Tag: ಭೀಮ್ಲಾ ನಾಯಕ್

  • ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

    ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

    ವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದುಗ್ಗುಬಾಟಿ ಕಾಂಬಿನೇಷನ್ ನ ‘ಭೀಮ್ಲಾ ನಾಯಕ್’ ಸಿನಿಮಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಧೂಳ್ ಎಬ್ಬಿಸಿದೆ. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೂಡಲೇ ಸಿನಿಮಾದ ಕೆಲ ಭಾಗಗಳನ್ನು ಕತ್ತರಿಸಿ, ನಾಯಕ ನಟ ಪವನ್ ಕಲ್ಯಾಣ್ ಅವರನ್ನು ಬಂಧಿಸಬೇಕು ಎಂದು ಕುಮ್ಮರಿ ಹಾಗೂ ಶಾಲಿವಾಹನ ಕಾರ್ಪೋರೇಷನ್ ಚೇರ್ಮನ್ ಪುರುಷೋತ್ತಮ ಎನ್ನುವವರು ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?

    ದೂರಿನಲ್ಲೇನಿದೆ?

    ಕುಂಬಾರಿಕೆ ಎನ್ನುವುದು ನಮ್ಮ ವೃತ್ತಿ, ಬದುಕಿನ ಭಾಗವೇ ಆಗಿ ಹೋಗಿದೆ. ನಾವು ಕುಂಬಾರಿಕೆಯನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡಿಲ್ಲ. ಅದನ್ನು ದೇವರಂತೆ ಪೂಜಿಸುತ್ತೇವೆ. ಸಾಕಷ್ಟು ಧಾರ್ಮಿಕ ಕಾರ್ಯಗಳಲ್ಲಿ ನಾವು ತಯಾರಿಸಿದ ಮಡಿಕೆಯನ್ನು ಪೂಜಿಸುತ್ತಾರೆ. ಇಂತಹ ಪೂಜ್ಯನೀಯ ಮಡಿಕೆಯನ್ನು ನಟ ರಾಣಾ ದಗ್ಗುಬಾಟಿ ಅವರು ಕಾಲಿನಿಂದ ಒದೆಯುತ್ತಾರೆ. ಈ ದೃಶ್ಯವು ನಮಗೆ ನೋವನ್ನುಂಟು ಮಾಡಿದೆ. ಹಾಗಾಗಿ ಆ ದೃಶ್ಯವನ್ನು ಕೂಡಲೇ ತೆಗೆಯುವಂತೆ ಪುರುಷೋತ್ತಮ್ ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ : ನಟ ಚೇತನ್ ಅಮೆರಿಕಾಗೆ ಗಡಿಪಾರು? : ಆತಂಕದಲ್ಲಿ ಚಿತ್ರ ನಿರ್ಮಾಪಕರು

    ಕತ್ತರಿಸಬೇಕೆಂದಿರುವ ದೃಶ್ಯ ಯಾವುದು?

    ಭೀಮ್ಲಾ ನಾಯಕ್ ವಿರುದ್ಧದ ಸಾಹಸಮಯ ದೃಶ್ಯದಲ್ಲಿ ಭೀಮ್ಲಾ ಮತ್ತು ರಾಣಾ ದುಗ್ಗುಬಾಟಿ ಎದುರಾಗುತ್ತಾರೆ. ಅಲ್ಲಿ ಫೈಟ್ ಸನ್ನಿವೇಶವಿದೆ. ಅದೇ ಸ್ಥಳದಲ್ಲಿ ಮಡಿಕೆ ತುಂಬಿರುವ ಗಾಡಿಯನ್ನು ನಿಲ್ಲಿಸಲಾಗಿದೆ. ರಾಣಾ ಆ ಮಡಿಕೆಯನ್ನು ಒದೆಯುವ ಮೂಲಕ ಬಿಲ್ಡ್‍ಅಪ್ ತೋರಿಸುವ ದೃಶ್ಯ ಅದಾಗಿದೆ. ಈ ದೃಶ್ಯವನ್ನೇ ಚಿತ್ರದಿಂದ ಕೈ ಬಿಡಬೇಕು ಎನ್ನುವುದು ಪುರುಷೋತ್ತಮ್ ವಾದ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

    ಭೀಮ್ಲಾ ನಾಯಕ್ ಸಿನಿಮಾಗೆ ತೊಂದರೆ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಸಿಎಂ ಜಗನ್ ಸರಕಾರಕ್ಕೂ ಭೀಮ್ಲಾ ಸಿನಿಮಾಗೂ ಸಂಬಂಧವಿದೆ ಎನ್ನುವ ಕಾರಣಕ್ಕಾಗಿ ಚಿತ್ರಕ್ಕೆ ಏನೆಲ್ಲ ತೊಂದರೆ ಕೊಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಪವನ್ ಕಲ್ಯಾಣ್ ಅಭಿಮಾನಿಗಳು ಅಲ್ಲಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಯನ್ನೂ ಮಾಡುತ್ತಿದ್ದಾರೆ.

  • ಪವನ್ ಕಲ್ಯಾಣ್ ಸಿನಿಮಾದ ನೋಡಲು ಹಣ ನೀಡದ್ದಕ್ಕೆ 11ರ ಬಾಲಕ ಆತ್ಮಹತ್ಯೆ

    ಪವನ್ ಕಲ್ಯಾಣ್ ಸಿನಿಮಾದ ನೋಡಲು ಹಣ ನೀಡದ್ದಕ್ಕೆ 11ರ ಬಾಲಕ ಆತ್ಮಹತ್ಯೆ

    ಹೈದರಾಬಾದ್: ಟಾಲಿವುಡ್ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಭೀಮ್ಲಾ ನಾಯಕ್ ಸಿನಿಮಾ ಟಿಕೆಟ್ ಖರೀದಿಸಲು ಪೋಷಕರು ಹಣ ನೀಡಲು ನಿರಾಕರಿಸಿದ್ದಕ್ಕೆ 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಪಿ. ನವದೀಪ್ ಎಂದು ಗುರುತಿಸಲಾಗಿದ್ದು, ಈತ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ನವದೀಪ್ ನಟ ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ಸಿನಿಮಾ ವೀಕ್ಷಿಸಲು ಯೋಜನೆ ರೂಪಿಸಿದ್ದ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

    ಫೆಬ್ರವರಿ 25 ರ ಸೋಮವಾರ ಭೀಮ್ಲಾ ನಾಯಕ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಟಿಕೆಟ್ ಬುಕ್ ಮಾಡಲು ತನ್ನ ತಂದೆಗೆ 300 ರೂ. ಹಣವನ್ನು ನೀಡಲು ಕೇಳಿದ್ದಾನೆ. ಆದರೆ ಅವರ ತಂದೆ ಎಷ್ಟೇ ಕೇಳಿದರೂ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಬಾಲಕ ಮನೆಯ ಬಾಲ್ಕಾನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ