Tag: ಭಾರತ vs ಆಸ್ಟ್ರೇಲಿಯಾ

  • ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಕಬಳಿಸಿ ಹೊಸ ದಾಖಲೆ ಬರೆದ ಬೂಮ್ರಾ

    ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಕಬಳಿಸಿ ಹೊಸ ದಾಖಲೆ ಬರೆದ ಬೂಮ್ರಾ

    ಮೆಲ್ಬರ್ನ್‌: ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಭಾರತದ ಸೂಪರ್‌ಸ್ಟಾರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಮೈಲಿಗಲ್ಲನ್ನು ದಾಟಿ ದಾಖಲೆ ಬರೆದಿದ್ದಾರೆ.

    ಭಾನುವಾರ ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್‌ನ 4 ನೇ ದಿನದಾಟದಂದು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ವಿಕೆಟ್‌ ಕಿತ್ತು ಬುಮ್ರಾ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಫಲಿಸಿತು ಅಪ್ಪನ ತ್ಯಾಗ – ಮಗನಿಗಾಗಿ ಸರ್ಕಾರಿ ಉದ್ಯೋಗ ತೊರೆದಿದ್ದ ನಿತೀಶ್‌ ರೆಡ್ಡಿ ತಂದೆ!

    ಸರಣಿಯಲ್ಲಿ ಈಗಾಗಲೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಬುಮ್ರಾ, ಬೀಟ್ಸ್ ಮಾಲ್ಕಮ್ ಮಾರ್ಷಲ್, ಜೋಯಲ್ ಗಾರ್ನರ್ ಮತ್ತು ಕರ್ಟ್ಲಿ ಆಂಬ್ರೋಸ್ ಅವರಂತಹ ಕೆಲವು ಸಾರ್ವಕಾಲಿಕ ಶ್ರೇಷ್ಠರನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಹೊಂದಿರುವ ಎಲ್ಲಾ ಬೌಲರ್‌ಗಳಲ್ಲಿ, ಬುಮ್ರಾ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ.

    201ನೇ ಮತ್ತು 202ನೇ ವಿಕೆಟನ್ನು ಕೆಲವೇ ದಿನಗಳಲ್ಲಿ ಕಬಳಿಸಿದ ಬುಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ 19.5 ಸರಾಸರಿಯನ್ನು ಹೊಂದಿದ್ದಾರೆ. ಆ ಮೂಲಕ ಮಾಲ್ಕಮ್ ಮಾರ್ಷಲ್ (20.9), ಜೋಯಲ್ ಗಾರ್ನರ್ (21.0) ಮತ್ತು ಕರ್ಟ್ಲಿ ಆಂಬ್ರೋಸ್ (21.0) ಅವರನ್ನು ಹಿಂದಿಕ್ಕಿದ್ದಾರೆ. ಬುಮ್ರಾ ಅವರು 20 ಕ್ಕಿಂತ ಕಡಿಮೆ ಸರಾಸರಿಯನ್ನು ಕಾಯ್ದುಕೊಂಡು ಟೆಸ್ಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆಗಿದ್ದಾರೆ. ಇದನ್ನೂ ಓದಿ: ಕೊನೆಯ 30 ನಿಮಿಷ ಆಟ| 11 ರನ್‌ ಅಂತರದಲ್ಲಿ 3 ವಿಕೆಟ್‌ ಪತನ – ಸಂಕಷ್ಟದಲ್ಲಿ ಭಾರತ

  • 16 ತಿಂಗಳ ಬಳಿಕ ಟೆಸ್ಟ್‌ ಶತಕ ಸಿಡಿಸಿ ಮಿಂಚಿದ ಕೊಹ್ಲಿ – ಡೊನಾಲ್ಡ್‌ ಬ್ರಾಡ್ಮನ್‌ ದಾಖಲೆ ಉಡೀಸ್‌

    16 ತಿಂಗಳ ಬಳಿಕ ಟೆಸ್ಟ್‌ ಶತಕ ಸಿಡಿಸಿ ಮಿಂಚಿದ ಕೊಹ್ಲಿ – ಡೊನಾಲ್ಡ್‌ ಬ್ರಾಡ್ಮನ್‌ ದಾಖಲೆ ಉಡೀಸ್‌

    – ಟೆಸ್ಟ್‌ನಲ್ಲಿ 30ನೇ ಶತಕ ಸಿಡಿಸಿದ ಕಿಂಗ್‌

    ಪರ್ತ್‌: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲಿ ಸ್ಟಾರ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ 30 ನೇ ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

    ಸತತ 16 ತಿಂಗಳ ಬಳಿಕ ಕೊಹ್ಲಿ ಶತಕ ಸಿಡಿಸಿದ್ದಾರೆ. ಸುದೀರ್ಘ ಸ್ವರೂಪದಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸರ್ ಡೊನಾಲ್ಡ್ ಬ್ರಾಡ್ಮನ್ ಅವರನ್ನು ಹಿಂದಿಕ್ಕಿದ್ದಾರೆ. ಪರ್ತ್ ಟೆಸ್ಟ್‌ಗೆ ಮೊದಲು 29 ಶತಕಗಳೊಂದಿಗೆ ಕೊಹ್ಲಿ, ಬ್ರಾಡ್‌ಮನ್ ಜೊತೆ ಸಮಬಲ ಹೊಂದಿದ್ದರು.

    ಕಿಂಗ್‌ ಕೊಹ್ಲಿ 143 ಎಸೆತಗಳಿಗೆ ಶತಕ ಸಿಡಿಸಿದರು. ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 487/6 ಕ್ಕೆ ಡಿಕ್ಲೇರ್‌ ಘೋಷಿಸಿದೆ. ಆಸ್ಟ್ರೇಲಿಯಾಕ್ಕೆ ಗೆಲ್ಲಲು 534 ರನ್‌ಗಳ ಗುರಿ ನೀಡಿದೆ.

  • Paris Olympics 2024: ಹಾಕಿಯಲ್ಲಿ 52 ವರ್ಷಗಳ ಬಳಿಕ ಆಸ್ಟ್ರೇಲಿಯಾ ಮಣಿಸಿದ ಭಾರತ

    Paris Olympics 2024: ಹಾಕಿಯಲ್ಲಿ 52 ವರ್ಷಗಳ ಬಳಿಕ ಆಸ್ಟ್ರೇಲಿಯಾ ಮಣಿಸಿದ ಭಾರತ

    ಪ್ಯಾರಿಸ್‌: ಶುಕ್ರವಾರ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ 2024ರ (Paris Olympics 2024) ಪುರುಷರ ಹಾಕಿ ಪೂಲ್‌ ಬಿ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಭಾರತ ತಂಡವು ಆಘಾತ ನೀಡಿದೆ. 52 ವರ್ಷಗಳ ಬಳಿಕ ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ (India) ಹಾಕಿ (Hockey) ತಂಡವು ಐತಿಹಾಸಿಕ ಸಾಧನೆ ಮಾಡಿದೆ.

    1972ರ ಒಲಿಂಪಿಕ್ಸ್ ನಂತರ ಭಾರತವು ಹಾಕಿಯಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು ಸೋಲಿಸಿದ್ದು ಇದೇ ಮೊದಲು. ಕಳೆದ ಬಾರಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ರಜತ ಪದಕ ಜಯಿಸಿತ್ತು. ಇದನ್ನೂ ಓದಿ: Paris Olympics | ಭಾರತಕ್ಕೆ ಮೂರನೇ ಪದಕ- ಕಂಚು ಗೆದ್ದ ಸ್ವಪ್ನಿಲ್

    ಭಾರತ ಪರ ಅಭಿಷೇಕ್ ಮತ್ತು ಹರ್ಮನ್‌ಪ್ರೀತ್ ಸಿಂಗ್ (2) ಗೋಲು ಗಳಿಸಿದರು. ಥಾಮಸ್ ಕ್ರೇಗ್ ಮತ್ತು ಬ್ಲೇಕ್ ಗೋವರ್ಸ್ ಆಸ್ಟ್ರೇಲಿಯಾ ಪರ ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಭಾರತ (10 ಅಂಕಗಳು, 5 ಪಂದ್ಯಗಳು) ಪೂಲ್ ಬಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

    ಪೂಲ್‌ನಲ್ಲಿ ಬೆಲ್ಜಿಯಂ ಮುನ್ನಡೆ ಸಾಧಿಸಿದರೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತವು ನ್ಯೂಜಿಲೆಂಡ್ ವಿರುದ್ಧ ಜಯದೊಂದಿಗೆ ಓಟ ಆರಂಭಿಸಿತು. ಅರ್ಜೆಂಟೀನಾ ವಿರುದ್ಧದ ಪಂದ್ಯ ಡ್ರಾ ಆಯಿತು. ಐರ್ಲೆಂಡ್ ತಂಡದ ವಿರುದ್ಧ ಭಾರತ ಗೆಲುವು ದಾಖಲಿಸಿದೆ. ಇದನ್ನೂ ಓದಿ: ಸೂಪರ್‌ ಓವರ್‌ ಥ್ರಿಲ್ಲಿಂಗ್‌ – ಮೊದಲ ಎಸೆತದಲ್ಲೇ ಭಾರತಕ್ಕೆ ಗೆಲುವು – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಜಯ