Tag: ಭಿಕ್ಷುಕ

  • ಬೆಳಗಾವಿ | ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಲಾರಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಳಗಾವಿ | ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಲಾರಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಳಗಾವಿ: ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಲಾರಿಯೊಂದು ಹರಿದು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ಬೆಳಗಾವಿ ನಗರದ ಕೃಷ್ಣದೇವರಾಯ ವೃತ್ತದ ಸಿಗ್ನಲ್‌ನಲ್ಲಿ ವೃದ್ಧನೋರ್ವ ಭಿಕ್ಷೆ ಬೇಡುತ್ತಿದ್ದರು. ಈ ವೇಳೆ ಸಿಗ್ನಲ್ ಬಿಡುತ್ತಿದ್ದಂತೆ ವೃದ್ಧ ರಸ್ತೆ ದಾಟುತ್ತಿದ್ದರು. ಇದೇ ಸಮಯಕ್ಕೆ ಲಾರಿ ಚಾಲಕನೋರ್ವ ಲಾರಿಯನ್ನು ಮುಂದೆ ಚಲಾಯಿಸಿದ ಪರಿಣಾಮ ಭಿಕ್ಷುಕ ಲಾರಿ ಚಕ್ರದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಅಲ್ಲಿಯೇ ಇದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ – 30 ಲಕ್ಷ ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್ ಅರೆಸ್ಟ್

    ಸದ್ಯ ಬೆಳಗಾವಿ ಉತ್ತರ ಸಂಚಾರಿ ಪೊಲೀಸರು ಅಪಘಾತ ಮಾಡಿದ ಲಾರಿ, ಲಾರಿ ಚಾಲಕನನ್ನ ವಶಕ್ಕೆ ಪಡೆದಿದ್ದು, ಅಪರಿಚಿತ ಭಿಕ್ಷುನ ಗುರುತು ಪತ್ತೆ ಹಚ್ಚುತ್ತಿದ್ದಾರೆ.

  • Uttar Pradesh| 6 ಮಕ್ಕಳ ಮಹಾತಾಯಿ ಭಿಕ್ಷುಕನೊಂದಿಗೆ ಪರಾರಿ

    Uttar Pradesh| 6 ಮಕ್ಕಳ ಮಹಾತಾಯಿ ಭಿಕ್ಷುಕನೊಂದಿಗೆ ಪರಾರಿ

    ಲಕ್ನೋ: ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ಮಹಾತಾಯಿಯೊಬ್ಬಳು ಭಿಕ್ಷುಕನೊಂದಿಗೆ (Beggar) ಪರಾರಿಯಾದ ಘಟನೆ ಉತ್ತರ ಪ್ರದೇಶದ (Uttar Pradesh) ಹರ್ದೋಯ್ (Hardoi) ಜಿಲ್ಲೆಯಲ್ಲಿ ನಡೆದಿದೆ.

    ಸುಮಾರು 36 ವರ್ಷದ ಮಹಿಳೆ ರಾಜೇಶ್ವರಿ ಗಂಡ ಮತ್ತು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಳು. ಆದರೆ ಭಿಕ್ಷೆ ಕೇಳುವ ನೆಪದಲ್ಲಿ ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ ಮೇಲೆ ಪ್ರೇಮಾಂಕುರವಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಎದುರಾಳಿಗಳಿಗೆ ಮೊದಲ ಚೆಕ್‌ಮೆಟ್‌ – ಡಿನ್ನರ್‌ ಪಾಲಿಟಿಕ್ಸ್‌ಗೆ ಡಿಕೆಶಿ ಬ್ರೇಕ್‌

    ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್‌ಗೆ ತೆರಳಿದ ರಾಜೇಶ್ವರಿ ಏಕಾಏಕಿ ನಾಪತ್ತೆಯಾಗಿದ್ದಳು. ಪತ್ನಿ ಕಾಣಿಸದೇ ಆತಂಕಗೊಂಡ ಪತಿ ರಾಜು ಪೊಲೀಸ್ ಮೊರೆ ಹೋಗಿದ್ದಾರೆ. ತನ್ನ ಪತ್ನಿಯನ್ನು ಯಾರೋ ಅಪಹರಿಸಿದ್ದಾರೆ ಎಂದು ರಾಜು ದೂರು ನೀಡಿದ್ದರು. ಪತಿಯ ದೂರು ಆಧರಿಸಿ ತನಿಖೆಗಿಳಿದ ಪೊಲೀಸರ ಎದುರು ಸತ್ಯದ ಅನಾವರಣವಾಗಿದೆ. ಇದನ್ನೂ ಓದಿ: Kolar| ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಮೂವರು ಅರೆಸ್ಟ್

    ಪೊಲೀಸರ ತನಿಖೆ ವೇಳೆ ನಾಪತ್ತೆಯಾಗಿದ್ದ ರಾಜೇಶ್ವರಿ ನನ್ಹೇ ಪಂಡಿತ್ ಎಂಬ ಹೈಟೆಕ್ ಭಿಕ್ಷುಕನೊಂದಿಗೆ ಪತ್ತೆಯಾಗಿದ್ದಾಳೆ. ಈತ ಭಿಕ್ಷೆಯ ನೆಪದಲ್ಲಿ ಆಗಾಗಾ ಮನೆಯ ಮುಂದೆ ಬಂದು ರಾಜೇಶ್ವರಿ ಜೊತೆ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಮಹಿಳೆಗೆ ಈತನ ಮೇಲೆ ಪ್ರೀತಿಯಾಗಿದೆ. ಅಲ್ಲದೇ ಭಿಕ್ಷುಕ ಮೊಬೈಲ್ ಹೊಂದಿದ್ದರಿಂದ ಇಬ್ಬರೂ ಪರಸ್ಪರ ನಂಬರ್ ಶೇರ್ ಮಾಡಿಕೊಂಡು ಮೊಬೈಲ್‌ನಲ್ಲೇ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರೈತರಿಗೆ, ಬೆಂಗಳೂರಿಗರಿಗೆ ಸಿಹಿ ಸುದ್ದಿ – ಜನವರಿಯಲ್ಲೂ ಕೆಆರ್‌ಎಸ್‌ ಡ್ಯಾಂ ಭರ್ತಿ, ದಾಖಲೆ ನಿರ್ಮಾಣ

  • ಭಿಕ್ಷುಕನ ಯಡವಟ್ಟು – ಸ್ಫೋಟಕವೆಂದು ಕಲಾಸಿಪಾಳ್ಯಕ್ಕೆ ದೌಡಾಯಿಸಿದ ಪೊಲೀಸರು, ಬಾಂಬ್ ಸ್ಕ್ವಾಡ್‌ 

    ಭಿಕ್ಷುಕನ ಯಡವಟ್ಟು – ಸ್ಫೋಟಕವೆಂದು ಕಲಾಸಿಪಾಳ್ಯಕ್ಕೆ ದೌಡಾಯಿಸಿದ ಪೊಲೀಸರು, ಬಾಂಬ್ ಸ್ಕ್ವಾಡ್‌ 

    ಬೆಂಗಳೂರು: ಯಾವುದೋ ಸ್ಫೋಟಕ ವಸ್ತು ಎಂದು ಭಿಕ್ಷುಕ (Beggar) ಮಾಡಿದ ಯಡವಟ್ಟಿಗೆ ಪೊಲೀಸರು (Police)  ಮತ್ತು ಬಾಂಬ್ ಸ್ಕ್ವಾಡ್‌  (Bomb Squad) ಕಲಾಸಿಪಾಳ್ಯಕ್ಕೆ  (Kalasipalya) ಆಗಮಿಸಿದ ಪ್ರಸಂಗ ಇಂದು ನಡೆದಿದೆ.

    ಕಲಾಸಿಪಾಳ್ಯದ ಖಾಸಗಿ ಬ್ಯಾಂಕ್ ಬಳಿ ಎಟಿಎಂಗೆ ಹಣ ತುಂಬುವ ಮೂರು ಬಾಕ್ಸ್‌ಗಳು ಪತ್ತೆಯಾಗಿವೆ. ಬಾಕ್ಸ್‌ಗಳನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹತ್ತಿರ ಹೋಗದೇ ಬಾಂಬ್  ಸ್ಕ್ವಾಡ್‌ಗೆ ಮಾಹಿತಿ ನೀಡಿದ್ದಾರೆ. ಒಂದು ಹಣವಿರಬೇಕು, ಇಲ್ಲವಾದರೆ ಏನಾದರೂ ಸ್ಫೋಟಕವಿರಬಹುದು ಎಂಬ ಶಂಕೆ ಇತ್ತು. ಇದನ್ನೂ ಓದಿ: ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ

    ನಂತರ ಸ್ಥಳಕ್ಕೆ ಆಗಮಿಸಿದ ಬಾಂಬ್‌ ಸ್ಕ್ವಾಡ್‌ ಮತ್ತು ಪೊಲೀಸರು ಸೇರಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಅವು ಖಾಲಿ ಬಾಕ್ಸ್‌ಗಳು ಎಂದು ಪತ್ತೆಯಾಗಿದೆ. ಬಳಿಕ ಸ್ಥಳೀಯ ಸಿಸಿಟಿವಿಯನ್ನು ನೋಡಿದ್ದಾಗ ಭಿಕ್ಷುಕನೊಬ್ಬ ಮೂರು ಬಾಕ್ಸ್‌ಗಳನ್ನು ತಂದಿಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಿಗೆ ಬಂತು ಡ್ರೈವರ್‌ಲೆಸ್ ಮೆಟ್ರೋ

    ಎಟಿಎಂಗೆ ಹಣ ತುಂಬಲು ಬಳಸುವ ಬಾಕ್ಸ್‌ಗಳು ಭಿಕ್ಷುಕನ ಬಳಿ ಹೇಗೆ ಬಂತು ಎನ್ನುವುದರ ಬಗ್ಗೆ ಕಲಾಸಿಪಾಳ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: 89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

  • ತಿರುಪತಿಯ ಬೀದಿಯಲ್ಲಿ ಭಿಕ್ಷುಕನಂತೆ ತಿರುಗಿದ ಖ್ಯಾತ ನಟ

    ತಿರುಪತಿಯ ಬೀದಿಯಲ್ಲಿ ಭಿಕ್ಷುಕನಂತೆ ತಿರುಗಿದ ಖ್ಯಾತ ನಟ

    ಸ್ತೆ ತುಂಬಾ ಜನರು. ತಿರುಪತಿ (Tirupati) ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದವರೆಲ್ಲ ಟ್ರಾಫಿಕ್ ಜಾಮ್ ನಿಂದ ಪರದಾಡಬೇಕಾಯಿತು. ಈ ನಡುವೆ ಭಿಕ್ಷಕುನಂತೆ ಬೀದಿ ಬೀದಿಯಲ್ಲಿ ಅಲೆಯುತ್ತಿದ್ದರು ತಮಿಳಿನ ಖ್ಯಾತ ನಟ ಧನುಷ್ (Dhanush). ಅವರ ನಟನೆ 51ನೇ ಸಿನಿಮಾ ತಿರುಪತಿಯಲ್ಲಿ ನಡೆಯುತ್ತಿದ್ದು, ಭಿಕ್ಷುಕನಂತೆ ಕಾಣುತ್ತಿದ್ದ ದೃಶ್ಯವನ್ನು ಬೀದಿಯಲ್ಲಿ ಸೆರೆ ಹಿಡಿಯಲಾಗಿದೆ.

    ಬೀದಿಯಲ್ಲಿ ಚಿತ್ರೀಕರಣ (Shooting) ಮಾಡುತ್ತಿದ್ದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದಾರೆ. ಚಿತ್ರತಂಡಕ್ಕೆ ಹಿಡಿಶಾಪ ಹಾಕಿದ್ದಾರೆ. ಪೊಲೀಸರು ಶೂಟಿಂಗ್ ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದಾರೆ. ಇಷ್ಟೆಲ್ಲ ನಡೆದರೂ, ಚಿತ್ರೀಕರಣ ಯಶಸ್ವಿಯಾಗಿದೆ ಎನ್ನುವುದು ಸಮಾಧಾನ ತರುವಂಥದ್ದು.

    ಇದೊಂದು ಮಾಫಿಯಾ ಕಥೆಯನ್ನು ಹೊಂದಿರುವ ಸಿನಿಮಾವಾಗಿದ್ದು, ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಮತ್ತೊಂದು ತಮಿಳು ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ.

     

    ಶೂಟಿಂಗ್ ಮುಗಿಯುತ್ತಿದ್ದಂತೆಯೇ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ವಾಪಸ್ಸು ಚೆನ್ನೈಗೆ ತೆರೆಳಿದೆಯಂತೆ. ಬೀದಿಯಲ್ಲಿ ಶೂಟಿಂಗ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ.

  • ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನಿಗೆ ಥಳಿಸಿದ ಸಾರ್ವಜನಿಕರು

    ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನಿಗೆ ಥಳಿಸಿದ ಸಾರ್ವಜನಿಕರು

    ಚಂಡೀಗಢ: ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚಂಡೀಗಢದ (Chhattisgarh) ದುರ್ಗ್‍ನಲ್ಲಿ ( Durg) ನಡೆದಿದೆ.

    ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಿಕ್ಷುಕನಿಗೆ ಥಳಿಸಿದ ಮೂವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 34 (ಏಕೋದ್ದೇಶವನ್ನು ಮುಂದುವರಿಸಲು ಅನೇಕ ವ್ಯಕ್ತಿಗಳು ಮಾಡಿದ ಕೃತ್ಯಗಳು), 294 (ಅಶ್ಲೀಲ ಕೃತ್ಯಗಳು ಮತ್ತು ಅಶ್ಲೀಲ ಪದಗಳನ್ನು ಬಳಸುವುದು), 506 (ಆಪರಾಧಿಕ ಭಯೋತ್ಪಾದನೆಗೆ ದಂಡನೆ) ಮತ್ತು 323 (ಸ್ವಯಿಚ್ಛೆಯಿಂದ ಗಾಯವನ್ನುಂಟು ಮಾಡಿದ್ದಕ್ಕೆ ದಂಡನೆ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

    POLICE JEEP

    ಬಳಿಕ ಭಿಕ್ಷುಕನನ್ನು ಸ್ಥಳೀಯ ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಇನ್ನೂ ಭಿಕ್ಷುಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಆತನನ್ನು ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಆತನ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ತಾಯಿ ಜೊತೆ ಅನೈತಿಕ ಸಂಬಂಧ – ಪಿಡಿಓ ಕೊಲೆ ಮಾಡಿದ `ಶೀಲವಂತ’ರು

    ಮಕ್ಕಳ ಕಳ್ಳನೆಂದು ಶಂಕಿಸಿ ಸ್ಥಳೀಯರು ಥಳಿಸಿರುವ ಎರಡನೇ ಘಟನೆ ಇದಾಗಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ಪೊಲೀಸರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಹಿಂದೆ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡಿದ ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ: ಸಿರಾಜುಲ್ ಹಕ್

    ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ: ಸಿರಾಜುಲ್ ಹಕ್

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಂತರಾಷ್ಟ್ರೀಯ ಭಿಕ್ಷುಕ ಎಂದು ಜಮಾಯತ್ ಮುಖ್ಯಸ್ಥ ಸಿರಾಜುಲ್ ಹಕ್ ವ್ಯಂಗ್ಯವಾಡಿದ್ದಾರೆ.

    ಪಾಕಿಸ್ತಾನದ ಹಣಕಾಸು ಸಂಕಷ್ಟ ಬೆಟ್ಟದಷ್ಟು ಮಿತಿಮೀರಿದ್ದು, ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ. ಆತ ಪ್ರಧಾನಿ ಹುದ್ದೆಯಿಂದ ತೊಲಗಿದರೆ ಮಾತ್ರ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ದೊರಕುವುದು ಎಂದೂ ಜಮಾಯತ್ ಮುಖ್ಯಸ್ಥ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಜ್ರ ಖಚಿತ ಐಫೋನ್ ಕದ್ದು ವಾಟ್ಸಪ್ ಸ್ಟೇಟಸ್‍ನಲ್ಲಿ ಸಿಕ್ಕಿ ಬಿದ್ರು 

    ಪಾಕಿಸ್ತಾನದಲ್ಲಿ ಆರ್ಥಿಕ ದುಸ್ಥಿತಿ ಹೇರಳವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಈಗಾಗಲೇ ಎರಡು ಮಿನಿ ಬಜೆಟ್‍ಗಳನ್ನು ಮಂಡಿಸಲಾಗಿದೆ. ದೇಶದ ವ್ಯಾಪಾರ ಕೊರತೆ ತಾಳತಪ್ಪಿದೆ. ಹಣದುಬ್ಬರ ಹೆಚ್ಚುತ್ತಲೇ ಇದೆ. ಇದನ್ನೆಲ್ಲಾ ಸರಿದೂಗಿಸಲು ಶತಕೋಟಿ ಡಾಲರ್ ಸಾಲ ಎತ್ತುವಳಿ ಯೋಜನೆ  ಮೂಲಕ ತಾನು ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಪಾಕ್ ಪ್ರಧಾನಿ ಸಾಭೀತು ಮಾಡುತ್ತಿದ್ದಾರೆ. ಇದನ್ನೂ ಓದಿ: ಪಾಕ್ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ: ಇಮ್ರಾನ್ ಖಾನ್

    ಪಾಕಿಸ್ತಾನ ಆರ್ಥಿಕತೆ ಸುಸ್ಥಿಗೆ ತರಲು ಹಿಂದಿನ ಸರ್ಕಾರದಿಂದಲೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಅದಾದ ಮೇಲೆ ತಾನು ಆರ್ಥಿಕತೆಯ ಚಾಂಪಿಯನ್ ಎಂದು ಡಾಯಿ ಕೊಚ್ಚಿಕೊಂಡು ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್‍ಗೂ ಸಹ ಏನೂ ಮಾಡಲು ಆಗಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಜಾಗೃತಿ ಮೂಡಿಸಿದ ಗೂಗಲ್ ಡೂಡಲ್

    ಕೆಲವು ದಿನಗಳ ಹಿಂದೆ ಇಮ್ರಾನ್ ಖಾನ್ ಭಾರತ ಆರ್ಥಿಕತೆಗಿಂದ ಪಾಕಿಸ್ಥಾನ ಆರ್ಥಿಕತೆ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ ಇದೇ ಬೆನ್ನಲ್ಲೇ ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ ಎಂದು ಜಮಾಯತ್ ಮುಖ್ಯಸ್ಥ ಸಿರಾಜುಲ್ ಹಕ್ ಟೀಕಿಸಿದ್ದಾರೆ.

  • ಭಿಕ್ಷುಕನನ್ನು ಸ್ವಾವಲಂಬಿಯನ್ನಾಗಿ ಮಾಡಿದ ವಿದ್ಯಾರ್ಥಿ

    ಭಿಕ್ಷುಕನನ್ನು ಸ್ವಾವಲಂಬಿಯನ್ನಾಗಿ ಮಾಡಿದ ವಿದ್ಯಾರ್ಥಿ

    ಹುಬ್ಬಳ್ಳಿ: ಭಿಕ್ಷೆ ಬೇಡುವವರನ್ನು ಕಂಡರೆ ಮೂದಲಿಸುವವರೇ ಹೆಚ್ಚು. ಆದರೆ ಭಿಕ್ಷುಕನಿಗೆ ವಿದ್ಯಾರ್ಥಿಯೊಬ್ಬ ತೂಕದ ಯಂತ್ರ ಕೊಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ ಅಪರೂಪದ ಘಟನೆಯೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನವನಗರದಲ್ಲಿ ಭಿಕ್ಷೆ ಬೇಡಿಕೊಂಡು ಅಲೆಯುತ್ತಿದ್ದ ಭೀಕ್ಷುಕನಿಗೆ ತೂಕದ ಯಂತ್ರ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಡುವ ಮೂಲಕ ವಿದ್ಯಾರ್ಥಿ ಸುನೀಲ್ ಜಿಂಗಾನಿ ಸಮಾಜ ಕಾರ್ಯ ಮಾಡಿ ಸುದ್ದಿಯಾಗಿದ್ದಾರೆ.

    ಶಿರಸಿ ಮೂಲದ ಗಂಗಾಧರಪ್ಪ ವಿಕಲಚೇತನಾಗಿದ್ದು, ಪ್ರತಿನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದನ್ನು ಅರಿತ ಸುನೀಲ್ ಜಂಗಾನಿ ಭೀಕ್ಷುಕನಿಗೂ ಉದ್ಯೋಗ ಕಲ್ಪಿಸಿ, ಬದುಕು ಕಟ್ಟಿಕೊಳ್ಳಲು ಆಸೆರೆಯಾಗುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.

    ಕಟಿಂಗ್ ಮಾಡಿಸಿ, ಎರಡು ಜೊತೆ ಹೊಸ ಬಟ್ಟೆ ಕೊಟ್ಟು, ಅವರಿಗೆ ಹೊಸ ರೂಪ ನೀಡಿದ್ದಾರೆ. ಅವರಿಗೆ ತೂಕದ ಯಂತ್ರ ಕೊಡಿಸಿ ಭಿಕ್ಷೆ ಬೇಡುವ ಬದಲು ಅದರಿಂದ ಬರುವ ಹಣದಿಂದ ಜೀವನ ನಿರ್ವಹಣೆ ಮಾಡಲು ತಿಳಿಸಿದ್ದಾರೆ.

    ಲಾಕ್ ಡೌನ್ ಸಮಯದಲ್ಲಿ ದಾನಿಗಳು, ಸ್ವಹೃದಯರು ಪ್ರತಿದಿನ ನಿರ್ಗತಿಕರಿಗೆ, ಬಡವರಿಗೆ, ಭಿಕ್ಷುಕರಿಗೆ ಮತ್ತು ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದರು. ಆದರೆ ಇಂತ ಬಡವರು ಹಾಗೂ ಭಿಕ್ಷುಕರಿಗೆ ನೆರವಾಗುವ ಕೆಲಸ ಮಾಡಲಿಲ್ಲ. ಆದರೆ ಇದುವರೆಗೂ ಯಾವುದೇ ಪ್ರಚಾರವಿಲ್ಲದೇ ಸುನೀಲ್ ಜಂಗಾನಿ ಎಲೆ ಮರೆಯ ಕಾಯಿಯಂತೆ ಜನ ಸಾಮಾನ್ಯರ ಸೇವೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಹೈವೇ ದರೋಡೆಕೋರರ ಹಾವಳಿಗೆ ಬೆಚ್ಚಿಬಿದ್ದ ಜನರು

  • ತಿರುಪತಿ ಸನ್ನಿಧಿಯಲ್ಲಿದ್ದ ಭಿಕ್ಷುಕನ ಮನೆಯಲ್ಲಿ ಸಿಕ್ತು 10 ಲಕ್ಷ ರೂ.!

    ತಿರುಪತಿ ಸನ್ನಿಧಿಯಲ್ಲಿದ್ದ ಭಿಕ್ಷುಕನ ಮನೆಯಲ್ಲಿ ಸಿಕ್ತು 10 ಲಕ್ಷ ರೂ.!

    – ಹಣ ನೋಡಿ ಟಿಟಿಡಿ ಅಧಿಕಾರಿಗಳಿಗೆ ಶಾಕ್

    ಹೈದರಾಬಾದ್: ತಿರುಪತಿ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಬಳಿ ಬರೋಬ್ಬರಿ 10 ಲಕ್ಷ ರೂ. ಪತ್ತೆಯಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಭಿಕ್ಷುಕ ಶ್ರೀನಿವಾಸ್ ಆಚಾರಿ ಮನೆಯಲ್ಲಿ ಲಕ್ಷ ಲಕ್ಷ ರೂ. ಹಣ ನೋಡಿದ ಅಧಿಕಾರಿಗಳೇ ಒಂದು ಬಾರಿ ದಂಗಾಗಿದ್ದಾರೆ. ಶೇಷಾಚಲ ನಗರದ ನಿವಾಸಿಯಾಗಿರುವ ಶ್ರೀನಿವಾಸ್, ಪ್ರತಿ ನಿತ್ಯ ತಿರುಪತಿ ದೇವರ ದರ್ಶನ ಪಡೆಯಲು ಬರುತ್ತಿದ್ದವರ ಬಳಿ ಭಿಕ್ಷೆ ಬೇಡುತ್ತಿದ್ದನು. ಅಲ್ಲದೆ ಈ ತನಿಗೆ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯಲ್ಲಿ ಕೂಡ ಮಂಜೂರು ಮಾಡಲಾಗಿತ್ತು.

    ಕಳೆದ ವರ್ಷ ಶ್ರೀನಿವಾಸ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದನು. ಹೀಗಾಗಿ ಆತನ ಕುಟುಂಬದ ಸದಸ್ಯರು ಯಾರೂ ಇಲ್ಲವೆಂಬುದನ್ನು ಅರಿತ ಟಿಟಿಡಿ ಅಧಿಕಾರಿಗಳು, ಆತನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 2 ಟ್ರಕ್ ಬಾಕ್ಸ್ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಇರುವುದನ್ನು ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

    ಈ ನೋಟುಗಳನ್ನು ಎಣಿಸಿದಾಗ ಸುಮಾರು 10 ಲಕ್ಷ ರೂ. ಇರುವುದು ಗೊತ್ತಾಗಿದೆ. ಅಲ್ಲದೆ 1,000 ಮುಖಬೆಲೆಯ ರದ್ದಾದ ನೋಟುಗಳು ಕೂಡ ಇದ್ದವು. ಹಾಗೆಯೇ 2 ಸಾವಿರ ಮುಖಬೆಲೆಯ ನೋಟುಗಳು ಕೂಡ ಸಾಕಷ್ಟಿದ್ದವು. ಸದ್ಯ ಅಧಿಕಾರಿಗಳು ಹಣವನ್ನು ಮುಟ್ಟುಗೋಲು ಹಾಕಿ ಟಿಟಿಡಿ ಝಕಾನೆಗೆ ಜಮೆ ಮಾಡಿದ್ದಾರೆ.

  • ರಕ್ತದ ಮಡುವಿನಲ್ಲಿ ಭಿಕ್ಷುಕನ ಮೃತದೇಹ ಪತ್ತೆ

    ರಕ್ತದ ಮಡುವಿನಲ್ಲಿ ಭಿಕ್ಷುಕನ ಮೃತದೇಹ ಪತ್ತೆ

    ವಿಜಯಪುರ: ಭಿಕ್ಷುಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.

    ನಗರದ ವಿಶ್ವೇಶ್ವರ ಕಾಲೋನಿ ಸಿಟಿಬಸ್ ನಿಲ್ದಾಣದಲ್ಲಿ ಭಿಕ್ಷುಕನ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಆದರ್ಶ ನಗರ ಪಿ ಎಸ್ ಐ ಶರಣಬಸಪ್ಪನವರಿಗೆ, ತನಿಖೆ ವೇಳೆ ಭಿಕ್ಷುಕ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಬಸ್ ನಿಲ್ದಾಣದಲ್ಲಿಯೇ ವಾಸಿಸುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ.

    ಆದರೆ ಭಿಕ್ಷುಕನ ಕೊಲೆಗೆ ಕಾರಣ ಏನು ಎಂಬ ಸತ್ಯ ತಿಳಿದು ಬಂದಿಲ್ಲ. ಮುಖ ಗುರುತು ಪತ್ತೆಯಾಗದ ಕಾರಣ ಪೊಲೀಸರು ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

  • ಭಿಕ್ಷೆ ಬೇಡ್ತಿದ್ದ ಪೊಲೀಸ್ ಅಧಿಕಾರಿಯನ್ನು ಪತ್ತೆ ಹಚ್ಚಿದ ಹಳೆಯ ಸಹೋದ್ಯೋಗಿಗಳು!

    ಭಿಕ್ಷೆ ಬೇಡ್ತಿದ್ದ ಪೊಲೀಸ್ ಅಧಿಕಾರಿಯನ್ನು ಪತ್ತೆ ಹಚ್ಚಿದ ಹಳೆಯ ಸಹೋದ್ಯೋಗಿಗಳು!

    – ಹೆಸರಿಡಿದು ಕರೆದ ವೇಳೆ ಬಯಲು
    – ಆಶ್ರಮದಲ್ಲಿ ಮನೀಶ್ ಮಿಶ್ರಾಗೆ ಚಿಕಿತ್ಸೆ

    ಭೋಪಾಲ್: ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಹಳೆಯ ಸಹೋದ್ಯೋಗಿಗಳು ಗುರುತಿಸಿ ರಕ್ಷಣೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

    ಭಿಕ್ಷುಕನ ರೀತಿಯಲ್ಲಿ ಪತ್ತೆಯಾದ ಪೊಲೀಸ್ ಅಧಿಕಾರಿಯನ್ನು ಮನೀಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಗ್ವಾಲಿಯರ್ ನ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ಹಳೆಯ ಸಹೋದ್ಯೋಗಿಗಳು ಅವರನ್ನು ಪತ್ತೆ ಹಚ್ಚಿದ್ದಾರೆ.

    ಮನೀಶ್ ಮಿಶ್ರಾ ಅವರು 2005ರಲ್ಲಿ ಏಕಾಏಕಿ ಕಾಣೆಯಾಗಿದ್ದರು. 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಮಿಶ್ರಾ, 2005ರಲ್ಲಿ ಮಾನಸಿಕ ಖಿನ್ನತೆಗೆ ಒಳಗಾದರು. ಕುಟುಂಬಸ್ಥರು ಹಲವೆಡೆ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಮಧ್ಯೆ ಒಂದು ದಿನ ಅವರು ಏಕಾಏಕಿ ಕುಟುಂಬಸ್ಥರಿಂದ ದೂರವಾದರು. ಹೀಗೆ ಕಣ್ಮರೆಯಾದ ಮಿಶ್ರಾ ಅವರನ್ನು ಎಷ್ಟೇ ಹುಡುಕಾಡಿದರೂ ಎಲ್ಲಿಯೂ ಸಿಕ್ಕಿರಲಿಲ್ಲ. ಪರಿಣಾಮ ಕುಟುಂಬ ಮನೀಶ್ ಹುಡುಕಾಡಿ ಕಂಗಾಲಾಗಿತ್ತು.

    ಇತ್ತ ಕಳೆದ ವಾರ ಮನೀಶ್ ಸಹೋದ್ಯೋಗಿಗಳಾದ ರತ್ನೇಶ್ ಸಿಂಗ್ ತೋಮರ್ ಹಾಗೂ ವಿಜಯ್ ಸಿಂಗ್ ಬಹದ್ದೂರ್ ಅವರು ತಮ್ಮ ಪಾಡಿಗೆ ಮಾತನಾಡುತ್ತಾ ಗ್ವಾಲಿಯರ್ ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹೀಗೆ ಬಂದನ್ ವಾಟಿಕ ಬಳಿ ಬರುತ್ತಿದ್ದಂತೆಯೇ ಅವರಿಗೆ ಹರಿದ ಬಟ್ಟೆಗಳನ್ನು ತೊಟ್ಟುಕೊಂಡು ನಡುಗುತ್ತಾ ಭಿಕ್ಷುಕನೊಬ್ಬ ಊಟ ನೀಡುವಂತೆ ಬೇಡುತ್ತಿರುವುದು ಕಂಡಿದೆ.

    ಇದನ್ನು ಗಮನಿಸಿದ ಇಬ್ಬರೂ ನೇರವಾಗಿ ವ್ಯಕ್ತಿಯ ಬಳಿ ತೆರಳಿ ಮಾತನಾಡಿದ್ದಾರೆ. ಅಲ್ಲದೆ ರತ್ನೇಶ್ ಸಿಂಗ್ ಥೋಮರ್ ಅವರು ತಾವು ಧರಿಸಿದ್ದ ಶೂ ಕೊಟ್ಟರೆ, ವಿಜಯ್ ಅವರು ತಮ್ಮ ಜಾಕೆಟ್ ನೀಡಿ ಅಲ್ಲಿಂದ ಹೊರಟಿದ್ದಾರೆ. ಆಗ ಧನ್ಯವಾದ ತಿಳಿಸಲೆಂದು ಭಿಕ್ಷುಕ, ಬಹದ್ದೂರ್ ಎಂದು ಕೂಗಿದ್ದಾರೆ. ಇದರಿಂದ ಅಚ್ಚರಿಗೊಂಡ ಇಬ್ಬರೂ ಮತ್ತೆ ಭಿಕ್ಷುಕನ ಬಳಿ ಬಂದು ತಮ್ಮ ಹೆಸರು ಹೇಳುವಂತೆ ಒತ್ತಾಯಿಸಿದ್ದಾರೆ.

    ಈ ವೇಳೆ ಭಿಕ್ಷುಕ ತಮ್ಮ ಹೆಸರು ಹೇಳಿದ್ದನ್ನು ನೋಡಿ ಇಬ್ಬರೂ ಅವಕ್ಕಾಗಿದ್ದಾರೆ. ಹೀಗೆ ಭಿಕ್ಷುಕನನ್ನು ಮಾತನಾಡಿಸಿದಾಗ, 15 ವರ್ಷಗಳಿಂದ ಕಾಣೆಯಾಗಿದ್ದ ಮನೀಶ್ ಎನ್ನುವುದು ಬಯಲಾಗಿದೆ. ತಮ್ಮ ಬ್ಯಾಚ್ ಮೆಟ್ ಎಂಬುದನ್ನು ಅರಿತ ರತ್ನೇಶ್ ಹಾಗೂ ವಿಜಯ್ ಕೂಡಲೇ ತಮ್ಮೊಂದಿಗೆ ಬರುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಮಿಶ್ರಾ ಮಾತ್ರ ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಹೀಗಾಗಿ ಅವರು ಮಿಶ್ರಾ ಅವರನ್ನು ಸಮಾಜ ಸೇವಾ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಸದ್ಯ ಮಿಶ್ರಾ ಅವರು ಆಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.