Tag: ಭುವನೇಶ್ವರ

  • ಬೀದಿಯಲ್ಲಿ ಬಿದ್ದಿದ್ದ ಮಗು ತಂದು ಸಾಕಿದ್ದ ತಾಯಿ – 13 ವರ್ಷಕ್ಕೆ ಅದೇ ಮಗಳಿಂದ ಹೋಯ್ತು ಜೀವ!

    ಬೀದಿಯಲ್ಲಿ ಬಿದ್ದಿದ್ದ ಮಗು ತಂದು ಸಾಕಿದ್ದ ತಾಯಿ – 13 ವರ್ಷಕ್ಕೆ ಅದೇ ಮಗಳಿಂದ ಹೋಯ್ತು ಜೀವ!

    ಭುವನೇಶ್ವರ: ಒಡಿಶಾದಲ್ಲಿ(Odisha) ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದ ಮಗುವನ್ನು ತಂದು ಸಾಕಿ ಬೆಳೆಸಿದ್ದ ತಾಯಿಯನ್ನೇ ಸಾಕುಮಗಳು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ.

    ಗಜಪತಿ ಜಿಲ್ಲೆಯ ಪರಲಖೆಮುಂಡಿಯ(Paralakhemundi) ರಾಜಲಕ್ಷ್ಮೀ(54) ಕೊಲೆಯಾದ ಮಹಿಳೆ. ಮಕ್ಕಳಿಲ್ಲದ ರಾಜಲಕ್ಷ್ಮೀ(Rajalaxmi) ದಂಪತಿ 14 ವರ್ಷಗಳ ಹಿಂದೆ ಭುವನೇಶ್ವರದ ರಸ್ತೆಬದಿಯಲ್ಲಿ ಅನಾಥವಾಗಿ ಬಿದ್ದಿದ್ದ 3 ದಿನದ ಮಗು ಸಿಕ್ಕಿತ್ತು. ಆ ಮಗುವನ್ನು ಕಾನೂನು ಪ್ರಕಾರವಾಗಿಯೇ ಅವರು ದತ್ತು ಪಡೆದಿದ್ದರು. ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿ – ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ

    ಸ್ವಲ್ಪ ಸಮಯದ ನಂತರ ರಾಜಲಕ್ಷ್ಮೀ ಪತಿ ನಿಧನರಾದರು. ಅಂದಿನಿಂದ, ರಾಜಲಕ್ಷ್ಮೀ ಒಂಟಿಯಾಗಿಯೇ ಮಗಳನ್ನು ಬೆಳೆಸಿದರು. ಬಳಿಕ ಮಗಳ ವಿದ್ಯಾಭ್ಯಾಸದ ಸಲುವಾಗಿ ಪರಲಖೆಮುಂಡಿಗೆ ಆಗಮಿಸಿ, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಆರ್‌ಸಿಬಿ, ಕೆಕೆಆರ್‌ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?

    ರಾಜಲಕ್ಷ್ಮೀ ಅವರು ಮಗಳನ್ನು ಸುಸಂಸ್ಕೃತವಾಗಿ ಬೆಳೆಸಿದ್ದರು. ಕಾಲಕ್ರಮೇಣ ಆಕೆ ದೇವಸ್ಥಾನದ ಅರ್ಚಕ ಗಣೇಶ್ ರಾತ್ (21) ಮತ್ತು ದಿನೇಶ್ ಸಾಹು(20)ವಿನೊಂದಿಗೆ ಒಡನಾಟ ಬೆಳೆಸಿಕೊಂಡು, ತರಗತಿಗಳಿಗೆ ಬಂಕ್ ಮಾಡಿ ಅವರೊಂದಿಗೆ ಸುತ್ತಾಡುತ್ತಿದ್ದಳು. ಈ ವಿಚಾರ ತಿಳಿದ ರಾಜಲಕ್ಷ್ಮೀ, ಮಗಳಿಗೆ ಬೈದು ಬುದ್ದಿವಾದ ಹೇಳಿದ್ದರು.

    ಕೋಪಗೊಂಡ ಆಕೆ ಈ ವಿಚಾರವನ್ನು ವಾಟ್ಸಾಪ್ ಚಾಟ್ ಮೂಲಕ ಇಬ್ಬರು ಗೆಳೆಯರ ತಿಳಿಸಿದ್ದಳು. ಬಳಿಕ ಆಕೆಯ ಇಬ್ಬರು ಗೆಳೆಯರೊಂದಿಗೆ ಸೇರಿ ತಾಯಿಯ ಕೊಲೆಯ ಪ್ಲ್ಯಾನ್‌ ಮಾಡಿದ್ದರು. ರಾಜಲಕ್ಷ್ಮೀಯನ್ನು ಕೊಲೆಮಾಡಿ ಆಸ್ತಿಯನ್ನು ಪಡೆಯಬಹುದು ಹಾಗೂ ನೀನು ಸ್ವತಂತ್ರವಾಗಿ ಬಾಳಬಹುದು ಎಂದೆಲ್ಲಾ ಗೆಳೆಯರು ಹುಡುಗಿಯ ತಲೆತುಂಬಿದ್ದರು. ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ

    ಇದರಿಂದ ಪ್ರಚೋದಿತಲಾದ ಮಗಳು ಏ. 29ರಂದು ಸಂಜೆ, ತಾಯಿ ರಾಜಲಕ್ಷ್ಮೀಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದಳು. ರಾಜಲಕ್ಷ್ಮೀ ಪ್ರಜ್ಞಾಹೀನಳಾದ ನಂತರ, ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಳು, ಬಳಿಕ ಮೂವರು ಸೇರಿ ರಾಜಲಕ್ಷ್ಮೀಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

    ಬಳಿಕ ಆಕೆಯೇ ಕುಟುಂಬಸ್ಥರಿಗೆ ಕರೆ ಮಾಡಿ ತಾಯಿಗೆ ಹುಷಾರಿಲ್ಲ ಎಂದು ತಿಳಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ರಾಜಲಕ್ಷ್ಮೀಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಈ ಹಿಂದೆ ರಾಜಲಕ್ಷ್ಮೀಗೆ ಹೃದಯಾಘಾತವಾಗಿದ್ದರಿಂದ, ಇದನ್ನೇ ದಾಳವಾಡಿ ಬಳಸಿಕೊಂಡು ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

    ರಾಜಲಕ್ಷ್ಮೀಯದ್ದು ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರಿಗೆ ಹುಡುಗಿ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದೆ. ರಾಜಲಕ್ಷ್ಮೀ ಅವರ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಆಕೆಯ ಮೊಬೈಲ್ ಅನ್ನು ಪರಿಶೀಲಿಸಿದಾಗ ಹುಡುಗಿ ಸ್ನೇಹಿತರೊಂದಿಗೆ ಸೇರಿ ಕೊಲೆಯ ಸಂಚು ರೂಪಿಸಿರುವುದು ಬಯಲಾಗಿದೆ. ಇದನ್ನೂ ಓದಿ: Kolar | ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ಸಾವು

    ಈ ಚಾಟ್‌ನಲ್ಲಿ ರಾಜಲಕ್ಷ್ಮಿಯನ್ನು ಕೊಂದು ಚಿನ್ನಾಭರಣಗಳು ಮತ್ತು ಹಣವನ್ನು ವಶಪಡಿಸಿಕೊಂಡ ಬಗ್ಗೆಯೂ ಉಲ್ಲೇಖಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸಿಬಾ ಪ್ರಸಾದ್ ಮೇ 14ರಂದು ಪರಲಖೆಮುಂಡಿ ಪೊಲೀಸ್ ಠಾಣೆಯಲ್ಲಿ(Paralakhemundi Police Station) ದೂರು ದಾಖಲಿಸಿದ್ದರು. ಇದನ್ನೂ ಓದಿ: ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?

    ತನಿಖೆ ಆರಂಭಿಸಿದ ಪೊಲೀಸರು ಮೂವರು ಆರೋಪಿಗಳಾದ ಅಪ್ರಾಪ್ತ ಹುಡುಗಿ, ಗಣೇಶ್ ರಾತ್ ಮತ್ತು ದಿನೇಶ್ ಸಾಹುವನ್ನು ಬಂಧಿಸಿದ್ದಾರೆ. ಹುಡುಗಿಯು ತಾಯಿಯ ಕೆಲವು ಚಿನ್ನದ ಆಭರಣಗಳನ್ನು ಈ ಹಿಂದೆ ಗಣೇಶ್ ರಾತ್‌ಗೆ ಹಸ್ತಾಂತರಿಸಿದ್ದಳು. ಆತ ಚಿನ್ನಾಭರಣಗಳನ್ನು 2.4 ಲಕ್ಷ ರೂ.ಗೆ ಅಡವಿಟ್ಟಿದ್ದ ಎನ್ನಲಾಗಿದೆ. ಆರೋಪಿಯಿಂದ ಸುಮಾರು 30 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಆರ್ಥಿಕ ಸಮಸ್ಯೆಯಿಂದ 40,000ಕ್ಕೆ 4 ವರ್ಷದ ಹೆಣ್ಣುಮಗು ಮಾರಾಟ – ಪೋಷಕರು ಸೇರಿ 6 ಮಂದಿ ಅರೆಸ್ಟ್‌

    ಆರ್ಥಿಕ ಸಮಸ್ಯೆಯಿಂದ 40,000ಕ್ಕೆ 4 ವರ್ಷದ ಹೆಣ್ಣುಮಗು ಮಾರಾಟ – ಪೋಷಕರು ಸೇರಿ 6 ಮಂದಿ ಅರೆಸ್ಟ್‌

    ಭುವನೇಶ್ವರ: ಹಣಕಾಸಿನ ಸಮಸ್ಯೆಯಿಂದಾಗಿ ಪೋಷಕರು ತಮ್ಮ 4 ವರ್ಷದ ಹೆಣ್ಣು ಮಗುವನ್ನು 40,000 ರೂ.ಗಳಿಗೆ ಮಾರಾಟ (Daughter Selling) ಮಾಡಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ (Odisha) ನಡೆದಿದೆ.

    ಘಟನೆ ತಿಳಿದ ಕೂಡಲೇ ಮಗುವನ್ನು ರಕ್ಷಣೆ ಮಾಡಿರುವ ಬಡಗಡ ಪೊಲೀಸರು (Badagada Police), ಪೋಷಕರು ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿದ ನಾಲ್ವರು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯಿಂದ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಆರೋಪಿ ದಂಪತಿ ಬಿಹಾರ ಮೂಲದವರಾಗಿದ್ದು, ಬಡಗಡದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕುಟುಂಬದಲ್ಲಿ ತುಂಬಾ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ತಮ್ಮ ನಾಲ್ಕು ವರ್ಷದ ಮಗುವನ್ನು ಪಿಪಿಲಿಯಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದರು ಎಂದು ಬಡಗಡ ಪೊಲೀಸ್ ಠಾಣೆಯ ಪ್ರಭಾರಿ ತೃಪ್ತಿ ರಂಜನ್ ನಾಯಕ್ ತಿಳಿಸಿದ್ದಾರೆ.

    ಘಟನೆ ಬೆಳಕಿಗೆ ಬಂದ ನಂತರ ಬಡಗಡ ಪೊಲೀಸರು ಮಗುವನ್ನು ರಕ್ಷಿಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಧ್ಯವರ್ತಿಗಳು ಮತ್ತು ಮಗುವಿನ ಪೋಷಕರು ಸೇರಿದಂತೆ ಒಟ್ಟು 6 ಜನರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ

    ಘಟನೆ ಕುರಿತು ಮಾತನಾಡಿದ ತೃಪ್ತಿ ರಂಜನ್ ನಾಯಕ್, ಸಾರ್ಥಕ್ ಮಹಾದಿಕ್ ಎಂಬಾತನಿಂದ ಬಿಹಾರದ ದಂಪತಿಗಳು ತಮ್ಮ ಮಗುವನ್ನು ಮಾರಾಟ ಮಾಡಿರುವ ಮಾಹಿತಿ ಗೊತ್ತಾಯಿತು. ತಕ್ಷಣ ಕಾರ್ಯಾಚರಣೆ ನಡೆಸಿ, ಮಗುವನ್ನು ರಕ್ಷಿಸಿದ್ದೇವೆ. ಪೋಷಕರು ಸೇರಿ 6 ಜನರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದೇವೆ. ಪೋಷಕರು ಮಗುವನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂವಿಧಾನ ಪುಸ್ತಕ ಹಿಡಿದು ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ ಸ್ವೀಕಾರ

  • ಗರ್ಲ್‌ಫ್ರೆಂಡ್ಸ್‌ ಜೊತೆ ಸೇರಿ ಪತ್ನಿಗೆ ಅನಸ್ತೇಷಿಯಾ ನೀಡಿ ಹತ್ಯೆ – ಮೂವರು ಅರೆಸ್ಟ್‌

    ಗರ್ಲ್‌ಫ್ರೆಂಡ್ಸ್‌ ಜೊತೆ ಸೇರಿ ಪತ್ನಿಗೆ ಅನಸ್ತೇಷಿಯಾ ನೀಡಿ ಹತ್ಯೆ – ಮೂವರು ಅರೆಸ್ಟ್‌

    ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ಪತ್ನಿಯನ್ನೇ (Wife) ಹತ್ಯೆಗೈದ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ ನಡೆದಿದೆ.

    ತನ್ನ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ತಿಳಿದ ಬಳಿಕ ಆತ ತನ್ನ ಗೆಳತಿಯರ ಸಹಾಯದಿಂದ ಪತ್ನಿಯನ್ನು ಕೊಂದಿದ್ದಾನೆ. ಈ ಸಂಬಂಧ ಪೊಲೀಸರು (Police) ಕೊಲೆಯಾದ ಮಹಿಳೆಯ ಪತಿ ಹಾಗೂ ಆತನ ಗೆಳತಿಯರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರದ್ಯುಮ್ನ ಕುಮಾರ್ ದಾಸ್‌ ಎಂದು ಗುರುತಿಸಲಾಗಿದೆ.

    ಕೊಲೆಯಾದ ಮಹಿಳೆಯನ್ನು ಸುಭಾಶ್ರೀ ಎಂದು ಗುರುತಿಸಲಾಗಿದೆ. ಆಕೆ ಅಕ್ಟೋಬರ್ 28 ರಂದು ಸಾವನ್ನಪ್ಪಿದ್ದಳು. ಈ ವೇಳೆ ಪತಿ ಆಕೆಯ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಿಕೊಂಡಿದ್ದ. ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.

    ಬಳಿಕ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕೈಗಳು ಮತ್ತು ಕುತ್ತಿಗೆಯ ಮೇಲೆ ಪೆಟ್ಟಾಗಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ ಮಿತಿಮೀರಿದ ಅನಸ್ತೇಷಿಯಾ ನೀಡಲಾಗಿತ್ತು ಎಂದು ತಿಳಿದು ಬಂದಿತ್ತು.

    ಮರಣೋತ್ತರ ಪರೀಕ್ಷೆಯ ಆಧಾರದ ಮೇಲೆ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    ಆರೋಪಿ ದಾಸ್ ಇಬ್ಬರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈತನ ಅನೈತಿಕ ಸಂಬಂಧ ಪತ್ನಿಗೆ ತಿಳಿದು ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಎಂಟು ತಿಂಗಳಿಂದ ಸುಭಾಶ್ರೀ ಪೋಷಕರ ಮನೆಯಲ್ಲಿ ವಾಸವಾಗಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

    ಅ.28 ರಂದು, ದಾಸ್ ತನ್ನ ಗೆಳತಿಯ ಮನೆಯಲ್ಲಿ ಸುಭಾಶ್ರೀ ಅವರನ್ನು ಭೇಟಿಯಾಗುವಂತೆ ತಿಳಿಸಿದ್ದ. ಭೇಟಿಯಾದ ವೇಳೆ, ಸ್ನೇಹಿತನ ಫಾರ್ಮಸಿಯಿಂದ ತಂದಿದ್ದ ಅರಿವಳಿಕೆ ಚುಚ್ಚುಮದ್ದನ್ನು ನೀಡಿ ಆಕೆಯನ್ನು ಹತ್ಯೆ ಮಾಡಲಾಗಿತ್ತು.

  • ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ

    ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ

    – ಸೇನಾಧಿಕಾರಿಗಳ ಮಧ್ಯಪ್ರವೇಶದ ಬಳಿಕ ಎಚ್ಚೆತ್ತ ಒಡಿಶಾ ಪೊಲೀಸ್
    – ಐವರು ಅಧಿಕಾರಿಗಳ‌ ವಿರುದ್ಧ ಎಫ್‌ಐಆರ್‌, ಅಮಾನತು

    ಭುವನೇಶ್ವರ: ಇಲ್ಲಿನ ಭರತ್‌ಪುರ ಪೊಲೀಸ್ ಠಾಣೆಯಲ್ಲಿ (Bharatpur police Station) ಹಲ್ಲೆಗೊಳಗಾದ ಸೇನಾ ಅಧಿಕಾರಿಯ ಭಾವಿ ಪತ್ನಿ ಜೈಲಿಂದ ಬಿಡುಗಡೆಯಾದ ಬಳಿಕ ಪೊಲೀಸರ ವಿರುದ್ಧ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನದ ಆರೋಪ ಮಾಡಿದ್ದಾರೆ.

    ಹೌದು. ಇದೇ ಸೆಪ್ಟೆಂಬರ್‌ 14ರಂದು ಭುವನೇಶ್ವರದಲ್ಲಿ (Bhubaneswar) ರೆಸ್ಟೋರೆಂಟ್ ಮುಚ್ಚಿದ ಬಳಿಕ ನಾನು ನನ್ನ ಭಾವಿ ಪತಿಯ ಜೊತೆ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ. ಈ ಬಗ್ಗೆ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದೆವು. ಆದ್ರೆ ದೂರು ನೀಡಲು ಹೋದ ನಮ್ಮನ್ನೇ ಲಾಕಪ್‌ಗೆ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ಧ್ರುವಿ ಪಟೇಲ್‌ಗೆ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಕಿರೀಟ!

    ಆ ದಿನ ಏನಾಯ್ತು?
    ರೆಸ್ಟೋರೆಂಟ್‌ನಿಂದ ಮನೆಗೆ ಹೋಗುವಾಗ ದುಷ್ಕರ್ಮಿಗಳ ಗುಂಪೊಂದು ನಮ್ಮ ಬೆಟ್ಟಿತು. ನಾವು ಭರತ್‌ಪುರ ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ಅಲ್ಲಿ ಒಬ್ಬ ಮಹಿಳಾ ಕಾನ್‌ಸ್ಟೆಬಲ್ ಮಾತ್ರ ಸಿವಿಲ್ ಡ್ರೆಸ್‌ನಲ್ಲಿದ್ದರು. ಅವರು ನಮಗೆ ಸಹಾಯ ಮಾಡಲು ನಿರಾಕರಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಈ ವೇಳೆ ಕೆಲ ಪುರುಷ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಿಖಿತ ಹೇಳಿಕೆ ಕೊಡುವಂತೆ ನಮ್ಮನ್ನ ಕೇಳಿದರು. ಬಳಿಕ ನನ್ನ ಸಂಗಾತಿಯನ್ನು ಲಾಕಪ್‌ಗೆ ಹಾಕಿದರು. ಆರ್ಮಿ ಅಧಿಕಾರಿಗಳನ್ನು ಅಕ್ರಮವಾಗಿ ಕಸ್ಟಡಿಯಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಈ ವೇಳೆ ಇಬ್ಬರು ಮಹಿಳಾ ಅಧಿಕಾರಿಗಳು ಬಂದು ನನ್ನ ಮೇಲೆ ಹಲ್ಲೆ ನಡೆಸಿದರು. ಬಳಿಕ ಲಾಕಪ್‌ನಲ್ಲಿ ಕೂಡಿ ಹಾಕಿದರು ಎಂದು ಮಹಿಳೆ ಆರೋಪಿಸಿದ್ದಾರೆ.

    ನಂತರ ನಾನು ಸಹಾಯಕ್ಕಾಗಿ ಚೀರಾಡುತ್ತಿದ್ದಾಗ ಯಾರೂ ಬರಲಿಲ್ಲ. ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಂದರು. ತಮ್ಮ ಪ್ಯಾಂಟ್ ಅನ್ನು ಕೆಳಕ್ಕೆ ಇಳಿಸಿ, ಅವರ ಖಾಸಗಿ ಅಂಗಾಂಗಳನ್ನು ತೋರಿಸಿ ಹಿಂಸೆ ಮಾಡಿದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದರು, ನನ್ನ ಎದೆಗೆ ಜಾಡಿಸಿ ಒದ್ದರು ಎಂದು ಆರೋಪಿಸಿದ್ದಾರೆ. ಮಹಿಳೆಯ ಆರೋಪದ ತೀವ್ರತೆಯನ್ನು ಪರಿಗಣಿಸಿ ಒಡಿಶಾ ಹೈಕೋರ್ಟ್ ಮಹಿಳೆಗೆ ಗುರುವಾರ ಜಾಮೀನು ನೀಡಿತು. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

    ಇದಕ್ಕೂ ಮುನ್ನ ಪೊಲೀಸರು ಸಹ ಸೇನಾ ಅಧಿಕಾರಿ ಮತ್ತವರ ಭಾವಿ ಪತ್ನಿ ವಿರುದ್ಧ ಆರೋಪಿಸಿದ್ದರು. ಅವರಿಬ್ಬರು ಕುಡಿದು ಕೋಲ್ಕತ್ತಾದ 22 ಸಿಖ್ ರೆಜಿಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ, ಪೊಲೀಸ್ ಠಾಣೆಯೊಳಗಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

    ಪ್ರಕರಣವು ತೀವ್ರ ಸ್ವರೋಪ ಪಡೆದುಕೊಳ್ಳುತ್ತಿದ್ದಂತೆ ಭರತ್‌ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಅಧಿಕಾರಿಗಳನ್ನ ಅಮಾನತುಗೊಳಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು, ಈ ಕುರಿತು ಪೊಲೀಸರಿಂದ ವರದಿಯನ್ನು ಕೇಳಿದೆ ಎಂದು ಒಡಿಶಾ ಪೊಲೀಸ್ ಉನ್ನತ ಮೂಲಗಳು ತಿಳಿಸಿದೆ. ಈ ಮಧ್ಯೆ ಸೇನಾಧಿಕಾರಿ ದೂರು ದಾಖಲಿಸಿದ ನಂತರ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ಪ್ರಕರಣದ ಇಂಚಿಂಚು ಮಾಹಿತಿ:
    ಸೆಪ್ಟೆಂಬರ್ 14: ಮಧ್ಯರಾತ್ರಿ
    * ಅಪರಿಚಿತರ ದುಷ್ಕರ್ಮಿಗಳ ಗುಂಪೊಂದು ಸೇನಾಧಿಕಾರಿ ಮತ್ತು ಅವರ ಪತ್ನಿಯನ್ನು ಭುವನೇಶ್ವರದಲ್ಲಿ ಬೆನ್ನಟ್ಟಿಕೊಂಡು ಬಂದಿತು. ಕೊನೆಗೆ ಅವರು ರಕ್ಷಣೆ ಕೋರಿ ಸಮೀಪದ ಠಾಣೆಗೆ ದೌಡಾಯಿಸಿದರು.

    ಸೆಪ್ಟೆಂಬರ್ 15: ಮಧ್ಯರಾತ್ರಿ 1 ಗಂಟೆ
    ಸೇನಾ ಅಧಿಕಾರಿ ಹಾಗೂ ಭಾವಿ ಪತ್ನಿ ಇಬ್ಬರು ಭರತ್‌ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಬಂದರು.

    ಸೆಪ್ಟೆಂಬರ್ 15: ಮಧ್ಯರಾತ್ರಿ 1.30 ರಿಂದ 3 ಗಂಟೆ
    ದೂರು ನೀಡಲು ಹೋದವರನ್ನೇ ಪೊಲೀಸರು ಲಾಕಪ್‌ಗೆ ತಳ್ಳಿ ತೀವ್ರವಾಗಿ ಹಲ್ಲೆ ನಡೆಸಿದರು. ಈ ವೇಲೆ ತನ್ನ ಬಟ್ಟೆ ಬಿಚ್ಚಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ, ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಸೆಪ್ಟೆಂಬರ್ 16:
    ಘಟನೆಯ ಬಗ್ಗೆ ಸೇನೆಗೆ ತಿಳಿದ ನಂತರ, ಅದು ಒಡಿಶಾ ಸರ್ಕಾರದೊಂದಿಗೆ ಸಂಪರ್ಕಿಸಲಾಯಿತು.

    ಸೆಪ್ಟೆಂಬರ್ 17:
    ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಒಡಿಶಾ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತು.

    ಸೆಪ್ಟೆಂಬರ್ 18:
    ಸೇನಾಧಿಕಾರಿ ಭಾವಿ ಪತ್ನಿ ಆರೋಪದ ಬಳಿಕ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ ಪೊಲೀಸರಿಂದ ಹಲ್ಲೆಗೊಳಗಾದ ಮಹಿಳೆಗೆ ಜಾಮೀನು ನೀಡಿದೆ.

    ಸೆಪ್ಟೆಂಬರ್ 19:
    ಜೈಲಿಂದ ಬಿಡುಗಡೆ ಮಾಡಲಾಯಿತು. ಬಳಿಕ ಅವರು ಪೊಲೀಸ್‌ ಠಾಣೆಯಲ್ಲಿ ಅನುಭವಿಸಿದ ನರಕಯಾತನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

    ಸೆಪ್ಟೆಂಬರ್ 20:
    ಸೇನಾಧಿಕಾರಿ ದೂರನ್ನು ದಾಖಲಿಸಿದ ನಂತರ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ.

  • 24 ವರ್ಷಗಳ ನಂತ್ರ ಅಧಿಕಾರ ಕಳೆದುಕೊಂಡ ಬಿಜೆಡಿ- ನವೀನ್ ಪಟ್ನಾಯಕ್ ರಾಜೀನಾಮೆ

    24 ವರ್ಷಗಳ ನಂತ್ರ ಅಧಿಕಾರ ಕಳೆದುಕೊಂಡ ಬಿಜೆಡಿ- ನವೀನ್ ಪಟ್ನಾಯಕ್ ರಾಜೀನಾಮೆ

    ಭುವನೇಶ್ವರ: ಬಿಜೆಪಿ ವಿರುದ್ಧ ಸೋಲಿನ ಬಳಿಕ ಇದೀಗ ನಿರ್ಗಮಿತ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ರಾಜೀನಾಮೆ ಸಲ್ಲಿಸಿದ್ದಾರೆ.

    ಪಟ್ನಾಯಕ್ ಅವರು ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್ ದಾಸ್ (Governor Raghubar Das) ಅವರನ್ನು ಭೇಟಿ ಮಾಡಿದರು. ಬಳಿಕ ರಾಜ್ಯಪಾಲರಿಗೆ ತನ್ನ ರಾಜೀನಾಮೆ ಪತ್ರವನ್ನು ನೀಡಿದರು. ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌

    ಜೂನ್ 4 (ನಿನ್ನೆ) ಒಡಿಶಾ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿತು. ನವೀನ್ ಪಟ್ನಾಯಕ್ ಅವರ ಬಿಜೆಡಿ 51 ಸ್ಥಾನಗಳನ್ನು ಗೆದ್ದು 24 ವರ್ಷಗಳ ನಂತರ ಅಧಿಕಾರವನ್ನು ಕಳೆದುಕೊಂಡಿತು. ಪ್ರಮುಖ ಪ್ರತಿಸ್ಪರ್ಧಿ ಬಿಜೆಪಿ 71 ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದೆ. ಒಡಿಶಾದಲ್ಲಿ 147 ವಿಧಾನಸಭಾ ಸ್ಥಾನಗಳಿದ್ದು, ಸರ್ಕಾರ ರಚನೆಗೆ ಬಹುಮತಕ್ಕೆ 74 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದಿದೆ.

    2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ 112 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 23 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 9, ಸಿಪಿಐ (ಎಂ) ಒಂದು ಸ್ಥಾನದಲ್ಲಿ ಗೆಲುವು ಕಂಡಿತ್ತು.

  • 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಭರ್ತೃಹರಿ ಮಹತಾಬ್‌ ರಾಜೀನಾಮೆ

    6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಭರ್ತೃಹರಿ ಮಹತಾಬ್‌ ರಾಜೀನಾಮೆ

    ಭುವನೇಶ್ವರ: ಒಡಿಶಾದ ಕಟಕ್‌ನಿಂದ 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜು ಜನತಾ ದಳದ (BJD) ಭರ್ತೃಹರಿ ಮಹತಾಬ್ (Bhartruhari Mahtab) ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

    ಮಹತಾಬ್ ಅವರು 1998, 1999, 2004, 2009, 2014 ಮತ್ತು 2019 ರಲ್ಲಿ ಒಡಿಶಾದ ಕಟಕ್ ಸಂಸದೀಯ ಕ್ಷೇತ್ರದಿಂದ ಸತತ ಆರು ಲೋಕಸಭಾ ಚುನಾವಣೆ ಗೆದ್ದಿದ್ದರು. ಇದನ್ನೂ ಓದಿ: ಪತಿಯ ಬಂಧನದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ಕೇಜ್ರಿವಾಲ್‌ ಪತ್ನಿ

    1998 ರ ಲೋಕಸಭಾ ಚುನಾವಣೆಯಲ್ಲಿ ಮಹತಾಬ್ ಅವರು ಕಾಂಗ್ರೆಸ್ ಪಕ್ಷದ ಸೈಯದ್ ಮುಸ್ತಾಫಿಜ್ ಅಹ್ಮದ್ ಅವರನ್ನು 1,12,694 ಮತಗಳ ಅಂತರದಿಂದ ಸೋಲಿಸುವ ಮೂಲಕ ಕಟಕ್ ಸ್ಥಾನವನ್ನು ಮೊದಲ ಬಾರಿಗೆ ಗೆದ್ದರು. ಬಳಿಕ 1999 ಮತ್ತು 2004 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಕನ್ಹು ಚರಣ್ ಲೆಂಕಾ ಮತ್ತು ಜಯಂತಿ ಪಟ್ನಾಯಕ್ ಅವರನ್ನು ಸೋಲಿಸುವ ಮೂಲಕವು ಗೆಲುವಿನ ನಗೆ ಬೀರಿದ್ದರು.

    2009 ರ ಲೋಕಸಭಾ ಚುನಾವಣೆಯಲ್ಲಿ 2,36,292 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿಭೂತಿ ಭೂಷಣ್ ಮಿಶ್ರಾ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಕಟಕ್ ಸ್ಥಾನವನ್ನು ಉಳಿಸಿಕೊಂಡರು. ಅಂತೆಯೇ 2014 ಹಾಗೂ 2019ರಲ್ಲಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದ ಸ್ಥಾನವನ್ನು ಅಲಂಕರಿಸಿದ್ದರು.

    ಸದ್ಯ ಮಹತಾಬ್‌ ಅವರು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಡಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ಅವರಿಗೆ ಕಳುಹಿಸಿದ್ದಾರೆ. ಪಕ್ಷದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಇಲ್ಲದ ಕಾರಣ ರಾಜೀನಾಮೆ ನೀಡಿರುವುದಾಗಿ ಮಹತಾಬ್‌ ತಿಳಿಸಿದ್ದಾರೆ.

    ಒಡಿಶಾದಲ್ಲಿ 2024 ರ ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು 4 ಹಂತಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತದಾನ ನಡೆಯಲಿದೆ.

  • ಚಾಲಕನಿಗೆ ಹೃದಯ ಸ್ತಂಭನ- ಸಾಯೋ ಮೊದ್ಲು 48 ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ

    ಚಾಲಕನಿಗೆ ಹೃದಯ ಸ್ತಂಭನ- ಸಾಯೋ ಮೊದ್ಲು 48 ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ

    ಭುವನೇಶ್ವರ: ಬಸ್ ಚಲಾಯಿಸುತ್ತಿದ್ದ ಸಂದರ್ಭ ಚಾಲಕ (Driver) ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿದ್ದು, ಕೊನೆಯುಸಿರೆಳೆಯುವ ಮೊದಲು ಬಸ್‌ನಲ್ಲಿದ್ದ 48 ಪ್ರಯಾಣಿಕರ (Passengers) ಪ್ರಾಣ ಉಳಿಸಿದ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ (Bhubaneswar) ನಡೆದಿದೆ.

    ಕಂಧಮಾಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಚಾಲಕನನ್ನು ಸನಾ ಪ್ರಧಾನ್ ಎಂದು ಗುರುತಿಸಲಾಗಿದ್ದು, ಬಸ್ ಚಾಲನೆ ಮಾಡುವಾಗ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಸ್ಟೇರಿಂಗ್‌ನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಈ ವೇಳೆ ಬಸ್ ಅನ್ನು ರಸ್ತೆ ಬದಿಯ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲಿಸುವ ಮೂಲಕ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಸಂಕಷ್ಟ – ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ

    ಖಾಸಗಿ ಬಸ್ ‘ಮಾ ಲಕ್ಷ್ಮಿ’ ಸಾಮಾನ್ಯವಾಗಿ ಪ್ರತಿ ರಾತ್ರಿ ಕಂಧಮಾಲ್‌ನ ಸಾರಂಗರ್‌ನಿಂದ ಜಿ ಉದಯಗಿರಿ ಮೂಲಕ ರಾಜ್ಯದ ರಾಜಧಾನಿ ಭುವನೇಶ್ವರಕ್ಕೆ ಚಲಿಸುತ್ತದೆ. ಘಟನೆಯ ಬಳಿಕ ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿನ ವೈದ್ಯರು ಹೃದಯ ಸ್ತಂಭನದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಇದನ್ನೂ ಓದಿ: ಕಳ್ಳತನಕ್ಕೆ ಯತ್ನ – ಮಹಿಳೆಗೆ ಗುಂಡು ಹಾರಿಸಿ ಹತ್ಯೆ

    ಮರಣೋತ್ತರ ಪರೀಕ್ಷೆಯ ನಂತರ ಪ್ರಧಾನ್ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ತನಿಖೆಯನ್ನೂ ಆರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದರೋಡೆ, ಅತ್ಯಾಚಾರ, ಜೈಲಿಗೆ ಹೋಗೋದ್ರಲ್ಲಿ ಮುಸ್ಲಿಮರೇ ನಂ.1- ವಿವಾದಕ್ಕೀಡಾದ ಅಜ್ಮಲ್ ಹೇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯ ಆಸೆ ಈಡೇರಿಸಲಿಲ್ಲವೆಂದು ಶಿವಲಿಂಗವನ್ನೇ ಕದ್ದ ಯುವಕ!

    ಮದುವೆಯ ಆಸೆ ಈಡೇರಿಸಲಿಲ್ಲವೆಂದು ಶಿವಲಿಂಗವನ್ನೇ ಕದ್ದ ಯುವಕ!

    ಲಕ್ನೋ: ತನ್ನ ಮದುವೆಯ (Marriage) ಆಸೆ ಈಡೇರಿಸಲಿಲ್ಲವೆಂದು ರೊಚ್ಚಿಗೆದ್ದ 27 ವರ್ಷದ ಯುವಕನೊಬ್ಬ ಶಿವಲಿಂಗವನ್ನೇ (Shivalinga) ಕದ್ದು ಸಿಕ್ಕಿಬಿದ್ದ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.

    ಭೈರೋ ಬಾಬಾ ದೇವಸ್ಥಾನದಿಂದ ಯುವಕ ಶಿವಲಿಂಗವನ್ನು ಕದ್ದೊಯ್ದಿದ್ದಾನೆ. ಇತ್ತ ಎಂದಿನಂತೆ ಭಕ್ತರು ದೇಗುಲಕ್ಕೆ ಭೇಟಿ ಕೊಟ್ಟಾಗ ಶಿವಲಿಂಗ ಇಲ್ಲದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಶಿವಲಿಂಗ ನಾಪತ್ತೆಯಾಗಿರುವ ಸಂಬಂಧ ಗ್ರಾಮದ ಅಧ್ಯಕ್ಷ ಪ್ರಕಾಶ್ ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದಾರೆ. ಅಂತೆಯೇ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೆ ಭಾನುವಾರ ಕುಮ್ಹಿಯಾವಾಹಾದಿಂದ ಆರೋಪಿ ಚೋಟು ಎಂಬಾತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ

    ಯುವಕ ಕದ್ದ ಶಿವಲಿಂಗವನ್ನು ಬಿದಿರಿನ ರಾಶಿಯ ಅಡಿಯಲ್ಲಿ ಬಚ್ಚಿಟ್ಟಿದ್ದನು ಎಂದು ಮಹೇವಾ ಘಾಟ್ ಪೊಲೀಸ್ ಠಾಣೆಯ ಅಧಿಕಾರಿ ರಜನಿಕಾಂತ್ ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಜೈಲಿಗಟ್ಟಲಾಗಿದೆ.

    ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಶಿವಲಿಂಗ ಕದಿಯಲು ಕಾರಣವೇನು ಎಂಬುದನ್ನು ರಿವೀಲ್ ಮಾಡಿದ್ದಾನೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ತಾನು ಶ್ರದ್ಧೆಯಿಂದ ಪ್ರಾರ್ಥನೆ ಮತ್ತು ಉಪವಾಸ ಮಾಡುತ್ತಿದ್ದೆ. ಆದರೂ ಶಿವನು ನನ್ನ ಮದುವೆಯ ಆಸೆ ಈಡೇರಿಸಲಿಲ್ಲ. ಹೀಗಾಗಿ ನೊಂದು ಈ ಕೆಲಸ ಮಾಡಿದ್ದೆನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ದುರಂತ – ಭುವನೇಶ್ವರದಲ್ಲಿ ಅಧಿಕಾರಿಗಳೊಂದಿಗೆ ಸಂತೋಷ್ ಲಾಡ್ ಸಭೆ

    ಒಡಿಶಾ ರೈಲು ದುರಂತ – ಭುವನೇಶ್ವರದಲ್ಲಿ ಅಧಿಕಾರಿಗಳೊಂದಿಗೆ ಸಂತೋಷ್ ಲಾಡ್ ಸಭೆ

    ಭುವನೇಶ್ವರ: ಒಡಿಶಾದ ಬಹನಾಗ್‍ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ (Odisha Train Accident) ಸಂಬಂಧಿಸಿದಂತೆ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಅವರು ಭುವನೇಶ್ವರದ (Bhubaneswar)  ರಾಜೀವ್ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

    ಅಪಘಾತ ನಡೆದ ಸ್ಥಳದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಆಯುಕ್ತರು ಹಾಗೂ ಎನ್‍ಡಿಆರ್‍ಎಫ್ ಮುಖ್ಯಸ್ಥರೊಂದಿಗೆ ಚರ್ಚಿಸಲಾಯಿತು. ಅಲ್ಲದೆ ದುರಂತದಲ್ಲಿ ಕರ್ನಾಟಕದ ಪ್ರಯಾಣಿಕರು ಸಿಲುಕಿ ತೊಂದರೆಗೊಳಗಾಗಿರುವ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ

    ಸಂತೋಷ್ ಲಾಡ್ ಅವರು ಈಗಾಗಲೇ ದುರಂತ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಜೊತೆಗೆ ಕರ್ನಾಟಕದ ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರು. ಸಚಿವರೊಂದಿಗೆ ರಾಜ್ಯದ ಅಧಿಕಾರಿಗಳು ಸಹ ತೆರಳಿದ್ದಾರೆ. ಅವರು ಆಸ್ಪತ್ರೆ, ಶವಾಗಾರಗಳಿಗೆ ಭೇಟಿ ನೀಡಿ ರಾಜ್ಯದ ಪ್ರಯಾಣಿಕರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ಅಪಘಾತವಾದ ರೈಲುಗಳಲ್ಲಿದ್ದ ಕರ್ನಾಟಕದ ಪ್ರಯಾಣಿಕರ ರಕ್ಷಣೆಗೆ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ

  • 300ಕ್ಕೂ ಹೆಚ್ಚು ಮೃತದೇಹಗಳನ್ನ ಪರಿಶೀಲನೆ ಮಾಡಿದ್ದೇನೆ, ಯಾರೂ ಕನ್ನಡಿಗರು ಇಲ್ಲ: ಸಂತೋಷ್ ಲಾಡ್

    300ಕ್ಕೂ ಹೆಚ್ಚು ಮೃತದೇಹಗಳನ್ನ ಪರಿಶೀಲನೆ ಮಾಡಿದ್ದೇನೆ, ಯಾರೂ ಕನ್ನಡಿಗರು ಇಲ್ಲ: ಸಂತೋಷ್ ಲಾಡ್

    ಬೆಂಗಳೂರು: ಒಡಿಶಾ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ 300ಕ್ಕೂ ಹೆಚ್ಚು ಮೃತದೇಹಗಳನ್ನ ಪರಿಶೀಲಿಸಿದ್ದೇನೆ. ಯಾರೂ ಕನ್ನಡಿಗರು ಇಲ್ಲ ಎಂದು ಸಚಿವ ಸಂತೋಷ್ ಲಾಡ್ (Santhosh Lad) ತಿಳಿಸಿದ್ದಾರೆ.

    ರೈಲು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಎರಡ್ಮೂರು ಶವಗಾರ, ನಾಲ್ಕು ಆಸ್ಪತ್ರೆಗಳಲ್ಲಿ ಹುಡುಕಾಟ ಮಾಡಿದ್ದು, ನಾಲ್ಕು ಆಸ್ಪತ್ರೆಗಳಲ್ಲಿ 750 ಗಾಯಾಳು ರೋಗಿಗಳನ್ನು ಮಾತನಾಡಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ

    ನಂತರ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, 750 ಗಾಯಾಳುಗಳಲ್ಲಿ ಯಾರೂ ಕನ್ನಡಿಗರು ಇಲ್ಲ. 300ಕ್ಕೂ ಹೆಚ್ಚು ಡೆಡ್‌ಬಾಡಿಗಳನ್ನು ಪರಿಶೀಲನೆ ಮಾಡಿದ್ದೇನೆ, ಯಾರೂ ಕನ್ನಡಗರಿಲ್ಲ. ಕನ್ನಡಿಗರು ಸೇಫ್ ಆಗಿದ್ದಾರೆ. 110 ಜನ ಕಳಸದವರು ವಾಪಾಸ್ ಆಗುತ್ತಿದ್ದಾರೆ. ಪುರಿ ಜಗನ್ನಾಥ ದರ್ಶನಕ್ಕೆ (Puri Jagannatha Temple) ಬಂದವರಿಗೆ ಟಿಕೆಟ್ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದೇವರ ದಯೆಯಿಂದ ನಾವು ಕೋರಮಂಡಲ್ ಎಕ್ಸ್‌ಪ್ರೆಸ್ ಹತ್ತಲಿಲ್ಲ – ಬೆಂಗಳೂರಿಗೆ ಬಂದಿಳಿದ ವಾಲಿಬಾಲ್ ಕೋಚ್ ಪ್ರತಿಕ್ರಿಯೆ

    ಒಡಿಶಾದ ಪುರಿ ಜಗನ್ನಾಥ ದರ್ಶನಕ್ಕೆ ತೆರಳಿದ್ದ 12 ಯಾತ್ರಿಗಳು ವಾಪಸ್ಸಾಗಲು ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದು, ಸಂತೋಷ್ ಲಾಡ್ ಯಾತ್ರಿಗಳನ್ನು ವಾಪಸ್ ಕರೆತರುವ ಸಲುವಾಗಿ ಬೆಂಗಳೂರಿಗೆ (Bengaluru) ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಭುವನೇಶ್ವರದಿಂದ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದು, ಯಾತ್ರಿಗಳು ಇಂದು (ಭಾನುವಾರ) ಸಂಜೆ ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು