Tag: ಭೀಮಾಶಂಕರ ಪಾಟೀಲ್

  • ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನೇ ಇಡುತ್ತೇವೆ: ಭೀಮಾಶಂಕರ ಪಾಟೀಲ್ ಸವಾಲು

    ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನೇ ಇಡುತ್ತೇವೆ: ಭೀಮಾಶಂಕರ ಪಾಟೀಲ್ ಸವಾಲು

     – ‘ತಾಕತ್ತಿದ್ದರೆ ತಡೆದು ನೋಡಿ’

    ದಾವಣಗೆರೆ: ಬೆಂಗಳೂರಿನ ಯಲಹಂಕ ಫ್ಲೈಓವರಿಗೆ ಸಾವರ್ಕರ್ ನಾಮಕರಣ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಕತ್ತಿದ್ದರೆ ತಡೆದು ನೋಡಿ ಎಂದು ದಾವಣಗೆರೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ವಿರೋಧಿ ಪಕ್ಷಗಳಿಗೆ ಸವಾಲೆಸೆದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಹೆಸರು ಕೇಳಿದರೆ ಏಕೆ ಚೇಳು ಕಡಿದಂತೆ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಈಗಿನ ಕಾಂಗ್ರೆಸ್ ನಾಯಕರಿಗೆ ಸಾವರ್ಕರ್ ಹೆಸರು ಕೇಳಿದರೆ ಇಷ್ಟೋಂದು ಹೆದರಿಕೆ ಆಗುತ್ತೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನಾಯಕರು ಇನ್ನೆಷ್ಟು ಹೆದರಿರಬೇಡ ಎಂದರು.

    ಸಾರ್ವಕರ್ ರಂತಹ ದೇಶ ಭಕ್ತ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ನಾಡು-ನುಡಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಸಾವರ್ಕರ್ ನಾಮಕರಣದ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬೇಡ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಅಧಿಕೃತವಾಗಿ ಪರವಾನಗಿ ಪಡೆದು ಫ್ಲೈಓವರಿಗೆ ಸಾವರ್ಕರ್ ಹೆಸರು ನಾಮಕರಣ ಮಾಡುತ್ತೇವೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟ ನಿಲುವನ್ನು ಸ್ಪಷ್ಟಪಡಿಸಿದರು.

    ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳ ಹೆಸರು ಬಿಜೆಪಿ ಅಧಿಕಾರ ಅವಧಿಯಲ್ಲಿ ಮರುನಾಮಕರಣಗೊಂಡಿದ್ದು, ಇಂದಿರಾ ಕ್ಯಾಂಟೀನ್‍ಗೆ ಅಕ್ಕಮಹಾದೇವಿ ಹೆಸರು ಸೂಚಿಸಿದ್ದೇವು. ಆದರೆ ಸಿದ್ದರಾಮಯ್ಯ ಅರು ಹಠಕ್ಕೆ ಬಿದ್ದವರಂತೆ ಇಂದಿರಾ ಅವರ ಹೆಸರು ನಾಮಕರಣ ಮಾಡಿದರು. ಆದರೂ ನಾವು ವಿರೋಧ ಮಾಡಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ವಿನಾಕಾರಣ ವಿವಾದ ಎಬ್ಬಿಸುತ್ತಿದ್ದಾರೆ. ಸ್ವಾತಂತ್ರ ವೀರನಿಗೆ ವಿರೋಧ ಪಕ್ಷಗಳು ಅಪಮಾನ ಮಾಡುತ್ತಿದ್ದಾರೆ ಎಂದರು.

    ಸಾರ್ವಕರ್ ಮುಂದಾಳತ್ವ ಹೋರಾಟ ಕಾಂಗ್ರೆಸ್ ಪೂರ್ವಜರಿಗೆ ಇರಲಿಲ್ಲ. ಸಾವರ್ಕರ್ ಹೆಸರು ಇಟ್ಟ ತಕ್ಷಣ ಸಿದ್ದರಾಮಯ್ಯ ನವರಿಗೆ ಚೇಳು ಕಡಿದಂತಾಗುತ್ತದೆ. ಹೋರಾಟಗಾರರನ್ನು ಅಪಮಾನ ಮಾಡುವ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಸಾವರ್ಕರ್ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ತಾಖತ್ ಇದ್ದವರು ಎದುರು ಬರಬಹುದು ಎಂದು ಸವಾಲು ಎಸೆದರು.

  • ದೊರೆಸ್ವಾಮಿ ಸಾವರ್ಕರ್ ರೋಮಕ್ಕೂ ಸಮನಿಲ್ಲ: ಭೀಮಾಶಂಕರ ಪಾಟೀಲ್

    ದೊರೆಸ್ವಾಮಿ ಸಾವರ್ಕರ್ ರೋಮಕ್ಕೂ ಸಮನಿಲ್ಲ: ಭೀಮಾಶಂಕರ ಪಾಟೀಲ್

    ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ್ ಪರ, ವಿರುದ್ಧ ಚರ್ಚೆಗಳು ನಡೆಯುತ್ತಿರುವಾಗಲೇ ದೊರೆಸ್ವಾಮಿ ಅವರು ವೀರ ಸಾವರ್ಕರ್ ಬಗ್ಗೆ ಆಡಿದ ಮಾತು ಕಿಚ್ಚು ಎಬ್ಬಿಸಿದೆ. ದೊರೆಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ದೊರೆಸ್ವಾಮಿ ಸಾವರ್ಕರ್ ರೋಮಕ್ಕೂ ಸಮನಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾವರ್ಕರ್ ಅಂದ್ರೆ ಸ್ಪೂರ್ತಿ, ಕಿಚ್ಚು, ಕ್ರಾಂತಿ. ಧೀಮಂತ ಸಾವರ್ಕರ್ ಬಗ್ಗ ದೊರೆಸ್ವಾಮಿ ಹೇಳಿಕೆ ಖಂಡನೀಯ. ದೊರೆಸ್ವಾಮಿ ಸ್ವಯಂ ಘೋಷಿತ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯ ಹೋರಾಟಗಾರ ಅನ್ನೋ ಟ್ರಂಪ್ ಕಾರ್ಡ್ ಬಳಸಿಕೊಂಡು ದೇಶದ್ರೋಹಿಗಳ ಜೊತೆ ಕುಳಿತು ಪ್ರತಿಭಟನೆ ಮಾಡೋದು ಹೋರಾಟ ಅಂದುಕೊಂಡಿದ್ದಾರೆ. ದೊರೆಸ್ವಾಮಿಗೆ ಯಾವ ನೈತಿಕತೆ ಕೂಡ ಇಲ್ಲ ಅಂತ ಆಕ್ರೋಶ ಹೊರ ಹಾಕಿದರು.

    ದೊರೆಸ್ವಾಮಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ ಎಂದು ಹೇಳುತ್ತಾರೆ. ಅವರಾಗಿಯೇ 101 ವರ್ಷವಾಗಿದೆ ಅಂತ ಹೇಳಿಕೊಳ್ತಾರೆ. ಗಾಂಧೀಜಿಯವರು ಹೋರಾಟ ನಡೆಸಿದಾಗ ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಉತ್ತರ ಕರ್ನಾಟಕದ ಮನೆ ಮನೆಗಳಲ್ಲೂ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಅಂತ ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಅವರು ಅಡ್ರೆಸ್ ಇಲ್ಲದಿರುವ ಪಕ್ಷಗಳು ದೊರೆಸ್ವಾಮಿ ಜೊತೆ ನಿಲ್ಲುವುದು ಸೂಕ್ತವಲ್ಲ. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕೆ ಯಾವುದಾದರೂ ದಾಖಲೆ ಇದ್ಯಾ? ಕನಿಷ್ಟ ಬ್ರಿಟಷರ ಬಳಿಯಾದರೂ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕೆ ದಾಖಲೆ ಇದೆಯಾ ಅಂತ ಪ್ರಶ್ನೆ ಮಾಡಿದ್ರು. ಅಡ್ರೆಸ್ ಇಲ್ಲದಿರುವ ನಿರಾಶ್ರಿತರು ದೊರೆಸ್ವಾಮಿಗೆ ಬೆಂಬಲ ನೀಡುವಾಗ ಯೋಚನೆ ಮಾಡಲಿ ಅಂತ ಕಾಂಗ್ರೆಸ್ಸಿಗೆ ಕುಟುಕಿದರು. ಸಾವರ್ಕರ್ ತಂಟೆಗೆ ಬಂದರೆ ಯಾವ ದೊಣ್ಣೆ ನಾಯಕನಾದರೂ ನಾವು ಸುಮ್ಮನಿರುವುದಿಲ್ಲ. ಕೂಡಲೇ ದೊರೆಸ್ವಾಮಿ ಸಾವರ್ಕರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

  • ಸುರೇಶ ಅಂಗಡಿಗೆ ಭೀಮಾಶಂಕರ ಪಾಟೀಲ್ ಸವಾಲ್

    ಸುರೇಶ ಅಂಗಡಿಗೆ ಭೀಮಾಶಂಕರ ಪಾಟೀಲ್ ಸವಾಲ್

    ಬೆಳಗಾವಿ: ಇತ್ತೀಚೆಗೆ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಮೇಲೆ ಕಂಡಲ್ಲಿ ಗುಂಡಿಕ್ಕಿ ಎಂದು ಹೇಳುತ್ತಾರೆ. ಗಡಿ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿ ಮಾಡಿದ ಎಂಇಎಸ್‍ಗೆ ಗುಂಡಿಕ್ಕಿ ಎಂದು ಹೇಳಿಕೆ ನೀಡಲಿಲ್ಲ ಯಾಕೆ ಎಂದು ಕರ್ನಾಟಕ ನವನಿರ್ಮಾಣ ಸೇನೆ(ಕನಸೆ) ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಪ್ರಶ್ನಿಸಿದ್ದಾರೆ.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಕಳೆದ 64 ವರ್ಷದಿಂದ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಬೆಳಗಾವಿಯಲ್ಲಿ ಎಂಇಎಸ್‍ನವರು ಸಾಕಷ್ಟು ಆಸ್ತಿ ಹಾನಿ ಮಾಡಿದ್ದಾರೆ. ಅವರಿಗೆ ಕಂಡಲ್ಲಿ ಗುಂಡಿಕ್ಕಿ ಎಂದು ಯಾಕೆ ಹೇಳಲಿಲ್ಲ. ಎಲ್ಲಿಂದಲೋ ಬಂದವರಿಗೆ ಗುಂಡಿಕ್ಕಿ ಅಂತಾರೆ. ಗಡಿ ವಿಚಾರದಲ್ಲಿ ಕುತಂತ್ರ ಬುದ್ಧಿ ತೋರುವ ಎಂಇಎಸ್ ಅವರಿಗೆ ಗುಂಡಿಕ್ಕಿ ಎನ್ನುವುದಿಲ್ಲ ಏಕೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿಗೆ ಸವಾಲ್ ಹಾಕಿದರು.

    ಬೆಳಗಾವಿ ಗಡಿ ವಿವಾದದ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪಿಒಕೆಗೆ ಹೋಲಿಸಿದ್ದು ಖಂಡನೀಯ. ಮಹಾರಾಷ್ಟ್ರ ಸಿಎಂಗೆ ತಿಳುವಳಿಕೆ ಇಲ್ಲ. ಪಾಕಿಸ್ತಾನ ಹಾಗೂ ಕಾಶ್ಮೀರ ಗಡಿ ವಿವಾದಕ್ಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಲಿಸುವ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು. ಕರ್ನಾಟಕದ ಸಿಎಂ ಮಹಾರಾಷ್ಟ್ರದ ಸಿಎಂಗೆ ದಿಟ್ಟ ಉತ್ತರ ನೀಡದಿರುವುದು ದುರ್ದೈವದ ಸಂಗತಿ. ರಾಮಕೃಷ್ಣ ಹೆಗಡೆ ಬಿಟ್ಟರೆ ಗಡಿ ವಿಚಾರವಾಗಿ ಯಾವುದೇ ಸರ್ಕಾರ ಮುಂದಾಗದೇ ಇರುವುದು ವಿಪರ್ಯಾಸದ ಸಂಗತಿ ಎಂದರು.

    ಮಹಾರಾಷ್ಟ್ರದ ಸರ್ಕಾರ ಗಡಿ ವಿಚಾರವಾಗಿ ಒಗ್ಗಟ್ಟಾಗುತ್ತಾರೆ. ಆದರೆ ಕರ್ನಾಟಕದ ಬೆಳಗಾವಿ ಜನಪ್ರತಿನಿಧಿಗಳು ಎಂಇಎಸ್‍ನ ಮತ ಬ್ಯಾಂಕ್‍ಗಾಗಿ ಬಳಸಿಕೊಳ್ಳುತ್ತಿರುವುದು ನಾಚಿಗೆಗೇಡಿನ ಸಂಗತಿ. ಗಡಿ ಬಗ್ಗೆ ಕಳಕಳಿ ಇರುವ ಜನರನ್ನು ಬೆಳಗಾವಿ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು. ಬೆಂಗಳೂರಿನಲ್ಲಿ ಇರುವ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಬೆಳಗಾವಿಗೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.

    ಮಹಾ ಸಿಎಂ ಉದ್ಧವ್ ಠಾಕ್ರೆ ಕನ್ನಡ ಮತ್ತು ಮರಾಠಿಗರ ಭಾಷೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ತಂದೆಗೆ ತಕ್ಕ ಪಾಠ ಕಲಿಸಿದವರು ಕನ್ನಡಿಗರು ಉದ್ಧವ್‍ಗೆ ಬಿಡುತ್ತೇವಾ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಮಹದಾಯಿ ಹೋರಾಟ ನಿರಂತರವಾಗಿ ನಾಲ್ಕು ವರ್ಷದಿಂದ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೂ ಮಹದಾಯಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಮಹದಾಯಿ ಯೋಜನೆಯನ್ನು ಒಂದು ವಾರದಲ್ಲಿ ಅನುಷ್ಠಾನಗೊಳಿಸದಿದ್ದರೆ ಎಲ್ಲಾ ಲೋಕಸಭಾ ಸದಸ್ಯರ ಮನೆಯ ನಲ್ಲಿ ನೀರು ಕಡಿತ ಮಾಡಲಾಗುವುದು ಎಂದರು. ಈ ಸುದ್ದಿಗೋಷ್ಠಿಯಲ್ಲಿ ಕನಸೆ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಆನಂದ ಆಡ್ಡೆ, ಸುಷ್ಮಾ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ರಾಯಣ್ಣನನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ಬಿಎಸ್‍ವೈ ಬಗ್ಗೆ ಮಾತಾಡಬೇಕಿಲ್ಲ – ಈಶ್ವರಪ್ಪ ವಿರುದ್ಧ ಭೀಮಾಶಂಕರ್ ಪಾಟೀಲ್ ಕಿಡಿ

    ರಾಯಣ್ಣನನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ಬಿಎಸ್‍ವೈ ಬಗ್ಗೆ ಮಾತಾಡಬೇಕಿಲ್ಲ – ಈಶ್ವರಪ್ಪ ವಿರುದ್ಧ ಭೀಮಾಶಂಕರ್ ಪಾಟೀಲ್ ಕಿಡಿ

    ದಾವಣಗೆರೆ: ಸಂಗೊಳ್ಳಿರಾಯಣ್ಣರನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ನೀವು, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಹಾದಿ ಬೀದಿಯಲ್ಲಿ ವಿಚಾರಿಸಬೇಕಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

    ನಗರದ ರೇಣುಕಾ ಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪಕ್ಷದೊಳಗಿನ ಕುತಂತ್ರಿಗಳು ಗ್ರಾಮಪಂಚಾಯಿತಿ ಗೆಲ್ಲಲು ಆಗದವರು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ ಅಷ್ಟೇ. ಇನ್ನು ಮುಂದೆ ಬಿಎಸ್‍ವೈ ಬಗ್ಗೆ ಮಾತನಾಡಿದರೆ ನಡು ರಸ್ತೆಯಲ್ಲಿ ನಿಲ್ಲಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ: ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

    ಕೇಂದ್ರದ ನಾಯಕರಿಗೆ ಬದ್ಧತೆ ಇದ್ದರೆ ಯಡಿಯೂರಪ್ಪ ನೇತೃತ್ವದಲ್ಲಿ ಕೆಲಸ ಮಾಡಲಿ. ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ಪೈಸೆ ಕೊಟ್ಟಿಲ್ಲ. ಯಾವ ಉದ್ದೇಶಕ್ಕೆ ಕೇಂದ್ರ ಈ ರೀತಿ ಮಾಡುತ್ತಿದೆ ಗೊತ್ತಿಲ್ಲ. ನಾವು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು ಭಿಕ್ಷೆ ಬೇಡಿಯಾದರೂ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ. ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾವು ಬಿಡುವುದಿಲ್ಲ. ಯಡಿಯೂರಪ್ಪನವರ ವಿಚಾರಕ್ಕೆ ಬಂದರೆ ಸುಟ್ಟು ಭಸ್ಮರಾಗುತ್ತೀರಿ. ಕೇಂದ್ರದವರೆಗೆ ಮುಟ್ಟಿ ನೋಡಿಕೊಳ್ಳಬೇಕು ಈ ರೀತಿ ಮಾಡುತ್ತೇವೆ ಆಕ್ರೋಶ ವ್ಯಕ್ತಪಡಿಸಿದರು.

    ಸಿಎಂ ಅವರ ಆಡಳಿತ ವಿಚಾರದಲ್ಲಿ ಮೂಗು ತೂರಿಸಿ ಅವರಿಗೆ ಭಂಗ ತರುತ್ತಿದ್ದಾರೆ. ಧರ್ಮವನ್ನು ಕಾಪಾಡಿದವರು ಬಿಎಸ್‍ವೈ, ಅವರಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಲುಂಗಿ ಕಟ್ಟಲು ಬರದವರು ರಾಜಕೀಯ ಮಾಡುತ್ತಿದ್ದಾರೆ. ಯಡಿಯೂರಪ್ಪನವರಿಗೆ ತೊಂದರೆಕೊಟ್ಟು ತೊಡೆ ತಟ್ಟಿದರೆ ನಾವು ಕೂಡ ತೊಡೆ ತಟ್ಟಲು ಸಿದ್ಧ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಬೇಳೆ ಬೇಯಿಸಿಕೊಳ್ಳಲು ಯಡಿಯೂರಪ್ಪನವರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.