Tag: ಭುವನೇಶ್ವರ

  • ಅಪ್ಪಿಕೊಂಡು 16ರ ಅಪ್ರಾಪ್ತ ಪ್ರೇಮಿಗಳು ನೇಣಿಗೆ ಶರಣು

    ಅಪ್ಪಿಕೊಂಡು 16ರ ಅಪ್ರಾಪ್ತ ಪ್ರೇಮಿಗಳು ನೇಣಿಗೆ ಶರಣು

    ಭುವನೇಶ್ವರ: ಯುವ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಒಡಿಶಾದ ನಬರಂಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ನಬರಾಂಗ್ಪುರ್ ಜಿಲ್ಲೆಯ ಚತಗುಡಾ ಗ್ರಾಮದ ಕೊಳದ ಸಮೀಪ ನಡೆದಿದೆ. ಮೃತರಿಬ್ಬರು 16 ವಯಸ್ಸಿನರಾಗಿದ್ದಾರೆ ಎಂದು ಗುರುತಿಸಲಾಗಿದೆ. ತಮ್ಮ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

    ಇಂದು ಮುಂಜಾನೆ ಕೆಲವು ಸ್ಥಳೀಯರು ಕೊಳದ ಸಮೀಪದ ಹೋದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಜಿಲ್ಲೆಯ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಪ್ರೇಮಿಗಳಿಬ್ಬರು ಬೇರೆ ಜಾತಿಯಾಗಿದ್ದರಿಂದ ಇವರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಮೃತ ಹುಡುಗ 8ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದು, ನಂತರ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದಾನೆ. ಇತ್ತ ಮೃತ ಹುಡುಗಿ ಕೂಡ 10ನೇ ತರಗತಿವರೆಗೂ ಓದಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಪ್ರೀತಿಗೆ ವಿರೋಧ: ಒಂದೇ ಸೀರೆಯಲ್ಲಿ ನೇಣಿಗೆ ಶರಣಾದ ಅಣ್ಣ-ತಂಗಿ

    ಪ್ರೀತಿಗೆ ವಿರೋಧ: ಒಂದೇ ಸೀರೆಯಲ್ಲಿ ನೇಣಿಗೆ ಶರಣಾದ ಅಣ್ಣ-ತಂಗಿ

    ಭುನವೇಶ್ವರ: ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹಗಳು ಪತ್ತೆಯಾಗಿವೆ.

    ಈ ಘಟನೆ ಡಬುಗಾನ್ ಪಂಚಾಯತ್ ಅಡಿಯಲ್ಲಿ ಬರುವ ಟ್ಯಾಂಗಿನಿ ಗ್ರಾಮದ ಬೆಟ್ಟದ ಮೇಲೆ ನಡೆದಿದೆ. ಸುನಾಧರ್ ಜಾನಿ (18) ಮತ್ತು ಕುಮಾರಿ ಜಾನಿ (19) ಆತ್ಮಹತ್ಯೆಗೆ ಶರಣಾಗಿರುವ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಇವರಿಬ್ಬರು ಭಾನುವಾರ ರಾತ್ರಿ ಮನೆಯವರು ನಿದ್ದೆ ಮಾಡುತ್ತಿದ್ದ ವೇಳೆ ಮನೆ ಬಿಟ್ಟು ಬಂದಿದ್ದಾರೆ. ಬಳಿಕ ಊರಿನ ಹೊರಗೆ ಬೆಟ್ಟದ ಮೇಲೆ ಹೋಗಿ ಒಂದು ಸೀರೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮುಂಜಾನೆ ಗ್ರಾಮಸ್ಥರು ಬೆಟ್ಟದ ಮೇಲೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ನಂತರ ತಕ್ಷಣ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಅವರು ಬಂದು ಇಬ್ಬರನ್ನು ಗುರುತಿಸಿದ್ದಾರೆ. ಇಬ್ಬರು ಕುಟುಂಬದವರು ಡಬುಗಾನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸುನಾಧರ್ ಮತ್ತು ಕುಮಾರಿ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರು ಸಂಬಂಧದಲ್ಲಿ ಅಣ್ಣ-ತಂಗಿಯಾಗಿದ್ದು, ಇವರ ಪ್ರೀತಿಯ ಬಗ್ಗೆ ಮನೆಯವರಿಗೆ ತಿಳಿದಿದೆ. ಮನೆಯಲ್ಲಿ ಪೋಷಕರು ಇವರ ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಇವರಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

    ಸ್ಥಳಕ್ಕೆ ಎಸ್‍ಐ ರಾಂಕನಿಧಿ ಸಾಹು ಮತ್ತು ತಂಡ ಧಾವಿಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಬಳಿಕ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡ್ರಾಪ್ ಕೊಡೋದಾಗಿ ಹೇಳಿ ಕಾಡಿಗೆ ಕರ್ಕೊಂಡು ಹೋಗಿ ಶಿಕ್ಷಕನಿಂದ ರೇಪ್

    ಡ್ರಾಪ್ ಕೊಡೋದಾಗಿ ಹೇಳಿ ಕಾಡಿಗೆ ಕರ್ಕೊಂಡು ಹೋಗಿ ಶಿಕ್ಷಕನಿಂದ ರೇಪ್

    -ಸಾಮಾಜಿಕ ಜಾಲತಾಣಕ್ಕೆ ಫೋಟೋ ಅಪ್ಲೋಡ್

    ಭುವನೇಶ್ವರ: ಶಾಲಾ ಶಿಕ್ಷಕನೋರ್ವ ಡ್ರಾಪ್ ಕೊಡುವ ನೆಪದಲ್ಲಿ ಕಾಲೇಜು ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ಮುರಿಬಾಹಲ್ ಪ್ರದೇಶದಲ್ಲಿ ನಡೆದಿದೆ.

    ಈ ಕುರಿತು ಸಂತ್ರಸ್ತೆಯ ಕುಟುಂಬ ಸದಸ್ಯರು ಮುರಿಬಾಹಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿದ್ದಲ್ಲದೆ ಅತ್ಯಾಚಾರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡಿದ್ದಾನೆ. ಆರೋಪಿಯನ್ನು ಗಾನೋ ಸೆಲಾಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ಫೆಬ್ರವರಿ 6 ರಂದು ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಳು. ಆಗ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಗಾನೋ ಸೆಲಾಮಾ ಬಂದು ತಾನು ಕಾಲೇಜಿಗೆ ಡ್ರಾಪ್ ಮಾಡುತ್ತೇನೆಂದು ಹೇಳಿ ಕೂರಿಸಿಕೊಂಡಿದ್ದಾನೆ. ನಂತರ ಕಾಲೇಜಿಗೆ ಡ್ರಾಪ್ ಮಾಡುವ ಬದಲು ಆಕೆಯನ್ನು ಕಾಡಿನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಅತ್ಯಾಚಾರದ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಜೊತೆಗೆ ಈ ಘಟನೆಯ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸ್ವಲ್ಪ ದಿನದ ನಂತರ ಆರೋಪಿ ಅತ್ಯಾಚಾರದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾನೆ. ಆ ಫೋಟೋ ವೈರಲ್ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಕುಟುಂಬಸ್ಥರು ಈ ಕುರಿತು ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇನೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ ಸೀಟಿನಲ್ಲಿ ಬರೋಬ್ಬರಿ 10.90 ಕೋಟಿ ಹಣ ಪತ್ತೆ!

    ಕಾರ್ ಸೀಟಿನಲ್ಲಿ ಬರೋಬ್ಬರಿ 10.90 ಕೋಟಿ ಹಣ ಪತ್ತೆ!

    ಭುವನೇಶ್ವರ: ಒಡಿಶಾದ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲೂ) ಛತ್ತೀಸಘಡದ ಕಾರಿನಲ್ಲಿ ಬರೋಬ್ಬರಿ 10.90 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ.

    ಕಾರು ಕಟಕ್ ನಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ತೆರಳುತ್ತಿತ್ತು. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಬಾನ್ವಾರಿ (40), ಪ್ರಹ್ಲಾದ್ (30), ಮೊಹಮ್ಮದ್ ಇಬ್ರಾಹಿಂ (45) ಮತ್ತು ಅವರ ಪತ್ನಿ ನಜ್ಮಾ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ನಾಲ್ಕು ಜನರು ಭಾರೀ ಪ್ರಮಾಣದ ಹಣದೊಂದಿಗೆ ಕಟಕ್ ನಿಂದ ಕಾರಿನಲ್ಲಿ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಇಒಡಬ್ಲ್ಯೂ ಛತ್ತೀಸಘಡ ಪೊಲೀಸರಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ವಾಹನ ತಪಾಸಣೆಗೆಂದು ಮಹಾಸಮುಂದ ಜಿಲ್ಲೆಯಲ್ಲಿ ಟಯೋಟಾ ಕಾರ್ ನಿಂತಿತ್ತು. ಈ ವೇಳೆ ಪೊಲೀಸರು ತಪಾಸಣೆ ಮಾಡುವ ವೇಳೆ ಕಾರಿನ ಹಿಂಭಾಗದ ಸೀಟಿನ ಒಳಗಡೆ ರೂ. 2000, 500, ರೂ. 200 ಮತ್ತು ರೂ 100 ಮೌಲ್ಯದ ನೋಟುಗಳು ಪತ್ತೆಯಾಗಿದ್ದು, ಒಟ್ಟು 10.90 ಕೋಟಿ ರೂ. ಪತ್ತೆಯಾಗಿದೆ ಎಂದು ಡಿಜಿಪಿ ಆರ್ಪಿ ಶರ್ಮಾ ಅವರು ತಿಳಿಸಿದ್ದಾರೆ.

    ಎಲ್ಲರೂ ಆಗ್ರಾ ನಿವಾಸಿಗಳಿದ್ದು, ಉತ್ತರ ಪ್ರದೇಶದ ಆರ್ ಟಿಓ ನೋಂದಣಿ ಹೊಂದಿರುವ ಕಾರಿನಲ್ಲಿ ಫೆಬ್ರವರಿ 17 ರಂದು ಕಟಕ್ ನಿಂದ ಹೊರಟಿದ್ದರು. ಸದ್ಯಕ್ಕೆ ನಾಲ್ವರನ್ನು ವಶಕ್ಕೆ ಪಡೆದು, ಪತ್ತೆಯಾದ ಹಣ ಯಾವ ವ್ಯಕ್ತಿ ನೀಡಿದ್ದು, ಯಾವ ಉದ್ದೇಶಕ್ಕಾಗಿ ಹಣ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ವಿಚಾರಣೆ ಮಾಡಲಾಗುತ್ತಿದೆ. ಕಾರಿನಲ್ಲಿ ಸಿಕ್ಕ 10.90 ಕೋಟಿ ರೂ. ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವಾಹಿತ ಮಹಿಳೆ, ಯುವಕನ ಮೃತದೇಹ ಪತ್ತೆ – ಪತಿ ಪೊಲೀಸರ ವಶಕ್ಕೆ

    ವಿವಾಹಿತ ಮಹಿಳೆ, ಯುವಕನ ಮೃತದೇಹ ಪತ್ತೆ – ಪತಿ ಪೊಲೀಸರ ವಶಕ್ಕೆ

    ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ವಿವಾಹಿತ ಮಹಿಳೆ ಮತ್ತು ಯುವಕನ ಮೃತದೇಹ ಪತ್ತೆಯಾಗಿದ್ದು, ಅನೈತಿಕ ಸಂಬಂಧಕ್ಕೆ ಕೊಲೆಯಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಘಟನೆ ರಾಣಿಪಟ್ನಾ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದ್ದು, ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಮಹಿಳೆ ಮತ್ತು ಯುವಕನ ಮೃತದೇಹ ಕಂಡು ಬಂದಿದೆ. ತಕ್ಷಣ ಈ ಬಗ್ಗೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಮೃತ ಮಹಿಳಾ ಪತಿ ಕೈಲಾಶ್ ಸಾಹುನನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

    ಈ ಘಟನೆಯ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೈಲಾಶ್ ಇಬ್ಬರನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಈ ಕುರಿತು ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗುವನ್ನು ಮಡಿಲಲ್ಲೇ ಮಲಗಿಸಿಕೊಂಡು ವಿಷ ಕುಡಿದ ತಾಯಿ..!

    ಮಗುವನ್ನು ಮಡಿಲಲ್ಲೇ ಮಲಗಿಸಿಕೊಂಡು ವಿಷ ಕುಡಿದ ತಾಯಿ..!

    – ಪತಿ ಸಾವಿನ ಬೆನ್ನಲ್ಲೆ ಪತ್ನಿ ಆತ್ಮಹತ್ಯೆ
    – ಒಂದೂವರೆ ವರ್ಷದ ಮಗು ಅನಾಥ

    ಭುವನೇಶ್ವರ: ಪತಿಯ ಸಾವಿನ ನೋವಿನಿಂದ ಪತ್ನಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಒಡಿಶಾದ ಖೋರ್ದಾ ಜಿಲ್ಲೆಯಲ್ಲಿ ನಡೆದಿದೆ.

    ಖೋರ್ದಾ ಜಿಲ್ಲೆಯ ನಾಚುಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬದಾಪದಾರ್ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರೆಬತಿ (22) ಎಂದು ಗುರುತಿಸಲಾಗಿದೆ. ಬದಾಪದಾರ್ ಗ್ರಾಮದ ನಿವಾಸಿ ಪತಿ ಮಹಾದೇವ್ ಭೋಲಾ (25) ಸಾವಿನ ಸುದ್ದಿ ಕೇಳಿದ ನಂತರ ಆಘಾತದಿಂದ ರೆಬತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ಮಹಾದೇವ್ ಮೂರು ವರ್ಷಗಳ ಹಿಂದೆ ರೆಬತಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷ ವಯಸ್ಸಿನ ಮಗುವಿದೆ. ಮಹಾದೇವ್ ಆಂಧ್ರ ಪ್ರದೇಶದ ಖಾಸಗಿ ಸಂಸ್ಥೆಯನ್ನು ಪೋಕ್ಲೈನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಫೆಬ್ರವರಿ 7 ರಂದು ಆಂಧ್ರ ಪ್ರದೇಶದಲ್ಲಿ ಮಹಾದೇವ್ ವಿಷಪೂರಿತ ಹಾವು ಕಡಿದು ಮೃತಪಟ್ಟಿದ್ದರು. ಬಳಿಕ ಕುಟುಂಬದ ಸದಸ್ಯರು ಒಡಿಶಾಗೆ ಮೃತದೇಹವನ್ನು ತಂದು ಶನಿವಾರ ಸಂಜೆ ಅಂತಿಮ ಕ್ರಿಯಾವಿಧಾನವನ್ನು ನೆರವೇರಿಸಿದ್ದರು.

    ಇತ್ತ ಪತಿ ಮಹಾದೇವ್ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಪತ್ನಿ ಶನಿವಾರ ರಾತ್ರಿಯೇ ತನ್ನ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅರಿಶಿಣದೊಂದಿಗೆ ವಿಷವನ್ನು ಬೆರೆಸಿಕೊಂಡು ಅದನ್ನು ಸೇವಿಸಿದ್ದಾಳೆ. ಮರುದಿನ ಬೆಳಗ್ಗೆ ಭಾನುವಾರ ರೆಬತಿ ಎದ್ದೇಳದ ಕಾರಣ ಕುಟುಂಬದವರು ತಕ್ಷಣವೇ ಟ್ಯಾಂಗಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಘಟನೆಯ ಕುರಿತು ಟ್ಯಾಂಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವ ಗಾಯಕಿ ಆತ್ಮಹತ್ಯೆ

    ಯುವ ಗಾಯಕಿ ಆತ್ಮಹತ್ಯೆ

    ಭುವನೇಶ್ವರ: 22 ವರ್ಷದ ಗಾಯಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದ್ದು, ಬ್ರೇಕಪ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತ ಗಾಯಕಿಯನ್ನು ಪ್ರಭಾತಿ ಜೆನಾ ಎಂದು ಗುರುತಿಸಲಾಗಿದ್ದು, ಜಿಲ್ಲೆಯ ಧಮನಗರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪದ್ಮಾಪುಖರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಪ್ರಭಾತಿ ವಿವಿಧ ಶೋಗಳಲ್ಲಿ ಹಾಡು ಹಾಡುತ್ತಿದ್ದು, ‘ಮೆಲೋಡಿ ಕ್ವೀನ್’ ಎಂದು ಖ್ಯಾತಿ ಪಡೆದಿದ್ದರು. ಆದರೆ ತಮ್ಮ ಮನೆಯಲ್ಲಿ ದುಪಟ್ಟನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಮಾಹಿತಿ ತಿಳಿದು ದೇಹಗರ್ ಪೊಲೀಸರು ಮನೆಗೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಭದ್ರಾಕ್ ಜಿಲ್ಲೆಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಕಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರಭಾತಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತದೇಹದ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಪೋಷಕರನ್ನು ಉದ್ದೇಶಿಸಿ ಬರೆದಿದ್ದು. ಆದರೆ ತನ್ನ ಸಾವಿಗೆ ಯಾರು ಜವಾಬ್ದಾರದಲ್ಲ ಎಂದು ಬರೆದಿದ್ದಾರೆ. ಜೊತೆಗೆ “ನಾನು ನನ್ನ ಸಹೋದರಿಯ ಮದುವೆ ನೋಡಲು ಬಯಸಿದ್ದೆ. ಅದು ಸಾಧ್ಯವಾಗಲಿಲ್ಲ. ನಾನು ಮತ್ತೊಮ್ಮೆ ಮರುಜನ್ಮ ಪಡೆಯುವುದಾದರೆ, ನಾನು ನಿಮ್ಮ ಮಗಳಾಗಿ ಜನಿಸಲು ಬಯಸುತ್ತೇನೆ. ನನಗಾಗಿ ಯಾರು ಅಳುವುದು ಬೇಡವೆಂದು ಮನವಿ ಮಾಡಿದ್ದಾರೆ.

    ಗುರುವಾರ ರಾತ್ರಿ ಜಜ್ಪುರ್ ಜಿಲ್ಲೆಯ ಪಣಿಕೋಯಿಲಿ ಪ್ರದೇಶದಲ್ಲಿ ಸಮಾರಂಭಕ್ಕೆಂದು ಪ್ರಭಾತಿ ಹೋಗಿದ್ದಳು. ಅಲ್ಲಿಂದ ಮರುದಿನ ಬೆಳಗ್ಗೆ ಮನೆಗೆ ಹಿಂದಿರುಗಿದ್ದು, ರಾತ್ರಿ ಊಟ ಮಾಡಿ ತಮ್ಮ ರೂಮಿಗೆ ಹೋಗಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

    ತನಿಖೆ ವೇಳೆ ಮೃತ ಪ್ರಭಾತಿ ಫೋನಿಗೆ ಅಪರಿಚಿತ ಯುವಕನೊಬ್ಬ ಅನೇಕ ಬಾರಿ ಕರೆ ಮಾಡಿದ್ದಾನೆ. ಇವರು ಕೂಡ ಆತನ ಫೋನ್ ರಿಸೀವ್ ಮಾಡಿ ಮಾತನಾಡಿದ್ದಾರೆ. ಸದ್ಯಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಧಮನಗರ್ ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ರಾಪ್ತನಿಂದ ಸಹಪಾಠಿ ಗರ್ಭಿಣಿ

    ಅಪ್ರಾಪ್ತನಿಂದ ಸಹಪಾಠಿ ಗರ್ಭಿಣಿ

    ಭುವನೇಶ್ವರ: ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನೇ ಗರ್ಭಿಣಿ ಮಾಡಿದ್ದು, ಈಗ ಅತ್ಯಾಚಾರ ಆರೋಪದ ಮೇರೆಗೆ ಬಾಲಕನನ್ನು ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ.

    ಈ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ಈ ಬಗ್ಗೆ ಬುಧವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 6ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿನಿಯನ್ನು ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ 6 ತಿಂಗಳ ಗರ್ಭಿಣಿ ಎಂಬುದು ಬೆಳಕಿಗೆ ಬಂದಿದೆ. ಬಳಿಕ ವಿಚಾರಿಸಿದಾಗ ತನ್ನ ತರಗತಿಯ ಸಹಪಾಠಿಯೇ ಅತ್ಯಾಚಾರ ಮಾಡಿರುವ ವಿಷಯವನ್ನು ವಿದ್ಯಾರ್ಥಿನಿ ಬಹಿರಂಗಪಡಿಸಿದ್ದಳು.

    ಸದ್ಯಕ್ಕೆ ಮುಖ್ಯೋಪಾಧ್ಯಾಯ ನೀಡಿದ ದೂರಿನ ಮೇರೆಗೆ ಬಾಲಕನನ್ನು ತನಿಖೆಗೆ ಒಳಪಡಿಸಿ ಬಳಿಕ ಜಿಲ್ಲೆಯ ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ. ಒಡಿಶಾದಲ್ಲಿ ಕಳೆದ ಒಂದು ತಿಂಗಳಲ್ಲಿ ಎರಡು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ಪ್ರಕರಣಗಳು ವರದಿಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಹೋದ್ಯೋಗಿಯೊಂದಿಗೆ ಲವ್, ಸೆಕ್ಸ್, ದೋಖಾ – ಶಿಕ್ಷಕ ಅರೆಸ್ಟ್

    ಸಹೋದ್ಯೋಗಿಯೊಂದಿಗೆ ಲವ್, ಸೆಕ್ಸ್, ದೋಖಾ – ಶಿಕ್ಷಕ ಅರೆಸ್ಟ್

    ಭುವನೇಶ್ವರ: ಒಡಿಶಾದ ಜಾಜ್ಪುರ್ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕನೊಬ್ಬ ತನ್ನ ಸಹೋದ್ಯೋಗಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮೋಸ ಮಾಡಿದ್ದಕ್ಕಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಬಿನೋದ್ ಬಿಹಾರಿ ಸೇಥಿ ಎಂದು ಗುರುತಿಸಲಾಗಿದೆ. ಧರ್ಮಶಾಲಾದಲ್ಲಿರುವ ಸರ್ಕಾರಿ ಸ್ವಾಮ್ಯದ ಹೈಸ್ಕೂಲ್ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದನು. ಆರೋಪಿ ಸೇಥಿ ತನ್ನ ಸಹೋದ್ಯೋಗಿಯನ್ನು ಮದುವೆಯಾಗುತ್ತೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದನು. ಬಳಿಕ ಆಕೆಯ ಜೊತೆ ದೈಹಿಕವಾಗಿ ಸಂಬಂಧ ಹೊಂದಿದ್ದನು. ದಿನಕಳೆದಂತೆ ಸಂತ್ರಸ್ತೆ ಮದುವೆಯ ಪ್ರಸ್ತಾಪವನ್ನು ಆತನ ಮುಂದೆ ಇಟ್ಟಿದ್ದಾರೆ.

    ಈ ವೇಳೆ ಆರೋಪಿ ಸೇಥಿ ಮದುವೆಯಾಗುವುದನ್ನು ತಿರಸ್ಕರಿಸಿದ್ದಾನೆ. ಇದರಿಂದ ನೊಂದ ಮಹಿಳಾ ಶಿಕ್ಷಕಿ ದೂರು ದಾಖಲಿಸಿದ್ದಾರೆ. ಆರೋಪಿ ಸೇಥಿ ವಿರುದ್ಧ ಐಪಿಸಿ ಸೆಕ್ಷನ್ 341, 323, 325, 506 ಮತ್ತು 493 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಪ್ರಧಾನ್ ಹೇಳಿದ್ದಾರೆ.

    ಸದ್ಯಕ್ಕೆ ಸಂತ್ರಸ್ತೆಗೆ ಸ್ಥಳೀಯ ಆಸ್ಪತೆಯಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮನೆಗೆ ನುಗ್ಗಿ ದಿವ್ಯಾಂಗ ಹುಡ್ಗಿಯ ಮೇಲೆ ಅತ್ಯಾಚಾರ – ಆಕ್ರೋಶಗೊಂಡು ಯುವಕನನ್ನ ಕೊಂದ್ರು!

    ಮನೆಗೆ ನುಗ್ಗಿ ದಿವ್ಯಾಂಗ ಹುಡ್ಗಿಯ ಮೇಲೆ ಅತ್ಯಾಚಾರ – ಆಕ್ರೋಶಗೊಂಡು ಯುವಕನನ್ನ ಕೊಂದ್ರು!

    ಭುವನೇಶ್ವರ: ದಿವ್ಯಾಂಗ ಹುಡುಗಿಯನ್ನು ಅತ್ಯಾಚಾರ ಮಾಡಿದ್ದ ಆರೋಪಿ ಯುವಕನನ್ನು ಸ್ಥಳೀಯರೇ ಥಳಿಸಿ ಕೊಂದಿರುವ ಘಟನೆ ಒಡಿಶಾದ ಕೆಯೊಂಝಾರ್ ನಲ್ಲಿ ನಡೆದಿದೆ.

    ಈ ಘಟನೆ ಕೆಯೊಂಝಾರ್ ಜಿಲ್ಲೆಯ ಬಮೇಬಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತನನ್ನು ಗಣೇಶ್ ಪಿಂಗೂವಾ ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ?
    ಸಂತ್ರಸ್ತೆಯ ಪೋಷಕರು ಜೀವನಕ್ಕಾಗಿ ಅರಣ್ಯದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಅದರಂತೆಯೇ ಒಂದು ದಿನ ತಮ್ಮ ಮಗಳನ್ನು ಮನೆಯಲ್ಲಿ ಬಿಟ್ಟು ಕಾಡಿಗೆ ಹೋಗಿದ್ದಾರೆ. ಈ ವೇಳೆ ಆರೋಪಿ ಗಣೇಶ್ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ತಿಳಿದುಕೊಂಡು ಮನೆಗೆ ಹೋಗಿದ್ದಾನೆ. ಬಳಿಕ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

    ಕಾಡಿನಿಂದ ತಾಯಿ ಮನೆಗೆ ಹಿಂದಿರುಗಿದಾಗ ಸಂತ್ರಸ್ತೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ತಾಯಿ ತಮ್ಮ ಸಂಬಂಧಿಕರು ಮತ್ತು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಳಿದು ಕೋಪಗೊಂಡ ಸ್ಥಳೀಯರು ಯುವಕನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಬಮೇಬಾರಿ ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡ ಯುವಕನನ್ನು ಸ್ಥಳೀಯರಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆರೋಪಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

    ಸದ್ಯಕ್ಕೆ ಬಮೇಬಾರಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಯುವಕನ ಮೇಲೆ ದಾಳಿ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv