Tag: ಭಾರತ

  • 31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು 31 ರನ್ ಗಳಿಸಿದರೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲಿದ್ದಾರೆ.

    ಇದೂವರೆಗೆ ವೀರೇಂದ್ರ ಸೆಹ್ವಾಗ್ 2004-05ರ ಅವಧಿಯಲ್ಲಿ 9 ಪಂದ್ಯಗಳಿಂದ 1105 ರನ್‍ಗಳಿಸಿದ್ದರು. ಈಗ ಕೊಹ್ಲಿ ಅಷ್ಟೇ ಪಂದ್ಯಗಳಿಂದ 1075 ರನ್‍ಗಳಿಸಿದ್ದಾರೆ.

    ಸೆಹ್ವಾಗ್ 4 ಶತಕ, ಮೂರು ಅರ್ಧ ಶತಕ ಹೊಡೆಯುವ ಮೂಲಕ ಈ ಸಾಧನೆ ಮಾಡಿದರೆ ಕೊಹ್ಲಿ 4 ಶತಕ 2 ಅರ್ಧಶತಕ ಹೊಡೆದಿದ್ದಾರೆ. 2016ರಲ್ಲಿ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳಿಂದ 309 ರನ್ ಬಾರಿಸಿದ್ದರೆ, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳಿಂದ 655 ರನ್ ಹೊಡೆದಿದ್ದರು.

    ಈಗ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಅಜೇಯ 111 ರನ್(141 ಎಸೆತ, 12ಬೌಂಡರಿ) ಗಳಿಸಿದ್ದಾರೆ.

    ಉತ್ತಮ ಸ್ಥಿತಿಯಲ್ಲಿ ಭಾರತ:
    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡರೂ ಮೊದಲ ದಿನದ ಅಂತ್ಯಕ್ಕೆ 90 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 356 ರನ್‍ಗಳಿಸಿದೆ.

    ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಎರಡನೇ ವಿಕೆಟಿಗೆ 178 ರನ್‍ಗಳ ಜೊತೆಯಾಟವಾಡಿದರು. ಪೂಜಾರ 83 ರನ್( 177 ಎಸೆತ, 9 ಬೌಂಡರಿ) ಬಾರಿಸಿದರೆ ಮುರಳಿ ವಿಜಯ್ 108 ರನ್(160 ಎಸೆತ 12 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.

    130 ಎಸೆತದಲ್ಲಿ 16ನೇ ಶತಕ ಹೊಡೆದ ಕೊಹಿಗ್ಲೆ ರಹಾನೆ 45 ರನ್( 60 ಎಸೆತ, 7 ಬೌಂಡರಿ) ಹೊಡೆದು ಸಾಥ್ ನೀಡಿದ್ದಾರೆ.

     

  • ಚೀನಾದಿಂದ 10 ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷೆ

    ಬೀಜಿಂಗ್: ನೆರೆಯ ದೇಶ ಚೀನಾ, ಪರಮಾಣು ಕ್ಷಿಪಣಿ ಪರೀಕ್ಷೆ ಮಾಡಿದೆ. 10 ಪರಮಾಣು ಸಿಡಿತಲೆಗಳನ್ನ ಹೊತ್ತೊಯ್ಯಬಲ್ಲ ಡಿಎಫ್ – 5ಸಿ ಕ್ಷಿಪಣಿಯನ್ನ ಚೀನಾ ಪರೀಕ್ಷೆ ಮಾಡಿದೆ.

    ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಶುರುವಾದ ತಕ್ಷಣ ಕಳೆದ ತಿಂಗಳು, ಚೀನಾದ ಶಾಂಕ್ಷಿ ಪ್ರಾಂತ್ಯದ ತೈಯುವಾನ್ ಬಾಹ್ಯಾಕಾಶ ಉಡವಾಣಾ ಕೇಂದ್ರದಲ್ಲಿ ಡೊಂಗ್‍ಫೆಂಗ್ – 5ಸಿ ಕ್ಷಿಪಣಿಯಲ್ಲಿ ಡಮ್ಮಿ ಪರಮಾಣು ಸಿಡಿತಲೆಗಳನ್ನ ಪರೀಕ್ಷೆ ಮಾಡಿದೆ ಅಂತ ಅಮೆರಿಕಾ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ.

    ವ್ಯಾಪಾರ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ನೆಲೆಯ ವಿಚಾರದಲ್ಲಿ ಟ್ರಂಪ್ ಚೀನಾ ವಿರುದ್ಧ ಕಠಿಣ ನಿಲುವು ತಳೆಯಬಹುದು ಎಂಬ ಸಂಕೇತ ಬರುವಾಗಲೇ ಚೀನಾ ಈ ಪರೀಕ್ಷೆ ನಡೆಸಿದೆ. ಸದ್ಯ ಚೀನಾ ಬಳಿ 250ರಷ್ಟು ಪರಮಾಣು ಬಲ ಇರೋದಾಗಿ ಅಮೆರಿಕಾ ಅಂದಾಜಿಸಿದೆ.

    ಈ ನಡುವೆ ಪಾಕಿಸ್ತಾನ ಸರ್ಕಾರ ಗೃಹ ಬಂಧನದಲ್ಲಿರೋ ಉಗ್ರ ಹಫೀಜ್ ಸಯೀದ್‍ನನ್ನ ನಿರ್ಗಮ ನಿಯಂತ್ರಣ ಪಟ್ಟಿಗೆ ಸೇರ್ಪಡೆ ಮಾಡಿದೆ. ದೇಶ ಬಿಟ್ಟು ತೆರಳದಂತೆ ತಡೆದಿರೋ ಈ ಕಾನೂನಿನಿಂದ ಇತರೆ ಉಗ್ರರಿಗೂ ಶಾಕ್ ಆಗಿದೆ.

  • ಚಿನ್ನಸ್ವಾಮಿಯಲ್ಲಿ ಸಿಕ್ಸರ್, ಬೌಂಡರಿ ಸುರಿಮಳೆ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್ ಏರ್ ಸೌಲಭ್ಯ ಅಳವಡಿಕೆಯಾದ ನಡೆದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ಬ್ಯಾಟ್ಸ್ ಮನ್‍ಗಳು ರನ್ ಸುರಿಮಳೆಗೈದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೂರನೇಯ ಟಿ 20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಸುರೇಶ್ ರೈನಾ, ಧೋನಿ ಅರ್ಧಶತಕ, ಕೊನೆಯಲ್ಲಿ ಯುವರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.

    ಎರಡನೇ ಓವರ್‍ನ ಮೊದಲ ಎಸೆತದಲ್ಲಿ ನಾಯಕ ಕೊಹ್ಲಿ ಜೊರ್ಡನ್ ಬೌಲಿಂಗ್‍ನಲ್ಲಿ ರನೌಟ್ ಆದರು. ಆರಂಭದಲ್ಲಿ ಕುಸಿತ ಕಂಡರೂ ಎರಡನೇ ವಿಕೆಟ್‍ಗೆ ರಾಹುಲ್ ಮತ್ತು ರೈನಾ 6.1 ಓವರ್‍ನಲ್ಲಿ 61 ರನ್ ಕಲೆ ಹಾಕಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು.

    22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಗಳಿಸಿದ್ದ ರಾಹುಲ್ ಔಟಾದಾಗ ತಂಡದ ಮೊತ್ತ 65 ಆಗಿತ್ತು. ಧೋನಿ ಕ್ರೀಸ್‍ಗೆ ಬಂದ ಮೇಲೆ ಸಿಕ್ಸರ್, ಬೌಂಡರಿ ಸಿಡಿಯಲು ಆರಂಭವಾಯಿತು.

    ರೈನಾ ಮತ್ತು ಧೋನಿ 37 ಎಸೆತದಲ್ಲಿ 55 ರನ್ ಜೊತೆಯಾಟವಾಡಿದರು. 39 ಎಸೆತದಲ್ಲಿ ಅರ್ಧಶತಕ ಹೊಡೆದ ರೈನಾ ಅಂತಿಮವಾಗಿ 63 ರನ್(45 ಎಸೆತ, 2 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಮೊರ್ಗನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.

    ಯುವರಾಜ್ ಬಂದ ಕೂಡಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಜೊರ್ಡನ್ ಎಸೆದ 18ನೇ ಓವರ್ ನಲ್ಲಿ ಯುವರಾಜ್ ಮೂರು ಸಿಕ್ಸರ್ ಒಂದು ಬೌಂಡರಿ ಚಚ್ಚಿದರು. ಈ ಓವರ್‍ನಲ್ಲಿ ಧೋನಿ ಮತ್ತು ಯುವಿ 24 ರನ್ ಸೊರೆಗೈದರು. ಉತ್ತಮವಾಗಿ ಆಡುತ್ತಿದ್ದ ಯುವರಾಜ್ ಸಿಂಗ್ 27 ರನ್( 10 ಎಸೆತ, 1 ಬೌಂಡರಿ,1 ಸಿಕ್ಸರ್) ಗಳಿಸಿದ್ದಾಗ ಮಿಲ್ಸ್ ಎಸೆದ ಸ್ಲೋ ಬಾಲಿಗೆ ಕೀಪರ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇವರಿಬ್ಬರು 28 ಎಸೆತದಲ್ಲಿ 57 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170 ರನ್‍ಗಳ ಗಡಿ ದಾಟಿಸಿದರು.

    ಧೋನಿ 56 ರನ್(36 ಎಸೆತ,5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ, 11 ರನ್(4 ಎಸೆತ, 1 ಸಿಕ್ಸರ್) ಗಳಿಸಿದ್ದ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಕೊನೆಯ ಬಾಲ್‍ನಲ್ಲಿ ರನ್ ಔಟಾದರು. ಕೊನೆಯಲ್ಲಿ ರಿಶಬ್ ಪಂತ್ 6 ರನ್ ಗಳಿಸಿ ಔಟಾಗದೇ ಉಳಿದರು.

     12 ಸಿಕ್ಸರ್, 11 ಬೌಂಡರಿ ಸಿಡಿದರೆ, ಇತರೇ ರೂಪದಲ್ಲಿ 15 ರನ್ ಟೀಂ ಇಂಡಿಯಾಗೆ ಬಂತು.

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 5.5 ಓವರ್
    100 ರನ್ – 12.1 ಓವರ್
    150 ರನ್ – 16.5 ಓವರ್
    200 ರನ್ – 19.5 ಓವರ್
    202 ರನ್ – 20 ಓವರ್

  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಭಾರತ-ಇಂಗ್ಲೆಂಡ್ ಟಿ20 ಫೈನಲ್

    – ಭಾರತ ಗೆದ್ರೆ ಕೊಹ್ಲಿ ಟಿ-20ಗೂ ಸಾಮ್ರಾಟ್

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಇಂಡೋ-ಇಂಗ್ಲೆಂಡ್ ಟಿ-20 ಸರಣಿಯ ಅಂತಿಮ ಹಣಾಹಣಿ ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿರೋದ್ರಿಂದ ಜಿದ್ದಾಜಿದ್ದಿನ ಹೋರಾಟ ನಡೆಯೋದಂತೂ ಸತ್ಯ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಿಸಿದ ಕೊಹ್ಲಿ ಮೂರೂ ಪ್ರಕಾರದ ಪಂದ್ಯಗಳಿಗೆ ನಾಯಕರಾದ ಮೇಲೆ ಏಕದಿನ ಸರಣಿಯನ್ನೂ ಬಾಚಿಕೊಂಡು ಈಗ ಟಿ-20 ಮೇಲೂ ಕಣ್ಣಿಟ್ಟಿದ್ದಾರೆ. ಟೀಂ ಇಂಡಿಯಾ ಗೆದ್ರೆ ಆಂಗ್ಲರ ಭಾರತ ಪ್ರವಾಸ `ಹೋದ ಪುಟ್ಟಾ ಬಂದ ಪುಟ್ಟ’ ಎಂಬಂತಾಗುತ್ತೆ. ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಆರ್‍ಸಿಬಿ ನಾಯಕರಾಗಿರೋ ಹಾಗೂ ಟಿ-20 ನಾಯಕರಾಗಿ ಆಯ್ಕೆಯಾದ ಬಳಿಕ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಇದೇ ಮೊದಲ ಪಂದ್ಯವಾಗಿದೆ. ಹೀಗಾಗಿ ನೆಚ್ಚಿನ ನಾಯಕನ ಆಟದ ಜೊತೆಗೆ ಟೀಂ ಇಂಡಿಯಾದ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.