Tag: ಭಾರತ

  • 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

    76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

    ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾ ಸೋತಿದ್ದರೂ ಭಾರತದ ಪರ ಭರ್ಜರಿಯಾಗಿ ಆಡಿದ್ದ ಹಾರ್ದಿಕ್ ಪಾಂಡ್ಯ ಹೊಸ ದಾಖಲೆ ಬರೆದಿದ್ದಾರೆ.

    ಐಸಿಸಿ ಆಯೋಜಿಸಿದ್ದ ಟೂರ್ನಿಯ ಫೈನಲ್ ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.

    32 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಆಡಂ ಗಿಲ್‍ ಕ್ರಿಸ್ಟ್ ದಾಖಲೆಯನ್ನು ಪಾಂಡ್ಯ ಮುರಿದಿದ್ದಾರೆ. 1999ರಲ್ಲಿ ಪಾಕ್ ವಿರುದ್ಧದ ಇಂಗ್ಲೆಂಡಿನ ಲಾರ್ಡ್ಸ್  ನಲ್ಲಿ ನಡೆದ ವಿಶ್ವಕಪ್ ಫೈನಲ್‍ನಲ್ಲಿ ಗಿಲ್‍ ಕ್ರಿಸ್ಟ್ 33 ಎಸೆತದಲ್ಲಿ 50 ರನ್ ಹೊಡೆದ್ದರು.

    ಇಂದಿನ ಪಂದ್ಯದಲ್ಲಿ ಹಫೀಸ್ 34 ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ವೇಗದ ಅರ್ಧಶತಕ ಹೊಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

    ಹಾರ್ದಿಕ್ ಪಾಂಡ್ಯ 76 ರನ್( 43 ಎಸೆತ, 4 ಬೌಂಡರಿ, 6 ಸಿಕ್ಸರ್) ಸಿಡಿಸಿದ್ದಾಗ ರನೌಟ್‍ಗೆ ಬಲಿಯಾದರು.

    ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದ್ದರೆ ಭಾರತ 30.3 ಓವರ್ ಗಳಲ್ಲಿ 158 ರನ್‍ಗಳಿಗೆ ಆಲೌಟ್ ಆಯ್ತು. 180 ರನ್‍ಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮೊದಲ ಬಾರಿಗೆ ಗೆದ್ದುಕೊಂಡ ಸಾಧನೆ ಮಾಡಿತು.

    ಇದನ್ನೂ ಓದಿ:ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

     

     

     

  • ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

    ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

    ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ನಗದು ಬಹುಮಾನ ಸಿಕ್ಕಿದೆ.

    ಈ ಟೂರ್ನಿಗೆ ಒಟ್ಟು 4.5 ದಶಲಕ್ಷ ಡಾಲರ್(ಅಂದಾಜು 28 ಕೋಟಿ ರೂ.) ನಗದು ಬಹುಮಾನ ನೀಡುವುದಾಗಿ ಐಸಿಸಿ ತಿಳಿಸಿದ್ದು, ದ್ವಿತೀಯ ಸ್ಥಾನಿ ಭಾರತಕ್ಕೆ 1.1 ದಶಲಕ್ಷ ಡಾಲರ್(ಅಂದಾಜು 7ಕೋಟಿ ರೂ.) ಬಹುಮಾನ ಸಿಕ್ಕಿದೆ.

    ಸೆಮಿಫೈನಲ್‍ನಲ್ಲಿ ಸೋತ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಕ್ಕೆ 4.50 ಲಕ್ಷ ಡಾಲರ್(ಅಂದಾಜು 2.8 ಕೋಟಿ ರೂ.) ಸಿಕ್ಕಿದರೆ, ಗುಂಪಿನಲ್ಲಿ ಮೂರನೇ ಸ್ಥಾನವನ್ನು ಪಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗೆ 90 ಸಾವಿರ ಡಾಲರ್(ಅಂದಾಜು 57 ಲಕ್ಷ ರೂ.), ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಪಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್‍ಗೆ 60 ಸಾವಿರ ಡಾಲರ್( ಅಂದಾಜು 38 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    2013ರ ಟೂರ್ನಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ಬಹುಮಾನದ ಮೊತ್ತವನ್ನು ಹೆಚ್ಚಿಸಿದ್ದು, ಒಟ್ಟು 5 ಲಕ್ಷ ಡಾಲರ್(ಅಂದಾಜು 3 ಕೋಟಿ ರೂ.) ಹೆಚ್ಚಿನ ಅನುದಾನವನ್ನು ನೀಡಿತ್ತು. ಜೂನ್1 ರಿಂz ಆರಂಭಗೊಂಡ ಟೂರ್ನಿ ಜೂನ್ 18ರವರೆಗೆ ಇಂಗ್ಲಡಿನಲ್ಲಿ ನಡೆದಿತ್ತು.

    2013ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಪಂದ್ಯಾಟದಲ್ಲಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತ್ತು.

     

  • ಭಾರತಕ್ಕೆ ಹೀನಾಯ ಸೋಲು: ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟ ಪಾಕ್

    ಭಾರತಕ್ಕೆ ಹೀನಾಯ ಸೋಲು: ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟ ಪಾಕ್

    ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಭಾರತವನ್ನು 180 ರನ್‍ಗಳಿಂದ ಮಣಿಸುವ ಮೂಲಕ ಪಾಕಿಸ್ತಾನ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದೆ.

    ಗೆಲ್ಲಲು 339 ರನ್‍ಗಳ ಕಠಿಣ ಗುರಿಯನ್ನು ಪಡೆದ ಭಾರತ 30.3 ಓವರ್ ಗಳಲ್ಲಿ 158 ರನ್‍ಗಳಿಗೆ ಆಲೌಟ್ ಆಯ್ತು.

    ಆರಂಭದಲ್ಲಿ ಬೌಲರ್‍ಗಳು ಕೈ ಕೊಟ್ಟರೆ ಬ್ಯಾಟಿಂಗ್ ನಲ್ಲಿ ಬ್ಯಾಟ್ಸ್ ಮನ್‍ಗಳು ಕೈ ಕೊಟ್ಟ ಕಾರಣ ಭಾರತಕ್ಕೆ ಹೀನಾಯ ಸೋಲಾಗಿದೆ.

    ಭಾರತದ ಪರ ಹಾರ್ದಿಕ್ ಪಾಂಡ್ಯ ಬಿರುಸಿನ 76 ರನ್(43 ಎಸೆತ, 4 ಬೌಂಡರಿ, 6 ಸಿಕ್ಸರ್) ಸಿಡಿಸಿ ತಾನೊಬ್ಬ ಉತ್ತಮ ಆಲ್‍ರೌಂಡರ್ ಎಂದು ತೋರಿಸಿಕೊಟ್ಟರೆ, ಶಿಖರ್ ಧವನ್ 21 ರನ್, ಯುವರಾಜ್ ಸಿಂಗ್ 22 ರನ್, ರವೀಂದ್ರ ಜಡೇಜಾ 15 ರನ್ ಗಳಿಸಿದರು.

    ರೋಹಿತ್ ಶರ್ಮಾ 0, ಕೊಹ್ಲಿ 5, ಧೋನಿ 4, ಜಾಧವ್ 9, ಆರ್ ಅಶ್ವಿನ್ 1, ಭುವನೇಶ್ವರ್ ಕುಮಾರ್ ಔಟಾಗದೇ 1, ಬುಮ್ರಾ 1 ರನ್ ಗಳಿಸಿದರು.

    ಪಾಕ್ ಪರ ಮೊಹಮ್ಮದ್ ಅಮೀರ್ ಮತ್ತು ಹಸನ್ ಅಲಿ ತಲಾ 3 ವಿಕೆಟ್ ಪಡೆದರೆ, ಶಾಡಾಬ್ ಖಾನ್ 2, ಜುನೈದ್ ಖಾನ್ 1 ವಿಕೆಟ್ ಪಡೆದರು.

    ಭರ್ಜರಿ ಮೊತ್ತ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಫಖರ್ ಜಮಾನ್ ಶತಕ ಮತ್ತು ಅಜರ್ ಅಲಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತ್ತು.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ಫಕರ್ ಜಮಾನ್ ಮತ್ತು ಖಕರ್ ಅಲಿ 138 ಎಸೆತಗಳಲ್ಲಿ 128 ರನ್ ಜೊತೆಯಾಟವಾಡುವ ಮೂಲಕ ಪಾಕ್ ಇನ್ನಿಂಗ್ಸ್ ಗೆ ಭದ್ರ ಅಡಿಪಾಯ ಹಾಕಿದರು. 61 ಎಸೆತಗಳಲ್ಲಿ ಅರ್ಧಶತಕಗಳಿಸಿದ್ದ ಫಖರ್ ಅಲಿ 59 ರನ್(71 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ರನ್‍ಔಟ್ ಆದರು.

    ಫಖರ್ ಜಮಾನ್ ಶತಕ: 4ನೇ ಪಂದ್ಯವನ್ನು ಆಡುತ್ತಿರುವ ಫಖರ್ ಜಮಾನ್ 92 ಎಸೆತದಲ್ಲಿ ಮೊದಲ ಶತಕ ಹೊಡೆದರು. ಅಂತಿಮವಾಗಿ 114 ರನ್(106 ಎಸೆತ, 12 ಬೌಂಡರಿ, 3 ಸಿಕ್ಸರ್) ಗಳಿಸಿದ್ದಾಗ ಪಾಂಡ್ಯ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿ ಔಟಾದರು.

    ನಂತರ ಬಂದ ಬಾಬರ್ ಅಜಂ 46 ರನ್‍ಗಳಿಸಿದರೆ ಶೋಯಬ್ ಮಲಿಕ್ 12 ರನ್‍ಗಳಿಸಿ ಔಟಾದರು. ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ 45 ಎಸೆತಗಳಲ್ಲಿ ಮೊಹಮ್ಮದ್ ಹಫೀಸ್ ಮತ್ತು ಇಮಾದ್ ವಾಸಿಂ 71 ರನ್ ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು.

    ಮೊಹಮ್ಮದ್ ಹಫೀಸ್ ಔಟಾಗದೇ 57 ರನ್(37 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ, ಇಮಾದ್ ವಾಸೀಂ ಔಟಾಗದೇ 25 ರನ್(21 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

    ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ವಿಕೆಟ್ ಪಡೆದರು. ಇತರೇ ರೂಪದಲ್ಲಿ ಭಾರತ 25 ರನ್ ನೀಡಿತ್ತು

    ಪಾಕ್ ರನ್ ಏರಿದ್ದು ಹೇಗೆ?
    50 ರನ್ – 9.2 ಓವರ್
    100 ರನ್ – 17.6 ಓವರ್
    150 ರನ್ – 25.6 ಓವರ್
    200 ರನ್ – 32.5 ಓವರ್
    250 ರನ್ – 40.1 ಓವರ್
    300 ರನ್ – 45.2 ಓವರ್
    338 ರನ್ – 50 ಓವರ್

    ಈ ಹಿಂದಿನ ಚಾಂಪಿಯನ್‍ಗಳು: ದಕ್ಷಿಣ ಆಫ್ರಿಕಾ(1998), ನ್ಯೂಜಿಲೆಂಡ್(2000), ಭಾರತ -ಶ್ರೀಲಂಕಾ(2002), ವೆಸ್ಟ್ ಇಂಡೀಸ್(2004), ಆಸ್ಟ್ರಲಿಯಾ(2006), ಆಸ್ಟ್ರೇಲಿಯಾ(2009), ಭಾರತ(2013)ರಲ್ಲಿ ಕಪ್ ಜಯಿಸಿತ್ತು.

     

  • ಹಾಕಿಯಲ್ಲಿ ಪಾಕ್ ವಿರುದ್ಧ ಗೋಲುಗಳ ಸುರಿಮಳೆ: 7-1 ಅಂತರದಿಂದ ಗೆದ್ದ ಭಾರತ

    ಹಾಕಿಯಲ್ಲಿ ಪಾಕ್ ವಿರುದ್ಧ ಗೋಲುಗಳ ಸುರಿಮಳೆ: 7-1 ಅಂತರದಿಂದ ಗೆದ್ದ ಭಾರತ

    ಲಂಡನ್: ಹಾಕಿ ವಿಶ್ವ ಲೀಗ್ ಸೆಮಿಫೈನಲ್‍ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡ ಭಾನುವಾರ ಪಾಕಿಸ್ತಾನದ ವಿರುದ್ಧ 7-1 ಅಂತರದಿಂದ ಗೆಲುವು ಸಾಧಿಸಿದೆ.

    ಮೊದಲಾರ್ಧದಲ್ಲಿ 3-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಭಾರತ ನಂತರದ ಅವಧಿಯಲ್ಲಿ 4 ಗೋಲುಗಳನ್ನು ಹೊಡೆಯುವ ಮೂಲಕ ಜಯಭೇರಿ ಭಾರಿಸಿತು.

    ಹರ್ಮನ್ ಪ್ರೀತ್ ಸಿಂಗ್, ತಲ್ವಿಂದರ್ ಸಿಂಗ್, ಆಕಾಶ್‍ದೀಪ್ ಸಿಂಗ್ ತಲಾ ಎರಡು ಗೋಲು ಹೊಡೆದರು. ಪಾಕ್ ಪರ ಮಹಮ್ಮದ್ ಉಮರ್ ಒಂದು ಗೋಲು ಹೊಡೆದರು.

    13 ನಿಮಿಷದಲ್ಲಿ ಹರ್ಮನ್‍ಪ್ರೀತ್ ಸಿಂಗ್ ಮೊದಲ ಗೋಲು ಹೊಡೆದರೆ 21 ನಿಮಿಷದಲ್ಲಿ ತಲ್ವಿಂದರ್ ಸಿಂಗ್ ಎರಡನೇ ಗೋಲು ಹೊಡೆದರು. 24 ನಿಮಿಷದಲ್ಲಿ ಎರಡನೇ ಗೋಲು ಹೊಡೆಯುವ ಮೂಲಕ ತಲ್ವಿಂದರ್ ಸಿಂಗ್ ಭಾರತಕ್ಕೆ 3-0 ಮುನ್ನಡೆಯನ್ನು ತಂದುಕೊಟ್ಟರು.

    33 ನಿಮಿಷದಲ್ಲಿ ಹರ್ಮನ್‍ಪ್ರೀತ್ ಮತ್ತೊಂದು ಗೋಲು ಹೊಡೆದರೆ,  47 ನಿಮಿಷದಲ್ಲಿ ಆಕಾಶ್‍ದೀಪ್ ಗೋಲ್ ಹೊಡೆದರೆ, 49 ನಿಮಿಷದಲ್ಲಿ ಪ್ರದೀಪ್ ಗೋಲು ಹೊಡೆಯುವ ಮೂಲಕ ಸಂಪೂರ್ಣ ಮುನ್ನಡೆ ಸಾಧಿಸುವಲ್ಲಿ ಭಾರತ ಯಶಸ್ವಿ ಆಯ್ತು.

    ಪಾಕ್ ಪರ 57 ನಿಮಿಷದಲ್ಲಿ ಮಹಮ್ಮದ್ ಉಮರ್ ಗೋಲು ಹೊಡೆದರು. 59 ನಿಮಿಷದಲ್ಲಿ ಅಕಾಶ್‍ದೀಪ್ ಎರಡನೇ ಗೋಲು ಹೊಡೆಯುವ ಮೂಲಕ ಭಾರತಕ್ಕೆ 7-1 ಮುನ್ನಡೆಯನ್ನು ತಂದು ಕೊಟ್ಟರು.

    ಸ್ಕಾಟ್‍ಲ್ಯಾಂಡ್ ಮತ್ತು ಕೆನಡಾ ವಿರುದ್ಧ ಜಯಗಳಿಸಿದ್ದ ಭಾರತ ಈಗ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಬಿ ಗುಂಪಿನಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ನೆದರ್‍ಲ್ಯಾಂಡ್ ಮತ್ತು ಕೆನಡಾ ವಿರುದ್ಧ ಸೋತಿದ್ದ ಪಾಕ್ ಈಗ ಇಂದಿನ ಪಂದ್ಯವನ್ನು ಸೋತಿದ್ದು, ಕಾರ್ಟರ್ ಫೈನಲ್‍ಗೆ ಏರುವ ಕನಸು ಭಗ್ನಗೊಂಡಿದೆ. ನದರ್‍ಲ್ಯಾಂಡ್ 2 ಪಂದ್ಯವಾಡಿದ್ದು, 2 ಪಂದ್ಯಗಳನ್ನು ಗೆದ್ದರೆ, ಕೆನಡಾ 2 ಪಂದ್ಯಗಳನ್ನು ಆಡಿ ಒಂದರಲ್ಲಿ ಗೆಲುವು ಸಾಧಿಸಿದೆ. ಸ್ಕಾಟ್‍ಲ್ಯಾಂಡ್ ಎರಡೂ ಪಂದ್ಯಗಳನ್ನು ಸೋತಿದ್ದರೆ, ಪಾಕಿಸ್ತಾನ ಮೂರು ಪಂದ್ಯಗಳನ್ನು ಸೋತಿದೆ.

     

  • ಚಾಂಪಿಯನ್ಸ್ ಟ್ರೋಫಿ ಫೈನಲ್: ಭಾರತಕ್ಕೆ 339 ರನ್ ಟಾರ್ಗೆಟ್

    ಚಾಂಪಿಯನ್ಸ್ ಟ್ರೋಫಿ ಫೈನಲ್: ಭಾರತಕ್ಕೆ 339 ರನ್ ಟಾರ್ಗೆಟ್

     

    ಓವೆಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾದ ಗೆಲುವಿಗೆ ಪಾಕಿಸ್ತಾನ 339 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಫಖರ್ ಜಮಾನ್ ಶತಕ ಮತ್ತು ಅಜರ್ ಅಲಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ಫಕರ್ ಜಮಾನ್ ಮತ್ತು ಅಜರ್ ಅಲಿ 138 ಎಸೆತಗಳಲ್ಲಿ 128 ರನ್ ಜೊತೆಯಾಟವಾಡುವ ಮೂಲಕ ಪಾಕ್ ಇನ್ನಿಂಗ್ಸ್ ಗೆ ಭದ್ರ ಅಡಿಪಾಯ ಹಾಕಿದರು. 61 ಎಸೆತಗಳಲ್ಲಿ ಅರ್ಧಶತಕಗಳಿಸಿದ್ದ ಅಜರ್ ಅಲಿ 59 ರನ್(71 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ರನ್‍ಔಟ್ ಆದರು.

    ಫಖರ್ ಜಮಾನ್ ಶತಕ: 4ನೇ ಪಂದ್ಯವನ್ನು ಆಡುತ್ತಿರುವ ಫಖರ್ ಜಮಾನ್ 92 ಎಸೆತದಲ್ಲಿ ಮೊದಲ ಶತಕ ಹೊಡೆದರು. ಅಂತಿಮವಾಗಿ 114 ರನ್(106 ಎಸೆತ, 12 ಬೌಂಡರಿ, 3 ಸಿಕ್ಸರ್) ಗಳಿಸಿದ್ದಾಗ ಪಾಂಡ್ಯ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿ ಔಟಾದರು.

    ನಂತರ ಬಂದ ಬಾಬರ್ ಅಜಂ 46 ರನ್‍ಗಳಿಸಿದರೆ ಶೋಯಬ್ ಮಲಿಕ್ 12 ರನ್‍ಗಳಿಸಿ ಔಟಾದರು. ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ 45 ಎಸೆತಗಳಲ್ಲಿ ಮೊಹಮ್ಮದ್ ಹಫೀಸ್ ಮತ್ತು ಇಮಾದ್ ವಾಸಿಂ 71 ರನ್ ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು.

    ಮೊಹಮ್ಮದ್ ಹಫೀಸ್ ಔಟಾಗದೇ 57 ರನ್(37 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ, ಇಮಾದ್ ವಾಸೀಂ ಔಟಾಗದೇ 25 ರನ್(21 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

    ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ವಿಕೆಟ್ ಪಡೆದರು. ಇತರೇ ರೂಪದಲ್ಲಿ ಭಾರತ ರನ್ ನೀಡಿತ್ತು

    ಪಾಕ್ ರನ್ ಏರಿದ್ದು ಹೇಗೆ?
    50 ರನ್ – 9.2 ಓವರ್
    100 ರನ್ – 17.6 ಓವರ್
    150 ರನ್ – 25.6 ಓವರ್
    200 ರನ್ – 32.5 ಓವರ್
    250 ರನ್ – 40.1 ಓವರ್
    300 ರನ್ – 45.2 ಓವರ್
    338 ರನ್ – 50 ಓವರ್

     

     

  • ಅತಿ ಹೆಚ್ಚು ಮಂದಿ ವೀಕ್ಷಿಸಿದ ಪಂದ್ಯವಾಗಲಿದೆ ಇಂಡೋ ಪಾಕ್ ಫೈನಲ್!

    ಅತಿ ಹೆಚ್ಚು ಮಂದಿ ವೀಕ್ಷಿಸಿದ ಪಂದ್ಯವಾಗಲಿದೆ ಇಂಡೋ ಪಾಕ್ ಫೈನಲ್!

    ನವದೆಹಲಿ: ಭಾರತ ಪಾಕಿಸ್ತಾನ ಹೈವೋಲ್ಟೇಜ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದ್ದು, ಈ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ಮ್ಯಾಚ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಚಾಂಪಿಯನ್ಸ್ ಲೀಗ್ ಭಾರತ ಪಾಕಿಸ್ತಾನದ ಪಂದ್ಯವನ್ನು ಒಟ್ಟು 32.4 ಮಂದಿ ವೀಕ್ಷಿಸಿದ್ದರೆ, ಇಂದಿನ ಫೈನಲ್ ಪಂದ್ಯವನ್ನು 100 ಕೋಟಿ ಜನ ವೀಕ್ಷಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

    ಅತಿ ಹೆಚ್ಚು ವೀಕ್ಷಣೆಯಾದ ಕ್ರಿಕೆಟ್ ಪಂದ್ಯಗಳು:
    55.8 ಕೋಟಿ: ಭಾರತ – ಶ್ರೀಲಂಕಾ ನಡುವೆ 2011ರಲ್ಲಿ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್
    49.5 ಕೋಟಿ: ಭಾರತ – ಪಾಕಿಸ್ತಾನ ನಡುವಿನ 2011ರ ಸೆಮಿಫೈನಲ್
    32.4 ಕೋಟಿ: ಭಾರತ – ಪಾಕ್ ನಡುವಿನ 2017ರ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯ
    31.3 ಕೋಟಿ: ಭಾರತ – ಪಾಕಿಸ್ತಾನ ನಡುವಿನ 2015ರ ವಿಶ್ವಕಪ್ ಲೀಗ್ ಪಂದ್ಯ

    ದುಬಾರಿ ಜಾಹೀರಾತು: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಗೆ ಭಾರತ ಪಾಕಿಸ್ತಾನ ಎಂಟ್ರಿ ಕೊಟ್ಟ ಹಿನ್ನೆಲೆಯಲ್ಲಿ ಜಾಹೀರಾತು ದರವೂ ಏರಿಕೆಯಾಗಿದ್ದು, ಪ್ರತಿ 30 ಸೆಕೆಂಡಿಗೆ 1ಕೋಟಿ ರೂ. ದರವನ್ನು ನಿಗದಿಪಡಿಸಲಾಗಿದೆ ಸ್ಟಾರ್ ಮೀಡಿಯಾ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

     

  • ಓವಲ್‍ನಲ್ಲಿಂದು ಚಾಂಪಿಯನ್ಸ್ ಫೈನಲ್ ವಾರ್ – ಪಾಕ್ ಕ್ರಿಕೆಟ್ ಯುದ್ಧಕ್ಕೆ ಟೀಂ ಇಂಡಿಯಾ ರೆಡಿ

    ಓವಲ್‍ನಲ್ಲಿಂದು ಚಾಂಪಿಯನ್ಸ್ ಫೈನಲ್ ವಾರ್ – ಪಾಕ್ ಕ್ರಿಕೆಟ್ ಯುದ್ಧಕ್ಕೆ ಟೀಂ ಇಂಡಿಯಾ ರೆಡಿ

    ಲಂಡನ್: ಇಂದು ಕ್ರಿಕೆಟ್‍ನಲ್ಲಿ ಮಹಾಯುದ್ಧ ನಡೆಯಲಿದೆ. ಪಾಕ್ ಬೇಟೆಗೆ ಭಾರತ ಕಾದು ಕುಳಿತಿದೆ. ನೆರೆ ರಾಷ್ಟ್ರ ಕೂಡ ಗೆಲುವಿಗೇ ಕಣ್ಣಿಟ್ಟಿದೆ.

    1985ರ ವಿಶ್ವಚಾಂಪಿಯನ್‍ಶಿಪ್ ಕ್ರಿಕೆಟ್ ಫೈನಲ್‍ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿತ್ತು. ಆ ಬಳಿಕ ಇಂಟರ್‍ನ್ಯಾಷನಲ್ ಒನ್‍ಡೇ ಫೈನಲ್‍ನಲ್ಲಿ ಭಾರತ -ಪಾಕ್ ಎದುರಾಗೇ ಇರ್ಲಿಲ್ಲ. 32 ವರ್ಷಗಳ ಬಳಿಕ ಅಂತರಾಷ್ಟ್ರೀಯ ಏಕದಿನದಲ್ಲಿ ಭಾರತ-ಪಾಕ್ ಇಂದು ಭಾರೀ ಯುದ್ಧಕ್ಕೆ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್‍ಗೆ ಇಂಗ್ಲೆಂಡ್‍ನ ಓವಲ್ ಕೂಡ ರೆಡಿಯಾಗಿದೆ.

    ಟೀಂ ಇಂಡಿಯಾದ ಪ್ಲಸ್ ಪಾಯಿಂಟ್‍ಗಳು ಇಲ್ಲಿವೆ.
    * ಉತ್ತಮವಾಗಿರುವ ಬ್ಯಾಟಿಂಗ್ ಲೈನ್‍ಅಪ್
    * ಫಾರ್ಮ್‍ನಲ್ಲಿರುವ ಧವನ್, ರೋಹಿತ್ ಶರ್ಮಾ, ಯುವಿ, ಕೊಹ್ಲಿ
    * ತಂಡಕ್ಕೆ ನೆರವಾಗುತ್ತಿರುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ
    * ಚಾಂಪಿಯನ್ಸ್ ಲೀಗ್‍ನಲ್ಲಿ ಸಾಂಘಿಕ ಹೋರಾಟ ನಡೆಸಿರುವುದು
    * ಪ್ರಮುಖ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಗೆದ್ದು ಭಾರತ ಆತ್ಮವಿಶ್ವಾಸದಲ್ಲಿರೋದು

     

    ಟೀಂ ಇಂಡಿಯಾ ಮೈನಸ್ ಪಾಯಿಂಟ್
    * ದುಬಾರಿಯಾಗುತ್ತಿರುವ ಬೌಲರ್ಸ್.
    * ಎದುರಾಳಿಗಳನ್ನ ಕಟ್ಟಿಹಾಕುವಲ್ಲಿ ಬೌಲರ್ಸ್ ವಿಫಲವಾಗುತ್ತಿರೋದು.
    * ಕ್ಷೇತ್ರ ರಕ್ಷಣೆ ಇನ್ನಷ್ಟು ಬಲವಾಗಬೇಕು.

    ಎದುರಾಳಿ ತಂಡದ ಪ್ಲಸ್ ಮತ್ತು ಮೈನಸ್ ಪಾಯಿಂಟ್‍ಗಳನ್ನು ಕೆಳಗೆ ನೀಡಲಾಗಿದೆ.
    ಪಾಕಿಸ್ತಾನ ಪ್ಲಸ್ ಪಾಯಿಂಟ್
    * ಯುವ ಪಡೆಯ ಬ್ಯಾಟಿಂಗ್ ಪವರ್.
    * ಫಾರ್ಮ್‍ನಲ್ಲಿರುವ ನಾಯಕ ಸರ್ಫರಾಜ್ .
    * ಗಾಯಾಳು ಮೊಹಮದ್ ಅಮಿರ್ ತಂಡಕ್ಕೆ ಮರಳುತ್ತಿರೋದು.
    * ಸೆಮಿ ಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪಾಕ್.

    ಪಾಕಿಸ್ತಾನ ಮೈನಸ್ ಪಾಯಿಂಟ್
    * ಕಳಪೆ ಕ್ಷೇತ್ರ ರಕ್ಷಣೆ, ಕ್ಯಾಚ್‍ಗಳನ್ನ ಕೈಚೆಲ್ಲುತ್ತಿರೋದು.
    * ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಬ್ಯಾಟ್ಸ್‍ಮನ್‍ಗಳ ವಿಫಲವಾಗ್ತಿರೋದು.
    * ತಂಡಕ್ಕೆ ಕಾಡುತ್ತಿರುವ ಗಾಯಾಳುಗಳ ಸಮಸ್ಯೆ.
    * ಅನುಭವಿ ಆಟಗಾರರ ಕೊರತೆ.

    4 ಕಾರಣಗಳಿಂದಾಗಿ ಭಾರತ ಗೆಲ್ಲಲೇಬೇಕು:
    1. ಯೋಧರಲ್ಲಿ ಆತ್ಮಸ್ಥೈರ್ಯ: ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಕ್ರೀಡೆಯ ಒಂದು ಭಾಗವಾಗಿದ್ದರೂ, ಇದೊಂದು ಭಾವನಾತ್ಮಕ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಪಾಕಿಸ್ತಾನ ತೆಗೆಯುತ್ತಿರುವ ಕ್ಯಾತೆಗೆ, ಯೋಧರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಲು ಆತ್ಮಬಲ ತುಂಬಲು ಇಂದಿನ ಗೆಲುವು ಅನಿವಾರ್ಯವಾಗಿದೆ.

    2. ಹಾಲಿ ಚಾಂಪಿಯನ್ ಪಟ್ಟ ಉಳಿವು: ಭಾರತ ತಂಡ ಹಾಲಿ ಚಾಂಪಿಯನ್ ಟ್ರೋಫಿಯ ವಿಜೇತ ತಂಡವಾಗಿದ್ದು, 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಹೀಗಾಗಿ ಈ ಬಾರಿಯೂ ಭಾರತ ಪ್ರಶಸ್ತಿ ಸುತ್ತಿಗೇರಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.

    3. ಐಸಿಸಿಯಲ್ಲಿ ದಾಖಲೆ ಮುಂದುವರಿಕೆ: ಐಸಿಸಿ ಆಯೋಜಿಸುವ ಯಾವುದೇ ಟೂರ್ನ್‍ಮೆಂಟ್ ಗಳಲ್ಲೂ ಭಾರತ ಪಾಕಿಸ್ತಾನದ ವಿರುದ್ಧ ಈ ವರೆಗೂ 2 ಪಂದ್ಯಗಳಲ್ಲಿ ಮಾತ್ರ ಸೋತಿದ್ದು, ಉಳಿದೆಲ್ಲಾ ಪಂದ್ಯಗಳಲ್ಲೂ ಗೆದ್ದಿದೆ. ಅಂತೆಯೇ ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧ ಅಜೇಯ ದಾಖಲೆ ಮುಂದುವರೆದಿದೆ. ಹೀಗಾಗಿ ಭಾರತ ತನ್ನ ಈ ದಾಖಲೆಯನ್ನು ಮುಂದವೆರಸಲು ಹೋರಾಡಬೇಕಿದೆ.

    5.ನಂ ರ್ 1 ಸ್ಥಾನಕ್ಕೇರಲು ಅವಕಾಶ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತಕ್ಕೆ ಎಷ್ಟು ಪ್ರಮುಖವೆಂದರೆ, ಫೈನಲ್ ಪಂದ್ಯವನ್ನು ಭಾರತ ಜಯಿಸಿದ್ದೇ ಆದರೆ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುತ್ತದೆ. ಪ್ರಸ್ತುತ 119 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದ್ದು, 117 ಅಂಕಗಳನ್ನು ಹೊಂದಿರುವ ಭಾರತ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯ ಗೆದ್ದರೆ ಆಗ ಭಾರತದ ಅಂಕ 119ಕ್ಕೇರಿಕೆಯಾಗಲಿದೆ. ಆ ಮೂಲಕ ಭಾರತ ಆಗ್ರ ಸ್ಥಾನಕ್ಕೇರಲಿದ್ದು, ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನಕ್ಕೆ ಕುಸಿಯಲಿದೆ.

     

     

  • ಭಾನುವಾರ ಇಂಡೋ- ಪಾಕ್ ಫೈನಲ್ ಪಂದ್ಯ: ಹಿಂದಿನ ಟಾಪ್-3 ಪಂದ್ಯಗಳಲ್ಲಿ ಗೆದ್ದವರು ಯಾರು?

    ಭಾನುವಾರ ಇಂಡೋ- ಪಾಕ್ ಫೈನಲ್ ಪಂದ್ಯ: ಹಿಂದಿನ ಟಾಪ್-3 ಪಂದ್ಯಗಳಲ್ಲಿ ಗೆದ್ದವರು ಯಾರು?

    ಬೆಂಗಳೂರು: ಭಾರತ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾನುವಾರ ಇಂಗ್ಲೆಂಡಿನ ಓವೆಲ್‍ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 3 ಗಂಟೆಗೆ ಆರಂಭವಾಗಲಿರುವ ಈ ಪಂದ್ಯ ವೀಕ್ಷಿಸಲು ಜನರು ಈಗ ತುದಿಗಾಲಿನಲ್ಲಿ ನಿಂತಿದ್ದಾರೆ.

    ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಡಕ್‍ವರ್ಥ್ ಲೂಯಿಸ್ ನಿಯಮದ ಪ್ರಕಾರ 124 ರನ್‍ಗಳಿಂದ ಗೆದ್ದ ಟೀಂ ಇಂಡಿಯಾ ಫೈನಲ್ ನಲ್ಲೂ ಜಯಗಳಿಸಲಿ ಎಂದು ಭಾರತೀಯರು ಶುಭ ಹಾರೈಸುತ್ತಿದ್ದಾರೆ. ಹೀಗಾಗಿ 50 ಓವರ್‍ಗಳ ಪಂದ್ಯವಾಗಿರುವುದರಿಂದ ಈ ಹಿಂದಿನ ಮೂರು ದೊಡ್ಡ ಟೂರ್ನಿಯಲ್ಲಿ ಯಾವ ತಂಡ ಗೆದ್ದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    2015ರ ವಿಶ್ವಕಪ್:
    ಆಸ್ಟ್ರೇಲಿಯಾದ ಆಡಿಲೆಡ್‍ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 107 ರನ್(126 ಎಸೆತ, 8 ಬೌಂಡರಿ) ಹೊಡೆದಿದ್ದರು. 301ರನ್‍ಗಳ ಗುರಿಯನ್ನು ಪಡೆದ ಪಾಕಿಸ್ತಾನ 47 ಓವರ್ಗಳಲ್ಲಿ 224 ರನ್‍ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಶಮಿ 35 ರನ್‍ಗಳಿಗೆ 4 ವಿಕೆಟ್ ಪಡೆದಿದ್ದರು. ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಈ ಮೂಲಕ 6 ವಿಶ್ವಕಪ್‍ನಲ್ಲಿ ಭಾರತ ಪಾಕ್ ವಿರುದ್ಧ ಜಯಗಳಿಸಿದ ಸಾಧನೆ ಮಾಡಿತು.

    2014ರ ಏಷ್ಯಾಕಪ್:
    ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯ ಕಪ್‍ನಲ್ಲಿ ಭಾರತವನ್ನು ಒಂದು ವಿಕೆಟ್‍ನಿಂದ ಪಾಕಿಸ್ತಾನ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತ್ತು. ಭಾರತದ ಪರ ಅಂಬಾಟಿ ರಾಯಡು 58 ರನ್ ಹೊಡೆದಿದ್ದರೆ, ರವೀಂದ್ರ ಜಡೇಜಾ ಔಟಾಗದೇ 52 ರನ್ ಹೊಡೆದಿದ್ದರು. ಪಾಕಿಸ್ತಾನ 49.4 ಓವರ್ ಗಳಲ್ಲಿ 249 ರನ್ ಗಳಿಸಿ 1 ವಿಕೆಟ್‍ಗಳ ಜಯವನ್ನು ಸಂಪಾದಿಸಿತ್ತು. ಮೊಹಮ್ಮದ್ ಹಫೀಸ್ 75ರನ್ ಭಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    2013ರ ಚಾಂಪಿಯನ್ಸ್ ಟ್ರೋಫಿ:
    ಇಂಗ್ಲೆಂಡಿನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 165 ರನ್‍ಗಳಿಗೆ ಆಲೌಟ್ ಆಗಿತ್ತು. ಮಳೆ ಬಂದ ಹಿನ್ನೆಲೆಯಲ್ಲಿ ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 22 ಓವರ್ ಗಳಲ್ಲಿ 102 ರನ್‍ಗಳ ಟಾರ್ಗೆಟ್ ನೀಡಲಾಗಿತ್ತು. ಭಾರತ 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ವಿಜಯಿ ಆಯ್ತು. 8 ಓವರ್ ಎಸೆದು 2 ಮೇಡನ್ ಮಾಡಿ 19 ರನ್ ನೀಡಿ 2 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಇದನ್ನೂ ಓದಿ: ಸೆಮಿಫೈನಲಲ್ಲಿ ಮತ್ತೊಂದು ದಾಖಲೆ ಬರೆದ ಕೊಹ್ಲಿ!

     

  • ಈ ಭಾನುವಾರ ಇಂಡಿಯಾ-ಪಾಕ್ ಫೈನಲ್!

    ಈ ಭಾನುವಾರ ಇಂಡಿಯಾ-ಪಾಕ್ ಫೈನಲ್!

    ಬರ್ಮಿಂಗ್ ಹ್ಯಾಂ: ಈ ಭಾನುವಾರ ಮತ್ತೆ ಟೀಂ ಇಂಡಿಯಾ ಪಾಕ್ ಹಣಾಹಣಿ ನಡೆಯಲಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶದ ವಿರುದ್ಧ  9 ವಿಕೆಟ್ ಗಳ ಭರ್ಜರಿ ಜಯವನ್ನು ಸಾಧಿಸಿದೆ.

    265 ರನ್ ಟಾರ್ಗೆಟ್ ಬೆನ್ನತ್ತಿದ ಟೀ ಇಂಡಿಯಾಗೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ ಗೆ 88 ಎಸೆತಗಳಲ್ಲಿ 87 ರನ್ ಗಳ ಭದ್ರ ಬುನಾದಿ ಹಾಕಿ ಕೊಟ್ಟರು.

    14.4ನೇ ಓವರ್ ನಲ್ಲಿ ಮುಷ್ರಫೆ ಮೊರ್ತಜಾ ಎಸೆತಕ್ಕೆ ಶಿಖರ್ ಧವನ್ ಔಟಾದರು. 34 ಎಸೆತಗಳಲ್ಲಿ ಧವನ್ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದ್ದರು.

    ನಂತರ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜುಗಲ್‍ಬಂದಿ ಆಟದ ಮುಂದೆ ಬಾಂಗ್ಲಾ ಬೌಲರ್ ಗಳ ಆಟ ನಡೆಯಲಿಲ್ಲ. ಮುರಿಯದ ಎರಡನೇ ವಿಕೆಟ್‍ಗೆ 153 ಎಸೆತಗಳಲ್ಲಿ 178 ರನ್‍ಗಳ ಜೊತೆಯಾಟವಾಡಿ ಭಾರತವನ್ನು ಫೈನಲ್‍ಗೆ ತಲುಪಿಸಿದರು.

    111 ಎಸೆತಗಳಲ್ಲಿ 11ನೇ ಶತಕ ಹೊಡೆದ ರೋಹಿತ್ ಶರ್ಮಾ ಅಂತಿಮವಾಗಿ 123 ರನ್(129 ಎಸೆತ, 15 ಬೌಂಡರಿ, 1ಸಿಕ್ಸರ್) ಸಿಡಿಸಿದರೆ ವಿರಾಟ್ ಕೊಹ್ಲಿ 96 ರನ್(78 ಎಸೆತ,13 ಬೌಂಡರಿ)ಹೊಡೆಯುವ ಮೂಲಕ ಅಜೇಯರಾಗಿ ಉಳಿದರು.

    ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿದರು. ಮೊದಲ ಓವರ್ ನಲ್ಲೇ ಭಾರತಕ್ಕೆ ಭುವನೇಶ್ವರ್ ಕುಮಾರ್ ಶುಭಾರಂಭ ಮಾಡಿದರು.

    ಮೊದಲ ಓವರ್ ನ ಕೊನೆಯ ಎಸೆತದಲ್ಲೇ ಸೌಮ್ಯ ಸರ್ಕಾರನ್ನು ಬೌಲ್ಡ್ ಮಾಡಿದರು. ನಂತರ ಸಬೀರ್ ರಹ್ಮಾನ್ ಭುವನೇಶ್ವರ್ ಕುಮಾರ್ ಗೆ ಎರಡನೇ ಬಲಿಯಾದರು. 3ನೇ ವಿಕೆಟ್ ಗೆ ತಮೀಮ್ ಇಕ್ಬಾಲ್ ಹಾಗೂ ಮುಷ್ಫಿಖುರ್ ರಹೀಮ್ ಉತ್ತಮ ಜೊತೆಯಾಟ ನೀಡಿದರು. ಈ ವೇಳೆ ಜಾಧವ್ ತಮೀಮ್ ಇಕ್ಬಾಲ್ ರನ್ನು ಬೌಲ್ಡ್ ಮಾಡಿ ಬಾಂಗ್ಲಾದೇಶದ ರನ್ ಬೇಟೆಗೆ ಕಡಿವಾಣ ಹಾಕಿದರು. ಬಳಿಕ ನಿರಂತರವಾಗಿ ಬಾಂಗ್ಲಾ ವಿಕೆಟ್ ಗಳು ಉರುಳುತ್ತಲೇ ಹೋದವು.

    ಬಾಂಗ್ಲಾ ಪರವಾಗಿ ಶಕೀಬ್ ಅಲ್ ಹಸನ್ 15, ಮಹ್ಮದುಲ್ಲಾ 21, ಮೊಸಾದ್ದಿಕ್ ಹುಸೇನ್ 15, ಮಶ್ರಫೆ ಮೊರ್ತಜಾ 30, ತಸ್ಕೀನ್ ಅಹ್ಮದ್ 10 ರನ್ ಗಳಿಸಿದರು.

    ಟೀ ಇಂಡಿಯಾ ಪರವಾಗಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಕೇದಾರ್ ಜಾಧವ್ ತಲಾ 2 ವಿಕೆಟ್ ಪಡೆದರೆ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

    ಬಾಂಗ್ಲಾದೇಶ ರನ್ ಏರಿದ್ದು ಹೇಗೆ?
    50 ರನ್ 12.1 ಓವರ್
    100 ರನ್ 18.5 ಓವರ್
    150 ರನ್ 26.2 ಓವರ್
    200 ರನ್ 39.3 ಓವರ್
    250 ರನ್ 48.1 ಓವರ್
    264 ರನ್ 50 ಓವರ್

    ಭಾರತತ ರನ್ ಏರಿದ್ದು ಹೇಗೆ?
    50 ರನ್ 7.5 ಓವರ್
    100 ರನ್ 16.2 ಓವರ್
    150 ರನ್ 22.5 ಓವರ್
    200 ರನ್ 31.4 ಓವರ್
    250 ರನ್ 38.1 ಓವರ್
    265 ರನ್ 40.1 ಓವರ್

  • ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

    ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

    ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.12 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 1.24 ರೂ. ಇಳಿಕೆಯಾಗಿದೆ.

    ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ತೈಲ ದರವನ್ನು ಪರಿಷ್ಕರಿಸುತ್ತಿದ್ದವು. ಆದರೆ ಶುಕ್ರವಾರದಿಂದ ಪ್ರತಿದಿನ ಪೆಟ್ರೋಲ್ ಡೀಸೆಲ್ ದರ ಪರಿಷ್ಕರಣೆಯಾಗಲಿದೆ.

    ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.47 ರೂ. ಆಗಿದ್ದರೆ, ಡೀಸೆಲ್ ಬೆಲೆ 58.52 ರೂ. ಆಗಲಿದೆ.

    ಮೇ 31ರಂದು ಪ್ರತಿ ಲೀಟರ್  ಪೆಟ್ರೋಲ್ ಬೆಲೆ 1.23 ರೂ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 89 ಪೈಸೆ ಏರಿಕೆಯಾಗಿತ್ತು.

    ಇದನ್ನೂ ಓದಿ: ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್