Tag: ಭೀಮನ ಅಮಾವಾಸ್ಯೆ

  • ಭೀಮನ ಅಮವಾಸ್ಯೆ; ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ – ಮಹಿಳೆಯರಿಂದ ಪ್ರಾರ್ಥನೆ

    ಭೀಮನ ಅಮವಾಸ್ಯೆ; ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ – ಮಹಿಳೆಯರಿಂದ ಪ್ರಾರ್ಥನೆ

    ಶಿವಮೊಗ್ಗ: ಇಂದು ಭೀಮನ ಅಮವಾಸ್ಯೆ (Bheemana Amavasy) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೊಜೆ ಸಲ್ಲಿಸುತ್ತಿದ್ದಾರೆ. ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಭೀಮನ ಅಮವಾಸ್ಯೆ ವ್ರತ ಆಚರಿಸುತ್ತಿದ್ದಾರೆ.

    ಅದರಂತೆಯೇ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ (Sigandur Chowdeshwari Temple) ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೇವಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಅಮವಾಸ್ಯೆ ಹಿನ್ನೆಲೆ ಭಕ್ತರು ಸಹಸ್ರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

    ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದು ಕರೆಯಲಾಗುವ ಭೀಮನ ಅಮವಾಸ್ಯೆ ವ್ರತವು ದಕ್ಷಿಣ ಭಾರತದಲ್ಲಿ ಅತ್ಯಂತ ಮಂಗಳಕರವಾದ ವ್ರತವಾಗಿದೆ. ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳಲ್ಲಿ, ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯ ರಾತ್ರಿಯಲ್ಲಿ ಮಹಿಳೆಯರು ಈ ಉಪವಾಸವನ್ನು ಆಚರಿಸುತ್ತಾರೆ. ಇದನ್ನೂ ಓದಿ: ನಾರಾಯಣಮೂರ್ತಿ ದಂಪತಿಯಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ

    ಆಷಾಢ ಮಾಸವು ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ಆರಂಭದ ಸಮಯವಾಗಿದೆ. ಈ ವರ್ಷ ಭೀಮನ ಅಮಾವಾಸ್ಯೆಯನ್ನ 2023ರ ಜುಲೈ 17 ರಂದು ಸೋಮವಾರ ಆಚರಿಸಲಾಗುವುದು. ಈ ವ್ರತವನ್ನು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ವ್ರತವಾಗಿದ್ದು, ದಂಪತಿಗಳು ಈ ದಿನ ಶಿವ – ಪಾರ್ವತಿ ಪೂಜೆಯನ್ನು ಮಾಡುತ್ತಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    ಭೀಮನ ಅಮಾವಾಸ್ಯೆ ಮಹತ್ವ ಗೊತ್ತಾ?
    ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ವಿವಾಹಿತ ಮಹಿಳೆಯರು ಮದುವೆಯಾದ ನಂತರ ಕನಿಷ್ಠ 9 ವರ್ಷಗಳ ಕಾಲ ಈ ವ್ರತವನ್ನು ಮಾಡುತ್ತಾರೆ. ಇನ್ನೂ ಅವಿವಾಹಿತ ಹುಡುಗಿಯರು ಸದ್ಗುಣಶೀಲ ಪತಿಯನ್ನ ಪಡೆಯುವುದಕ್ಕಾಗಿ, ಸಹೋದರರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೀಮನ ಅಮಾವಾಸ್ಯೆ ವಿಶೇಷ ‘ಅರಿಶಿನ ಎಲೆಕಾಯಿ ಕಡುಬು’ ಮಾಡಿ ಸವಿಯಿರಿ

    ಭೀಮನ ಅಮಾವಾಸ್ಯೆ ವಿಶೇಷ ‘ಅರಿಶಿನ ಎಲೆಕಾಯಿ ಕಡುಬು’ ಮಾಡಿ ಸವಿಯಿರಿ

    ಇಂದು ಭೀಮನ ಅಮಾವಾಸ್ಯೆ ಇರುವುದರಿಂದ ವಿಶೇಷ ಮತ್ತು ಸಾಂಪ್ರದಾಯಿಕ ಅಡುಗೆಯನ್ನು ಮಾಡಬೇಕು ಎಂದು ಎಲ್ಲರೂ ಯೋಚನೆ ಮಾಡುತ್ತಿರುತ್ತಾರೆ. ಅದಕ್ಕೆ ಇಂದು ನಿಮ್ಮ ಹಬ್ಬಕ್ಕೆ ವಿಶೇಷ ಮೇರುಗನ್ನು ನೀಡುವುದಕ್ಕೆ ನಾವು ಅರಿಶಿನದ ಎಲೆಯಿಂದ ಹೇಗೆ ವಿಶೇಷ ಕಡುಬು ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಇದು ದಕ್ಷಿಣ ಭಾರತದಲ್ಲಿ ಮಾಡುವ ವಿಶೇಷ ತಿನಿಸಾಗಿದೆ. ನೀವು ಸಹ ಇದನ್ನು ಟ್ರೈ ಮಾಡಿ.

    ಬೇಕಾಗಿರುವ ವಿಧಾನ:
    * ಅಕ್ಕಿ ಹಿಟ್ಟು – 1 ಕಪ್
    * ನೀರು – 1.5 ರಿಂದ 2 ಕಪ್
    * ತುರಿದ ತೆಂಗಿನಕಾಯಿ – 1 ಕಪ್
    * ಪುಡಿ ಮಾಡಿದ ಬೆಲ್ಲ – 1/2 ಕಪ್

    * ತುಪ್ಪ – 1 ಟೀಸ್ಪೂನ್
    * ಏಲಕ್ಕಿ ಪುಡಿ – 2 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ಅರಿಶಿನ ಎಲೆಗಳು – 12

    ಮಾಡುವ ವಿಧಾನ:
    * ಅಗಲವಾದ ಬಾಣಲೆಯಲ್ಲಿ 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪಿನೊಂದಿಗೆ ನೀರನ್ನು ಕುದಿಸಿ. ಅದು ಕುದಿಯಲು ಪ್ರಾರಂಭಿಸಿದಾಗ ಅಕ್ಕಿ ಹಿಟ್ಟನ್ನು ಸೇರಿಸಿ.
    * ಒಂದು ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ, ಸ್ಟವ್ ಆಫ್ ಮಾಡಿ. ಪಕ್ಕಕ್ಕೆ ಇರಿಸಿ.
    * ಬಾಣಲೆಗೆ ತುರಿದ ತೆಂಗಿನಕಾಯಿ, ಏಲಕ್ಕಿ ಪುಡಿ ಮತ್ತು ಬೆಲ್ಲವನ್ನು ಹಾಕಿ ಬಿಸಿ ಮಾಡಿ.


    * ಮಧ್ಯಮ ಉರಿಯಲ್ಲಿ ಕೆಲವು ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿ. ಮೃದುವಾದ ಉಂಡೆಯಾದಾಗ ಅಥವಾ ಹೆಚ್ಚುವರಿ ನೀರು ಒಣಗಿದಾಗ ಸ್ಟವ್ ಆಫ್ ಮಾಡಿ. ಅದನ್ನು ತುಂಬಾ ಒಣಗಿಸಬೇಡಿ ಏಕೆಂದರೆ ತಂಪಾಗಿಸಿದ ನಂತರ ಅದು ಗಟ್ಟಿಯಾಗುತ್ತದೆ. ಹೂರಣ ಸಿದ್ಧವಾಗಿದ್ದು, ಪಕ್ಕಕ್ಕೆ ಇರಿಸಿ.
    * ಅಕ್ಕಿ ಹಿಟ್ಟಿನ ಹಿಟ್ಟು ಬೆಚ್ಚಗಾದ ಮೇಲೆ ನಿಮ್ಮ ಕೈಗಳನ್ನು ತುಪ್ಪದಿಂದ ಅದ್ದಿ ಹಿಟ್ಟು ಮೃದುವಾಗಿ ನಾದಿಕೊಳ್ಳಿ.
    * ಈಗ ಸ್ವಚ್ಛಗೊಳಿಸಿದ ಅರಿಶಿನ ಎಲೆಯ ಮೇಲೆ ನಿಂಬೆ ಗಾತ್ರದ ಅಕ್ಕಿ ಹಿಟ್ಟಿನ ಉಂಡೆಯನ್ನು ಇರಿಸಿ. ನಿಮ್ಮ ಕೈಯಿಂದ ಉಂಡೆಯನ್ನು ಹರಡಿ. ಅದರ ಒಳಗೆ ಹೊರಣವನ್ನು ಹಾಕಿ. ಎಲೆಯ ಜೊತೆಗೆ 10 ರಿಂದ 12 ನಿಮಿಷಗಳ ಕಾಲ ಇಡ್ಲಿ ಪಾತ್ರಯಲ್ಲಿ ಬೇಯಿಸಿ.

    – ಈಗ ವಿಶೇಷವಾದ ಹಬ್ಬದ ಅಡುಗೆ ‘ಅರಿಶಿನ ಎಲೆಕಾಯಿ ಕಡುಬು’ ಸವಿಯಲು ಸಿದ್ಧ.

    Live Tv
    [brid partner=56869869 player=32851 video=960834 autoplay=true]