Tag: ಭುವನೇಶ್ವರ

  • ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಕಸದ ಬುಟ್ಟಿಯಲ್ಲಿ 8ರ ಬಾಲಕಿ ಪತ್ತೆ- ಅತ್ಯಾಚಾರ ನಡೆದಿರುವ ಶಂಕೆ

    ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಕಸದ ಬುಟ್ಟಿಯಲ್ಲಿ 8ರ ಬಾಲಕಿ ಪತ್ತೆ- ಅತ್ಯಾಚಾರ ನಡೆದಿರುವ ಶಂಕೆ

    ಭುವನೇಶ್ವರ: 8 ವರ್ಷದ ಬಾಲಕಿಯೊಬ್ಬಳು ಕಸದ ಬುಟ್ಟಿಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ದುಷ್ಕರ್ಮಿಗಳು ಅತ್ಯಾಚಾರಗೈದು ಈ ರೀತಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಅರೆಪ್ರಜ್ಞಾವಸ್ಥೆಯಲ್ಲಿ ಕಸದ ರಾಶಿಯ ಮೇಲೆ ಪತ್ತೆಯಾಗಿದ್ದಾಳೆ. ಬಾಲಕಿ ದೇಹದ ಮೇಲೆ ಹಲವು ಗಾಯಗಳಾಗಿದ್ದು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ.

    ಕಸದ ರಾಶಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯನ್ನು ಅಪಹರಿಸಿ ನಂತರ ಅತ್ಯಾಚಾರವೆಸಗಿ ಕಸದ ಬುಟ್ಟಿಗೆ ಎಸೆದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ ಎಂದು ಶಂಕಿಸಲಾಗಿದೆ. ಈಗಾಗಲೇ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಬಾಲಕಿ ಕುಟುಂಬದವರ ಜೊತೆ ಮನೆಯಲ್ಲಿ ಮಲಗಿದ್ದಳು. ಆದರೆ ಸ್ಪಲ್ಪ ಹೊತ್ತಿನ ಬಳಿಕ ಆಕೆ ಕಾಣೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿ, ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಮರುದಿನ ಆಕೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಕಸದ ರಾಶಿಯಲ್ಲಿ ಪತ್ತೆಯಾಗಿದ್ದಾಳೆ.

    ಪೊಲೀಸರು ಪ್ರಾಥಮಿಕ ಹಂತದ ತನಿಖೆ ನಡೆಸಿದ್ದು, ಹಲವು ವಿಚಾರದ ಬಗ್ಗೆ ತಿಳಿದು ಬಂದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ವೈದ್ಯಕೀಯ ವರದಿ ಬಂದ ಬಳಿಕ ಶಂಕೆ ನಿಜವಾದಲ್ಲಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಾಲಕಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನಾವು ವಿಧಿವಿಜ್ಞಾನ ತಂಡವನ್ನು ಘಟನಾ ಸ್ಥಳಕ್ಕೆ ಪರಿಶೀಲನೆಗಾಗಿ ಕಳುಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • 67ರ ವೃದ್ಧೆಯ ಮೇಲೆ ರೇಪ್ – ಗುಪ್ತಾಂಗಕ್ಕೆ ಕಟ್ಟಿಗೆ ಹಾಕ್ದ

    67ರ ವೃದ್ಧೆಯ ಮೇಲೆ ರೇಪ್ – ಗುಪ್ತಾಂಗಕ್ಕೆ ಕಟ್ಟಿಗೆ ಹಾಕ್ದ

    ಭುವನೇಶ್ವರ: ಮನೆಗೆ ನುಗ್ಗಿ ಸಂಬಂಧಿಕನೇ 67 ವರ್ಷದ ವೃದ್ಧೆಯ ಗುಪ್ತಾಂಗಕ್ಕೆ ಕಟ್ಟಿಗೆ ಹಾಕಿ, ಅತ್ಯಾಚಾರಗೈದ ಅಮಾನುಷ ಘಟನೆ ಒಡಿಶಾದಲ್ಲಿ ನಡೆದಿದೆ.

    ಸಾಂಬಲ್‍ಪುರ ಜಿಲ್ಲೆಯ ಮಹುಲಪಾಲಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ. ವೃದ್ಧೆಯ ಸಂಬಂಧಿಕ 42 ವರ್ಷದ ವ್ಯಕ್ತಿ ಅತ್ಯಾಚಾರ ಎಸೆಗಿರುವ ಆರೋಪಿಯಾಗಿದ್ದಾನೆ. ವೃದ್ಧೆಯ ಮನೆಯ ಬಳಿಯೇ ಆರೋಪಿ ಕೂಡ ವಾಸಿಸುತ್ತಿದ್ದನು. ಗುರುವಾರದಂದು ಆರೋಪಿ ವೃದ್ಧೆಯ ಮನೆಗೆ ನುಗ್ಗಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಅಷೇ ಅಲ್ಲದೆ ದುಷ್ಕೃತ್ಯವೆಸೆಗಿ ವೃದ್ಧೆಯ ಗುಪ್ತಾಂಗಕ್ಕೆ ಕಟ್ಟಿಗೆ ಹಾಕಿ ವಿಕೃತಿ ಮೆರೆದಿದ್ದಾನೆ.

    ಈ ಘಟನೆ ನಡೆದ ಕೆಲ ಸಮಯದ ಬಳಿಕ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ನೋಡಿ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಸದ್ಯ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ನಾವು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚಿಗೆ ಒಡಿಶಾದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರತಿದಿನವು ಈ ಸಂಬಂಧ ಪ್ರಕರಣ ದಾಖಲಾಗುತ್ತಿದೆ. ಸಾಂಬಲ್‍ಪುರ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 2 ಅತ್ಯಾಚಾರ ಪ್ರಕರಣ ದಾಖಲಾಗಿದೆ. ಜುಲೈ 11 ರಂದು ಕಾಲೇಜು ವಿದ್ಯಾರ್ಥಿನಿಯನ್ನು ಶಿಕ್ಷಕನೊಬ್ಬ ಅತ್ಯಾಚಾರ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

  • ವಿಡಿಯೋ ಇಟ್ಟುಕೊಂಡು ಸೆಕ್ಸ್‌ಗಾಗಿ ಯುವತಿಗೆ ಬ್ಲ್ಯಾಕ್‍ಮೇಲ್

    ವಿಡಿಯೋ ಇಟ್ಟುಕೊಂಡು ಸೆಕ್ಸ್‌ಗಾಗಿ ಯುವತಿಗೆ ಬ್ಲ್ಯಾಕ್‍ಮೇಲ್

    ಭುವನೇಶ್ವರ: ಯುವಕನೊಬ್ಬ ಯುವತಿಯ ಅಶ್ಲೀಲ ವಿಡಿಯೋವನ್ನು ಇಟ್ಟುಕೊಂಡು ದೈಹಿಕ ಸಂಪರ್ಕ ಹೊಂದುವಂತೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದು, ಇದೀಗ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ.

    ಬಂಧಿತನನ್ನು ಜಿಲ್ಲೆಯ ಪಟ್ಟಮುಂಡೈ ಪ್ರದೇಶದ ಸೌಮ್ಯಾ ರಂಜನ್ ಸಾಹು ಎಂದು ಗುರುತಿಸಲಾಗಿದೆ. ಆರೋಪಿ ಸಾಹು ಯುವತಿಯ ಅಶ್ಲೀಲ ವಿಡಿಯೋವನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ಆ ವಿಡಿಯೋ ಇಟ್ಟುಕೊಂಡು ಯುವತಿಗೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಸಾಹು ಒಂದು ವೇಳೆ ತನ್ನೊಂದಿಗೆ ಸೆಕ್ಸ್‌ಗೆ ಒಪ್ಪದೇ ಇದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದಾನೆ. ಕೊನೆಗೆ ಯುವತಿ ಆತನ ಕಿರುಕುಳವನ್ನು ಸಹಿಸಲಾಗದೆ ಈ ಬಗ್ಗೆ ತನ್ನ ಸಂಬಂಧಿಯೊಬ್ಬರಿಗೆ ತಿಳಿಸಿದ್ದಾಳೆ.

    ವಿಚಾರ ತಿಳಿದ ಯುವತಿಯ ಸಂಬಂಧಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಯುವತಿಯ ಸಂಬಂಧಿ ನೀಡಿದ ದೂರಿ ಅನ್ವಯ ಪಟ್ಟಮುಂಡೈ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

  • ಇಬ್ಬರ ಬ್ಯಾಗಿನಲ್ಲಿ ಬರೋಬ್ಬರಿ 81 ಲಕ್ಷ ಹಣ ಪತ್ತೆ

    ಇಬ್ಬರ ಬ್ಯಾಗಿನಲ್ಲಿ ಬರೋಬ್ಬರಿ 81 ಲಕ್ಷ ಹಣ ಪತ್ತೆ

    ಭುವನೇಶ್ವರ: ಟ್ವಿನ್ ಸಿಟಿ ಕಮಿಷನರೇಟ್ ಪೊಲೀಸರು ಶನಿವಾರ ರಾತ್ರಿ ಒಡಿಶಾದ ಕಟಕ್ ನಗರದ ಬಾದಂಬಾಡಿ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳಿಂದ ಬರೋಬ್ಬರಿ 81 ಲಕ್ಷ ರೂ. ಹಣವನ್ನು ವಶ ಪಡಿಸಿಕೊಂಡಿದ್ದಾರೆ.

    ಬಂಧಿತರು ಪಶ್ಚಿಮ ಬಂಗಾಳದ ಮದಿನಿಪುರ ಜಿಲ್ಲೆಯವರು ಎಂದು ಗುರುತಿಸಲಾಗಿದ್ದು, ಅವರಿಬ್ಬರು ತಾವೂ ಆಭರಣ ವ್ಯಾಪಾರಿಗಳು ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇಬ್ಬರು ಶನಿವಾರ ತಡರಾತ್ರಿ ಬ್ಯಾಗ್‍ನಲ್ಲಿ ಹಣವನ್ನು ತುಂಬಿಕೊಂಡು ಸಾಗಿಸುತ್ತಿದ್ದರು. ಇಬ್ಬರು ಬದಂಬಾಡಿ ಪೊಲೀಸ್ ಠಾಣೆ ಬಳಿ ಬರುತ್ತಿದ್ದಂತೆ ಅನುಮಾನದ ಮೇರೆಗೆ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರ ಬಳಿಯಿದ್ದ ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಆಗ ಬ್ಯಾಗಿನಲ್ಲಿ ಬರೋಬ್ಬರಿ 81 ಲಕ್ಷ ನಗದು ಪತ್ತೆಯಾಗಿದ್ದು, ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಇಬ್ಬರು ವ್ಯಕ್ತಿಗಳಿಂದ ಹಣ ವಶಪಡಿಸಿಕೊಂಡ ಬಗ್ಗೆ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಆರೋಪಿಗಳು ಈ ಹಣವನ್ನು ತಮ್ಮ ವ್ಯವಹಾರದಲ್ಲಿ ಹೂಡಿಕೆ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

  • ವಿಶ್ವಕಪ್ ಬೆಟ್ಟಿಂಗ್ ದಂಧೆ – 31 ಲಕ್ಷ, 12 ಮೊಬೈಲ್ ವಶ

    ವಿಶ್ವಕಪ್ ಬೆಟ್ಟಿಂಗ್ ದಂಧೆ – 31 ಲಕ್ಷ, 12 ಮೊಬೈಲ್ ವಶ

    ಭುವನೇಶ್ವರ: ಪ್ಲಾಂಟ್ ಸೈಟ್ ಪೊಲೀಸರು ಒಡಿಶಾದ ರೂರ್ಕೆಲಾ ನಗರದಲ್ಲಿ ಕ್ರಿಕೆಟ್ ವಿಶ್ವಕಪ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ್ದು, ಈ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

    ಬಂಧಿತರನ್ನು ನಾಗರ್ಮಲ್ಲಾ ಅಗರ್ವಾಲ್ ಮತ್ತು ಸುನಿಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ಸೋಮವಾರ ತಡರಾತ್ರಿ ನಗರದ ಜಂತಾ ನಿವಾಸ್ ಲೇನ್‍ನಲ್ಲಿರುವ ಮನೆಯ ಮೇಲೆ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ದಾಳಿ ವೇಳೆ ಪೊಲೀಸರು ಆರೋಪಿಗಳ ಬಳಿ ಇದ್ದ 31 ಲಕ್ಷ ರೂ. ಮತ್ತು 17 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ದಂಧೆಯಲ್ಲಿ ಇನ್ನೂ ಅನೇಕರು ಭಾಗಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ಕಾರ್ಯ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸ್ನೇಹಿತನಿಂದ ರೇಪ್ – ವಿರೋಧಿಸಿದಾಗ ಚಾಕು ತೋರಿಸಿದ ಪತಿ

    ಸ್ನೇಹಿತನಿಂದ ರೇಪ್ – ವಿರೋಧಿಸಿದಾಗ ಚಾಕು ತೋರಿಸಿದ ಪತಿ

    ಭುವನೇಶ್ವರ: ಪತಿಯ ಸ್ನೇಹಿತನೇ ಮಹಿಳೆಯನ್ನು ಆಕೆಯ ಗಂಡನ ಮುಂದೆಯೇ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಒಡಿಶಾದ ಕೇಂದ್ರಪರಾ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ರಾಜನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಕಂಡಿರಾ ಪ್ರದೇಶದಲ್ಲಿ ನಡೆದಿದೆ. ಇದೀಗ ಸಂತ್ರಸ್ತೆ ರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಜೂನ್ 20 ರಂದು ನಾನು ಮಲಗಿದ್ದಾಗ ಪತಿ ತನ್ನ ಸ್ನೇಹಿತ ಬ್ರಜಾ ಮಲ್ಲಿಕ್‍ನನ್ನು ಮನೆಗೆ ಕರೆದುಕೊಂಡು ಬಂದಿದ್ದನು. ಈ ವೇಳೆ ಪತಿಯ ಸಮ್ಮುಖದಲ್ಲಿ ಆರೋಪಿ ಬ್ರಜಾ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಅತ್ಯಾಚಾರಕ್ಕೆ ವಿರೋಧಿಸಿದಾಗ ನನ್ನ ಪತಿಯೇ ಚಾಕು ತೋರಿಸಿ ಬೆದರಿಕೆವೊಡ್ಡಿದ್ದಾನೆ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸಂತ್ರಸ್ತೆ ತನ್ನ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಂತರ ಪೋಷಕರ ಜೊತೆಗೆ ಜೂನ್ 22 ರಂದು ರಾಜನಗರ ಪೊಲೀಸ್ ಠಾಣೆಗೆ ಬಂದು ಪತಿ ಮತ್ತು ಆತನ ಆರೋಪಿ ಬ್ರಜಾ ಮಲ್ಲಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಪ್ರಕರಣದ ಬಗ್ಗೆ ನಾವು ತನಿಖೆ ಮಾಡುತ್ತಿದ್ದೇವೆ. ಆರೋಪಿ ಮತ್ತು ಮಹಿಳೆಯ ಪತಿಯನ್ನು ಬಂಧಿಸಿ ವಿಚಾರಣೆ ಮಾಡಿದ ನಂತರ ಘಟನೆಯ ಹಿಂದಿನ ಸತ್ಯವು ಬೆಳಕಿಗೆ ಬರಲಿದೆ ಎಂದು ಪೊಲೀಸ್ ಅಧಿಕಾರಿ ತಪನ್ ಕುಮಾರ್ ನಾಯಕ್ ಹೇಳಿದ್ದಾರೆ.

  • ಪತಿಯೇ ಪತ್ನಿಯ ಜೊತೆಗಿದ್ದ ಖಾಸಗಿ ವಿಡಿಯೋ ಅಪ್ಲೋಡ್ ಮಾಡ್ದ

    ಪತಿಯೇ ಪತ್ನಿಯ ಜೊತೆಗಿದ್ದ ಖಾಸಗಿ ವಿಡಿಯೋ ಅಪ್ಲೋಡ್ ಮಾಡ್ದ

    ಭುವನೇಶ್ವರ: ಪತಿಯೇ ತನ್ನ ಪತ್ನಿಯ ಜೊತೆಗಿದ್ದ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಇದೀಗ ಟ್ವಿನ್ ಸಿಟಿ ಕಮಿಷನರೇಟ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಖಂಡಗಿರಿ ಪ್ರದೇಶದ ಉದಿತ್ ನಾರಾಯಣ್ ಭಟ್ (25) ಎಂದು ಗುರುತಿಸಲಾಗಿದೆ.

    ಬಂಧಿತ ಆರೋಪಿ ನಾರಾಯಣ್ ಭಟ್ ಒಂದು ವರ್ಷದ ಹಿಂದೆ ಯುವತಿಯನ್ನು ಮದುವೆಯಾಗಿದ್ದನು. ವಿವಾಹದ ಕೆಲವು ತಿಂಗಳು ಇಬ್ಬರು ಸಾಂಸಾರಿಕ ಜೀವನ ನಡೆಸಿದ್ದಾರೆ. ಆದರೆ ದಿನಕಳೆದಂತೆ ಇಬ್ಬರ ನಡುವೆ ಮನಸ್ತಾಪದಿಂದ ಜಗಳವಾಗಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದರಿಂದ ಕೋಪಗೊಂಡ ಭಟ್ ಕೆಲವು ದಿನಗಳ ಹಿಂದೆ ಪತ್ನಿಯ ಜೊತೆಗಿದ್ದಾಗ ರೆಕಾರ್ಡ್ ಮಾಡಿಕೊಂಡಿದ್ದ ಖಾಸಗಿ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಇದನ್ನು ಗಮನಿಸಿದ ಮಹಿಳೆ ಈ ಸಂಬಂಧ ಮಹಿಳಾ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪತ್ನಿ, ಅತ್ತೆಯನ್ನು ಕೊಡಲಿಯಿಂದ ಹೊಡೆದು ಕೊಲೈಗೈದ

    ಪತ್ನಿ, ಅತ್ತೆಯನ್ನು ಕೊಡಲಿಯಿಂದ ಹೊಡೆದು ಕೊಲೈಗೈದ

    ಭುವನೇಶ್ವರ: ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಅತ್ತೆಯನ್ನು ಕೊಲೆ ಮಾಡಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಖುಂಟಪಾಲ ಗ್ರಾಮದಲ್ಲಿ ನಡೆದಿದೆ.

    ಮೊರಾಡಾ ಪೊಲೀಸ್ ವ್ಯಾಪ್ತಿಯಲ್ಲಿರುವ ಖುಂಟಪಾಲ ಗ್ರಾಮದಲ್ಲಿ ಕೊಲೆ ನಡೆದಿದ್ದು, ಆರೋಪಿಯನ್ನು ಪೂರ್ಣಚಂದ್ರ ಮಹಂತಾ (50) ಎಂದು ಗುರುತಿಸಲಾಗಿದೆ. ಪತ್ನಿ ಮಮತಾ (40) ಮತ್ತು ಅತ್ತೆ ಸುಮತಿ (61) ಇಬ್ಬರನ್ನು ಇಂದು ಬೆಳಗ್ಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಪೂರ್ಣಚಂದ್ರ ತನ್ನ ಪತ್ನಿ ಮಮತಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟಿದ್ದನು. ಇದೇ ವಿಚಾರಕ್ಕೆ ಪ್ರತಿದಿನವೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಷ್ಟೇ ಅಲ್ಲದೇ ಪತ್ನಿ ಮಮತಾ ಮೇಲೆ ಹಲ್ಲೆ ಮಾಡುತ್ತಿದ್ದನು. ಆದರೆ ಶನಿವಾರ ಪತ್ನಿ ಮಮತಾ ಮತ್ತು ಸುಮತಿ ಇಬ್ಬರನ್ನು ಕೊಲೆ ಮಾಡುವುದಾಗಿ ಬೆದಕರಿಕೆವೊಡ್ಡಿದ್ದನು.

    ಇದರಿಂದ ಭಯಗೊಂಡು ಅವರಿಬ್ಬರು ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೋರಿದ್ದರು. ತಾಯಿ ಮಗಳು ಮನವಿ ಮೇರೆಗೆ ಪೊಲೀಸರು ಆರೋಪಿ ಪೂರ್ಣಚಂದ್ರನನ್ನು ಬಂಧಿಸಲು ಮೊರಾಡಾ ಪೊಲೀಸರು ಇಂದು ಬೆಳಗ್ಗೆ ಗ್ರಾಮಕ್ಕೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ಆತ ಇಬ್ಬರನ್ನು ಕೊಡಲಿಯಿಂದ ಹೊಡೆದ ಹತ್ಯೆ ಮಾಡಿ ಪರಾರಿಯಾಗಿದ್ದನು.

    ಇತ್ತ ಗ್ರಾಮಸ್ಥರು ತಾಯಿ-ಮಗಳು ರಕ್ಷಣೆ ಕೇಳಿದ್ದರೂ ಯಾವುದೇ ರೀತಿಯ ರಕ್ಷಣೆ ನೀಡಲಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಪೊಲೀಸರು ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಭುವನೇಶ್ವರ: ಜೂನ್ 21ರಂದು ನಡೆಯುವ 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತೀಯ ಭದ್ರತಾ ಪಡೆಯ ಯೋಧರು ಒಡಿಶಾದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು. ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಭದ್ರತಾ ಪಡೆಯು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ಮಾಡುತ್ತಿದೆ. ಸಾಮಾನ್ಯ ಪ್ರದೇಶದಲ್ಲಿ ಯೋಧರು ಯೋಗಾಭ್ಯಾಸ ಮಾಡಿದರೆ ಅಷ್ಟೇನು ಸುದ್ದಿಯಾಗುತ್ತಿರಲಿಲ್ಲ. ಆದರೆ ನಮ್ಮ ಕೆಚ್ಚೆದೆಯ ಯೋಧರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಕ್ಕೆ ಯೋಗಾಭ್ಯಾಸ ಮಾಡಿ ತಯಾರಿ ನಡೆಸುತ್ತಿರುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    5 ಸಾವಿರ ವರ್ಷದ ಇತಿಹಾಸವಿರುವ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ನೀಡಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನವನ್ನು ಜೂನ್ 21ರಂದು ಆಚರಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯಂತೆ ಜೂನ್ 21 2014ರಿಂದ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಯಶಸ್ವಿಯಾಗಿ ಎಲ್ಲಡೆ ಆಚರಿಸಲಾಗಿದೆ.

    ಕಳೆದ ಬಾರಿ 4ನೇ ವಿಶ್ವ ಯೋಗ ದಿನದ ಕಾರ್ಯಕ್ರಮವನ್ನು ಡೆಹ್ರಾಡೂನ್‍ನಲ್ಲಿ ಆಚರಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೋದಿ ಅವರು ಕೂಡ ಪಾಲ್ಗೊಂಡಿದ್ದರು. ಹಾಗೆಯೇ ಈ ಬಾರಿ ಜಾರ್ಖಂಡ್‍ನ ರಾಂಚಿಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • ಮಲಗಿದ್ದ ಸೋದರನ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದ

    ಮಲಗಿದ್ದ ಸೋದರನ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದ

    ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಸಹೋದರನ ಶಿರಚ್ಛೇದನ ಮಾಡಿ ಅದನ್ನು ಬ್ಯಾಗ್‍ನಲ್ಲಿ ತುಂಬಿಸಿಕೊಂಡು ಪೊಲೀಸ್ ಠಾಣೆಗೆ ಬಂದಿರುವ ಆಘಾತಕಾರಿ ಘಟನೆ ಒಡಿಶಾದ ಸಂಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಐಂಠಾಪಾಲಿ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಟಿಲೈಮಾಲಾ ಗ್ರಾಮದಲ್ಲಿ ನಡೆದಿದೆ. ಸತ್ಯನಾರಾಯಣ ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಉಜ್ಜಲಾ ಮುಂಡ ಎಂದು ಗುರುತಿಸಲಾಗಿದ್ದು, ಇವನು ಮೃತ ವ್ಯಕ್ತಿಯ ಸಂಬಂಧಿ ಸಹೋದರನಾಗಬೇಕು ಎಂದು ತಿಳಿದು ಬಂದಿದೆ. ಈತ ಪೊಲೀಸ್ ಠಾಣೆಗೆ ಬ್ಯಾಗಿನಲ್ಲಿ ಕತ್ತರಿಸಿದ್ದ ರುಂಡವನ್ನು ತೆಗೆದುಕೊಂಡು ಬಂದು ಕುಳಿತಿದ್ದನು ಎಂದು ಪೊಲೀಸ್ ಅಧಿಕಾರಿ ಭವಾನಿ ಶಂಕರ್ ಉದ್ಗಟ ತಿಳಿಸಿದ್ದಾರೆ.

    ಏನಿದು ಪ್ರಕರಣ:
    ಮೃತ ಸತ್ಯನಾರಾಯಣ ಮಂಗಳವಾರ ರಾತ್ರಿ ಮನೆಯ ವರಾಂಡದಲ್ಲಿ ಸೊಳ್ಳೆ ಪರದೆ ಕಟ್ಟಿಕೊಂಡು ಒಬ್ಬನೇ ಮಲಗಿದ್ದನು. ಈ ವೇಳೆ ಆರೋಪಿ ಉಜ್ಜಲ ಮುಂಡ ಬಂದು ಏಕಾಏಕಿ ಹರಿತವಾದ ಆಯುಧದಿಂದ ಸತ್ಯನಾರಾಯಣನ ಕತ್ತು ಕತ್ತರಿಸಿದ್ದಾನೆ. ನಂತರ ಕತ್ತು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

    ಇಂದು ಮುಂಜಾನೆ ಕುಟುಂಬದವರು ಎದ್ದು ನೋಡಿದಾಗ ತಲೆಯಿಲ್ಲದ ದೇಹವನ್ನು ನೋಡಿ ದಂಗಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಫೋರೆನ್ಸಿಕ್ ತಂಡ ಮತ್ತು ಶ್ವಾನಗಳನ್ನು ಕರೆತಂದು ಹುಡುಕಾಟ ಮಾಡಿದ್ದಾರೆ.

    ಇತ್ತ ಕೊಲೆ ಮಾಡಿ ತಲೆ ತೆಗೆದುಕೊಂಡು ಹೋಗಿದ್ದ ಆರೋಪಿ ಪೊಲೀಸ್ ಠಾಣೆಗೆ ಹೋಗಿ ತಾನೂ ಕೊಲೆ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿದ್ದು, ಆತ ಕೊಲೆಗೆ ಬಳಸಿದ್ದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಆಸ್ತಿ ವಿವಾದವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.