Tag: ಭಾರತ ಮಹಿಳಾ ಕ್ರಿಕೆಟ್ ತಂಡ

  • ಚಾಂಪಿಯನ್‌ ಕಿವೀಸ್‌ ಮಹಿಳಾ ತಂಡಕ್ಕೆ 19.6 ಕೋಟಿ ಬಹುಮಾನ – ಟೀಂ ಇಂಡಿಯಾಕ್ಕೆ ಸಿಕ್ಕಿದ್ದೆಷ್ಟು?

    ಚಾಂಪಿಯನ್‌ ಕಿವೀಸ್‌ ಮಹಿಳಾ ತಂಡಕ್ಕೆ 19.6 ಕೋಟಿ ಬಹುಮಾನ – ಟೀಂ ಇಂಡಿಯಾಕ್ಕೆ ಸಿಕ್ಕಿದ್ದೆಷ್ಟು?

    ದುಬೈ: ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್‌ (Women’s T20 World Cup) ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ನ್ಯೂಜಿಲೆಂಡ್‌ ಮಹಿಳಾ ತಂಡ (New Zealand Womens Team) ಕೋಟಿ ಕೋಟಿ ನಗದು ಬಹುಮಾನ ಬಾಚಿಕೊಂಡಿದೆ. ಅಲ್ಲದೇ 2ನೇ ಬಾರಿಗೆ ರನ್ನರ್‌ ಪ್ರಶಸ್ತಿ ತನ್ನದಾಗಿಸಿಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಸಹ ನಗದು ಬಹುಮಾನ ಪಡೆದುಕೊಂಡಿದೆ.

    ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 32 ರನ್‌ಗಳ ಗೆಲುವು ಸಾಧಿಸಿದ ಕಿವೀಸ್‌ ಇದೇ ಮೊದಲ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಈ ಟ್ರೋಫಿಯೊಂದಿಗೆ 19.6 ಕೋಟಿ ರೂ. (2.34 ದಶಲಕ್ಷ ಡಾಲರ್‌) ನಗದು ಬಹುಮಾನವನ್ನು (Prize Money) ತನ್ನದಾಗಿಸಿಕೊಂಡಿತು. ಜೊತೆಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಬರೋಬ್ಬರಿ 9.8 ಕೋಟಿ ರೂ. (1.17 ದಶಲಕ್ಷ ಡಾಲರ್‌) ಬಹುಮಾನ ಪಡೆದುಕೊಂಡಿತು.

    ಭಾರತಕ್ಕೆ ಸಿಕ್ಕಿದ್ದೆಷ್ಟು?
    2024ರ ಮಹಿಳಾ ಟಿ20 ವಿಶ್ವಕಪ್‌ ಆವೃತ್ತಿಯ ಬಹುಮಾನವು ವಿನ್ನರ್‌ ಮತ್ತು ರನ್ನರ್‌ ಅಪ್‌ಗಳಿಗೆ ಸೀಮಿತವಾಗಿರದೇ ಸೆಮಿಸ್‌, ಲೀಗ್‌ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಮೂರು ತಂಡಗಳಿಗೂ ಬಹುಮಾನ ನೀಡಲಾಗುತ್ತಿದೆ. ಸೆಮಿ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ 5.7 ಕೋಟಿ ರೂ. (6,75,000 ದಶಲಕ್ಷ ಡಾಲರ್‌) ಬಹುಮಾನ ಪಡೆದುಕೊಂಡಿದೆ. ಇದನ್ನೂ ಓದಿ: 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಗೆದ್ದ ಕಿವೀಸ್‌ – ಟೀಂ ಇಂಡಿಯಾ ಸೋಲಿಗೆ ಕಾರಣಗಳೇನು?

    ಸದ್ಯ ಗುಂಪು ಹಂತದ ಪಂದ್ಯಗಳಲ್ಲಿ ಇನ್ನೂ ರೇಟಿಂಗ್ಸ್‌ ನಿಗದಿಪಡಿಸಿಲ್ಲ. ಆದ್ರೆ ಲೀಗ್‌ ಸುತ್ತಿನ 4 ಪಂದ್ಯಗಳ ಪೈಕಿ 2 ರಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ (Team India Womens) 2.25 ಕೋಟಿ ರೂ. (2,70,000 ದಶಲಕ್ಷ ಡಾಲರ್)‌ ಬಹುಮಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಲೀಗ್‌ ಸುತ್ತಿನ ಮೂರು ತಂಡಗಳಿಗೂ ಒಂದೇ ಮೊತ್ತದ ಬಹುಮಾನ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ICC Women’s T20 World Cup | ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್‌ ಕಿರೀಟ

    ಕಿವೀಸ್‌ಗೆ ಐತಿಹಾಸಿಕ ಗೆಲುವು:
    ಈ ಹಿಂದೆಯೂ ಎರಡು ಬಾರಿ ಫೈನಲ್ ತಲುಪಿದ್ದ ನ್ಯೂಜಿಲೆಂಡ್ ಮಹಿಳಾ ತಂಡ 2009ರಲ್ಲಿ ಇಂಗ್ಲೆಂಡ್ ವಿರುದ್ಧ, 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇನ್ನೂ 2023ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ಕಿವೀಸ್ ಮಹಿಳಾ ತಂಡ ಚೊಚ್ಚಲ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

    ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಸೋಫಿ ಡಿವೈನ್‌ ನಾಯಕತ್ವದ ನ್ಯೂಜಿಲೆಂಡ್ ಆರಂಭಿಕ ಹಿನ್ನಡೆ ಅನುಭವಿಸಿದರೂ ಸವಾಲಿನ ಮೊತ್ತ ಕಲೆಹಾಕಿತು. 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಗೆಲುವಿಗೆ 159 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗಳಿಗೆ 126 ರನ್‌ಗಳಷ್ಟೇ ಗಳಿಸಲು ಸಾಧ್ಯವಾಗಿ ಸೋಲು ಕಂಡಿತು. ಇದನ್ನೂ ಓದಿ:  ನಂಬಿಕೆ ಇಲ್ಲದಿದ್ರೆ ಪ್ರತಿ ಪಂದ್ಯ ಮುಗಿದ ಬಳಿಕ ಭಾರತಕ್ಕೆ ಮರಳಬಹುದು: ಬಿಸಿಸಿಐಗೆ ಪಾಕ್‌ ಹೊಸ ಆಫರ್‌ 

  • ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಕೇಪ್‌ಟೌನ್: ಭಾರತ ಮಹಿಳಾ ಕ್ರಿಕೆಟ್ ತಂಡದ ಜೆಮಿಮಾ ರಾಡ್ರಿಗಸ್ (Jemimah Rodrigues) ಹಾಗೂ ರಿಚಾ ಘೋಷ್ (Richa Ghosh) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ T20 ಮಹಿಳಾ ವಿಶ್ವಕಪ್ ಟೂರ್ನಿಯ (ICC Women’s T20 World Cup) ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ 7 ವಿಕೆಟ್‌ಗಳ ಜಯ ಸಾಧಿಸಿತು.

    ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಜೆಮಿಮಾ 38 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ ಅಜೇಯ 53 ರನ್ ಸಿಡಿಸಿದರು. ಇದೀಗ ತನ್ನ ಭರ್ಜರಿ ಆಟಕ್ಕೆ ಸ್ಫೂರ್ತಿಯಾಗಿದ್ದು, ಕೊಹ್ಲಿ (Virat Kohli) ಇನ್ನಿಂಗ್ಸ್ ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜೆಮಿಮಾ, ರಿಚಾ ಭರ್ಜರಿ ಬ್ಯಾಟಿಂಗ್‌ – ಪಾಕ್‌ ವಿರುದ್ಧ 7 ವಿಕೆಟ್‌ಗಳ ಜಯ

    ಹೌದು… ಕಳೆದ ವರ್ಷ ಟಿ20 ಪುರುಷರ ವಿಶ್ವಕಪ್ (T20 World Cup) ಆರಂಭಿಕ ಪಂದ್ಯದಲ್ಲೇ ಪಾಕಿಸ್ತಾನದ ಎದುರು ವಿರಾಟ್ ಕೊಹ್ಲಿ (Virat Kohli) 53 ಎಸೆತಗಳಲ್ಲಿ 82 ರನ್ ಚಚ್ಚಿದ್ದರು. ಕೊನೆಯ 20 ನಿಮಿಗಳಲ್ಲಿ ಕೊಹ್ಲಿಯ ಇನ್ನಿಂಗ್ಸ್ ಅತ್ಯಂತ ಸ್ಫೂರ್ತಿದಾಯಕವಾಗಿತ್ತು. ಕೊಹ್ಲಿ ಅವರ ಬಿರುಸಿನ ಬ್ಯಾಟಿಂಗ್ ನನಗೆ ಸ್ಫೂರ್ತಿದಾಯಕವಾಯಿತು. ಭಾನುವಾರದ ಪಂದ್ಯ ನನಗೆ ಆ ಒಂದು ನೆನಪನ್ನ ನೆನಪಿಸಿತು ಎಂದು ಜೆಮಿಮಾ ಹೇಳಿಕೊಂಡಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಯಾವಾಗಲೂ ವಿಶೇಷ ಮತ್ತು ರೋಚಕತೆಯಿಂದ ಕೂಡಿರುತ್ತವೆ. ಈ ಬಗ್ಗೆ ನಾವು ತಂಡದಲ್ಲೂ ಮಾತನಾಡಿದ್ದೇವೆ. ನಾವು ಯಾವಾಗಲೂ ಈ ಪಂದ್ಯಗಳನ್ನು ನೋಡುತ್ತಿದ್ದೇವು. ಅದರಲ್ಲೂ ವಿರಾಟ್ ಕೊಹ್ಲಿ ಅವರ ಪಂದ್ಯ ವೀಕ್ಷಿಸಿದ್ದು ನನಗೆ ಈಗಲೂ ನೆನಪಿದೆ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: `ನನ್ನ ಹೆಂಡತಿಗಿಂತ ಹೆಚ್ಚಾಗಿ ವಿರಾಟ್ ಕೊಹ್ಲಿಯನ್ನ ಪ್ರೀತಿಸುತ್ತೀನಿ’ – ಅಭಿಮಾನಿ ಪೋಸ್ಟರ್‌ಗೆ ನೆಟ್ಟಿಗರು ಫಿದಾ

    ಕೊನೆಯ 10, T20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಜೆಮಿಮಾ 30ಕ್ಕಿಂತಲೂ ಕಡಿಮೆ ರನ್ ಗಳಿಸಿದ್ದರು. ಆದರೆ ಪಾಕ್ ಎದುರು ವಿಶ್ವಾಸದಿಂದ ಕಣಕ್ಕಿಳಿದ್ದ ತಾರೆ, ಬೌಂಡರಿಗಳ ಮಳೆ ಸುರಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಸಹ ಟ್ವೀಟ್ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • T20 ವಿಶ್ವಕಪ್‌ನಲ್ಲಿ ಭಾರತದ ವನಿತೆಯರಿಗೆ ಶುಭಾರಂಭ – SA ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ

    T20 ವಿಶ್ವಕಪ್‌ನಲ್ಲಿ ಭಾರತದ ವನಿತೆಯರಿಗೆ ಶುಭಾರಂಭ – SA ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ

    ಕೇಪ್‌ಟೌನ್‌:  ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ (ICC WMN U19) ಆರಂಭಿಕ ಪಂದ್ಯದಲ್ಲೇ ಭಾರತದ ವನಿತೆಯರ (India Women Under-19s )ತಂಡ ಭರ್ಜರಿ ಜಯದೊಂದಿಗೆ ಶುಭಾರಂಭ ಕಂಡಿದೆ.

    ದಕ್ಷಿಣ ಆಫ್ರಿಕಾ (South Africa Womens Team) ವಿರುದ್ಧ ನಡೆದ ಮೊದಲ ಪಂದ್ಯದಲ್ಲೇ ಶೆಫಾಲಿ ವರ್ಮ (Shafali Verma) ನಾಯಕತ್ವದ ಟೀಂ ಇಂಡಿಯಾ (Team India Womens) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದನ್ನೂ ಓದಿ: 18 ತಿಂಗಳ ಬಳಿಕ ರಾಷ್ಟ್ರೀಯ ತಂಡದ ಕರೆ ಪಡೆದ ಪೃಥ್ವಿ ಶಾ – ಕೊಹ್ಲಿ, ರೋಹಿತ್‍ಗಿಲ್ಲ ಟಿ20 ತಂಡದಲ್ಲಿ ಸ್ಥಾನ

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. 167 ರನ್‌ಗಳ ಗುರಿ ಬೆನ್ನತ್ತಿದ ಭಾರತದ ವನಿತೆಯರು ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 16.3 ಓವರ್‌ಗಳಲ್ಲೇ 190 ರನ್ ಚಚ್ಚಿ ಜಯ ಸಾಧಿಸಿದರು. ಇದನ್ನೂ ಓದಿ: ಆಡಿದ 18 ಟಿ-20 ಪಂದ್ಯಗಳಲ್ಲೇ ನಂ.1 ಪಟ್ಟಕ್ಕೇರಿದ 16ರ ಶೆಫಾಲಿ

    ಆರಂಭಿಕರಾಗಿ ಕಣಕ್ಕಿಳಿದ ಟೀಂ ಇಂಡಿಯಾ ಉಪನಾಯಕಿ ಶ್ವೇತಾ ಶೆರಾವತ್ (Shweta Sehrawat) 57 ಎಸೆತಗಳಲ್ಲಿ 20 ಬೌಂಡರಿಯೊಂದಿಗೆ 92 ರನ್ ಗಳಿಸಿ ಅಜೇಯರಾಗುಳಿದರು. ಇನ್ನೂ ನಾಯಕಿ ಶೆಫಾಲಿ ವರ್ಮ (Shafali Verma) ಕೇವಲ 16 ಎಸೆತಗಳಲ್ಲಿ 1 ಸಿಕ್ಸ್, 9 ಬೌಂಡರಿಗಳೊಂದಿಗೆ ಸ್ಫೋಟಕ 45 ರನ್ ಬಾರಿಸಿದರು. ಜಿ. ತ್ರಿಶಾ 15 ರನ್, ಸೌಮ್ಯ ತಿವಾರಿ 10 ರನ್ ಗಳಿದ್ರೆ ಸೋನಿಯಾ ಮೆಂದಿಯಾ 1 ರನ್ ಗಳಿಸಿ ಗೆಲುವು ತಂದುಕೊಟ್ಟರು.

    ಶೆಫಾಲಿ ಆಲ್‌ರೌಂಡ್ ಆಟ: ಸ್ಫೋಟಕ ಬ್ಯಾಟಿಂಗ್ ಮಾಡಿದ ಶೆಫಾಲಿ ವರ್ಮ (Shafali Verma) ಬೌಲಿಂಗ್‌ನಲ್ಲೂ 2 ವಿಕೆಟ್ ಕಬಳಿಸಿದರು. ಸೋನಮ್ ಯಾದವ್ ಹಾಗೂ ಪ್ರಸವಿ ಚೋಪ್ರಾ ತಲಾ ಒಂದು ವಿಕೆಟ್ ಪಡೆದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ

    ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ

    ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮುಂದೆ ಶ್ರೀಲಂಕಾದೊಂದಿಗೆ ನಡೆಯಲಿರುವ ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಹರ್ಮನ್ ಪ್ರೀತ್ ಕೌರ್ ಅವರನ್ನು ನಾಯಕಿಯಾಗಿ ಬಿಸಿಸಿಐ ಘೋಷಿಸಿದೆ.

    ಮುಂದೆ ಶ್ರೀಲಂಕಾದೊಂದಿಗೆ ನಡೆಯಲಿರುವ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ತಂಡದ ನಾಯಕಿಯಾಗಿ ಹರ್ಮನ್ ಪ್ರೀತ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ನಾಯಕಿಗೆ ನೆಟ್ಟಿಗರ ಪ್ರತಿಕ್ರಿಯೆ

    ಭಾರತದ ಕೈಗೊಂಡಿರುವ ಶ್ರೀಲಂಕಾ ಪ್ರವಾಸಕ್ಕಾಗಿ ತಂಡವನ್ನು ಆಯ್ಕೆ ಮಾಡಲು ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಇಂದು ಸಭೆ ನಡೆಸಿತು. ಮುಂದಿನ ಪ್ರವಾಸದಲ್ಲಿ ಶ್ರೀಲಂಕಾದ ದಂಬುಲಾ ಹಾಗೂ ಕ್ಯಾಂಡಿಯಲ್ಲಿ 3 ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ.

    ಟಿ20 ಟೀಂ: ಶ್ರೀಲಂಕಾದೊಂದಿಗೆ ನಡೆಯಲಿರುವ ಟಿ20 ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ (ವಿಕೆಟ್ ಕೀಪರ್), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರನ್ ಬಹದ್ದೂರ್, ರಿಚಾ ಗೋಶ್(ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಧಾ ಯಾದವ್ ಹಾಗೂ ಜೆಮಿಮಾ ರಾಡ್ರಿಗಸ್.

    ಏಕದಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ರಿಚಾ ಗೋಶ್ ಮತ್ತು ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರನ್ ಬಹದ್ದೂರ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಹಾಗೂ ಹರ್ಲೀನ್ ಡಿಯೋಲ್ ಏಕದಿನ ಪಂದ್ಯದಲ್ಲಿ ಶ್ರೀಲಂಕಾದೊಂದಿಗೆ ಸೆಣಸಲಿದ್ದಾರೆ.