Tag: ಭೂಗರ್ಭ ತಜ್ಞ

  • ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಬೆಂಗಳೂರು: ಕ್ಯಾರ್, ಮಹಾ ಎರಡು ಚಂಡಮಾರುತದ ಅಬ್ಬರಕ್ಕೆ ಕರುನಾಡಿನ ಕರಾವಳಿ ಸೇರಿದಂತೆ ಬಹುತೇಕ ಭಾಗ ನಲುಗಿ ಹೋಗಿದೆ. ಈಗಾಗಲೇ ಮಹಾ ಅಬ್ಬರಕ್ಕೆ ಕರಾವಳಿ ಭಾಗದಲ್ಲಿ ಮಳೆ ಜೊತೆ ರಕ್ಕಸ ಅಲೆ ಸೃಷ್ಟಿಯಾಗಿದೆ. ಈ ಮಧ್ಯೆ ಇನ್ನೆರಡು ಚಂಡಮಾರುತದ ಎಚ್ಚರಿಕೆಯನ್ನು ಭೂಗರ್ಭ ವಿಜ್ಞಾನಿಗಳು ಕೊಟ್ಟಿದ್ದಾರೆ.

    ಕ್ಯಾರ್ ಚಂಡಮಾರುತದ ಹೊಡೆತ, ಮಹಾ ಚಂಡಮಾರುತದ ಘರ್ಜನೆ ಕರಾವಳಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ದಿನ ಹೈ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

    ಇದರ ನಡುವೆ ಇನ್ನೆರಡು ಸದ್ದಿಲ್ಲದೇ ಚಂಡಮಾರುತ ಬಂಗಾಳಕೊಲ್ಲಿಯ ಗರ್ಭದಲ್ಲಿ ಪುಟಿದೇಳಲು ತಯಾರಾಗಿದೆ. ಹೌದು ನವೆಂಬರ್ ತಿಂಗಳಲ್ಲಿ ಇನ್ನೆರಡು ಚಂಡಮಾರುತ ಫಾರ್ಮ್ ಆಗಲಿದ್ದು, ಮೊದಲ ವಾರದಲ್ಲಿಯೇ ಕರುನಾಡನ್ನು ಅಲ್ಲೋಲಕಲ್ಲೋಲ ಮಾಡುವ ಎಚ್ಚರಿಕೆಯನ್ನು ಭೂಗರ್ಭ ತಜ್ಞರು ಕೊಟ್ಟಿದ್ದಾರೆ.

    ಬಂಗಾಳಕೊಲ್ಲಿಯ ಸಾಗರದೊಳಗಿನ ಜ್ವಾಲಮುಖಿ ಸ್ಫೋಟದಿಂದ ಈ ಚಂಡಮಾರುತ ಸೃಷ್ಟಿಯಾಗಲಿದ್ದು ಜಲಪ್ರವಾಹ ತರುವ ಸಾಧ್ಯತೆ ಇದೆ. ಚಂಡಮಾರುತದ ಪರಿಣಾಮ ಬೆಂಗಳೂರು, ಮೈಸೂರು, ಕೋಲಾರ ರಾಮನಗರ ಭಾಗಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ ತಿಂಗಳು ಚಿಲ್ಡ್ ವೆದರ್ ಇರುತ್ತೆ ಅಂತೆಲ್ಲ ಅಂದುಕೊಂಡಿದ್ದ ಕರುನಾಡಿಗೆ ಈಗ ಜಲರಕ್ಕಸನ ಕಾಟದ ಮುನ್ಸೂಚನೆ ಸಿಕ್ಕಿದ್ದು, ಭೀತಿಯ ವಾತವರಣ ಸೃಷ್ಟಿಯಾಗಿದೆ.

  • ಇನ್ನೂ ಮೂರ್ನಾಲ್ಕು ದಿನ ಮಹಾ ಮಳೆ: ಭೂಗರ್ಭ ತಜ್ಞರಿಂದ ಎಚ್ಚರಿಕೆ

    ಇನ್ನೂ ಮೂರ್ನಾಲ್ಕು ದಿನ ಮಹಾ ಮಳೆ: ಭೂಗರ್ಭ ತಜ್ಞರಿಂದ ಎಚ್ಚರಿಕೆ

    ಬೆಂಗಳೂರು: ಕೊಡಗು, ಉತ್ತರ ಕನ್ನಡ, ಪಶ್ವಿಮ ಘಟ್ಟ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಭೂಗರ್ಭ ತಜ್ಞ ಎಚ್.ಎನ್ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕಳೆದ ವರ್ಷ ಕೊಡಗಿನಲ್ಲಿ ಉಂಟಾಗಿದ್ದಂತೆ ಈ ವರ್ಷವೂ ಭೂಕುಸಿತ, ಪ್ರವಾಹ ಮರುಕಳಿಸುತ್ತವೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಹವಾಯಿ ದೇಶದಲ್ಲಾದ ಜ್ವಾಲಾಮುಖಿ ಸ್ಫೋಟದಿಂದ ಕಳೆದ ವರ್ಷ ಕೇರಳ ಮತ್ತು ಮಡಿಕೇರಿಯಲ್ಲಿ ಭೂ ಕುಸಿತ, ಪ್ರವಾಹವಾಗಿತ್ತು. ಇದೀಗ ಆಗುತ್ತಿರುವ ಮೇಘ ಸ್ಫೋಟಕ್ಕೆ ಕಾರಣ ಮಾನ್ಸೂನ್ ಲಕ್ಷಣವಲ್ಲ. ಪಪುವ ನ್ಯೂ ಗಿನಿಯಾದಲ್ಲಾದ ಉಲಾವನ್ ಆಗಸ್ಟ್ 1 ರಿಂದ 3-4 ದಿನ ದೊಡ್ಡ ಜ್ವಾಲಾಮುಖಿ ಸ್ಫೋಟವಾಗಿದೆ. ಇದೇ ಇಂದಿನ ಮಹಾ ಮಳೆ, ಪ್ರವಾಹಕ್ಕೆ ಕಾರಣ ಎಂದು ಎಚ್.ಎನ್ ಪ್ರಕಾಶ್ ಮಾಹಿತಿ ನೀಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಮಳೆರಾಯ ತನ್ನ ಅಬ್ಬರವನ್ನು ಮುಂದುವರಿಸಿದ್ದಾನೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಮತ್ತೆ ಪ್ರವಾಹದ ಭೀತಿ ಎದುರಾಗಲಿದೆ. 2010ರಲ್ಲಿ ಉಂಟಾಗಿದ್ದ ಮಹಾ ಮಳೆಗೆ ರಾಯಚೂರು ಮಂತ್ರಾಲಯ ಮುಳುಗಿತ್ತು ಎಂದು ಅವರು ನೆನೆದರು.

    ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ಅವರು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ರಾಜ್ಯದ ಎಲ್ಲಾ ಭಾಗದಲ್ಲಿಯೂ ಆಗಸ್ಟ್ 8ರಂದು 64.55 ಮೀ.ಮೀ ಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತ್ತು. ಆಗಸ್ಟ್ 9ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಆದರೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಮುಂದುವರಿಯಲಿದೆ. ಆಗಸ್ಟ್ 10ರಂದು ರಾಜ್ಯದ ಎಲ್ಲಾ ಭಾಗದಲ್ಲಿಯೂ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.