Tag: ಭಾಸ್ಕರ್ ಶೆಟ್ಟಿ

  • ಫಿನಿಕ್ಸ್ ಶೂಟಿಂಗ್ ವೇಳೆ ಅವಘಡ – ಪೆಟ್ರೋಲ್ ಬಾಂಬ್ ಎಸೆತಕ್ಕೆ ಭಾಸ್ಕರ್ ಶೆಟ್ಟಿಗೆ ಗಾಯ

    ಫಿನಿಕ್ಸ್ ಶೂಟಿಂಗ್ ವೇಳೆ ಅವಘಡ – ಪೆಟ್ರೋಲ್ ಬಾಂಬ್ ಎಸೆತಕ್ಕೆ ಭಾಸ್ಕರ್ ಶೆಟ್ಟಿಗೆ ಗಾಯ

    ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ `ಫಿನಿಕ್ಸ್’ (Phoenix) ಮೂಡಿಬರುತ್ತಿದೆ. ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಸದ್ಯ ಬೆಂಗಳೂರಿನ (Bengaluru) ವಡೇರಹಳ್ಳಿಯಲ್ಲಿ ನಡೆಯುತ್ತಿದೆ. ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ವೇಳೆ ಭಾರೀ ಅನಾಹುತವೊಂದು ನಡೆದಿದೆ.

    ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಭಾಸ್ಕರ್ ಶೆಟ್ಟಿ ಅವರ ಕಾಲಿಗೆ ಬೆಂಕಿ ತಗುಲಿದ್ದು, ಅಲ್ಲಿದ್ದವರ ಸಮಯ ಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾಲಿಗೆ ಪೆಟ್ಟಾಗಿದ್ದು, ಭಾಸ್ಕರ್ ಶೆಟ್ಟಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ಟೀಸರ್ ಬಿಡುಗಡೆ

    ಫಿನಿಕ್ಸ್ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ವಿಲನ್ ಅನ್ನು ಹಿಡಿಯಲು ನಾನು ಅವನಿರುವ ಸ್ಥಳಕ್ಕೆ ಹೋಗುತ್ತೇನೆ. ಆಗ ಅಲ್ಲಿದವರು ನನ್ನ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಸನ್ನಿವೇಶದ ಚಿತ್ರೀಕರಣ ಸಂದರ್ಭ. ಈ ಸಂದರ್ಭದಲ್ಲಿ ನನ್ನ ಕಾಲಿಗೆ ಪೆಟ್ಟಾಯಿತು. ತಕ್ಷಣ ಚಿತ್ರತಂಡದವರು ನನ್ನ ಆರೈಕೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರೂ ಆಗಿರುವ ಓಂಪ್ರಕಾಶ್ ರಾವ್ ಅವರು ಸಹ ನನ್ನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಅವರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾರೆ ನಟ ಭಾಸ್ಕರ್ ಶೆಟ್ಟಿ.

    ಫಿನಿಕ್ಸ್ ಓಂಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರವಾಗಿದ್ದು, ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಭಾಸ್ಕರ್ ಶೆಟ್ಟಿ, ನಿಮಿಕಾ ರತ್ನಾಕರ್, ಕಾಕ್ರೋಜ್ ಸುಧೀ, ಪ್ರಸನ್ನ ಮುಂತಾದವರು ತಾರಾಬಳಗದಲ್ಲಿದ್ದಾರೆ. ರವಿ ವಲ್ಲೂರಿ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜಿಸಲಿದ್ದಾರೆ.ಇದನ್ನೂ ಓದಿ: ನಿಮ್ಮಪ್ಪನಿಗೆ ಸಿಎಂ ಕುರ್ಚಿ ಬಿಟ್ಟುಕೊಡಲು ಹೇಳಿ: ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

  • ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು

    ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು

    ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ(Rishab Shetty) ಕಾಂತಾರ ಚಿತ್ರದ ಮೂಲಕ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೆಗ್ಗಳಿಕೆಯ ಜೊತೆಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ಅವರ ತಂದೆ ಭಾಸ್ಕರ್ ಶೆಟ್ಟಿ(Bhaskar Shetty) ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    `ಕಾಂತಾರ’ (Kantara Film) ಚಿತ್ರದ ಸಕ್ಸಸ್ ಅಲೆಗೆ ಚಿತ್ರರಂಗವೇ ಶೇಕ್ ಆಗಿದೆ. ರಿಷಬ್ ಕಥೆಗೆ ಮತ್ತು ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಪರಭಾಷೆಗಳಿಂದಲೂ ಶೆಟ್ರಿಗೆ ಭರ್ಜರಿ ಆಫರ್ಸ್ ಅರಸಿ ಬರುತ್ತಿದೆ. ಇದೀಗ ಈ ಸಕ್ಸಸ್ ಹಿಂದಿರುವ ಸೀಕ್ರೆಟ್ ಬಗ್ಗೆ ಅವರ ತಂದೆ ಭಾಸ್ಕರ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

    ಪ್ರತಿಭಾವಂತ ನಟ ರಿಷಬ್ ಶೆಟ್ಟಿ ಶ್ರಮಜೀವಿ ಅದರಲ್ಲಿ ಎರಡು ಮಾತಿಲ್ಲ. ರಿಷಬ್ ಅವರ ತಂದೆ ಸಾಕಷ್ಟು ವರ್ಷಗಳಿಂದ ಜ್ಯೋತಿಷ್ಯ ಕಾರ್ಯ ಮಾಡುತ್ತಿದ್ದರು. ಇದೀಗ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. 2021ರಿಂದ 16 ವರ್ಷ ರಿಷಬ್‌ಗೆ ಗಜಕೇಸರಿ ಯೋಗ ಇದೆ ಎಂದು ಅವರು ಹೇಳಿದ್ದಾರೆ. ಈ ಗಜಕೇಸರಿ ಯೋಗದಿಂದಲೇ ಶ್ರಮದ ಜೊತೆ ಸಕ್ಸಸ್ ಕೂಡ ಸಿಕ್ಕಿದೆ ಎಂಬುದನ್ನ ರಿಷಬ್ ತಂದೆ ಮಾತನಾಡಿದ್ದಾರೆ.‌ ಇದನ್ನೂ ಓದಿ:ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಸದ್ಯ ರಿಷಬ್ ಶೆಟ್ಟಿಗೆ ಟಾಲಿವುಡ್ ಸ್ಟಾರ್ ನಿರ್ಮಾಪಕ ಅಲ್ಲು ಅರವಿಂದ್ ಅವರು ತಮ್ಮ ಬ್ಯಾನರ್ ನಟಿಸುವಂತೆ ಆಫರ್ ಮಾಡಿದ್ದಾರೆ. ಅದಕ್ಕೆ ರಿಷಬ್ ಕೂಡ ಸಮ್ಮತಿ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿಯನ್ನು ಕೊಂದ ಕೊಲೆಗಾರ್ತಿಯಿಂದ ಉಡುಪಿಯಲ್ಲಿ ಮಾಂಸ ದಂಧೆ

    ಪತಿಯನ್ನು ಕೊಂದ ಕೊಲೆಗಾರ್ತಿಯಿಂದ ಉಡುಪಿಯಲ್ಲಿ ಮಾಂಸ ದಂಧೆ

    – ಪೊಲೀಸ್ ದಾಳಿಯಾಗುತ್ತಿದ್ದಂತೆ ರಾಜೇಶ್ವರಿ ಶೆಟ್ಟಿ ಪರಾರಿ

     ಉಡುಪಿ: ಪತಿ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಂದು, ಕತ್ತರಿಸಿ ಹೋಮಕುಂಡದಲ್ಲಿ ಸುಟ್ಟಿದ್ದ ಆರೋಪಿ ರಾಜೇಶ್ವರಿ ಶೆಟ್ಟಿ ತನ್ನ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ಶುರುಮಾಡಿದ್ದಾಳೆ. ತಿಂಗಳೊಳಗೆ ಎರಡನೇ ಬಾರಿಗೆ ಸಿಕ್ಕಿಬಿದ್ದು ಇದೀಗ ಪರಾರಿಯಾಗಿದ್ದಾಳೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉದ್ಯಮಿ ಭಾಸ್ಕರ ಶೆಟ್ಟಿ ಮರ್ಡರ್ ಕೇಸ್ ಇಡೀ ದೇಶದ ಗಮನ ಸೆಳೆದಿತ್ತು. ಅರಬ್ ರಾಷ್ಟ್ರಗಳಲ್ಲಿ ಈ ಪ್ರಕರಣ ಚರ್ಚೆಯಾಗಿತ್ತು. ಹೋಮಕುಂಡ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಆರೋಪಿ ರಾಜೇಶ್ವರಿ ಶೆಟ್ಟಿ ಮತ್ತೆ ಸಿಕ್ಕಿಬಿದ್ದಿದ್ದಾಳೆ. ತನ್ನ ಹೋಟೆಲ್ ಕಂ ಲಾಡ್ಜಿಂಗ್ ನಲ್ಲಿ ವೇಶ್ಯಾವಾಟಿಕೆ ನಡೆಸಿ ಪೊಲೀಸ್ ದಾಳಿಗೊಳಗಾಗಿ ತಲೆಮರೆಸಿಕೊಂಡಿದ್ದಾಳೆ.

    ತನ್ನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ತನ್ನ ಪುತ್ರ ಮತ್ತು ಪ್ರಿಯಕರನ ಸಹಾಯದಿಂದ ಕೊಂದು ಶವವನ್ನು ಹೋಮಕುಂಡದಲ್ಲಿ ಹಾಕಿ ಈಕೆ ಸುಟ್ಟಿದ್ದರು, ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗಿರುವ ರಾಜೇಶ್ವರಿ ಶೆಟ್ಟಿ ಮಾಂಸ ದಂಧೆ ಶುರುಮಾಡಿದ್ದಾಳೆ.

    ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ ನಲ್ಲಿ ಅಕ್ರಮ ಚಟುವಟಿಕೆಗೆ ಆಶ್ರಯ ನೀಡಿದ್ದಾಳೆ. ಡಿಸಿಐಬಿ ಪೊಲೀಸರು ನಡೆಸಿರುವ ದಾಳಿಯಲ್ಲಿ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ವೇಶ್ಯಾವಾಟಿಕೆಗೆ ಆಶ್ರಯ ನೀಡಿದ ಆರೋಪದಲ್ಲಿ ರಾಜೇಶ್ವರಿ ಮತ್ತು ಇತರ ಮೂವರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಮೂವರ ಬಂಧನವಾಗಿದ್ದು, ರಾಜೇಶ್ವರಿ ಯ ಬಂಧನ ಇನ್ನೂ ಆಗಿಲ್ಲ.

    ವಿದೇಶದಲ್ಲಿ ಉದ್ಯಮ ನಡೆಸುತ್ತಿದ್ದ ಭಾಸ್ಕರ ಶೆಟ್ಟಿಯನ್ನು 2016ರ ಜುಲೈ 28ರಂದು ಹತ್ಯೆ ಮಾಡಲಾಗಿತ್ತು. ಪ್ರಿಯಕರ ನಿರಂಜನ ಭಟ್, ಪುತ್ರ ನವನೀತ ಶೆಟ್ಟಿ ಜೊತೆ ಸೇರಿ ರಾಜೇಶ್ವರಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಳು. 2018ರ ಏಪ್ರಿಲ್ ತಿಂಗಳಲ್ಲಿ ಈಕೆಗೆ ಜಾಮೀನು ಕೂಡ ನೀಡಲಾಗಿತ್ತು. ಜಾಮೀನು ಪಡೆದು ಹೊರಬಂದ ನಂತರ ಪತಿಯು ನಡೆಸುತ್ತಿದ್ದ ಉದ್ಯಮವನ್ನು ರಾಜೇಶ್ವರಿ ಶೆಟ್ಟಿ ನೋಡಿಕೊಳ್ಳುತ್ತಿದ್ದಳು. ಈ ಪ್ರಕರಣದ ಮತ್ತಿಬ್ಬರು ಪ್ರಮುಖ ಆರೋಪಿಗಳಾದ ನಿರಂಜನ ಭಟ್ ಮತ್ತು ನವನೀತ್ ಇಂದಿಗೂ ಜೈಲುವಾಸ ಅನುಭವಿಸುತ್ತಿದ್ದಾರೆ.

  • ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನಿಗೆ ಸುಪ್ರೀಂ ನಕಾರ

    ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಜಾಮೀನಿಗೆ ಸುಪ್ರೀಂ ನಕಾರ

    ನವದೆಹಲಿ: ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

    ತನಿಖೆ ಪೂರ್ಣಗೊಳ್ಳುವ ತನಕ ಜಾಮೀನು ನೀಡಲು ಸಾಧ್ಯವಿಲ್ಲ. ಆರು ತಿಂಗಳೊಳಗೆ ತನಿಖೆ ಪುರ್ಣಗೊಳ್ಳದಿದ್ರೆ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ನ್ಯಾ. ಎಸ್.ಎ. ಬೊಬ್ಡೆ, ನ್ಯಾ ನಾಗೇಶ್ವರ ರಾವ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವ ಕುರಿತು ಆರೋಪಿ ರಾಜೇಶ್ವರಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋಟ ಇವರ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಆರೋಪಿಗಳು ಸುಪ್ರೀಂ ಕೋರ್ಟ್ ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

    ಏನಿದು ಪ್ರಕರಣ?: ದುಬೈನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಉಡುಪಿಯ ಭಾಸ್ಕರ್ ಶೆಟ್ಟಿ(52) ಕಳೆದ ವರ್ಷ ಜುಲೈ 28ರಿಂದ ಕಾಣೆಯಾಗಿದ್ದರು. ಈ ಕುರಿತು ಜುಲೈ 29ರಂದು ಭಾಸ್ಕರ್ ಶೆಟ್ಟಿ ತಾಯಿ ಮಣಿಪಾಲ ಪೊಲಿಸರಿಗೆ ದೂರು ನೀಡಿದ್ದರು. ಆದ್ರೆ ಪತಿ ನಾಪತ್ತೆಯಾಗರೋ ಕುರಿತು ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ್ ಶೆಟ್ಟಿ ಯಾವುದೇ ದೂರು ನೀಡದಿರುವುದರಿಂದ ಅನುಮಾನಗೊಂಡ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಪತ್ನಿ ಮಗ ಹಾಗೂ ಮಗನ ಸ್ನೇಹಿತ ನಿರಂಜನ್ ಕೊಲೆ ಮಾಡಿರುವ ಬಗ್ಗೆ ಬೆಳಕಿಗೆ ಬಂದಿತ್ತು.

    ಭಾಸ್ಕರ್ ಶೆಟ್ಟಿ ಅವರನ್ನು ಕೊಲೆಗೈದು ನಂದಳಿಕೆ ಎಂಬಲ್ಲಿ ಹೋಮ ಕುಂಡದಲ್ಲಿ ಹಾಕಿ ಸುಟ್ಟಿದ್ದರು.

    https://www.youtube.com/watch?v=K8JuJykqi_A

    https://www.youtube.com/watch?v=3WMLludJRRU

    https://www.youtube.com/watch?v=VUjoxc2emNs

    https://www.youtube.com/watch?v=kWyQttGrIRc

    https://www.youtube.com/watch?v=2IlEl29Jy7E

    https://www.youtube.com/watch?v=BIdqA1X-RUQ