Tag: ಭಾವನಾ ಮೆನನ್

  • ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ: ಭಾವನಾ ಮೆನನ್

    ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ: ಭಾವನಾ ಮೆನನ್

    ತಿರುವನಂತಪುರಂ: ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ ಎಂದು ನಟಿ ಭಾವನಾ ಮೆನನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಯೂಟ್ಯೂಬ್ ಚಾನೆಲ್‍ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಲೈಂಗಿಕ ಕಿರುಕುಳಕ್ಕೆ ಒಳಗಾದ ನಂತರ ನಾನು ಆಘಾತಕ್ಕೊಳಗಾಗಿದ್ದೆ. ನಂತರ ಸಮಾಜದ ಮುಂದೆ ಹೋದ ನನ್ನ ಘನತೆಯನ್ನು ಮರಳಿ ಪಡೆಯಲು ಬಯಸಿದ್ದೇನೆ. ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ನಟಿ, ತಮ್ಮ ಆಘಾತಕಾರಿ ಅವಧಿಯಲ್ಲಿ ಪತಿ, ನಿಕಟ ಸಂಬಂಧಿಗಳು, ಸ್ನೇಹಿತರು ಮತ್ತು ಸಾರ್ವಜನಿಕರು ಸೇರಿದಂತೆ ನನ್ನ ಕುಟುಂಬವು ನನ್ನನ್ನು ಬೆಂಬಲಿಸಿತ್ತು ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್‌ ದೇಶವಾಗಿ ಉಳಿಯುವುದೇ ಅನುಮಾನ: ಪುಟಿನ್‌ ನೇರ ಎಚ್ಚರಿಕೆ

    ಸಮಾಜದಲ್ಲಿ ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ. ನನ್ನ ಸಂಪೂರ್ಣ ಇಚ್ಛಾಶಕ್ತಿಯೇ ನನ್ನನ್ನು ಮುಂದುವರಿಸಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ನನಗೆ ಬಲವಾದ ಬೆಂಬಲವನ್ನು ನೀಡಿದ ಹೊರತಾಗಿಯೂ ನಾನು ಒಂಟಿತನ ಅನುಭವಿಸುತ್ತಿದ್ದೇನೆ ಎಂದರು.

    2020ರಂದು ಬೆಳಗ್ಗೆಯಿಂದ ಸಂಜೆಯವರೆಗೆ 15 ದಿನಗಳ ಕಾಲ ನ್ಯಾಯಾಲಯದಲ್ಲಿ ಹೇಗೆ ಇದ್ದೆ ಎಂದು ಅವರು ನೆನಪಿಸಿಕೊಂಡರು. ಪ್ರತಿ ಬಾರಿಯೂ ಒಬ್ಬ ವಕೀಲರು ನನಗೆ ಪ್ರಶ್ನೆ ಮಾಡುತ್ತಿದ್ದಾಗ ನಾನು ನಿರಪರಾಧಿಯೆಂದು ಸಾಬೀತುಪಡಿಸಿಕೊಳ್ಳಲು ಸಾಕಷ್ಟು ಹೋರಾಡಿದ್ದೇನೆ ಎಂದು ತಿಳಿಸಿದರು.

    ಆಘಾತಕಾರಿ ಘಟನೆಯ ನಂತರ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಸಿಕ್ಕಾಪಟ್ಟೆ ಅವಮಾನಿಸುತ್ತಿದ್ದಾರೆ. ಘಟನೆಯ ನಂತರ ಆಶಿಕ್ ಅಬು ಮತ್ತು ಶಾಜಿ ಕೈಲಾಸ್, ನಟ-ನಿರ್ದೇಶಕ ಪೃಥ್ವಿರಾಜ್ ಮತ್ತು ನಟ ಜಯಸೂರ್ಯ ಅವರಂತಹ ನಿರ್ದೇಶಕರು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ನನಗೆ ನಟಿಸಲು ಅವಕಾಶವನ್ನು ನಿರಾಕರಿಸಿದರು ಎಂದರು. ಇದನ್ನೂ ಓದಿ: ಉಕ್ರೇನ್‍ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸೀಟ್ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸಲಿ: ದಿಗ್ವಿಜಯ್ ಸಿಂಗ್

    2017ರಲ್ಲಿ ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್‍ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಭಾವನಾ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಐದು ವರ್ಷ ಕಳೆದಿದೆ. ಈಗ ಭಾವನಾ ಆ ಘಟನೆ ಬಗ್ಗೆ ಮಾತನಾಡಿದ್ದಾರೆ.

  • ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ: ಭಾವನಾ ಮೆನನ್

    ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ: ಭಾವನಾ ಮೆನನ್

    ತಿರುವನಂತಪುರಂ: ಸ್ಯಾಂಡಲ್‍ವುಡ್ ನಟಿ ಭಾವನಾ ಮೆನನ್ 5 ವರ್ಷಗಳ ಹಿಂದಿನ ಕಹಿ ನೆನಪನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಭಾವನಾ ಹೇಳಿದ್ದೇನು?: ಇದು ಸುಲಭದ ಪ್ರಯಾಣವಾಗಿರಲಿಲ್ಲ. ಬಲಿಪಶು ಆಗಿ ನಂತರ ಬದುಕುಳಿಯುವವರೆಗಿನ ಪ್ರಯಾಣ ಇದಾಗಿತ್ತು. ನಾನು ಅಪರಾಧ ಎಸಗಿದವಳಲ್ಲ. ಆದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ಮುಂದಾದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುತ್ತಿವೆ. ಇದನ್ನು ನೋಡಿದಾಗ ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ಮನವರಿಕೆಯಾಗಿದೆ. ನ್ಯಾಯವು ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು, ಯಾರೂ ಮುಂದೆ ಇಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವವರಿಗೆ, ನಿಮ್ಮ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಯಾರ ಹೆಸರನ್ನೂ ನಮೂದಿಸದೇ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ

    ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಜನ ಮನ್ನಣೆ ಪಡೆದಿರುವ ನಟಿಯಾಗಿದ್ದಾರೆ. 2017ರಲ್ಲಿ ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್‍ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಭಾವನಾ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಐದು ವರ್ಷ ಕಳೆದಿದೆ. ಈಗ ಭಾವನಾ ಆ ಘಟನೆ ಬಗ್ಗೆ ಮಾತನಾಡಿದ್ದಾರೆ.

    ಕಳೆದ ವರ್ಷ ಅವರ ನಟನೆಯ ನಾಲ್ಕು ಕನ್ನಡ ಚಿತ್ರಗಳು ತೆರೆಗೆ ಬಂದಿವೆ. ಸದ್ಯ, ಅವರು ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಅವರ ನಟನೆಯ ಭಜರಂಗಿ 2 ಕಳೆದ ಅಕ್ಟೋಬರ್ 29ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ತಮ್ಮ ಉತ್ತಮವಾದ ನಟನಾ ಕೌಶಲ್ಯದ ಮೂಲಕವಾಗಿ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

  • ಪೊಗದಸ್ತಾದ ಟಗರು!

    ಪೊಗದಸ್ತಾದ ಟಗರು!

    ಬೆಂಗಳೂರು: ಟಗರು ಥಿಯೇಟರಿಗೆ ಬಂದಿದೆ. ಸೂರಿ ನಿರ್ದೇಶನ, ಶಿವರಾಜ್ ಕುಮಾರ್ ಹೀರೋ. ಇಬ್ಬರಿಬ್ಬರ ಕಾಂಬಿನೇಷನ್ನಿನಲ್ಲಿ ಬಂದ ಎರಡನೇ ಸಿನಿಮಾ. ಹೀಗೆ ಹತ್ತು ಹಲವರು ಕಾರಣಗಳಿಗಾಗಿ ಟಗರು ಸಿನಿಮಾದ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದವರ ಪಾಲಿಗೂ ವಿಪರೀತ ಕುತೂಹಲವಿತ್ತು. ಈಗ ಆ ಎಲ್ಲ ನಿರೀಕ್ಷೆಗಳಿಗೂ ಉತ್ತರ ಸಿಕ್ಕಿದೆ.

    ಇರೋ ಬುದ್ಧಿಯನ್ನೇ ಬಂಡವಾಳ ಮಾಡಿಕೊಂಡು ಕ್ರೂರ ಕೆಲಸಗಳನ್ನು ಮಾಡಿಸುವ ಇಂಟಲಿಜೆಂಟ್ ಕ್ರಿಮಿನಲ್ಲುಗಳು. ರಾಜಕಾರಣಿಗಳು ಮತ್ತವರ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುವ ದುಷ್ಟರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೊಲೆಗಡುಕರನ್ನು ಮಟ್ಟಹಾಕಲು ನಿಲ್ಲುವ ಪೊಲೀಸ್ ಅಧಿಕಾರಿಗಳು. ಪ್ರೀತಿಸಿದವರಿಗೆ ಸಹಾಯ ಮಾಡಲು ಹೋಗಿ ಫೀಲ್ಡಿಗಿಳಿದು ಡಾನ್ ಆದವನು. ಸಹವಾಸ ದೋಷದಿಂದ ಬೇಡದ್ದನ್ನೆಲ್ಲಾ ಕಲಿತ ಹುಡುಗಿ. ಹೀಗೆ ಸಾಕಷ್ಟು ಎಲಿಮೆಂಟುಗಳನ್ನು ಒಂದಕ್ಕೊಂದು ಪೋಣಿಸಿ ತಯಾರಿಸಿರುವ ಗುಚ್ಛವೇ ಟಗರು.

    ಸೂರಿ ಕಥೆ ಕಟ್ಟುವ ರೀತಿಯೇ ವಿಶಿಷ್ಟ. ನೇರವಾಗಿ ಹೇಳಿಬಿಡಬಹುದಾದ ಎಳೆಯನ್ನು ಬೇರೆಯದ್ದೇ ಹಾದಿಯಲ್ಲಿ ಕೊಂಡೊಯ್ದು ನೋಡುಗರ ಎದೆ ಮುಟ್ಟಿಸುವ ಅವರ ಕಸುಬುದಾರಿಕೆ ಟಗರು ಚಿತ್ರದಲ್ಲೂ ಗೆಲುವು ಕಂಡಿದೆ. ಇಂಥ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಬಹಳ ಮುಖ್ಯ. ಇದೇ ಸಿನಿಮಾ ಬೇರೊಬ್ಬರ ಕೈಗೆ ಸಿಕ್ಕಿದ್ದರೆ ಅಬ್ಬರದಿಂದ ಗೊಬ್ಬರವಾಗುತ್ತಿತ್ತೋ ಏನೋ? ಆದರೆ ಸಂಗೀತ ನಿರ್ದೇಶಕ ಚರಣ್ ರಾಜ್ ಸಮಚಿತ್ತದಿಂದ ಕೂತು ಹಿನ್ನೆಲೆ ಶಬ್ದಗಳನ್ನು ಸೃಷ್ಟಿಸಿದ್ದಾರೆ. ಕ್ಯಾಮೆರಾ ಕೆಲಸ ಮಾಡಿರುವ ಮಹೇನ್ ಸಿಂಹ ಅಂತೂ ಇದು ಸಿನಿಮಾ ಅನ್ನೋದನ್ನೇ ಮರೆತು ಕಣ್ಣೆದುರೇ ನಡೆಯುತ್ತಿರುವ ದೃಶ್ಯಗಳಂತೆ ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.

    ಸಿನಿಮಾದಲ್ಲಿನ ಒಂದೊಂದು ಪಾತ್ರಗಳೂ ಖಡಕ್ಕಾಗಿ ಮೂಡಿಬಂದಿವೆ. ಇಂಟಲಿಜೆಂಟ್ ಡಾನ್ ಪಾತ್ರದಲ್ಲಿ ನಟಿಸಿರೋ ರಂಗಭೂಮಿ ಕಲಾವಿದ ಸಚ್ಚು ಮುಖಪರಿಚಯ ಮಾಮೂಲಿ ಪ್ರೇಕ್ಷಕರಿಗೆ ಗೊತ್ತಿಲ್ಲದಿದ್ದರೂ ಯಾವತ್ತಿಗೂ ನೆನಪಿನಲ್ಲುಳಿಯುವಂತೆ ನಟಿಸಿದ್ದಾರೆ. ಇನ್ನು ಮುಂದೆ ಹೀರೋ ಆಗಿಯೇ ಮುಂದುವರೆಯಬೇಕೆನ್ನುವ ಆಸೆಯನ್ನು ಪಕ್ಕಕ್ಕಿಟ್ಟು ಇಂಥಾ ಖಡಕ್ಕು ರೋಲುಗಳಲ್ಲಿ ಕಾಣಿಸಿಕೊಂಡರೆ ಧನಂಜಯ, ವಸಿಷ್ಠರಂತ ನಟರು ದೊಡ್ಡ ಎತ್ತರಕ್ಕೇರುವುದರಲ್ಲಿ ಡೌಟಿಲ್ಲ.

    ಇನ್ನು ಟಗರು ಟೈಟಲ್ ಸಾಂಗ್‍ಗೆ ಚರಣ್ ರಾಜ್ ಕೊಟ್ಟಿರೋ ಟ್ಯೂನು, ಅಂಥೋಣಿ ದಾಸನ್ ಧ್ವನಿಗೆ ನಿಜಕ್ಕೂ ಬೆಲೆ ತಂದುಕೊಟ್ಟಿರೋದು ನೃತ್ಯ ನಿರ್ದೇಶಕ. ಲಾರಿ ಎಪಿಸೋಡುಗಳ ಫೈಟ್ ಕಂಪೋಸ್ ಮಾಡಿರುವ ಜಾಲಿ ಬಾಸ್ಟಿನ್ ಕೆಲಸ ರೋಚಕ. ಸಂಭಾಷಣೆ ಬರೆದಿರುವ ಮಾಸ್ತಿ ಸಾಮಾನ್ಯವಾಗಿ ರೌಡಿಗಳ ಬಾಯಿಂದ ಹೊರಡುವ ಮಾತನ್ನೇ ಯಥಾವತ್ತು ಅಕ್ಷರಕ್ಕಿಳಿಸಿದ್ದಾರೆ.

    ಒಟ್ಟಾರೆಯಾಗಿ ನೋಡಿದರೆ ಟಗರು ಕಮರ್ಷಿಯಲ್ ಸಿನಿಮಾಗಳನ್ನು ಇಷ್ಟಪಡುವವರು ಮತ್ತು ಫ್ಯಾಮಿಲಿ ಆಡಿಯನ್ಸು ಕೂಡಾ ನೋಡಬಹುದಾದ ಸಿನಿಮಾ.

  • ನಟಿ ಭಾವನಾ ಮೆನನ್ ಮದುವೆಗೆ ಸ್ಪೆಷಲ್ ವಿಶ್ ಕೋರಿದ ನಟಿ ಪ್ರಿಯಾಂಕಾ ಚೋಪ್ರಾ

    ನಟಿ ಭಾವನಾ ಮೆನನ್ ಮದುವೆಗೆ ಸ್ಪೆಷಲ್ ವಿಶ್ ಕೋರಿದ ನಟಿ ಪ್ರಿಯಾಂಕಾ ಚೋಪ್ರಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಭಾವನಾ ಮೆನನ್ ಇಂದು ತಮ್ಮ ಬಹುದಿನದ ಗೆಳೆಯ ನವೀನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಭಾವನಾ ಹಾಗೂ ನವೀನ್ ದಾಂಪತ್ಯ ಜೀವನಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಡಿಯೋ ಮೂಲಕ ಅವರಿಗೆ ಶುಭಾಶಯವನ್ನು ಕೋರಿದ್ದಾರೆ.

    ನಾನು ನಿಮ್ಮ ದಾಂಪತ್ಯ ಜೀವನಕ್ಕೆ ಶುಭಾಶಯ ಕೋರುತ್ತೇನೆ. ನಿಮ್ಮ ಜೀವನದ ಪಯಣದಲ್ಲಿ ಇದೊಂದು ದೊಡ್ಡ ನಿರ್ಧಾರ. ನಾನು ನಿಮಗೆ ಗುಡ್ ಲಕ್ ತಿಳಿಸುತ್ತೇನೆ. ನೀವು ಅತ್ಯಂತ ಉತ್ಸಾಹಭರಿತ, ಕೆಚ್ಚೆದೆಯ ಮತ್ತು ಅದ್ಭುತ ಮಹಿಳೆ. ನನಗೆ ನೀವು ಎಂದರೆ ಅಚ್ಚುಮೆಚ್ಚು. ನಾನು ಯಾವಾಗಲ್ಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ವಿಡಿಯೋದಲ್ಲಿ ಪ್ರಿಯಾಂಕಾ ಶುಭಾಶಯ ಕೋರಿದ್ದಾರೆ.

    ಕೇರಳದ ತ್ರಿಶೂರ್‍ನ ಜವರ್‍ಲಾಲ್ ಕನ್ವೇಷನ್ ಹಾಲ್‍ನಲ್ಲಿ ಮದುವೆ ಸಮಾರಂಭ ನಡೆದಿದೆ. ಭಾನುವಾರ ರಾತ್ರಿ ಮಹೆಂದಿ ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳು ಹರಿದಾಡುತ್ತಿವೆ.

    2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

     

  • ಹಸೆಮಣೆ ಏರಲಿದ್ದಾರೆ ಭಾವನಾ ಮೆನನ್-ಮಹೆಂದಿಯಲ್ಲಿ ಗೆಳತಿಯರೊಂದಿಗೆ ಮೋಜು ಮಸ್ತಿ

    ಹಸೆಮಣೆ ಏರಲಿದ್ದಾರೆ ಭಾವನಾ ಮೆನನ್-ಮಹೆಂದಿಯಲ್ಲಿ ಗೆಳತಿಯರೊಂದಿಗೆ ಮೋಜು ಮಸ್ತಿ

    ಬೆಂಗಳೂರು: ಸ್ಯಾಂಡಲ್ ವುಡ್‍ನ ಚೆಂದುಳ್ಳಿ ಚೆಲುವೆ ಭಾವನಾ ಮೆನನ್ ಬಹುದಿನಗಳ ಗೆಳೆಯ ಕಮ್ ನಿರ್ಮಾಪಕ ಬೆಂಗಳೂರಿನ ನವೀನ್ ಜೊತೆ ಇಂದು ಹಸೆಮಣೆ ಏರಲಿದ್ದಾರೆ.

    ಕೇರಳದ ತ್ರಿಶೂರ್‍ನ ಜವರ್‍ಲಾಲ್ ಕನ್ವೇಷನ್ ಹಾಲ್‍ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ಭಾನುವಾರ ರಾತ್ರಿ ಮಹೆಂದಿ ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳು ಹರಿದಾಡುತ್ತಿವೆ.

    2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

  • ನಟಿ ಭಾವನಾ – ನವೀನ್ ಮದುವೆ ಡೇಟ್ ಫಿಕ್ಸ್

    ನಟಿ ಭಾವನಾ – ನವೀನ್ ಮದುವೆ ಡೇಟ್ ಫಿಕ್ಸ್

    ಬೆಂಗಳೂರು: ನಟಿ ಭಾವನಾ ಮೆನನ್ ಹಾಗೂ ಕನ್ನಡ ನಿರ್ಮಾಪಕ ನವೀನ್ ವಿವಾಹದ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ಅಕ್ಟೋಬರ್ 27ರಂದು ಕೇರಳದ ತ್ರಿಶೂರ್‍ನಲ್ಲಿ ವಿವಾಹವಾಗಲಿದ್ದಾರೆ.

    ಸಂಬಂಧಿಕರು ಹಾಗೂ ಆಪ್ತರನ್ನಷ್ಟೇ ಮದುವೆಗೆ ಆಹ್ವಾನಿಸುವುದಾಗಿ ಭಾವನಾ ತಾಯಿ ಪುಷ್ಪಾ ಹೇಳಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಭಾವನಾ ಶೂಟಿಂಗ್ ಮುಗಿಸ್ ಸ್ಕಾಟ್ಲೆಂಡ್‍ನಿಂದ ವಾಪಾಸ್ ಆಗಲಿದ್ದು, ಮದುವೆಗೆ ಚಿತ್ರರಂಗದಿಂದ ಯಾರನ್ನೆಲ್ಲಾ ಆಹ್ವಾನಿಸಬೇಕು ಎಂದು ಭಾವನಾ ಅವರೇ ಖುದ್ದಾಗಿ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕೊಚ್ಚಿ ನಗರದಲ್ಲಿ ಯಾವುದೇ ಕಾರ್ಯಕ್ರಮ ನಿಗದಿಗೊಳಿಸಿಲ್ಲ ಎಂದೂ ಅವರು ಹೇಳಿದ್ದಾರೆ. ಸದ್ಯ ಭಾವನಾ ಸ್ಕಾಟ್ಲೆಂಡ್‍ನಲ್ಲಿ ಪೃಥ್ವಿರಾಜ್ ರಾಜ್ ಜೊತೆ ಆದಂ ಜೋನ್ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ.

    ಕಳೆದ ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜು ವಾರಿಯರ್ ಹಾಗೂ ಸಂಯುಕ್ತ ವರ್ಮಾ ಪಾಲ್ಗೊಂಡಿದ್ದರು.

    ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಲ್ಲೂ ಅಭಿನಯಿಸಿದ್ದರು.

     

  • ಸ್ಯಾಂಡಲ್‍ವುಡ್ ನಿರ್ಮಾಪಕನ ಜೊತೆ ನಟಿ ಭಾವನಾ ಮೆನನ್ ನಿಶ್ಚಿತಾರ್ಥ

    ಸ್ಯಾಂಡಲ್‍ವುಡ್ ನಿರ್ಮಾಪಕನ ಜೊತೆ ನಟಿ ಭಾವನಾ ಮೆನನ್ ನಿಶ್ಚಿತಾರ್ಥ

    ತಿರುವನಂತಪುರಂ: ಬಹುಭಾಷಾ ನಟಿ ಭಾವನಾ ಮೆನನ್‍ಗೆ ಕಂಕಣ ಭಾಗ್ಯ ಕೂಡಿಬಂದಿದೆ. ಸ್ಯಾಂಡಲ್‍ವುಡ್‍ನಲ್ಲಿ ರೋಮಿಯೋ ಚಿತ್ರದ ನಿರ್ಮಾಪಕ ನವೀನ್ ಜೊತೆ ನಟಿ ಭಾವನರವರ ಎಂಗೇಜ್‍ಮೆಂಟ್ ನೆರವೇರಿದೆ.

    ನವೀನ್ ಮತ್ತು ಭಾವನ ನಡುವೆ ಲವ್ ಇದೆ ಎಂದು ಗಾಂಧಿನಗರದಲ್ಲಿ ಗಾಸಿಪ್‍ಗಳು ಹರಿದಾಡಿದ್ದವು. ಈಗ ಮಾತಿಗೆ ಪುಷ್ಟಿ ಎನ್ನುವಂತೆ ಇಂದು ಭಾವನಾ ಮತ್ತು ನವೀನ್ ನಿಶ್ಚಿತಾರ್ಥ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

    ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜು ವಾರಿಯರ್ ಹಾಗೂ ಸಂಯುಕ್ತ ವರ್ಮಾ ಉಪಸ್ಥಿತರಿದ್ದರು.

    ನವೀನ್ ಹಾಗೂ ಭಾವನಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು ಇದೇ ಜೂನ್‍ನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಹರಿದಾಡುತಿತ್ತು.

    ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ ‘ವಿಷ್ಣುವರ್ಧನ್’ ಹಾಗೂ ‘ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

    ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ