Tag: ಭಾರತ ವಿರೋಧಿ ಸುದ್ದಿ

  • ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ –  35 ಪಾಕ್‌ ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

    ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ – 35 ಪಾಕ್‌ ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

    ನವದೆಹಲಿ: ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಪಾಕ್‌ ಆಧಾರಿತ 35 ಯೂಟ್ಯೂಬ್‌ ಚಾನೆಲ್‌, ಎರಡು ಟ್ವಿಟ್ಟರ್‌ ಖಾತೆ, ಎರಡು ಇನ್‌ಸ್ಟಾಗ್ರಾಮ್‌ ಖಾತೆ, ಎರಡು ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬ್ಲಾಕ್‌ ಮಾಡಿದೆ.

    ಈ ಎಲ್ಲಾ ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದವು. ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್‌ ಸಹಾಯ್‌ ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಚ್ಛತಾ ಸಿಬ್ಬಂದಿ ಕೊಟ್ಟ ಬದಲಿ ಚುಚ್ಚುಮದ್ದಿನಿಂದ ಮಗುವಿನ ಪ್ರಾಣವೇ ಹೋಯ್ತು!

    ಎಲ್ಲಾ ಖಾತೆಗಳನ್ನು ನಿರ್ಬಂಧಿಸಲು ಟೆಲಿಕಾಂ ಇಲಾಖೆಯ ಮೂಲಕ ಆಯಾ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಇಂಟರ್ನೆಟ್‌ ಸೇವಾ ಪೂರೈಕೆದಾರರಿಗೆ ಸಚಿವಾಲಯ ಆದೇಶ ಹೊರಡಿಸಿದೆ.

    ನಿರ್ಬಂಧಿಸಲಾದ ಖಾತೆಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು, ಕಾಶ್ಮೀರ, ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧ, ಮಾಜಿ ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಸಾವಿಗೆ ಸಂಬಂಧಿಸಿದ ವಿಷಯಗಳಿವೆ. ಈ ಖಾತೆಗಳು 130 ಕೋಟಿ ವೀಕ್ಷಕರು ಮತ್ತು 1.2 ಕೋಟಿ ಸಬ್‌ಸ್ಕ್ರೈಬರ್ಸ್‌ನ್ನು ಹೊಂದಿದ್ದವು ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಡ್ಯಾನ್ಸ್ ಮಾಡಿದ್ದಕ್ಕೆ ವರ ಕೆನ್ನೆಗೆ ಹೊಡೆದನೆಂದು ಬೇರೊಬ್ಬನ ವರಿಸಿದ ವಧು!

    ನಿರ್ಬಂಧಿತ ಖಾತೆಗಳಲ್ಲಿನ ವಿಷಯಗಳು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಮತ್ತು ಡಿಜಿಟಲ್‌ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021ರ ನಿಯಮ 16ರ ಅಡಿಯಲ್ಲಿ ಹೊರಡಿಸಲಾದ ಆದೇಶಗಳನ್ನು ಉಲ್ಲಂಘಿಸಿವೆ ಎಂದು ಸಚಿವಾಲಯ ಹೇಳಿದೆ.