Tag: ಭುವನೇಶ್ವರ

  • ಅಪ್ರಾಪ್ತೆಯನ್ನ ಕೂಡಿ ಹಾಕಿ 3 ತಿಂಗ್ಳು ತಂದೆ ಮಗನಿಂದ್ಲೇ ರೇಪ್

    ಅಪ್ರಾಪ್ತೆಯನ್ನ ಕೂಡಿ ಹಾಕಿ 3 ತಿಂಗ್ಳು ತಂದೆ ಮಗನಿಂದ್ಲೇ ರೇಪ್

    ಭುವನೇಶ್ವರ: ತಂದೆ ಮತ್ತು ಮಗ ಇಬ್ಬರು ಸೇರಿ ಅಪ್ರಾಪ್ತ ಹುಡುಗಿಯ ಮೇಲೆ ಮೂರು ತಿಂಗಳು ಕಾಲ ಅತ್ಯಾಚಾರ ಮಾಡಿರುವ ಘಡನೆ ಒಡಿಶಾದ ಝಾರ್ಸಗುಡಾದಲ್ಲಿ ನಡೆದಿದೆ.

    ಈ ಘಟನೆ ಸಂತ್ರಸ್ತ ಹುಡುಗಿ ಝಾರ್ಸಗುಡ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಬೆಳಕಿಗೆ ಬಂದಿದೆ. ಸದ್ಯಕ್ಕೆ ಸಂತ್ರಸ್ತೆ ಘಟನೆಯಿಂದ ಆಘಾತಕ್ಕೊಳಗಾಗಿ ಭಯದಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರೋಪಿಗಳು ಇನ್ನು ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಆಂಗ್ಲ್ ಜಿಲ್ಲೆಯ ತಲ್ಚರ್ನನಲ್ಲಿ ಒಂದು ರೂಮಿನಲ್ಲಿ ಸಂತ್ರಸ್ತೆಯನ್ನು ಬಂಧಿಸಿದ್ದಾರೆ. ಬಳಿಕ ಸತತ ಮೂರು ತಿಂಗಳಿಂದ ಮಗನ ಜೊತೆ ಸೇರಿ ಪಾಪಿ ತಂದೆಯೂ ಕೂಡ ಅತ್ಯಾಚಾರ ಮಾಡಿದ್ದಾನೆ. ಬಳಿಕ ಸಂತ್ರಸ್ತೆ ಹೇಗೋ ಆರೋಪಿಗಳು ಕೂಡಿ ಹಾಕಿದ್ದ ಸ್ಥಳದಿಂದ ತಪ್ಪಿಸಿಕೊಂಡು ಮಂಗಳವಾರ ಝಾರ್ಸಗುಡಗೆ ಬಂದು ದೂರು ನೀಡಿದ್ದಾಳೆ ಅಂತ ಪೊಲೀಸರು ಹೇಳಿದ್ದಾರೆ.

    ಸಂತ್ರಸ್ತೆ ಆರೋಪಿಗಳ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಪೊಲೀಸರು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇರೆಗೆ ಈ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.

    ಸಂತ್ರಸ್ತೆ ಆರೋಪಿಗಳ ಗುರುತನ್ನು ಗುರುತಿಸಿದ ಬಳಿಕ ನಾವು ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಆದರೆ ಈ ಘಟನೆ ಕುರಿತಂತೆ ಇಲ್ಲಿಯವರೆಗೂ ಯಾರನ್ನು ಬಂಧಿಸಲಿಲ್ಲ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸಾವಿತ್ರಿ ಬಾಲ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯಲ್ಲಿ ಕೂಡಿ ಹಾಕಿ ಸತತ 28 ದಿನ ಗ್ಯಾಂಗ್‍ರೇಪ್ ಮಾಡಿ ನದಿಗೆ ಎಸೆದ್ರು

    ಮನೆಯಲ್ಲಿ ಕೂಡಿ ಹಾಕಿ ಸತತ 28 ದಿನ ಗ್ಯಾಂಗ್‍ರೇಪ್ ಮಾಡಿ ನದಿಗೆ ಎಸೆದ್ರು

    ಭುವನೇಶ್ವರ: ಹುಡುಗಿಯೊಬ್ಬಳನ್ನು ಕಿಡ್ನಾಪ್ ಮಾಡಿ ಮನೆಯಲ್ಲಿ ಕೂಡಿ ಹಾಕಿ 28 ದಿನಗಳ ಸತತವಾಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಬಳಿಕ ಸಂತ್ರಸ್ತೆಯನ್ನು ನದಿಗೆ ಎಸೆದಿರುವ ಘಟನೆ ಒಡಿಶಾದ ಜಾಜ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಭಾನುವಾರ ಆರೋಪಿಗಳು ಸಂತ್ರಸ್ತೆಯನ್ನು ಖರಾಸ್ರೋಟಾ ನದಿಗೆ ಬಿಸಾಕಿದ್ದಾರೆ. ಬಳಿಕ ಸಂತ್ರಸ್ತೆ ಹೇಗೋ ಕಷ್ಟಪಟ್ಟು ಈಜಿಕೊಂಡು ಜಿಲ್ಲೆಯ ಕೌಖಿಯಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ರೌಟ್ಪುರ್ ಗ್ರಾಮದ ತೀರಕ್ಕೆ ಬಂದಿದ್ದಾಳೆ. ಬಳಿಕ ನಡೆದ ಘಟನೆಯ ಬಗ್ಗೆ ಅಲ್ಲಿನ ಗ್ರಾಮಸ್ಥರಿಗೆ ತಿಳಿಸಿದ್ದಾಳೆ.

    ಆಗಸ್ಟ್ 20ರಂದು ಮಧುಬಾನ್ ಬಜಾರ್ ಗೆ ಹೋಗುತ್ತಿದ್ದಾಗ ಅಪರಿಚಿತ ಯುವಕರ ಗುಂಪೊಂದು ಬಂದು ನನ್ನನ್ನು ಅಪಹರಿಸಿತ್ತು. ಬಳಿಕ ನಿರ್ಜನ ಪ್ರದೇಶದಲ್ಲಿದ್ದ ಒಂದು ಮನೆಯಲ್ಲಿ ಕೂಕಿ ಹಾಕಿದ್ದು, ಅಂದಿನಿಂದಲೂ ಭಾನುವಾರದ ವರೆಗೂ ಅಂದರೆ ಸತತ 28 ದಿನಗಳ ಕಾಲ ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಗ್ರಾಮಸ್ಥರ ಬಳಿ ಹೇಳಿಕೊಂಡಿದ್ದಾಳೆ.

    ಭಾನುವಾರ ರಾತ್ರಿ ಆರೋಪಿಗಳು ಸಂತ್ರಸ್ತೆಯನ್ನು ಕೊಲೆ ಮಾಡುವ ಉದ್ದೇಶದಿಂದ ಖರಾಸ್ರೋಟಾ ನದಿಗೆ ಎಸೆದಿದ್ದಾರೆ. ಆದರೆ ಸಂತ್ರಸ್ತೆ ಬದುಕುಳಿದಿದ್ದು, ಈಜಿಕೊಂಡು ದಡ ಸೇರಿದ್ದಾಳೆ. ನಂತರ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಂತ್ರಸ್ತೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಆಗಸ್ಟ್ 20 ರಂದು ನಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ್ದರು. ನಾವು ಅನೇಕ ದಿನಗಳಿಂದ ಹುಡುಕಾಟ ನಡೆಸುತ್ತಿದ್ದೆವು. ಈಗ ಸಂತ್ರಸ್ತೆ ಪತ್ತೆಯಾಗಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನೈತಿಕ ಸಂಬಂಧ ನೋಡಿದ ಅಪ್ರಾಪ್ತೆ – ಪ್ರಿಯಕರನೊಂದಿಗೆ ಸೆಕ್ಸ್ ಮಾಡುವಂತೆ ತಾಯಿ ಒತ್ತಾಯ

    ಅನೈತಿಕ ಸಂಬಂಧ ನೋಡಿದ ಅಪ್ರಾಪ್ತೆ – ಪ್ರಿಯಕರನೊಂದಿಗೆ ಸೆಕ್ಸ್ ಮಾಡುವಂತೆ ತಾಯಿ ಒತ್ತಾಯ

    ಭುವನೇಶ್ವರ: ತಾಯಿಯೊಬ್ಬಳು ತಾನು ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿಸಿರುವ ಅಮಾನವೀಯ ಘಟನೆ ಒಡಿಶಾದ ಬಾಲಸೋರ್ ನಲ್ಲಿ ನಡೆದಿದೆ.

    17 ವರ್ಷದ ಅಪ್ರಾಪ್ತ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ತನ್ನ ತಾಯಿಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದಕ್ಕೆ 60 ವರ್ಷದ ವ್ಯಕ್ತಿ ಸುಮಾರು ಐದು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಏನಿದು ಪ್ರಕರಣ?
    ಪಟ್ಟಣ ಹೊರವಲಯದಲ್ಲಿರುವ ಕುರುಡದಲ್ಲಿ ನಾವು ವಾಸಿಸುತ್ತಿದ್ದೆವು. ನಾನು ಮನೆಗೆ ಬಂದಾಗ ತನ್ನ ತಾಯಿ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಿಳಿಯಿತು. ಬಳಿಕ ನಾನು ಅವರ ಸಂಬಂಧವನ್ನು ವಿರೋಧಿಸಿದೆ. ಆಗ ನನ್ನ ತಾಯಿ ಆತನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದಳು. ಬಳಿಕ ಆತ ನನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿಯಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ.

    ಸಂತ್ರಸ್ತೆ ಎಫ್‍ಐಆರ್ ದಾಖಲಿಸುತ್ತಿದ್ದಂತೆ ಆರೋಪಿ ತಾಯಿ ತನ್ನ ಮಗಳು ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಅಷ್ಟೇ ಅಲ್ಲದೇ ಆಕೆಗೆ ಕಾಯಿಲೆ ಇದೆ, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದ್ದಾಳೆ.

    ಆರೋಪಿ ಮಹಿಳೆ ಪತಿಯಿಂದ ದೂರವಿದ್ದು, ಮೂರು ಮಕ್ಕಳಿದ್ದಾರೆ. ಸ್ಥಳೀಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸದ್ಯಕ್ಕೆ ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರುತ್ತದೆ ಎಂದು ಸದಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನುಮಾನಾಸ್ಪದವಾಗಿ ವೈದ್ಯೆಯ ಮೃತದೇಹ ಪತ್ತೆ

    ಅನುಮಾನಾಸ್ಪದವಾಗಿ ವೈದ್ಯೆಯ ಮೃತದೇಹ ಪತ್ತೆ

    ಭುವನೇಶ್ವರ: ಒಡಿಶಾದ ಚದ್ರಶೇಖರಪುರ ಪ್ರದೇಶದ ಶ್ರೀ ವಿಹಾರ್ ನಲ್ಲಿ ಮಹಿಳಾ ವೈದ್ಯರೊಬ್ಬರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

    ಮನಸ್ವಿನಿ ಬಾರಿಕ್ ಮೃತ ಡಾಕ್ಟರ್ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನಸ್ವಿನಿ ಮೂಲತಃ ಪಶ್ಚಿಮ ಒಡಿಶಾದವರಾಗಿದ್ದು, ಪತಿಯಿಂದ ವಿಚ್ಛೇದನ ಪಡೆದುಕೊಂಡು ಶ್ರೀ ವಿಹಾರ್ ನಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೆ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

    ಇಂದು ಬೆಳಗ್ಗೆ ತುಂಬಾ ಸಮಯವಾದರು ಮನಸ್ವಿನಿ ಮನೆಯಿಂದ ಹೊರಗೆ ಬಂದಿರಲಿಲ್ಲ. ಬಳಿಕ ನೆರೆಹೊರೆಯವರು ಬಾಗಿಲು ಬಡಿದಿದ್ದಾರೆ. ಆದರೆ ಮನೆಯಿಂದ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ನಂತರ ನೆರೆಹೊರೆಯವರು ಅನುಮಾನಗೊಂಡು ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ್ದಾರೆ.

    ಆಗ ಮನಸ್ವಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಡಾಕ್ಟರ್ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಆಕೆ ಇದ್ದ ರೂಮಿನಲ್ಲಿ ಕೆಲವು ಚುಚ್ಚುಮದ್ದು ಮತ್ತು ಸಿರಿಂಜ್ ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

    ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದೇವೆ. ತನಿಖೆಯ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆ ಪ್ರಕರಣವೋ ಎಂಬ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲವ್, ಸೆಕ್ಸ್, ಬ್ಲ್ಯಾಕ್ ಮೇಲ್- ಪತ್ನಿಯ ಜೊತೆಗಿದ್ದ ವಿಡಿಯೋ ರೆಕಾರ್ಡ್ ಮಾಡ್ಕೊಂಡ ಜೈಲರ್

    ಲವ್, ಸೆಕ್ಸ್, ಬ್ಲ್ಯಾಕ್ ಮೇಲ್- ಪತ್ನಿಯ ಜೊತೆಗಿದ್ದ ವಿಡಿಯೋ ರೆಕಾರ್ಡ್ ಮಾಡ್ಕೊಂಡ ಜೈಲರ್

    ಭುವನೇಶ್ವರ: ಜೈಲರೊಬ್ಬ ತನ್ನ ಪತ್ನಿಯ ಜೊತೆಗಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಈಗ ಆತನ ವಿರುದ್ಧ ಒಡಿಶಾ ಪೊಲೀಸರು ದೂರು ದಾಖಲಿಸಿದ್ದಾರೆ.

    ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಚಿನ್ಮಾಯಾ ಪತ್ರಾ ಬಂಧಿತ ಜೈಲರ್. ಈತನ ವಿರುದ್ಧ ಐಪಿಸಿ ಸೆಕ್ಷನ್ 498ಎ, 494, 495, 406, 417, ಮತ್ತು 506 ಅಡಿಯಲ್ಲಿ ಭಾದ್ರಕ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ನಡೆದಿದ್ದೇನು?
    ಪತ್ರಾ ಕಾರಂಜಿಯಾ ಜೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಈತ 2017ರ ಹುಡುಗಿಯೊಬ್ಬಳನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ಆಕೆ ಬಾಲಸೋರ್ ನಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರಿಚಯ ಸ್ನೇಹವಾಗಿ ಬಳಿಕ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು.

    ಇಬ್ಬರು ಮಯೂರ್ಭಂಜ್ ಜಿಲ್ಲೆಯ ಖಿಚಿಂಗ್ ಪ್ರದೇಶದ ಒಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ನಂತರ ಇಬ್ಬರು ಎರಡು ತಿಂಗಳ ಕಾಲ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಆರೋಪಿ ಇಬ್ಬರು ಒಟ್ಟಿಗೆ ಇದ್ದ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಮಧ್ಯೆ ಹುಡುಗಿಗೆ ಆರೋಪಿ ಪತ್ರಾನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವ ಬಗ್ಗೆ ತಿಳಿದಿದೆ. ಬಳಿಕ ಆತನೊಂದಿಗೆ ಈ ಬಗ್ಗೆ ಕೇಳಿದಾಗ ಆತ ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ತೋರಿಸಿ ಬ್ಲ್ಯಾಕ್ ಮೇಲೆ ಮಾಡಲು ಶುರುಮಾಡಿದ್ದಾನೆ.

    ಕೊನೆಗೆ ಸಂತ್ರಸ್ತೆ ಆರೋಪಿ ಜೈಲರ್ ವಿರುದ್ಧ ಭದ್ರಕ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಸಬ್ ಡಿವಿಷನ್ ಪೊಲೀಸ್ ಅಧಿಕಾರಿ ಜಲಂಧರ್ ಜಲಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲವ್ ಬ್ರೇಕಪ್ – ಯುವತಿಯಿಂದ ದೂರು, ಯುವಕ ಅರೆಸ್ಟ್

    ಲವ್ ಬ್ರೇಕಪ್ – ಯುವತಿಯಿಂದ ದೂರು, ಯುವಕ ಅರೆಸ್ಟ್

    ಭುವನೇಶ್ವರ: ಯುವಕನೊಬ್ಬ ತನ್ನ ಪ್ರಿಯತಮೆಯ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

    ಒಡಿಶಾದ ಜೈಪುರ್ ನಲ್ಲಿ ಈ ಘಟನೆ ನಡೆದಿದ್ದು, ಕುಕಾಖಿಯ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ. ರಾಮಚಂದ್ರ ಬಾರಿಕ್ ಬಂಧಿತ ಆರೋಪಿ. ಸಂತ್ರಸ್ತೆ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಆರೋಪಿಯನ್ನು ಕಟಕ್ ನ ಮಂಗೂಲಿಯಲ್ಲಿದ್ದ ಮನೆಯಿಂದ ಬಂಧಿಸಲಾಗಿದೆ.

    ಭುವನೇಶ್ವರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಇಬ್ಬರ ನಡುವೆ ಪರಿಚಯವಾಗಿತ್ತು. ಪರಿಚಯವು ಪ್ರೀತಿಗೆ ತಿರುಗಿತ್ತು. ಆದರೆ ಆರೋಪಿ ರಾಮಚಂದ್ರ, ಆಕೆಯ ಸ್ನೇಹಿತರ ಜೊತೆ ಸೇರಿ ಸಂತ್ರಸ್ತೆಯ ಕೆಲ ಅಸಭ್ಯ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾನೆ. ಕೆಲವು ದಿನಗಳ ನಂತರ ಇವರ ಮಧ್ಯೆ ಜಗಳವಾಗಿ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಈ ಕಾರಣದಿಂದ ಕೋಪಗೊಂಡು ಆತ ತೆಗೆದಿದ್ದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ ಅಂತ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಸಂತ್ರಸ್ತೆಗೆ ಈ ಬಗ್ಗೆ ತಿಳಿದ ತಕ್ಷಣ ಕುಕಾಖಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಾನೇ ಅಪ್ಲೋಡ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಆರೋಪಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

  • ಬೇರೆ ಹುಡ್ಗನೊಂದಿಗೆ ಮದುವೆ- ಮಾಜಿ ಪ್ರಿಯಕರನಿಂದ ಸೆಕ್ಸ್ ವಿಡಿಯೋ ವೈರಲ್!

    ಬೇರೆ ಹುಡ್ಗನೊಂದಿಗೆ ಮದುವೆ- ಮಾಜಿ ಪ್ರಿಯಕರನಿಂದ ಸೆಕ್ಸ್ ವಿಡಿಯೋ ವೈರಲ್!

    ಭುವನೇಶ್ವರ: ಯುವಕನೊಬ್ಬ ತನ್ನ ಮಾಜಿ ಪ್ರಿಯತಮೆಯ ಜೊತೆಗಿದ್ದ ಫೋಟೋ ಮತ್ತು ವಿಡಿಯೋವನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಮಯೂರ್ಭಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ತನ್ನ ಮಾಜಿ ಪ್ರಿಯತಮೆ ಬೇರೆ ಹುಡುಗನೊಂದಿಗೆ ಮದುವೆಯಾದ ಬಗ್ಗೆ ತಿಳಿದುಕೊಂಡು ಬಳಿಕ ಆತ ತನ್ನ ಫೇಸ್‍ಬುಕ್ ನಲ್ಲಿ ಆಕೆಯೊಂದಿಗಿದ್ದ ಸಂಬಂಧದ ಬಗ್ಗೆ ಬರೆದುಕೊಂಡಿದ್ದಾನೆ.

    ಅಷ್ಟೇ ಅಲ್ಲದೇ ಆತ ಎರಡು ದಿನಗಳ ಹಿಂದೆ ನನ್ನ ಮಾಜಿ ಪ್ರಿಯತಮೆ ಬೇರೆಯೊಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ ಎಂದು ಬರೆದಿದ್ದಾನೆ. ಜೊತೆಗೆ ನಾನು ಆಕೆಗೆ ನೋವುಂಟು ಮಾಡಿದ್ದೀನಿ. ಈ ಫೋಟೋ ಮತ್ತು ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿಯೂ ಬರೆದು ಕೊಂಡಿದ್ದಾನೆ.

    ಈ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಆದ ಕಾರಣ ಈ ಕುರಿತು ಯಾವುದೇ ರೀತಿ ಪೊಲೀಸ್ ಕಂಪ್ಲೆಂಟ್ ದಾಖಲಾಗಿಲ್ಲ.

  • ಕುತ್ತಿಗೆಯವರೆಗೂ ನೀರು ತುಂಬಿದ್ರು ಹಗ್ಗ ಹಿಡಿದು ಹಿರಿಯ ವ್ಯಕ್ತಿಯನ್ನು ಪಾರು ಮಾಡಿದ್ರು- ವಿಡಿಯೋ ವೈರಲ್

    ಕುತ್ತಿಗೆಯವರೆಗೂ ನೀರು ತುಂಬಿದ್ರು ಹಗ್ಗ ಹಿಡಿದು ಹಿರಿಯ ವ್ಯಕ್ತಿಯನ್ನು ಪಾರು ಮಾಡಿದ್ರು- ವಿಡಿಯೋ ವೈರಲ್

    ಭುವನೇಶ್ವರ: ಒಡಿಶಾದಲ್ಲಿ ನೆರೆ ವೇಳೆ ಹಿರಿಯ ನಾಗರಿಕರೊಬ್ಬರನ್ನು ರಕ್ಷಣೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕಳೆದ ಕೆಲವು ದಿನಗಳಿಂದ ಒಡಿಶಾ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಜುಲೈ 21 ಮತ್ತು 22 ರ ಮಧ್ಯರಾತ್ರಿ ಸಂಬಲ್ಪುರ ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ನೀರು ಬೀದಿ ಮತ್ತು ಮನೆಗಳಿಗೆ ನುಗ್ಗಿತ್ತು. ನೆರೆಯಿಂದಾಗಿ ಸುಮಾರು 5,000 ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಜಾಗಕ್ಕೆ ತೆರಳಿದ್ದರು.

    ಒಡಿಶಾ ರಕ್ಷಣಾ ಪಡೆ, ಜಿಲ್ಲಾ ಪೊಲೀಸ್, ಜಿಲ್ಲಾ ಆಡಳಿತ ಮತ್ತು ಐದು ಸೇವಾ ತಂಡಗಳು ಒಟ್ಟಾಗಿ ಪ್ರವಾಹದಿಂದಾಗಿ ಸಂಬಲ್ಪುರ ಪಟ್ಟಣದಲ್ಲಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಈ ವೇಳೆ ಸಿಬ್ಬಂದಿ ಹಿರಿಯ ವ್ಯಕ್ತಿಯೊಬ್ಬರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋವನ್ನು ಜುಲೈ 22 ರಂದು ತೆಗೆದಿದ್ದು, ಕುತ್ತಿಗೆವರೆಗೂ ಪ್ರವಾಹದ ನೀರು ತುಂಬಿದ್ದರೂ ಸಿಬ್ಬಂದಿ ಹಗ್ಗದ ಸಹಾಯದಿಂದ ಹಿರಿಯ ನಾಗರಿಕರೊಬ್ಬರನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಹಗ್ಗ ಹಿಡಿದುಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದುಕೊಂಡು ಹೋಗಿದ್ದಾರೆ.

    ಮಾಧ್ಯಮಗಳಲ್ಲಿ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು, ಜೀವದ ಹಂಗನ್ನು ತೊರೆದು ಹಿರಿಯ ನಾಗರೀಕನನ್ನು ಕಾಪಾಡಿದ ಸಿಬ್ಬಂದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

  • ಭಾರೀ ಮಳೆ ನೀರಿಗೆ ಹಳಿಯಲ್ಲೇ ಸಿಲುಕಿದ ರೈಲು-ವಿಡಿಯೋ ನೋಡಿ

    ಭಾರೀ ಮಳೆ ನೀರಿಗೆ ಹಳಿಯಲ್ಲೇ ಸಿಲುಕಿದ ರೈಲು-ವಿಡಿಯೋ ನೋಡಿ

    ಭುವನೇಶ್ವರ: ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಳಿ ಕಾಣದೆ ರೈಲೊಂದು ಮಳೆ ನೀರಿನಲ್ಲಿ ಸಿಲುಕಿಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಭುವನೇಶ್ವರ್- ಜಗ್ದಾಲ್ ಪುರ್ ಹಿರಾಖಂಡ್ ಎಕ್ಸ್ ಪ್ರೆಸ್ ಮಳೆ ನೀರಿನಲ್ಲಿ ಸಿಲುಕಿಕೊಂಡಿದೆ. ರೈಲು ನೀರಿನಲ್ಲಿ ಸಿಲುಕಿ ಚಲಿಸಲು ಪರದಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದೆ.

    ವಿಡಿಯೋದಲ್ಲೇನಿದೆ?:
    ಭಾರೀ ಮಳೆಯ ಪರಿಣಾಮ ರೈಲ್ವೇ ಹಳಿಯ ಮೇಲೆಯೇ ನೀರು ಹರಿದುಹೋಗುತ್ತಿದ್ದು, ಈ ಘಟನೆಯನ್ನು ನೋಡಲು ಸುತ್ತಮುತ್ತಲಿನ ಜನ ಛತ್ರಿ ಹಿಡಿದುಕೊಂಡು ನೋಡುತ್ತಿರುವುದು ಕಾಣಬಹುದು. ಈ ವೇಳೆ ಅದೇ ಸಮಯಕ್ಕೆ ರೈಲೊಂದು ಬಂದಿದ್ದು, ಹಳಿ ಕಾಣದೆ ಮುಂದೆ ಹೋಗಲು ಅಸಾಧ್ಯವಾಗಿ ಪರದಾಡಿದೆ.

    ಹಳಿಯಲ್ಲಿಯೇ ನೀರು ಹರಿಯುತ್ತಿದ್ದ ಪರಿಣಾಮ ಜಗದಲ್ ಪುರದಿಂದ ಭುವನೇಶ್ವರ್ ಗೆ ಹೋಗುವ ರೈಲನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಬದಲಿ ಮಾರ್ಗವಾಗಿ ಕೊರಪುಟ್ ನಿಂದ ಭುವನೇಶ್ವರ್ ಗೆ ಹೋಗುವಂತೆ ಸೂಚಿಸಲಾಗಿದೆ.

    ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣಿ ನದಿ ನಡುಗಡ್ಡೆಯಾಗಿದೆ. ಪರಿಣಾಮ ಪ್ರವಾಹ ರೈಲ್ವೇ ಹಳಿಯ ಮೇಲೆ ಹರಿದುಬಂದಿದೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದುದರಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸುವಂತೆ ಹಾಗೂ ಈ ಬಗ್ಗೆ ಎಚ್ಚರಿಕೆ ನೀಡುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಲ್ಲಿನ ಸರ್ಕಾರ ಸೂಚಿಸಿದೆ. ರಾಜ್ಯದ ಮಲ್ಕಾಂಗರಿ, ಕಂಧಮಾಲ್ ಹಾಗೂ ಗಜಪತಿ ಜಿಲ್ಲೆಗಳು ಪ್ರವಾಹಕ್ಕೀಡಾಗಿವೆ.

  • ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

    ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

    ಭುವನೇಶ್ವರ: ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಇಚ್ಛಿಸಿರುವ 100 ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿ ತಮ್ಮ ಶಿಕ್ಷಣ ಮುಂದುವರಿಸಲು ಇಂದಿರಾ ಗಾಂಧಿ ಮುಕ್ತ ವಿವಿ (ಇಗ್ನೋ) ನಡೆಸುವ ಪರೀಕ್ಷೆಯನ್ನು ಬರೆದಿದ್ದಾರೆ.

    ಇವರೆಗೂ ಒಡಿಸ್ಸಾದಲ್ಲಿ 120ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಅದರಲ್ಲಿ 107 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಜೂನ್ 21 ರಂದು ನಡೆದಿದ್ದು, ಬ್ಯಾಚುಲರ್ ಪ್ರಿಪರೇಟರಿ ಯೋಜನೆ (ಬಿಬಿಪಿ) ಅಡಿಯಲ್ಲಿ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾದರೆ ಪದವಿಗೆ ಸೇರಲು ಅರ್ಹತೆ ಪಡೆಯುತ್ತಾರೆ ಎಂದು ಪರೀಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ.

    ಯುವ ಜನತೆ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶಕ್ಕಾಗಿ ಜಿಲ್ಲಾ ಆಡಳಿತವೇ ಅಭ್ಯರ್ಥಿಗಳ ಪರೀಕ್ಷಾ ವೆಚ್ಚವನ್ನು ಪಾವತಿಸಿತ್ತು. ಪರೀಕ್ಷೆ ಎದುರಿಸಿದ ಯುವಕ ಈ ವೇಳೆ ಪ್ರತಿಕ್ರಿಯೆ ನೀಡಿದ್ದು, ತಾವು ಸಮಾಜದ ಒಂದು ಭಾಗವಾಗಿರಲು ಇಚ್ಛಿಸುತ್ತೇವೆ. ಅದ್ದರಿಂದಲೇ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ತಿಳಿಸಿದರು.

    ಛತ್ತೀಸ್‍ಗಢ ಹಾಗೂ ಒಡಿಶಾ ರಾಜ್ಯಗಳಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಾಗಿದ್ದು, ಇತ್ತೀಚಿಗೆ ಹಲವರು ಪೊಲೀಸರಿಗೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದರು. ಸದ್ಯ ಇವರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಪೂರಕ ಯೋಜನೆಗಳನ್ನು ರೂಪಿಸಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್ ಪಿಎಫ್ ಯೋಧರ ವಾಹನವನ್ನ ನಕ್ಸಲರು ಬಾಂಬ್ ಇಟ್ಟು ಸ್ಫೋಟಿಸಿದ್ದರು. ಈ ವೇಳೆ 9 ಯೋಧರು ಮೃತಪಟ್ಟಿದ್ದರು. ಈ ಘಟನೆ ಬಳಿಕ ಕೇಂದ್ರ ಸರ್ಕಾರ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.