Tag: ಭಿಕ್ಷುಕಿ

  • ಮದ್ಯ ಕುಡಿಸಿ ಭಿಕ್ಷುಕಿ ಮೇಲೆ ಎರಗಿದ ಪಾಪಿ ಕಾಮುಕ ಅರೆಸ್ಟ್

    ಮದ್ಯ ಕುಡಿಸಿ ಭಿಕ್ಷುಕಿ ಮೇಲೆ ಎರಗಿದ ಪಾಪಿ ಕಾಮುಕ ಅರೆಸ್ಟ್

    ಯಾದಗಿರಿ: ಭಿಕ್ಷುಕಿಯ ಮೇಲೆ ಅತ್ಯಾಚಾರ ಮಾಡಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

    ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದಲ್ಲಿ ನವೆಂಬರ್ 23ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮುಕ ಹನುಮಂತ್(40) ರಾತ್ರಿ ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ ತಾನು ಕುಡಿದು ರೇಪ್ ಮಾಡಿದ್ದಾನೆ. ಭಿಕ್ಷುಕಿ ನಿರಾಕರಿಸಿದ್ದರೂ, ಆಕೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದಾನೆ.

    ಹನುಮಂತ್ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ನಿವಾಸಿಯಾಗಿದ್ದು, ಸ್ಥಳೀಯರು ಪ್ರಶ್ನಿಸಿದ್ದಾಗ ಭಿಕ್ಷುಕಿಯನ್ನು ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ್ದ. ಆದರೆ ಅನುಮಾನ ಬಂದ ಸ್ಥಳೀಯರು ಪೊಲೀಸರನ್ನ ಸ್ಥಳಕ್ಕೆ ಕರೆಸಿ ಕಾಮುಕನನ್ನು ಒಪ್ಪಿಸಿದ್ದಾರೆ. ಇದನ್ನೂ ಓದಿ:  ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ


    ನವೆಂಬರ್ 24 ರಂದು ಘಟನೆ ನಡೆದಿದ್ದು, ಮಾರನೇ ದಿನ ಬೆಳಗ್ಗೆ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಳಿಕ ಕಾಮುಕನನ್ನ ಪೊಲೀಸರು ಬಂಧಿಸಿದ್ದಾರೆ.

  • ದೇಗುಲಕ್ಕೆ ಬಂದ ಭಿಕ್ಷುಕಿಯನ್ನು ಬೈದು ಹೊರಗೆ ಕಳುಹಿಸಿದ್ರೂ ಆಕೆ ಕೊಟ್ಳು 10 ಸಾವಿರ ರೂ.!

    ದೇಗುಲಕ್ಕೆ ಬಂದ ಭಿಕ್ಷುಕಿಯನ್ನು ಬೈದು ಹೊರಗೆ ಕಳುಹಿಸಿದ್ರೂ ಆಕೆ ಕೊಟ್ಳು 10 ಸಾವಿರ ರೂ.!

    ಚಿಕ್ಕಮಗಳೂರು: ಆಂಜನೇಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ದಿನ ಭಿಕ್ಷುಕಿಯೊಬ್ಬರು ದೇವಸ್ಥಾನದ ಅಧ್ಯಕ್ಷ ಎಲ್ಲಿ ಅಧ್ಯಕ್ಷ ಎಲ್ಲಿ ಎಂದು ಹುಡುಕುತ್ತಿದ್ದರು. ಎಲ್ಲರೂ ಭಿಕ್ಷೆ ಕೆಳುವುದಕ್ಕೆ ಎಂದು ಭಾವಿಸಿ ಆಕೆಗೆ ಬೈದು ಕಳುಹಿಸುತ್ತಿದ್ದರು. ಆದರೆ, ಆಕೆ ಅಧ್ಯಕ್ಷ ಸಿಗಲಿಲ್ಲ ಎಂದು ಸೀದಾ ದೇವಸ್ಥಾನದ ಒಳಗೆ ಹೋಗಿ ಅಲ್ಲಿದ್ದ ಸ್ವಾಮಿಜಿ ಬಳಿ 500 ಮುಖ ಬೆಲೆಯ 20 ನೋಟುಗಳನ್ನು ನೀಡಿ ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಮನವಿ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.


    ನಿನ್ನೆ ಜಿಲ್ಲೆಯ ಕಡೂರು ಪಟ್ಟಣದ ಕೋಟೆ ಪಾತಾಳಾಂಜನೇಯ ಸ್ವಾಮಿ ದೇಗುಲದ ಪುನರ್ ಪ್ರತಿಷ್ಠಾಪನ ಮಹೋತ್ಸವ ನಡೆಯಿತು. ಈ ವೇಳೆ ಭಿಕ್ಷುಕಿಯೊಬ್ಬರು ದೇವಸ್ಥಾನಕ್ಕೆ 10 ಸಾವಿರ ದೇಣಿಗೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ದೇವಸ್ಥಾನಕ್ಕೆ ದೇಣಿಗೆ ನೀಡಿದ 80 ವರ್ಷ ಪ್ರಾಯದ ಭಿಕ್ಷುಕಿ ಹೆಸರು ಕೆಂಪಜ್ಜಿ. ಕಡೂರು ಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ವೃದ್ಧೆ. ಆಂಜನೇಯ ಸ್ವಾಮಿಯ ದೇಗುಲದ ಕಾರ್ಯಕ್ರಮದ ವೇಳೆ ಹೊರಗೆ ಕುಳಿತಿದ್ದ ಅಜ್ಜಿ ಹೋಗಿ-ಬರುವವರನ್ನೆಲ್ಲಾ ಅಧ್ಯಕ್ಷರು ಎಲ್ಲಿ ಎಂದು ಕೇಳುತ್ತಿದ್ದಳು. ಹಣ ಕೇಳಲು ಎಂದೇ ತಿಳಿದು ಎಲ್ಲರೂ ವೃದ್ಧೆಯನ್ನು ದೂರ ಹೋಗಲು ಹೇಳುತ್ತಿದ್ದರು. ಆದರೆ, ಆ ಭಿಕ್ಷುಕಿ ನೇರವಾಗಿ ದೇಗುಲದೊಳಗೆ ಹೋಗಿ ಅಲ್ಲಿದ್ದ ದತ್ತ ವಾಸುದೇವ ಸ್ವಾಮೀಜಿಗೆ 500 ಮುಖಬೆಲೆಯ 20 ನೋಟುಗಳನ್ನು ಕಾಣಿಕೆ ಎಂದು ನೀಡಿದಾಗ ಎಲ್ಲರಿಗೂ ಆಶ್ಚರ್ಯ. ಮೂಕವಿಸ್ಮಿತರಾಗಿ ನಿಂತರು. ಕೆಂಪಜ್ಜಿಯ ದೊಡ್ಡತನಕ್ಕೆ ಎಲ್ಲರಿಂದಲೂ ಮೆಚ್ಚುಗೆ ದೊರೆಯಿತು. ಇದನ್ನೂ ಓದಿ: ಪಕ್ಷಕ್ಕೆ ಬರುವಂತೆ ಪುನೀತ್‍ಗೆ ಹಲವು ಬಾರಿ ಗಾಳ ಹಾಕಿದ್ದೆ: ಡಿಕೆಶಿ

    ಕೆಂಪಜ್ಜಿ 2019ರಲ್ಲಿ ಪಾತಾಳಾಂಜನೇಯ ದೇಗುಲ ಜೀರ್ಣೋದ್ಧಾರ ಆರಂಭವಾದಾಗಲೂ ಹತ್ತು ಸಾವಿರ ನೀಡಿದ್ದರು. ಪಟ್ಟಣದ ಸಾಯಿಬಾಬಾ ದೇವಾಲಯದ ಬಳಿ ಭಿಕ್ಷೆ ಬೇಡುವ ಕೆಂಪಜ್ಜಿಗೆ ಪಟ್ಟಣದ ವಿನಾಯಕ ಹೋಟೆಲ್ ಮಾಲೀಕ ಭಾಸ್ಕರ್ ಪ್ರತಿದಿನ ತಿಂಡಿ-ಊಟ ನೀಡುತ್ತಾರೆ. ಅಜ್ಜಿಗೆ ಆರೋಗ್ಯ ಸಮಸ್ಯೆಯಾದಾಗಲೂ ಇದೇ ಭಾಸ್ಕರ್ ಚಿಕಿತ್ಸೆ ಕೊಡಿಸುತ್ತಾರೆ. ದೇಗುಲಕ್ಕೆ ಸಾವಿರಾರು ಜನ ಲಕ್ಷಾಂತರ ಹಣ ನೀಡಬಹುದು. ಆದರೆ, ಈ 10 ಸಾವಿರ ತುಂಬಾ ಮೌಲ್ಯಯುತವಾದದ್ದು ಎಂದು ಭಕ್ತರು ಭಾವಿಸಿದ್ದಾರೆ. ತಾನು ನೀಡಿದ 10 ಸಾವಿರ ಹಣದಲ್ಲಿ ಆಂಜನೇಯ ಸ್ವಾಮಿಗೆ ಬೆಳ್ಳಿ ಮುಖವಾಡ ಮಾಡಿಸಿ ಹಾಕಬೇಕೆಂದು ಕೆಂಪಜ್ಜಿ ಬೇಡಿಕೊಂಡಿದ್ದಾಳೆ. ಆರಂಭದಲ್ಲಿ ಭಿಕ್ಷುಕಿಗೆ ಬೈತಿದ್ದ ಜನ ಕೊನೆಗೆ ಆಕೆ ಜೊತೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಖಷಿಪಟ್ಟಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್

  • ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕಿ ಮೇಲೆ ರೇಪ್ – ಸ್ಥಳೀಯರು ನೋಡ್ತಿದ್ದಂತೆ ಪರಾರಿ..!

    ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕಿ ಮೇಲೆ ರೇಪ್ – ಸ್ಥಳೀಯರು ನೋಡ್ತಿದ್ದಂತೆ ಪರಾರಿ..!

    ಕೋಲಾರ: ಅಪರಿಚಿತ ಯುವಕನೊಬ್ಬ ವೃದ್ಧೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಕೆಜಿಎಫ್ ತಾಲೂಕಿನ ಬೆಟ್ಕೂರು ತಂಗುದಾಣದಲ್ಲಿ ಈ ಘಟನೆ ನಡೆದಿದೆ.

    ಮಾನಸಿಕ ಅಸ್ವಸ್ಥಗೊಂಡಿರುವ ವೃದ್ಧೆ ನಿಲ್ದಾಣದಲ್ಲಿ ಮಲಗಿದ್ದರು. ಈ ವೇಳೆ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ತಂಗುದಾಣದಲ್ಲಿ ಏನೋ ಶಬ್ದವಾಗುತ್ತಿರುವುದನ್ನ ಗಮನಿಸಿದ ಸ್ಥಳೀಯರು, ಯುವಕನ ಕಾಮ ಕೃತ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಈ ವೇಳೆ ಸ್ಥಳೀಯರನ್ನ ಕಂಡು ಪ್ಯಾಂಟ್ ಹಾಕಿಕೊಳ್ಳದೆ ಆರೋಪಿ ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿನಿಮಾ ಅಥವಾ ಜಾಹೀರಾತಿಗೆ ಸಂಬಂಧಿಸಿದ ಪೋಸ್ಟರ್ ಅಂಟಿಸಲು ಅಪರಿಚಿತ ಆಟೋವೊಂದರಲ್ಲಿ ಬಂದಿದ್ದಾನೆ. ಯುವಕನಿಗೆ ಆಟೋ ಚಾಲಕ ಕೂಡ ಸಾಥ್ ನೀಡಿದ್ದು, ಸದ್ಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳನ್ನ ಗುರುತಿಸಿದ್ದು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

  • ಭಿಕ್ಷುಕಿಗೆ ಕೊರೊನಾ ಸೋಂಕು – ಖಾಕಿ ಪಡೆಗೆ ಆತಂಕ

    ಭಿಕ್ಷುಕಿಗೆ ಕೊರೊನಾ ಸೋಂಕು – ಖಾಕಿ ಪಡೆಗೆ ಆತಂಕ

    ಹುಬ್ಬಳ್ಳಿ: ಜಿಲ್ಲೆಯಲ್ಲಿ 75 ವರ್ಷದ ಭಿಕ್ಷುಕಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರಿಗೂ ಕೊರೊನಾ ಆತಂಕ ಶುರುವಾಗಿದೆ.

    ಹೌದು ಜೂನ್ 12ರಂದು ತುಮಕೂರು ಮೂಲದ ವೃದ್ಧೆ ಹುಬ್ಬಳ್ಳಿಗೆ ಬಂದಿದ್ದರು. ಆ ಭಿಕ್ಷುಕಿಗೆ ಈಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ವಾಹನದಲ್ಲಿ ಕರೆತಂದು ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿಸಿದ್ದ ಪೊಲೀಸರಿಗೆ ಆತಂಕ ಪ್ರಾರಂಭವಾಗಿದೆ. ನಾಲ್ವರು ಪೊಲೀಸರು ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ವೃದ್ಧ ಮಹಿಳೆ ಕಳೆದ ಹಲವಾರು ದಿನಗಳ ಹಿಂದೆಯೇ ತುಮಕೂರಿನಿಂದ ಆಗಮಿಸಿ ಹುಬ್ಬಳ್ಳಿಯಲ್ಲಿ ತಂಗಿದ್ದರು.

    ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದ ಭಿಕ್ಷುಕಿಗೆ ಸೋಂಕು ದೃಢಪಟ್ಟಿರುವ ಹಿನ್ನಲೆ ಖಾಕಿ ಪಡೆಗೂ ಕೊರೊನಾ ಆತಂಕ ಶುರುವಾಗಿದೆ. ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಎಲ್ಲ ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಿಸಲಾಗುತಿದ್ದು, ಬೆಂಡಿಗೇರಿ ಠಾಣೆಯ 40ಕ್ಕೂ ಹೆಚ್ಚು ಸಿಬ್ಬಂದಿಗೆ ಗಂಟಲು ದ್ರವನ್ನು ಟೆಸ್ಟ್ ಗೆ ಕೂಡ ಕಳುಹಿಸಲಾಗಿದೆ.

  • ದೇವಾಲಯದ ಹೊರಗಡೆಯಿದ್ದ ಭಿಕ್ಷುಕಿ ಕೈಯಲ್ಲಿತ್ತು 12 ಸಾವಿರ, ಕ್ರೆಡಿಟ್ ಕಾರ್ಡ್ – ಬ್ಯಾಂಕಲ್ಲಿದೆ 2 ಲಕ್ಷ!

    ದೇವಾಲಯದ ಹೊರಗಡೆಯಿದ್ದ ಭಿಕ್ಷುಕಿ ಕೈಯಲ್ಲಿತ್ತು 12 ಸಾವಿರ, ಕ್ರೆಡಿಟ್ ಕಾರ್ಡ್ – ಬ್ಯಾಂಕಲ್ಲಿದೆ 2 ಲಕ್ಷ!

    ಹೈದರಾಬಾದ್: ಇತ್ತೀಚೆಗೆ ಭಿಕ್ಷುಕರು ಸಾಕಷ್ಟು ಹಣ ಸಂಪಾದಿಸಿರುವ ಅನೇಕ ಸುದ್ದಿಗಳನ್ನು ಓದಿದ್ದೇವೆ. ಅದೇ ರೀತಿ ಇದೀಗ ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ.

    ವೃದ್ಧೆಯನ್ನು ಪಾರ್ವತಮ್ಮ(70) ಎಂದು ಗುರುತಿಸಲಾಗಿದೆ. ಪ್ರತಿ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಬಳಿ ಭಿಕ್ಷೆ ಬೇಡಿ ಈ ಹಣ ಸಂಪಾದಿಸಿರುವುದಾಗಿ ವೃದ್ಧೆ ತಿಳಿಸಿದ್ದಾರೆ. ಇವರು ಆಧಾರ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಕೂಡ ಹೊಂದಿದ್ದಾರೆ.

    ಪಾರ್ವತಮ್ಮ ದೇವಸ್ಥಾನದ ಹೊರಗಡೆ ಭಕ್ತರ ಬಳಿ ದಯವಿಟ್ಟು ಹಣ ನೀಡಿ, ಸಹಾಯ ಮಾಡಿ ಎಂದು ಬೇಡುತ್ತಿರುವುದನ್ನು ಪೊಲೀಸರು ಕೂಡ ಗಮನಿಸಿದ್ದಾರೆ. ಇದನ್ನೂ ಓದಿ: 10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ

    ವೃದ್ಧೆ ಬಳಿ ಬ್ಯಾಂಕ್ ಅಕೌಂಟ್ ಇದ್ದು, ಅದರಲ್ಲಿ 2 ಲಕ್ಷ ರೂ. ಇದೆ. ಅಲ್ಲದೆ ವೃದ್ಧೆಯ ಕೈಯಲ್ಲಿ ಸರಿ ಸುಮಾರು 12 ಸಾವಿರ ರೂ. ಇತ್ತು. ಇವರು ಮೂಲತಃ ತಮಿಳುನಾಡಿನ ಕಲ್ಲಿಕುರಿಚಿಯವಾಗಿದ್ದಾರೆ. ಇವರ ಪತಿ 40 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಆ ನಂತರ ಈಕೆ ಪಾಂಡಿಚೇರಿಯ ಬೀದಿಯಲ್ಲಿ ತಿರುಗಾಡಲು ಆರಂಭಿಸಿದ್ದಾರೆ ಎಂದು ಎಸ್ ಪಿ ಮರನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಪಾರ್ವತಮ್ಮ ಅವರು ಕಳೆದ 8 ವರ್ಷಗಳಿಂದ ದೇವಸ್ಥಾನದ ಹೊರಗಡೆ ವಾಸಿಸುತ್ತಿದ್ದಾರೆ. ಅಲ್ಲದೆ ಅಪರಿಚಿತರು ಕೊಟ್ಟ ಆಹಾರದಿಂದಲೇ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಹಣವಿರುವ ಬಗ್ಗೆ ನಮಗೆ ತಿಳಿದಿತ್ತು ಎಂದು ಸ್ಥಳೀಯ ಅಂಗಡಿಯವರು ಹೇಳಿದ್ದಾರೆ.

    ಒಟ್ಟಿನಲ್ಲಿ ಇದೀಗ ವೃದ್ಧೆಯನ್ನು ರಕ್ಷಣೆ ಮಾಡಲಾಗಿದ್ದು, ಕಲ್ಲಕುರುಚಿಯ ಗ್ರಾಮದಲ್ಲಿರುವ ಅವರ ಮನೆಯವರಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ:  ಮೃತಪಟ್ಟ ಭಿಕ್ಷುಕನ ಬ್ಯಾಗಲ್ಲಿ ಸಿಕ್ತು 3 ಲಕ್ಷ ರೂ.

  • ಭಿಕ್ಷೆಯ ನೆಪದಲ್ಲಿ 20 ಸಾವಿರ ರೂ. ನೊಂದಿಗೆ ಬಾಲಕಿ ಎಸ್ಕೇಪ್!

    ಭಿಕ್ಷೆಯ ನೆಪದಲ್ಲಿ 20 ಸಾವಿರ ರೂ. ನೊಂದಿಗೆ ಬಾಲಕಿ ಎಸ್ಕೇಪ್!

    ಬೆಂಗಳೂರು: ಇನ್ಮುಂದೆ ಭಿಕ್ಷೆ ಬೇಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು. ಯಾಕಂದ್ರೆ ಭಿಕ್ಷೆ ಬೇಡುವ ನೆಪದಲ್ಲಿ ಇಲ್ಲೊಬ್ಬಳು ಬಾಲಕಿ 20 ಸಾವಿರ ರೂ. ಎಗರಿಸಿದ ಘಟನೆ ನಡೆದಿದೆ.

    ಹೌದು. ಆರ್ ಟಿ ನಗರದಲ್ಲಿರೋ ಟೆಂಡರ್ ಚಿಕನ್ ಅಂಗಡಿಯಲ್ಲಿ ಬಾಲಕಿ ತನ್ನ ಕೈಚಳಕ ತೋರಿಸಿದ್ದಾಳೆ. ಭಿಕ್ಷೆ ಬೇಡುವ ನೆಪದಲ್ಲಿ ಬಂದ ಬಾಲಕಿ 20 ಸಾವಿರಕ್ಕೂ ಹೆಚ್ಚು ಹಣ ದೋಚಿ ಪರಾರಿಯಾಗಿದ್ದಾಳೆ. ಭಿಕ್ಷುಕಿ ಬಾಲಕಿಯ ಕೈ ಚಳಕ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿಸಿಟಿವಿಯಲ್ಲೇನಿದೆ?: ಮಹಿಳೆಯೊಂದಿಗೆ ಅಂಗಡಿಗೆ ಬಂದ ಬಾಲಕಿ ಮೊದಲು ಡ್ರಾಯರ್ ಎಳೆದು ಹಣವನ್ನು ನೋಡುತ್ತಾಳೆ. ಕೂಡಲೇ ಇನ್ನೊಂದು ಡ್ರಾಯರ್ ಎಳೆದು ಅದರಲ್ಲೂ ಹಣವಿದೆಯಾ ಎಂದು ಪರೀಕ್ಷಿಸುತ್ತಾಳೆ. ಆ ನಂತರ ಮೊದಲು ತೆರೆದ ಡ್ರಾಯರ್ ನಲ್ಲಿದ್ದ ನೋಟುಗಳ ಕಂತೆಗಳನ್ನು ತನ್ನ ಜೋಳಿಗೆಗೆ ತುಂಬಿಸಿಕೊಂಡು ಯಾರಾದ್ರೂ ನೋಡುತ್ತಾರೆಯೇ ಅಂತ ಅತ್ತ ಇತ್ತ ನೋಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.

    https://www.youtube.com/watch?v=9inMbngzJQc&feature=youtu.be