Tag: ಭಾವನಾ ರಾವ್

  • ಚಿಟ್ಟೆಯಾದ ಗಾಳಿಪಟ ಬೆಡಗಿ ಭಾವನಾ ರಾವ್

    ಚಿಟ್ಟೆಯಾದ ಗಾಳಿಪಟ ಬೆಡಗಿ ಭಾವನಾ ರಾವ್

    ಸ್ಯಾಂಡಲ್‌ವುಡ್ (Sandalwood) ನಟಿ ಭಾವನಾ ರಾವ್ (Bhavana Rao) ಹೊಸ ಬಗೆಯ ಪಾತ್ರಗಳಿಗೆ ಮಹತ್ವ ನೀಡೋದ್ರಲ್ಲಿ ಯಾವಾಗಲೂ ಮುಂದು. ಇದೀಗ ಹೊಸ ಫೋಟೋನಲ್ಲಿ ಚಿಟ್ಟೆಯಾಗಿ ಮಿಂಚಿದ್ದಾರೆ. ಗಾಳಿಪಟ ನಟಿಯ ಚಿಟ್ಟೆಯ ಅವತಾರ ಅಭಿಮಾನಿಗಳ ಗಮನ ಸೆಳೆದಿದೆ.

    ವರ್ಷಕ್ಕೆ ಕಮ್ಮಿ ಸಿನಿಮಾಗಳಲ್ಲಿ ನಟಿಸಿದ್ರು ಕೂಡ ಸದಾ ಕಂಟೆಂಟ್‌ಗೆ ಪ್ರಾಮುಖ್ಯತೆ ಕೊಡುವ ನಟಿ ಭಾವನಾ ರಾವ್, ಇತ್ತೀಚಿಗೆ ‘ಹೊಂದಿಸಿ ಬರೆಯಿರಿ’ ಚಿತ್ರದ ಮೂಲಕ ಗಮನ ಸೆಳೆದರು. ಪ್ರವೀಣ್ ತೇಜ್‌ಗೆ ಜೋಡಿಯಾಗಿ ಮಿಂಚಿದ್ರು ಈ ಗಾಳಿಪಟ (Galipata) ಬೆಡಗಿ. ಇದನ್ನೂ ಓದಿ:ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು

     

    View this post on Instagram

     

    A post shared by Bhavvana Rao (@bhavanaa_raao_actor)

    ಇದೀಗ ಕಪ್ಪು ಬಣ್ಣದ ಚಿಟ್ಟೆ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಭಾವನಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿಯ ಡಿಫರೆಂಟ್ ಲುಕ್ ಈಗ ಪಡ್ಡೆಹುಡುಗರ ದಿಲ್ ಗೆದ್ದಿದೆ.

     

    View this post on Instagram

     

    A post shared by Bhavvana Rao (@bhavanaa_raao_actor)

    ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಭಾವನಾ ನಟನೆಗೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಮತ್ತೊಂದಿಷ್ಟು ಸಿನಿಮಾ ಕಥೆಗಳನ್ನ ಕೇಳ್ತಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಗಾಳಿಪಟ ನಾಯಕಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.

  • ವಿಜಯ್ ರಾಘವೇಂದ್ರ ನಟನೆಯ ವಿಭಿನ್ನ ಸಿನಿಮಾದ ಟೀಸರ್ ರಿಲೀಸ್

    ವಿಜಯ್ ರಾಘವೇಂದ್ರ ನಟನೆಯ ವಿಭಿನ್ನ ಸಿನಿಮಾದ ಟೀಸರ್ ರಿಲೀಸ್

    ವಿಭಿನ್ನ ಕಥಾಹಂದರ ಹೊಂದಿರುವ ‘ಗ್ರೇ ಗೇಮ್ಸ್ ‘ (Gray Games) ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ಗ್ರೇ ಗೇಮ್ಸ್ ಒಂದು ರೋಮಾಂಚಕ ಕೌಟುಂಬಿಕ ಚಿತ್ರವಾಗಿದ್ದು, ಇದರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್ ರಾಘವೇಂದ್ರ (Vijay Raghavendra), ಶ್ರುತಿ ಪ್ರಕಾಶ್ (Shruti Prakash), ಭಾವನಾ ರಾವ್ (Bhavana Rao), ಅಪರ್ಣಾ, ರವಿ ಭಟ್ ಮತ್ತು ಪ್ರಮುಖ ಪಾತ್ರದಲ್ಲಿ ಜೈ ಅಭಿನಯಿಸಿದ್ದಾರೆ. ಈ ಕಥೆಯು ನಿಮ್ಮ ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಗಳನ್ನು ನಿರಂತರ ಬದಲಾವಣೆ ಮತ್ತು ಯೋಚಿಸಲು ಒಳಪಡಿಸುತ್ತಿದೆ ಮತ್ತು ವಾಸ್ತವದ ನಿಮ್ಮ ಗ್ರಹಿಕೆಗೆ ಸವಾಲು ಹಾಕುತ್ತದೆ. ಗ್ರೇ ಗೇಮ್ಸ್‌ನ  ಜಗತ್ತಿನಲ್ಲಿ ಹೆಜ್ಜೆ ಹಾಕಿ, ಲೆಟ್ ದ ಗೇಮ್ ಬಿಗಿನ್ಸ್.

    ಗ್ರೇ ಗೇಮ್ಸ್ ಆನ್‌ಲೈನ್ ಗೇಮಿಂಗ್ ಗೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಸುತ್ತ ಸುತ್ತುತ್ತದೆ. ವಿಜಯ್ ರಾಘವೇಂದ್ರ (ಮನಶ್ಶಾಸ್ತ್ರಜ್ಞ), ಭಾವನಾ ರಾವ್ (ಪೊಲೀಸ್ ಅಧಿಕಾರಿ), ಮತ್ತು ಶ್ರುತಿ ಪ್ರಕಾಶ್ (ಚಿತ್ರನಟಿ) ಆಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಚಲನಚಿತ್ರವು ಹೊಸ ಪ್ರತಿಭೆ ಜೈ (ಗೇಮರ್) ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ತಂತ್ರಜ್ಞಾನ ಯುಗದಲ್ಲಿ ನಮ್ಮ ಮೇಲಾಗುವ ಮಾನಸಿಕ ಒತ್ತಡವನ್ನು ಆಧರಿಸಿದೆ. ಚಿತ್ರದಲ್ಲಿ ಮೂರು ಹಾಡುಗಳು ಮತ್ತು ಹೊಸ ಕಥಾವಸ್ತುವಿನ ಜೊತೆಗೆ ಭಾವನಾತ್ಮಕ ತಿರುವುಗಳೊಂದಿಗೆ, ನಿಮ್ಮನ್ನು ಮಾನಸಿಕವಾಗಿ  ಸೆಳೆಯುತ್ತದೆ.

    ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಂಗಾಧರ ಸಾಲಿಮಠ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಒಂದು ರೋಚಕ ಕಥೆಯನ್ನು ರಚಿಸಿದ್ದಾರೆ. ಚಿತ್ರದ ಛಾಯಾಗ್ರಾಹಕ ವರುಣ ಡಿಕೆ ಕ್ಯಾಮೆರಾದಲ್ಲಿ ಕಥೆಗೆ ಜೀವ ತುಂಬಿದ್ದಾರೆ. ಚಿತ್ರವನ್ನು ಆನಂದ ಹೆಚ್.ಮುಗದ್ ನಿರ್ಮಿಸಿದ್ದಾರೆ ಮತ್ತು ಸತೀಶ ಗ್ರಾಮಪುರೋಹಿತ, ಅರವಿಂದ ಜೋಶಿ, ಮತ್ತು ಡೋಲೇಶ್ವರ್ ರಾಜ್ ಸುಂಕು ಸಹ-ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

    ರಿಯಾಲಿಟಿ ಮತ್ತು ವರ್ಚುವಾಲಿಟಿ ಜಗತ್ತಿನ ಕಥೆಯುಳ್ಳ, ನುರಿತ ಕಲಾವಿದರು ಅಭಿನಯಿಸಿರುವ ಈ ಚಿತ್ರ, ಪ್ರೇಕ್ಷಕರನ್ನು ಮನರಂಜನೆಯ ಜೊತೆಗೆ ಅವರ ವಾಸ್ತವದ ಗ್ರಹಿಕೆಗೆ ಸವಾಲು ಹಾಕುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ ಗಂಗಾಧರ ಸಾಲಿಮಠ.

  • ಬಾಲಿವುಡ್‌ನತ್ತ ಮುಖ ಮಾಡಿದ `ಗಾಳಿಪಟ’ ನಟಿ ಭಾವನಾ

    ಬಾಲಿವುಡ್‌ನತ್ತ ಮುಖ ಮಾಡಿದ `ಗಾಳಿಪಟ’ ನಟಿ ಭಾವನಾ

    ನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ `ಗಾಳಿಪಟ’ (Galipata) ಚಿತ್ರದ ನಟಿ ಭಾವನಾ ರಾವ್ (Bhavana Rao) ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಿಟೌನ್‌ನಲ್ಲಿ ಪವರ್‌ಫುಲ್ ಪಾತ್ರದ ಮೂಲಕ ನಟಿ ಲಗ್ಗೆ ಇಡುತ್ತಿದ್ದಾರೆ.

    `ಗಾಳಿಪಟ’ ಖ್ಯಾತಿಯ ಭಾವನಾ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. `ಧಾರಾವಿ ಬ್ಯಾಂಕ್'(Dharavi Bank) ಎಂಬ ಮುಂಬೈ ಕ್ರೈಮ್ ಲೋಕದ ಕಥೆಯಲ್ಲಿ ಭಾವನಾ ಬಣ್ಣಹಚ್ಚಿದ್ದಾರೆ. ಓಟಿಟಿಗಾಗಿಯೇ ಹೊಸ ಚಿತ್ರವೊಂದು ಮಾಡುತ್ತಿದ್ದು, ಸುನೀಲ್ ಶೆಟ್ಟಿ(Sunil Shetty) ಮತ್ತು ವಿವೇಕ್ ಓಬೆರಾಯ್ (Vivek Oberoi) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುನೀಲ್‌ ಶೆಟ್ಟಿ ಮುಂದೆ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ವಿವೇಕ್‌ ಅಬ್ಬರಿಸಲಿದ್ದಾರೆ. ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್

    ಇನ್ನೂ ಸುನೀಲ್ ಶೆಟ್ಟಿ ಮಗಳ ಪಾತ್ರದಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ. ಲಾಯರ್ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಧಾರಾವಿ ಬ್ಯಾಂಕ್ ಚಿತ್ರದ ಮೂಲಕ ಬಿಟೌನ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಂದಿಸಿ ಬರೆಯಿರಿ ಸಿನಿಮಾ ಸ್ಪೆಷಲ್ ಯಾಕೆ?

    ಹೊಂದಿಸಿ ಬರೆಯಿರಿ ಸಿನಿಮಾ ಸ್ಪೆಷಲ್ ಯಾಕೆ?

    ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಸಿನಿಮಾದ ಸ್ಪೆಷಲ್ ಅಂದರೆ ತಾರಾಗಣ. ಮೊದಲ ಸಿನಿಮಾದಲ್ಲಿಯೇ ಭವರಸೆ ಮೂಡಿಸಿದ್ದ ಸಾಕಷ್ಟು ಪ್ರತಿಭೆಗಳು ಈ ಸಿನಿಮಾದಲ್ಲಿ ಒಂದಾಗಿವೆ. ಇದನ್ನೂ ಓದಿ : ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

    ಜತೆಗೆ ಒಂದಷ್ಟು ಪ್ರೇಮಕಥೆಗಳನ್ನು ವಿಭಿನ್ನ ದೃಷ್ಟಿಯಲ್ಲಿ ಹೇಳುವ ಪ್ರಯತ್ನವಾಗಿದೆಯಂತೆ. ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ನೀಟಾಗಿ, ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಈ ಸಿನಿಮಾ ನೀಡಲಿದೆಯಂತೆ. ಇದನ್ನೂ ಓದಿ : ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

    ಈಗಷ್ಟೇ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದ್ದು, ಅಲ್ಲಿರುವ ಕಲಾವಿದರಿಂದಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಏಳು ಯುವಕ-ಯುವತಿಯರ ಒಂದೊಂದು ಕಥೆಯೇ ‘ಹೊಂದಿಸಿ ಬರೆಯಿರಿ’ ಚಿತ್ರ. ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಗುಳ್ಟು ಖ್ಯಾತಿಯ ನವೀನ್, ರಾಕೇಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಐಶಾನಿ ಶೆಟ್ಟಿ, ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಗೆ ಅಮ್ಮನಾಗಿ ನಟಿಸಿದ್ದ ರಚನಾ ಜೋಯಿಸ್, ವಗ್ಗರಣೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಸಂಯುಕ್ತ ಹೊರನಾಡು, ಇಷ್ಟದೇವತೆ ಧಾರಾವಾಹಿಯ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಚಿತ್ರಖ್ಯಾತಿಯ ಭಾವನಾ ಹೀಗೆ ಪ್ರತಿಭೆಗಳ ಗಣಿಯೇ ಸಿನಿಮಾದಲ್ಲಿ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಈಗಾಗಲೇ ಬಹುತೇಕ ಶೂಟಿಂಗ್ ಆಗಿದ್ದು, ಮಾಸ್ತಿ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಾಹಿತಿ ಶ್ರೀಧರ್ ಬನವಾಸಿ ಕೂಡ ಸಿನಿಮಾದ ಭಾಗವಾಗಿದ್ದಾರೆ.

  • ಭಾವನಾ ರಾವ್‍ಗೆ ಮದುವೆ ಮಾಡಿಸಿದ ನಟಿ ರಾಗಿಣಿ ದ್ವಿವೇದಿ

    ಭಾವನಾ ರಾವ್‍ಗೆ ಮದುವೆ ಮಾಡಿಸಿದ ನಟಿ ರಾಗಿಣಿ ದ್ವಿವೇದಿ

    ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ‘ಗಾಳಿಪಟ’ ಚಿತ್ರದ ಖ್ಯಾತ ನಟಿ ಭಾವನಾ ರಾವ್ ಅವರಿಗೆ ಮದುವೆ ಮಾಡಿಸಿದ್ದಾರೆ.

    ‘ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ನಟ ರಕ್ಷಿತ್ ಅವರ ಜೊತೆ ಭಾವನಾ ರಾವ್ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ‘ಗಾಂಧಿಗಿರಿ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಶನಿವಾರ ಈ ಚಿತ್ರದ ಮದುವೆಯ ಸನ್ನಿವೇಶದ ಚಿತ್ರೀಕರಣ ನಡೆದಿದೆ.

    ಈ ಚಿತ್ರದ ಚಿತ್ರೀಕರಣ ನಡೆಯುವಾಗ ನಟಿ ರಾಗಿಣಿ ದ್ವಿವೇದಿ ಚಿತ್ರತಂಡದ ಜೊತೆ ತೆಗೆದುಕೊಂಡ ಸೆಲ್ಫಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಕೆಲವರು ರಾಗಿಣಿ ಅವರು ಭಾವನಾ ರಾವ್ ಅವರ ಮದುವೆ ಮಾಡಿಸಿದ್ದಾರೆ ಎಂದು ತಿಳಿದುಕೊಂಡಿದ್ದಾರೆ.

    ನಟಿ ರಾಗಿಣಿ ದ್ವಿವೇದಿ ಅವರು ನಿರ್ದೇಶಕ ಪ್ರೇಮ್, ರಂಗಾಯಣ ರಘು, ಕುರಿ ಪ್ರತಾಪ್, ಆರುಂಧತಿ ನಾಗ್, ಭಾವನಾ ರಾವ್, ರಕ್ಷಿತ್ ಅವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ರಘು ಹಾಸನ್ ನಿರ್ದೇಶನ ಮಾಡುತ್ತಿರುವ ಗಾಂಧಿಗಿರಿ ಚಿತ್ರದಲ್ಲಿ ನಿರ್ದೇಶಕ ಪ್ರೇಮ್ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಬೆಂಗಳೂರು: ಮಮ್ಮಿ ಚಿತ್ರದ ಯಶಸ್ಸಿನ ನಂತರ ಹೌರಾ ಬ್ರಿಡ್ಜ್ ಚಿತ್ರದಲ್ಲಿ ನಟಿಸುತ್ತಿರೋ ಪ್ರಿಯಾಂಕ ಉಪೇಂದ್ರ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ ಹೊಂದಿರೋ ಚಿತ್ರ. ವಿಶೇಷವೆಂದರೆ ಈ ಚಿತ್ರದಲ್ಲಿ ಮತ್ತಿಬ್ಬರು ಸ್ಯಾಂಡಲ್ ವುಡ್ ನಟಿಯರು ಪ್ರಿಯಾಂಕಗೆ ಜೊತೆಯಾಗಲಿದ್ದಾರೆ.

    ಭುವನ್ ನಿರ್ದೇಶನದ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತಾಂತ್ರಿಕ ವರ್ಗ ಮತ್ತು ತಾರಾಗಣದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇದರ ಜೊತೆಗೇ ಮತ್ತೆರಡು ಮುಖ್ಯ ಪಾತ್ರಗಳಿಗೂ ಇಬ್ಬರು ಆಯ್ಕೆಯಾಗಿದ್ದಾರೆ. ಭಾವನಾ ರಾವ್ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ಪ್ರಿಯಾಂಕ ಸ್ನೇಹಿತೆಯರಾಗಿ ಕಾಣಿಸಿಕೊಳ್ಳಲಿದ್ದಾರೆ.

    ಭುವನ್ ಇದೀಗ ಗಮ್ಯ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ಮುಗಿಯುತ್ತಿದ್ದಂತೆಯೇ ಹೊಸಾ ಥ್ರಿಲ್ಲರ್ ಕಥೆ ಶುರುವಾಗಲಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಈ ಚಿತ್ರವನ್ನು ಪ್ರಿಯಾಂಕಾ ಕೂಡಾ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಒಂದಷ್ಟು ಕಾಲದಿಂದ ಮರೆಯಾದಂತಿದ್ದ ಶರ್ಮಿಳಾ ಮಾಂಡ್ರೆ ಮತ್ತು ಭಾವನಾ ರಾವ್ ಈ ಚಿತ್ರದ ಮುಖ್ಯ ಪಾತ್ರಗಳ ಮೂಲಕ ವಾಪಾಸಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv