ್ನೆಲೆ 17 ವರ್ಷದ ಬಾಲಕನ ಶಿರಚ್ಛೇದನ ಮಾಡಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದ (Jaunpur) ಕಬಿರುದ್ದೀನ್‌ಪುರ (Kabiruddinpur) ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಾವಿಗೀಡಾದ ಬಾಲಕ ಟೇಕ್ವಾಂಡೋ ಆಟಗಾರನಾಗಿದ್ದ. ಬಾಲಕ ತನ್ನ ಮನೆಯ ಹೊರಗೆ ಹಲ್ಲುಜ್ಜುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಸಿಎಂಗೆ ಇ.ಡಿ ಬಂದ ಮೇಲೆ ಭಯ ಆಗಿದೆ, ಅದಕ್ಕೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ: ಜೋಶಿ

    ಬಾಲಕನ ತಾಯಿ ಮಗನ ತುಂಡರಿಸಿದ ತಲೆಯನ್ನು ಮಡಿಲಲ್ಲಿ ಇಟ್ಟು ಹಲವು ಗಂಟೆಗಳ ಕಾಲ ರೋಧಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಹಿರಿಯ ಆಡಳಿತಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದರು.

    ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೇಶ್ ಚಂದ್ರ ಹಾಗೂ ಲೇಖ್ಪಾಲ್ (ಸ್ಥಳೀಯ ಕಂದಾಯ ಅಧಿಕಾರಿ) ಜಗದೀಶ್ ಯಾದವ್ ಅವರನ್ನು ಅಮಾನತುಗೊಳಿಸಿದ್ದಾರೆ. ಪ್ರದೇಶವನ್ನು ನೋಡಿಕೊಳ್ಳುವ ಕಂದಾಯ ನಿರೀಕ್ಷಕ ಮುನ್ನಿ ಲಾಲ್ ವಿರುದ್ಧ ಕ್ರಮಕ್ಕಾಗಿ ಆಡಳಿತಕ್ಕೆ ವರದಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು

    ಕಬಿರುದ್ದೀನ್ ಗ್ರಾಮದಲ್ಲಿ ಇಬ್ಬರ ನಡುವೆ ಭೂಮಿ ವ್ಯಾಜ್ಯ ಉಂಟಾಗಿತ್ತು, ಇದು ತೀವ್ರಸ್ವರೂಪ ಪಡೆದುಕೊಂಡು ಅ.30 ರಂದು ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ರಾಮ್ಜಿತ್ ಯಾದವ್ ಎಂಬವರ 17 ವರ್ಷದ ಪುತ್ರನ ಶಿರಚ್ಛೇದವಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಶಿರಚ್ಛೇದನ ಮಾಡಿದ ವ್ಯಕ್ತಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಆರಂಭವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಹಲವು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ.

    ಸಂತ್ರಸ್ತೆಯ ಸೋದರ ಸಂಬಂಧಿ ರಾಮಜಾಸ್ ಯಾದವ್ ನೀಡಿದ ದೂರಿನ ಆಧಾರದ ಮೇಲೆ, ಆರು ಜನರ ವಿರುದ್ಧ ಜೌನ್‌ಪುರದ ಗೌರಾ ಬಾದಶಹಪುರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅವರಲ್ಲಿ ಕೆಲವರು ಅಪರಿಚಿತರು. ವಿವರವಾದ ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ಅಜಿತ್ ಕುಮಾರ್ ರಜಾಕ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂದು ನೂರಾರು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ: ಡಿಕೆಶಿ

    ಪೊಲೀಸರ ಪ್ರಕಾರ, ರಾಮಜೀತ್ ಯಾದವ್ ಮತ್ತು ಅವರ ನೆರೆಹೊರೆಯವರಾದ ಲಲ್ತಾ ಯಾದವ್ ನಡುವೆ ಸುಮಾರು ನಾಲ್ಕು ದಶಕಗಳಿಂದ ಜಮೀನು ವಿವಾದ ನಡೆಯುತ್ತಿದೆ. ಮಂಗಳವಾರ, ಲಲ್ತಾ ಯಾದವ್ ಅವರ ಕೆಲವು ಕುಟುಂಬ ಸದಸ್ಯರು ವಿವಾದಿತ ಸ್ಥಳದಲ್ಲಿದ್ದ ಹುಲ್ಲು ತೆರವುಗೊಳಿಸಲು ಪ್ರಾರಂಭಿಸಿದರು. ರಾಮ್‌ಜೀತ್ ಅವರ ಸಹೋದರ ಇದಕ್ಕೆ ಆಕ್ಷೇಪಣೆಯನ್ನು ಎತ್ತಿದರು ಇಬ್ಬರ ನಡುವೆ ವಾಗ್ವಾದ ನಡೆಯಿತು. ಸ್ಥಳೀಯರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು. ಸಧ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಘಟ್ಟವನ್ನು ಕಾಶ್ಮೀರವಾಗಿಸಿದ ಮಳೆಯ ಮಂಜು

  • ಪತಿ ಮನೆಯಿಂದ ಹೊರಹೋಗ್ತಿದ್ದಂತೆ ಪತ್ನಿ, ಮೂವರು ಮಕ್ಕಳ ಹತ್ಯೆ!

    ಪತಿ ಮನೆಯಿಂದ ಹೊರಹೋಗ್ತಿದ್ದಂತೆ ಪತ್ನಿ, ಮೂವರು ಮಕ್ಕಳ ಹತ್ಯೆ!

    ಪಾಟ್ನಾ: ಮಹಿಳೆ ಮತ್ತು ಆಕೆಯ ಮೂವರು ಮಕ್ಕಳ ಕುತ್ತಿಗೆಯನ್ನು ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

    ತಬಾಸ್ಸಮ್ (30), ಮಗಳು ಅಲಿಯಾ (6) ಮತ್ತು ಪುತ್ರರಾದ ಸಮೀರ್ (4) ಹಾಗೂ ಶಬ್ಬೀರ್ (8) ಕೊಲೆಯಾದ ದುರ್ದೈವಿಗಳು. ಪತಿ ಆಲಮ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮಾಧೋಪಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದನು. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಆಲಮ್ ಮನೆಯಿಂದ ಹೊರಗಡೆ ಹೋಗಿದ್ದಾನೆ. ಆಗ ಕೆಲವು ಮಂದಿ ಮನೆಗೆ ನುಗ್ಗಿ ಮಹಿಳೆ ಮತ್ತು ಮಕ್ಕಳ ಕುತ್ತಿಗೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಮತ್ತು ಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬಂದಿದ್ದಾರೆ. ಆದರೆ ಆರೋಪಿಗಳು ಮನೆಯ ಮುರಿದ ಕಿಟಕಿಯಿಂದ ಪರಾರಿಯಾಗಿದ್ದಾರೆ. ಭೂಮಿ ವಿವಾದದಿಂದ ಈ ಕೊಲೆ ಮಾಡಲಾಗಿದೆ ಎಂದು ಆಲಂ ಆರೋಪಿಸಿದ್ದು, ಈ ಕುರಿತು ಅದೇ ಗ್ರಾಮದ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾನೆ ಎಂದು ಡಿಎಸ್‍ಪಿ ಕೆ.ಡಿ. ಸಿಂಗ್ ತಿಳಿಸಿದ್ದಾರೆ.

    ಈ ಘಟನೆಯಲ್ಲಿ ಪತಿ ಆಲಮ್ ಪಾತ್ರವೂ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಈ ಕುರಿತು ಯಾರನ್ನು ಬಂಧಿಸಿಲ್ಲ ಎಂದು ಸಿಂಗ್ ಹೇಳಿದರು.