Tag: ಭಾರತ ಸಂವಿಧಾನ

  • ಅಸಮಾನತೆ ಇರೋವರೆಗೂ ಮೀಸಲಾತಿ ಮುಂದುವರಿಯಬೇಕು, ಅದಕ್ಕೆ RSS ಸಹಕಾರವಿದೆ: ಮೋಹನ್‌ ಭಾಗವತ್‌

    ಅಸಮಾನತೆ ಇರೋವರೆಗೂ ಮೀಸಲಾತಿ ಮುಂದುವರಿಯಬೇಕು, ಅದಕ್ಕೆ RSS ಸಹಕಾರವಿದೆ: ಮೋಹನ್‌ ಭಾಗವತ್‌

    ಮಂಬೈ: ನಮ್ಮ ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ (Reservation) ಮುಂದುವರಿಯಬೇಕು. ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಎಲ್ಲ ರೀತಿಯ ಸಹಕಾರ ಇರಲಿದೆ ಎಂದು ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ತಿಳಿಸಿದ್ದಾರೆ.

    ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 1947ರ ನಂತರ ಭಾರತದಿಂದ ಬೇರ್ಪಟ್ಟವರು ಈಗ ತಪ್ಪು ಮಾಡಿದ್ದೇವೆ ಎಂದು ಭಾವಿಸುತ್ತಿದ್ದಾರೆ. ಹಾಗಾಗಿ ಇಂದಿನ ಯುವಸಮೂಹ ವೃದ್ಧರಾಗುವಷ್ಟರಲ್ಲಿ ಅಖಂಡ ಭಾರತದ ಕನಸು ನನಸಾಗಲಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮೀಸಲಾತಿ ವಿಚಾರವಾಗಿ ಮಾತನಾಡಿದ ಮೋಹನ್‌ ಭಾಗವತ್‌, ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮದೇ ಸಹಜೀವಿಗಳನ್ನ ಹಿಂದೆ ಇರಿಸಿದ್ದೇವೆ. ನಾವು ಅವರ ಬಗ್ಗೆ ಕಾಳಜಿಯನ್ನೇ ವಹಿಸುತ್ತಿಲ್ಲ. 2000 ವರ್ಷಗಳ ವರೆಗೆ ಈ ಪ್ರಕ್ರಿಯೆ ಹೀಗೆ ಮುಂದುವರಿದಿದೆ. ಹಾಗಾಗಿ ಸಮಾಜದಲ್ಲಿ ಅಸಮಾನತೆಯನ್ನ ತೊಲಗಿಸುವವರೆಗೆ, ಅಸಮಾನತೆಗೆ (Inequality) ಒಳಗಾದವರ ಪುನಶ್ಚೇತನಕ್ಕಾಗಿ ವಿಶೇಷ ಪರಿಹಾರ ನೀಡಬೇಕು. ಅವುಗಳಲ್ಲಿ ಮೀಸಲಾತಿ ಕೂಡ ಒಂದು. ಆದ್ದರಿಂದ ಸಮಾಜದಲ್ಲಿ ತಾರತಮ್ಯ ಇರುವವರೆಗೆ ಮೀಸಲಾತಿ ಅನ್ನೋದು ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಸಂವಿಧಾನದಲ್ಲಿ (Indian Constitution) ಒದಗಿಸಿರುವ ಮೀಸಲಾತಿಗೆ ಆರ್‌ಎಸ್‌ಎಸ್‌ನಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.

    ಸಮಾಜದಲ್ಲಿ ಇಂದಿಗೂ ತಾರತಮ್ಯ ನಿಂತಿಲ್ಲ. ಸಮಾಜದ ಕೆಲವು ವಿಭಾಗಗಳು 2000 ವರ್ಷಗಳಿಂದ ಬಳಲುತ್ತಿದ್ದರೆ, ತಾರತಮ್ಯ ಎದುರಿಸದಿರುವವರು 200 ವರ್ಷಗಳವರೆಗೆ ಸಮಸ್ಯೆಗಳನ್ನ ಎದುರಿಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮತಾಂತರಗಳನ್ನು ತಡೆಯಲು ಕೇಂದ್ರಕ್ಕೆ ನಿರ್ದೇಶನ ನೀಡಿ – ಪಿಐಎಲ್‌ ವಜಾ

    ಈ ಸಂದರ್ಭದಲ್ಲಿ ಅಖಂಡ ಭಾರತದ ಯಾವಾಗ ಅಸ್ತಿತ್ವಕ್ಕೆ ಬರುತ್ತದೆ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಭಾಗವತ್‌, ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದ್ರೆ ನೀವೆಲ್ಲ ಅಖಂಡ ಭಾರತ ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ರೆ ನೀವು ವಯಸ್ಸಾಗುವುದರೊಳಗೆ ಅದು ಅಖಂಡ ಭಾರತ ಸೃಷ್ಟಿಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ: ಮುತಾಲಿಕ್

    ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ: ಮುತಾಲಿಕ್

    – ಮೈಸೂರು ಶಾಸಕ ತನ್ವೀರ್‌ಸೇಠ್‌ರನ್ನ ಮುಸ್ಲಿಮರೇ ಗಲ್ಲಿಗೇರಿಸುತ್ತಾರೆ
    – ಟಿಪ್ಪು ಜಯಂತಿ ಆಚರಣೆಯಿಂದ ಈದ್ಗಾ ಮೈದಾನ ಅಪವಿತ್ರವಾಗಿದೆ ಎಂದ ಮುತಾಲಿಕ್

    ಹುಬ್ಬಳ್ಳಿ: ಭಾರತ (India) ಮತ್ತು ಪಾಕಿಸ್ತಾನ (Pakistan) ಧರ್ಮದ ಆಧಾರದಲ್ಲಿ ಬೇರೆಯಾದ ರಾಷ್ಟ್ರಗಳು. ಪಾಕಿಸ್ತಾನ ಹೇಗೆ ಮುಸ್ಲಿಮರಿಗೆ (Muslims) ಸೀಮಿತವಾಗಿದೆಯೋ ಹಾಗೆ ಭಾರತ ಹಿಂದೂ ರಾಷ್ಟ್ರ (Hindu Nation). ಆದರೆ ಸಂವಿಧಾನದಲ್ಲಿ (Constitution Of India)) ಬಲವಂತವಾಗಿ ಜಾತ್ಯಾತೀತ ಶಬ್ದ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ವಾಗ್ದಾಳಿ ನಡೆಸಿದ್ದಾರೆ.

    ಟಿಪ್ಪು 100 ಅಡಿ ಮೂರ್ತಿಯನ್ನು ಮೈಸೂರಿನಲ್ಲಿ (Mysuru) ಪ್ರತಿಷ್ಠಾಪನೆ ಮಾಡುತ್ತೇವೆಂಬ ಶಾಸಕ ತನ್ವೀರ್ ಸೇಠ್ (Tanveer Sait) ಹೇಳಿಕೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮುತಾಲಿಕ್, ಮುಸ್ಲಿಂ ಸಮುದಾಯದಲ್ಲಿ (Muslim Community) ಮೂರ್ತಿ ಪೂಜೆ ಇಲ್ಲ ಅದು ಹೇಗೆ ನೀವು ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೀರಿ? ಇದು ಧರ್ಮ ವಿರೋಧಿ ಹೇಳಿಕೆ ಹೀಗಾಗಿ ಸೇಠ್ ವಿರುದ್ಧ ಫತ್ವಾ ಹೊರಡಿಸಬೇಕು. ಈ ರೀತಿ ಹೇಳಿಕೆ ನೀಡಿದ್ದ ತನ್ವೀರ್ ಸೇಠ್‌ನನ್ನು ಮುಸ್ಲಿಮರೇ ಗಲ್ಲಿಗೇರಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

    ಒಂದು ವೇಳೆ ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ. ಭಾರತ ಮತ್ತು ಪಾಕಿಸ್ತಾನ ಧರ್ಮದ ಆಧಾರದಲ್ಲಿ ಬೇರೆಯಾದ ರಾಷ್ಟ್ರಗಳು, ಪಾಕಿಸ್ತಾನ ಹೇಗೆ ಮುಸ್ಲಿಂರಿಗೆ ಸೀಮಿತವೋ, ಹಾಗೆ ಭಾರತ ಹಿಂದೂ ರಾಷ್ಟ್ರ. ಸಂವಿಧಾನದಲ್ಲಿ ಬಲವಂತವಾಗಿ ಜಾತ್ಯಾತೀತ ಶಬ್ದ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 

    ಗೋಮೂತ್ರದಿಂದ ಶುಚಿ:
    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನಲೆ, ಪ್ರಮೋದ್ ಮುತಾಲಿಕ್ ಗೋ ಮೂತ್ರ ಸಿಂಪಡಿಸಿ ಸ್ವಚ್ಚಗೊಳಿಸಿದ್ದಾರೆ. ನಿನ್ನೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದರಿಂದ ಈದ್ಗಾ ಮೈದಾನ ಅಪವಿತ್ರವಾಗಿದೆ. ಹಾಗಾಗಿ ಕನಕ ಜಯಂತಿ ಆಚರಣೆಗೂ ಮುನ್ನ ಈದ್ಗಾ ಮೈದಾನ ಶುಚಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಳಿಕ ಶ್ರೀರಾಮಸೇನೆಯಿಂದ ಕನಕದಾಸ ಜಯಂತಿ ಆಚರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಠಾಣ್ VS ಮಿಶ್ರಾ ಟ್ವೀಟ್ ವಾರ್ – ನಾನು ಸಂವಿಧಾನ ಅನುಸರಿಸುತ್ತೇನೆ ಎಂದ ಪಠಾಣ್

    ಪಠಾಣ್ VS ಮಿಶ್ರಾ ಟ್ವೀಟ್ ವಾರ್ – ನಾನು ಸಂವಿಧಾನ ಅನುಸರಿಸುತ್ತೇನೆ ಎಂದ ಪಠಾಣ್

    ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಹಾಗೂ ಅಮಿತ್ ಮಿಶ್ರಾ ಅವರ ನಡುವೆ ನೆನ್ನೆಯಿಂದಲೂ ಟ್ವೀಟ್ ವಾರ್ ನಡೆಯುತ್ತಿದ್ದು, ಇಂದೂ ಸಹ ಟಾಪ್ ಟ್ರೆಂಡಿಗ್ ಟ್ವೀಟ್ ಆಗಿದೆ.

    ನೆನ್ನೆ ಅಮಿತ್ ಮಿಶ್ರಾ ಅವರು ಮಾಡಿದ್ದ ಟ್ವೀಟ್‌ಗೆ ಮತ್ತೆ ತಿರುಗೇಟು ನೀಡಿರುವ ಇರ್ಫಾನ್ ಪಠಾಣ್ ತಮ್ಮ ಟ್ವೀಟ್‌ನಲ್ಲಿ, ನಾನು ಭಾರತದ ಸಂವಿಧಾನವನ್ನು ಯಾವಾಗಲೂ ಅನುಸರಿಸುತ್ತೇನೆ. ನಮ್ಮ ಸುಂದರ ದೇಶದ ಪ್ರತಿಯೊಬ್ಬ ನಾಗರಿಕನೂ ಇದನ್ನು ಅನುಸರಿಸಬೇಕು ಎಂದು ಒತ್ತಾಯಿಸುತ್ತೇನೆ. ದಯವಿಟ್ಟು ಓದಿ ಮತ್ತೆ ಓದಿ… ಎಂದು ಹೇಳಿದ್ದಾರೆ. ಇದರೊಂದಿಗೆ ಭಾರತ ಸಂವಿಧಾನದ ಪೀಠಿಕೆಯ ಚಿತ್ರವನ್ನು ಹಾಕಿದ್ದಾರೆ. ಇದನ್ನೂ ಓದಿ: ಪಠಾಣ್‌ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…

    amit mishra irfan pathan

    ಟ್ವೀಟ್ ವಾರ್‌ನ ಅಸಲಿ ಗುಟ್ಟೇನು?: ಭಾರತದ ವೇಗದ ಬೌಲರ್ ಆಗಿದ್ದ ಇರ್ಫಾನ್ ಪಠಾಣ್ ಯಾವುದೇ ಘಟನೆಯನ್ನು ಉಲ್ಲೇಖಿಸದೇ, ‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ…..’ ಎಂದು ಬರೆದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‌ಗೆ ಟಾಂಗ್ ಕೊಡುವಂತೆ ಮಾಜಿ ಬಲಗೈ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯ ಹೊಂದಿದೆ. ನಮ್ಮ ಸಂವಿಧಾನವೇ ನಮ್ಮ ಮೊದಲ ಗ್ರಂಥ ಎಂಬುದನ್ನು ಕೆಲವರು ಅರಿತುಕೊಂಡಾಗ ಮಾತ್ರ’ ಎಂದು ಬರೆದಿದ್ದರು. ಇದನ್ನೂ ಓದಿ: ಡೆಲ್ಲಿಯ ಪ್ರವೀಣ್‌ಗೆ ದಂಡದೊಂದಿಗೆ ಒಂದು ಪಂದ್ಯ ಬ್ಯಾನ್

    ಈಗ ಇಬ್ಬರ ಟ್ವೀಟ್‌ಗಳ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇರ್ಫಾನ್ ಪಠಾಣ್ ಸರಿಯಾದ ಟ್ವೀಟ್ ಮಾಡಿದ್ದಾರೆ ಎಂದು ಕೆಲವು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಅಮಿತ್ ಮಿಶ್ರಾ ಸರಿಯಾದ ರೀತಿಯಲ್ಲಿ ಹೇಳಿದ್ದಾರೆ. ಭಾರತದಲ್ಲಿ ಸಂವಿಧಾನವೇ ಮೊದಲಾಗಬೇಕೆ ಹೊರತು, ಧರ್ಮ ಗ್ರಂಥವಲ್ಲ. ಬಲಗೈ ಲೆಗ್ ಸ್ಪಿನ್ನರ್‌ಗೆ ಎಡಗೈ ಬ್ಯಾಟರ್ ಪಠಾಣ್ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.