Tag: ಭುವನ್ ಪೊನ್ನಣ್ಣ

  • ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್

    ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್

    ಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಭುವನ್ ಪೊನ್ನಣ್ಣ (Bhuvan Ponnanna) ದಂಪತಿಯ ಮುದ್ದಾದ ಮಗಳು ತ್ರಿದೇವಿ ಪೊನ್ನಕ್ಕ ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡಿದ್ದಾರೆ. ಈ ಖುಷಿಯನ್ನು ತಮ್ಮ ಜಾಲತಾಣದಲ್ಲಿ ಹರ್ಷಿಕಾ ಹಾಗೂ ಭುವನ್ ಹಂಚಿಕೊಂಡಿದ್ದಾರೆ.

    ನಟ ಭುವನ್ ಹಾಗೂ ನಟಿ ಹರ್ಷಿಕಾ ತಮ್ಮ ಕಂದಮ್ಮನ ಜೊತೆ ಎರಡು ವಾರಗಳಲ್ಲಿ ಮೂರು ದೇಶ ಸುತ್ತಿದ್ದಾರೆ. ಎಂಟು ತಿಂಗಳ ತ್ರಿದೇವಿ (Tridevi) ವಿಯೆಟ್ನಾಂ, ಶ್ರೀಲಂಕಾ, ಥೈಲ್ಯಾಂಡ್ ಸುತ್ತಾಡಿ ಬಂದಿದ್ದಾಳೆ.

    ವಿದೇಶ ಸುತ್ತಿದ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಮುದ್ದಾದ ಮಗು ನೋಡಿ ನೆಟ್ಟಿಗರು, ಆಪ್ತರು ಶುಭ ಹಾರೈಕೆ ತಿಳಿಸಿದ್ದಾರೆ.

  • ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನ

    ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನ

    ಸ್ಯಾಂಡಲ್‌ವುಡ್‌ (Sandalwood) ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಭುವನ್‌ ಪೊನ್ನಣ್ಣ (Bhuvann Ponnanna) ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಗುರುವಾರ ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಹಾಗೂ ಭುವನ್‌ ಪೊನ್ನಣ್ಣ ಜೋಡಿ ಹೆಣ್ಣು ಮಗುವಿನ ಆಗಮನವಾಗಿದೆ. ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಹೆಣ್ಣು ಮಗುವಿನ ಆಗಮನದಿಂದ ಸಂತಸಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹರ್ಷಿಕಾ ಜನ್ಮ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೊನ್ನಣ್ಣ, ಎಲ್ಲರಿಗೂ ನಮಸ್ಕಾರ, ನಮ್ಮ “ಚೈಕಾರ್ತಿ ಮೂಡಿ” ಜನಿಸಿದ್ದನ್ನು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಹರ್ಷಿ ಮತ್ತು ಮಗಳು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಕಾಳಂತೆ ಇದ್ದರೆ ಅವಳ ಪ್ರಕಾರ ಮಗು ನನ್ನ ಕಾಪಿ ಎನ್ನುತ್ತಿದ್ದಾಳೆ.ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

  • ಹರ್ಷಿಕಾ ಹಲ್ಲೆ ಪ್ರಕರಣ- ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭುವನ್ ದಂಪತಿ ಭೇಟಿ

    ಹರ್ಷಿಕಾ ಹಲ್ಲೆ ಪ್ರಕರಣ- ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭುವನ್ ದಂಪತಿ ಭೇಟಿ

    ಹುಬ್ಬಳ್ಳಿ: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ದಂಪತಿ ಇಂದು (ಏ.24) ಸಚಿವ ಪ್ರಹ್ಲಾದ್ ಜೋಶಿ (Prahalad Joshi) ನಿವಾಸಕ್ಕೆ ಭೇಟಿಯಾಗಿದ್ದಾರೆ. ಎಲೆಕ್ಷನ್ ಮುಗಿದ ನಂತರ ಹರ್ಷಿಕಾ ದಂಪತಿ ಮೇಲಿನ ಹಲ್ಲೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹರ್ಷಿಕಾ ತಿಳಿಸಿದ್ದಾರೆ.

    ಪ್ರಹ್ಲಾದ್ ಜೋಶಿರನ್ನು ಭೇಟಿಯಾಗಿ ತಮ್ಮ ಮೇಲಿನ ಹಲ್ಲೆ ಬಗ್ಗೆ ವಿವರಿಸಿದ್ದಾರೆ. ದೌರ್ಜನ್ಯದ ವಿಚಾರ ತಿಳಿದ್ಮೇಲೆ ಸಚಿವ ಪ್ರಹ್ಲಾದ್ ಜೋಶಿ ಕಾನೂನು ಕ್ರಮ ಜರುಗಿಸೋದಾಗಿ ದಂಪತಿಗೆ ಭರವಸೆ ನೀಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಭೇಟಿಯ ಬಳಿಕ ಬಗ್ಗೆ ಹರ್ಷಿಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಲು ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ಹರ್ಷಿಕಾ ಮಾತನಾಡಿದ್ದಾರೆ. ನಮಗೆ ಆದ ತೊಂದರೆಗೆ ಪ್ರಹ್ಲಾದ್ ಜೋಶಿಯವರು ಸ್ಪಂಧಿಸಿದ್ದರು. ಇಲ್ಲಿ ಬರುವ ಮುಂಚೆಯೇ ತಮ್ಮ ಮೇಲಿನ ಹಲ್ಲೆ ಬಗ್ಗೆ ಪ್ರಹ್ಲಾದ್ ಜೋಶಿಯವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅವರಿಗೆ ಧನ್ಯವಾದ ತಿಳಿಸಲು ಮನೆಗೆ ಬಂದಿದ್ದೇವೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಪರ ತಮ್ಮ ವಿಡಿಯೋ ದುರ್ಬಳಕೆ: ಗರಂ ಆದ ಅಲ್ಲು ಅರ್ಜುನ್

    ನಮ್ಮ ಕುಟುಂಬ ಯಾರ ತಂಟೆಗೂ ಹೋಗದೆ ನಮ್ಮ ಪಾಡಿಗೆ ನಾವಿದ್ದೇವೆ. ಬೆಂಗಳೂರಿನ ರೆಸ್ಟೋರೆಂಟ್‌ಗೆ ಹೋದಾಗ ಕೆಲವರು ತೊಂದರೆ ಮಾಡಿದ್ದಾರೆ. ಕನ್ನಡ ಮಾತಾಡಿದ್ದಕ್ಕೆ ನಮ್ಮ ಜೊತೆ ಜಗಳ ತೆಗೆದಿದ್ದಾರೆ. ನಮ್ಮ ರಾಜ್ಯದಲ್ಲಿ ನಾವು ಕನ್ನಡ ಮಾತನಾಡಿದ್ದೇ ತಪ್ಪಾ ಎಂದು ನಟಿ ಪ್ರಶ್ನಿಸಿದ್ದಾರೆ. ಅಂದು ಸಾಕಷ್ಟು ಜನರು ಜಮಾಯಿಸಿ ದೌರ್ಜನ್ಯ ಮಾಡಿದ್ದರು. ಕತ್ತಲ್ಲಿದ್ದ ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಸೆಲೆಬ್ರಿಟಿಗಳಿಗೆ ಹೀಗಾದರೆ ಜನಸಾಮಾನ್ಯರ ಸ್ಥಿತಿಯೇನು ಎಂದ ಹರ್ಷಿಕಾ ಬೇಸರ ಹೊರಹಾಕಿದ್ದಾರೆ.

    ಈ ವೇಳೆ, ಭುವನ್ ಪೊನ್ನಣ್ಣ ಪ್ರತಿಕ್ರಿಯಿಸಿ, ಜೋಶಿ ಸರ್‌ಗೆ ಭೇಟಿಯಾಗಿ ನಮಗಾದ ತೊಂದರೆ ಬಗ್ಗೆ ಹೇಳಿದ್ದೇವೆ. ಎಲೆಕ್ಷನ್ ಆದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೋಶಿ ಸರ್ ಭೇಟಿಯಾಗಿ ನಮಗೆ ಧೈರ್ಯ ಬಂದಿದೆ. ಬೆಂಗಳೂರು ಪೊಲೀಸರು ಸಮರ್ಪಕ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಿದ್ದು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಪೊಲೀಸರು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಮಾತನಾಡಿದ್ದಾರೆ.

  • ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫೋಟೋಗಳು

    ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫೋಟೋಗಳು

    ಸ್ಯಾಂಡಲ್‌ವುಡ್ ಹರ್ಷಿಕಾ-ಭುವನ್ ಮದುವೆ ಸಂಭ್ರಮ ಮನೆ ಮಾಡಿದೆ. ಇಂದು (ಆಗಸ್ಟ್) 24ರಂದು ಕೊಡಗಿನ ವಿರಾಜ್‌ಪೇಟೆಯಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿದೆ.

    12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ ಜೋಡಿ.

    ಗುರುಹಿರಿಯರ ಸಮ್ಮುಖದಲ್ಲಿ ಕೊಡವ ಪದ್ಧತಿಯಂತೆ ಹೊಸ ಬಾಳಿಗೆ ಹರ್ಷಿಕಾ-ಭುವನ್ (Bhuvan Ponnanna) ಜೋಡಿ ಕಾಲಿಟ್ಟಿದ್ದಾರೆ.

    ಆಗಸ್ಟ್ 23ರಂದು ಬುಧವಾರ ಕೊಡಗಿನಲ್ಲಿ ಊರ್ಕುಡುವ ಶಾಸ್ತ್ರ ನಡೆದಿದೆ. ಆಗಸ್ಟ್ 24ರಂದು ಹರ್ಷಿಕಾ ಜೋಡಿಯ ಮದುವೆ (Wedding) ಅದ್ದೂರಿಯಾಗಿ ಜರುಗಿದೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್

    ಭುವನ್ ಬಿಳಿ ಬಣ್ಣ ಉಡುಗೆಯಲ್ಲಿ ಮಿಂಚಿದ್ರೆ, ನಟಿ ಹರ್ಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಕೊಡವ ಗೆಟಪ್‌ನಲ್ಲಿ ನವಜೋಡಿ ಹೈಲೆಟ್ ಆಗಿದ್ದಾರೆ.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ.

    ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.

    ಹರ್ಷಿಕಾ-ಭುವನ್ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh), ಪೂಜಾ ಗಾಂಧಿ(Pooja Gandhi), ಬಿಎಸ್‌ವೈ, ಮುರುಗೇಶ್ ನಿರಾಣಿ, ದೊಡ್ಡಣ್ಣ, ಸುಧಾಕರ್, ಅನುಪ್ರಭಾಕರ್ ದಂಪತಿ, ತಬಲಾ ನಾಣಿ ಸೇರಿದಂತೆ ಹಲವರು ಭಾಗಿಯಾಗಿ ಶುಭಹಾರೈಸಿದ್ದರು.

    ಚಂದನವನದ ನವ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ನೂರು ಕಾಲ ಜೊತೆಯಾಗಿ ಸುಖವಾಗಿ ಬಾಳಲಿ ಎಂದು ವಿಶ್ ಮಾಡ್ತಿದ್ದಾರೆ.

    ‘ಪಿಯುಸಿ’ (Puc) ಸಿನಿಮಾ ಮೂಲಕ ನಟಿ ಹರ್ಷಿಕಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಜಾಕಿ, ತಮಸ್ಸು, ಕಾಸಿನ ಸರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕೊಂಕಣಿ, ತುಳು ಸೇರಿದಂತೆ 8 ಭಾಷೆಗಳಲ್ಲಿ ನಾಯಕಿಯಾಗಿ ಹರ್ಷಿಕಾ ಗಮನ ಸೆಳೆದಿದ್ದಾರೆ.

    ಭುವನ್ ಪೊನ್ನಣ್ಣ ಅವರು ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ, ರಾಂಧವ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.

    ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮದುವೆಯ ಸುಂದರ ಫೋಟೋಗಳು ದೀಪಕ್ ವಿಜಯ್ (Deepak Vijay Photography) ಕ್ಯಾಮೆರಾ ಕಣ್ಣಲ್ಲಿ ಮೂಡಿ ಬಂದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರ್ಷಿಕಾ-ಭುವನ್: ಕೊಡಗು ಶೈಲಿಯ ಮದುವೆ ಹೇಗಿರುತ್ತೆ ಗೊತ್ತಾ?

    ಹರ್ಷಿಕಾ-ಭುವನ್: ಕೊಡಗು ಶೈಲಿಯ ಮದುವೆ ಹೇಗಿರುತ್ತೆ ಗೊತ್ತಾ?

    ಸ್ಯಾಂಡಲ್‌ವುಡ್ ಬ್ಯೂಟಿ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ (Bhuvan) ಇಂದು (ಆಗಸ್ಟ್ 24) ಕೊಡವ ಸಂಪ್ರದಾಯದಂತೆ ದಾಂಪತ್ಯ(Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಜ್‌ಪೇಟೆಯ ಅಮ್ಮಾತ್ತಿ ಕೊಡವ ಸಮಾಜದಲ್ಲಿ ಮದುವೆ ಅದ್ದೂರಿಯಾಗಿ ಜರುಗಿದೆ. ಆಗಸ್ಟ್ 23-24ರಂದು ಎರಡು ದಿನ ಕೊಡವ ಶೈಲಿಯಂತೆ ವಿವಾಹ ನಡೆದಿದೆ. ಅಷಕ್ಕೂ ಕೊಡವ ಶೈಲಿಯ ಮದುವೆ ಹೇಗಿರುತ್ತೆ? ಈ ಬಗ್ಗೆ ಇಲ್ಲಿದೆ ಮಾಹಿತಿ.

    ಕೊಡವ ಸಂಪ್ರದಾಯ ಮದುವೆ ಕೊಂಚ ವಿಭಿನ್ನ. ಕೊಡಗಿನ ಮದುವೆ ದಿನದ ವಧು-ವರನ ಉಡುಗೆ, ಡ್ಯಾನ್ಸ್, ಮದುವೆ ಊಟದ ಮೆನು ಎಲ್ಲವೂ ಸ್ಪೆಷಲ್ ಆಗಿರುತ್ತದೆ. ಎರಡು ದಿನ ಈ ಅದ್ದೂರಿ ಮದುವೆಯಲ್ಲಿ, ಮೊದಲ ದಿನ ಊರ್ಕುಡುವ ಶಾಸ್ತ್ರವಿರುತ್ತದೆ. ಈ ದಿನವೇ ಹರ್ಷಿಕಾಗೆ ತಾಯಿಯಿಂದ ಮಾಂಗಲ್ಯದಾರಣೆ ಆಗಿದೆ. ನಂತರ ಹುಡುಗ-ಹುಡುಗಿ ಪರಸ್ಪರ ನೋಡುವ ಹಾಗಿಲ್ಲ. ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹೆಂದಿ ಶಾಸ್ತ್ರ ಜರುಗಲಿದೆ. ಇದನ್ನೂ ಓದಿ:ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ

    ಎರಡನೇ ದಿನ ಬೆಳಿಗ್ಗೆ ಹರ್ಷಿಕಾಗೆ ಬಳೆ ತೊಡಿಸುವ ಶಾಸ್ತ್ರ ನಡೆಯಿತು. ಬಳಿಕ ಪೊಂಬಣ ಪೂಜೆ ಮಾಡಿಸಲಾಗುತ್ತದೆ. ಅದು ವರ ಪೂಜೆ ರೀತಿಯಲ್ಲಿರುತ್ತದೆ. ಇತ್ತ ಮದುವೆ ಹುಡುಗ ಬಾಳೆ ಕಡೆದು ಮಂಟಪಕ್ಕೆ ಬರುತ್ತಾರೆ. ಈ ಶಾಸ್ತ್ರ ಭುವನ್ ನೆರವೇರಿಸಿ ಮಂಟಪಕ್ಕೆ ಬಂದಿದ್ದಾರೆ. ಭುವನ್ ನನ್ನು ಹುಡುಗಿ ಮನೆಯವರು ಕರೆದುಕೊಂಡು ಹೋಗ್ತಾರೆ. ಹರ್ಷಿಕಾ ಅಮ್ಮ ಹುಡುಗನಿಗೆ ಹಾಲು, ಬಾಳೆಹಣ್ಣು  ತಿನ್ನಿಸಿದ್ದಾರೆ. ನಂತರ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತ ಶುರು ಮಾಡಿದ್ದಾರೆ. ಬಂದ ಅತಿಥಿಗಳು ಹುಡುಗ ಹುಡುಗಿಗೆ ಅಕ್ಕಿಹಾಕಿ ಆಶೀರ್ವಾದ ಮಾಡಿ ಗಿಫ್ಟ್ ಕೊಡುತ್ತಾರೆ. ಕೊನೆಯಲ್ಲಿ ಹುಡುಗ- ಹುಡುಗಿ ಕೈ ಹಿಡಿದು ಎಬ್ಬಿಸ್ತಾನೆ. ಅದರಂತೆ ಹರ್ಷಿಕಾ ಕೈ ಹಿಡಿದು ಭುವನ್ ಎಬ್ಬಿಸಿದ್ದಾರೆ.

    ಇಂದು (ಆಗಸ್ಟ್‌ 24) ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ- ಭುವನ್ ಕೊಡವ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ. ಮದುವೆಯೂ ಮುನ್ನವೇ ಜೋಡಿಯಾಗಿ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಇದೀಗ  ಹರ್ಷಿಕಾ ದಂಪತಿಯ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ತಬಲಾ ನಾಣಿ, ಮಾಜಿ ಸಿಎಂ ಬಿಎಸ್ ವೈ, ಮುರುಗೇಶ್ ನಿರಾಣಿ, ಪೂಜಾ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದ್ದರು.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.

    ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ ಎಂದು ಇತ್ತೀಚಿಹೆ ಈ ನವಜೋಡಿ ಲವ್, ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ

    ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ

    ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ(Bhuvan Ponnanna) ಮದುವೆ ಕೊಡಗಿನಲ್ಲಿ ಇಂದು (ಆಗಸ್ಟ್ 24) ಅದ್ದೂರಿಯಾಗಿ ನಡೆದಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ಜೋಡಿಯ ಮದುವೆಯಲ್ಲಿ ಬಗೆ ಬಗೆಯ ಭೋಜನ ಸಿದ್ಧಪಡಿಸಿದ್ದಾರೆ. ಮದುವೆಯ ಭೋಜನ ಮೆನು ಹೀಗಿದೆ ನೋಡಿ.

    ಹರ್ಷಿಕಾ-ಭುವನ್ ಮದುವೆ(Wedding) ಅದ್ದೂರಿಯಾಗಿ ನಡೆದಿದೆ. ನಾನ್ ವೆಜ್-ವೆಜ್ ಎರಡು ಶೈಲಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಕೊಡವ ಶೈಲಿಯ ನೂಪಟ್ಟು, ಪೋರ್ಕ್ ಫ್ರೈ, ಪೋರ್ಕ್ ಕರಿ, ಮಟನ್ ಬಿರಿಯಾನಿ, ಮಟನ್ ಫ್ರೈ, ಚಿಕನ್ ಫ್ರೈ ಸೇರಿದಂತೆ ಹಲವು ಬಗೆಯ ಐಟಂಗಳನ್ನ ಮದುವೆಯಲ್ಲಿ ಮಾಡಿಸಲಾಗಿದೆ.

    ನವ ಜೋಡಿಯ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh), ದೊಡ್ಡಣ್ಣ, ತಬಲಾ ನಾಣಿ, ಮಾಜಿ ಸಿಎಂ ಬಿಎಸ್ ವೈ, ಮುರುಗೇಶ್ ನಿರಾಣಿ ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದ್ದರು. ಇದನ್ನೂ ಓದಿ:ಮಾಜಿ ಬಾಯ್ ಫ್ರೆಂಡ್ ಜೊತೆ ಸಿನಿಮಾ ಮಾಡಲು ಓಕೆ ಎಂದ ‘ಕೆಜಿಎಫ್ 2’ ನಟಿ

    ಇಂದು ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ- ಭುವನ್ ಕೊಡವ(Kodava) ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ. ಮದುವೆಯೂ ಮುನ್ನವೇ ಜೋಡಿಯಾಗಿ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಇದೀಗ ಮದುವೆಯಾಗಿರೋ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಹರ್ಷಿಕಾ ದಂಪತಿಯ ಮದುವೆಗೆ ಮಾಜಿ ಸಿಎಂ ಬಿಎಸ್‌ವೈ, ನಟ ತಬಲಾ ನಾಣಿ ಕೂಡ ಹಾಜರಿ ಹಾಕಿದ್ದಾರೆ.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.

    ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ ಎಂದು ಇತ್ತೀಚಿಹೆ ಈ ನವಜೋಡಿ ಲವ್, ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ- ಭುವನ್ ಜೋಡಿ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ- ಭುವನ್ ಜೋಡಿ

    ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ (Bhuvan Ponnanna) ಇಂದು (ಆಗಸ್ಟ್ 24) ಕೊಡಗಿನಲ್ಲಿ (Kodava) ಅದ್ದೂರಿಯಾಗಿ ಮದುವೆಯಾಗಿದ್ದಾರೆ. 12 ವರ್ಷಗಳ ಪ್ರೀತಿಗೆ ಇದೀಗ ಮದುವೆಯ ಮುದ್ರೆ ಒತ್ತಿದ್ದಾರೆ.

    ಇಂದು ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ(Harshika Poonacha)- ಭುವನ್ ಕೊಡವ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ. ಇದನ್ನೂ ಓದಿ:ಮುಕ್ತಾಯ ಹಂತದಲ್ಲಿ ‘ಕರಟಕ ದಮನಕ’: ಶಿವಣ್ಣ-ಪ್ರಭುದೇವ ನಟನೆಯ ಚಿತ್ರ

    ಮದುವೆಯೂ ಮುನ್ನವೇ ಜೋಡಿಯಾಗಿ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಇದೀಗ ಮದುವೆಯಾಗಿರೋ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಹರ್ಷಿಕಾ ದಂಪತಿಯ ಮದುವೆಗೆ ಮಾಜಿ ಸಿಎಂ ಬಿಎಸ್‌ವೈ, ನಟ ತಬಲಾ ನಾಣಿ ಕೂಡ ಹಾಜರಿ ಹಾಕಿದ್ದಾರೆ.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.

    ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ ಎಂದು ಇತ್ತೀಚಿಹೆ ಈ ನವಜೋಡಿ ಲವ್, ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರ್ಷಿಕಾ ಪೂಣಚ್ಚ ಮನೆಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ

    ಹರ್ಷಿಕಾ ಪೂಣಚ್ಚ ಮನೆಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ

    ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ(Harshika Poonachcha)-ಭುವನ್ (Bhuvan) ಮದುವೆ (Wedding) ಸಂಭ್ರಮ ಮನೆ ಮಾಡಿದೆ. ಇದೇ ಆಗಸ್ಟ್ 24ರಂದು ಕೊಡವ (Kodava) ಪದ್ಧತಿಯಂತೆ ಭುವನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆಗೂ ಮುನ್ನ ತಯಾರಿ ಮತ್ತು ಪೂಜಾ ವಿಧಾನಗಳು ನಟಿಯ ಮನೆಯಲ್ಲಿ ಜರಗುತ್ತಿವೆ. ಇದನ್ನೂ ಓದಿ:‘ಸಲಾರ್’ ಸೆಟ್‌ನಿಂದ ಮ್ಯಾಟರ್ ಲೀಕ್- ಪ್ರಭಾಸ್ ಚಿತ್ರದ ಬಿಗ್ ಅಪ್‌ಡೇಟ್

    ಹರ್ಷಿಕಾ-ಭುವನ್ 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಭರ್ಜರಿಯಾಗಿ ಮದುವೆ ತಯಾರಿ ಹರ್ಷಿಕಾ ಮನೆಯಲ್ಲಿ ನಡೆಯುತ್ತಿದೆ. ಈ ಕುರಿತ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಹೇಳಿದ್ದಾರೆ.

    ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ. ಮುಂದಿನ ನಮ್ಮಿಬ್ಬರ ಕೊಡವ ಶೈಲಿಯಲ್ಲಿ ಮದುವೆ ಎಂದು ಖುಷಿಯಿಂದ ಭುವನ್ ಮಾತನಾಡಿದ್ದಾರೆ.

    ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ಕೊಡಗಿನ ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ ನಡೆಯಲಿದೆ. ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಡವ ಸಂಪ್ರದಾಯದಂತೆ ನಮ್ಮ ಮದುವೆ: ಭುವನ್

    ಕೊಡವ ಸಂಪ್ರದಾಯದಂತೆ ನಮ್ಮ ಮದುವೆ: ಭುವನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದೇ ಆಗಸ್ಟ್ 24ಕ್ಕೆ ಕೊಡವ ಪದ್ಧತಿಯಂತೆ ಹರ್ಷಿಕಾ- ಭುವನ್ ಮದುವೆ

    ಇದೇ ಆಗಸ್ಟ್ 24ಕ್ಕೆ ಕೊಡವ ಪದ್ಧತಿಯಂತೆ ಹರ್ಷಿಕಾ- ಭುವನ್ ಮದುವೆ

    ಸ್ಯಾಂಡಲ್‌ವುಡ್ (Sandalwood) ಚಿಟ್ಟೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ (Bhuvan Ponnanna) ಅವರು ಇದೇ ಆಗಸ್ಟ್ 24ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಕೊಡಗಿನ ಜೋಡಿ ಗುಡ್ ನ್ಯೂಸ್ ಕೊಡ್ತಿದ್ದಾರೆ.

    harshika-poonacha-101391458

    ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದ್ದಾರೆ. ಹರಿಪ್ರಿಯಾ-ವಸಿಷ್ಠ, ಅಭಿಷೇಕ್ ಅಂಬರೀಶ್- ಅವಿವಾ ಜೋಡಿ ನಂತರ ಹರ್ಷಿಕಾ-ಭುವನ್ ದಾಂಪತ್ಯ ಬದುಕಿಗೆ ಅಣಿಯಾಗುತ್ತಿದ್ದಾರೆ.

    ‘ಪಿಯುಸಿ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪರಿಚಿತರಾದ ನಟಿ ಹರ್ಷಿಕಾ ಪೂಣಚ್ಚ (Harshika Poonachcha) ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ತಮಸ್ಸು, ಜಾಕಿ ಚಿತ್ರದಲ್ಲಿ ಹರ್ಷಿಕಾ ಅದ್ಭುತವಾಗಿ ನಟಿಸಿದ್ದರು. ಕೊಡಗಿನ ಕುವರಿ ಹರ್ಷಿಕಾ ಅವರು ಸಾಲು ಸಾಲು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುವ ಸಂದರ್ಭದಲ್ಲಿ 2010ರಲ್ಲಿ ಭುವನ್ ಪೊನ್ನಣ್ಣ ಅವರು `ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಗಣೇಶ್ ನಟನೆಯ ಕೂಲ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಭುವನ್ ನಟಿಸಿದ್ರು. ಆದರೆ ಗುರುತಿಸುವಂತಹ ಪಾತ್ರ ಅವರಿಗೆ ಸಿಗಲೇ ಇಲ್ಲಾ. ಅದ್ಯಾವಾಗ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ ಮೂಲಕ ದೊಡ್ಮನೆಗೆ ಕಾಲಿಟ್ರೋ ಅಂದಿನಿಂದ ಕನ್ನಡಿಗರ ಕಣ್ಣಿಗೆ ಭುವನ್ ಗಮನ ಸೆಳೆದರು. ಇದನ್ನೂ ಓದಿ:ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್

    ಹರ್ಷಿಕಾ- ಭುವನ್ ಒಂದೇ ಜಿಲ್ಲೆ ಕೊಡಗಿನವರಾಗಿದ್ದಾರೆ. ಆ ಆಪ್ತತೆಯೇ ಇಬ್ಬರನ್ನು ಲವ್ ರಿಂಗ್‌ಗೆ ಬೀಳುವಂತೆ ಮಾಡಿತ್ತು. ಹಲವು ವರ್ಷಗಳ ಗೆಳೆತನವೇ ಇಂದು ಮದುವೆಯೆಂಬ ಹೊಸ ಹೆಜ್ಜೆ ಇಡಲು ಸಾಕ್ಷಿಯಾಗಿದೆ. ಈ ಜೋಡಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಅನೇಕ ಬಾರಿ ಗಾಸಿಪ್ ಹಬ್ಬಿತ್ತು. ಆದರೆ ಆ ಕುರಿತು ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಅವರಿಬ್ಬರು ವೈವಾಹಿಕ ಜೀವನ ಆರಂಭಿಸುವ ಸಿದ್ಧತೆಯಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿವೆ. ಇದನ್ನೂ ಓದಿ:ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್

    ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ ಸಮಾರಂಭ ನಡೆದಿದೆ. ಇದಾದ ಬಳಿಕ ಕೊಡವ (Kodava) ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ (Wedding) ನಡೆಯಲಿದೆ. ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸದ್ಯ ಈ ಜೋಡಿ, ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.