Tag: ಭುವನೇಶ್ವರ

  • ವಿಡಿಯೋ ಕಾಲ್‍ನಲ್ಲಿ ಖಾಸಗಿ ಅಂಗವನ್ನ ತೋರಿಸಿದ್ಳು – ಪ್ರಿಯಕರನಿಂದ ಅಪ್ಲೋಡ್, ಪ್ರೇಯಸಿ ಸೂಸೈಡ್

    ವಿಡಿಯೋ ಕಾಲ್‍ನಲ್ಲಿ ಖಾಸಗಿ ಅಂಗವನ್ನ ತೋರಿಸಿದ್ಳು – ಪ್ರಿಯಕರನಿಂದ ಅಪ್ಲೋಡ್, ಪ್ರೇಯಸಿ ಸೂಸೈಡ್

    ಭುವನೇಶ್ವರ: ಪ್ರಿಯತಮನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪ್ರೇಯಸಿಯ ಅಶ್ಲೀಲ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ಇದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಆಂಗಲ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಯುವತಿ ಬಾಂತಲಾ ಪೊಲೀಸ್ ಠಾಣೆಯ ಪ್ರದೇಶದ ನಿವಾಸಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ.

    ಏನಿದು ಪ್ರಕರಣ?
    ಮೃತ ಯುವತಿ ತಲ್ಚರ್ ಪ್ರದೇಶದ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ವಿಡಿಯೋ ಕಾಲ್ ಮೂಲಕ ಸಂಭಾಷಣೆ ನಡೆಸುತ್ತಿದ್ದರು. ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದಾಗ ಯುವತಿ, ತನ್ನ ಪ್ರಿಯತಮನಿಗೆ ಖಾಸಗಿ ಅಂಗವನ್ನು ತೋರಿಸಿದ್ದಾಳೆ. ಆದರೆ ಪ್ರಿಯತಮ ಈ ವಿಡಿಯೋವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ.

    ಯುವಕ ತನ್ನ ಪ್ರೇಯಸಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಯುವತಿಗೆ ತೀವ್ರ ಮುಜುಗರವಾಗಿದೆ. ಅಲ್ಲದೇ ಘಟನೆಯಿಂದ ನೊಂದ ಯುವತಿ ವಿಷ ಕುಡಿದಿದ್ದಾಳೆ. ಈ ವಿಚಾರ ಕುಟುಂಬದವರಿಗೆ ತಿಳಿದ ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಮೃತ ಯುವತಿಯ ಕುಟುಂಬದವರು ಬಾಂತಲಾ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ಸಲ್ಲಿಸಿದ್ದಾರೆ. ದೂರಿನ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಾಸ್ಟೆಲ್‍ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

    ಹಾಸ್ಟೆಲ್‍ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

    -ಮಗು ಸಹಿತ ಬಾಲಕಿಯನ್ನು ಕಾಡಿಗೆ ಅಟ್ಟಿದ ಹಾಸ್ಟೆಲ್ ಸಿಬ್ಬಂದಿ

    ಭುವನೇಶ್ವರ: ಅಪ್ರಾಪ್ತ ಬಾಲಕಿಯೊಬ್ಬಳು ಆದಿವಾಸಿ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಈ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯ ದರಿಂಗಿಬಾದಿಯಲ್ಲಿರುವ ‘ಸೇವಾ ಆಶ್ರಯ ಹೈಸ್ಕೂಲ್’ ಹಾಸ್ಟೆಲ್‍ನಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಶನಿವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದಾಳೆ. ವಿದ್ಯಾರ್ಥಿನಿಗೆ 14 ವಯಸ್ಸಾಗಿದ್ದು, 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಮಗು ಹುಟ್ಟಿದ ಬಳಿಕ ಆಕೆ ಮತ್ತು ಮಗುವನ್ನು ಹಾಸ್ಟೆಲ್ ನಿಂದ ಹೊರಗೆ ಹತ್ತಿರದ ಅರಣ್ಯಕ್ಕೆ ತಳ್ಳಿದ್ದಾರೆ ಎಂದು ಕಂಧಮಲ್ ಜಿಲ್ಲಾ ಕಲ್ಯಾಣ ಅಧಿಕಾರಿ ಚಾರುಲತಾ ಮಲ್ಲಿಕ್ ತಿಳಿಸಿದ್ದಾರೆ.

    ಈ ಪ್ರಕರಣ ಈಗ ಅಧಿಕಾರಿಗಳಿಗೆ ತಲೆಬಿಸಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಎಸ್‍ಸಿ/ಎಸ್‍ಟಿ ಕಲ್ಯಾಣ ಸಚಿವ ರಮೇಶ್ ಮಝಿ ಅವರು ಆದೇಶಿಸಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಪೊಲೀಸರು ಕೂಡ ಈ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

    ಭಾನುವಾರ ಮುಂಜಾನೆ ಇಬ್ಬರು ಅರಣ್ಯ ಅಧಿಕಾರಿಗಳು ಬಾಲಕಿಯನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿ ಹಾಗೂ ಆಕೆಯ ಮಗು ಇಬ್ಬರು ಫುಲಬಾನಿ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗು ಮತ್ತು ತಾಯಿ ಇಬ್ಬರ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಎಂಟು ತಿಂಗಳ ಹಿಂದೆ ಬಾಲಕಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಆದರೆ ಬಾಲಕಿ ಭಯದಿಂದ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರಿಂಗ್‍ಬಾದಿ ಕಾಲೇಜಿನ ವಿದ್ಯಾರ್ಥಿಯೋರ್ವನನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.

    ಜಿಲ್ಲಾಧಿಕಾರಿ ಬೃಂದ ಅವರು, ಹಾಸ್ಟೆಲ್‍ನ ಇಬ್ಬರು ಅಡುಗೆ ಭಟ್ಟರು, ಮಹಿಳಾ ಮೇಲ್ವಿಚಾರಕಿ ಹಾಗೂ ಓರ್ವ ದಾದಿಯನ್ನು ಅಮಾನತು ಮಾಡಿದ್ದಾರೆ. ಜೊತೆಗೆ ಈ ಶಾಲೆಯ ಮುಖ್ಯಶಿಕ್ಷಕಿ ರಾಧಾ ರಾಣಿ ಅವರನ್ನೂ ಅಮಾನತು ಮಾಡುವಂತೆ ಸರ್ಕಾರ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಥಾಯ್ ಚಂಡಮಾರುತ: 250ಕ್ಕೂ ಹೆಚ್ಚು ಗೋವುಗಳ ಮಾರಣಹೋಮ

    ಪೆಥಾಯ್ ಚಂಡಮಾರುತ: 250ಕ್ಕೂ ಹೆಚ್ಚು ಗೋವುಗಳ ಮಾರಣಹೋಮ

                                                                  ಸಾಂದಭೀಕ ಚಿತ್ರ

    ಭುವನೇಶ್ವರ: ಪೆಥಾಯ್ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾದಲ್ಲಿ ಮೂರೇ ದಿನದಲ್ಲಿ ಸುಮಾರು 250 ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿದೆ.

    ಪೆಥಾಯ್ ಚಂಡಮಾರುತಕ್ಕೆ ಒಡಿಶಾ ರಾಜ್ಯ ತತ್ತರಿಸಿ ಹೋಗಿದೆ. ಗಂಜಮ್ ಜಿಲ್ಲೆಯ ಲ್ಯಾಂಡಜುವಿಲಿ ಗ್ರಾಮದಲ್ಲಿ ಗುರುವಾರ ಒಂದೇ ದಿನಕ್ಕೆ ಸುಮಾರು 57 ಕರುಗಳು ಸಾವನ್ನಪ್ಪಿದ್ದವು. ಈ ವಿಷಯ ತಿಳಿಯುತ್ತಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆಥಾಯ್ ಚಂಡಮಾರುತದ ಪರಿಣಾಮದಿಂದ ಜಾನುವಾರುಗಳು ಸಾವನ್ನಪ್ಪಿರುವ ಸಂಗತಿ ತಿಳಿದು ಬಂದಿದೆ.

    ಚಂಡಮಾರುತದಿಂದ ಒಡಿಶಾದಲ್ಲಿ ವಾತಾವರಣ ಹದಗೆಟ್ಟಿತ್ತು. ಇದರ ಪರಿಣಾಮವೆಂಬಂತೆ ಈ ಭಾಗದ ಜಾನುವಾರುಗಳು ನೇರವಾಗಿ ಮಳೆಯಲ್ಲಿ ಇದ್ದಿದ್ದರಿಂದ ಹಾಗೂ ಪ್ರದೇಶದಲ್ಲಿ ಹೆಚ್ಚು ಚಳಿ ಇದ್ದ ಕಾರಣಕ್ಕೆ ನ್ಯುಮೋನಿಯಾ ರೋಗ ಬಂದು ಮೃತಪಟ್ಟಿದೆ ಎಂದು ಸಹಾಯಕ ಜಿಲ್ಲಾ ಪಶುವೈದ್ಯಾಧಿಕಾರಿ ರವೀಂದ್ರನಾಥ್ ಪಾಂಡಾ ತಿಳಿಸಿದರು.

    ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವನ್ನಪ್ಪಿದ್ದ ಜಾನುವಾರುಗಳನ್ನು ಸುಡಲಾಯಿತು. ಅಲ್ಲದೆ ಗಂಜಮ್ ಜಿಲ್ಲೆಯ ಇತರೇ ಜಾನುವಾರುಗಳ ರಕ್ತದ ಪರೀಕ್ಷೆ ನಡೆಸಿ, ನ್ಯುಮೋನಿಯಾ ರೋಗ ಲಕ್ಷಣ ಕಂಡು ಬಂದರೆ ಚಿಕಿತ್ಸೆ ನೀಡಲು ಅಲ್ಲಿನ ಜಿಲ್ಲಾಡಳಿತ ಮುಂದಾಗಿದೆ.

    ಕಳೆದ ಮೂರು ದಿನಗಳಲ್ಲಿ ಸರಿ ಸುಮಾರು 259 ಜಾನುವಾರುಗಳಲ್ಲಿ 223 ಕರುಗಳು ಚಂಡಮಾರುತದ ಮಳೆಗೆ ಬಲಿಯಾಗಿದೆ ಎಂದು ವರದಿಯಾಗಿದೆ. ಪೆಥಾಯ್ ಚಂಡಮಾರುತಕ್ಕೆ ಒಡಿಶಾ ರಾಜ್ಯದ ಜನರ ಜೀವನ ಅಸ್ತವ್ಯಸ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಚ್ಚು ಪ್ರಿಯತಮನಿಂದ ಪ್ರೇಯಸಿಯ ಶಿರಚ್ಛೇದನ

    ಹುಚ್ಚು ಪ್ರಿಯತಮನಿಂದ ಪ್ರೇಯಸಿಯ ಶಿರಚ್ಛೇದನ

    ಭುವನೇಶ್ವರ: ಪ್ರಿಯತಮನೇ ಪ್ರೇಯಸಿಯ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಸಸ್ಮಿತಾ ಬಿಸ್ವಾಲ್ ಪ್ರಿಯತಮನಿಂದಲೇ ಕೊಲೆಯಾದ ಯುವತಿ. ಯುಧಿಸ್ಠಿರ್ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಲೆ ಇಲ್ಲದ ದೇಹವೊಂದು ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ವಿಭಾಗದಲ್ಲಿ ಪತ್ತೆಯಾಗಿತ್ತು. ತನಿಖೆಯ ವೇಳೆ ಮೃತ ಯುವತಿಯನ್ನು ಪುರಿ ಜಿಲ್ಲೆಯ ಸತ್ಯಾಬಾಡಿ ಪ್ರದೇಶದವಳು ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೇ ಶೀಘ್ರದಲ್ಲಿಯೇ ಆಕೆಯ ಮದುವೆ ನಿಶ್ಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಡಿಸೆಂಬರ್ 13 ರಂದು ಸಸ್ಮಿತಾ ಬಿಸ್ವಾಲ್ ನಾಪತ್ತೆಯಾಗಿದ್ದು, ಆಕೆಯ ಕುಟುಂಬದವರು ಪೊಲೀಸರಿಗೆ ನಾಪತ್ತೆಯ ದೂರು ನೀಡಿದ್ದರು. ಬಳಿಕ ತನಿಖೆ ಮಾಡುವಾಗ ಆಕೆಯ ಪ್ರಿಯತಮ ಯುಧಿಸ್ಠಿರ್ ನನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿ ಯುಧಿಸ್ಠಿರ್ ಪ್ರೇಯಸಿಯ ಮನೆ ಸಮೀಪದ ಏರಿಯಾದಲ್ಲಿ ವಾಸಿಸುತ್ತಿದ್ದು, ಇಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಒಂದು ದಿನ ಸಸ್ಮಿತಾ ಬಿಸ್ವಾಲಾಳನ್ನು ಭುವನೇಶ್ವರಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಚಂದಕದಲ್ಲಿರುವ ಮಾಲಿಪಾಡ ಅರಣ್ಯ ನೋಡಲು ಹೋಗಿದ್ದಾರೆ. ಆದರೆ ಅಲ್ಲಿ ಇದ್ದಕ್ಕಿದ್ದಂತೆ ಸಸ್ಮಿತಾ ಬಿಸ್ವಾಲ್ ತಪ್ಪಿಸಿಕೊಂಡು ಹೋಗಬಾರದು ಎಂದು ಗಂಟಲನ್ನು ಸೀಳಿ ತಲೆಯನ್ನು ಕತ್ತರಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈತುಂಬಾ ಪ್ಲಾಸ್ಟಿಕ್ ಬ್ಯಾಗ್ – ಇವರು ನಡೆದಾಡುವ ಡಸ್ಟ್‌ಬಿನ್‌!

    ಮೈತುಂಬಾ ಪ್ಲಾಸ್ಟಿಕ್ ಬ್ಯಾಗ್ – ಇವರು ನಡೆದಾಡುವ ಡಸ್ಟ್‌ಬಿನ್‌!

    ಭುವನೇಶ್ವರ: ಒಡಿಶಾದ ಮಯೂರ್ಭಂಜ್‍ನಲ್ಲಿ ಪರಿಸರದ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ವ್ಯಕ್ತಿಯೊಬ್ಬರು ನಡೆದಾಡುವ ಡಸ್ಟ್‌ಬಿನ್‌ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

    ಮಯೂರ್ಭಂಜ್‍ನ ಬರಿಪಾಡ ಗ್ರಾಮದ ನಿವಾಸಿ ಬಿಷ್ಣು ಭಗತ್ (36) ಅವರನ್ನು ಜನರು ನಡೆದಾಡುವ ಡಸ್ಟ್‌ಬಿನ್‌ ಎಂದೇ ಕರೆಯುತ್ತಿದ್ದಾರೆ. ಬಣ್ಣಬಣ್ಣದ ಪಾಲಿಥಿನ್ ಬ್ಯಾಗ್‍ಗಳನ್ನು ಬಟ್ಟೆಗೆ ಅಂಟಿಸಿಕೊಂಡು ಕಸದಬುಟ್ಟಿ ರೀತಿ ದಿನನಿತ್ಯ ತಮ್ಮ ಕೆಲಸಕ್ಕೆ ಹೋಗುತ್ತಿರುವ ಕಾರಣ ಜನರು ಪ್ರೀತಿಯಿಂದ ಈ ಹೆಸರನ್ನು ಇಟ್ಟಿದ್ದಾರೆ.

    ಪ್ಲಾಸ್ಟಿಕ್‍ನಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಆದರಿಂದ `ಪಾಲಿಥಿನ್ ಬ್ಯಾಗ್‍ಗಳನ್ನು ಬಳಸಬೇಡಿ, ಪರಿಸರವನ್ನು ಉಳಿಸಿ’ ಎಂದು ನಿತ್ಯವು ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪರಿಸರ ಮಾಲಿನ್ಯದ ಕುರಿತು ವಿಷ್ಣು ಭಗತ್ ಜಾಗ್ರತಿ ಮೂಡಿಸುತ್ತಿದ್ದಾರೆ.

    ಯಾಕೆ ಹೀಗೆ ವಿಚಿತ್ರವಾಗಿ ಇರ್ತೀರಾ ಎಂದು ಬಿಷ್ಣು ಅವರನ್ನು ಕೇಳಿದರೆ, ನನ್ನನ್ನು ನೋಡಿ ಬಹಳಷ್ಟು ಜನ ಇವನೊಬ್ಬ ಹುಚ್ಚ, ಮೈತುಂಬಾ ಪ್ಲಾಸ್ಟಿಕ್ ಅಂಟಿಸಿಕೊಂಡು ವಿಚಿತ್ರವಾಗಿ ಇರುತ್ತಾನೆ ಅಂತಾ ನಗುತ್ತಾರೆ. ಬರೀ ಒಬ್ಬ ಮನುಷ್ಯ ಹೀಗೆ ಇದ್ದರೆ ಜನಕ್ಕೆ ನೋಡಲು ಆಗೋಲ್ಲ ಆದ್ರೆ ನಿತ್ಯವು ಮನುಷ್ಯ ಪ್ಲಾಸ್ಟಿಕ್ ಬಳಕೆಯಿಂದ ಪರಿಸರವನ್ನು ಮಾಲಿನ್ಯ ಮಾಡುತ್ತಾನೆ. ಅದರಿಂದ ಭೂಮಿ ಇನ್ನ್ಯಾವ ರೀತಿ ಕಾಣಿಸಬಹುದು ಎಂದು ಯೋಚಿಸಿ ಎಂದು ಮರು ಪ್ರಶ್ನೆ ಎಸೆಯುತ್ತಾರೆ.

    ಬಿಷ್ಣು ಅವರನ್ನು ನೋಡಿ ಜನರು ಅವನೊಬ್ಬ ಮೂರ್ಖ, ಮಾಡಲು ಬೇರೇನು ಕೆಲಸವಿಲ್ಲ ಎಂದು ಮಾತಾಡುತ್ತಾರೆ. ಆದ್ರೆ ಬಿಷ್ಣು ಅವರು ಪರಿಸರದ ಮೇಲಿಟ್ಟಿರುವ ಪ್ರೀತಿ ಹಾಗೂ ಅವರು ಮಾಡುತ್ತಿರುವ ಕೆಲಸವನ್ನು ಎಲ್ಲರು ಮೆಚ್ಚಲೇಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಎಮ್ಮೆಯನ್ನು ತಪ್ಪಿಸಲು ಹೋಗಿ ಸೇತುವೆಯಿಂದ ಬಸ್ ಪಲ್ಟಿ – 12 ಮಂದಿ ಸಾವು

    ಎಮ್ಮೆಯನ್ನು ತಪ್ಪಿಸಲು ಹೋಗಿ ಸೇತುವೆಯಿಂದ ಬಸ್ ಪಲ್ಟಿ – 12 ಮಂದಿ ಸಾವು

    ಭುವನೇಶ್ವರ: ರಸ್ತೆಗೆ ಅಡ್ಡ ಬಂದ ಎಮ್ಮೆಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಬಸ್ ಪಲ್ಟಿಯಾಗಿರುವ ಘಟನೆ ಒಡಿಶಾ ರಾಜ್ಯದ ಜಗತ್‍ಪುರದ ಮಹಾನದಿ ಸೇತುವೆ ಬಳಿ ಮಂಗಳವಾರ ನಡೆದಿದೆ.

    ಅಪಘಾತಕ್ಕಿಡಾದ ಬಸ್ಸಿನಲ್ಲಿ 30 ಮಂದಿ ಪ್ರಯಾಣಿಕರಿದ್ದರು. ಮಹಾನದಿ ಸೇತುವೆ ಮೇಲೆ ಬಸ್ ಚಲಿಸುತ್ತಿದ್ದ ವೇಳೆ ರಸ್ತೆಗೆ ಎಮ್ಮೆಯೊಂದು ಅಡ್ಡ ಬಂದಿದೆ. ಎಮ್ಮೆಯನ್ನು ತಪ್ಪಿಸಲು ಹೋಗಿ ಬಸ್ ಚಾಲಕರ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಪಲ್ಟಿಯಾಗಿ ಕೆಳಕ್ಕುರುಳಿದೆ. ಬಸ್ ಪಲ್ಟಿಯಾದ ಪರಿಣಾಮ ಸುಮಾರು 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ನೀಡುಲಾಗುತ್ತದೆ. ಈ ಅವಘಡದಿಂದ ಬಹಳ ಬೇಸರವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದವರು ಆಗಮಿಸಿದ್ದು, ಜಿಲ್ಲಾಡಳಿತ ಅಧಿಕಾರಿಗಳು ಸೇರಿ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ರಕ್ಷಣಾ ಕಾರ್ಯಚರಣೆಯು ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಟಿಎಂ ಒಳಗೆ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಎಟಿಎಂ ಒಳಗೆ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಭುವನೇಶ್ವರ: ಇಬ್ಬರು ಕಾಮುಕರು ಎಟಿಎಂ ಒಳಗೆ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಕಟಕ್ ನಲ್ಲಿ ನಡೆದಿದೆ.

    ಕಟಕ್ ನಗರದ ಪಿಲ್‍ಗ್ರೀಮ್ ರಸ್ತೆಯ ಎಟಿಎಂ ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಎಟಿಎಂ ಕೌಂಟರ್ ಒಳಗೆ ಆರೋಪಿಗಳಿಬ್ಬರು ಅಪಹರಿಸಿ ಬಳಿಕ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಬಳಿಕ ಹೊರಗೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ನೋಡಿ ತಕ್ಷಣ ಮಾಲ್ಗೋಡೌನ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದು, ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸಮೀಪದ ಎಸ್‍ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸಂತ್ರಸ್ತೆ ಹೇಳಿಕೆಯ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಎಟಿಎಂನ ಭದ್ರತಾ ಸಿಬ್ಬಂದಿ ಮತ್ತು ಆರೋಪಿಗಳ ಸ್ನೇಹಿತರಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸ್ನೇಹಿತರ ಜೊತೆ ಸೇರಿ 2-3 ವರ್ಷದಿಂದ ಪ್ರೀತಿ ಮಾಡಿದ್ದ ಪ್ರೇಯಸಿ ಮೇಲೆಯೇ ಹೀನ ಕೃತ್ಯ!

    ಸ್ನೇಹಿತರ ಜೊತೆ ಸೇರಿ 2-3 ವರ್ಷದಿಂದ ಪ್ರೀತಿ ಮಾಡಿದ್ದ ಪ್ರೇಯಸಿ ಮೇಲೆಯೇ ಹೀನ ಕೃತ್ಯ!

    ಭುವನೇಶ್ವರ: ಯುವಕನೊಬ್ಬ ತನ್ನ ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಇಬ್ಬರು ಸ್ನೇಹಿತರ ಜೊತೆ ಸೇರಿ ಪ್ರೇಯಸಿಯ ಮೇಲೆಯೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಈ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ಪಲ್ಲಹರಾದಲ್ಲಿ ನಡೆದಿದೆ. ಆರೋಪಿಯನ್ನು ಕಾಲಿಯಾ ಮಹಾಕುದ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಪೋಷಕರು ಈ ಬಗ್ಗೆ ದೂರು ನೀಡಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಕಾಲಿಯಾ ಮರಗೆಲಸ ಮಾಡುತ್ತಿದ್ದು, ಈತ ಕಳೆದ ಎರಡು-ಮೂರು ವರ್ಷಗಳಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಹುಡುಗಿ ಆರೋಪಿ ಕಾಲಿಯಾನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ. ಬಳಿಕ ಇದರಿಂದ ಕೋಪಗೊಂಡು ಆರೋಪಿ ತನ್ನ ಸ್ನೇಹಿತರಾದ ಹೇಮಂತ್ ಮಹಾಕುದ್ ಮತ್ತು ದುಶಾಸನ್ ಸೀತಾರಿ ಜೊತೆ ಸೇರಿ ಅಕ್ಟೋಬರ್ 30 ರಂದು ರಾತ್ರಿ ಸುಮಾರು 11 ಗಂಟೆಗೆ ಬಲವಂತದಿಂದ ಹುಡುಗಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ನಂತರ ಸಂತ್ರಸ್ತೆಯನ್ನು ಬೆಟ್ಟದ ಬಳಿ ಕೂಡಿ ಹಾಕಿ ಮೂವರು ಸಾಮುಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

    ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಿದ್ದನ್ನು ಕಂಡು ಆ ಸ್ಥಳದಲ್ಲಿಂದ ಮೂವರು ಪರಾರಿಯಾಗಿದ್ದಾರೆ. ಬಳಿಕ ಸಂತ್ರಸ್ತೆ ಹೇಗೋ ತಪ್ಪಿಸಿಕೊಂಡು ಮನೆಗೆ ಹೋಗಿ ನಡೆದ ಘಟನೆಯ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಬಳಿಕ ಪೋಷಕರು ಪಲ್ಲಹರಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

    ಪೊಲೀಸರು ದೂರು ದಾಖಲಿಸಿಕೊಂಡು ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಕಾಲಿಯಾನನ್ನು ಬಂಧಿಸಿದ್ದು, ಆರೋಪಿ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾವು ನೋಡುವ ಆಸೆಯಿಂದ ಅತ್ಯಾಚಾರಕ್ಕೊಳಗಾದ 11ರ ಅಪ್ರಾಪ್ತೆ

    ಹಾವು ನೋಡುವ ಆಸೆಯಿಂದ ಅತ್ಯಾಚಾರಕ್ಕೊಳಗಾದ 11ರ ಅಪ್ರಾಪ್ತೆ

    ಭುವನೇಶ್ವರ: ಯುವಕನೊಬ್ಬ 11 ವರ್ಷದ ಅಪ್ರಾಪ್ತ ಹುಡುಗಿಯನ್ನ ಅತ್ಯಾಚಾರ ಮಾಡಿರುವ ಘಟನೆ ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಟ್ಟಮಂಡೈ ಬ್ಲಾಕ್ ನ ರಾಜ್ ನಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 26 ವರ್ಷದ ಸೋಮನಾಥ ನಾಯಕ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಸಂತ್ರಸ್ತ ಹುಡುಗಿ ಫಿರಿಕಿದಾಂಡಿ ಗ್ರಾಮದಿಂದ ಸಮೀಪದ ಯೂತ್ಸ್ ಕ್ಲಬ್ ನಲ್ಲಿ ಟ್ಯೂಷನ್ ತರಗತಿಗೆಂದು ಹೋಗಿದ್ದಳು. ಆದರೆ ಅಂದು ತರಗತಿ ಕ್ಯಾನ್ಸಲ್ ಆಗಿದೆ. ಇದರಿಂದ ಇತರ ವಿದ್ಯಾರ್ಥಿಗಳು ಈ ಸ್ಥಳಕ್ಕೆ ಬಂದಿರಲಿಲ್ಲ. ಈ ವೇಳೆ ಸಂತ್ರಸ್ತೆ ಒಬ್ಬಳೆ ಇದ್ದುದ್ದನ್ನು ಗಮನಿಸಿದ ಆರೋಪಿ ನಾಯಕ್ ಸಂತ್ರಸ್ತೆಯನ್ನು ಕ್ಲಬ್ ನ ಹಿಂಬದಿಯಲ್ಲಿ ಹಾವು ತೋರಿಸುತ್ತೇನೆ ಎಂದು ನೆಪ ಹೇಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆ ಮನೆಗೆ ಬಂದು ನಡೆದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ರಾಜ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತೆಯ ಪೋಷಕರು ದೂರು ನೀಡಿದ ಬಳಿಕ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಸಂತ್ರಸ್ತೆ ಮತ್ತು ಆರೋಪಿ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಹಿಂದಿಕ್ಕಿದ ಡೀಸೆಲ್!

    ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಹಿಂದಿಕ್ಕಿದ ಡೀಸೆಲ್!

    ಭುವನೇಶ್ವರ: ದೇಶದಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನೂ ಮೀರಿಸಿದ್ದು, ಒಡಿಶಾದ ಭುವನೇಶ್ವರದಲ್ಲಿ ಭಾನುವಾರ ಡೀಸೆಲ್ ಬೆಲೆ ಪ್ರತಿ ಲೀಟರ್ 80.69 ರೂ.ಗೆ ಆಗಿದ್ದರೆ ಪೆಟ್ರೋಲ್ ಬೆಲೆ 80.57 ರೂ.ಗೆ ಮಾರಾಟ ಮಾಡಲಾಗಿದೆ.

    ಕಳೆದ ಎರಡು ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೂ ಡೀಸೆಲ್ 80.69 ರೂ. ಗೆ ಮಾರಾಟವಾಗಿದ್ದು, ಪೆಟ್ರೋಲ್ ಗಿಂತ 12 ಪೈಸೆ ಹೆಚ್ಚಳವಾಗಿತ್ತು.

    ಒಡಿಶಾದಲ್ಲಿ ಜಾಸ್ತಿ ಯಾಕೆ?
    ಕೆಲ ತಿಂಗಳುಗಳಿಂದ ಸತತವಾಗಿ ತೈಲ ಬೆಲೆಯಲ್ಲಿ ಏರಿಕೆ ಆಗಿದ್ದು, ಡೀಸೆಲ್‍ನ ಮೂಲ ಬೆಲೆಯಲ್ಲಿ 5 ರೂ. ಹಾಗೂ ಪೆಟ್ರೋಲ್ ಬೆಲೆಯಲ್ಲಿ 8 ರೂ. ಹೆಚ್ಚಳವಾಗಿದೆ. ಪ್ರಮುಖವಾಗಿ ರಾಜ್ಯಗಳು ಬೇರೆ ಬೇರೆ ಪ್ರಮಾಣದಲ್ಲಿ ವ್ಯಾಟ್ ಅನ್ನು ತೈಲದ ಮೇಲೆ ವಿಧಿಸುತ್ತಿದೆ.

    ಒಡಿಶಾ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇ.26 ರಷ್ಟು ವ್ಯಾಟ್ ವಿಧಿಸುತ್ತಿದೆ. ಇದುವೇ ಡೀಸೆಲ್ ಬೆಲೆ ಪೆಟ್ರೋಲ್‍ಗಿಂತಲೂ ಹೆಚ್ಚಾಗಲು ಕಾರಣವಾಗಿದೆ ಎಂದು ಅಲ್ಲಿನ ಪೆಟ್ರೋಲಿಯಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಂಜಯ್ ಲಾತ್ ತಿಳಿಸಿದ್ದಾರೆ. ಅಲ್ಲದೇ ಒಡಿಶಾ ಸಾರ್ವಜನಿಕರು ಅಧಿಕ ಪ್ರಮಾಣದ ಬೆಲೆಯ ಕಾರಣ ಡೀಸೆಲ್ ಖರೀದಿಯನ್ನೇ ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇತ್ತ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಟ್ ಕಡಿತಗೊಳಿಸುವಂತೆ ರಾಜ್ಯ ಸರ್ಕಾರವನ್ನು ಮತ್ತೊಮ್ಮ ಮನವಿ ಮಾಡಿದ್ದಾರೆ. ಅಲ್ಲದೇ ಕೇಂದ್ರ ಕರೆಗೆ ಸ್ಪಂಧಿಸಿರುವ 13 ರಾಜ್ಯಗಳು ಈಗಾಗಲೇ ವ್ಯಾಟ್ ಕಡಿತಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv