Tag: ಭೂತಾನ್

  • ಪಾಕಿಸ್ತಾನ, ಭೂತಾನ್ ಸೇರಿ 41 ರಾಷ್ಟ್ರಗಳ ಪ್ರಜೆಗಳ ಯುಎಸ್ ಪ್ರಯಾಣಕ್ಕೆ ನಿರ್ಬಂಧ ಸಾಧ್ಯತೆ

    ಪಾಕಿಸ್ತಾನ, ಭೂತಾನ್ ಸೇರಿ 41 ರಾಷ್ಟ್ರಗಳ ಪ್ರಜೆಗಳ ಯುಎಸ್ ಪ್ರಯಾಣಕ್ಕೆ ನಿರ್ಬಂಧ ಸಾಧ್ಯತೆ

    – 41 ರಾಷ್ಟ್ರಗಳನ್ನು 3 ಗುಂಪುಗಳಾಗಿ ವಿಭಜನೆ; 10 ರಾಷ್ಟ್ರಗಳಿಗೆ ಫುಲ್ ವೀಸಾ ಅಮಾನತು

    ವಾಷಿಂಗ್ಟನ್: ಹೊಸ ನಿಷೇಧದ ಭಾಗವಾಗಿ ಅಮೆರಿಕಗೆ (America) ಹಲವು ದೇಶಗಳ ನಾಗರಿಕರಿಗೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಲು ಟ್ರಂಪ್‌ (Donald Trump) ಸರ್ಕಾರ ಮುಂದಾಗಿದೆ.

    ಪಾಕಿಸ್ತಾನ, ಭೂತಾನ್‌ ಸೇರಿದಂತೆ 41 ದೇಶಗಳ ಪ್ರಜೆಗಳ ಯುಎಸ್‌ ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. 41 ದೇಶಗಳನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಭಜಿಸಲಾಗಿದೆ. ಮೊದಲ ಗುಂಪಿನಲ್ಲಿ ಬರುವ ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ ಮತ್ತು ಉತ್ತರ ಕೊರಿಯಾ ಸೇರಿದಂತೆ 10 ದೇಶಗಳ ಪೂರ್ಣ ವೀಸಾ ಅಮಾನತುಗೊಳಿಸಲಾಗುವುದು. ಇದನ್ನೂ ಓದಿ: ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

    ಎರಡನೇ ಗುಂಪಿನಲ್ಲಿ, ಎರಿಟ್ರಿಯಾ, ಹೈಟಿ, ಲಾವೋಸ್, ಮ್ಯಾನ್ಮಾರ್ ಮತ್ತು ದಕ್ಷಿಣ ಸುಡಾನ್ ದೇಶಗಳು ಭಾಗಶಃ ಅಮಾನತುಗಳನ್ನು ಎದುರಿಸಬೇಕಾಗುತ್ತದೆ. ಇದು ಕೆಲವು ವಿನಾಯಿತಿಗಳೊಂದಿಗೆ ಪ್ರವಾಸಿ ಮತ್ತು ವಿದ್ಯಾರ್ಥಿ ವೀಸಾಗಳು ಹಾಗೂ ಇತರ ವಲಸೆ ವೀಸಾಗಳ ಮೇಲೆ ಪರಿಣಾಮ ಬೀರುತ್ತದೆ.

    ಮೂರನೇ ಗುಂಪಿನಲ್ಲಿ, ಪಾಕಿಸ್ತಾನ, ಭೂತಾನ್ ಮತ್ತು ಮ್ಯಾನ್ಮಾರ್ ಸೇರಿದಂತೆ ಒಟ್ಟು 26 ದೇಶಗಳ ಸರ್ಕಾರಗಳು 60 ದಿನಗಳಲ್ಲಿ ನ್ಯೂನತೆಗಳನ್ನು ಪರಿಹರಿಸಲು ಮುಂದಾಗಬೇಕು. ಇಲ್ಲದಿದ್ದರೆ, ಅಮೆರಿಕದ ವೀಸಾ ವಿತರಣೆಯನ್ನು ಭಾಗಶಃ ಸ್ಥಗಿತಗೊಳಿಸುವುದನ್ನು ಪರಿಗಣಿಸಲಾಗುವುದು ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಕಾಲ ಸನ್ನಿಹಿತ – ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಉಡಾವಣೆ

  • ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವ

    ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವ

    ಥಿಂಪು: ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭೂತಾನ್ ರಾಜ ಪ್ರಧಾನಿ ಮೋದಿಯವರಿಗೆ ʼಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋʼ (Order of the Druk Gyalpo) ನೀಡಿ ಗೌರವಿಸಿದ್ದಾರೆ.

    ಈ ಮೂಲಕ ಭೂತಾನ್‌ನ (Bhutan) ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಮೊದಲ ಭೂತಾನ್‌ನೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಇದುವರೆಗೆ ಈ ಪ್ರಶಸ್ತಿಯನ್ನು ಕೇವಲ ನಾಲ್ವರು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. ಹೀಗಾಗಿ ಮೋದಿ (Narendra Modi) ಅವರು ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

    ದೇಶವಾಸಿಗಳಿಗೆ ಪ್ರಶಸ್ತಿ ಸಮರ್ಪಣೆ: ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಗೌರವಕ್ಕೆ ಪಾತ್ರರಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂದು ನನ್ನ ಜೀವನದಲ್ಲಿ ಒಂದು ದೊಡ್ಡ ದಿನವಾಗಿದೆ. ನನಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗಿದೆ. ಪ್ರತಿ ಪ್ರಶಸ್ತಿಯು ವಿಶೇಷವಾಗಿದೆ. ಆದರೆ ನೀವು ಬೇರೆ ದೇಶದಿಂದ ಪ್ರಶಸ್ತಿಯನ್ನು ಪಡೆದಾಗ ಎರಡೂ ದೇಶಗಳು ಸರಿಯಾದ ಹಾದಿಯಲ್ಲಿವೆ ಎಂಬುದನ್ನು ತೋರಿಸುತ್ತದೆ. ಆದರೆ ನಾವು ಮುಂದೆ ಸಾಗುತ್ತಿದ್ದೇವೆ. ಅಲ್ಲದೇ ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ. ಭಾರತ ಮತ್ತು ಭೂತಾನ್ ನಡುವಿನ ಸಂಬಂಧಗಳು ಪ್ರಾಚೀನವಾಗಿವೆ ಮತ್ತು ಸಮಕಾಲೀನವಾಗಿವೆ ಎಂದಿದ್ದಾರೆ. ಜೊತೆಗೆ ಈ ಗೌರವವನ್ನು 140 ಕೋಟಿ ದೇಶವಾಸಿಗಳಿಗೆ ಅರ್ಪಿಸಿದ್ದಾರೆ.  ಇದನ್ನೂ ಓದಿ: ನನ್ನ ಹಿರಿಯ ಸಹೋದರ ನಿಮಗೆ ಸ್ವಾಗತ- ಪ್ರೀತಿಯಿಂದ ಮೋದಿ ಸ್ವಾಗತಿಸಿದ ಭೂತಾನ್‌ ಪ್ರಧಾನಿ

    ಎರಡು ದಿನಗಳ ಭೇಟಿಗಾಗಿ ಭೂತಾನ್‌ (Bhutan) ತಲುಪಿದ ನರೇಂದ್ರ ಮೋದಿಯವರಿಗೆ (Narendra Modi) ಭವ್ಯ ಸ್ವಾಗತ ಕೋರಲಾಗಿದೆ. ಭೂತಾನ್‌ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಅವರು ಮೋದಿಯವರನ್ನು ಆಲಿಂಗಿಸಿ ʼನನ್ನ ಹಿರಿಯ ಸಹೋದರ ನಿಮಗೆ ಸ್ವಾಗತʼ ಎಂದು ಹೇಳಿದ್ದಾರೆ.

  • ನನ್ನ ಹಿರಿಯ ಸಹೋದರ ನಿಮಗೆ ಸ್ವಾಗತ- ಪ್ರೀತಿಯಿಂದ ಮೋದಿ ಸ್ವಾಗತಿಸಿದ ಭೂತಾನ್‌ ಪ್ರಧಾನಿ

    ನನ್ನ ಹಿರಿಯ ಸಹೋದರ ನಿಮಗೆ ಸ್ವಾಗತ- ಪ್ರೀತಿಯಿಂದ ಮೋದಿ ಸ್ವಾಗತಿಸಿದ ಭೂತಾನ್‌ ಪ್ರಧಾನಿ

    ಥಿಂಪು: ಎರಡು ದಿನಗಳ ಭೇಟಿಗಾಗಿ ಭೂತಾನ್‌ (Bhutan) ತಲುಪಿದ ನರೇಂದ್ರ ಮೋದಿಯವರಿಗೆ (Narendra Modi) ಭವ್ಯ ಸ್ವಾಗತ ಕೋರಲಾಗಿದೆ. ಭೂತಾನ್‌ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಅವರು ಮೋದಿಯವರನ್ನು ಆಲಿಂಗಿಸಿ ʼನನ್ನ ಹಿರಿಯ ಸಹೋದರ ನಿಮಗೆ ಸ್ವಾಗತʼ ಎಂದು ಹೇಳಿದ್ದಾರೆ.

    ಈ ಹಿಂದೆ ಪ್ರಧಾನಿ ಮೋದಿಯವರ ಭೂತಾನ್ ಭೇಟಿ ಮಾರ್ಚ್ 21 ಹಾಗೂ 22 ರಂದು ನಡೆಯಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಪ್ರಧಾನಿ ಮೋದಿಯವರ ಈ ಭೇಟಿಯನ್ನು ಮುಂದೂಡಲಾಯಿತು. ಬಳಿಕ ಭಾರತೀಯ ವಿದೇಶಾಂಗ ಸಚಿವಾಲಯವು ಭೂತಾನ್ ಸರ್ಕಾರದೊಂದಿಗೆ ಮಾತನಾಡಿದೆ ಮತ್ತು ಹೊಸ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಹೇಳಿದರು. ಅಂತೆಯೇ ಪರಸ್ಪರ ಒಪ್ಪಿಗೆಯ ನಂತರ ಪ್ರಧಾನಿ ಮೋದಿ ಇಂದು ಭೂತಾನ್‌ಗೆ ತೆರಳಿದ್ದಾರೆ.

    ಇಂದು ಭೂತಾನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನರೇಂದ್ರ ಮೋದಿಯವರಿಗೆ ಪ್ರಧಾನಿ ತ್ಶೆರಿಂಗ್ ತೊಬ್ಗೇ (Tshering Tobgay) ಅವರು ಭವ್ಯ ಸ್ವಾಗತ ಕೋರಿದರು. ಜೊತೆಗೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಒಟ್ಟಿನಲ್ಲಿ ರಾಜಧಾನಿ ಥಿಂಪುವಿನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ದೊರೆಯಿತು. ರಸ್ತೆಬದಿಯಲ್ಲಿ ಜನ ನಿಂತು ಪ್ರಧಾನಿ ಮೋದಿಯವರನ್ನು ವಿಶೇಷವಾಗಿ ಸ್ವಾಗತಿಸಿದರು.

    ಪ್ರಧಾನಿ ಮೋದಿಯವರ ಭೂತಾನ್ ಭೇಟಿಯಿಂದ ಸ್ಥಳೀಯರು ಸಂತಸಗೊಂಡಿದ್ದಾರೆ. ಪ್ರಧಾನಿ ಮೋದಿ ನಮ್ಮ ದೇಶಕ್ಕೆ ಬಂದಿದ್ದಾರೆ, ನಮಗೆ ತುಂಬಾ ಸಂತೋಷವಾಗಿದೆ ಎಂದು ಮಗುವೊಂದು ಹೇಳಿದೆ. ಇದನ್ನೂ ಓದಿ: ಕೋಟಾಗೆ ಚುನಾವಣಾ ಖರ್ಚಿಗೆ 25 ಸಾವಿರ ರೂ. ನೀಡಿದ ಚುರುಮುರಿ ವ್ಯಾಪಾರಿ

    ಪ್ರಧಾನಿ ಮೋದಿಯವರು ಭೂತಾನ್‌ಗೆ ಆಗಮಿಸಿದ ನಂತರ, ಪ್ರಧಾನಿ ತ್ಶೆರಿಂಗ್ ತೊಬ್ಗೇ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ‘ನನ್ನ ಹಿರಿಯ ಸಹೋದರ, ಭೂತಾನ್‌ಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.

  • ಬಾತ್ ಟಬ್ ನಲ್ಲಿ ಸಮಂತಾ: ಹಾಟ್ ಮಗಾ ಹಾಟ್ ಅಂತಿದ್ದಾರೆ ಫ್ಯಾನ್ಸ್

    ಬಾತ್ ಟಬ್ ನಲ್ಲಿ ಸಮಂತಾ: ಹಾಟ್ ಮಗಾ ಹಾಟ್ ಅಂತಿದ್ದಾರೆ ಫ್ಯಾನ್ಸ್

    ಕ್ಷಿಣದ ಹೆಸರಾಂತ ತಾರೆ ಸಮಂತ್ ರುತ್ ಪ್ರಭು (Samant) ಕಾಲಿಗೆ ಚಕ್ರಕಟ್ಟಿಕೊಂಡು ದೇಶ ದೇಶಗಳನ್ನು ಸುತ್ತುತ್ತಿದ್ದಾರೆ. ಅಲ್ಲಿನ ಪ್ರವಾಸಿ ತಾಣಗಳು, ಸುಂದರ ಜಾಗಗಳಿಗೆ ಭೇಟಿ ನೀಡಿ, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ಇದೀಗ ಸಮಂತಾ ಭೂತಾನ್ (Bhutan)  ಪ್ರವಾಸದಲ್ಲಿ ಇದ್ದಾರೆ.

    ಫ್ರೆಂಡ್ಸ್ ಜೊತೆ ಭೂತಾನ್ ಗೆ ಹೋಗಿರುವ ಸಮಂತಾ, ಅಲ್ಲಿ ಕಳೆದ ಕ್ಷಣಗಳನ್ನು ಫೋಟೋದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಬಾತ್ ರೂಮ್ ನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಮಲಗಿರುವ ಫೋಟೋ (Hot Photo) ವೈರಲ್ ಆಗಿದೆ.

    ಮೊನ್ನೆಯಷ್ಟೇ ಅವರು ಮೈಯೋಸಿಟಿಸ್ ಟ್ರೀಟ್ ಮೆಂಟ್ ನ ಒಂದು ಭಾಗವಾಗಿರುವ ಕ್ರೈಯೊಥೆರಪಿಯನ್ನು ಪಡೆಯುತ್ತಿದ್ದ ಫೋಟೋವನ್ನು ಅವರು ಶೇರ್ ಮಾಡಿದ್ದರು. ಜೊತೆಗೆ ಎಷ್ಟೊಂದು ಕಷ್ಟದ ದಿನಗಳು ಎಂದೂ ಅವರು ಬರೆದುಕೊಂಡಿದ್ದರು. ಒಂದು ಕಡೆ ತಮಗಿರೋ ಕಾಯಿಲೆಗೆ ಟ್ರೀಟ್ ಮೆಂಟ್ ಪಡೆಯುತ್ತಾ, ಮತ್ತೊಂದು ಕಡೆ ಪ್ರವಾಸ ಮಾಡುತ್ತಾ, ಒಟ್ಟಿನಲ್ಲಿ ಖುಷಿಯ ದಿನಗಳನ್ನು ಕಳೆಯುತ್ತಿದ್ದಾರೆ ಸಮಂತಾ.

     

    ಒಂದು ಕಡೆ ಕಾಯಿಲೆ ಮತ್ತೊಂದು ಕಡೆ ಒಂಟಿತನ.. ಇವೆರಡೂ ತಮ್ಮನ್ನು ಇನ್ನಷ್ಟು ಕುಗ್ಗಿಸುತ್ತಿವೆ ಎಂದು ಹೇಳಿದ್ದರು. ಕುಗ್ಗುವಿಕೆಯಿಂದಾಗಿ ಮತ್ತಿನ್ನೇನು ದೇಹಕ್ಕೆ ಆಗದಿರಲಿ ಎಂದು ಅವರು ಹೆಚ್ಚೆಚ್ಚು ಪ್ರವಾಸ ಮಾಡುತ್ತಿದ್ದಾರೆ ಎನ್ನುವುದು ಅವರ ಆಪ್ತರ ಕೊಡುವ ಮಾಹಿತಿ.

     

  • ಭೂತಾನ್‍ನಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಮುಂದಾದ ಕೇಂದ್ರ – ರೈತರಿಂದ ವಿರೋಧ

    ಭೂತಾನ್‍ನಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಮುಂದಾದ ಕೇಂದ್ರ – ರೈತರಿಂದ ವಿರೋಧ

    ಶಿವಮೊಗ್ಗ: ಭೂತಾನ್ (Bhutan) ದೇಶದಿಂದ ಅಡಿಕೆ (Areca Nut) ಆಮದು (Import) ಮಾಡಿಕೊಳ್ಳದಂತೆ ಆಗ್ರಹಿಸಿ, ಎಲೆ ಚುಕ್ಕೆ ರೋಗ ಬಾಧಿತ ರೈತರಿಗೆ (Farmers) ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ (Shivamogga) ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ನಗರದ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರ ಭೂತಾನ್ ದೇಶದಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಇದಕ್ಕೆ ಆಮದು ಸುಂಕ ವಿನಾಯ್ತಿ ನೀಡಲಾಗಿದೆ. ಈ ಅಡಿಕೆ ನಮ್ಮ ದೇಶಕ್ಕೆ ಬರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಇದನ್ನೂ ಓದಿ: ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸುತ್ತಾರೆ: ಓವೈಸಿ

    ಆದರೆ ಅಡಿಕೆ ಆಮದಿನಿಂದಾಗಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕಡಿಮೆಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಅಡಿಕೆ ಆಮದು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ವ್ಯಕ್ತಿ ಅಂದರ್

    Live Tv
    [brid partner=56869869 player=32851 video=960834 autoplay=true]

  • 2 ವರ್ಷಗಳ ಬಳಿಕ ಪ್ರವಾಸಿಗರನ್ನು ಸ್ವಾಗತಿಸಿದ ಭೂತಾನ್- ಭಾರತೀಯರಿಗೆ ದಿನಕ್ಕೆ 1,200 ರೂ. ಶುಲ್ಕ

    2 ವರ್ಷಗಳ ಬಳಿಕ ಪ್ರವಾಸಿಗರನ್ನು ಸ್ವಾಗತಿಸಿದ ಭೂತಾನ್- ಭಾರತೀಯರಿಗೆ ದಿನಕ್ಕೆ 1,200 ರೂ. ಶುಲ್ಕ

    ತಿಂಪು: ಕೊರೊನಾದಿಂದಾಗಿ 2 ವರ್ಷಗಳ ಕಾಲ ಬಂದ್ ಆಗಿದ್ದ ಭೂತಾನ್ (Bhutan) ಇದೀಗ ಮತ್ತೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ (Tourist) ತನ್ನ ಗಡಿಯನ್ನು ತೆರೆದಿದೆ.

    ಭೂತಾನ್ ಸರ್ಕಾರವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರ ಶುಲ್ಕವನ್ನು 200 ಡಾಲರ್‌ಗೆ ಏರಿಸಿದೆ. ಕಳೆದ 2 ವರ್ಷದ ಹಿಂದೆ ಇದು 65 ಡಾಲರ್ ಇತ್ತು. ಆದರೆ ಕೊರೊನಾಕ್ಕಿಂತ ಮೊದಲು ಭಾರತೀಯರಿಗೆ ಈ ರೀತಿಯ ಶುಲ್ಕದ ಯಾವುದೇ ನಿಯಮವಿರಲಿಲ್ಲ. ಆದರೆ ಇದೀಗ ಭಾರತೀಯರೂ (Indians) ದಿನಕ್ಕೆ 1,200 ರೂ. ಪಾವತಿಸಬೇಕು ಎಂಬ ನಿಯಮವನ್ನು ಜಾರಿ ಮಾಡಿದೆ.

    ಭೂತಾನ್‍ನಲ್ಲಿ ಅನೇಕ ಪ್ರವಾಸಿತಾಣವಿದ್ದು, ಇದಕ್ಕೆ ಆದಾಯದ ಮೂಲವೇ ಅಂತಾರಾಷ್ಟ್ರೀಯ ಪ್ರವಾಸಿಗರಿಂದಾಗಿತ್ತು. ಆದರೆ 2020ರ ಮಾರ್ಚ್‍ನಲ್ಲಿ ಭೂತಾನ್‍ನಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ ಆಗಿತ್ತು. ಇದಾದ ನಂತರ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಭೂತಾನ್ ಪ್ರವಾಸ ಕೈಗೊಳ್ಳಲು ನಿಷೇಧ ಹೇರಿತ್ತು. ಇದನ್ನೂ ಓದಿ: ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ

    80,000ಕ್ಕಿಂತಲೂ ಕಡಿಮೆ ಜನರಿರುವ ಹಿಮಾಲಯ ಸಾಮ್ರಾಜ್ಯದಲ್ಲಿ 61,000 ಜನರಿಗೆ ಕೊರೊನಾ ದೃಢಪಟ್ಟಿತ್ತು ಹಾಗೂ 21 ಜನರು ಮೃತಪಟ್ಟಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಆರ್ಥಿಕ ನಷ್ಟದಿಂದಾಗಿ ಬಳಲುತ್ತಿದೆ. ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ – ಶಾಸಕ ಎಂ.ಪಿ ಕುಮಾರಸ್ವಾಮಿಗೆ ಜಾಮೀನು ರಹಿತ ವಾರೆಂಟ್

    Live Tv
    [brid partner=56869869 player=32851 video=960834 autoplay=true]

  • ಭೂತಾನ್‍ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ – ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ಭೂತಾನ್‍ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ – ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ನವದೆಹಲಿ: ಮೊದಲು ಚೀನಾ ದೇಶಕ್ಕೆ ಭಾರತದ ಭೂಮಿಯನ್ನು ಬಿಟ್ಟುಕೊಡಲಾಗಿತ್ತು. ಈಗ ದೇಶದ ನೆರೆಹೊರೆಯವರಿಗೂ ಚೀನಾದಿಂದ ಅಪಾಯವಾಗುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ನಿಮಗಾಗಿ ನೀವು ನಿಲ್ಲದಿದ್ದರೆ, ನಿಮ್ಮ ಸ್ನೇಹಿತರಿಗೆ ಹೇಗೆ ನಿಲ್ಲುತ್ತೀರಾ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಚೀನಾ ಇದೀಗ ಭೂತಾನ್‍ನಲ್ಲಿ ಅಕ್ರಮವಾಗಿ ಗ್ರಾಮಗಳನ್ನು ನಿರ್ಮಿಸುತ್ತಿದೆ. ಮೋದಿ ಸರ್ಕಾರ ಮೊದಲಿಗೆ ನಮ್ಮ ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿತು. ಇದೀಗ ಚೀನಾ ದೇಶವನ್ನು ನಿಯಂತ್ರಿಸಲಾಗದೇ ನಮ್ಮ ನೆರೆಹೊರೆಯವರು ಸಹ ಅಪಾಯಕ್ಕೆ ಸಿಲುಕಿದ್ದಾರೆ. ನೀವು ನಮ್ಮ ಪರವಾಗಿ ನಿಲ್ಲದಿದ್ದರೆ, ಸ್ನೇಹಿತರ ಪರವಾಗಿ ಹೇಗೆ ನಿಲ್ಲುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ

    ಗಡಿಯಲ್ಲಿ ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ನಿಭಾಯಿಸುತ್ತಿರುವುದನ್ನು ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ. 2017 ರಲ್ಲಿ ದೋಕ್ಲಾಂ ಬಳಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‍ಎ) ಜೊತೆಗೆ 70 ದಿನಗಳ ಕಾಲ ಸಂಘರ್ಷ ನಡೆದಿತ್ತು. ಈಗ ದೋಕ್ಲಾಂ ಪ್ರಸ್ಥಭೂಮಿಯಿಂದ 30 ಕಿಮೀ ದೂರದಲ್ಲಿರುವ ಭೂತಾನ್‍ನಲ್ಲಿ ಚೀನಾ ವಿವಾದಿತ ಪ್ರದೇಶದಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಎಫೆಕ್ಟ್ – 25 ಪೊಲೀಸರಿಗೆ ಕೊರೊನಾ

  • ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

    ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

    ಥಿಂಪು: ಭೂತಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ Order of the Druk Gyalpoವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೀಡುವ ಮೂಲಕವಾಗಿ ಗೌರವವನ್ನು ಸಲ್ಲಿಸಿದೆ.

    ಭಾರತದ ಪ್ರಧಾನಿ ಮೋದಿಯವರು ಕೊರೊನಾ ಸಾಂಕ್ರಮಿಕ ಸಮಯದಲ್ಲಿ ನೀಡಿದ ಬೆಂಬಲ ಹಾಗೂ ಸ್ನೇಹದ ಗೌರವಾರ್ಥವಾಗಿ, ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಮೋದಿ ಅರ್ಹರು ಎಂದು ಭೂತಾನ್ ಪ್ರಧಾನಿ ಕಾರ್ಯಾಲಯ ಅಭಿನಂದನೆ ಸಲ್ಲಿಸಿದೆ. ಇದನ್ನೂ ಓದಿ: ಭಾರತಕ್ಕೆ ಕ್ರಾಂತಿಯ ಅವಶ್ಯಕತೆ ಇಲ್ಲ, ಬದಲಾಗಿ ವಿಕಾಸದ ಅಗತ್ಯವಿದೆ: ಮೋದಿ

    ಭೂತಾನ್‍ನ ಪ್ರಧಾನಿ ಕಾರ್ಯಾಲಯವು ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದು, Much deserving, ಭಾರತವು ಎಲ್ಲಾ ಸಂದರ್ಭದಲ್ಲಿ ಭೂತಾನ್‍ಗೆ ಬೆಂಬಲವಾಗಿ ನಿಂತಿದೆ. ಕೊರೊನಾ ಆಪತ್ಕಾಲದಲ್ಲಿ ಭೂತಾನ್‍ಗೆ ಆಪದ್ಭಾಂದವನಾಗಿ ಭಾರತ ನಿಂತಿದೆ. ಮೋದಿಯವರು ಅದ್ಭುತ ವ್ಯಕ್ತಿ. ಈ ಪ್ರಶಸ್ತಿಯ ಸಂಭ್ರಮಾಚರಣೆಗೆ ಎದುರು ನೋಡುತ್ತಿದ್ದೇವೆ ಎಂದು ಭೂತಾನ್ ಪ್ರಧಾನಿ ಕಾರ್ಯಾಲಯ ಬರೆದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

    ಭಾರತವು ಭೂತಾನ್‍ನ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳಲ್ಲಿ ಒಂದಾಗಿದೆ. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಆಡಳಿತವಿದೆ. ನರೇಂದ್ರ ಮೋದಿ ಸರ್ಕಾರದಲ್ಲಿ ಕೋವಿಶೀಲ್ಡ್ ಲಸಿಕೆಗಳನ್ನು ಸ್ವೀಕರಿಸಿದ ಮೊದಲ ದೇಶ ಭೂತಾನ್ ಆಗಿದ್ದು, ಆ ಲಸಿಕೆಗಳನ್ನು ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿತ್ತು. ಇದನ್ನೂ ಓದಿ: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ, ದೇಶವು ಭಾರತದಿಂದ 1.5 ಲಕ್ಷ ಡೋಸ್‍ಗಳ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿದೆ. ಭೂತಾನ್ ಭಾರತದಿಂದ ಹೆಚ್ಚುವರಿಯಾಗಿ 4 ಲಕ್ಷ ಲಸಿಕೆಯನ್ನು ಸ್ವೀಕರಿಸಿತು. ಹೀಗಾಗಿ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರವ್ಯಾಪಿ ಲಸಿಕಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು ಭೂತಾನ್‍ಗೆ ಸಾಧ್ಯವಾಯಿತು. ಪ್ರಧಾನಿ ಮೋದಿ ಅವರು ಜಲವಿದ್ಯುತ್ ಕ್ಷೇತ್ರದ ಪಾಲುದಾರಿಕೆಯನ್ನು ವೈವಿಧ್ಯಗೊಳಿಸಲು ಮತ್ತು ಬಾಹ್ಯಾಕಾಶ, ಶಿಕ್ಷಣದಲ್ಲಿ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸಲು ಭೂತಾನ್‍ಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಸಿ ಭೂತಾನ್‍ನ ಪ್ರಧಾನಿ ಲೋಟೆ ತ್ಶೆರಿಂಗ್, ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

  • ಶುಕ್ರಿಯಾ ಭಾರತ್- ಕೊರೊನಾ ಲಸಿಕೆ ನೀಡಿದ್ದಕ್ಕೆ ಭೂತಾನ್‍ನ ಪುಟ್ಟ ಕಲಾವಿದೆಯಿಂದ ಭಾರತಕ್ಕೆ ಧನ್ಯವಾದ

    ಶುಕ್ರಿಯಾ ಭಾರತ್- ಕೊರೊನಾ ಲಸಿಕೆ ನೀಡಿದ್ದಕ್ಕೆ ಭೂತಾನ್‍ನ ಪುಟ್ಟ ಕಲಾವಿದೆಯಿಂದ ಭಾರತಕ್ಕೆ ಧನ್ಯವಾದ

    ಥಿಂಫು: ವಿಶ್ವದ ವಿವಿಧ ರಾಷ್ಟ್ರಗಳಿಗೆ ಭಾರತದಿಂದ ಈಗಾಗಲೇ ಬೃಹತ್ ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ಕಳುಹಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಆ ದೇಶದ ಪ್ರತಿನಿಧಿಗಳು, ಸೆಲೆಬ್ರಿಟಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಅದೇ ರೀತಿ ಭೂತಾನ್‍ಗೂ ಕೊರೊನಾ ಲಸಿಕೆ ಕಳಹಿಸಲಾಗಿದ್ದು, ಅಲ್ಲಿನ ಪುಟ್ಟ ಕಲಾವಿದೆ ವೀಡಿಯೋ ಸಂದೇಶದ ಮೂಲಕ ಧನ್ಯವಾದ ಹೇಳಿದ್ದಾಳೆ.

    ಭೂತಾನಲ್ಲಿನ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಈ ವೀಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಸ್ಥಳೀಯ ಬಾಲ ಪ್ರತಿಭೆ ಖೆನ್ರಾಬ್ ಯೀಡ್ಝಿನ್ ಸೈಲ್ಡೆನ್ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ. ಭಾರತ ಅಗತ್ಯ ವ್ಯಾಕ್ಸಿನ್ ಡೋಸಸ್ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳು ಎಂದು ಭೂತಾನ್‍ನ ಪುಟ್ಟ ಕಲಾವಿದೆ ತುಂಬಾ ಕ್ಯೂಟ್ ಆಗಿ ವಿಶ್ ಮಾಡಿದ್ದಾಳೆ.

    ಆರಂಭದಲ್ಲಿ ತನ್ನನ್ನು ಪರಿಚಯ ಮಾಡಿಕೊಂಡು ಮಾತು ಆರಂಭಿಸುವ ಬಾಲಕಿ, ದೇಶದಲ್ಲಿ ವ್ಯಾಕ್ಸಿನ್ ಡ್ರೈವ್ ಆರಂಭವಾಗಲು ಅಗತ್ಯವಿರುವ ಲಸಿಕೆ ಡೋಸ್ ಕಳುಹಿಸುವ ಮೂಲಕ ತುಂಬಾ ದಯೆ ತೋರಿಸಿದ್ದಕ್ಕೆ ಭಾರತಕ್ಕೆ ಧನ್ಯವಾದ ಎಂದು ಹೇಳಿದ್ದಾಳೆ. ವೀಡಿಯೋದ ಕೊನೆಯಲ್ಲಿ ತನ್ನ ಮುಗ್ದತೆ ಮೂಲಕವೇ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿ ಶುಕ್ರಿಯಾ ಎಂದು ಹೇಳಿ ನೆಟ್ಟಿಗರ ಮನಸು ಗೆದ್ದಿದ್ದಾಳೆ.

    ಭೂತಾನ್‍ನಲ್ಲಿ ಭಾರತದ ರಾಯಭಾರಿಯಾಗಿರುವ ರುಚಿರಾ ಅವರು ಈ ವೀಡಿಯೋವನ್ನು ಟ್ವೀಟ್ ಮಾಡಿ ಸಾಲುಗಳನ್ನು ಬರೆದಿದ್ದು, ಖೆನ್ರಾಬ್ ನಿಮ್ಮ ಧನ್ಯವಾದ ನಮ್ಮ ಹೃದಯ ಸ್ಪರ್ಶಿಸಿದೆ ಎಂದು ಬರೆದಿದ್ದಾರೆ. ಅಲ್ಲದೆ ವ್ಯಾಕ್ಸಿನ್ ಮೈತ್ರಿ, ಇಂಡಿಯಾ ಭೂತಾನ್ ಫ್ರಂಡ್‍ಶಿಪ್ ಹ್ಯಾಶ್ ಟ್ಯಾಗ್‍ಗಳನ್ನು ಬಳಸಿದ್ದಾರೆ.

    ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ 13,400 ವ್ಯೂವ್ಸ್ ಪಡೆದಿದೆ. 290 ಜನ ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ 1,354 ಲೈಕ್ಸ್ ಪಡೆದಿದೆ. ಆಕೆಯ ಕ್ಯೂಟ್‍ನೆಸ್ ಬಗ್ಗೆ ಜಾಲತಾಣದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಸಚ್ ಎ ಲವ್ಲಿ ಥ್ಯಾಂಕ್ಯೂ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದು, ಮತ್ತೊಬ್ಬರು ತಮಾಷೆಯಾಗಿ ನಾವು ಅವಳನ್ನು ಉಳಿಸಿಕೊಳ್ಳಬಹುದೇ ಎಂದು ಕೇಳಿದ್ದಾರೆ.

    ಮಾಚ್ 22ರಂದು 400 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಭೂತಾನ್‍ಗೆ ಕಳುಹಿಸಲಾಗಿದ್ದು, ಲಸಿಕೆಯನ್ನು ಕಾಂಬೋಜ್ ಸ್ವೀಕರಿಸಿದ್ದು, ಪರೋ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಸಚಿವ ತಾಂಡಿ ದೋರ್ಜಿ ಅವರಿಗೆ ಹಸ್ತಾಂತರಿಸಲಾಯಿತು. ವ್ಯಾಕ್ಸಿನ್ ಡ್ರೈವ್ ಆರಂಭಿಸಲು ಸಾಧ್ಯವಾಗಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಮಾರ್ಚ್ 27ರಿಂದ ವ್ಯಾಕ್ಸಿನೇಶನ್ ಡ್ರೈವ್ ಆರಂಭವಾಗಿದೆ ಎಂದು ಸಹ ತಿಳಿಸಿದ್ದಾರೆ.

  • ಪತ್ನಿ ಜೊತೆ ವಿರಾಟ್ ಜಾಲಿ ಟ್ರಿಪ್- ಹಳ್ಳಿಯ ಪುಟ್ಟ ಮನೆಯನ್ನ ಪರಿಚಯಿಸಿದ ವಿರುಷ್ಕಾ

    ಪತ್ನಿ ಜೊತೆ ವಿರಾಟ್ ಜಾಲಿ ಟ್ರಿಪ್- ಹಳ್ಳಿಯ ಪುಟ್ಟ ಮನೆಯನ್ನ ಪರಿಚಯಿಸಿದ ವಿರುಷ್ಕಾ

    -ಅದ್ಭುತ ಕ್ಷಣ ಹಂಚಿಕೊಂಡ ಅನುಷ್ಕಾ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಭೂತಾನ್‌ನಲ್ಲಿ ರಜಾದಿನ ಕಳೆಯುತ್ತಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ 31ನೇ ಹುಟ್ಟುಹಬ್ಬವನ್ನು ಮಂಗಳವಾರ ಆಚರಿಸಿಕೊಳ್ಳಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿರಾಟ್ ಹಾಗೂ ಅನುಷ್ಕಾ ದಂಪತಿ ಜಾಲಿ ಟ್ರಿಪ್ ಮೂಡ್‌ನಲ್ಲಿದ್ದಾರೆ. ಅವರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳ ಜೊತೆಗೆ ಬಾಲ್ಯದ ನೆನಪುಗಳನ್ನು ಹಾಗೂ ಪರ್ವತಗಳಲ್ಲಿ ಪಾದಯಾತ್ರೆ ಮಾಡುವ ದೃಶ್ಯವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಯಾವುದೇ ಫೋಟೋ ಹಾಗೂ ವಿಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿಲ್ಲ. ಇದನ್ನೂ ಓದಿ: ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

    ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸದ ಅನುಭವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಸೋಮಾವರ 8.5 ಕಿ.ಮೀ ಚಾರಣq ಕೈಗೊಂಡಿದ್ದೆವು. ಈ ಸಮಯದಲ್ಲಿ ಪರ್ವತದ ಮೇಲೆ ಒಂದು ಸಣ್ಣ ಹಳ್ಳಿಗೆ ಬಂದು ತಲುಪಿದಾಗ 4 ತಿಂಗಳ ಕರುವನ್ನು ಕಂಡು ಅದಕ್ಕೆ ಆಹಾರ ಹಾಕಲು ನಿಂತಿದ್ವಿ. ಕರುವಿಗೆ ಆಹಾರ ಹಾಕುತ್ತಿದ್ದ ನಮ್ಮನ್ನು ಗಮನಿಸಿದ ಮನೆಯ ಮಾಲೀಕರು ನಾವು ದಣಿದಿದ್ದೇವೆ ಎಂದು ತಿಳಿದು, ಒಂದು ಕಪ್ ಚಹಾವನ್ನು ಬಯಸುತ್ತೀರಾ ಎಂದು ಕೇಳಿದರು. ಆದ್ದರಿಂದ ನಾವು ಈ ಸುಂದರ ಮತ್ತು ಬೆಚ್ಚಗಿನ ಕುಟುಂಬದ ಮನೆಗೆ ಹೋದೆವು. ನಾವು ಯಾರೆಂದು ಮನೆಯಲ್ಲಿದ್ದವರು ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದರೂ ನಮ್ಮನ್ನು ಪ್ರೀತಿಯಿಂದ ಕಂಡರು ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B4c2AK4J0lV/

    2018ರ ಅಕ್ಟೋಬರ್ ನಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಇಲ್ಲದೇ ಆಡಿದ್ದರು. ಟೀಂ ಇಂಡಿಯಾ ಆಡಿರುವ 56 ಪಂದ್ಯಗಳಲ್ಲಿ 48 ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

    ಇಂದೋರ್ ನಲ್ಲಿ ನವೆಂಬರ್ 14ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ.

    https://www.instagram.com/p/B4UguwypnOX/