ಭುವನೇಶ್ವರ: ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ.
ಒಡಿಶಾದ ಮಗುವಿನ ಬೆನ್ನುಹುರಿಯಲ್ಲಿ ಬಾಲದ ರೀತಿ ಮೂಳೆ ಕಾಣಿಸಿಕೊಂಡಿತ್ತು. ಅದನ್ನು ವೈದ್ಯರು ಗುರುವಾರ ಗುರುತಿಸಿ ವಿಶ್ವದಲ್ಲೇ ಮೊದಲಬಾರಿಗೆ ಎದೆಗೂಡಿನ ಬಳಿ ಮೂಳೆ ಬಾಲ ಇರುವುದು ದಾಖಲಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆ ಮುಂದೆ ಮಗುವಿನ ಈ ಬಾಲದಿಂದ ಸಮಸ್ಯೆಯಾಗುತ್ತೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಪರಿಣಾಮ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಮೂಳೆ ಬಾಲವನ್ನು ತೆಗೆಯಲಾಗಿದೆ.
ಶಸ್ತ್ರಚಿಕಿತ್ಸೆ ನಡೆಸಿದ ಡಾ.ಅಶೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನವಜಾತ ಶಿಶುವಿಗೆ ಬೆನ್ನುಹುರಿಯ ವೈಪರೀತ್ಯವು ಬೆನ್ನಿನ ಮೇಲ್ಭಾಗದಲ್ಲಿ ಬಾಲ ಮತ್ತು ಕೋಕ್ಸಿಜಿಯಲ್(ಟೈಲ್‍ಬೋನ್) ಪ್ರದೇಶದಲ್ಲಿ ಚರ್ಮದ ಸೈನಸ್ ಪಿಟ್ ಅನ್ನು ಹೊಂದಿತ್ತು. ವಿಶ್ವದಲ್ಲೇ ಇದೇ ಮೊದಲಬಾರಿಗೆ ಮಾನವನಲ್ಲಿ ಮೂಳೆಯ ಬಾಲ ಕಂಡುಬಂದಿರುವ ಏಕೈಕ ಪ್ರಕರಣವಾಗಿದೆ ಎಂದು ಹೇಳಿದರು. ಇದನ್ನೂ ಓದಿ: 4.50 ಕೋಟಿ ರೂ. ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದ 6 ಮಂದಿ ವಶ
ಪ್ರಸ್ತುತ ಒಡಿಶಾದಲ್ಲಿ ಜನಿಸಿದ ಮಗುವಿನ ಎದೆಗೂಡಿನ ಪ್ರದೇಶದಲ್ಲಿದ್ದ ಮೂಳೆ ಬಾಲವನ್ನು ವೈದ್ಯರು ತೆಗೆದುಹಾಕಿದ್ದಾರೆ.
ಭುವನೇಶ್ವರ: ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆಯುತ್ತಿದ್ದ ಹತ್ತನೇ ತರಗತಿ ಪರೀಕ್ಷೆ ವೇಳೆ ಕೊಠಡಿಯಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದ ಇಬ್ಬರು ಇನ್‌ವಿಜಿಲೇಟರ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ಮತ್ತು ಉಪ ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಕೇಂದ್ರದ ಅಧೀಕ್ಷಕರನ್ನು ಹೊರತುಪಡಿಸಿ ಯಾರೂ ಸೆಲ್ ಫೋನ್‍ಗಳನ್ನು ಪರೀಕ್ಷಾ ಹಾಲ್‍ಗೆ ಒಯ್ಯುವಂತಿಲ್ಲ ಎಂದು ಸೂಚಿಸಿದ್ದಾರೆ.
ಭುವನೇಶ್ವರ: ಒಡಿಶಾದ ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಂದಾ ಪ್ರಸ್ಟಿ ಅವರು ಇಂದು ನಿಧನರಾಗಿದ್ದಾರೆ.
ನಂದಾ ಪ್ರಸ್ಟಿ (102) ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವಾರ ಒಡಿಶಾದ ಜೈಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಸ್ಟಿ ಅವರು ಕಳೆದ ಒಂದು ತಿಂಗಳಿಂದಲೂ ಜ್ವರ, ಕೆಮ್ಮು ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್
ನಂದಾ ಪ್ರಸ್ಟಿ ಹಲವು ದಶಕಗಳಿಂದಲೂ ಒಡಿಶಾದ ಜೈಪುರ ಜಿಲ್ಲೆಯಲ್ಲಿ ಅನೇಕ ಮಕ್ಕಳು ಮತ್ತು ದೊಡ್ಡವರಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಏಳನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಇವರು ತಮ್ಮ ಹಳ್ಳಿಯಲ್ಲಿ ಅನಕ್ಷರತೆ ಹೋಗಲಾಡಿಸಲು ಪಣತೊಟ್ಟಿದ್ದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಮುಕ್ತ ಮನಸಿನಿಂದ ಉಚಿತವಾಗಿ ಶಿಕ್ಷಣ ನೀಡುತ್ತಿದ್ದರು. ನಂದಾ ಮಾಸ್ಟರ್ ಎಂದೇ ಖ್ಯಾತರಾಗಿದ್ದ ಇವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕೈಯಿಂದ ಸ್ವೀಕರಿಸಿದ್ದರು. ರಾಮನಾಥ್ ಕೋವಿಂದ್ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ ಪ್ರಶಸ್ತಿ ಸ್ವೀಕರಿಸಿದ್ದರು. ಇದನ್ನೂ ಓದಿ:ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ
Pained by the demise of Shri Nanda Prusty Ji. The much respected “Nanda Sir” will be remembered for generations due to his efforts to spread the joys of education in Odisha. He drew the nation’s attention and affection a few weeks ago at the Padma Awards ceremony. Om Shanti. pic.twitter.com/VUpyPWP9FP
ನಂದಾ ಪ್ರಸ್ಟಿ ಜಿಯವರ ನಿಧನದಿಂದ ನೋವಾಗಿದೆ. ಒಡಿಶಾದಲ್ಲಿ ಶಿಕ್ಷಣದ ಸಂತೋಷವನ್ನು ಹರಡಲು ಅವರು ಮಾಡಿದ ಪ್ರಯತ್ನಗಳಿಂದಾಗಿ ಹೆಚ್ಚು ಗೌರವಾನ್ವಿತ ನಂದಾ ಸರ್ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತಾರೆ. ಅವರು ಕೆಲವು ವಾರಗಳ ಹಿಂದೆ ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರದ ಗಮನ ಮತ್ತು ಪ್ರೀತಿಯನ್ನು ಸೆಳೆದರು. ಓಂ ಶಾಂತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಭುವನೇಶ್ವರ: ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀಮಂದಿರ ಪರಿಕ್ರಮ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಹಿಂತಿರುಗುತ್ತಿರುವಾಗ ಪುರಿಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯಲಾಯಿತು. ಪುರಿಯ ಆಸ್ಪತ್ರೆ ಛಕ್ ಬಳಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದರು. ಅಷ್ಟೇಅಲ್ಲದೇ ಕಪ್ಪು ಬಾವುಟವನ್ನು ಬೀಸಿದರು ಎಂದು ಮೂಲಗಳು ತಿಳಿಸಿವೆ. ಕಾರ್ಯಕರ್ತರು ನವೀನ್ ಪಟ್ನಾಯಕ್ ಡೌನ್ ಡೌನ್ ಎಂದು ಘೋಷಣೆ ಕೂಗಿದರು ಮತ್ತು ಅವರ ಭೇಟಿಯನ್ನು ವಿರೋಧಿಸಿದರು. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ
MoS Home Captain Dibyashankar Mishra’s resignation protest escalates , as Opposition now target’s CM Naveen’s carcade
???? Eggs hurled at #Odisha CM Naveen Patnaik’s carcade in #Puri#MamitaMeherpic.twitter.com/z3G2hwRclp
ಮಮಿತಾ ಮೆಹರ್ ಹತ್ಯೆಯಲ್ಲಿ ಗೃಹ ಖಾತೆ ರಾಜ್ಯ ಸಚಿವೆ ದಿಬ್ಯಾ ಶಂಕರ್ ಮಿಶ್ರಾ ಅವರ ಕೈವಾಡವಿದೆ ಎಂಬ ಆರೋಪದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್‍ನ ವಿರೋಧ ಪಕ್ಷದ ನಾಯಕರು ಮೊಟ್ಟೆಯಿಂದ ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್.ಸಿ.ನಾಗರಾಜ್
ಜಗನ್ನಾಥ ದೇಗುಲದಲ್ಲಿ ನಡೆಯುತ್ತಿರುವ ಮೂರು ದಿನಗಳ ಮಹಾಯಜ್ಞದ ಕೊನೆಯ ದಿನದಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಮ್ಮುಖದಲ್ಲಿ ಶ್ರೋತ್ರಿಯ ಬ್ರಾಹ್ಮಣ ಸಮುದಾಯದ ಪುರೋಹಿತರು ಪಠಣ ಮಾಡುವ ಭಜನೆಗಳ ಮಧ್ಯೆ ಪೂರಿ ಗಜಪತಿ ದಿಬ್ಯಸಿಂಗ ದೇಬ್ ಅವರು ಬುಧವಾರ ಶ್ರೀಮಂದಿರ ಪರಿಕ್ರಮ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಇದನ್ನೂ ಓದಿ:ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬಿಸಿದ ಸೋಸೆ
ಭುವನೇಶ್ವರ: ನೆರೆ ಮನೆಯವರ ಮದುವೆ ಕಾರ್ಯಕ್ರಮದ ಪ್ರಯುಕ್ತ ಡಿಜೆ ಮ್ಯೂಸಿಕ್ ನುಡಿಸಿದ್ದ ಪರಿಣಾಮ ಕೋಳಿ ಫಾರಂ ಒಂದರಲ್ಲಿ 63 ಕೋಳಿಗಳು ಬಲಿಯಾದ ವಿಚಿತ್ರ ಘಟನೆ ಒಡಿಶಾದ ಬಾಲಸೋರ್ ಎಂಬಲ್ಲಿ ನಡೆದಿದೆ. ನೆರೆಮನೆಯವರು ಮದುವೆ ಮನೆಯ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಕರದಂಗಡಿ ಗ್ರಾಮ ನಿವಾಸಿ ಕೋಳಿ ಫಾರಂ ಮಾಲಿಕ ರಂಜಿತ್ ಪರಿದಾ ಎಂಬುವವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಡಿಜೆ ಮ್ಯೂಸಿಕ್ ಬಾರಿಸುತ್ತಿದ್ದರಿಂದ ಕೋಳಿಗಳು ಹೃದಯಾಘಾತಗೊಂಡು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು
ರಂಜಿತ್ ಪ್ರಕಾರ ಭಾನುವಾರ ರಾತ್ರಿ 11:30ರ ಸುಮಾರಿಗೆ ಡಿಜೆ ಬ್ಯಾಂಡ್ ಅವರ ಜಮೀನಿನ ಮುಂದೆ ಸಾಗಿದೆ. ಡಿಜೆ ಅವರ ಫಾರ್ಮ್ ಸಮೀಪಿಸುತ್ತಿದ್ದಂತೆ ಕೋಳಿಗಳು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದವು. ವಾಲ್ಯೂಮ್ ಕಡಿಮೆ ಮಾಡುವಂತೆ ಡಿಜೆಗೆ ರಂಜಿತ್ ವಿನಂತಿಸಿದರು. ಆದರೂ ಅವರು ಕೇಳದೆ ಹೋದಾಗ ತಮ್ಮ 63 ಕೋಳಿಗಳು ಸಾವನ್ನಪ್ಪಿದೆ ಎಂದು ಹೇಳಿಕೆ ನೀಡಿದ್ದಾರೆ.
ಕೋಳಿಗಳು ಕುಸಿದುಬಿದ್ದಾಗ ಅವುಗಳನ್ನು ಬದುಕಿಸಲು ಕೋಳಿ ಫಾರಂ ಮಾಲಿಕರು ವ್ಯರ್ಥ ಪ್ರಯತ್ನ ಮಾಡಿದ್ದಾರೆ. ನಂತರ ಅವರು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿದಾಗ ಅವುಗಳು ಅತಿಯಾದ ಶಬ್ದದಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿವೆ ಎಂದಿದ್ದಾರೆ.
ರಂಜಿತ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಉದ್ಯೋಗ ಸಿಗದಿದ್ದಾಗ 2019ರಲ್ಲಿ 2 ಲಕ್ಷ ರೂ. ಸಾಲ ಪಡೆದು ಬ್ರೈಲರ್ ಫಾರ್ಮ್ ಆರಂಭಿಸಿದ್ದರು. ಮೊದಲಿಗೆ ನೆರೆಮನೆಯ ರಾಮಚಂದ್ರನ ಬಳಿ ಪರಿಹಾರ ಕೇಳಲು ಹೋಗಿದ್ದಾಗ ಅವರು ನಿರಾಕರಿಸಿದ್ದರು. ಬೇರೆ ದಾರಿ ತೋಚದಿದ್ದಾಗ ರಂಜಿತ್ ರಾಮಚಂದ್ರನ ವಿರುದ್ಧ ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗೆ ನಿಷೇಧವಿಲ್ಲ- ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ
ಈ ಆರೋಪವನ್ನು ಪರಿಶೀಲಿಸಿ ಎರಡೂ ಕಡೆಯವರಿಗೆ ನ್ಯಾಯಸಮ್ಮತ ಪರಿಹಾರ ನೀಡಲಾಗುವುದು ಎಂದು ಬಾಲಸೋರ್ ಪೊಲೀಸ್ ಎಸ್ಪಿ ಸುಧಾಂಶು ಮಿಶ್ರಾ ಹೇಳಿದ್ದಾರೆ. ಆದರೆ ರಾಮಚಂದ್ರ ಈ ಆರೋಪವನ್ನು ವ್ಯಂಗ್ಯ ಮಾಡಿದ್ದಾರೆ. ಲಕ್ಷಗಟ್ಟಲೆ ಕೋಳಿಗಳನ್ನು ಅತಿಯಾದ ಶಬ್ದದ ಹಾರ್ನ್‍ಗಳಿರುವ ರಸ್ತೆಯಲ್ಲಿ ಸಾಗಿಸಲಾಗುತ್ತದೆ. ಆಗ ಸಾಯದೇ ಇರುವ ಕೋಳಿಗಳು ಡಿಜೆ ಮ್ಯೂಸಿಕ್‍ನಿಂದ ಸಾಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅವರು ನನ್ನ ಬಳಿ ಬಂದು ಮನವಿ ಮಾಡಿದಾಗ ಡಿಜೆ ಧ್ವನಿಯನ್ನು ಕಡಿಮೆ ಮಾಡಿದ್ದೆ ಎಂದಿದ್ದಾರೆ.
ಭುವನೇಶ್ವರ: ಮದುವೆಯ ವೇಳೆ ವರ ಗೈರಾಗಿದ್ದಕ್ಕೆ ವಧು ಧರಣಿಗೆ ಕುಳಿತಿರುವ ಘಟನೆ ಒಡಿಶಾದ ಬ್ರಹ್ಮನಗರದಲ್ಲಿ ನಡೆದಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಪುತ್ರಿ ಮತ್ತು ವೈದ್ಯ ಹುಡುಗ ಪ್ರೀತಿಸುತ್ತಿದ್ದರು. ಇವರಿಬ್ಬರು ಪ್ರೀತಿಸಿದ್ದ ಪರಿಣಾಮ ಪ್ರಾರಂಭದಲ್ಲಿ ಕುಟುಂಬದವರ ವಿರೋಧ ವ್ಯಕ್ತವಾಗಿತ್ತು. ಆದರೂ ಸಹ ಎರಡು ಕುಟುಂಬಗಳು ಮಾತುಕತೆ ನಡೆಸಿ ಸೋಮವಾರ ಹಿಂದೂ ಸಂಪ್ರದಾಯದಂತೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ ಆ ದಿನ ವರ ಮದುವೆ ಮಂಟಪಕ್ಕೆ ಬರಲಿಲ್ಲ. ಇದನ್ನೂ ಓದಿ: ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ
ಇದರಿಂದ ನೊಂದ ವಧು ವರನ ಮನೆಗೆ ಬಂದು ಈ ಬಗ್ಗೆ ವಿಚಾರಿಸಿದಾಗ ವರನ ಪೋಷಕರು ಬಾಗಿಲನ್ನು ಮುಚ್ಚಿಕೊಂಡಿದ್ದಾರೆ. ಈ ಹಿನ್ನೆಲೆ ವಧು ಮಹಿಳೆ ಸಾಮಾಜಿಕ ಕಾರ್ಯಕರ್ತೆ ಪ್ರಮೀಳಾ ತ್ರಿಪಾಠಿ ಅವರನ್ನು ಸಂಪರ್ಕಿಸಿದ್ದು, ಅವರೊಂದಿಗೆ ಧರಣಿ ಕುಳಿತುಕೊಂಡಿದ್ದಾಳೆ. 2ನೇ ದಿನಕ್ಕೆ ಧರಣಿ ಮುಂದುವರೆದಿದೆ.
ಬೈದ್ಯನಾಥಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಮ್ ಕುಮಾರ್ ಈ ಕುರಿತು ಮಾತನಾಡಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನ್ಯಾಯಾಲಯದ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ. ಧರಣಿ ಸ್ಥಳದಲ್ಲಿ ಶಾಂತಿಯನ್ನು ಕಾಪಾಡಲು ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಶಾಂತಿ ಕಾಪಾಡಲು ಭದ್ರತೆ ವಿಧಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಖಾಲಿ ಇರುವ 6 ಸಾವಿರ ಪೊಲೀಸ್ ಹುದ್ದೆಗಳನ್ನು ವಾರದೊಳಗೆ ಭರ್ತಿ ಮಾಡಿ: ಅಸ್ಸಾಂ ಸಿಎಂ
ಮದುವೆ ನಿಂತಿದ್ದರಿಂದ ವಧು ನೊಂದು ಇದಕ್ಕೆ ಕಾರಣ ತಿಳಿದುಕೊಳ್ಳಲು ವರನ ಮನೆಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದಳು. ಆದರೆ ಅವರ ಪೋಷಕರು ಬಾಗಿಲನ್ನು ಮುಚ್ಚಿದ್ದು, ವಧು ಧರಣಿಗೆ ಕುಳಿತುಕೊಂಡಿದ್ದಾಳೆ ಎಂದು ತಿಳಿಸಿದರು.
ಭುವನೇಶ್ವರ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಹಾವಿನ ವಿಷವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು 1 ಕೆಜಿ ಹಾವಿನ ವಿಷವನ್ನು 1.5 ಕೋಟಿ ರೂ.ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕ ನಂತರ ಸ್ಥಳಕ್ಕೆ ಧಾವಿಸಿದ ದಿಯೋಗರ್ ಪೊಲೀಸರ ಬಲೆಗೆ ಕೈಲಾಶ್ ಚಂದ್ರ ಸಾಹು ಮತ್ತು ರಂಜನ್ ಕುಮಾರ್ ಪಾಧಿ ಸಿಕ್ಕಿಬಿದ್ದಿದ್ದಾರೆ.
ಈ ಕುರಿತು ಮಾತನಾಡಿದ ದಿಯೋಗರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರತ್ಯೂಷ್ ಮೊಹಾಪಾತ್ರ, ಶುಕ್ರವಾರ ಸಂಬಲ್ಪುರ ಜಿಲ್ಲೆಯ ಸಿಂದೂರ್‍ಪಂಕ್ ನಲ್ಲಿ ಇಬ್ಬರು ವ್ಯಕ್ತಿಗಳು ಹಾವಿನ ವಿಷವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ನಮ್ಮ ತಂಡವು ಗ್ರಾಹಕರಂತೆ ಆ ವ್ಯಕ್ತಿಗಳನ್ನು ಭೇಟಿ ಮಾಡಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ
ಈ ವೇಳೆ ಕೈಲಾಶ್ ಚಂದ್ರ ಸಾಹು ಮತ್ತು ರಂಜನ್ ಕುಮಾರ್ ಪಾಧಿ ಗಾಜಿನ ಪಾತ್ರೆಯಲ್ಲಿ 1 ಕೆಜಿ ಹಾವಿನ ವಿಷ ಮಾರಾಟ ಮಾಡುತ್ತಿದ್ದರು. ಸ್ಥಳದಲ್ಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ವಸ್ತು ಹಾವಿನ ವಿಷವೇ ಎಂಬುದನ್ನು ಖಚಿತಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ಬಾಸ್ಕೆಟ್‌ಬಾಲ್ ಲೀಗ್‍ಗೆ ಅದ್ಧೂರಿ ಚಾಲನೆ
ಭುವನೇಶ್ವರ: ಮಹಿಳೆಯೊಬ್ಬರಯ ಬರೋಬ್ಬರಿ 25 ವರ್ಷ ಸೇವೆ ಮಾಡಿದ ಆಟೋ ಡ್ರೈವರ್ ಸೇವೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಬರೋಬ್ಬರಿ 1ಕೋಟಿ ರೂಪಾಯಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣವನ್ನು ದಾನ ಮಾಡಿದ್ದಾರೆ.
ಒಡಿಶಾದ ಕಟಕ್‍ನಲ್ಲಿ ಈ ಘಟನೆ ನಡೆದಿದ್ದು, 63 ವರ್ಷದ ಮಿನಾತಿ ಪಟ್ನಾಯಿಕ್ ಕಳೆದ 25 ವರ್ಷಗಳಿಂದ 50 ವರ್ಷದ ಬುದ್ಧಾ ಸಮಾಲ್ ಅನ್ನೋ ರಿಕ್ಷಾ ಚಾಲಕನಿಗೆ 1ಕೋಟಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣ ನೀಡಿದ್ದಾರೆ. ಕಳೆದ 25 ವರ್ಷಗಳಿಂದ ಬುದ್ಧಾ ಸಮಾಲ್, ಮಿನಾತಿ ಅವರನ್ನ ತಮ್ಮ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಮಿನಾತಿ ಎಲ್ಲಿಗೆ ಹೋಗಬೇಕೆಂದರೂ ಬುದ್ಧಾ ಅವರು ಒಂದು ಮಿನಾತಿಯವರನ್ನು ತಮ್ಮ ರೀಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಸತತ ಇಷ್ಟ ವರ್ಷಗಳ ಕಾಲ ಅವರಸೇವೆ ಪಡೆದುಕೊಂಡಿದ್ದ ಮಿನಾತಿ, ಯಾರೂ ಊಹಿಸಲಾಗದಂಥ ಸಹಾಯವನ್ನು ಈಗ ಮಾಡಿದ್ದಾರೆ.
ನನ್ನ ಪತಿ ಕಳೆದ ವರ್ಷ ತಮ್ಮ 68ನೇ ವಯಸ್ಸಿನಲ್ಲಿ ಕ್ಯಾನ್ಸರ್‍ಗೆ ಬಲಿಯಾಗಿದ್ದರು. ಆಗ ನನ್ನ ಮಗಳು ಜನವರಿಯಲ್ಲಿ ಹಾರ್ಟ್ ಅಟ್ಯಾಕ್‍ನಿಂದ ಸಾವನ್ನಪ್ಪಿದಳು. ಹಾರ್ಟ್ ಪೇಷಂಟ್, ಹೈ ಬಿಪಿ ಕೂಡಾ ನನಗೆ ಇದೆ. ಹೀಗಿದ್ದೂ ಬುದ್ಧಾ ನನ್ನ ತಾಯಿ ಅಂತ ಕರೆಯುತ್ತಾರೆ. ಅವರ ಮಕ್ಕಳು ಅಜ್ಜಿ ಎನ್ನುತ್ತಾರೆ. ಬುದ್ಧಾ ಅವರ ಕುಟುಂಬ ನನ್ನ ಸೇವೆಯನ್ನು ತುಂಬಾ ಮುತುವರ್ಜಿಯಿಂದ ಮಾಡುತ್ತಾರೆ. ಅವರ ಕುಟಂಬ ನನ್ನ ಒತ್ತಾಯದ ಮೆರೆಗೆ ನನ್ನ ಸೇವೆ ಮಾಡಲು ನಮ್ಮ ಮನೆಯಲ್ಲಿಯೇ ಕೆಲ ತಿಂಗಳಿಂದ ಇದ್ದಾರೆ ಎಂದು ಮಿನಾತಿ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
ಪೋಸ್ಟ್ ಗ್ರಾಜ್ಯುಯೇಟ್ ಆಗಿರುವ ಮಿನಾತಿ ಅವರಿಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾರೆ. ಪ್ರಾರಂಭದಲ್ಲಿ ಅವರು ಕೊಂಚ ಬೇಸರ ವ್ಯಕ್ತಪಡಿಸಿದ್ದರೂ, ಮಿನಾತಿ ಅವರ ನಿರ್ಧಾರ ಗಟ್ಟಿಯಾಗಿದ್ದರಿಂದ ಈ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲವಂತೆ. ಇದನ್ನೂ ಓದಿ: 6 ದಿನಗಳ ಕಾಲ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?
ಬುದ್ಧಾ ಅವರೂ ಈ ರೀತಿ ಆಸ್ತಿ ದಾನ ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದರಂತೆ. ಆದರೆ ಅಮ್ಮ(ಮಿನಾತಿ) ಅವರ ನಿರ್ಧಾರ ಗಟ್ಟಿಯಾಗಿತ್ತು. ಅವರ ಒತ್ತಾಯಕ್ಕೆ ಮಣಿದು ಕೆನೆಗೂ ಈ ಆಸ್ತಿ ಮತ್ತು ಆಭರಣ ಸ್ವೀಕರಿಸಿದೆ ಎಂದು ಬಿದ್ಧಾ ಸಮಾಲ್ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
ಭುವನೇಶ್ವರ: ತನಗೆ ಕಡಿದ ಹಾವನ್ನು ವ್ಯಕ್ತಿ ಸಿಟ್ಟಿನಿಂದ ಹಾವನ್ನು ಹಿಡಿದು ಕಚ್ಚಿ ಕೊಂದಿರುವ ಘಟನೆ ಒಡಿಶಾದ ಜೈಪುರ ಜಿಲ್ಲೆಯಲ್ಲಿ ನಡೆದಿದೆ.
ಆದಿವಾಸಿ ವ್ಯಕ್ತಿ ಕಿಶೋರ್ ಬಾದ್ರಾ ವಿಷಕಾರಿ ಹಾವನ್ನು ಬಾಯಿಯಿಂದಲೇ ಕಚ್ಚಿ ಸಾಯಿಸಿದ್ದಾನೆ. ಗಂಭರೀಪಟಿಯಾ ಹಳ್ಳಿಯ ಸಲಿಜಂಗಾ ಪಂಚಾಯತಿ ವ್ಯಾಪ್ತಿಯ ದಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಹೊಲದಲ್ಲಿ ಕೆಲಸ ಮಾಡಿ ಬರುತ್ತಿದ್ದಾಗ ಹಾವು ಕಡಿಯಿತೆಂದು ಈ ವ್ಯಕ್ತಿ ಅದನ್ನು ಹಿಡಿದು ಸೇಡು ತೀರಿಸಿಕೊಂಡಿದ್ದಾನೆ. ಕಡಿದ ಹಾವು ಅತ್ಯಂತ ವಿಷಕಾರಿಯಾಗಿದ್ದು, ಈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಾವನ್ನು ಕೊಂದಿದ್ದು ಹೇಗೆ ಎನ್ನುವ ಬಗ್ಗೆ ಸ್ವತಃ ಕಿಶೋರ್ ಬಾದ್ರಾ ವಿವರಣೆ ನೀಡಿದ್ದಾನೆ. ನಾನು ಹೊಲದಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾಲಿನ ಮೇಲೆ ಏನೋ ಹರಿದಾಡಿ ಕಡಿದ ಅನುಭವ ಆಯಿತು. ಆಗ ಕತ್ತಲಾಗಿತ್ತಾದ್ದರಿಂದ ಸೂಕ್ಷ್ಮವಾಗಿ ಗಮನಿಸಿದೆ. ತಕ್ಷಣ ಮೊಬೈಲ್ ಬೆಳಕಿನ ಸಹಾಯದಲ್ಲಿ ನೋಡಿದಾಗ ಅದೊಂದು ವಿಷಪೂರಿತ ಹಾವು ಎನ್ನುವುದು ಗಮನಕ್ಕೆ ಬಂತು ಎಂದಿದ್ದಾನೆ. ಇದನ್ನೂ ಓದಿ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್
ವಿಷಕಾರಿ ಹಾವು ಎಂದು ಗೊತ್ತಾದ ತಕ್ಷಣವೇ ಅದನ್ನು ಕೈಯಲ್ಲಿ ಹಿಡಿದುಕೊಂಡು ಮನಸೋ ಇಚ್ಛೆ ಕಡಿಯಲಾರಂಭಿಸಿದೆ. ಅದರ ಮೇಲೆ ಸೇಡು ತೀರಿಸಿಕೊಳ್ಳಲೆಂದು ಹಾಗೆ ಮಾಡಿದೆ. ಕೊನೆಗೆ ಅದು ಸತ್ತು ಹೋಯಿತು. ಬಳಿಕ ಸತ್ತ ಹಾವನ್ನು ಕೈಯಲ್ಲಿ ಹಿಡಿದುಕೊಂಡೇ ಮನೆಗೆ ಬಂದು ಹೆಂಡತಿಗೆ ನಡೆದಿರುವ ಘಟನೆಯನ್ನು ಹೇಳಿದೆ ಎಂದಿದ್ದಾನೆ. ಇದನ್ನೂ ಓದಿ: ಕನ್ನಡಿಗರು ಎಂಬುದನ್ನು ಸಿ.ಟಿ.ರವಿ ಮರೆತು ಭಾರತೀಯರಾಗಿದ್ದಾರೆ: ಹೆಚ್‍ಡಿಕೆ
ಸುತ್ತಮುತ್ತಲಿನವರು ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ ಕಿಶೋರ್ ಬಾದ್ರಾ ಮಾತ್ರ ಅವರ ಮಾತಿಗೆ ಕಿವಿಗಡದೇ ನಾಟಿ ಔಷಧಿ ನೀಡುವವರ ಬಳಿ ಹೋಗಿದ್ದಾನೆ. ಅದೃಷ್ಟವಶಾತ್ ಹಾವು ಕಡಿದಾಗಲೂ, ಹಾವಿಗೆ ಈತ ತಿರುಗಿ ಕಡಿದಾಗಲೂ ವಿಷದ ಪ್ರಮಾಣ ದೇಹಕ್ಕೆ ಸೇರಿಲ್ಲವಾದ್ದರಿಂದ ಸಾವಿನ ದವಡೆಯಿಂದ ಆತ ಪಾರಾಗಿದ್ದಾನೆ.
ಈ ಘಟನೆ ಮನತಿರಾ ಎಂಬ ಗ್ರಾಮದಲ್ಲಿ ನಡೆದಿದೆ. ರಮಾಕಾಂತ್ ಪತ್ರಾ ಎಂಬ ವರ ಸಿಟ್ಟಿನಿಂದ ಬೇರೊಬ್ಬಳಿಗೆ ತಾಳಿ ಕಟ್ಟುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಮದುವೆ ಶಾಸ್ತ್ರಕ್ಕೂ ಮುನ್ನ ಔತಣ ಕೂಡ ಏರ್ಪಡಿಸಲಾಗಿತ್ತು. ವರನ ಕಡೆಯವರು ಈ ಔತಣ ಕೂಟದಲ್ಲಿ ಮಟನ್ ಊಟ ತಯಾರು ಮಾಡುವಂತೆ ವಧುವಿನ ಕಡೆಯವರಿಗೆ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಅವರು ಮಟನ್ ಊಟ ರೆಡಿ ಮಾಡಿರಲಿಲ್ಲ. ಹೀಗಾಗಿ ವರ ಅಲ್ಲಿಯೇ ಮದುವೆ ಕ್ಯಾನ್ಸಲ್ ಮಾಡಿದ್ದಾನೆ. ಇದನ್ನೂ ಓದಿ: ಪತ್ರಿಕೆ ಓದಲು ತಡವರಿಸಿದ ವರ – ಮದುವೆ ಮುರಿದುಕೊಂಡ ವಧು
ಇತ್ತ ವರನ ವಥ್ನೆ ನೋಡಿದ ವಧುವಿನ ಕಡೆಯವರು ಪರಿ ಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ ವರ ಮಾತ್ರ ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪದೆ ಅಲ್ಲಿಂದ ಹೊರಟಿದ್ದಾನೆ. ಅಲ್ಲದೆ ಅದೇ ಗ್ರಾಮದ ಯುವತಿಯೊಬ್ಬಳ ಜೊತೆ ಮದುವೆಯಾಗಿದ್ದಾನೆ. ಆದರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.