Tag: ಭೀಮಾ

  • ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ – ನಟ ದುನಿಯಾ ವಿಜಯ್‌

    ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ – ನಟ ದುನಿಯಾ ವಿಜಯ್‌

    ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್‌ (Duniya Vijay) ಹಾಗೂ ಲೂಸ್‌ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್‌ ಮಾದ ಯೋಗೇಶ್‌ ಸ್ಪಷ್ಟನೆ ಕೊಟ್ಟಿದ್ದರು. ಇದಕ್ಕೆ ನಟ ದುನಿಯಾ ವಿಜಯ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ದುನಿಯಾ ವಿಜಯ್‌, ಯೋಗಿ ನನ್ನ ಸ್ವಂತ ಅಕ್ಕನ ಮಗ. ಚಿಕ್ಕ ವಯಸ್ಸಿನಿಂದಲೂ ಅವನನ್ನ ಎತ್ತಿ ಆಡಿಸಿ ಬೆಳೆಸಿದ್ದೇನೆ. ಆ ಪ್ರೀತಿ ಯಾವಾಗಲೂ ಇರುತ್ತೆ. ಎಷ್ಟೇ ದೂರ ಇದ್ದರೂ ಯೋಗಿ ಚೆನ್ನಾಗಿರಲಿ ಅಂತ ಆಶಿಸ್ತೀನಿ ಅಂತ ಹೇಳಿದ್ದಾರೆ.

    ಭೀಮಾ ಸಿನಿಮಾದಲ್ಲಿ ನಟನೆ ಮಾಡಬೇಕಿತ್ತು. ಆದ್ರೆ ಆಗಲ್ಲ. ಮುಂದೆ ನನ್ನ ನಿರ್ದೇಶನದಲ್ಲಿ ಯೋಗಿಗೆ ಸಿನಿಮಾ ಮಾಡ್ತೀನಿ. ಒಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಆಸೆ ಇದೆ. ಏಕೆಂದರೆ ನಾನು ಕಷ್ಟಪಟ್ಟು ಬಂದಿದ್ದೇನೆ, ಯೋಗಿನೂ ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಆದ್ರೆ ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ, ಬೇರೆನಿಲ್ಲ. ಒಂದು ಸ್ಕ್ರಿಪ್ಟ್‌ ಬಂದಿತ್ತು. ಯೋಗಿ ಸಿನಿಮಾ ಮಾಡಿಸೋಣ ಅಂತ ಹೇಳಿದ್ದೇನೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

    ನಟ ಯೋಗಿ ಹೇಳಿದ್ದೇನು?
    ದುನಿಯಾ ವಿಜಯ್‌ ಹಾಗೂ ನನಗೆ ಕಿರಿಕ್‌ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ. ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್‌ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್‌ ಹಾಗೂ ನನ್ನ ಫ್ರೆಂಡ್‌ಶಿಪ್‌ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
    ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್‌ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು.

    ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
    ʻದುನಿಯಾʼ ಬಳಿಕ ಲೂಸ್‌ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್‌ ಸಿನಿಮಾಗಳನ್ನೂ ಕೊಟ್ಟರು.

  • ದುನಿಯಾ ವಿಜಯ್ ಜೊತೆ ಕಿರಿಕ್ ಆಗಿದ್ದು ನಿಜ – ಲೂಸ್‌ಮಾದ ಯೋಗೇಶ್‌

    ದುನಿಯಾ ವಿಜಯ್ ಜೊತೆ ಕಿರಿಕ್ ಆಗಿದ್ದು ನಿಜ – ಲೂಸ್‌ಮಾದ ಯೋಗೇಶ್‌

    – ʻಭೀಮಾʼ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು, ಕೂಡಿ ಬರಲಿಲ್ಲ ಎಂದ ನಟ

    ಕನ್ನಡ ಚಿತ್ರರಂಗದಲ್ಲಿ (Kannada Cinema) ನಟ ದುನಿಯಾ ವಿಜಯ್‌ (Duniya Vijay) ಹಾಗೂ ಲೂಸ್‌ ಮಾದ (loose mada) ನಡುವೆ ವೈಮನಸ್ಸು ಇತ್ತು ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಹುಟ್ಟಿಕೊಂಡ ಬೆನ್ನಲ್ಲೇ ನಟ ಲೂಸ್‌ ಮಾದ ಯೋಗೇಶ್‌ ಸ್ಪಷ್ಟನೆ ನೀಡಿದ್ದಾರೆ.

    ಸಿದ್ಲಿಂಗು-2 ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಇಬ್ಬರ ವೈಮನಸ್ಸಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ದುನಿಯಾ ವಿಜಯ್‌ ಹಾಗೂ ನನಗೆ ಕಿರಿಕ್‌ ಆಗಿದ್ದು ನಿಜ. ಆದರೆ ಈಗ ಚೆನ್ನಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ದುನಿಯಾ ನಂತರ ಒಟ್ಟಿಗೆ ನಟಿಸಿಲ್ಲ. ಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್‌ ಹೊಡೀತು, ಕೂಡಿ ಬರಲಿಲ್ಲ. ಸದ್ಯಕ್ಕೆ ವಿಜಯ್‌ ಹಾಗೂ ನನ್ನ ಫ್ರೆಂಡ್‌ಶಿಪ್‌ ಚೆನ್ನಾಗಿದೆ. ಎರಡೂ ಫ್ಯಾಮಿಲಿಯವರೂ ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯೋಗಿ-ವಿಜಿ ಇಬ್ಬರೂ ಸಂಬಂಧಿಕರು:
    ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಇಬ್ಬರೂ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. ‘ದುನಿಯಾ’ ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡೂ ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು. ನಟ ಯೋಗಿಯ ಸಿನಿಮಾ ಕರಿಯರ್‌ನಲ್ಲಿ ‘ದುನಿಯಾ’ ಸಿನಿಮಾ ಒಂದು ತೂಕವಾದರೆ, ‘ಸಿದ್ಲಿಂಗು’ ಸಿನಿಮಾ ಇನ್ನಷ್ಟು ಖ್ಯಾತಿ ಕೊಟ್ಟಿತ್ತು. ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್‌

    ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ
    ʻದುನಿಯಾʼ ಬಳಿಕ ಲೂಸ್‌ಮಾದ ಅಂತಲೇ ಯೋಗಿ ಖ್ಯಾತಿ ಪಡೆದರು. ದುನಿಯಾ ಸಕ್ಸಸ್ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಹಿರೋ ಆಗಿ ಕನ್ನಡ ಚಿತ್ರಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಕೆಲವು ಹಿಟ್‌ ಸಿನಿಮಾಗಳನ್ನೂ ಕೊಟ್ಟರು.

  • ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ. ಮಳೆರಾಯನ ಆರ್ಭಟ ಜೋರಾಗಿದೆ. ಒಂದೆರೆಡು ನದಿಗಳಲ್ಲಿ ನೀರು ತುಂಬಿ ಡ್ಯಾಂಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮತ್ತೆ ಕೆಲವಡೆ ಭಾರೀ ಮಳೆ ಪ್ರವಾಹದ ಭೀತಿ ಜೊತೆ ಅವಾಂತರವನ್ನೇ ಸೃಷ್ಟಿಸಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕೃಷ್ಣಾ ನದಿಗೆ ಸುರಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ತಮಟೆ ಬಾರಿಸಿ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

    ಕಲಬುರಗಿಯ ಜೇವರ್ಗಿ ಮತ್ತು ಅಫಜಲಪುರದಲ್ಲಿ ಭೀಮಾ ನದಿ ಆರ್ಭಟಿಸುತ್ತಿದ್ದು, ತಗ್ಗು ಪ್ರದೇಶದಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಜೇವರ್ಗಿ ತಾಲೂಕಿನ ನೇಲೋಗಿ ರಸ್ತೆ ಕಡಿತಗೊಂಡಿದೆ. ಕಾವೇರಿಕೊಳ್ಳದಲ್ಲಿ ಬರುವ ಕಬಿನಿ ಜಲಾಶಯ ಭರ್ತಿಯಾಗೋದಕ್ಕೆ ಕೇವಲ ನಾಲ್ಕಡಿಯಷ್ಟೇ ಬಾಕಿ. ಸದ್ಯ ನೀರಿನ ಮಟ್ಟ 2280 ಅಡಿಯಷ್ಟಿದೆ. ಡ್ಯಾಂನಿಂದ ಕಪಿಲ ನದಿಗೆ ಹೆಚ್ಚು ನೀರು ಬಿಡುಗಡೆಯಾಗೋ ಸಾಧ್ಯತೆ ಇದೆ.

    ಬರಗಾಲದ ನಾಡೇ ಅಂತಾ ಕರೆಸಿಕೊಳ್ಳುವ ಚಾಮರಾಜನಗರದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಐದು ವರ್ಷಗಳ ಬಳಿಕ ಭರ್ತಿಯಾಗಿವೆ. ಇನ್ನೂ ಎರಡು ದಿನಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.