Tag: ಭಾವಿ ಪತಿ

  • ಸೀರೆ ಖರೀದಿಸಲೆಂದು ಕರೆದು ಮದುವೆಗೆ 5 ದಿನ ಇರುವಾಗ್ಲೇ ಭಾವಿಪತ್ನಿಯನ್ನ ಕೊಂದ..!

    ಸೀರೆ ಖರೀದಿಸಲೆಂದು ಕರೆದು ಮದುವೆಗೆ 5 ದಿನ ಇರುವಾಗ್ಲೇ ಭಾವಿಪತ್ನಿಯನ್ನ ಕೊಂದ..!

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಮದುವೆಗೆ ಕೆವಲ 5 ದಿನ ಇರುವಾಗಲೇ ಭಾವಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಮೊರದಾಬಾದ್ ನಲ್ಲಿ ನಡೆದಿದೆ.

    ಆರೋಪಿಯನ್ನು ಜಿತಿನ್ ಎಂದು ಗುರುತಿಸಲಾಗಿದ್ದು, ಈತ ಭಾವಿ ಪತ್ನಿ ಟೀನಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ಟೀನಾಳಿಗೆ ಕರೆ ಮಾಡಿದ ಜಿತಿನ್, ಮದುವೆಗೆ ಕೆಲವೊಂದಷ್ಟು ಸೀರೆಗಳನ್ನು ಖರೀದಿಸಲು ಇದೆ. ಹೀಗಾಗಿ ನೀನು ಬರಬೇಕು ಎಂದು ಹೇಳಿದ್ದಾನೆ. ಭಾವಿ ಪತಿಯ ಮಾತು ಕೇಳಿದ ಟೀನಾ ಹೊರಟಿದ್ದಾಳೆ. ಅಂತೆಯೇ ಟೀನಾಳನ್ನು ಆಕೆಯ ತಾಯಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಬಿಟ್ಟು ಬಂದಿದ್ದಾರೆ ಎಂದು ಸಂಬಂಧಿ ವಿಪಿನ್ ಹೇಳಿದ್ದಾರೆ.

    ಇತ್ತ ಅದೇ ದಿನ ಮಧ್ಯಾಹ್ನ 2.30 ರ ಸುಮಾರಿಗೆ ರಸ್ತೆ ಬದಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಮೃತಳ ಗುರುತು ಪತ್ತೆ ಹಚ್ಚಿದ ಪೊಲೀಸರು ಆಕೆಯ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ಟೀನಾ ಕುಟುಂಬಸ್ಥರು, ಕೆಲ ಗಂಟೆಗಳ ಹಿಂದೆಯಷ್ಟೇ ಆಕೆ ತನ್ನ ಭಾವಿ ಪತಿಯನ್ನು ಭೇಟಿಯಾಗಲು ತೆರಳಿದ್ದಾಳೆ ಎಂದು ಹೇಳಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇತ್ತ ಟೀನಾ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

    ಜಿತಿನ್ ಹಾಗೂ ಟೀನಾ ಲವ್ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯುತ್ತಿತ್ತು. ಆದರೆ ಜಿತಿನ್ ಮಾತ್ರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದನು. ಅಲ್ಲದೆ ಈ ಮದುವೆ ನಿಲ್ಲಿಸುವಂತೆ ಟೀನಾಳನ್ನು ಒತ್ತಾಯಿಸುತ್ತಿದ್ದನು.

    ಸೋಮವಾರ ಜಿತಿನ್ ಮನೆಗೆ ಮರಳಿದಾಗ, ಟೀನಾ ಎಲ್ಲಿಯೂ ಇರಲಿಲ್ಲ. ಈ ವೇಳೆ ಅವಳ ಕುಟುಂಬವು ಎಲ್ಲಾ ಕಡೆ ಹುಡುಕಾಟ ನಡೆಸಿದೆ. ಆದರೆ ಟೀನಾಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಆಕೆಯ ಶವ ಗ್ರಾಮದ ಹೊರಗೆ, ರಸ್ತೆಬದಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಶವವನ್ನು ಗುರುತಿಸಿ, ಜಿತಿನ್ ಸೀರೆ ಖರೀದಿಸಲು ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿದ್ದಾರೆ ಎಂದು ಆರೋಪಿಸಿದರು. ಜಿತಿನ್ ಈ ಕೃತ್ಯ ಎಸಗಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕೊನೆಗೂ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡ ಕಾಜಲ್

    ಕೊನೆಗೂ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡ ಕಾಜಲ್

    ಹೈದರಾಬಾದ್: ಇನ್ನೇನು ಕೆಲವೇ ದಿನಗಳಲ್ಲಿ ನಟಿ ಕಾಜಲ್ ಅಗರ್ವಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದುವರೆಗೂ ತಮ್ಮ ಭಾವಿ ಪತಿಯನ್ನು ಪರಿಚಯಿಸದ ನಟಿ ಇದೀಗ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಹೌದು. ತಮ್ಮ ಭಾವಿ ಪತಿ ಜೊತೆ ತೆಗೆಸಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಾಜಲ್, ನಮ್ಮ ಕಡೆಯಿಂದ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಮದುವೆಗೂ ಮುನ್ನ ಕಾಜಲ್ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಕಾಜಲ್ ಮತ್ತು ಗೌತಮ್ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಕಾಜಲ್ ನಿಶ್ಚಿತಾರ್ಥದ ರಿಂಗ್ ರಿವೀಲ್ ಮಾಡಿದ್ದರು. ಕಾಜಲ್ ಉಂಗುರವನ್ನು ತೋರಿಸುತ್ತಿರುವ ಕೈ ಬೆರಳಿನ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿತ್ತು. ಉಂಗುರ ತೋರಿಸಿ ಸೂಪರ್ ಎಂದು ಹೇಳಿರುವ ವಿಡಿಯೋ ಎಲ್ಲಾ ಕಡೆ ಹರಿದಾಡಿತ್ತು. ನಿಶ್ಚಿತಾರ್ಥದ ಬಳಿಕ ಕಾಜಲ್ ಎಲ್ಲಿಯೂ ಉಂಗುರ ರಿವೀಲ್ ಮಾಡಿರಲಿಲ್ಲ.

     

    View this post on Instagram

     

    Happy Dussehra from us to you ! @kitchlug #kajgautkitched

    A post shared by Kajal Aggarwal (@kajalaggarwalofficial) on

    ಈ ಹಿಂದೆ ಮದುವೆ ವಿಚಾರವನ್ನು ಕೂಡ ಇನ್ ಸ್ಟಾ ಮೂಲಕವೇ ರಿವೀಲ್ ಮಾಡಿದ್ದರು. ನಾನು ಇದೇ ಅಕ್ಟೋಬರ್ 30ರಂದು ಗೌತಮ್ ಕಿಚ್ಲು ಅವರನ್ನು ಮುಂಬೈನಲ್ಲಿ ಮದುವೆ ಆಗುತ್ತಿದ್ದೇನೆ. ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆ. ಹೊಸ ಜೀವನಕ್ಕೆ ಕಾಲಿಡಲು ನಾನು ಥ್ರಿಲ್ ಆಗಿದ್ದೇನೆ. ಇಷ್ಟು ದಿನ ನೀವು ತೋರಿಸಿದ ಅನಿಯಮಿತ ಪ್ರೀತಿಗೆ ಅಭಾರಿಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಹೊಸ ಬದುಕಿಗೆ ಎಂಟ್ರಿ ಕೊಡಲು ಉತ್ಸುಕಳಾಗಿದ್ದೇನೆ. ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿಮ್ಮನನ್ನ ರಂಜಿಸುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ಕಾಜಲ್ ಬರೆದುಕೊಂಡಿದ್ದರು.

     

    View this post on Instagram

     

    ♾????????

    A post shared by Kajal Aggarwal (@kajalaggarwalofficial) on


    ಕಾಜಲ್ ಅಗರ್ವಾಲ್ ಮದುವೆ ಆಗುತ್ತಿರುವ ಗೌತಮ್ ಕಿಚ್ಲು, ಡಿಸರ್ನ್ ಲಿವಿಂಗ್ ಸಂಸ್ಥೆಯ ಸ್ಥಾಪಕರು. ಇನ್ನು ಗೌತಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಾವು ಓರ್ವ ಇಂಟಿರೀಯರ್ ಡಿಸೈನರ್, ಡಿಸರ್ನ್ ಲಿವಿಂಗ್ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ.

  • ಮದುವೆಗೆ ಮುಂಚೆ ಮಾತಾಡಿದ್ದಕ್ಕೆ ಯುವತಿ, ಭಾವಿ ಪತಿಯ ಕೊಲೆ

    ಮದುವೆಗೆ ಮುಂಚೆ ಮಾತಾಡಿದ್ದಕ್ಕೆ ಯುವತಿ, ಭಾವಿ ಪತಿಯ ಕೊಲೆ

    ಕರಾಚಿ: ಮದುವೆಗೆ ಮುಂಚೆಯೇ ಮಾತನಾಡಿದ್ರು ಎಂಬ ಕಾರಣಕ್ಕೆ ಮರ್ಯಾದಾ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಯುವತಿ ಹಾಗೂ ಆಕೆಯ ಭಾವಿ ಪತಿಯನ್ನು ಯುವತಿಯ ಸೋದರಮಾವನೇ ಕೊಲೆ ಮಾಡಿದ್ದಾನೆ.

    ಮೃತ ಯುವತಿ ನಜ್ರೀನ್ ತನ್ನ ಭಾವಿ ಪತಿ ಶಾಹಿದ್‍ರೊಂದಿಗೆ ಇಲ್ಲಿನ ಗೋಟ್ಕಿ ನಗರ ಸಮೀಪದ ನಯೀ ವಹೀ ಗ್ರಾಮದಲ್ಲಿ ಮಾತನಾಡ್ತಿದ್ದಾಗ ಆಕೆಯ ಸೋದರಮಾವ ಇದನ್ನ ನೋಡಿದ್ದರು. ಇದರಿಂದ ಕೋಪಗೊಂಡ ಆತ ಗುಂಡಿನ ದಾಳಿ ನಡೆಸಿ ಇಬ್ಬರನ್ನೂ ಕೊಂದಿದ್ದಾನೆಂದು ವರದಿಯಾಗಿದೆ.

    ಪೊಲೀಸರ ಪ್ರಕಾರ ಮೃತ ಯುವಕ, ಯುವತಿ ಸಂಬಂಧಿಗಳೇ ಆಗಿದ್ದು, ಇದು ಮರ್ಯಾದಾ ಹತ್ಯೆ ಪ್ರಕರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸೋದರ ಮಾವಂದಿರಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಕಳೆದ ತಿಂಗಳು ಪಾಕಿಸ್ತಾನದ ಯುವಕನೊಬ್ಬ ಕುಟುಂಬದ ಸಮ್ಮತಿಯಿಲ್ಲದೆ ಮದುವೆಯಾಗಿದ್ದಾರೆಂದು ರಾವಲ್‍ಪಿಂಡಿಯಲ್ಲಿ ತನ್ನ ತಂಗಿ ಹಾಗೂ ಆಕೆಯ ಗಂಡನನ್ನು ಗುಂಡಿಟ್ಟು ಕೊಲೆ ಮಾಡಿದ್ದ. ನವೆಂಬರ್‍ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಹಿರಿಯರ ಸಮ್ಮತಿಯಿಲ್ಲದೆ ಹೊಸದಾಗಿ ಮದುವೆಯಾಗಿದ್ದ ಜೋಡಿಯನ್ನು ಗ್ರಾಮದ ಹಿರಿಯರ ಆದೇಶದಂತೆ ಕೊಲೆ ಮಾಡಲಾಗಿತ್ತು ಎಂದು ವರದಿಯಾಗಿದೆ.

    ಕಳೆದ ದಶಕದಲ್ಲಿ ಪಾಕಿಸ್ತಾನದಲ್ಲಿ ವರ್ಷಕ್ಕೆ 650 ಮರ್ಯಾದಾ ಹತ್ಯೆಗಳು ನಡೆದಿರುವ ಬಗ್ಗೆ ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗ ವರದಿ ನೀಡಿದೆ. ಆದ್ರೆ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರದಿರುವ ಕಾರಣ ಇದರ ಸಂಖ್ಯೆ ಮತ್ತಷ್ಟು ಹೆಚ್ಚಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

  • ಚಾಕು ತೋರಿಸಿ ಯುವತಿ ಮೇಲೆ ಭಾವಿಪತಿಯಿಂದಲೇ ಅತ್ಯಾಚಾರ!

    ಚಾಕು ತೋರಿಸಿ ಯುವತಿ ಮೇಲೆ ಭಾವಿಪತಿಯಿಂದಲೇ ಅತ್ಯಾಚಾರ!

    ಬೆಂಗಳೂರು: ನಿಶ್ಚಿತಾರ್ಥದ ಬಳಿಕ ಚಾಕು ತೋರಿಸಿ ಯುವತಿಯ ಮೇಲೆ ಆಕೆಯ ಭಾವಿ ಪತಿಯೇ ಅತ್ಯಾಚಾರವೆಸಗಿದ ಘಟನೆ ನಗರದಲ್ಲಿ ನಡೆದಿದೆ.

    ಆರೋಪಿ ಭಾವಿ ಪತಿಯನ್ನು ಸುರೇಶ್ ಎನ್ನಲಾಗಿದೆ. ಈತ ನಿಶ್ಚಿತಾರ್ಥ ಮಾಡಿಕೊಂಡು ನಂತ್ರ ಮದುವೆಯಾಗೋದಿಲ್ಲ ಅಂತ ಮದುವೆ ರದ್ದುಗೊಳಿಸಿದ್ದನು. ನಂತ್ರ ಆಕೆಯನ್ನ ಮತ್ತೆ ಮದುವೆಯಾಗ್ತೀನಿ ಅಂತ ಹೇಳಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಚಾಕು ತೋರಿಸಿ ಅತ್ಯಾಚಾರವೆಸಗಿದ್ದನು. ಸ್ವಲ್ಪ ಸಮಯದ ಬಳಿಕ ಆಕೆ ಗರ್ಭಿಣಿ ಅಂತ ಗೊತ್ತಾದಾಗ ಒತ್ತಾಯ ಪೂರ್ವಕವಾಗಿ ಅಬಾರ್ಷನ್ ಮಾಡಿಸಿದ್ದನು ಎಂದು ನೊಂದ ಯುವತಿ ದೂರಿದ್ದಾರೆ.

    ಸದ್ಯ ನೊಂದ ಯುವತಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.