Tag: ಭೂಗಳ್ಳ

  • ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತ ಅರೆಸ್ಟ್

    ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತ ಅರೆಸ್ಟ್

    ಮೈಸೂರು: ಜಿಲ್ಲೆಯಲ್ಲಿ ಭೂಗಳ್ಳರ ಜಾಲ ಪತ್ತೆಯಾಗಿದ್ದು ಈ ಜಾಲದ ಕಿಂಗ್ ಪಿನ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ ಎಂಬುದು ಈಗ ಗೊತ್ತಾಗಿದ್ದು, ಬಂಧಿಸಲಾಗಿದೆ.

    ಪಂಚಾಕ್ಷರಿ (38) ಬಂಧಿತ ಆರೋಪಿ. ಈತ ಮೈಸೂರಿನ ಅಗ್ರಹಾರದ ನಿವಾಸಿಯಾಗಿದ್ದು, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾನೆ. ಈತನ ನೇತೃತ್ವದ ತಂಡ ನಗರದಲ್ಲಿ ಖಾಲಿ ಸೈಟ್‍ಗಳಿಗೆ ಬೇಲಿ ಹಾಕುತ್ತಿತ್ತು. ಮುಡಾ ಹಾಗೂ ಪಾಲಿಕೆ ಕಚೇರಿಗಳಲ್ಲಿ ಅವುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಈ ಜಾಗ ನಮ್ಮದೆಂದು ಜಾಗದ ಮೂಲ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದರು.

    ನಂತರ ಪಂಚಾಯ್ತಿಯಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವಂತೆ ಜಾಗದ ಮೂಲ ಮಾಲೀಕನಿಗೆ ಇವರೇ ಸಲಹೆ ನೀಡಿ ದೊಡ್ಡ ಮೊತ್ತ ಪಡೆದು ಬೇಲಿ ತೆರವುಗೊಳಿಸುತ್ತಿದ್ದರು. ಆರೋಪಿ ಪಂಚಾಕ್ಷರಿ ನೇತೃತ್ವದಲ್ಲಿ ಈ ಭೂಗಳ್ಳತನ ನಡೆಯುತ್ತಿತ್ತು.

    ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಇದೇ ರೀತಿಯ ಪ್ರಕರಣದಲ್ಲಿ ಪಂಚಾಕ್ಷರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಭೂಗಳ್ಳತನ ಮಾಫಿಯಾ ಬಯಲಾಗಿದೆ. ಸದ್ಯ ಆರೋಪಿಯನ್ನು ನಜರ್‍ಬಾದ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ, ಕಟ್ಟಡ ಏನ್ ಬೇಕಾದ್ರೂ ಕಟ್ಟಿ- ಭೂಗಳ್ಳರಿಗೆ ಕೆರೆಯನ್ನೇ ಮಾರಿತ್ತು ಸಿದ್ದು ಸರ್ಕಾರ!

    ರಸ್ತೆ, ಕಟ್ಟಡ ಏನ್ ಬೇಕಾದ್ರೂ ಕಟ್ಟಿ- ಭೂಗಳ್ಳರಿಗೆ ಕೆರೆಯನ್ನೇ ಮಾರಿತ್ತು ಸಿದ್ದು ಸರ್ಕಾರ!

    ಬೆಂಗಳೂರು: ಭೂಗಳ್ಳರಿಗೆ ಕೆರೆ ಗಿಫ್ಟ್, ಇದು ಕರ್ನಾಟಕದಲ್ಲಿ ಮಾತ್ರ. ಅಚ್ಚರಿಯಾದ್ರೂ ಸತ್ಯ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಂಥದೊಂದು ಎಡವಟ್ಟು ಕಾಯ್ದೆ ಬಂದಿದ್ದು, ಭೂಗಳ್ಳರಿಗೆ ವರದಾನವಾಗಿದೆ.

    ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನದಲ್ಲಿ ಈ ತಿದ್ದುಪಡಿ ಬಿಲ್ ಪಾಸಾಗಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮತಿ ಕೊಟ್ರೆ ಕೆರೆಯಂಗಳದಲ್ಲಿ ರಸ್ತೆ, ಸೇತುವೆ ಸೇರಿದಂತೆ ಇನ್ನಿತರ ಕಾಮಗಾರಿ ನಡೆಸಬಹುದಂತೆ. ಆದ್ರೆ ಈ ಕಾಮಗಾರಿಯಿಂದ ಕೆರೆಗಳ ಮೂಲ ಸಾಮಥ್ರ್ಯಕ್ಕೆ ಧಕ್ಕೆಯಾಗಬಾರದು ಅಂತಾ ಬೇರೆ ಸೇರಿಸಲಾಗಿದೆ.

    ಕೆರೆಯಂಗಳದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಅನ್ನುವ ಸ್ಪಷ್ಟ ಆದೇಶವಿದ್ರೂ, ಪದೇ ಪದೇ ಕೆರೆ ನಿರ್ಲಕ್ಷ್ಯ ವಿಚಾರದಲ್ಲಿ ಎನ್‍ಜಿಟಿಯಿಂದ ಛೀಮಾರಿ ಹಾಕಿಸಿಕೊಂಡ್ರೂ ಬುದ್ಧಿ ಕಲಿಯದ ಕಾಂಗ್ರೆಸ್ ಸರ್ಕಾರ, ಕೊನೆಯ ಅಧಿವೇಶನದಲ್ಲಿ ತರಾತುರಿಯಲ್ಲಿ ಈ ತಿದ್ದುಪಡಿ ಬಿಲ್ ಪಾಸ್ ಮಾಡಿದೆ. ಇದ್ರ ಹಿಂದೆ ಅಂದಿನ ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಕೆರೆ ಸಮಿತಿ ಅಧ್ಯಕ್ಷ ಕೋಳಿವಾಡರವರ ಕರಾಮತ್ತು ಇತ್ತಾ ಅನ್ನುವ ಅನುಮಾನವೂ ಮೂಡಿದೆ.