Tag: ಭುವನೇಶ್ವರ

  • ಬಾಲಕಿಯನ್ನ ಅಪಹರಿಸಿ, ಕೈ-ಕಾಲು ಕಟ್ಟಿ ಗ್ಯಾಂಗ್ ರೇಪ್

    ಬಾಲಕಿಯನ್ನ ಅಪಹರಿಸಿ, ಕೈ-ಕಾಲು ಕಟ್ಟಿ ಗ್ಯಾಂಗ್ ರೇಪ್

    ಭುವನೇಶ್ವರ: ಇಬ್ಬರು ಯುವಕರು 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಬೌಧ್ ನಗರದ ಬಾಪೂಜಿನಗರ ವ್ಯಾಪ್ತಿಯಲ್ಲಿ ನಡೆದಿದೆ.

    ಪಿಂಟು ಬಾಧಿಯಾ(25) ಮತ್ತು ತುಕು ಕಂಬಾರ್(24) ಬಂಧಿತ ಆರೋಪಿಗಳು. ಬಾಪೂಜಿನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಕಟ್ಟಡದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು. ಆ ಕಟ್ಟಡದಲ್ಲಿಯೇ ಆರೋಪಿ ಯುವಕರಿಬ್ಬರು ಕೂಡ ಕೆಲಸ ಮಾಡುತ್ತಿದ್ದರು.

    ಸೋಮವಾರ ಆರೋಪಿಗಳು ನನ್ನ ಮಗಳನ್ನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಯಾರು ಇಲ್ಲದ ವೇಳೆ ಅಪಹರಿಸಿದ್ದಾರೆ. ನಂತರ ಆಕೆಯ ಕೈ, ಕಾಲುಗಳನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

    ಈ ಸಂಬಂಧ ಬೌಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಂದು ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಯುವಕ-ಯುವತಿಯನ್ನ ಅರೆ ಬೆತ್ತಲೆ ಮಾಡಿದ ಯುವಕರ ಗುಂಪು – ಫೋಟೋ, ವಿಡಿಯೋ ವೈರಲ್

    ಯುವಕ-ಯುವತಿಯನ್ನ ಅರೆ ಬೆತ್ತಲೆ ಮಾಡಿದ ಯುವಕರ ಗುಂಪು – ಫೋಟೋ, ವಿಡಿಯೋ ವೈರಲ್

    ಭುವನೇಶ್ವರ: ಯುವಕರ ಗುಂಪೊಂದು ಯುವತಿ ಮತ್ತು ಆತನ ಗೆಳೆಯನನ್ನು ಅರೆ ಬೆತ್ತಲೆ ಮಾಡಿ ಅವರ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಒಡಿಶಾದ ಕೇಂದ್ರಪ್ಯಾರಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ರಾಜನಗರ್ ಪ್ರದೇಶದ ಪೆಂಟಾ ಸಮುದ್ರ ತೀರದ ಬಳಿ ಈ ಘಟನೆ ನಡೆದಿದೆ. ಯುವತಿ ಮತ್ತು ಆಕೆಯ ಗೆಳೆಯನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಸಂತ್ರಸ್ತೆಯ ತಂದೆ ನೀಡಿದ ದೂರಿನ್ವಯ ರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ನಂತರ ತನಿಖೆಯನ್ನು ಆರಂಭಿಸಿದ್ದಾರೆ.

    ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಪೆಂಟಾ ಸಮುದ್ರ ಬೀಚ್ ಗೆ ಹೋಗಿದ್ದರು. ಈ ವೇಳೆ ಸುಮಾರು ಆರು ಮಂದಿ ಅಪರಿಚಿತ ಯುವಕರು ಇಬ್ಬರನ್ನು ಸುತ್ತುವರಿದು ಅಡ್ಡಗಡ್ಡಿದ್ದಾರೆ. ನಂತರ ಸಂತ್ರಸ್ತೆಗೆ ಮತ್ತು ಯವಕನಿಗೆ ಥಳಿಸಿದ್ದಾರೆ. ಬಳಿಕ ಇಬ್ಬರನ್ನು ಅರೆಬೆತ್ತಲೆ ಮಾಡಿ ಫೋಟೋ ಕ್ಲಿಕ್ಕಿಸಿ ವಿಡಿಯೋ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಆರೋಪಿ ಯುವಕರು ತೆಗೆದುಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಟ್ ಮಾಡಿ ವೈರಲ್ ಮಾಡಿದ್ದಾರೆ. ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಕರಡಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ – ವಿಡಿಯೋ ವೈರಲ್

    ಕರಡಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ – ವಿಡಿಯೋ ವೈರಲ್

    ಭುವನೇಶ್ವರ: ವ್ಯಕ್ತಿಯೊಬ್ಬ ಗಾಯಗೊಂಡಿದ್ದ ಕರಡಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಟ್ಯಾಕ್ಷಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಭು ಭಾತ್ರಾ ಮೃತ ದುರ್ದೈವಿ. ಬುಧವಾರ ನಬರಾಂಗ್ಪುರ ಜಿಲ್ಲೆಯ ಕೋಸಗುಮುದ ಬ್ಲಾಕ್ ನಡಿ ಬರುವ ಅರಣ್ಯದ ಬಳಿ ಈ ಘಟನೆ ಸಂಭವಿಸಿದೆ.

    ಘಟನೆ ವಿವರ?: ಪ್ರಭು ಭಾತ್ರಾ ಕೆಲವು ಪ್ರಯಾಣಿಕರೊಂದಿಗೆ ಕಾಟಪಾಡ್ ನಿಂದ ಪಾಪದಹಂಡಿಗೆ ಬೊಲೆರೋ ಕಾರಿನಲ್ಲಿ ಹೋಗುತ್ತಿದ್ದರು. ಎಲ್ಲರೂ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಅರಣ್ಯದ ಕೊಳದ ಬಳಿ ಒಂದು ಕರಡಿ ಇತ್ತು. ಅದನ್ನು ನೋಡಿದ ಪ್ರಭು ಭಾತ್ರಾ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದಾನೆ.

    ಪ್ರಭು ಭಾತ್ರಾ ಕಾರಿನಿಂದ ಇಳಿದು ಗಾಯಗೊಂಡಿದ್ದ ಕರಡಿ ಬಳಿ ಹೋಗಿದ್ದಾನೆ. ಆದರೆ ಕರಡಿ ತಕ್ಷಣ ಪ್ರಭುವನ್ನು ಹಿಡಿದು ಕಚ್ಚಲು ಆರಂಭಿಸಿದೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಆತನನ್ನ ಕಾಪಾಡಲು ಪ್ರಯತ್ನಿಸಿದ್ದಾರೆ. ಆದರೆ ಕರಡಿ ಆತನನ್ನು ಬಿಡದೆ ಕ್ರೂರವಾಗಿ ಕಚ್ಚಿ ಸಾಯಿಸಿದೆ.

    ಈ ಎಲ್ಲಾ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ನಂತರ ಅವರು ಅರಣ್ಯಾಧಿಕಾರಿಗಳ ಕಚೇರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಕರಡಿಯಿಂದ ಮೃತ ದೇಹವನ್ನು ರಕ್ಷಿಸಿದ್ದಾರೆ.

  • ಕೂದಲು ಕತ್ತರಿಸಿ, ಮಹಿಳೆ-ವ್ಯಕ್ತಿಯನ್ನು ಹಗ್ಗದಲ್ಲಿ ಕಟ್ಟಿ ಮೆರವಣಿಗೆ ಮಾಡಿದ ಗ್ರಾಮಸ್ಥರು – ವಿಡಿಯೋ

    ಕೂದಲು ಕತ್ತರಿಸಿ, ಮಹಿಳೆ-ವ್ಯಕ್ತಿಯನ್ನು ಹಗ್ಗದಲ್ಲಿ ಕಟ್ಟಿ ಮೆರವಣಿಗೆ ಮಾಡಿದ ಗ್ರಾಮಸ್ಥರು – ವಿಡಿಯೋ

    ಭುವನೇಶ್ವರ: ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಮಹಿಳೆ ಮತ್ತು ವ್ಯಕ್ತಿಯೊಬ್ಬನನ್ನ ಗ್ರಾಮಸ್ಥರು ಥಳಿಸಿರುವ ಘಟನೆ ಒಡಿಶಾದ ಬುಡಕಟ್ಟು ಜಿಲ್ಲೆಯ ನಬರಾಂಗ್ಪುರ್ ಗ್ರಾಮದಲ್ಲಿ ನಡೆದಿದೆ.

    ವ್ಯಕ್ತಿ ಪಾಪದಹಂಡಿ ಪ್ರದೇಶದವನು ಎಂದು ತಿಳಿದು ಬಂದಿದೆ. ಈತ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದನು. ಮಹಿಳೆ ಬುವಲಿಬೇಡಾ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು.

    ಮಹಿಳೆ ವ್ಯಕ್ತಿಯ ಜೊತೆ ತುಂಬಾ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಶುಕ್ರವಾರ ರಾತ್ರಿ ಇಬ್ಬರು ಒಟ್ಟಿಗೆ ಇದ್ದಾಗ ರೆಡ್ ಹ್ಯಾಂಡ್ ಆಗಿ ತನ್ನ ಪತಿ ಮತ್ತು ಕೆಲವು ಸ್ಥಳೀಯರ ಕೈ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಬ್ಬರನ್ನು ಒಂದೇ ಹಗ್ಗದಲ್ಲಿ ಕಟ್ಟಿ ಅರೆಬೆತ್ತಲೆಗೊಳಿಸಿ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಅವರ ಕೂದಲನ್ನು ಕತ್ತರಿಸಿ ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಮಹಿಳೆ ವೇಶ್ಯಾವಾಟಿಕೆ ನಡೆಸುವಲ್ಲಿ ತೊಡಗಿದ್ದಾಳೆ. ಇದಕ್ಕೆ ಆ ವ್ಯಕ್ತಿಯೂ ಕೂಡ ಸಹಾಯ ಮಾಡುತ್ತಿದ್ದನು ಎಂದು ಗ್ರಾಮಸ್ಥರು ಆರೋಪಿದ್ದು, ಮಹಿಳೆಯನ್ನು ಅಂಗನವಾಡಿ ಕೆಲಸದಿಂದ ತೆಗೆಯುವಂತೆ ಒತ್ತಾಯಿಸಿದ್ದಾರೆ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಉಮರ್ ಕೋಟೆ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನು ರಕ್ಷಿಸಿ ಆಕೆಯ ಪತಿ ಮತ್ತು ಇದಕ್ಕೆ ಸಂಬಂಧಿಸಿದ ಮೂವರನ್ನು ಬಂಧಿಸಿದ್ದಾರೆ. ಮಹಿಳೆ ಮತ್ತು ವ್ಯಕ್ತಿಗೆ ಹೊಡೆಯುತ್ತಿದ್ದಾಗ ಅಲ್ಲಿದ್ದ ಜನರು ಅವರಿಗೆ ಸಹಾಯ ಮಾಡದೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

    ನಮಗೆ ಅಪರಿಚಿತ ವ್ಯಕ್ತಿಯೊಬ್ಬರು ಫೋನ್ ಮಾಡಿ ಈ ಘಟನೆ ಬಗ್ಗೆ ಮಾಹಿತಿ ನೀಡಿದರು. ನಂತರ ನಾವು ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರ ಹೊಡೆತದಿಂದ ವ್ಯಕ್ತಿ ಮತ್ತು ಮಹಿಳೆಯನ್ನು ರಕ್ಷಿಸಿದ್ದೇವೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದೇವೆ. ಈ ಘಟನೆಯು ಮಹಿಳೆಗೆ ಸಂಬಂಧಿಸಿರುವುದರಿಂದ ಪ್ರಾಥಮಿಕ ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಬೈರೇಂದ್ರ ಸೇನಪತಿ ಹೇಳಿದ್ದಾರೆ.

  • ಬಸ್ಸಿನಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ – ವೀಡಿಯೊ ವೈರಲ್

    ಬಸ್ಸಿನಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ – ವೀಡಿಯೊ ವೈರಲ್

    ಭುವನೇಶ್ವರ: ಯುವತಿಯೊಬ್ಬಳು ಬಸ್ಸಿನಲ್ಲಿ ಕಿರುಕುಳ ನೀಡಿದ ವ್ಯಕ್ತಿಗೆ ತನ್ನ ಚಪ್ಪಲಿ ತೆಗೆದು ಬಾರಿಸಿದ್ದು, ಈಗ ಆ ವೀಡಿಯೊ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ನಗರದ ಬಸ್ ಒಂದರಲ್ಲಿ ಯುವತಿಯ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಯುವತಿ ಧೈರ್ಯದಿಂದ ಎದ್ದು ಆತನಿಗೆ ಬೈದಿದ್ದಾರೆ. ಆದರೆ ಆ ವ್ಯಕ್ತಿ ತಾನು ಮುಗ್ಧ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾನೆ. ನಂತರ ಆಕೆ ತನ್ನ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಬಳಿಕ ಬಸ್ ನಲ್ಲಿ ಕೆಲವರು ಸಹ-ಪ್ರಯಾಣಿಕರು ಕ್ಷಮೆ ಕೇಳುವಂತೆ ವ್ಯಕ್ತಿಗೆ ಒತ್ತಾಯಪಡಿಸುವುದರ ಮೂಲಕ ಯುವತಿಯನ್ನ ಬೆಂಬಲಿಸಿದ್ದಾರೆ.

    ಕೊನೆಗೆ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ತಕ್ಷಣವೇ ಆ ವ್ಯಕ್ತಿಯನ್ನು ಬಸ್ಸಿನಿಂದ ಹೊರ ಹೋಗಲು ಹೇಳಿದ್ದಾರೆ. ನಂತರ ಆ ವ್ಯಕ್ತಿ ಕೆಳಗಿಳಿದು ಹೋಗಿದ್ದಾನೆ. ಇದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ಘಟನೆಯನ್ನು ಬಸ್ಸಿನಲ್ಲಿ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲದೇ ಈ ಘಟನೆ ಸಂಭವಿಸಿದ ನಿಖರ ಸ್ಥಳ ಇನ್ನೂ ತಿಳಿದಿಲ್ಲ. ಆದರೆ ನಗರದ ಖಂಡಗಿರಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

    https://youtu.be/qaaDnE6cJYU

  • ದೀಪಾವಳಿ ಹಬ್ಬದಂದೇ ಅಕ್ರಮ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 8 ಸಾವು

    ದೀಪಾವಳಿ ಹಬ್ಬದಂದೇ ಅಕ್ರಮ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 8 ಸಾವು

    ಭುವನೇಶ್ವರ: ದೀಪಾವಳಿ ಹಬ್ಬದಂದೇ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ಸುಮಾರು 8 ಜನರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

    ಸ್ಫೋಟದಿಂದ ಕಾರ್ಖಾನೆಯ ಅವಶೇಷಗಳ ಕೆಳಗೆ ಇನ್ನೂ ಕಾರ್ಮಿಕರು ಸಿಲುಕಿಕೊಂಡಿರುವ ಸಾಧ್ಯತೆಗಳಿದೆ. ಆದರೆ ಅವರನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ನಿರಂತರವಾಗಿ ಸುರಿಯುತ್ತಿರುವ ಮಳೆಯು ಅಡ್ಡಿ ಆಗಿತ್ತು. ಇತ್ತೀಚಿನ ವರದಿಯ ಪ್ರಕಾರ ಘಟನೆಯಲ್ಲಿ 8 ಜನ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

    ಬಾಲಸೋರ್‍ನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಬಹಾಬಲ್ಪುರ್‍ನಲ್ಲಿ ಈ ಫ್ಯಾಕ್ಟರಿ ಇದೆ. ಬುಧವಾರ ಸಂಜೆ ಸುಮಾರು 4.00 ಗೆ ಈ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿಯೇ 6 ಜನರು ಮೃತಪಟ್ಟಿದ್ದರು. ಸತ್ತವರ ದೇಹಗಳನ್ನು ಪತ್ತೆ ಮಾಡಲಾಗಿದೆ. ಈ ಫ್ಯಾಕ್ಟರಿ ಯಾವುದೇ ರೀತಿ ಅಧಿಕೃತ ಲೈಸೆನ್ಸ್ ಹೊಂದದೆ ಅಕ್ರಮವಾಗಿ ಪಟಾಕಿ ತಯಾರಿಸುತ್ತಿತ್ತು ಎಂದು ಜಿಲ್ಲಾಧಿಕಾರಿ ಪ್ರಮೋದ್ ಕುಮಾರ್ ದಾಸ್ ತಿಳಿಸಿದ್ದಾರೆ.

    ಈ ಅವಘಡದಿಂದ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಬಾಲಸೋರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಫೋಟದ ಪರಿಣಾಮ ಪಟಾಕಿ ಫ್ಯಾಕ್ಟರಿ ನಡೆಸುತ್ತಿದ್ದ ಕಟ್ಟಡಕ್ಕೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಅಷ್ಟೇ ಅಲ್ಲದೇ ದೇಹಗಳು ಚಿದ್ರಚಿದ್ರವಾಗಿ ಗುರುತಿಸುವುದಕ್ಕೂ ಕಷ್ಟವಾಗಿತ್ತು. ಫ್ಯಾಕ್ಟರಿ ಮಾಲೀಕ ಪಟಾಕಿಗಳನ್ನು ಹೊರಗಡೆಯೂ ಮಾರಾಟ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ದಾಸ್, ಎಸ್‍ಪಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಚರಣೆಯನ್ನು ನಡೆಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಏನೆಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಶಾಸಕನನ್ನು ಮದ್ವೆಯಾಗಿದ್ದೀನೆಂದು ಒಡಿಶಾ ವಿಧಾನಸಭೆ ಮುಂಭಾಗ ಫಿನಾಯಿಲ್ ಕುಡಿದು ಮಹಿಳೆ ಆತ್ಮತ್ಯೆಗೆ ಯತ್ನ

    ಶಾಸಕನನ್ನು ಮದ್ವೆಯಾಗಿದ್ದೀನೆಂದು ಒಡಿಶಾ ವಿಧಾನಸಭೆ ಮುಂಭಾಗ ಫಿನಾಯಿಲ್ ಕುಡಿದು ಮಹಿಳೆ ಆತ್ಮತ್ಯೆಗೆ ಯತ್ನ

    ಭುವನೇಶ್ವರ: ಒಡಿಶಾದ ವಿಧಾನಸಭೆಯ ಮುಂಭಾಗ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    ವಾರದ ಹಿಂದಷ್ಟೇ ಇದೇ ಮಹಿಳೆ ಒಡಿಶಾ ಸಿಎಂ ನಿವಾಸದ ಎದುರು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದು ಮತ್ತೆ ವಿಧಾಸಭೆಯ ಮುಂಭಾಗ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

    ಆತ್ಮಹತ್ಯೆ ಯತ್ನಿಸಿದ ಮಹಿಳೆಯನ್ನು ಸೊನಾಲಿಕಾ ಮೊಹಂತಿ ಎಂದು ಗುರುತಿಸಲಾಗಿದ್ದು, ಈಕೆ ಬಿಜೆಡಿ ಶಾಸಕ ಬ್ರಾಜಾ ಕಿಶೋರ್ ಪ್ರಧಾನ್ ಅವರ ಹೆಂಡತಿ ಎಂದು ಹೇಳಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಕಿಶೋರ್ ಪ್ರಧಾನ್ ಅವರೊಂದಿಗೆ ಗುಟ್ಟಾಗಿ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಆದರೆ ಶಾಸಕರಾದ ಕಿಶೋರ್ ಮಹಿಳೆಯ ಆರೋಪವನ್ನು ನಿರಾಕರಿಸಿದ್ದು, ಆಕೆಯನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.

    ಸದನವನ್ನು ಮುಂದೂಡಲ್ಪಟ್ಟಿದ್ದ ವೇಳೆ ವಿಧಾನಸಭೆಯ ಗೇಟ್ ಬಳಿ ಆಗಮಿಸಿದ ಮೊಹಂತಿ, ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.

    ಸೆಪ್ಟೆಂಬರ್ 7ರಂದು ಮೊಹಂತಿ, ಸಿಎಂ ನಿವಾಸದ ಎದುರು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮೇ 17 ರಂದು ಶಾಸಕರ ಮನೆಯ ಗೇಟ್‍ನ ಕಂಬಿಗಳನ್ನ ಮುರಿದು ಒಳಗೆ ನುಗ್ಗಿದ್ದರು. ಅದಕ್ಕೂ ಮುಂಚೆ ಶಾಸಕರ ತವರು ಜಿಲ್ಲೆ ಅಂಗುಲ್‍ನಲ್ಲಿರುವ ಶಾಸಕರ ಮನೆ ಮುಂದೆ ಧರಣಿ ನಡೆಸಿದ್ದರು ಎಂದು ವರದಿಯಾಗಿದೆ.

    ಅಲ್ಲದೆ ಮೊಹಂತಿ ಅವರು ಶಾಸಕರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಜೊತೆಗೆ ಎಸ್‍ಡಿಜೆಎಮ್ ಕೋರ್ಟ್‍ನಲ್ಲಿ ಇದೇ ವರ್ಷ ಮೇ ನಲ್ಲಿ ಪ್ರಧಾನ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಪ್ರೇಯಸಿಯ ಜೊತೆಗೆ ಸೆಕ್ಸ್: ವಿಡಿಯೋ ಶೇರ್ ಮಾಡಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

    ಪ್ರೇಯಸಿಯ ಜೊತೆಗೆ ಸೆಕ್ಸ್: ವಿಡಿಯೋ ಶೇರ್ ಮಾಡಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

    ಭುವನೇಶ್ವರ: ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯೊಂದಿಗಿನ ಸೆಕ್ಸ್ ವಿಡಿಯೋವನ್ನು ಶೇರ್ ಮಾಡಿ ಅರೆಸ್ಟ್ ಆಗಿದ್ದಾನೆ.

    ಹೌದು. ಒಡಿಶಾದ ಭುವನೇಶ್ವರ ಐಟಿಇಆರ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅದೇ ಕಾಲೇಜಿನ ಗೆಳತಿಯನ್ನು ಪ್ರೀತಿಸುತ್ತಿದ್ದು, ಇಬ್ಬರೂ ತಮ್ಮ ಪ್ರೀತಿಯನ್ನು ಸುಮಾರು ಬಾರಿ ಹಂಚಿಕೊಂಡಿದ್ದಾರೆ. ಆ ಪ್ರೀತಿಯ ರೊಮ್ಯಾನ್ಸ್ ಕ್ಷಣಗಳನ್ನು ಆತ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ.

    ಸೆರೆಹಿಡಿದ ಬಳಿಕ ಆತ ಆ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಮೂಲಕ ಗೆಳೆಯರ ಜೊತೆ ಹಂಚಿಕೊಂಡಿದ್ದಾನೆ. 4 ನಿಮಿಷದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ವಿದ್ಯಾರ್ಥಿ ಹಾಗೂ ಆತನ ಪ್ರೇಯಸಿ ತುಂಬಾ ಆತಂಕಕ್ಕೊಳಗಾಗಿದ್ದಾರೆ. ಅಷ್ಟರಲ್ಲಿ ಆ ವಿಷಯ ಪೊಲೀಸರಿಗೆ ತಲುಪಿದ್ದು, ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ದೇವಾಸ್ಥಾನದೊಳಗೆ ವಿಕಲಾಂಗ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಯುವಕ

    ದೇವಾಸ್ಥಾನದೊಳಗೆ ವಿಕಲಾಂಗ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಯುವಕ

    ಭುವನೇಶ್ವರ: ದೇವಾಲಯದಲ್ಲಿ ವಿಕಲಾಂಗ ಅಪ್ರಾಪ್ತೆಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಓಡಿಶಾದ ಬಾರಿಪಾದಾದಲ್ಲಿ ನಡೆದಿದೆ.

    ಇಲ್ಲಿನ ಸ್ವಾಮಿ ಜಗನ್ನಾಥ ದೇವಾಲಯದಲ್ಲಿ ಶುಕ್ರವಾರ ರಾತ್ರಿ 11 ವರ್ಷದ ಬಾಲಕಿ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಳು. ಈ ವೇಳೆ ದೇವಸ್ಥನ ನಿರ್ಜನವಾಗಿತ್ತು. ಈ ವೇಳೆ ದೇವಸ್ಥಾನದಲ್ಲಿದ್ದ 28 ವರ್ಷದ ಯುವಕ ಬಾಲಕಿಯನ್ನು ಮಂಟಪದ ಬಳಿ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಸಂತ್ರಸ್ತೆಯನ್ನು ಸ್ಥಳದಿಂದ ರಕ್ಷಿಸಲಾಗಿದ್ದು, ಆಕ್ರೋಶಗೊಂಡ ಸ್ಥಳೀಯರು ಯುವಕನನ್ನು ಪತ್ತೆಹಚ್ಚು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಕಟಕ್‍ನ ಎಸ್‍ಸಿಬಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸರು ಹೇಳಿದ್ದಾರೆ.

    ಸ್ಥಳಕ್ಕೆ ಸಬ್-ಕಲೆಕ್ಟರ್ ಎಸ್.ಕೆ.ಪುರೋಹಿತ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಬಾಲಕಿಯ ಚಿಕಿತ್ಸಾ ವೆಚ್ಚಕ್ಕೆ 10,000 ರೂ. ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.