Tag: ಭೂತಕೋಲ

  • ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಶೂಟಿಂಗ್‌ಗೆ ಬ್ರೇಕ್ ಹಾಕಿ, ಮಂಗಳೂರಿಗೆ ಬಂದಿದ್ದಾರೆ. ತಮ್ಮ ಮನೆಯ ಭೂತಕೋಲದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ಬಾಹುಬಲಿ 2′ (Bahubali 2) ಸಕ್ಸಸ್ ನಂತರ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳದೇ ಅನುಷ್ಕಾ ಸೈಲೆಂಟ್‌ ಆಗಿದ್ದಾರೆ. ಆದರೆ ಈಗ ಹೊಸ ಪ್ರತಿಭೆ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಚಿತ್ರದ ಮೂಲಕ ಸ್ವೀಟಿ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ರಿಲೀಸ್‌ಗೆ ಸಜ್ಜಾಗಿರುವ ಬೆನ್ನಲ್ಲೇ ತಮ್ಮ ಮನೆಯ ಪಂಜುರ್ಲಿ ದೈವಕೋಲಕ್ಕೆ ಅನುಷ್ಕಾ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ದೈವದ ವೀಡಿಯೋ ಮಾಡ್ತಿರುವ ಅನುಷ್ಕಾ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅನುಷ್ಕಾ ಕುಟುಂಬದಲ್ಲಿ ದೈವದ ಆರಾಧನೆ ಮಾಡಿದ್ದಾರೆ. ನಟಿ ಮೂಲತಃ ಮಂಗಳೂರಿನವರಾಗಿದ್ದು, ಭೂತಕೋಲವನ್ನು ಮಾಡುತ್ತಾರೆ.

    ಇನ್ನೂ ಇತ್ತೀಚೆಗೆ ಕಾಂತಾರ (Kantara) ಸಿನಿಮಾ ನೋಡಿ, ಖುಷಿಯಿಂದ ಚಿತ್ರಕ್ಕೆ ಮತ್ತು ರಿಷಬ್ ಶೆಟ್ಟಿ ನಟನೆಗೆ ಅನುಷ್ಕಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಂತಾರದಲ್ಲಿ ದೈವ ಕಥೆಯನ್ನ ಅಚ್ಚುಕಟ್ಟಾಗಿ ತೆರೆಯ ಮೇಲೆ ತೋರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ಭೂತಕೋಲ ಹಿಂದೂ ಸಂಸ್ಕೃತಿ ಎನ್ನುವ ವಿಚಾರವಾಗಿ ನಟ ಚೇತನ್ ಆಡಿದ ವಿರೋಧಿ ಮಾತುಗಳು ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ. ಭೂತಕೋಲ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಹೇಳಿದ್ದರು. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ, ಅದೊಂದು ಬುಡಕಟ್ಟು ಸಂಪ್ರದಾಯ ಎಂದು ಹೇಳುವ ಮೂಲಕ ಚೇತನ್ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದರು.

    ಚೇತನ್ (Chetan) ಈ ರೀತಿ ಹೇಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ನಾನಾ ರೀತಿಯ ಕಾಮೆಂಟ್ ಗಳು ಬಂದವು. ಅದರಲ್ಲೂ ಚೇತನ್ ಪೌರತ್ವದ (Citizenship) ಬಗ್ಗೆಯೂ ಪ್ರಶ್ನೆ ಮಾಡಲಾಯಿತು. ಚೇತನ್ ಭಾರತದ ಪೌರತ್ವ ಪಡೆದಿಲ್ಲ. ಹಾಗಾಗಿ ಭಾರತದ ಬಗ್ಗೆ ಮಾತನಾಡುವಂತಹ ನೈತಿಕ ಹಕ್ಕು ಅವರಿಗಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೂ ಚೇತನ್ ಇದೀಗ  ಉತ್ತರಿಸಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೇತನ್, ‘ನಾನು ಚರ್ಚೆಯ ಮೂಲಕ ಗೆಲ್ಲಬೇಕು. ಸಂವಾದದ ಮೂಲಕ ಅರ್ಥ ಮಾಡಿಕೊಳ್ಳಬೇಕು. ನಾನು ಆಡಿದ ಮಾತುಗಳಲ್ಲಿ ಏನು ಸುಳ್ಳು ಇದೆ ಹೇಳಲಿ. ಯಾರಿಗೆ ನನ್ನನ್ನು ಸೋಲಿಸಲು ಆಗುವುದಿಲ್ಲವೋ, ಅವರು ಪೌರತ್ವದ ಬಗ್ಗೆ ಮಾತನಾಡುತ್ತಾರೆ. ನನ್ನ ಹುಟ್ಟು ನನ್ನ ಕೈಯಲ್ಲಿ ಇಲ್ಲ. ಯಾರ ಕೈಯಲ್ಲೂ ಇಲ್ಲ. ನಾನು ಯಾವಾಗಲೂ ಸತ್ಯದ ಪರವಾಗಿ ಇರುತ್ತೇನೆ. ಹಾಗಾಗಿ ಈ ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುವುದು ಅನಿವಾರ್ಯ’ ಅಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭೂತ ಕೋಲದ ವೇಳೆ ದುರಂತ: ತೆಂಗಿನ ಮರದಿಂದ ದೈವ ಪಾತ್ರಿ ಬೀಳೋದನ್ನು ನೋಡಿ

    ಭೂತ ಕೋಲದ ವೇಳೆ ದುರಂತ: ತೆಂಗಿನ ಮರದಿಂದ ದೈವ ಪಾತ್ರಿ ಬೀಳೋದನ್ನು ನೋಡಿ

    ಮಂಗಳೂರು: ಭೂತ ಕೋಲದ ವೇಳೆ ತೆಂಗಿನ ಮರದಿಂದ ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದೈವ ಪಾತ್ರಿಯೊಬ್ಬರು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಸುಮೇಶ್(40) ಮೃತಪಟ್ಟ ದೈವ ಪಾತ್ರಿ. ಕೇರಳದ ಕಣ್ಣೂರು ಜಿಲ್ಲೆಯ ಅಳಿಕೋಡಿ ಎಂಬಲ್ಲಿ ಫೆಬ್ರವರಿ 21ರ ಮುಂಜಾನೆ ಈ ದುರ್ಘಟನೆ ಸಂಭವಿಸಿತ್ತು.

    ಆಗಿದ್ದೇನು? ಕೇರಳದಲ್ಲಿ ಬಪ್ಪರ್ಯನ್ ಭೂತ ಕೋಲದ ಸಂಪ್ರದಾಯದಂತೆ ತೆಂಗಿನ ಮರಕ್ಕೆ ಏರಿ ನರ್ತನ ಮಾಡುವ ಪದ್ದತಿ ಇದೆ. ದೈವ ಪಾತ್ರಿ ಸುಮೇಶ್, ತೆಂಗಿನ ಮರ ಏರಿ ನರ್ತನ ಮಾಡುವ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.

    ಸುಮೇಶ್ ನೇರವಾಗಿ ತೆಂಗಿನ ಮರ ಕೆಳಗೆ ಹಾಕಲಾಗಿದ್ದ ಬೆಂಕಿಯ ಕುಂಡಕ್ಕೆ ಬಿದ್ದಿದ್ದು, ಕೂಡಲೇ ಅವರನ್ನು ಕಣ್ಣೂರಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಮೇಶ್ ಇಂದು ಸಾವನ್ನಪ್ಪಿದ್ದಾರೆ.

     

    ತೆಂಗಿನ ಮರದಿಂದ ದೈವ ಪಾತ್ರಿ ಬಿದ್ದು ಮೃತಪಡುವ ಎರಡನೇ ಪ್ರಕರಣ ಇದಾಗಿದೆ. ಇಲ್ಲಿ ಪಾತ್ರಧಾರಿ ತೆಂಗಿನ ಮರದಿಂದ ಬೀಳುತ್ತಿರುವ ವಿಡಿಯೋ ಮತ್ತು ಈ  ಭೂತಕೋಲ ಹೇಗೆ ನಡೆಯುತ್ತದೆ ಎಂದು ತೋರಿಸುವ ಮತ್ತೊಂದು ವಿಡಿಯೋವನ್ನು ನೀಡಲಾಗಿದೆ.

    https://www.youtube.com/watch?v=-0-JdrxIBAo